ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಧರ್ಮೋಪದೇಶಕಾಂಡ 28
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಧರ್ಮೋಪದೇಶಕಾಂಡ ಮುಖ್ಯಾಂಶಗಳು

      • ವಿಧೇಯರಿಗೆ ಆಶೀರ್ವಾದಗಳು (1-14)

      • ಅವಿಧೇಯರಿಗೆ ಶಾಪಗಳು (15-68)

ಧರ್ಮೋಪದೇಶಕಾಂಡ 28:1

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 26:18, 19

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    12/15/1995, ಪು. 26

ಧರ್ಮೋಪದೇಶಕಾಂಡ 28:2

ಮಾರ್ಜಿನಲ್ ರೆಫರೆನ್ಸ್

  • +ಯಾಜ 26:3, 4; ಜ್ಞಾನೋ 10:22; ಯೆಶಾ 1:19

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    12/15/2010, ಪು. 19-20

    9/15/2010, ಪು. 7-8

    9/15/2001, ಪು. 10

ಧರ್ಮೋಪದೇಶಕಾಂಡ 28:3

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 11:14

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    6/15/1996, ಪು. 15

ಧರ್ಮೋಪದೇಶಕಾಂಡ 28:4

ಮಾರ್ಜಿನಲ್ ರೆಫರೆನ್ಸ್

  • +ಯಾಜ 26:9; ಕೀರ್ತ 127:3; 128:3
  • +ಧರ್ಮೋ 7:13

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    6/15/1996, ಪು. 15-16

ಧರ್ಮೋಪದೇಶಕಾಂಡ 28:5

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 26:2
  • +ವಿಮೋ 23:25

ಧರ್ಮೋಪದೇಶಕಾಂಡ 28:7

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 32:30; ಯೆಹೋ 10:11
  • +ಧರ್ಮೋ 7:23; 2ಪೂರ್ವ 14:13

ಧರ್ಮೋಪದೇಶಕಾಂಡ 28:8

ಮಾರ್ಜಿನಲ್ ರೆಫರೆನ್ಸ್

  • +ಯಾಜ 26:10; ಜ್ಞಾನೋ 3:9, 10; ಮಲಾ 3:10

ಧರ್ಮೋಪದೇಶಕಾಂಡ 28:9

ಮಾರ್ಜಿನಲ್ ರೆಫರೆನ್ಸ್

  • +ವಿಮೋ 19:6
  • +ಧರ್ಮೋ 7:6

ಧರ್ಮೋಪದೇಶಕಾಂಡ 28:10

ಪಾದಟಿಪ್ಪಣಿ

  • *

    ಅಥವಾ “ಯೆಹೋವನ ಜನ್ರು.”

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 43:10; ದಾನಿ 9:19; ಅಕಾ 15:17
  • +ಅರ 22:3; ಧರ್ಮೋ 11:25; ಯೆಹೋ 5:1

ಧರ್ಮೋಪದೇಶಕಾಂಡ 28:11

ಮಾರ್ಜಿನಲ್ ರೆಫರೆನ್ಸ್

  • +ಆದಿ 15:18
  • +ಧರ್ಮೋ 30:9; ಕೀರ್ತ 65:9

ಧರ್ಮೋಪದೇಶಕಾಂಡ 28:12

ಮಾರ್ಜಿನಲ್ ರೆಫರೆನ್ಸ್

  • +ಯಾಜ 26:4; ಧರ್ಮೋ 11:14
  • +ಧರ್ಮೋ 15:6

ಧರ್ಮೋಪದೇಶಕಾಂಡ 28:13

ಮಾರ್ಜಿನಲ್ ರೆಫರೆನ್ಸ್

  • +1ಅರ 4:21

ಧರ್ಮೋಪದೇಶಕಾಂಡ 28:14

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 5:32; ಯೆಹೋ 1:7; ಯೆಶಾ 30:21
  • +ಯಾಜ 19:4

ಧರ್ಮೋಪದೇಶಕಾಂಡ 28:15

ಮಾರ್ಜಿನಲ್ ರೆಫರೆನ್ಸ್

  • +ಯಾಜ 26:16, 17; ದಾನಿ 9:11

ಧರ್ಮೋಪದೇಶಕಾಂಡ 28:16

ಮಾರ್ಜಿನಲ್ ರೆಫರೆನ್ಸ್

  • +1ಅರ 17:1

ಧರ್ಮೋಪದೇಶಕಾಂಡ 28:17

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 26:2
  • +ಯಾಜ 26:26

ಧರ್ಮೋಪದೇಶಕಾಂಡ 28:18

ಮಾರ್ಜಿನಲ್ ರೆಫರೆನ್ಸ್

  • +ಪ್ರಲಾ 2:11, 19; 4:10
  • +ಯಾಜ 26:20, 22

ಧರ್ಮೋಪದೇಶಕಾಂಡ 28:20

ಪಾದಟಿಪ್ಪಣಿ

  • *

    ಅಕ್ಷ. “ನನ್ನನ್ನ.”

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 23:16

ಧರ್ಮೋಪದೇಶಕಾಂಡ 28:21

ಮಾರ್ಜಿನಲ್ ರೆಫರೆನ್ಸ್

  • +ಯಾಜ 26:25; ಯೆರೆ 24:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 1/2021, ಪು. 7

ಧರ್ಮೋಪದೇಶಕಾಂಡ 28:22

ಮಾರ್ಜಿನಲ್ ರೆಫರೆನ್ಸ್

  • +ಯಾಜ 26:16
  • +ಯಾಜ 26:33
  • +ಆಮೋ 4:9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 1/2021, ಪು. 7

ಧರ್ಮೋಪದೇಶಕಾಂಡ 28:23

ಪಾದಟಿಪ್ಪಣಿ

  • *

    ಅರ್ಥ, ಮಳೆ ಬರದ ಹಾಗೆ.

  • *

    ಅರ್ಥ, ಬರಡಾಗೋ ಹಾಗೆ.

ಮಾರ್ಜಿನಲ್ ರೆಫರೆನ್ಸ್

  • +ಯಾಜ 26:19; ಧರ್ಮೋ 11:17; 1ಅರ 17:1

ಧರ್ಮೋಪದೇಶಕಾಂಡ 28:25

ಮಾರ್ಜಿನಲ್ ರೆಫರೆನ್ಸ್

  • +ಯಾಜ 26:14, 17; 1ಸಮು 4:10
  • +ಯೆರೆ 29:18; ಲೂಕ 21:24

ಧರ್ಮೋಪದೇಶಕಾಂಡ 28:26

ಮಾರ್ಜಿನಲ್ ರೆಫರೆನ್ಸ್

  • +ಯೆರೆ 7:33

ಧರ್ಮೋಪದೇಶಕಾಂಡ 28:28

ಮಾರ್ಜಿನಲ್ ರೆಫರೆನ್ಸ್

  • +ವಿಮೋ 4:11

ಧರ್ಮೋಪದೇಶಕಾಂಡ 28:29

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 59:10
  • +ನ್ಯಾಯ 3:14; 6:1-5; ನೆಹೆ 9:27

ಧರ್ಮೋಪದೇಶಕಾಂಡ 28:30

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 5:9; ಪ್ರಲಾ 5:2
  • +ಆಮೋ 5:11; ಮೀಕ 6:15

ಧರ್ಮೋಪದೇಶಕಾಂಡ 28:32

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 29:9

ಧರ್ಮೋಪದೇಶಕಾಂಡ 28:33

ಮಾರ್ಜಿನಲ್ ರೆಫರೆನ್ಸ್

  • +ನೆಹೆ 9:37; ಯೆಶಾ 1:7

ಧರ್ಮೋಪದೇಶಕಾಂಡ 28:36

ಮಾರ್ಜಿನಲ್ ರೆಫರೆನ್ಸ್

  • +2ಅರ 17:6; 25:7; 2ಪೂರ್ವ 33:11; 36:5, 6
  • +ಯೆರೆ 16:13

ಇಂಡೆಕ್ಸಸ್

  • ಸಂಶೋಧನಾ ಸಾಧನ

    ದಾನಿಯೇಲನ ಪ್ರವಾದನೆ, ಪು. 71-72

ಧರ್ಮೋಪದೇಶಕಾಂಡ 28:37

ಪಾದಟಿಪ್ಪಣಿ

  • *

    ಅಕ್ಷ. “ಗಾದೆ.”

