ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 2 ಪೂರ್ವಕಾಲವೃತ್ತಾಂತ 34
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

2 ಪೂರ್ವಕಾಲವೃತ್ತಾಂತ ಮುಖ್ಯಾಂಶಗಳು

      • ಯೋಷೀಯ ಯೆಹೂದದ ರಾಜನಾದ (1, 2)

      • ಯೋಷೀಯ ಮಾಡಿದ ಸುಧಾರಣೆ (3-13)

      • ನಿಯಮ ಪುಸ್ತಕ ಸಿಕ್ತು (14-21)

      • ಕಷ್ಟ ಬರುತ್ತೆ ಅಂತ ಹೇಳಿದ ಪ್ರವಾದಿನಿ ಹುಲ್ದ (22-28)

      • ಯೋಷೀಯ ಜನ್ರಿಗೆ ಪುಸ್ತಕದಿಂದ ಓದಿಹೇಳಿದ (29-33)

2 ಪೂರ್ವಕಾಲವೃತ್ತಾಂತ 34:1

ಮಾರ್ಜಿನಲ್ ರೆಫರೆನ್ಸ್

  • +1ಅರ 13:2; ಚೆಫ 1:1; ಮತ್ತಾ 1:10
  • +2ಅರ 22:1, 2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    12/1/2005, ಪು. 21

2 ಪೂರ್ವಕಾಲವೃತ್ತಾಂತ 34:2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    12/1/2005, ಪು. 21

2 ಪೂರ್ವಕಾಲವೃತ್ತಾಂತ 34:3

ಪಾದಟಿಪ್ಪಣಿ

  • *

    ಪದವಿವರಣೆ ನೋಡಿ.

  • *

    ಅಥವಾ “ಅಚ್ಚಲ್ಲಿ ಮಾಡಿದ ವಿಗ್ರಹಗಳನ್ನ.”

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 15:2
  • +2ಪೂರ್ವ 33:17
  • +2ಪೂರ್ವ 33:21, 22
  • +2ಅರ 23:4, 14

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/1/1996, ಪು. 8-9

2 ಪೂರ್ವಕಾಲವೃತ್ತಾಂತ 34:4

ಪಾದಟಿಪ್ಪಣಿ

  • *

    ಪದವಿವರಣೆ ನೋಡಿ.

  • *

    ಅಥವಾ “ಅಚ್ಚಲ್ಲಿ ಮಾಡಿದ ವಿಗ್ರಹಗಳನ್ನ.”

ಮಾರ್ಜಿನಲ್ ರೆಫರೆನ್ಸ್

  • +2ಅರ 23:6

2 ಪೂರ್ವಕಾಲವೃತ್ತಾಂತ 34:5

ಮಾರ್ಜಿನಲ್ ರೆಫರೆನ್ಸ್

  • +1ಅರ 13:2; 2ಅರ 23:16

2 ಪೂರ್ವಕಾಲವೃತ್ತಾಂತ 34:6

ಮಾರ್ಜಿನಲ್ ರೆಫರೆನ್ಸ್

  • +2ಅರ 23:19; 2ಪೂರ್ವ 30:1

2 ಪೂರ್ವಕಾಲವೃತ್ತಾಂತ 34:7

ಪಾದಟಿಪ್ಪಣಿ

  • *

    ಪದವಿವರಣೆ ನೋಡಿ.

ಮಾರ್ಜಿನಲ್ ರೆಫರೆನ್ಸ್

  • +2ಅರ 17:41
  • +2ಪೂರ್ವ 31:1

2 ಪೂರ್ವಕಾಲವೃತ್ತಾಂತ 34:8

ಮಾರ್ಜಿನಲ್ ರೆಫರೆನ್ಸ್

  • +2ಅರ 22:3-6
  • +2ಅರ 22:12

2 ಪೂರ್ವಕಾಲವೃತ್ತಾಂತ 34:9

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 30:11, 18

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 55

2 ಪೂರ್ವಕಾಲವೃತ್ತಾಂತ 34:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 55

2 ಪೂರ್ವಕಾಲವೃತ್ತಾಂತ 34:11

ಮಾರ್ಜಿನಲ್ ರೆಫರೆನ್ಸ್

  • +2ಅರ 12:11, 12

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 55

2 ಪೂರ್ವಕಾಲವೃತ್ತಾಂತ 34:12

ಮಾರ್ಜಿನಲ್ ರೆಫರೆನ್ಸ್

  • +2ಅರ 12:15
  • +1ಪೂರ್ವ 23:6
  • +2ಪೂರ್ವ 20:19
  • +1ಪೂರ್ವ 25:1

2 ಪೂರ್ವಕಾಲವೃತ್ತಾಂತ 34:13

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 8:14

2 ಪೂರ್ವಕಾಲವೃತ್ತಾಂತ 34:14

ಪಾದಟಿಪ್ಪಣಿ

  • *

    ಅಕ್ಷ. “ಕೈಗಳಿಂದ.”

