ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಅ. ಕಾರ್ಯ 6
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಅಪೊಸ್ತಲರ ಕಾರ್ಯ ಮುಖ್ಯಾಂಶಗಳು

      • ಸೇವೆಮಾಡೋಕೆ ಏಳು ಜನ್ರ ಆಯ್ಕೆ (1-7)

      • ಸ್ತೆಫನನ ಮೇಲೆ ದೇವರ ಬಗ್ಗೆ ಮಾತಾಡಿದ ಆರೋಪ (8-15)

ಅ. ಕಾರ್ಯ 6:1

ಮಾರ್ಜಿನಲ್ ರೆಫರೆನ್ಸ್

  • +ಅಕಾ 4:34, 35; 1ತಿಮೊ 5:3; ಯಾಕೋ 1:27

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 41-42

    ಕಾವಲಿನಬುರುಜು,

    8/1/2006, ಪು. 9

ಅ. ಕಾರ್ಯ 6:2

ಮಾರ್ಜಿನಲ್ ರೆಫರೆನ್ಸ್

  • +ವಿಮೋ 18:17, 18

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 11/2018, ಪು. 3

    ಕಾವಲಿನಬುರುಜು,

    8/15/1994, ಪು. 26

ಅ. ಕಾರ್ಯ 6:3

ಮಾರ್ಜಿನಲ್ ರೆಫರೆನ್ಸ್

  • +ಅಕಾ 6:8, 10
  • +ಅಕಾ 16:1, 2; 1ತಿಮೊ 3:7
  • +ಧರ್ಮೋ 1:13

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 42

    ಕಾವಲಿನಬುರುಜು,

    11/15/2014, ಪು. 28

    8/15/1994, ಪು. 26

    ರಾಜ್ಯ ಸೇವೆ,

    7/2013, ಪು. 6

ಅ. ಕಾರ್ಯ 6:5

ಮಾರ್ಜಿನಲ್ ರೆಫರೆನ್ಸ್

  • +ಅಕಾ 21:8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    10/2016, ಪು. 9

ಅ. ಕಾರ್ಯ 6:6

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 34:9; ಅಕಾ 8:14, 17; 13:2, 3; 1ತಿಮೊ 4:14; 5:22; 2ತಿಮೊ 1:6

ಅ. ಕಾರ್ಯ 6:7

ಮಾರ್ಜಿನಲ್ ರೆಫರೆನ್ಸ್

  • +ಅಕಾ 12:24; 19:20
  • +ಅಕಾ 2:47
  • +ಯೋಹಾ 12:42; ಅಕಾ 15:5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    4/1/2001, ಪು. 10-11

ಅ. ಕಾರ್ಯ 6:8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 45-47

ಅ. ಕಾರ್ಯ 6:9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 47

    ಕಾವಲಿನಬುರುಜು,

    1/1/1991, ಪು. 11

ಅ. ಕಾರ್ಯ 6:10

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 54:17; ಲೂಕ 21:15; ಅಕಾ 6:3

ಅ. ಕಾರ್ಯ 6:13

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 47

ಅ. ಕಾರ್ಯ 6:14

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 47

ಅ. ಕಾರ್ಯ 6:15

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    10/2018, ಪು. 32

    ಕಾವಲಿನಬುರುಜು,

    8/1/2004, ಪು. 8

    1/1/1991, ಪು. 11

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಅ. ಕಾ. 6:1ಅಕಾ 4:34, 35; 1ತಿಮೊ 5:3; ಯಾಕೋ 1:27
ಅ. ಕಾ. 6:2ವಿಮೋ 18:17, 18
ಅ. ಕಾ. 6:3ಅಕಾ 6:8, 10
ಅ. ಕಾ. 6:3ಅಕಾ 16:1, 2; 1ತಿಮೊ 3:7
ಅ. ಕಾ. 6:3ಧರ್ಮೋ 1:13
ಅ. ಕಾ. 6:5ಅಕಾ 21:8
ಅ. ಕಾ. 6:6ಧರ್ಮೋ 34:9; ಅಕಾ 8:14, 17; 13:2, 3; 1ತಿಮೊ 4:14; 5:22; 2ತಿಮೊ 1:6
ಅ. ಕಾ. 6:7ಅಕಾ 12:24; 19:20
ಅ. ಕಾ. 6:7ಅಕಾ 2:47
ಅ. ಕಾ. 6:7ಯೋಹಾ 12:42; ಅಕಾ 15:5
ಅ. ಕಾ. 6:10ಯೆಶಾ 54:17; ಲೂಕ 21:15; ಅಕಾ 6:3
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಓದಿ ನೂತನ ಲೋಕ ಭಾಷಾಂತರ (bi7)
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಅ. ಕಾರ್ಯ 6:1-15