ಮಾರ್ಜಿನಲ್ ರೆಫರೆನ್ಸ್

  • +1ಅರ 9:8; 2ಪೂರ್ವ 7:20; ಯೆರೆ 24:9; 25:9

ಧರ್ಮೋಪದೇಶಕಾಂಡ 28:38

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 5:10; ಹಗ್ಗಾ 1:6

ಧರ್ಮೋಪದೇಶಕಾಂಡ 28:39

ಮಾರ್ಜಿನಲ್ ರೆಫರೆನ್ಸ್

  • +ಚೆಫ 1:13

ಧರ್ಮೋಪದೇಶಕಾಂಡ 28:41

ಮಾರ್ಜಿನಲ್ ರೆಫರೆನ್ಸ್

  • +2ಅರ 24:14; ಯೆರೆ 52:15, 30

ಧರ್ಮೋಪದೇಶಕಾಂಡ 28:44

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 22:7
  • +ಎಜ್ರ 9:7

ಧರ್ಮೋಪದೇಶಕಾಂಡ 28:45

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 11:26-28
  • +ಧರ್ಮೋ 28:15; 29:27
  • +2ಅರ 17:20; ಯೆರೆ 24:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/15/1995, ಪು. 15-16

ಧರ್ಮೋಪದೇಶಕಾಂಡ 28:46

ಮಾರ್ಜಿನಲ್ ರೆಫರೆನ್ಸ್

  • +1ಕೊರಿಂ 10:11

ಧರ್ಮೋಪದೇಶಕಾಂಡ 28:47

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 12:7; ನೆಹೆ 9:35

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/15/1995, ಪು. 15-16

ಧರ್ಮೋಪದೇಶಕಾಂಡ 28:48

ಪಾದಟಿಪ್ಪಣಿ

  • *

    ಅಕ್ಷ. “ನಿಮ್ಮ ಮೇಲೆ ಕಬ್ಬಿಣದ ನೊಗ ಹೊರಿಸ್ತಾರೆ.”

ಮಾರ್ಜಿನಲ್ ರೆಫರೆನ್ಸ್

  • +ಯೆರೆ 44:27
  • +2ಪೂರ್ವ 12:8, 9; ಯೆರೆ 5:19

ಧರ್ಮೋಪದೇಶಕಾಂಡ 28:49

ಮಾರ್ಜಿನಲ್ ರೆಫರೆನ್ಸ್

  • +ಯೆರೆ 6:22; ಹಬ 1:6
  • +ಯೆರೆ 4:13; ಹೋಶೇ 8:1
  • +ಯೆರೆ 5:15

ಧರ್ಮೋಪದೇಶಕಾಂಡ 28:50

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 36:17; ಯೆಶಾ 47:6; ಲೂಕ 19:44

ಧರ್ಮೋಪದೇಶಕಾಂಡ 28:51

ಮಾರ್ಜಿನಲ್ ರೆಫರೆನ್ಸ್

  • +ಯಾಜ 26:26; ಯೆರೆ 15:13

ಧರ್ಮೋಪದೇಶಕಾಂಡ 28:52

ಮಾರ್ಜಿನಲ್ ರೆಫರೆನ್ಸ್

  • +2ಅರ 17:5; 25:1; ಲೂಕ 19:43

ಧರ್ಮೋಪದೇಶಕಾಂಡ 28:53

ಮಾರ್ಜಿನಲ್ ರೆಫರೆನ್ಸ್

  • +2ಅರ 6:28; ಪ್ರಲಾ 4:10; ಯೆಹೆ 5:10

ಧರ್ಮೋಪದೇಶಕಾಂಡ 28:55

ಮಾರ್ಜಿನಲ್ ರೆಫರೆನ್ಸ್

  • +ಯೆರೆ 52:6

ಧರ್ಮೋಪದೇಶಕಾಂಡ 28:56

ಮಾರ್ಜಿನಲ್ ರೆಫರೆನ್ಸ್

  • +ಪ್ರಲಾ 4:5

ಧರ್ಮೋಪದೇಶಕಾಂಡ 28:58

ಮಾರ್ಜಿನಲ್ ರೆಫರೆನ್ಸ್

  • +ವಿಮೋ 24:7; ಧರ್ಮೋ 31:26
  • +ವಿಮೋ 3:15; 6:3; 20:2; ಕೀರ್ತ 83:18; 113:3; ಯೆಶಾ 42:8
  • +ಧರ್ಮೋ 10:17; ಕೀರ್ತ 99:3