ಮಾರ್ಜಿನಲ್ ರೆಫರೆನ್ಸ್

  • +2ಅರ 22:4
  • +ಯಾಜ 26:46; ಧರ್ಮೋ 17:18; 31:24-26; ಯೆಹೋ 1:8; 2ಅರ 22:8

2 ಪೂರ್ವಕಾಲವೃತ್ತಾಂತ 34:18

ಮಾರ್ಜಿನಲ್ ರೆಫರೆನ್ಸ್

  • +2ಅರ 22:8
  • +ಧರ್ಮೋ 17:18, 19

2 ಪೂರ್ವಕಾಲವೃತ್ತಾಂತ 34:19

ಮಾರ್ಜಿನಲ್ ರೆಫರೆನ್ಸ್

  • +2ಅರ 22:11-13

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    4/15/2001, ಪು. 27

2 ಪೂರ್ವಕಾಲವೃತ್ತಾಂತ 34:20

ಮಾರ್ಜಿನಲ್ ರೆಫರೆನ್ಸ್

  • +2ಅರ 25:22; ಯೆರೆ 40:14

2 ಪೂರ್ವಕಾಲವೃತ್ತಾಂತ 34:21

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 30:17, 18; 31:16, 24-26; ಯೆಹೋ 1:8

2 ಪೂರ್ವಕಾಲವೃತ್ತಾಂತ 34:22

ಮಾರ್ಜಿನಲ್ ರೆಫರೆನ್ಸ್

  • +ವಿಮೋ 15:20; ನ್ಯಾಯ 4:4; ಲೂಕ 2:36; ಅಕಾ 21:8, 9
  • +2ಅರ 22:14-20

2 ಪೂರ್ವಕಾಲವೃತ್ತಾಂತ 34:24

ಮಾರ್ಜಿನಲ್ ರೆಫರೆನ್ಸ್

  • +ಯೆರೆ 35:17
  • +ಯಾಜ 26:16; ಧರ್ಮೋ 28:15; 30:17, 18; ದಾನಿ 9:11

2 ಪೂರ್ವಕಾಲವೃತ್ತಾಂತ 34:25

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 28:20
  • +2ಅರ 21:1, 3, 6; 2ಪೂರ್ವ 28:1, 3
  • +ಧರ್ಮೋ 29:22, 23; ಯೆರೆ 7:20

2 ಪೂರ್ವಕಾಲವೃತ್ತಾಂತ 34:26

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 34:19

2 ಪೂರ್ವಕಾಲವೃತ್ತಾಂತ 34:27

ಪಾದಟಿಪ್ಪಣಿ

  • *

    ಅಕ್ಷ. “ಮೃದುವಾಯ್ತು.”

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 32:26; 33:11, 13

2 ಪೂರ್ವಕಾಲವೃತ್ತಾಂತ 34:28

ಮಾರ್ಜಿನಲ್ ರೆಫರೆನ್ಸ್

  • +1ಅರ 21:29; ಯೆಶಾ 39:8

2 ಪೂರ್ವಕಾಲವೃತ್ತಾಂತ 34:29

ಮಾರ್ಜಿನಲ್ ರೆಫರೆನ್ಸ್

  • +2ಅರ 23:1

2 ಪೂರ್ವಕಾಲವೃತ್ತಾಂತ 34:30

ಮಾರ್ಜಿನಲ್ ರೆಫರೆನ್ಸ್

  • +2ಅರ 23:2; 2ಪೂರ್ವ 17:3, 9; ನೆಹೆ 8:3

2 ಪೂರ್ವಕಾಲವೃತ್ತಾಂತ 34:31

ಪಾದಟಿಪ್ಪಣಿ

  • *

    ಅಥವಾ “ಮತ್ತೊಮ್ಮೆ.”

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 31:24-26; 2ಅರ 22:8
  • +ಧರ್ಮೋ 6:5
  • +ಎಜ್ರ 10:3

2 ಪೂರ್ವಕಾಲವೃತ್ತಾಂತ 34:32

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 30:1, 12; 33:1, 16

2 ಪೂರ್ವಕಾಲವೃತ್ತಾಂತ 34:33

ಪಾದಟಿಪ್ಪಣಿ

  • *

    ಅಥವಾ “ಮೂರ್ತಿಗಳನ್ನ.”

