ಆಮೋಸ
2 “ಯೆಹೋವ ಹೀಗೆ ಹೇಳ್ತಾನೆ:
‘“ಮೋವಾಬ್ ಪದೇಪದೇ* ದಂಗೆ* ಎದ್ದಿದೆ.+ ಹಾಗಾಗಿ ಅದಕ್ಕೆ ಕೊಡಬೇಕಂತಿರೋ ಶಿಕ್ಷೆಯನ್ನ ನಾನು ತಪ್ಪಿಸೋದೇ ಇಲ್ಲ,
ಸುಣ್ಣಕ್ಕೋಸ್ಕರ ಅವನು ಎದೋಮಿನ ರಾಜನ ಮೂಳೆಗಳನ್ನ ಸುಟ್ಟುಬಿಟ್ಟ.
2 ಹಾಗಾಗಿ ನಾನು ಮೋವಾಬಿಗೆ ಬೆಂಕಿ ಕಳಿಸ್ತೀನಿ,
ಆ ಬೆಂಕಿ ಕೆರೀಯೋತಿನ ಭದ್ರ ಕೋಟೆಗಳನ್ನ ಸುಟ್ಟುಬಿಡುತ್ತೆ,+
ಯುದ್ಧದ ಕೋಲಾಹಲ, ಯುದ್ಧಘೋಷ, ಕೊಂಬಿನ ಶಬ್ದ
ಕೇಳಿಬರುವಾಗ ಮೋವಾಬ್ ಸತ್ತು ಹೋಗುತ್ತೆ.+
3 ನಾನು ಮೋವಾಬಿನ ಅಧಿಪತಿಯನ್ನ* ತೆಗೆದುಹಾಕ್ತೀನಿ,
ಅವನ ಜೊತೆ ಅಲ್ಲಿನ ಎಲ್ಲ ಅಧಿಕಾರಿಗಳನ್ನ ಕೊಲ್ತೀನಿ,”+ ಇದು ಯೆಹೋವನ ಮಾತು.’
4 ಯೆಹೋವ ಹೀಗೆ ಹೇಳ್ತಾನೆ:
‘ಯೆಹೂದ ಪದೇಪದೇ* ದಂಗೆ ಎದ್ದಿದೆ.+ ಹಾಗಾಗಿ ಅದಕ್ಕೆ ಕೊಡಬೇಕಂತಿರೋ ಶಿಕ್ಷೆಯನ್ನ ನಾನು ತಪ್ಪಿಸೋದೇ ಇಲ್ಲ,
ಅವರು ಯೆಹೋವನ ನಿಯಮವನ್ನ* ತಿರಸ್ಕರಿಸಿದ್ರು,
ಆತನ ಆಜ್ಞೆಗಳಿಗೆ ಅವಿಧೇಯರಾದ್ರು,+
ತಮ್ಮ ಪೂರ್ವಜರು ಅನುಸರಿಸಿದ ಸುಳ್ಳು ಮಾತುಗಳನ್ನೇ ಅನುಸರಿಸಿ ದಾರಿತಪ್ಪಿದ್ದಾರೆ.+
6 ಯೆಹೋವ ಹೀಗೆ ಹೇಳ್ತಾನೆ:
‘ಇಸ್ರಾಯೇಲ್ ಪದೇಪದೇ* ದಂಗೆ ಎದ್ದಿದೆ.+ ಹಾಗಾಗಿ ಅದಕ್ಕೆ ಕೊಡಬೇಕಂತಿರೋ ಶಿಕ್ಷೆಯನ್ನ ನಾನು ತಪ್ಪಿಸೋದೇ ಇಲ್ಲ,
ಯಾಕಂದ್ರೆ ಅವರು ಬೆಳ್ಳಿಗಾಗಿ ನೀತಿವಂತನನ್ನ ಮಾರ್ತಾರೆ,
ಒಂದು ಜೋಡಿ ಚಪ್ಪಲಿಗಾಗಿ ಬಡವನನ್ನ ಮಾರ್ತಾರೆ.+
ತಂದೆ ಮತ್ತು ಮಗ ಇಬ್ರೂ ಒಂದೇ ಹುಡುಗಿ ಜೊತೆ ಸಂಬಂಧ ಇಟ್ಕೊಂಡಿದ್ದಾರೆ,
ಹೀಗೆ ನನ್ನ ಪವಿತ್ರ ಹೆಸ್ರನ್ನ ಅಪವಿತ್ರ ಮಾಡಿದ್ದಾರೆ.
8 ಅವರು ಸಾಲಕ್ಕೆ ಗಿರವಿ ಇಟ್ಕೊಂಡ ಬಟ್ಟೆಗಳನ್ನ+ ಒಂದೊಂದು ಯಜ್ಞವೇದಿಯ ಹತ್ರ+ ಹಾಸ್ಕೊಂಡು ಮೈಚಾಚಿ ಬಿದ್ಕೊಂಡಿರ್ತಾರೆ,
ತಾವು ದಂಡಹಾಕಿ ತಗೊಂಡ ಹಣದಿಂದ ದ್ರಾಕ್ಷಾಮದ್ಯ ಖರೀದಿಸಿ ತಮ್ಮ ದೇವರುಗಳ ಆಲಯದಲ್ಲಿ ಕುಡಿತಾರೆ.’