ಧರ್ಮೋಪದೇಶಕಾಂಡ 28:59

ಮಾರ್ಜಿನಲ್ ರೆಫರೆನ್ಸ್

  • +ಯಾಜ 26:21; ದಾನಿ 9:12

ಧರ್ಮೋಪದೇಶಕಾಂಡ 28:62

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 10:22
  • +ಧರ್ಮೋ 4:27

ಧರ್ಮೋಪದೇಶಕಾಂಡ 28:64

ಮಾರ್ಜಿನಲ್ ರೆಫರೆನ್ಸ್

  • +ಯಾಜ 26:33; ನೆಹೆ 1:8; ಲೂಕ 21:24
  • +ಧರ್ಮೋ 4:27, 28

ಧರ್ಮೋಪದೇಶಕಾಂಡ 28:65

ಮಾರ್ಜಿನಲ್ ರೆಫರೆನ್ಸ್

  • +ಆಮೋ 9:4
  • +ಯೆಹೆ 12:19
  • +ಯಾಜ 26:16, 36

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಧರ್ಮೋ. 28:1ಧರ್ಮೋ 26:18, 19
ಧರ್ಮೋ. 28:2ಯಾಜ 26:3, 4; ಜ್ಞಾನೋ 10:22; ಯೆಶಾ 1:19
ಧರ್ಮೋ. 28:3ಧರ್ಮೋ 11:14
ಧರ್ಮೋ. 28:4ಯಾಜ 26:9; ಕೀರ್ತ 127:3; 128:3
ಧರ್ಮೋ. 28:4ಧರ್ಮೋ 7:13
ಧರ್ಮೋ. 28:5ಧರ್ಮೋ 26:2
ಧರ್ಮೋ. 28:5ವಿಮೋ 23:25
ಧರ್ಮೋ. 28:7ಧರ್ಮೋ 32:30; ಯೆಹೋ 10:11
ಧರ್ಮೋ. 28:7ಧರ್ಮೋ 7:23; 2ಪೂರ್ವ 14:13
ಧರ್ಮೋ. 28:8ಯಾಜ 26:10; ಜ್ಞಾನೋ 3:9, 10; ಮಲಾ 3:10
ಧರ್ಮೋ. 28:9ವಿಮೋ 19:6
ಧರ್ಮೋ. 28:9ಧರ್ಮೋ 7:6
ಧರ್ಮೋ. 28:10ಯೆಶಾ 43:10; ದಾನಿ 9:19; ಅಕಾ 15:17
ಧರ್ಮೋ. 28:10ಅರ 22:3; ಧರ್ಮೋ 11:25; ಯೆಹೋ 5:1
ಧರ್ಮೋ. 28:11ಆದಿ 15:18
ಧರ್ಮೋ. 28:11ಧರ್ಮೋ 30:9; ಕೀರ್ತ 65:9
ಧರ್ಮೋ. 28:12ಯಾಜ 26:4; ಧರ್ಮೋ 11:14
ಧರ್ಮೋ. 28:12ಧರ್ಮೋ 15:6
ಧರ್ಮೋ. 28:131ಅರ 4:21
ಧರ್ಮೋ. 28:14ಧರ್ಮೋ 5:32; ಯೆಹೋ 1:7; ಯೆಶಾ 30:21
ಧರ್ಮೋ. 28:14ಯಾಜ 19:4
ಧರ್ಮೋ. 28:15ಯಾಜ 26:16, 17; ದಾನಿ 9:11
ಧರ್ಮೋ. 28:161ಅರ 17:1
ಧರ್ಮೋ. 28:17ಧರ್ಮೋ 26:2
ಧರ್ಮೋ. 28:17ಯಾಜ 26:26
ಧರ್ಮೋ. 28:18ಪ್ರಲಾ 2:11, 19; 4:10
ಧರ್ಮೋ. 28:18ಯಾಜ 26:20, 22
ಧರ್ಮೋ. 28:20ಯೆಹೋ 23:16
ಧರ್ಮೋ. 28:21ಯಾಜ 26:25; ಯೆರೆ 24:10
ಧರ್ಮೋ. 28:22ಯಾಜ 26:16
ಧರ್ಮೋ. 28:22ಯಾಜ 26:33
ಧರ್ಮೋ. 28:22ಆಮೋ 4:9
ಧರ್ಮೋ. 28:23ಯಾಜ 26:19; ಧರ್ಮೋ 11:17; 1ಅರ 17:1
ಧರ್ಮೋ. 28:25ಯಾಜ 26:14, 17; 1ಸಮು 4:10
ಧರ್ಮೋ. 28:25ಯೆರೆ 29:18; ಲೂಕ 21:24
ಧರ್ಮೋ. 28:26ಯೆರೆ 7:33
ಧರ್ಮೋ. 28:28ವಿಮೋ 4:11
ಧರ್ಮೋ. 28:29ಯೆಶಾ 59:10
ಧರ್ಮೋ. 28:29ನ್ಯಾಯ 3:14; 6:1-5; ನೆಹೆ 9:27
ಧರ್ಮೋ. 28:30ಯೆಶಾ 5:9; ಪ್ರಲಾ 5:2
ಧರ್ಮೋ. 28:30ಆಮೋ 5:11; ಮೀಕ 6:15
ಧರ್ಮೋ. 28:322ಪೂರ್ವ 29:9
ಧರ್ಮೋ. 28:33ನೆಹೆ 9:37; ಯೆಶಾ 1:7
ಧರ್ಮೋ. 28:362ಅರ 17:6; 25:7; 2ಪೂರ್ವ 33:11; 36:5, 6
ಧರ್ಮೋ. 28:36ಯೆರೆ 16:13
ಧರ್ಮೋ. 28:371ಅರ 9:8; 2ಪೂರ್ವ 7:20; ಯೆರೆ 24:9; 25:9
ಧರ್ಮೋ. 28:38ಯೆಶಾ 5:10; ಹಗ್ಗಾ 1:6
ಧರ್ಮೋ. 28:39ಚೆಫ 1:13
ಧರ್ಮೋ. 28:412ಅರ 24:14; ಯೆರೆ 52:15, 30
ಧರ್ಮೋ. 28:44ಜ್ಞಾನೋ 22:7
ಧರ್ಮೋ. 28:44ಎಜ್ರ 9:7
ಧರ್ಮೋ. 28:45ಧರ್ಮೋ 11:26-28
ಧರ್ಮೋ. 28:45ಧರ್ಮೋ 28:15; 29:27
ಧರ್ಮೋ. 28:452ಅರ 17:20; ಯೆರೆ 24:10
ಧರ್ಮೋ. 28:461ಕೊರಿಂ 10:11
ಧರ್ಮೋ. 28:47ಧರ್ಮೋ 12:7; ನೆಹೆ 9:35
ಧರ್ಮೋ. 28:48ಯೆರೆ 44:27
ಧರ್ಮೋ. 28:482ಪೂರ್ವ 12:8, 9; ಯೆರೆ 5:19
ಧರ್ಮೋ. 28:49ಯೆರೆ 6:22; ಹಬ 1:6
ಧರ್ಮೋ. 28:49ಯೆರೆ 4:13; ಹೋಶೇ 8:1
ಧರ್ಮೋ. 28:49ಯೆರೆ 5:15
ಧರ್ಮೋ. 28:502ಪೂರ್ವ 36:17; ಯೆಶಾ 47:6; ಲೂಕ 19:44
ಧರ್ಮೋ. 28:51ಯಾಜ 26:26; ಯೆರೆ 15:13
ಧರ್ಮೋ. 28:522ಅರ 17:5; 25:1; ಲೂಕ 19:43
ಧರ್ಮೋ. 28:532ಅರ 6:28; ಪ್ರಲಾ 4:10; ಯೆಹೆ 5:10
ಧರ್ಮೋ. 28:55ಯೆರೆ 52:6
ಧರ್ಮೋ. 28:56ಪ್ರಲಾ 4:5
ಧರ್ಮೋ. 28:58ವಿಮೋ 24:7; ಧರ್ಮೋ 31:26
ಧರ್ಮೋ. 28:58ವಿಮೋ 3:15; 6:3; 20:2; ಕೀರ್ತ 83:18; 113:3; ಯೆಶಾ 42:8
ಧರ್ಮೋ. 28:58ಧರ್ಮೋ 10:17; ಕೀರ್ತ 99:3
ಧರ್ಮೋ. 28:59ಯಾಜ 26:21; ದಾನಿ 9:12
ಧರ್ಮೋ. 28:62ಧರ್ಮೋ 10:22
ಧರ್ಮೋ. 28:62ಧರ್ಮೋ 4:27
ಧರ್ಮೋ. 28:64ಯಾಜ 26:33; ನೆಹೆ 1:8; ಲೂಕ 21:24
ಧರ್ಮೋ. 28:64ಧರ್ಮೋ 4:27, 28
ಧರ್ಮೋ. 28:65ಆಮೋ 9:4
ಧರ್ಮೋ. 28:65ಯೆಹೆ 12:19
ಧರ್ಮೋ. 28:65ಯಾಜ 26:16, 36
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
  • 31
  • 32
  • 33
  • 34
  • 35
  • 36
  • 37
  • 38
  • 39
  • 40
  • 41
  • 42
  • 43
  • 44
  • 45
  • 46
  • 47
  • 48
  • 49
  • 50
  • 51
  • 52
  • 53
  • 54
  • 55
  • 56
  • 57
  • 58
  • 59
  • 60
  • 61
  • 62
  • 63
  • 64
  • 65
  • 66
  • 67
  • 68
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಧರ್ಮೋಪದೇಶಕಾಂಡ 28:1-68

ಧರ್ಮೋಪದೇಶಕಾಂಡ

28 “ನಾನು ಇವತ್ತು ನಿಮಗೆ ಕೊಡ್ತಿರೋ ನಿಮ್ಮ ದೇವರಾದ ಯೆಹೋವನ ಎಲ್ಲ ಆಜ್ಞೆಗಳನ್ನ ತಪ್ಪದೆ ಪಾಲಿಸಬೇಕು. ಹೀಗೆ ಮಾಡಿದ್ರೆ ನಿಮ್ಮ ದೇವರಾದ ಯೆಹೋವ ನಿಮ್ಮನ್ನ ಭೂಮಿಯಲ್ಲಿರೋ ಬೇರೆಲ್ಲ ಜನ್ರಿಗಿಂತ ಉನ್ನತ ಸ್ಥಾನಕ್ಕೆ ಏರಿಸ್ತಾನೆ.+ 2 ನಿಮ್ಮ ದೇವರಾದ ಯೆಹೋವನ ಮಾತನ್ನ ಯಾವಾಗ್ಲೂ ಕೇಳಿದ್ರೆ ಆತನು ನಿಮ್ಮ ಮೇಲೆ ತುಂಬ ಆಶೀರ್ವಾದಗಳ ಸುರಿಮಳೆ ಸುರಿಸ್ತಾನೆ.+ ಹೇಗಂದ್ರೆ,

3 ನೀವು ಪಟ್ಟಣದಲ್ಲಿ ಇದ್ರೂ ಹಳ್ಳಿಯಲ್ಲಿ ಇದ್ರೂ ನಿಮ್ಮನ್ನ ಆಶೀರ್ವದಿಸ್ತಾನೆ.+

4 ತುಂಬ ಮಕ್ಕಳಾಗೋ ಹಾಗೆ,+ ಜಮೀನಲ್ಲಿ ಸಮೃದ್ಧ ಬೆಳೆ ಆಗೋ ಹಾಗೆ, ಕುರಿ-ಹಸುಗಳಿಗೆ ತುಂಬ ಮರಿಗಳಾಗೋ ಹಾಗೆ ಆಶೀರ್ವದಿಸ್ತಾನೆ.+

5 ಆತನ ಆಶೀರ್ವಾದದಿಂದ ನಿಮ್ಮ ಬುಟ್ಟಿ,+ ಹಿಟ್ಟು ನಾದೋ ಪಾತ್ರೆ+ ಯಾವಾಗ್ಲೂ ತುಂಬಿರುತ್ತೆ.

