ಹೋಶೇಯ
ಇಸ್ರಾಯೇಲ್ ಜನ್ರೇ ಗಮನಕೊಡಿ,
ರಾಜನ ಅರಮನೆಯಲ್ಲಿ ಇರುವವ್ರೇ ಆಲಿಸಿ,
ನಿಮ್ಮ ಮೇಲೆ ತೀರ್ಪು ಬರಲಿದೆ.
ಯಾಕಂದ್ರೆ ನೀವು ಮಿಚ್ಪಾದಲ್ಲಿ ಬೋನಿನ ತರ ಇದ್ರಿ,
ತಾಬೋರಿನಲ್ಲೆಲ್ಲ ಬೀಸಿರೋ ಬಲೆ ತರ ಇದ್ರಿ.+
3 ನಾನು ಎಫ್ರಾಯೀಮನನ್ನ ತಿಳಿದಿದ್ದೀನಿ,
ಇಸ್ರಾಯೇಲ್ ನನಗೆ ಮರೆಯಾಗಿಲ್ಲ,
ಎಫ್ರಾಯೀಮೇ, ನೀನು ಅನೇಕರ ಜೊತೆ ಲೈಂಗಿಕ ಸಂಬಂಧ ಇಟ್ಕೊಂಡಿದ್ದೀಯ,
ಇಸ್ರಾಯೇಲ್ ತನ್ನನ್ನ ಅಶುದ್ಧ ಮಾಡ್ಕೊಂಡಿದೆ.+
4 ತಮ್ಮ ದೇವರ ಹತ್ರ ವಾಪಸ್ ಹೋಗೋಕೆ ಅವ್ರ ಕೆಲಸಗಳೇ ಅವ್ರಿಗೆ ತಡೆಯಾಗಿವೆ.
ಯಾಕಂದ್ರೆ ಅವ್ರಲ್ಲಿ ವೇಶ್ಯಾವಾಟಿಕೆ ಮಾಡೋ ಸ್ವಭಾವ ಇದೆ,+
ಯೆಹೋವನಾದ ನಾನೇ ಅವ್ರ ದೇವರು ಅಂತ ಅವರು ಒಪ್ಕೊಳ್ತಿಲ್ಲ.
5 ಇಸ್ರಾಯೇಲನ ಹೆಮ್ಮೆನೇ ಅವನ ವಿರುದ್ಧ ಸಾಕ್ಷಿನೀಡಿದೆ,+
ಇಸ್ರಾಯೇಲ್ ಮತ್ತು ಎಫ್ರಾಯೀಮ್ ಇಬ್ರೂ ತಮ್ಮ ಪಾಪಗಳಿಂದಾಗಿ ಎಡವಿದ್ದಾರೆ,
ಅವ್ರ ಜೊತೆ ಯೆಹೂದನೂ ಎಡವಿದ್ದಾನೆ.+
6 ಅವರು ತಮ್ಮ ದನಕುರಿಗಳನ್ನ ತಗೊಂಡು ಯೆಹೋವನನ್ನ ಹುಡುಕೋಕೆ ಹೋದ್ರು,
ಆದ್ರೆ ಆತನು ಅವ್ರಿಗೆ ಸಿಗಲಿಲ್ಲ.
ಆತನು ಅವ್ರಿಂದ ದೂರ ಹೋಗಿದ್ದನು.+
7 ಅವರು ವಿದೇಶಿ ಮಕ್ಕಳಿಗೆ ತಂದೆಯರಾಗಿದ್ದಾರೆ,
ಹೀಗೆ ಯೆಹೋವನಿಗೆ ದ್ರೋಹ ಮಾಡಿದ್ದಾರೆ.+
ಈಗ ಒಂದೇ ತಿಂಗಳಲ್ಲಿ ಅವರೂ ಅವ್ರ ಆಸ್ತಿಪಾಸ್ತಿನೂ* ನಾಶವಾಗುತ್ತೆ.
8 ಗಿಬೆಯಾದಲ್ಲಿ ಕೊಂಬೂದಿ,+
ರಾಮದಲ್ಲಿ ತುತ್ತೂರಿ ಊದಿ,+
ಬೇತ್-ಆವೆನಿನಲ್ಲಿ ಯುದ್ಧ ಘೋಷಿಸಿ,+
ಬೆನ್ಯಾಮೀನೇ, ನೀನು ಮುಂದೆ ಹೋಗು.