ಮಾರ್ಜಿನಲ್ ರೆಫರೆನ್ಸ್

  • +2ಅರ 23:5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    12/1/2005, ಪು. 21

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

2 ಪೂರ್ವ. 34:11ಅರ 13:2; ಚೆಫ 1:1; ಮತ್ತಾ 1:10
2 ಪೂರ್ವ. 34:12ಅರ 22:1, 2
2 ಪೂರ್ವ. 34:32ಪೂರ್ವ 15:2
2 ಪೂರ್ವ. 34:32ಪೂರ್ವ 33:17
2 ಪೂರ್ವ. 34:32ಪೂರ್ವ 33:21, 22
2 ಪೂರ್ವ. 34:32ಅರ 23:4, 14
2 ಪೂರ್ವ. 34:42ಅರ 23:6
2 ಪೂರ್ವ. 34:51ಅರ 13:2; 2ಅರ 23:16
2 ಪೂರ್ವ. 34:62ಅರ 23:19; 2ಪೂರ್ವ 30:1
2 ಪೂರ್ವ. 34:72ಅರ 17:41
2 ಪೂರ್ವ. 34:72ಪೂರ್ವ 31:1
2 ಪೂರ್ವ. 34:82ಅರ 22:3-6
2 ಪೂರ್ವ. 34:82ಅರ 22:12
2 ಪೂರ್ವ. 34:92ಪೂರ್ವ 30:11, 18
2 ಪೂರ್ವ. 34:112ಅರ 12:11, 12
2 ಪೂರ್ವ. 34:122ಅರ 12:15
2 ಪೂರ್ವ. 34:121ಪೂರ್ವ 23:6
2 ಪೂರ್ವ. 34:122ಪೂರ್ವ 20:19
2 ಪೂರ್ವ. 34:121ಪೂರ್ವ 25:1
2 ಪೂರ್ವ. 34:132ಪೂರ್ವ 8:14
2 ಪೂರ್ವ. 34:142ಅರ 22:4
2 ಪೂರ್ವ. 34:14ಯಾಜ 26:46; ಧರ್ಮೋ 17:18; 31:24-26; ಯೆಹೋ 1:8; 2ಅರ 22:8
2 ಪೂರ್ವ. 34:182ಅರ 22:8
2 ಪೂರ್ವ. 34:18ಧರ್ಮೋ 17:18, 19
2 ಪೂರ್ವ. 34:192ಅರ 22:11-13
2 ಪೂರ್ವ. 34:202ಅರ 25:22; ಯೆರೆ 40:14
2 ಪೂರ್ವ. 34:21ಧರ್ಮೋ 30:17, 18; 31:16, 24-26; ಯೆಹೋ 1:8
2 ಪೂರ್ವ. 34:22ವಿಮೋ 15:20; ನ್ಯಾಯ 4:4; ಲೂಕ 2:36; ಅಕಾ 21:8, 9
2 ಪೂರ್ವ. 34:222ಅರ 22:14-20
2 ಪೂರ್ವ. 34:24ಯೆರೆ 35:17
2 ಪೂರ್ವ. 34:24ಯಾಜ 26:16; ಧರ್ಮೋ 28:15; 30:17, 18; ದಾನಿ 9:11
2 ಪೂರ್ವ. 34:25ಧರ್ಮೋ 28:20
2 ಪೂರ್ವ. 34:252ಅರ 21:1, 3, 6; 2ಪೂರ್ವ 28:1, 3
2 ಪೂರ್ವ. 34:25ಧರ್ಮೋ 29:22, 23; ಯೆರೆ 7:20
2 ಪೂರ್ವ. 34:262ಪೂರ್ವ 34:19
2 ಪೂರ್ವ. 34:272ಪೂರ್ವ 32:26; 33:11, 13
2 ಪೂರ್ವ. 34:281ಅರ 21:29; ಯೆಶಾ 39:8
2 ಪೂರ್ವ. 34:292ಅರ 23:1
2 ಪೂರ್ವ. 34:302ಅರ 23:2; 2ಪೂರ್ವ 17:3, 9; ನೆಹೆ 8:3
2 ಪೂರ್ವ. 34:31ಧರ್ಮೋ 31:24-26; 2ಅರ 22:8
2 ಪೂರ್ವ. 34:31ಧರ್ಮೋ 6:5
2 ಪೂರ್ವ. 34:31ಎಜ್ರ 10:3
2 ಪೂರ್ವ. 34:322ಪೂರ್ವ 30:1, 12; 33:1, 16
2 ಪೂರ್ವ. 34:332ಅರ 23:5
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
  • 31
  • 32
  • 33
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
2 ಪೂರ್ವಕಾಲವೃತ್ತಾಂತ 34:1-33

ಎರಡನೇ ಪೂರ್ವಕಾಲವೃತ್ತಾಂತ

34 ಯೋಷೀಯ+ ರಾಜನಾದಾಗ ಅವನಿಗೆ ಎಂಟು ವರ್ಷ. ಅವನು ಯೆರೂಸಲೇಮಿಂದ 31 ವರ್ಷ ಆಳಿದ.+ 2 ಯೋಷೀಯ ಯೆಹೋವನಿಗೆ ಇಷ್ಟ ಆಗೋದನ್ನೇ ಮಾಡಿದ. ಆತನ ಪ್ರತಿಯೊಂದು ಆಜ್ಞೆಯನ್ನ ಪಾಲಿಸಿದ. ತನ್ನ ಪೂರ್ವಜನಾದ ದಾವೀದನ ದಾರಿಯಲ್ಲೇ ನಡೆದ.