6 ನೀವೆಲ್ಲೇ ಹೋದ್ರೂ ಏನೇ ಕೆಲಸ ಮಾಡಿದ್ರೂ ಅದನ್ನೆಲ್ಲ ಆಶೀರ್ವದಿಸ್ತಾನೆ.

7 ನಿಮ್ಮ ವಿರುದ್ಧ ಬರೋ ಶತ್ರುಗಳು ನಿಮ್ಮಿಂದ ಸೋತುಹೋಗೋ ಹಾಗೆ ಯೆಹೋವ ಮಾಡ್ತಾನೆ.+ ಅವರು ನಿಮ್ಮ ಮೇಲೆ ದಾಳಿ ಮಾಡೋಕೆ ಒಂದು ದಾರಿಯಿಂದ ಬರ್ತಾರೆ. ಆದ್ರೆ ಸೋತು ದಿಕ್ಕುಪಾಲಾಗಿ ಏಳು ದಾರಿಯಿಂದ ಓಡಿಹೋಗ್ತಾರೆ.+ 8 ನಿಮ್ಮ ಗೋಡೌನ್‌ಗಳು ತುಂಬಿರಬೇಕು,+ ನೀವು ಮಾಡೋ ಪ್ರತಿಯೊಂದು ಕೆಲಸದ ಮೇಲೆ ಆಶೀರ್ವಾದ ಇರಬೇಕು ಅಂತ ಯೆಹೋವ ಆಜ್ಞೆ ಕೊಡ್ತಾನೆ. ನಿಮ್ಮ ದೇವರಾದ ಯೆಹೋವ ನಿಮಗೆ ಕೊಡೋ ದೇಶದಲ್ಲಿ ನಿಮ್ಮನ್ನ ಆತನು ಖಂಡಿತ ಆಶೀರ್ವದಿಸ್ತಾನೆ. 9 ನಿಮ್ಮ ದೇವರಾದ ಯೆಹೋವನ ಆಜ್ಞೆಗಳನ್ನ ಯಾವಾಗ್ಲೂ ಪಾಲಿಸ್ತಾ ಇದ್ರೆ, ಎಲ್ಲ ವಿಷ್ಯಗಳಲ್ಲಿ ಆತನು ಹೇಳಿದ ಹಾಗೆ ಮಾಡಿದ್ರೆ ಯೆಹೋವ ಮಾತು ಕೊಟ್ಟ ಹಾಗೇ+ ನಿಮ್ಮನ್ನ ತನ್ನ ಪವಿತ್ರ ಜನ್ರಾಗಿ ಮಾಡ್ತಾನೆ.+ 10 ನೀವು ಯೆಹೋವನ ಹೆಸ್ರಿರೋ ಜನ್ರು* ಅಂತ ಭೂಮಿಯ ಎಲ್ಲ ಜನ್ರಿಗೂ ಗೊತ್ತಾಗುತ್ತೆ,+ ಅವರು ನಿಮಗೆ ಭಯಪಡ್ತಾರೆ.+

11 ಯೆಹೋವ ನಿಮಗೆ ಕೊಡ್ತೀನಿ ಅಂತ ನಿಮ್ಮ ಪೂರ್ವಜರಿಗೆ ಮಾತು ಕೊಟ್ಟ ದೇಶದಲ್ಲಿ+ ನಿಮ್ಮ ವಂಶ ಬೆಳೆದು ತುಂಬ ಜನ ಆಗೋ ತರ, ತುಂಬ ಪ್ರಾಣಿಗಳು ಇರೋ ತರ, ಜಮೀನಲ್ಲಿ ಬೆಳೆ ಜಾಸ್ತಿ ಆಗೋ ತರ+ ಯೆಹೋವ ಮಾಡ್ತಾನೆ. 12 ತುಂಬಿದ ಗೋಡೌನ್‌ ತರ ಇರೋ ಆಕಾಶ ತೆರೆದು ಯೆಹೋವ ನಿಮ್ಮ ದೇಶದಲ್ಲಿ ಕಾಲಕಾಲಕ್ಕೆ ಮಳೆ ಸುರಿಸ್ತಾನೆ.+ ನೀವು ಮಾಡೋ ಎಲ್ಲ ಕೆಲಸಗಳನ್ನ ಆಶೀರ್ವದಿಸ್ತಾನೆ. ನೀವು ಬೇರೆ ಜನ್ರಿಗೆ ಸಾಲ ಕೊಡ್ತೀರ. ಅವ್ರಿಂದ ಸಾಲ ತಗೊಳ್ಳೋ ಸ್ಥಿತಿಗೆ ಬರಲ್ಲ.+ 13 ನಿಮ್ಮ ದೇವರಾದ ಯೆಹೋವ ಕೊಟ್ಟ ಆಜ್ಞೆಗಳನ್ನ ಪಾಲಿಸ್ತಾ ಇದ್ರೆ ನೀವು ಬೇರೆಯವ್ರಿಗಿಂತ ಮೇಲೆ ಇರ್ತಿರ.+ ಬೇರೆಯವರು ನಿಮ್ಮ ಮೇಲೆ ಅಧಿಕಾರ ಚಲಾಯಿಸೋಕೆ ಯೆಹೋವ ಬಿಡಲ್ಲ. ನೀವು ಎಲ್ರಿಗಿಂತ ಶ್ರೇಷ್ಠರಾಗಿ ಇರ್ತಿರ, ಕೀಳಾಗಿ ಇರಲ್ಲ. 14 ನಾನು ಇವತ್ತು ನಿಮಗೆ ಕೊಡ್ತಿರೋ ಆಜ್ಞೆಗಳಲ್ಲಿ ಒಂದನ್ನೂ ಮೀರಿ ನಡೀಬಾರದು.+ ಬೇರೆ ದೇವರುಗಳನ್ನ ಆರಾಧನೆ ಮಾಡಬಾರದು, ಅವುಗಳಿಗೆ ಸೇವೆ ಮಾಡ್ಲೂಬಾರದು.+

15 ನಾನು ಇವತ್ತು ನಿಮಗೆ ಕೊಡ್ತಿರೋ ನಿಮ್ಮ ದೇವರಾದ ಯೆಹೋವನ ಎಲ್ಲ ಆಜ್ಞೆಗಳನ್ನ, ನಿಯಮಗಳನ್ನ ನೀವು ಪಾಲಿಸದೆ ಹೋದ್ರೆ, ದೇವರ ಮಾತನ್ನ ಕೇಳದೇ ಹೋದ್ರೆ ನಾನು ನಿಮಗೆ ಹೇಳೋ ಎಲ್ಲ ಶಾಪಗಳು ನಿಮಗೆ ಬರುತ್ತೆ. ಅದ್ರಿಂದ ತಪ್ಪಿಸ್ಕೊಳ್ಳೋಕೆ ಆಗೋದೇ ಇಲ್ಲ.+

16 ನೀವು ಪಟ್ಟಣದಲ್ಲಿದ್ರೂ ಹಳ್ಳಿಯಲ್ಲಿದ್ರೂ ಶಾಪ ತಟ್ಟುತ್ತೆ.+

17 ನಿಮ್ಮ ಬುಟ್ಟಿ,+ ಹಿಟ್ಟು ನಾದೋ ಪಾತ್ರೆಗೆ ಶಾಪ ತಟ್ಟುತ್ತೆ.+

18 ನಿಮ್ಮ ಮಕ್ಕಳು,+ ಬೆಳೆ, ಕರುಗಳು, ಕುರಿಮರಿಗಳಿಗೆ ಶಾಪ ತಟ್ಟುತ್ತೆ.+

19 ನೀವೆಲ್ಲೇ ಹೋದ್ರೂ ಏನೇ ಕೆಲಸ ಮಾಡಿದ್ರೂ ಶಾಪ ತಟ್ಟುತ್ತೆ.

