ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆಹೋಶುವ 3
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಯೆಹೋಶುವ ಮುಖ್ಯಾಂಶಗಳು

      • ಇಸ್ರಾಯೇಲ್ಯರು ಯೋರ್ದನ್‌ ನದಿ ದಾಟಿದ್ರು (1-17)

ಯೆಹೋಶುವ 3:1

ಪಾದಟಿಪ್ಪಣಿ

  • *

    ಅಕ್ಷ. “ಇಸ್ರಾಯೇಲನ ಗಂಡು ಮಕ್ಕಳು.”

ಮಾರ್ಜಿನಲ್ ರೆಫರೆನ್ಸ್

  • +ಅರ 25:1; ಯೆಹೋ 2:1

ಯೆಹೋಶುವ 3:2

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 1:15; ಯೆಹೋ 1:10, 11

ಯೆಹೋಶುವ 3:3

ಪಾದಟಿಪ್ಪಣಿ

  • *

    ಅಥವಾ “ಸಾಕ್ಷಿ ಮಂಜೂಷ.” ಪದವಿವರಣೆ ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಅರ 4:15; 1ಪೂರ್ವ 15:2

ಯೆಹೋಶುವ 3:4

ಪಾದಟಿಪ್ಪಣಿ

  • *

    ಸುಮಾರು 890 ಮೀ. (2,920 ಅಡಿ) ಪರಿಶಿಷ್ಟ ಬಿ14 ನೋಡಿ.

ಯೆಹೋಶುವ 3:5

ಪಾದಟಿಪ್ಪಣಿ

  • *

    ಅಕ್ಷ. “ನಿಮ್ಮನ್ನ ಪವಿತ್ರ ಮಾಡ್ಕೊಳ್ಳಿ.”

ಮಾರ್ಜಿನಲ್ ರೆಫರೆನ್ಸ್

  • +ವಿಮೋ 19:10; ಯಾಜ 20:7
  • +ವಿಮೋ 34:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    4/15/2001, ಪು. 4

ಯೆಹೋಶುವ 3:6

ಮಾರ್ಜಿನಲ್ ರೆಫರೆನ್ಸ್

  • +ವಿಮೋ 25:10; ಅರ 4:15

ಯೆಹೋಶುವ 3:7

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 4:14
  • +ವಿಮೋ 3:12; 14:31
  • +ಯೆಹೋ 1:5, 17

ಯೆಹೋಶುವ 3:8

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 3:17

ಯೆಹೋಶುವ 3:10

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 7:21
  • +ವಿಮೋ 3:8; ಧರ್ಮೋ 7:1; ಕೀರ್ತ 44:2

ಯೆಹೋಶುವ 3:12

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 4:2, 3

ಯೆಹೋಶುವ 3:13

ಪಾದಟಿಪ್ಪಣಿ

  • *

    ಅಥವಾ “ಅಣೆಕಟ್ಟಿನ ತರ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 114:1, 3

ಯೆಹೋಶುವ 3:14

ಮಾರ್ಜಿನಲ್ ರೆಫರೆನ್ಸ್

  • +ವಿಮೋ 25:10; ಯೆಹೋ 3:6; ಅಕಾ 7:44, 45

ಯೆಹೋಶುವ 3:15

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 4:18; 1ಪೂರ್ವ 12:15

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 9/2021, ಪು. 2

    ಕಾವಲಿನಬುರುಜು,

    12/1/2004, ಪು. 9

ಯೆಹೋಶುವ 3:16

ಪಾದಟಿಪ್ಪಣಿ

  • *

    ಅಥವಾ “ಅಣೆಕಟ್ಟಿನ ತರ.”

  • *

    ಅದು, ಮೃತ ಸಮುದ್ರ.

ಯೆಹೋಶುವ 3:17

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 4:3
  • +ಕೀರ್ತ 66:6

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಯೆಹೋ. 3:1ಅರ 25:1; ಯೆಹೋ 2:1
ಯೆಹೋ. 3:2ಧರ್ಮೋ 1:15; ಯೆಹೋ 1:10, 11
ಯೆಹೋ. 3:3ಅರ 4:15; 1ಪೂರ್ವ 15:2
ಯೆಹೋ. 3:5ವಿಮೋ 19:10; ಯಾಜ 20:7
ಯೆಹೋ. 3:5ವಿಮೋ 34:10
ಯೆಹೋ. 3:6ವಿಮೋ 25:10; ಅರ 4:15
ಯೆಹೋ. 3:7ಯೆಹೋ 4:14
ಯೆಹೋ. 3:7ವಿಮೋ 3:12; 14:31
ಯೆಹೋ. 3:7ಯೆಹೋ 1:5, 17
ಯೆಹೋ. 3:8ಯೆಹೋ 3:17
ಯೆಹೋ. 3:10ಧರ್ಮೋ 7:21
ಯೆಹೋ. 3:10ವಿಮೋ 3:8; ಧರ್ಮೋ 7:1; ಕೀರ್ತ 44:2
ಯೆಹೋ. 3:12ಯೆಹೋ 4:2, 3
ಯೆಹೋ. 3:13ಕೀರ್ತ 114:1, 3
ಯೆಹೋ. 3:14ವಿಮೋ 25:10; ಯೆಹೋ 3:6; ಅಕಾ 7:44, 45
ಯೆಹೋ. 3:15ಯೆಹೋ 4:18; 1ಪೂರ್ವ 12:15
ಯೆಹೋ. 3:17ಯೆಹೋ 4:3
ಯೆಹೋ. 3:17ಕೀರ್ತ 66:6
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಯೆಹೋಶುವ 3:1-17

ಯೆಹೋಶುವ

3 ಯೆಹೋಶುವ ಮತ್ತು ಎಲ್ಲ ಇಸ್ರಾಯೇಲ್ಯರು* ಬೆಳಿಗ್ಗೆ ಬೇಗ ಎದ್ದು ಶಿಟ್ಟೀಮಿಂದ+ ಯೋರ್ದನ್‌ ನದಿ ಹತ್ರ ಬಂದ್ರು. ಆ ರಾತ್ರಿ ನದಿ ದಾಟದೆ ಅಲ್ಲೇ ಇದ್ರು.

2 ಮೂರು ದಿನ ಆದ್ಮೇಲೆ ಅಧಿಕಾರಿಗಳು+ ಪಾಳೆಯದ ಎಲ್ಲ ಕಡೆ ಹೋಗಿ 3 ಜನ್ರಿಗೆ ಹೀಗೆ ಹೇಳಿದ್ರು: “ಲೇವಿಯರಾದ ಪುರೋಹಿತರು ಯೆಹೋವ ದೇವರ ಒಪ್ಪಂದದ ಮಂಜೂಷ* ಹೊತ್ಕೊಂಡು+ ಹೋಗೋದನ್ನ ನೋಡಿದ ತಕ್ಷಣ ನಿಮ್ಮನಿಮ್ಮ ಜಾಗ ಬಿಟ್ಟು ಅದ್ರ ಹಿಂದೆ ಹೋಗಬೇಕು. 4 ಆದ್ರೆ ನೀವು ಅದ್ರಿಂದ ಸುಮಾರು 2,000 ಮೊಳ* ದೂರ ಇರಬೇಕು. ಮಂಜೂಷದ ಹತ್ರ ಹೋಗಬಾರದು. ಆಗ ಯಾವ ದಾರೀಲಿ ಹೋಗಬೇಕಂತ ನಿಮಗೆ ಗೊತ್ತಾಗುತ್ತೆ. ಯಾಕಂದ್ರೆ ಇಲ್ಲಿ ತನಕ ನೀವು ಆ ದಾರೀಲಿ ಹೋಗಿಲ್ಲ.”

5 ಆಗ ಯೆಹೋಶುವ ಜನ್ರಿಗೆ “ತಯಾರಾಗಿ.*+ ಯಾಕಂದ್ರೆ ನಾಳೆ ಯೆಹೋವ ನಿಮ್ಮ ಮುಂದೆ ಅದ್ಭುತ ಮಾಡ್ತಾನೆ”+ ಅಂದ.

6 ಆಮೇಲೆ ಯೆಹೋಶುವ ಪುರೋಹಿತರಿಗೆ “ಒಪ್ಪಂದದ ಮಂಜೂಷ ಹೊತ್ಕೊಂಡು+ ಜನ್ರ ಮುಂದೆ ಹೋಗಿ” ಅಂದ. ಅವರು ಅದನ್ನ ಹೊತ್ಕೊಂಡು ಜನ್ರ ಮುಂದೆ ಹೋದ್ರು.

7 ಯೆಹೋವ ಯೆಹೋಶುವನಿಗೆ “ಇವತ್ತಿಂದ ಎಲ್ಲ ಇಸ್ರಾಯೇಲ್ಯರು ನಿನ್ನನ್ನ ಗೌರವಿಸೋ ತರ ಮಾಡ್ತೀನಿ.+ ನಾನು ಮೋಶೆ ಜೊತೆ ಇದ್ದ ಹಾಗೆ+ ನಿನ್ನ ಜೊತೆನೂ ಇದ್ದೀನಿ+ ಅಂತ ಅವ್ರಿಗೆ ಆಗ ಗೊತ್ತಾಗುತ್ತೆ. 8 ಒಪ್ಪಂದದ ಮಂಜೂಷವನ್ನ ಹೊತ್ಕೊಂಡು ಹೋಗೋ ಪುರೋಹಿತರಿಗೆ ‘ನೀವು ಯೋರ್ದನ್‌ ನದಿ ತೀರಕ್ಕೆ ಹೋಗಿ ನೀರಲ್ಲಿ ಅಲ್ಲಾಡದೆ ನಿಲ್ಲಬೇಕು’ + ಅಂತ ಅಪ್ಪಣೆ ಕೊಡು” ಅಂದನು.