3 ಅವನ ಆಳ್ವಿಕೆಯ 8ನೇ ವರ್ಷದಲ್ಲಿ ಅವನು ಇನ್ನೂ ಹುಡುಗನಾಗಿ ಇದ್ದಾಗಲೇ ತನ್ನ ಪೂರ್ವಜ ದಾವೀದನ ದೇವರನ್ನ ಆರಾಧಿಸೋಕೆ ಶುರುಮಾಡಿದ.+ 12ನೇ ವರ್ಷದಲ್ಲಿ ಅವನು ದೇವಸ್ಥಾನಗಳನ್ನ,+ ಪೂಜಾಕಂಬಗಳನ್ನ,* ಕೆತ್ತಿದ ಮೂರ್ತಿಗಳನ್ನ+ ಮತ್ತು ಲೋಹದ ಮೂರ್ತಿಗಳನ್ನ* ತೆಗೆದುಹಾಕಿ ಯೆಹೂದವನ್ನ ಮತ್ತು ಯೆರೂಸಲೇಮನ್ನ ಶುದ್ಧಮಾಡೋಕೆ ಶುರುಮಾಡಿದ.+ 4 ಆಮೇಲೆ ಜನ ಯೋಷೀಯನ ನಿರ್ದೇಶನದ ಕೆಳಗೆ ಬಾಳ್‌ ದೇವರುಗಳ ಯಜ್ಞವೇದಿಗಳನ್ನ ಹಾಳುಮಾಡಿದ್ರು. ಅವನು ಅದ್ರ ಮೇಲೆ ಇದ್ದ ಧೂಪಸ್ತಂಭಗಳನ್ನ ನಾಶಮಾಡಿದ. ಅಷ್ಟೇ ಅಲ್ಲ ಪೂಜಾಕಂಬಗಳನ್ನ,* ಕೆತ್ತಿದ ಮೂರ್ತಿಗಳನ್ನ, ಲೋಹದ ಮೂರ್ತಿಗಳನ್ನ* ಒಡೆದುಹಾಕಿ ಅವುಗಳನ್ನ ಪುಡಿಪುಡಿ ಮಾಡಿದ. ಆ ಪುಡಿಯನ್ನ ಅವುಗಳಿಗೆ ಬಲಿಗಳನ್ನ ಕೊಡ್ತಿದ್ದವರ ಸಮಾಧಿಗಳ ಮೇಲೆ ಚಿಮಿಕಿಸಿದ.+ 5 ಆಮೇಲೆ ಅವ್ರ ಯಜ್ಞವೇದಿಗಳ ಮೇಲೆ ಪುರೋಹಿತರ ಎಲುಬುಗಳನ್ನ ಸುಟ್ಟುಬಿಟ್ಟ.+ ಹೀಗೆ ಯೆಹೂದ ಮತ್ತು ಯೆರೂಸಲೇಮನ್ನ ಶುದ್ಧಮಾಡಿದ.

6 ಮನಸ್ಸೆ, ಎಫ್ರಾಯೀಮ್‌,+ ಸಿಮೆಯೋನ್‌ ಮತ್ತು ನಫ್ತಾಲಿ ತನಕ ಇದ್ದ ಪಟ್ಟಣಗಳಲ್ಲಿ ಮತ್ತು ಅವುಗಳ ಸುತ್ತಲಿನ ಹಾಳುಬಿದ್ದ ಸ್ಥಳಗಳಲ್ಲಿ 7 ಅವನು ಯಜ್ಞವೇದಿಗಳನ್ನ ಹಾಳುಮಾಡಿದ. ಪೂಜಾಕಂಬಗಳನ್ನ* ಮತ್ತು ಕೆತ್ತಿದ ಮೂರ್ತಿಗಳನ್ನ+ ಒಡೆದುಹಾಕಿ ಅವುಗಳನ್ನ ಪುಡಿಪುಡಿ ಮಾಡಿದ. ಇಸ್ರಾಯೇಲ್‌ ದೇಶದಲ್ಲಿದ್ದ ಎಲ್ಲ ಧೂಪಸ್ತಂಭಗಳನ್ನ ಕಡಿದು ಹಾಕಿದ.+ ಅವನು ಯೆರೂಸಲೇಮಿಗೆ ವಾಪಸ್‌ ಬಂದ.