20 ಕೆಟ್ಟ ಕೆಲಸ ಮಾಡಿದ್ರೆ ದೇವರನ್ನ* ಬಿಟ್ಟುಬಿಟ್ರೆ ನೀವು ಮಾಡೋ ಪ್ರತಿಯೊಂದು ಕೆಲಸವನ್ನ ಯೆಹೋವ ಶಪಿಸ್ತಾನೆ. ಗಲಿಬಿಲಿ ಮಾಡಿ ಶಿಕ್ಷೆ ಕೊಡ್ತಾನೆ. ನೀವು ಬೇಗ ಪೂರ್ತಿ ನಾಶ ಆಗೋ ತನಕ ಹಾಗೇ ಮಾಡ್ತಾನೆ.+ 21 ನೀವು ವಶ ಮಾಡ್ಕೊಳ್ಳೋ ದೇಶದಲ್ಲಿ ನಿಮಗೆ ಕಾಯಿಲೆಗಳು ಬರೋ ಹಾಗೆ, ನೀವು ಅಳಿದು ಹೋಗೋ ತನಕ ಅವು ನಿಮ್ಮನ್ನ ಬಿಟ್ಟುಹೋಗದ ಹಾಗೆ ಯೆಹೋವ ಮಾಡ್ತಾನೆ.+ 22 ಕ್ಷಯರೋಗ, ತುಂಬ ಜ್ವರ,+ ಜ್ವರದಿಂದ ಮೈ ಬಿಸಿ, ಉರಿಯೂತ ಬರೋ ಹಾಗೆ, ಶತ್ರುಗಳ ದಾಳಿಗೆ+ ಗುರಿ ಆಗೋ ಹಾಗೆ ಯೆಹೋವ ಮಾಡ್ತಾನೆ. ಬೆಳೆಗಳಿಗೆ ಬಿಸಿಗಾಳಿ ಬೀಸೋ ಹಾಗೆ, ರೋಗ ಬಂದು ಬೆಳೆ ನಾಶ ಆಗೋ ತರ ಮಾಡ್ತಾನೆ.+ ನೀವು ಸರ್ವನಾಶ ಆಗೋ ತನಕ ಇದ್ಯಾವುದೂ ನಿಮ್ಮನ್ನ ಬಿಟ್ಟು ಹೋಗಲ್ಲ. 23 ನಿಮ್ಮ ಮೇಲಿರೋ ಆಕಾಶ ತಾಮ್ರದ ಹಾಗೆ* ಕೆಳಗಿರೋ ಭೂಮಿ ಕಬ್ಬಿಣದ ಹಾಗೆ* ಆಗುತ್ತೆ.+ 24 ಯೆಹೋವ ನಿಮ್ಮ ದೇಶದಲ್ಲಿ ಆಕಾಶದಿಂದ ಮಳೆ ಬದ್ಲು ಧೂಳು, ಮರಳು ಸುರಿಸ್ತಾನೆ. ನೀವು ನಾಶ ಆಗೋ ತನಕ ಹಾಗೆ ಮಾಡ್ತಾನೆ. 25 ಶತ್ರುಗಳ ಮುಂದೆ ಸೋಲೋ ತರ ಯೆಹೋವ ಮಾಡ್ತಾನೆ.+ ನೀವು ಅವ್ರನ್ನ ದಾಳಿ ಮಾಡೋಕೆ ಒಂದು ದಾರಿಯಲ್ಲಿ ಹೋಗ್ತೀರ. ಆದ್ರೆ ಸೋತು ದಿಕ್ಕುಪಾಲಾಗಿ ಏಳು ದಾರಿಯಲ್ಲಿ ಓಡಿಹೋಗ್ತೀರ. ನಿಮ್ಮ ಪಾಡನ್ನ ನೋಡಿ ಭೂಮಿಯಲ್ಲಿರೋ ಎಲ್ಲ ರಾಜ್ಯಗಳಿಗೆ ಗಾಬರಿ ಆಗುತ್ತೆ.+ 26 ನಿಮ್ಮ ಶವಗಳನ್ನ ಆಕಾಶದ ಪ್ರತಿಯೊಂದು ಪಕ್ಷಿ, ಭೂಮಿಯಲ್ಲಿರೋ ಪ್ರತಿಯೊಂದು ಪ್ರಾಣಿ ತಿಂದುಬಿಡುತ್ತೆ. ಆ ಪ್ರಾಣಿಪಕ್ಷಿಗಳನ್ನ ಹೆದರಿಸಿ ಓಡಿಸೋಕೆ ಯಾರೂ ಇರಲ್ಲ.+

27 ಈಜಿಪ್ಟ್‌ ಜನ್ರಿಗೆ ಬರೋ ಹುಣ್ಣು ನಿಮಗೂ ಬರೋ ಹಾಗೆ ಯೆಹೋವ ಮಾಡ್ತಾನೆ. ಜೊತೆಗೆ ವಾಸಿಯಾಗದ ಮೂಲವ್ಯಾಧಿ, ಇಸಬು, ಚರ್ಮ ದದ್ದುಗಳು ಬರೋ ಹಾಗೆ ಮಾಡ್ತಾನೆ. 28 ನಿಮಗೆ ಹುಚ್ಚು ಹಿಡಿಯೋ ಹಾಗೆ, ಕಣ್ಣು ಕಾಣದ ಹಾಗೆ,+ ಗಲಿಬಿಲಿ ಆಗೋ ಹಾಗೆ ಯೆಹೋವ ಮಾಡ್ತಾನೆ. 29 ನೀವು ನಡುಹಗಲಲ್ಲಿ ಕುರುಡರ ತರ ತಡಕಾಡ್ತೀರ.+ ಏನೇ ಕೆಲಸ ಮಾಡಿದ್ರು ಯಶಸ್ಸು ಸಿಗಲ್ಲ. ಬೇರೆಯವರು ಯಾವಾಗ್ಲೂ ನಿಮಗೆ ಮೋಸ ಮಾಡ್ತಾರೆ, ನಿಮ್ಮಿಂದ ಕಿತ್ಕೊಳ್ತಾರೆ. ನಿಮ್ಮನ್ನ ಕಾಪಾಡೋಕೆ ಒಬ್ರೂ ಇರಲ್ಲ.+ 30 ನಿಮಗೆ ನಿಶ್ಚಯವಾದ ಹೆಣ್ಣಿನ ಮೇಲೆ ಇನ್ನೊಬ್ಬ ಅತ್ಯಾಚಾರ ಮಾಡ್ತಾನೆ. ನೀವು ಮನೆ ಕಟ್ತೀರ, ಆದ್ರೆ ವಾಸ ಮಾಡಲ್ಲ.+ ದ್ರಾಕ್ಷಿ ತೋಟ ಮಾಡ್ತೀರ, ಆದ್ರೆ ಅದ್ರ ಹಣ್ಣು ಸಿಗಲ್ಲ.+ 31 ನಿಮ್ಮ ಹೋರಿಯನ್ನ ನಿಮ್ಮ ಕಣ್ಮುಂದೆನೇ ಕಡಿತಾರೆ. ಆದ್ರೆ ಅದ್ರ ಮಾಂಸದಲ್ಲಿ ಸ್ವಲ್ಪನೂ ನಿಮಗೆ ಸಿಗಲ್ಲ. ನಿಮ್ಮ ಕತ್ತೆನ ನಿಮ್ಮ ಕಣ್ಮುಂದೆನೇ ಕದಿತಾರೆ. ಅದು ನಿಮಗೆ ಸಿಗೋದೆ ಇಲ್ಲ. ನಿಮ್ಮ ಕುರಿಗಳು ನಿಮ್ಮ ಶತ್ರುಗಳ ವಶ ಆಗುತ್ತೆ. ಆದ್ರೆ ಅವುಗಳನ್ನ ಬಿಡಿಸೋಕೆ ಯಾರೂ ಬರಲ್ಲ. 32 ನಿಮ್ಮ ಗಂಡು ಹೆಣ್ಣುಮಕ್ಕಳನ್ನ ನಿಮ್ಮ ಮುಂದೆನೇ ಬೇರೆಯವರು ತಗೊಂಡು ಹೋಗ್ತಾರೆ.+ ನಿಮ್ಮ ಮಕ್ಕಳನ್ನ ನೋಡಬೇಕು ಅಂತ ತುಂಬ ಆಸೆ ಆಗುತ್ತೆ. ಆದ್ರೆ ನಿಮ್ಮಿಂದ ಏನೂ ಮಾಡಕ್ಕಾಗಲ್ಲ. 33 ನಿಮ್ಮ ಬೆಳೆ, ಎಲ್ಲ ಆಹಾರ ನಿಮಗೆ ಗೊತ್ತಿಲ್ಲದ ಜನ್ರ ಪಾಲಾಗುತ್ತೆ.+ ಬೇರೆಯವರು ಯಾವಾಗ್ಲೂ ನಿಮಗೆ ಮೋಸ ಮಾಡ್ತಾರೆ, ದಬ್ಬಾಳಿಕೆ ಮಾಡ್ತಾರೆ. 34 ನಿಮ್ಮ ಮುಂದೆ ನಡೆಯೋ ವಿಷ್ಯಗಳನ್ನೆಲ್ಲ ನೋಡಿ ನಿಮಗೆ ಹುಚ್ಚು ಹಿಡಿಯುತ್ತೆ.