ಅಪೊಸ್ತಲರ ಕಾರ್ಯ

6 ಶಿಷ್ಯರ ಸಂಖ್ಯೆ ಹೆಚ್ಚಾಗ್ತಾ ಇತ್ತು. ಆ ಸಮಯದಲ್ಲಿ ಗ್ರೀಕ್‌ ಭಾಷೆಯ ಯೆಹೂದ್ಯರು ಹೀಬ್ರು ಭಾಷೆಯ ಯೆಹೂದ್ಯರ ಮೇಲೆ ದೂರು ಹೇಳೋಕೆ ಶುರುಮಾಡಿದ್ರು. ಯಾಕಂದ್ರೆ ಪ್ರತಿದಿನ ಆಹಾರ ಹಂಚಿಕೊಡ್ತಿದ್ದಾಗ ಗ್ರೀಕ್‌ ಭಾಷೆಯ ವಿಧವೆಯರ ಬಗ್ಗೆ ಕಾಳಜಿ ವಹಿಸ್ತಿರಲಿಲ್ಲ.+ 2 ಆಗ 12 ಅಪೊಸ್ತಲರು ಶಿಷ್ಯರನ್ನೆಲ್ಲ ಕರೆದು ಹೀಗಂದ್ರು “ನಾವೇ ಆಹಾರ ಹಂಚಕ್ಕೆ ಬಂದ್ರೆ ದೇವರ ಬಗ್ಗೆ ಜನ್ರಿಗೆ ಕಲಿಸೋದನ್ನ ನಾವು ನಿಲ್ಲಿಸಬೇಕಾಗುತ್ತೆ. ಅದು ಚೆನ್ನಾಗಿರಲ್ಲ.+ 3 ಹಾಗಾಗಿ ಸಹೋದರರೇ, ನಿಮ್ಮಲ್ಲಿ ಒಳ್ಳೇ ಹೆಸ್ರಿರೋ, ಪವಿತ್ರಶಕ್ತಿಯನ್ನ ಪಡೆದಿರೋ ಮತ್ತು ವಿವೇಕಿಗಳಾಗಿರೋ+ ಏಳು ಸಹೋದರರನ್ನ+ ಆರಿಸಿ ನಮಗೆ ಹೇಳಿ. ಆಹಾರ ಹಂಚೋ ಕೆಲಸವನ್ನ ನಾವು ಅವ್ರಿಗೆ ಒಪ್ಪಿಸ್ಕೊಡ್ತೀವಿ.+ 4 ನಾವು ಮಾತ್ರ ಪ್ರಾರ್ಥನೆ ಮಾಡೋಕೆ, ದೇವರ ಬಗ್ಗೆ ಕಲಿಸೋಕೆ ನಮ್ಮ ಪೂರ್ತಿ ಸಮಯ, ಶಕ್ತಿ ಕೊಡ್ತೀವಿ.” 5 ಅವರು ಹೇಳಿದ ಮಾತು ಶಿಷ್ಯರಿಗೆ ಇಷ್ಟ ಆಯ್ತು. ಹಾಗಾಗಿ ಅವರು ನಂಬಿಗಸ್ತರಾಗಿದ್ದ, ಪವಿತ್ರಶಕ್ತಿಯನ್ನ ಪಡೆದಿದ್ದ ಸ್ತೆಫನ, ಫಿಲಿಪ್ಪ,+ ಪ್ರೊಖೋರ, ನಿಕನೋರ, ತಿಮೋನ, ಪರ್ಮೇನ ಮತ್ತು ಅಂತಿಯೋಕ್ಯದ ನಿಕೊಲಾಯನನ್ನ ಆರಿಸ್ಕೊಂಡ್ರು. ಈ ನಿಕೊಲಾಯ ಯೆಹೂದಿಯಾಗಿ ಮತಾಂತರ ಆಗಿದ್ದ. 6 ಈ ಏಳು ಸಹೋದರರನ್ನ ಅಪೊಸ್ತಲರ ಮುಂದೆ ತಂದು ನಿಲ್ಲಿಸಿದ್ರು. ಅಪೊಸ್ತಲರು ಪ್ರಾರ್ಥನೆ ಮಾಡಿ ಆ ಕೆಲಸವನ್ನ ಒಪ್ಪಿಸ್ಕೊಡೋಕೆ ಅವ್ರ ಮೇಲೆ ಕೈಯಿಟ್ರು.+