8 ಅವನ ಆಳ್ವಿಕೆಯ 18ನೇ ವರ್ಷದಲ್ಲಿ ಅವನು ದೇಶವನ್ನ ಮತ್ತು ಆಲಯವನ್ನ ಶುದ್ಧ ಮಾಡಿದ ಮೇಲೆ ತನ್ನ ದೇವರಾದ ಯೆಹೋವನ ಆಲಯದ ದುರಸ್ತಿ ಮಾಡೋಕೆ+ ಅಚಲ್ಯನ ಮಗ ಶಾಫಾನನನ್ನ,+ ಪಟ್ಟಣದ ಅಧಿಪತಿ ಮಾಸೇಯನನ್ನ, ಯೋವಾಹಾಜನ ಮಗ ದಾಖಲೆಗಾರ ಯೋವನನ್ನ ಕಳಿಸಿದ. 9 ದೇವರ ಆಲಯಕ್ಕೆ ಜನ ತಂದ ಹಣವನ್ನೆಲ್ಲ ಅವರು ಮಹಾ ಪುರೋಹಿತ ಹಿಲ್ಕೀಯನಿಗೆ ತಂದುಕೊಟ್ರು. ಬಾಗಿಲು ಕಾಯೋ ಲೇವಿಯರು ಆ ಹಣವನ್ನ ಮನಸ್ಸೆ, ಎಫ್ರಾಯೀಮ್‌ ಮತ್ತು ಉಳಿದ ಇಸ್ರಾಯೇಲ್ಯರಿಂದ,+ ಜೊತೆಗೆ ಯೆಹೂದ, ಬೆನ್ಯಾಮೀನ್‌ ಮತ್ತು ಯೆರೂಸಲೇಮಿನ ನಿವಾಸಿಗಳಿಂದ ಕೂಡಿಸಿದ್ರು. 10 ಆ ಹಣವನ್ನ ಯೆಹೋವನ ಆಲಯದಲ್ಲಿ ನಡಿತಿರೋ ಕೆಲಸದ ಮೇಲ್ವಿಚಾರಣೆ ಮಾಡ್ತಿರುವವರಿಗೆ ಕೊಟ್ರು. ಯೆಹೋವನ ಆಲಯದ ಕೆಲಸಗಾರರು ಆ ಹಣವನ್ನ ಆಲಯದ ದುರಸ್ತಿ ಮಾಡೋಕೆ ಮತ್ತು ಅದನ್ನ ಒಳ್ಳೇ ಸ್ಥಿತಿಯಲ್ಲಿ ಇಡೋಕೆ ಬಳಸಿಕೊಂಡ್ರು. 11 ಕತ್ತರಿಸಿದ ಕಲ್ಲುಗಳನ್ನ ಖರೀದಿಸೋಕೆ, ಆಧಾರವಾಗಿ ನಿಲ್ಲಿಸೋ ಮರದ ದಿಮ್ಮಿಗಳನ್ನ ಖರೀದಿಸೋಕೆ ಮತ್ತು ಯೆಹೂದದ ರಾಜರು ಹಾಳಾಗೋಕೆ ಬಿಟ್ಟ ಕಟ್ಟಡಗಳನ್ನ ತೊಲೆಗಳಿಂದ ಕಟ್ಟೋಕೆ ಆ ಹಣವನ್ನ ಕರಕುಶಲಗಾರರಿಗೆ ಹಾಗೂ ನಿರ್ಮಾಣ ಕೆಲಸ ಮಾಡುವವರಿಗೆ ಕೊಟ್ರು.+

12 ಆ ಗಂಡಸರು ನಂಬಿಗಸ್ತಿಕೆಯಿಂದ ಆ ಕೆಲಸವನ್ನ ಮಾಡಿಮುಗಿಸಿದ್ರು.+ ಅವ್ರ ಮೇಲೆ ಮೆರಾರೀಯರಲ್ಲಿ+ ಯಹತ್‌ ಮತ್ತು ಓಬದ್ಯನನ್ನ, ಕೆಹಾತ್ಯರಲ್ಲಿ+ ಜೆಕರ್ಯ ಮತ್ತು ಮೆಷುಲ್ಲಾಮನನ್ನ ಮೇಲ್ವಿಚಾರಕರನ್ನಾಗಿ ನೇಮಿಸಲಾಯ್ತು. ನಿಪುಣ ಸಂಗೀತಗಾರರಾಗಿದ್ದ ಈ ಲೇವಿಯರು,+ 13 ಭಾರ ಹೊರುವವರ ಉಸ್ತುವಾರಿ ವಹಿಸುತ್ತಿದ್ರು. ಅಷ್ಟೇ ಅಲ್ಲ ಎಲ್ಲ ತರದ ಕೆಲಸಗಳನ್ನ ಮಾಡ್ತಿದ್ದವರೆಲ್ಲರ ಮೇಲ್ವಿಚಾರಣೆ ಮಾಡ್ತಿದ್ರು. ಕೆಲವು ಲೇವಿಯರು ಕಾರ್ಯದರ್ಶಿಗಳಾಗಿ, ಅಧಿಕಾರಿಗಳಾಗಿ, ಬಾಗಿಲು ಕಾಯೋರಾಗಿ ಸೇವೆ ಮಾಡ್ತಿದ್ರು.+