35 ನಿಮ್ಮ ಮಂಡಿ ಮೇಲೆ, ಕಾಲು ಮೇಲೆ ಗುಣವಾಗದ ತುಂಬ ನೋವು ಇರೋ ಹುಣ್ಣುಗಳು ಬರೋ ತರ ಯೆಹೋವ ಮಾಡ್ತಾನೆ. ಆ ಹುಣ್ಣುಗಳು ನಿಮ್ಮ ಪಾದದಿಂದ ನೆತ್ತಿ ತನಕ ಹರಡುತ್ತೆ. 36 ಯೆಹೋವ ನಿಮ್ಮನ್ನ, ನಿಮ್ಮ ಮೇಲೆ ನೀವು ನೇಮಿಸ್ಕೊಂಡ ರಾಜನನ್ನ ನಿಮಗೆ ನಿಮ್ಮ ಪೂರ್ವಜರಿಗೆ ಗೊತ್ತಿಲ್ಲದ ದೇಶಕ್ಕೆ ಓಡಿಸಿಬಿಡ್ತಾನೆ.+ ಅಲ್ಲಿ ಮರಕಲ್ಲುಗಳಿಂದ ಮಾಡಿದ ದೇವರುಗಳ ಸೇವೆ ಮಾಡ್ತೀರ.+ 37 ಯೆಹೋವ ನಿಮ್ಮನ್ನ ಎಲ್ಲಿಗೆ ಓಡಿಸಿಬಿಟ್ನೋ ಆ ದೇಶದ ಜನ್ರಿಗೆ ನಿಮ್ಮ ಪಾಡು ನೋಡಿ ಗಾಬರಿ ಆಗುತ್ತೆ, ನಿಮ್ಮನ್ನ ನೋಡಿ ಗೇಲಿ* ಮಾಡ್ತಾರೆ, ಗೇಲಿ ಮಾಡಿ ನಗ್ತಾರೆ.+

38 ಹೊಲದಲ್ಲಿ ತುಂಬ ಬೀಜ ಬಿತ್ತುತ್ತೀರ, ಆದ್ರೆ ಮಿಡತೆಗಳು ಬೆಳೆ ತಿಂದುಬಿಡುತ್ತೆ, ನಿಮಗೆ ಸ್ವಲ್ಪಾನೇ ಬೆಳೆ ಸಿಗುತ್ತೆ.+ 39 ದ್ರಾಕ್ಷಿತೋಟಗಳನ್ನ ಮಾಡ್ತೀರ ಆದ್ರೆ ಹುಳಗಳು ದ್ರಾಕ್ಷಿ ಬೆಳೆ ಹಾಳು ಮಾಡುತ್ತೆ. ಆಗ ನಿಮಗೆ ದ್ರಾಕ್ಷಿಹಣ್ಣುಗಳು ಸಿಗಲ್ಲ, ದ್ರಾಕ್ಷಾಮದ್ಯ ಮಾಡೋಕ್ಕೂ ಆಗಲ್ಲ.+ 40 ನಿಮ್ಮ ಪ್ರದೇಶದಲ್ಲೆಲ್ಲ ಆಲಿವ್‌ ಮರಗಳು ಇರುತ್ತೆ. ಆದ್ರೆ ಕಾಯಿಗಳು ಉದುರಿ ಹೋಗುತ್ತೆ. ಹಾಗಾಗಿ ಮೈಗೆ ಹಚ್ಕೊಳ್ಳೋಕೆ ಎಣ್ಣೆ ಇರಲ್ಲ. 41 ನಿಮಗೆ ಗಂಡು ಹೆಣ್ಣು ಮಕ್ಕಳು ಹುಟ್ತಾರೆ. ಆದ್ರೆ ಅವರು ನಿಮ್ಮ ಹತ್ರ ಇರಲ್ಲ, ಕೈದಿಯಾಗಿ ಹೋಗ್ತಾರೆ.+ 42 ಕ್ರಿಮಿಕೀಟಗಳು ಗುಂಪುಗುಂಪಾಗಿ ಬಂದು ನಿಮ್ಮ ಮರಗಳ, ಬೆಳೆಗಳ ಮೇಲೆ ದಾಳಿ ಮಾಡಿ ಹಾಳು ಮಾಡುತ್ತೆ. 43 ನಿಮ್ಮ ಮಧ್ಯ ವಾಸಿಸೋ ವಿದೇಶಿಯರು ನಿಮಗಿಂತ ಬಲಿಷ್ಠರಾಗ್ತಾ ಹೋಗ್ತಾರೆ. ಆದ್ರೆ ನೀವು ಬಲಹೀನರಾಗ್ತಾ ಹೋಗ್ತೀರ. 44 ನೀವು ಅವ್ರಿಗೆ ಸಾಲ ಕೊಡೋ ಸ್ಥಿತಿಯಲ್ಲಿ ಇರಲ್ಲ. ಅವ್ರೇ ನಿಮಗೆ ಸಾಲ ಕೊಡಬೇಕಾಗುತ್ತೆ.+ ಅವರು ನಿಮಗಿಂತ ಮೇಲೆ ಇರ್ತಾರೆ, ನೀವು ಅವ್ರ ಅಧಿಕಾರದ ಕೆಳಗೆ ಇರ್ತಿರ.+