9 ‘ಆದ್ರೆ ನಾನೇ ಅವ್ರ ಮುಂದೆಯಿಂದ ಅಮೋರಿಯರನ್ನ ನಾಶ ಮಾಡಿದ್ದೆ,+
ಆ ಅಮೋರಿಯರು ದೇವದಾರು ಮರಗಳ ತರ ಎತ್ತರವಾಗಿದ್ರು, ಓಕ್ ಮರಗಳ ತರ ಬಲಿಷ್ಠರಾಗಿದ್ರು,
ನಾನು ಅವುಗಳ ಮೇಲಿರೋ ಹಣ್ಣುಗಳನ್ನೂ ಕೆಳಗಿರೋ ಬೇರುಗಳನ್ನೂ ನಾಶಮಾಡಿದೆ.+
10 ಇಸ್ರಾಯೇಲ್ ಜನ್ರೇ, ನಾನೇ ನಿಮ್ಮನ್ನ ಈಜಿಪ್ಟ್* ದೇಶದಿಂದ ಹೊರಗೆ ಕರ್ಕೊಂಡು ಬಂದೆ,+
ಅಮೋರಿಯರ ದೇಶವನ್ನ ನೀವು ವಶ ಮಾಡ್ಕೊಬೇಕಂತ
11 ನಾನು ನಿಮ್ಮ ಗಂಡು ಮಕ್ಕಳಲ್ಲಿ ಕೆಲವ್ರನ್ನ ಪ್ರವಾದಿಗಳನ್ನಾಗಿ,+
ನಿಮ್ಮ ಯುವಕರಲ್ಲಿ ಕೆಲವ್ರನ್ನ ನಾಜೀರರನ್ನಾಗಿ ನೇಮಿಸಿದೆ.+
ನಾನು ಇದನ್ನೆಲ್ಲ ಮಾಡಿದ್ದು ನಿಜ ಅಲ್ವಾ?’
ಅಂತ ಯೆಹೋವ ಕೇಳ್ತಾನೆ.
12 ‘ಆದ್ರೆ ನೀವು ನಾಜೀರರಿಗೆ ದ್ರಾಕ್ಷಾಮದ್ಯ ಕುಡಿಸ್ತಾ ಇದ್ರಿ,+
“ಪ್ರವಾದಿಸಬಾರದು” ಅಂತ ಪ್ರವಾದಿಗಳಿಗೆ ಆಜ್ಞೆ ಕೊಟ್ರಿ.+
13 ಹಾಗಾಗಿ ತೆನೆಗಳ ಕಟ್ಟುಗಳಿಂದ ತುಂಬಿರೋ ಬಂಡಿ ಅದ್ರ ಕೆಳಗಿರೋದನ್ನೆಲ್ಲ ನಜ್ಜುಗುಜ್ಜು ಮಾಡೋ ತರ
ನಾನು ನಿಮ್ಮನ್ನ ನೀವಿರೋ ಸ್ಥಳದಲ್ಲೇ ಜಜ್ಜಿ ಬಿಡ್ತೀನಿ.
14 ವೇಗದ ಓಟಗಾರನಿಗೆ ಓಡಿಹೋಗೋಕೆ ಸ್ಥಳವಿರಲ್ಲ,+
ಬಲಶಾಲಿಗೆ ಸ್ವಲ್ಪನೂ ಬಲ ಇರಲ್ಲ,
ವೀರ ಸೈನಿಕರಲ್ಲಿ ಒಬ್ಬನಿಗೂ ಜೀವವನ್ನ ಉಳಿಸ್ಕೊಳ್ಳೋಕೆ ಆಗಲ್ಲ.
15 ಬಿಲ್ಲುಗಾರ ಯುದ್ಧವನ್ನ ಎದುರಿಸಿ ನಿಲ್ಲಲ್ಲ,
ವೇಗವಾಗಿ ಓಡುವವನಿಗೆ ತಪ್ಪಿಸ್ಕೊಳ್ಳೋಕೆ ಆಗಲ್ಲ,
ಕುದುರೆ ಸವಾರನಿಗೆ ತನ್ನ ಪ್ರಾಣ ಉಳಿಸ್ಕೊಳ್ಳೋಕೆ ಆಗಲ್ಲ.
16 ವೀರ ಸೈನಿಕರಲ್ಲಿ ಕೆಚ್ಚೆದೆಯವನು ಸಹ ಆ ದಿನ ಬೆತ್ತಲೆಯಾಗಿ ಓಡಿಹೋಗ್ತಾನೆ’+
ಅಂತ ಯೆಹೋವ ಹೇಳ್ತಾನೆ.”