14 ಯೆಹೋವನ ಆಲಯಕ್ಕಂತ ಕಾಣಿಕೆಯಾಗಿ ಸಿಕ್ಕಿದ ಹಣವನ್ನ ಅವರು ಹೊರಗೆ ತಗೊಂಡು ಬರ್ತಿದ್ದಾಗ+ ಪುರೋಹಿತ ಹಿಲ್ಕೀಯನಿಗೆ ಮೋಶೆ ಮೂಲಕ* ಕೊಟ್ಟ ಯೆಹೋವನ ನಿಯಮ ಪುಸ್ತಕ ಸಿಕ್ತು.+ 15 ಆಗ ಹಿಲ್ಕೀಯ ಕಾರ್ಯದರ್ಶಿಯಾದ ಶಾಫಾನನಿಗೆ “ಯೆಹೋವನ ಆಲಯದಲ್ಲಿ ನನಗೆ ನಿಯಮ ಪುಸ್ತಕ ಸಿಕ್ತು” ಅಂತ ಹೇಳಿ ಆ ಪುಸ್ತಕವನ್ನ ಶಾಫಾನನಿಗೆ ಕೊಟ್ಟ. 16 ಆಮೇಲೆ ಶಾಫಾನ ಆ ಪುಸ್ತಕವನ್ನ ರಾಜನ ಹತ್ರ ತಗೊಂಡು ಬಂದ. ಅವನು ರಾಜನಿಗೆ “ನಿನ್ನ ಸೇವಕರು ಅವ್ರಿಗೆ ನೇಮಿಸಲಾದ ಎಲ್ಲ ಕೆಲಸಗಳನ್ನ ಮಾಡ್ತಿದ್ದಾರೆ. 17 ಅವರು ಯೆಹೋವನ ಆಲಯದ ಹಣವನ್ನ ತಗೊಂಡು ಬಂದು ಮೇಲ್ವಿಚಾರಕರಿಗೆ ಮತ್ತು ಕೆಲಸಗಾರರಿಗೆ ಒಪ್ಪಿಸಿದ್ದಾರೆ” ಅಂದ. 18 ಅಷ್ಟೇ ಅಲ್ಲ ಕಾರ್ಯದರ್ಶಿಯಾದ ಶಾಫಾನ ರಾಜನಿಗೆ “ಪುರೋಹಿತ ಹಿಲ್ಕೀಯ ನನಗೆ ಒಂದು ಪುಸ್ತಕ ಕೊಟ್ಟಿದ್ದಾನೆ”+ ಅಂತ ಹೇಳಿ ತನ್ನ ಹತ್ರ ಇದ್ದ ಆ ಪುಸ್ತಕವನ್ನ ರಾಜನ ಮುಂದೆ ಓದೋಕೆ ಶುರುಮಾಡಿದ.+

19 ರಾಜ ನಿಯಮ ಪುಸ್ತಕದಲ್ಲಿದ್ದ ಮಾತುಗಳನ್ನ ಕೇಳಿದ ತಕ್ಷಣ ತನ್ನ ಬಟ್ಟೆಗಳನ್ನ ಹರ್ಕೊಂಡ.+ 20 ರಾಜ ಹಿಲ್ಕೀಯನಿಗೆ ಶಾಫಾನನ ಮಗ ಅಹೀಕಾಮನಿಗೆ,+ ಮೀಕನ ಮಗ ಅಬ್ದೋನನಿಗೆ, ಕಾರ್ಯದರ್ಶಿ ಶಾಫಾನನಿಗೆ, ತನ್ನ ಸೇವಕ ಅಸಾಯನಿಗೆ ಈ ಆಜ್ಞೆ ಕೊಟ್ಟ 21 “ಈ ಪುಸ್ತಕದಲ್ಲಿ ಬರೆದಿರೋ ಯೆಹೋವನ ಮಾತುಗಳನ್ನ ನಮ್ಮ ಪೂರ್ವಜರು ಪಾಲಿಸಲಿಲ್ಲ. ಹಾಗಾಗಿ ಯೆಹೋವನಿಗೆ ನಮ್ಮ ಮೇಲೆ ತುಂಬ ಕೋಪ ಬಂದಿದೆ. ಆದ್ರಿಂದ ನೀವೆಲ್ಲ ನನ್ನ ಪರವಾಗಿ, ಇಸ್ರಾಯೇಲ್‌ ಮತ್ತು ಯೆಹೂದದಲ್ಲಿ ಉಳಿದಿರುವವರ ಪರವಾಗಿ ಹೋಗಿ ನಮಗೆ ಸಿಕ್ಕಿರೋ ಈ ಪುಸ್ತಕದಲ್ಲಿ ಬರೆದಿರೋ ಎಲ್ಲ ಮಾತುಗಳ ಬಗ್ಗೆ ಯೆಹೋವನ ಹತ್ರ ಕೇಳಿ.”+