9 ಯೆಹೋಶುವ ಇಸ್ರಾಯೇಲ್ಯರಿಗೆ “ಇಲ್ಲಿ ಬನ್ನಿ, ನಿಮ್ಮ ದೇವರಾದ ಯೆಹೋವನ ಮಾತು ಕೇಳಿಸ್ಕೊಳ್ಳಿ” ಅಂದ. 10 ಆಮೇಲೆ ಯೆಹೋಶುವ “ಜೀವ ಇರೋ ದೇವರು ನಿಮ್ಮ ಜೊತೆ ಇದ್ದಾನೆ,+ ಆತನು ಕಾನಾನ್ಯರನ್ನ, ಹಿತ್ತಿಯರನ್ನ, ಹಿವ್ವಿಯರನ್ನ, ಪೆರಿಜೀಯರನ್ನ, ಗಿರ್ಗಾಷಿಯರನ್ನ, ಅಮೋರಿಯರನ್ನ, ಯೆಬೂಸಿಯರನ್ನ ಖಂಡಿತ ಓಡಿಸಿಬಿಡ್ತಾನೆ ಅಂತ ಇದ್ರಿಂದ ನಿಮಗೆ ಗೊತ್ತಾಗುತ್ತೆ.+ 11 ನೋಡಿ, ಇಡೀ ಭೂಮಿಯ ಒಡೆಯನ ಒಪ್ಪಂದದ ಮಂಜೂಷ ನಿಮ್ಮ ಮುಂದೆ ಯೋರ್ದನ್‌ ನದಿಯಲ್ಲಿ ಹೋಗ್ತಿದೆ. 12 ಈಗ ಇಸ್ರಾಯೇಲಿನ ಒಂದೊಂದು ಕುಲದಿಂದ ಒಬ್ಬೊಬ್ಬರಂತೆ 12 ಜನ್ರನ್ನ ಆರಿಸ್ಕೊಳ್ಳಿ.+ 13 ಇಡೀ ಭೂಮಿಯ ಒಡೆಯನಾದ ಯೆಹೋವನ ಮಂಜೂಷವನ್ನ ಹೊತ್ಕೊಂಡು ಹೋಗೋ ಪುರೋಹಿತರು ಯೋರ್ದನ್‌ ನದಿ ನೀರಲ್ಲಿ ಕಾಲಿಟ್ಟ ಕೂಡ್ಲೇ ಹರಿದು ಬರೋ ನೀರು ಗೋಡೆ ತರ* ಅಲ್ಲೇ ನಿಂತುಬಿಡುತ್ತೆ”+ ಅಂದ.

14 ಜನ್ರು ಡೇರೆ ಹಾಕಿದ್ದ ಸ್ಥಳ ಬಿಟ್ಟು ಯೋರ್ದನ್‌ ನದಿ ದಾಟೋ ಮುಂಚೆ, ಒಪ್ಪಂದದ ಮಂಜೂಷ ಹೊತ್ಕೊಂಡು ಪುರೋಹಿತರು+ ಅವ್ರ ಮುಂದೆ ಹೋದ್ರು. 15 ಮಂಜೂಷ ಹೊತ್ಕೊಂಡಿದ್ದ ಪುರೋಹಿತರು ಯೋರ್ದನ್‌ ನದಿ ತೀರಕ್ಕೆ ಬಂದು ನೀರಲ್ಲಿ ಕಾಲಿಟ್ಟ ಕೂಡ್ಲೇ, (ಕೊಯ್ಲಿನ ಎಲ್ಲ ದಿನ ಯೋರ್ದನ್‌ ನದಿ ದಡಮೀರಿ ಹರಿತಿತ್ತು)+ 16 ಮೇಲಿಂದ ಬರ್ತಿದ್ದ ನೀರು ದೂರದಲ್ಲಿ ಚಾರೆತಾನ್‌ ಹತ್ರ ಆದಾಮ್‌ ಅನ್ನೋ ಪಟ್ಟಣದಲ್ಲಿ ಗೋಡೆ ತರ* ನಿಂತುಬಿಡ್ತು. ಅಲ್ಲಿಂದ ಮುಂದೆ ಹರಿತಿದ್ದ ನೀರು ಅರಾಬಾ ಅನ್ನೋ ಲವಣ ಸಮುದ್ರದ* ಕಡೆ ಹರಿದು ಹೋಯ್ತು. ಹೀಗೆ ನದಿ ಹರಿಯದೆ ನಿಂತೋಯ್ತು. ಆಗ ಜನ ಯೆರಿಕೋ ಮುಂದೆ ನದಿ ದಾಟಿದ್ರು. 17 ಯೆಹೋವನ ಒಪ್ಪಂದದ ಮಂಜೂಷ ಹೊತ್ಕೊಂಡಿದ್ದ ಪುರೋಹಿತರು ಯೋರ್ದನ್‌ ನದಿ ಮಧ್ಯ ಒಣ ನೆಲದಲ್ಲಿ ಅಲ್ಲಾಡದೆ ನಿಂತಿದ್ದಾಗ,+ ಎಲ್ಲ ಇಸ್ರಾಯೇಲ್ಯರು ಒಣ ನೆಲದ ಮೇಲೆ ನಡ್ಕೊಂಡು ಹೋದ್ರು.+ ಹೀಗೆ ಇಡೀ ಜನಾಂಗ ಯೋರ್ದನನ್ನ ದಾಟ್ತು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