45 ನಿಮ್ಮ ದೇವರಾದ ಯೆಹೋವ ನಿಮಗೆ ಕೊಟ್ಟಿರೋ ಆಜ್ಞೆಗಳನ್ನ ನಿಯಮಗಳನ್ನ ಪಾಲಿಸದೆ ಇದ್ರೆ,+ ಆತನ ಮಾತು ಕೇಳದೆ ಇದ್ರೆ ಎಲ್ಲ ಶಾಪಗಳು+ ತಟ್ಟಿ ನೀವು ಪೂರ್ತಿ ನಾಶ ಆಗ್ತೀರ. ಅವುಗಳಿಂದ ತಪ್ಪಿಸ್ಕೊಳ್ಳೋಕೆ ಆಗಲ್ಲ.+ 46 ಆ ಶಾಪಗಳು ನಿಮ್ಮ ಮೇಲೆ, ನಿಮ್ಮ ವಂಶದವರ ಮೇಲೆ ಬರುತ್ತೆ. ಅವು ಎಲ್ಲರಿಗೂ ಗುರುತಾಗಿ, ಎಚ್ಚರಿಕೆಯಾಗಿ ಇರುತ್ತೆ.+ 47 ಯಾಕಂದ್ರೆ ಎಲ್ಲನೂ ಸಮೃದ್ಧಿಯಾಗಿ ಇರುವಾಗ ನೀವು ಸಂತೋಷದಿಂದ, ಖುಷಿಯಿಂದ ನಿಮ್ಮ ದೇವರಾದ ಯೆಹೋವನ ಸೇವೆ ಮಾಡಲಿಲ್ಲ.+ 48 ಯೆಹೋವ ನಿಮ್ಮ ವಿರುದ್ಧ ಶತ್ರುಗಳನ್ನ ಕಳಿಸ್ತಾನೆ. ನೀವು ಏನೂ ತಿನ್ನದೆ,+ ಬಾಯಾರಿ, ಹರಕಲು ಬಟ್ಟೆ ಹಾಕೊಂಡು ಅವ್ರ ಸೇವೆ ಮಾಡ್ತೀರ.+ ನಿಮ್ಮ ಹತ್ರ ಏನೂ ಇರಲ್ಲ. ನಿಮ್ಮನ್ನ ಪೂರ್ತಿ ನಾಶ ಮಾಡೋ ತನಕ ಆ ಶತ್ರುಗಳು ನಿಮ್ಮನ್ನ ಗುಲಾಮರಾಗಿ ಮಾಡ್ಕೊಂಡು ತುಂಬ ದುಡಿಸ್ಕೊಳ್ತಾರೆ.*

49 ಭೂಮಿಯ ಯಾವುದೋ ಮೂಲೆಯಲ್ಲಿರೋ ಒಂದು ಜನಾಂಗ ನಿಮ್ಮ ವಿರುದ್ಧ ಬರೋ ಹಾಗೆ ಯೆಹೋವ ಮಾಡ್ತಾನೆ.+ ಹದ್ದು ತನ್ನ ಬೇಟೆ ಮೇಲೆ ತಟ್ಟನೆ ಬೀಳೋ ತರ+ ಆ ಜನಾಂಗ ನಿಮ್ಮ ಮೇಲೆ ದಿಢೀರಂತ ದಾಳಿ ಮಾಡುತ್ತೆ. ಅವರ ಭಾಷೆ ನಿಮಗೆ ಅರ್ಥ ಆಗಲ್ಲ.+ 50 ಕ್ರೂರಿಗಳಾದ ಆ ಜನ್ರು ವಯಸ್ಸಾದವರ ಮೇಲೆ, ಮಕ್ಕಳ ಮೇಲೆ ದಯೆ ತೋರಿಸಲ್ಲ.+ 51 ನೀವು ಪೂರ್ತಿ ನಾಶ ಆಗೋ ತನಕ ನಿಮ್ಮ ಪ್ರಾಣಿಗಳನ್ನ, ಮರಿಗಳನ್ನ, ಬೆಳೆಯನ್ನ ತಿಂತಾರೆ. ಧಾನ್ಯ ಆಗ್ಲಿ, ಹೊಸ ದ್ರಾಕ್ಷಾಮದ್ಯ ಆಗ್ಲಿ, ಎಣ್ಣೆ ಆಗ್ಲಿ, ಕರುಗಳನ್ನಾಗ್ಲಿ, ಕುರಿಮರಿಗಳನ್ನಾಗ್ಲಿ ಸ್ವಲ್ಪನೂ ಉಳಿಸಲ್ಲ.+ 52 ನಿಮ್ಮ ದೇಶದ ಎಲ್ಲ ಪಟ್ಟಣಗಳಿಗೆ ಮುತ್ತಿಗೆ ಹಾಕ್ತಾರೆ. ಆಗ ನಿಮ್ಮ ಪಟ್ಟಣಗಳಲ್ಲೇ ನೀವು ಕೈದಿಗಳು ಆಗ್ತೀರ. ನಿಮ್ಮನ್ನ ಕಾಪಾಡುತ್ತೆ ಅಂತ ನೀವು ಕಟ್ಟಿದ ಎತ್ರವಾದ ಗಟ್ಟಿಯಾದ ಗೋಡೆಗಳನ್ನ ಕೆಡವಿ ಹಾಕೋ ತನಕ ಅವರು ಮುತ್ತಿಗೆ ಹಾಕ್ತಾರೆ. ನಿಮ್ಮ ದೇವರಾದ ಯೆಹೋವ ನಿಮಗೆ ಕೊಟ್ಟಿರೋ ದೇಶದ ಎಲ್ಲ ಪಟ್ಟಣಗಳಿಗೆ ಮುತ್ತಿಗೆ ಹಾಕ್ತಾರೆ.+ 53 ಹಾಗೆ ಮುತ್ತಿಗೆ ಹಾಕಿ ಶತ್ರುಗಳು ನಿಮಗೆ ತುಂಬ ಕಷ್ಟಕೊಡ್ತಾರೆ. ಎಷ್ಟು ಕಷ್ಟ ಕೊಡ್ತಾರಂದ್ರೆ, ನಿಮ್ಮ ಸ್ವಂತ ಮಕ್ಕಳನ್ನೇ ಅಂದ್ರೆ ನಿಮ್ಮ ದೇವರಾದ ಯೆಹೋವ ನಿಮಗೆ ಕೊಟ್ಟ ಗಂಡು ಹೆಣ್ಣು ಮಕ್ಕಳ ಮಾಂಸವನ್ನೇ ತಿನ್ನಬೇಕಾಗುತ್ತೆ.+

54 ನಿಮ್ಮಲ್ಲಿ ತುಂಬ ಮೃದುಸ್ವಭಾವದ, ಸುಖದ ಸುಪ್ಪತ್ತಿಗೆಯಲ್ಲೇ ಬೆಳೆದ ವ್ಯಕ್ತಿನೂ ತನ್ನ ಅಣ್ಣತಮ್ಮನಿಗೆ, ತುಂಬ ಪ್ರೀತಿಸೋ ತನ್ನ ಹೆಂಡತಿಗೆ, ಉಳಿದಿರೋ ತನ್ನ ಮಕ್ಕಳಿಗೆ ಒಂಚೂರೂ ಕನಿಕರ ತೋರಿಸಲ್ಲ. 55 ಶತ್ರುಗಳು ನಿಮ್ಮ ಪಟ್ಟಣಗಳಿಗೆ ಮುತ್ತಿಗೆಹಾಕಿ ಮಾಡೋ ನಾಶ ಹೇಗಿರುತ್ತೆ ಅಂದ್ರೆ, ಅವನಿಗೆ ತಿನ್ನೋಕೆ ಏನೂ ಇರಲ್ಲ. ಹಾಗಾಗಿ ತನ್ನ ಮಕ್ಕಳ ಮಾಂಸವನ್ನೇ ತಿಂತಾನೆ. ಬೇರೆಯವರಿಗೆ ಸ್ವಲ್ಪನೂ ಕೊಡಲ್ಲ.+ 56 ಕಾಲು ನೆಲಕ್ಕೆ ಸೋಕದ ಹಾಗೆ ಬೆಳೆದ ಮೃದುವಾದ ಸ್ತ್ರೀ+ ಕೂಡ ತನ್ನ ಪ್ರಾಣಪ್ರಿಯನಾದ ಗಂಡನಿಗೆ, ತನ್ನ ಗಂಡುಹೆಣ್ಣು ಮಕ್ಕಳಿಗೆ ಕನಿಕರ ತೋರಿಸಲ್ಲ. 57 ಅವಳು ತಾನು ಆಗಷ್ಟೇ ಹೆತ್ತ ಕೂಸಿಗೂ ಕನಿಕರ ತೋರಿಸದೆ ಆ ಕೂಸನ್ನೂ ಹೆರಿಗೆ ಸಮಯದಲ್ಲಿ ಗರ್ಭದಿಂದ ಹೊರಗೆ ಬಂದ ಎಲ್ಲಾನೂ ಕದ್ದುಮುಚ್ಚಿ ತಿಂತಾಳೆ. ಶತ್ರುಗಳು ನಿಮ್ಮ ಪಟ್ಟಣಗಳಿಗೆ ಹಾಕೋ ಮುತ್ತಿಗೆಯಿಂದ, ಅವರು ನಿಮಗೆ ಕೊಡೋ ಕಷ್ಟಗಳಿಂದ ನಿಮಗೆ ಸಾಕಾಗಿ ಹೋಗುತ್ತೆ.