9 ಎಫ್ರಾಯೀಮೇ, ಶಿಕ್ಷೆಯ ದಿನದಲ್ಲಿ ನಿನ್ನ ಗತಿ ನೋಡಿದವ್ರ ಎದೆ ಧಸಕ್ಕೆನ್ನುತ್ತೆ.+
ಇಸ್ರಾಯೇಲಿನ ಕುಲಗಳಿಗೆ ನಿಶ್ಚಯವಾಗಿ ಏನಾಗುತ್ತೆ ಅಂತ ನಾನು ತಿಳಿಸಿದ್ದೀನಿ.
10 ಯೆಹೂದದ ಅಧಿಕಾರಿಗಳು ಗಡಿಯನ್ನ ಸರಿಸುವವ್ರ ತರ ಇದ್ದಾರೆ.+
ನಾನು ನನ್ನ ಕೋಪಾಗ್ನಿಯನ್ನ ನೀರಿನ ತರ ಅವ್ರ ಮೇಲೆ ಸುರಿದುಬಿಡ್ತೀನಿ.
11 ಎಫ್ರಾಯೀಮ್ ತನ್ನ ಶತ್ರುಗಳ ಹಿಂದೆ ಹೋಗೋಕೆ ಗಟ್ಟಿಮನಸ್ಸು ಮಾಡಿದ್ದ,
ಹಾಗಾಗಿ ಅವನ ಮೇಲೆ ದಬ್ಬಾಳಿಕೆ ಮಾಡಲಾಗ್ತಿದೆ,
ತೀರ್ಪಿಂದ ಅವನನ್ನ ಜಜ್ಜಲಾಗ್ತಿದೆ,+
12 ನಾನು ಎಫ್ರಾಯೀಮಿಗೆ ಬಟ್ಟೆನುಸಿ ತರ,
ಯೆಹೂದದ ಜನ್ರಿಗೆ ಹುಳುಕಿನ ತರ, ಅವ್ರನ್ನ ಹಾಳುಮಾಡಿದೆ.
13 ಎಫ್ರಾಯೀಮಿಗೆ ಕಾಯಿಲೆ ಬಂದಾಗ, ಯೆಹೂದಕ್ಕೆ ಹುಣ್ಣಾದಾಗ, ಎಫ್ರಾಯೀಮ್ ಅಶ್ಶೂರಕ್ಕೆ ಹೋದ,+
ಒಬ್ಬ ಮಹಾ ರಾಜನ ಹತ್ರ ಸಂದೇಶವಾಹಕರನ್ನ ಕಳಿಸಿದ.
ಆದ್ರೆ ಅವನಿಗೆ ನಿನ್ನನ್ನ ಗುಣಪಡಿಸೋಕೆ ಆಗಲಿಲ್ಲ,
ನಿನ್ನ ಹುಣ್ಣನ್ನ ವಾಸಿಮಾಡೋಕೆ ಆಗಲಿಲ್ಲ.
14 ನಾನು ಎಫ್ರಾಯೀಮಿಗೆ ಎಳೇ ಸಿಂಹದ ತರನೂ
ಯೆಹೂದದ ಜನ್ರಿಗೆ ಬಲಿಷ್ಠ ಸಿಂಹದ ತರನೂ ಇರ್ತಿನಿ.
ನಾನು ಅವ್ರನ್ನ ಸೀಳಿ ತುಂಡುತುಂಡು ಮಾಡಿ ಅವ್ರನ್ನ ಎತ್ಕೊಂಡು ಹೋಗ್ತೀನಿ.+
ಯಾರೂ ಅವ್ರನ್ನ ರಕ್ಷಿಸೋಕ್ಕಾಗಲ್ಲ.+
15 ನಾನು ನನ್ನ ಸ್ಥಳಕ್ಕೆ ವಾಪಸ್ ಹೋಗ್ತೀನಿ,
ಅವರು ತಮ್ಮ ಪಾಪದ ಫಲವನ್ನ ಉಣ್ಣೋ ತನಕ ಅಲ್ಲೇ ಇರ್ತಿನಿ.
ಆಗ ಅವರು ನನ್ನ ಮೆಚ್ಚಿಕೆ ಪಡಿಯೋಕೆ ಬಯಸ್ತಾರೆ.+
ಕಷ್ಟವೇದನೆಯಲ್ಲಿ ಇರುವಾಗ ನನ್ನನ್ನ ಹುಡುಕ್ತಾರೆ.”+