7 ಇದ್ರಿಂದಾಗಿ ತುಂಬ ಜನ ದೇವರ ಬಗ್ಗೆ ಕಲಿತ್ರು.+ ಯೆರೂಸಲೇಮಲ್ಲಿ ಶಿಷ್ಯರ ಸಂಖ್ಯೆ ಈ ಮುಂಚೆಗಿಂತ ತುಂಬ ಹೆಚ್ಚಾಯ್ತು.+ ಪುರೋಹಿತರಲ್ಲೂ ತುಂಬ ಜನ ಕ್ರಿಸ್ತನನ್ನ ನಂಬಿ ಬದಲಾದ್ರು.+

8 ಸ್ತೆಫನ ದೇವರ ಮೆಚ್ಚುಗೆ ಮತ್ತು ಶಕ್ತಿ ಪಡ್ಕೊಂಡಿದ್ರಿಂದ ಜನ್ರ ಮುಂದೆ ದೊಡ್ಡದೊಡ್ಡ ಅದ್ಭುತಗಳನ್ನ ಮಾಡ್ತಾ ಇದ್ದ. 9 ಆಗ ತಮ್ಮದೇ ಸಭಾಮಂದಿರ ಮಾಡ್ಕೊಂಡಿದ್ದ ಕೆಲವು ಜನ, ಕುರೇನ್ಯ ಮತ್ತು ಅಲೆಕ್ಸಾಂದ್ರಿಯದ ಕೆಲವರು, ಕಿಲಿಕ್ಯ ಮತ್ತು ಏಷ್ಯಾದಿಂದ ಬಂದಿದ್ದ ಕೆಲವರು ಸ್ತೆಫನನ ಜೊತೆ ಜಗಳಕ್ಕಿಳಿದ್ರು. 10 ಆದ್ರೆ ಸ್ತೆಫನ ವಿವೇಕದಿಂದ, ಪವಿತ್ರಶಕ್ತಿಯ ಸಹಾಯದಿಂದ ಮಾತಾಡ್ತಿದ್ದ. ಹಾಗಾಗಿ ಆ ಜನ್ರ ವಾದ ಗೆಲ್ಲಲಿಲ್ಲ.+ 11 ಆಗ ಆ ಜನ ಗುಟ್ಟಾಗಿ ಕೆಲವ್ರನ್ನ ಕರೆದು “ಇವನು ಮೋಶೆ ಬಗ್ಗೆ, ದೇವರ ಬಗ್ಗೆ ಕೆಟ್ಟಕೆಟ್ಟದಾಗಿ ಮಾತಾಡಿದ್ದನ್ನ ನಾವು ಕೇಳಿಸ್ಕೊಂಡಿದ್ದೀವಿ” ಅಂತ ಎಲ್ರಿಗೂ ಹಬ್ಬಿಸಿ ಅಂತ ಕುಮ್ಮಕ್ಕು ಕೊಟ್ರು. 12 ಅವರು ಜನ್ರನ್ನ, ಹಿರಿಯರನ್ನ, ಪಂಡಿತರನ್ನ ಸಹ ಕೆರಳಿಸಿದ್ರು. ಅವ್ರೆಲ್ಲ ಸೇರಿ ಸ್ತೆಫನನ ವಿರುದ್ಧ ಬಂದು ಬಲವಂತವಾಗಿ ಹಿರೀಸಭೆಗೆ ಕರ್ಕೊಂಡು ಹೋದ್ರು. 13 ಸುಳ್ಳುಸಾಕ್ಷಿಗಳನ್ನ ಕರ್ಕೊಂಡು ಬಂದ್ರು. ಆ ಸಾಕ್ಷಿಗಳು “ಇವನು ದೇವಾಲಯದ ಬಗ್ಗೆ, ನಿಯಮಪುಸ್ತಕದ ಬಗ್ಗೆ ತುಂಬ ತಪ್ಪುತಪ್ಪಾಗಿ ಮಾತಾಡ್ತಾನೆ. ನಿಲ್ಲಿಸೋದೇ ಇಲ್ಲ. 14 ಉದಾಹರಣೆಗೆ, ನಜರೇತಿನ ಯೇಸು ಈ ಆಲಯವನ್ನ ಬೀಳಿಸ್ತಾನೆ ಅಂತ ಮೋಶೆ ನಮಗೆ ಕೊಟ್ಟಿರೋ ಪದ್ಧತಿಗಳನ್ನೆಲ್ಲ ಬದಲಾಯಿಸ್ತಾನೆ ಅಂತ ಇವನು ಹೇಳೋದನ್ನ ನಾವು ಕೇಳಿಸ್ಕೊಂಡ್ವಿ” ಅಂದ್ರು.

15 ಹಿರೀಸಭೆಯಲ್ಲಿ ಕೂತಿದ್ದ ಜನ್ರೆಲ್ಲ ಸ್ತೆಫನನ ಮುಖ ನೋಡಿದಾಗ ಅದು ಒಬ್ಬ ದೇವದೂತನ ಮುಖದ ತರ ಕಾಣಿಸ್ತು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