22 ಹಾಗಾಗಿ ಹಿಲ್ಕೀಯ ಮತ್ತು ರಾಜ ಕಳಿಸಿದ ಬೇರೆಯವರು ಪ್ರವಾದಿನಿ+ ಹುಲ್ದಳ ಹತ್ರ ಹೋದ್ರು. ಅವಳು ಹರ್ಹಸನ ಮೊಮ್ಮಗನೂ ತಿಕ್ವನ ಮಗನೂ ಆದ ಶಲ್ಲೂಮನ ಹೆಂಡತಿ. ಶಲ್ಲೂಮ ಬಟ್ಟೆಗಳ ಕೋಣೆಯ ಉಸ್ತುವಾರಿ ವಹಿಸ್ತಿದ್ದ. ಹುಲ್ದ ಯೆರೂಸಲೇಮ್‌ ಪಟ್ಟಣದ ಹೊಸ ಭಾಗದಲ್ಲಿ ವಾಸಿಸ್ತಿದ್ದಳು. ಅವರು ಅಲ್ಲಿಗೆ ಹೋಗಿ ಅವಳ ಜೊತೆ ಮಾತಾಡಿದ್ರು.+ 23 ಅವಳು ಅವ್ರಿಗೆ “ನಿಮ್ಮನ್ನ ನನ್ನ ಹತ್ರ ಕಳಿಸ್ಕೊಟ್ಟ ಆ ಮನುಷ್ಯನಿಗೆ ಇಸ್ರಾಯೇಲ್‌ ದೇವರಾದ ಯೆಹೋವ ಹೀಗೆ ಹೇಳಿದ ಅಂತ ತಿಳಿಸಿ 24 ‘ಯೆಹೋವ ಹೀಗೆ ಹೇಳ್ತಾನೆ “ಈ ಸ್ಥಳದ ಮೇಲೆ ಮತ್ತು ಅದ್ರ ಜನ್ರ ಮೇಲೆ ನಾನು ಕಷ್ಟ ತರ್ತಿನಿ,+ ಯೆಹೂದದ ರಾಜನ ಮುಂದೆ ಓದಿದ ಆ ಪುಸ್ತಕದಲ್ಲಿ ಬರೆಯಲಾಗಿರೋ ಎಲ್ಲ ಶಾಪಗಳನ್ನ+ ಬರೋ ತರ ಮಾಡ್ತೀನಿ. 25 ಯಾಕಂದ್ರೆ ಅವರು ನನ್ನನ್ನು ಬಿಟ್ಟು+ ಬೇರೆ ದೇವರುಗಳ ಮುಂದೆ ಬಲಿಗಳನ್ನ ಅರ್ಪಿಸಿ ತಮ್ಮ ಕೆಲಸಗಳಿಂದ ನನಗೆ ಕೋಪ ಬರಿಸಿದ್ದಾರೆ.+ ಹಾಗಾಗಿ ಈ ಸ್ಥಳದ ಮೇಲೆ ನನ್ನ ಕೋಪ ಹೊತ್ತಿ ಉರಿತಿದೆ. ಅದು ಆರಿಹೋಗಲ್ಲ.”’+ 26 ಆದ್ರೆ ಯೆಹೋವನ ಹತ್ರ ಕೇಳೋಕೆ ನಿಮ್ಮನ್ನ ನನ್ನ ಹತ್ರ ಕಳಿಸಿದ ಯೆಹೂದದ ರಾಜನಿಗೆ ನೀವು ಹೀಗೆ ಹೇಳಿ ‘ನೀನು ಕೇಳಿಸ್ಕೊಂಡಿರೋ ಮಾತುಗಳ ಬಗ್ಗೆ ಇಸ್ರಾಯೇಲ್‌ ದೇವರಾದ ಯೆಹೋವ ಹೇಳೋದು ಏನಂದ್ರೆ+ 27 “ಈ ಸ್ಥಳದ ಬಗ್ಗೆ ಮತ್ತು ಇದ್ರ ನಿವಾಸಿಗಳ ಬಗ್ಗೆ ನಾನು ಹೇಳಿದ ಮಾತುಗಳನ್ನ ನೀನು ಕೇಳಿಸಿಕೊಂಡಾಗ ನಿನ್ನ ಹೃದಯ ಸ್ಪಂದಿಸಿತು.* ಆಗ ನೀನು ನನ್ನ ಮುಂದೆ ತಗ್ಗಿಸಿಕೊಂಡೆ. ನಿನ್ನ ಬಟ್ಟೆಗಳನ್ನ ಹರ್ಕೊಂಡು ನನ್ನ ಮುಂದೆ ಗೋಳಾಡಿದೆ. ಹಾಗಾಗಿ ನಾನು ನಿನ್ನ ಪ್ರಾರ್ಥನೆ ಕೇಳಿಸಿಕೊಂಡೆ+ ಅಂತ ಯೆಹೋವನಾದ ನಾನು ಘೋಷಿಸ್ತಿದ್ದೀನಿ. 28 ಹಾಗಾಗಿ ನೀನು ಬದುಕಿರೋ ತನಕ ಈ ಸ್ಥಳದ ಮೇಲೆ ಮತ್ತು ಇಲ್ಲಿನ ಜನ್ರ ಮೇಲೆ ನಾನು ಕಷ್ಟ ತರಲ್ಲ. ನೀನು ಶಾಂತಿಯಿಂದ ನಿನ್ನ ಪೂರ್ವಜರ ತರ ಸಮಾಧಿ ಸೇರ್ತಿಯ.”’”+