58 ಈ ನಿಯಮ ಪುಸ್ತಕದಲ್ಲಿ ಬರೆದಿರೋ ಎಲ್ಲ ನಿಯಮಗಳನ್ನ ನೀವು ಪಾಲಿಸದೇ ಇದ್ರೆ,+ ನಿಮ್ಮ ದೇವರಾದ ಯೆಹೋವನ+ ಮಹಿಮೆಯಿಂದ ತುಂಬಿದ, ವಿಸ್ಮಯಕಾರಿ ಹೆಸ್ರಿಗೆ ಭಯಪಡದಿದ್ರೆ+ 59 ಯೆಹೋವ ನಿಮಗೆ, ನಿಮ್ಮ ವಂಶದವರಿಗೆ ದೊಡ್ಡ ದೊಡ್ಡ ಕಾಯಿಲೆಗಳು ತುಂಬ ದಿನ ಕಾಡೋ ತರ ಮಾಡ್ತಾನೆ.+ ಜೀವನಪೂರ್ತಿ ವಾಸಿಯಾಗದ, ಸಹಿಸಕ್ಕಾಗದ ಕಾಯಿಲೆಗಳು ಬರೋ ಹಾಗೆ ಮಾಡ್ತಾನೆ. 60 ನೀವು ಈಜಿಪ್ಟಲ್ಲಿ ಇದ್ದಾಗ ಯಾವ ಕಾಯಿಲೆಗಳು ನಿಮಗೆ ಬರಬಾರದು ಅಂದ್ಕೊಂಡ್ರೋ ಆ ಕಾಯಿಲೆಗಳೇ ನಿಮಗೆ ಬರೋ ಹಾಗೆ ಮಾಡ್ತಾನೆ. ಆ ಕಾಯಿಲೆಗಳು ನಿಮ್ಮನ್ನ ಬಿಟ್ಟು ಹೋಗಲ್ಲ. 61 ಈ ನಿಯಮ ಪುಸ್ತಕದಲ್ಲಿ ಹೇಳಿರೋ ಬೇರೆಲ್ಲ ಕಾಯಿಲೆಗಳು ಬರೋ ಹಾಗೆ ಯೆಹೋವ ಮಾಡ್ತಾನೆ. ನೀವು ಪೂರ್ತಿ ನಾಶ ಆಗೋ ತನಕ ಆ ಕಾಯಿಲೆಗಳು ನಿಮಗೆ ಬರ್ತಾ ಇರುತ್ತೆ. 62 ನಿಮ್ಮ ಸಂಖ್ಯೆ ಆಕಾಶದ ನಕ್ಷತ್ರಗಳಷ್ಟು ಜಾಸ್ತಿ ಇದ್ರೂ+ ಕೊನೆಗೆ ಸ್ವಲ್ಪ ಜನ ಮಾತ್ರ ಉಳಿತೀರ.+ ನಿಮ್ಮ ದೇವರಾದ ಯೆಹೋವನ ಮಾತು ಕೇಳದೆ ಹೋದ್ರೆ ಹೀಗೆಲ್ಲ ಆಗುತ್ತೆ.

63 ಈಗ ಯೆಹೋವ ನಿಮ್ಮ ಸಂಖ್ಯೆಯನ್ನ ಖುಷಿಯಿಂದ ಜಾಸ್ತಿ ಮಾಡಿದ ಹಾಗೇ ಆಗ ಯೆಹೋವ ಖುಷಿಯಿಂದಾನೇ ನಿಮ್ಮನ್ನ ಪೂರ್ತಿ ನಾಶ ಮಾಡ್ತಾನೆ. ನೀವು ವಶ ಮಾಡ್ಕೊಳ್ಳೋ ದೇಶದಿಂದ ನಿಮ್ಮನ್ನ ಕಿತ್ತುಹಾಕ್ತಾನೆ.

64 ಯೆಹೋವ ನಿಮ್ಮನ್ನ ಭೂಮಿಯ ಒಂದು ಕಡೆಯಿಂದ ಇನ್ನೊಂದು ಕಡೆ ತನಕ ಎಲ್ಲ ಜನ್ರ ಮಧ್ಯ ಚದರಿಸಿಬಿಡ್ತಾನೆ.+ ಅಲ್ಲಿ ನಿಮಗೆ, ನಿಮ್ಮ ಪೂರ್ವಜರಿಗೆ ಗೊತ್ತಿಲ್ಲದ ಅಂದ್ರೆ ಮರಕಲ್ಲುಗಳಿಂದ ಮಾಡಿದ ದೇವರುಗಳ ಸೇವೆ ಮಾಡಬೇಕಾಗುತ್ತೆ.+ 65 ಆ ಜನ್ರ ಮಧ್ಯ ಇರುವಾಗ ನಿಮಗೆ ನೆಮ್ಮದಿ ಇರಲ್ಲ,+ ವಾಸ ಮಾಡೋಕೆ ಜಾಗನೂ ಇರಲ್ಲ. ನಿಮ್ಮ ಹೃದಯದಲ್ಲಿ ಭಯ ಮನೆಮಾಡೋ ಹಾಗೆ,+ ದೃಷ್ಟಿ ಮಂದ ಆಗೋ ಹಾಗೆ, ಬೇಜಾರಲ್ಲಿ ಕೈಚೆಲ್ಲಿ ಕೂರೋ ಹಾಗೆ ಯೆಹೋವ ಮಾಡ್ತಾನೆ.+ 66 ನಿಮ್ಮ ಜೀವ ಗಂಡಾಂತರದಲ್ಲಿ ಇರುತ್ತೆ. ಹಗಲೂರಾತ್ರಿ ಭಯದಲ್ಲೇ ಜೀವಿಸ್ತೀರ. ನೀವು ಬದುಕಿ ಉಳಿತೀರಾ ಇಲ್ವಾ ಅಂತ ನಿಮಗೇ ಗೊತ್ತಿರಲ್ಲ. 67 ನಿಮ್ಮ ಹೃದಯದಲ್ಲಿ ಎಷ್ಟೊಂದು ಭಯ, ಗಾಬರಿ ತುಂಬಿರುತ್ತೆ ಅಂದ್ರೆ, ನಿಮ್ಮ ಕಣ್ಮುಂದೆ ಎಂಥೆಂಥ ವಿಷ್ಯ ನಡಿಯುತ್ತೆ ಅಂದ್ರೆ ಬೆಳಗಾದ್ರೆ ‘ಯಾವಾಗ ಸಂಜೆ ಆಗುತ್ತೋ’ ಅಂತೀರ. ಸಂಜೆ ಆದ್ರೆ ‘ಯಾವಾಗ ಬೆಳಗಾಗುತ್ತೋ’ ಅಂತೀರ. 68 ನೀವು ಯಾವ ದೇಶವನ್ನ ಇನ್ಯಾವತ್ತೂ ನೋಡಲ್ಲ ಅಂತ ನಾನು ಹೇಳಿದ್ನೋ ಆ ಈಜಿಪ್ಟಿಗೆ ಯೆಹೋವ ನಿಮ್ಮನ್ನ ಹಡಗುಗಳಲ್ಲಿ ಕರ್ಕೊಂಡು ಹೋಗ್ತಾನೆ. ಅಲ್ಲಿ ನಿಮ್ಮನ್ನ ಶತ್ರುಗಳಿಗೆ ದಾಸದಾಸಿಯರಾಗಿ ಮಾರಿಕೊಳ್ಳಬೇಕಾಗುತ್ತೆ. ಆದ್ರೆ ಯಾರೂ ನಿಮ್ಮನ್ನ ಖರೀದಿಸಲ್ಲ.”

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