ಆಮೇಲೆ ಅವರು ಈ ಮಾತುಗಳನ್ನ ರಾಜನಿಗೆ ಹೇಳಿದ್ರು. 29 ಹಾಗಾಗಿ ರಾಜ ಯೆಹೂದದ ಮತ್ತು ಯೆರೂಸಲೇಮಿನ ಎಲ್ಲ ಹಿರಿಯರನ್ನ ಒಟ್ಟುಸೇರಿಸು ಅಂತ ಹೇಳಿ ಕಳಿಸಿದ. ಆಗ ಅವ್ರೆಲ್ಲ ಸೇರಿಬಂದ್ರು.+ 30 ರಾಜ ಯೆಹೂದದ ಎಲ್ಲ ಗಂಡಸರ ಜೊತೆ, ಯೆರೂಸಲೇಮಿನ ನಿವಾಸಿಗಳ ಜೊತೆ, ಪುರೋಹಿತರ ಜೊತೆ, ಲೇವಿಯರ ಜೊತೆ, ಚಿಕ್ಕವರಿಂದ ದೊಡ್ಡವರ ತನಕ ಹೀಗೆ ಎಲ್ಲ ಜನ್ರ ಜೊತೆ ಸೇರಿ ಯೆಹೋವನ ಆಲಯಕ್ಕೆ ಹೋದ. ಅಲ್ಲಿ ಅವನು ಪ್ರತಿಯೊಬ್ರೂ ಕೇಳಿಸಿಕೊಳ್ಳೋ ತರ ಯೆಹೋವನ ಆಲಯದಲ್ಲಿ ಸಿಕ್ಕಿದ್ದ ನಿಯಮ ಪುಸ್ತಕದ ಮಾತುಗಳನ್ನೆಲ್ಲ ಓದಿದ.+ 31 ರಾಜ ತನ್ನ ಸ್ಥಾನದಲ್ಲಿ ನಿಂತು, ಪುಸ್ತಕದಲ್ಲಿದ್ದ ಆ ಒಪ್ಪಂದದ ಮಾತುಗಳನ್ನ ಪಾಲಿಸ್ತಾ+ ತಾನು ಯೆಹೋವ ಹೇಳಿದ್ದನ್ನ ಮಾಡ್ತೀನಿ, ಪೂರ್ಣ ಹೃದಯದಿಂದ, ಪೂರ್ಣ ಪ್ರಾಣದಿಂದ+ ಆತನ ಆಜ್ಞೆಗಳನ್ನ, ಆತನು ಕೊಟ್ಟ ಎಚ್ಚರಿಕೆಗಳನ್ನ, ಆತನ ನಿಯಮಗಳನ್ನ ಪಾಲಿಸ್ತೀನಿ ಅಂತ ಯೆಹೋವನ ಮುಂದೆ ಒಂದು* ಒಪ್ಪಂದ ಮಾಡ್ಕೊಂಡ.+ 32 ಆಮೇಲೆ ಯೆರೂಸಲೇಮ್‌ ಮತ್ತು ಬೆನ್ಯಾಮೀನಲ್ಲಿದ್ದ ಎಲ್ಲರನ್ನೂ ಈ ಒಪ್ಪಂದದ ಪ್ರಕಾರ ನಡೆಯೋಕೆ ಒಪ್ಪಿಸಿದ. ಆಗ ಯೆರೂಸಲೇಮಿನ ಜನ್ರು ತಮ್ಮ ಪೂರ್ವಜರ ದೇವರ ಒಪ್ಪಂದದ ಪ್ರಕಾರ ನಡ್ಕೊಂಡ್ರು.+ 33 ಯೋಷೀಯ ಇಸ್ರಾಯೇಲ್ಯರಿಗೆ ಸೇರಿದ ಎಲ್ಲ ದೇಶಗಳಿಂದ ಅಸಹ್ಯಕರ ವಸ್ತುಗಳನ್ನ* ತೆಗೆದುಹಾಕಿದ.+ ಇಸ್ರಾಯೇಲಿನಲ್ಲಿ ಇರೋರೆಲ್ಲ ತಮ್ಮ ದೇವರಾದ ಯೆಹೋವನನ್ನ ಆರಾಧಿಸೋ ತರ ಮಾಡಿದ. ಅವನು ಬದುಕಿರೋ ತನಕ ಆ ಜನ ತಮ್ಮ ಪೂರ್ವಜರ ದೇವರಾದ ಯೆಹೋವನನ್ನ ಹಿಂಬಾಲಿಸೋದನ್ನ ಬಿಟ್ಟುಬಿಡಲಿಲ್ಲ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