ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ನ್ಯಾಯಸ್ಥಾಪಕರು 3
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ನ್ಯಾಯಸ್ಥಾಪಕರು ಮುಖ್ಯಾಂಶಗಳು

      • ಯೆಹೋವ ಇಸ್ರಾಯೇಲ್ಯರನ್ನ ಪರೀಕ್ಷಿಸಿದನು (1-6)

      • ಮೊದಲ ನ್ಯಾಯಾಧೀಶ ಒತ್ನೀಯೇಲ (7-11)

      • ನ್ಯಾಯಾಧೀಶ ಏಹೂದ ರಾಜ ಎಗ್ಲೋನನನ್ನ ಕೊಂದ (12-30)

      • ನ್ಯಾಯಾಧೀಶ ಶಮ್ಗರ (31)

ನ್ಯಾಯಸ್ಥಾಪಕರು 3:1

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 8:2; ನ್ಯಾಯ 2:10

ನ್ಯಾಯಸ್ಥಾಪಕರು 3:3

ಪಾದಟಿಪ್ಪಣಿ

  • *

    ಅಥವಾ “ಹಾಮಾತಿನ ಬಾಗಿಲ ತನಕ.”

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 1:18, 19
  • +ಯೆಹೋ 13:1, 4; ನ್ಯಾಯ 1:31
  • +ಅರ 34:2, 8; ಯೆಹೋ 13:1, 5
  • +ಯೆಹೋ 13:1, 6
  • +ಯೆಹೋ 9:1, 2

ನ್ಯಾಯಸ್ಥಾಪಕರು 3:4

ಮಾರ್ಜಿನಲ್ ರೆಫರೆನ್ಸ್

  • +ವಿಮೋ 23:33; ನ್ಯಾಯ 2:21, 22

ನ್ಯಾಯಸ್ಥಾಪಕರು 3:5

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 1:29; ಕೀರ್ತ 106:34

ನ್ಯಾಯಸ್ಥಾಪಕರು 3:6

ಮಾರ್ಜಿನಲ್ ರೆಫರೆನ್ಸ್

  • +ವಿಮೋ 34:15, 16; ಅರ 25:1, 2; ಧರ್ಮೋ 7:3, 4; 1ಅರ 11:1, 4

ನ್ಯಾಯಸ್ಥಾಪಕರು 3:7

ಪಾದಟಿಪ್ಪಣಿ

  • *

    ಪದವಿವರಣೆ ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 31:16; ನ್ಯಾಯ 2:11; 10:6
  • +ವಿಮೋ 34:13; ಧರ್ಮೋ 12:3; 16:21

ನ್ಯಾಯಸ್ಥಾಪಕರು 3:8

ಪಾದಟಿಪ್ಪಣಿ

  • *

    ಅಕ್ಷ. “ಅರಾಮ್‌-ನಹರೈಮ್‌.”

ನ್ಯಾಯಸ್ಥಾಪಕರು 3:9

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 4:30; ನ್ಯಾಯ 10:10, 15
  • +1ಪೂರ್ವ 4:13
  • +ನ್ಯಾಯ 2:16, 18; 3:15

ನ್ಯಾಯಸ್ಥಾಪಕರು 3:10

ಪಾದಟಿಪ್ಪಣಿ

  • *

    ಅಕ್ಷ. “ಅರಾಮ್‌.”

ಮಾರ್ಜಿನಲ್ ರೆಫರೆನ್ಸ್

  • +ಅರ 11:16, 17; ನ್ಯಾಯ 6:34; 11:29; 14:5, 6; 15:14; 1ಸಮು 11:6; 16:13; 2ಪೂರ್ವ 15:1

ನ್ಯಾಯಸ್ಥಾಪಕರು 3:12

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 2:19
  • +ಆದಿ 19:36, 37

ನ್ಯಾಯಸ್ಥಾಪಕರು 3:13

ಮಾರ್ಜಿನಲ್ ರೆಫರೆನ್ಸ್

  • +ಆದಿ 19:36, 38; ನ್ಯಾಯ 11:4, 5
  • +ವಿಮೋ 17:8; ನ್ಯಾಯ 6:3
  • +ಧರ್ಮೋ 34:3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/15/1997, ಪು. 29

ನ್ಯಾಯಸ್ಥಾಪಕರು 3:14

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 28:48

ನ್ಯಾಯಸ್ಥಾಪಕರು 3:15

ಪಾದಟಿಪ್ಪಣಿ

  • *

    ಅಥವಾ “ಎಡಚನಾಗಿದ್ದ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 78:34
  • +ನ್ಯಾಯ 4:1
  • +ನ್ಯಾಯ 3:9
  • +ಆದಿ 49:27
  • +ನ್ಯಾಯ 20:15, 16

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/15/2004, ಪು. 29-30

    3/15/1997, ಪು. 29

ನ್ಯಾಯಸ್ಥಾಪಕರು 3:16

ಪಾದಟಿಪ್ಪಣಿ

  • *

    ಬಹುಶಃ 38 ಸೆಂಟಿಮೀಟರ್‌. (15 ಇಂಚು) ಉದ್ದ ಇರಬೇಕು. ಪರಿಶಿಷ್ಟ ಬಿ14 ನೋಡಿ.

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/15/2004, ಪು. 30

    3/15/1997, ಪು. 29-30

ನ್ಯಾಯಸ್ಥಾಪಕರು 3:17

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/15/1997, ಪು. 30

ನ್ಯಾಯಸ್ಥಾಪಕರು 3:18

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/15/2004, ಪು. 30

    3/15/1997, ಪು. 30

ನ್ಯಾಯಸ್ಥಾಪಕರು 3:19

ಪಾದಟಿಪ್ಪಣಿ

  • *

    ಬಹುಶಃ, “ಕಲ್ಲುಗಣಿಗಳ ತನಕ.”

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 4:19; 5:8, 9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/15/2004, ಪು. 30

    3/15/1997, ಪು. 30

ನ್ಯಾಯಸ್ಥಾಪಕರು 3:20

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/15/2004, ಪು. 30

    3/15/1997, ಪು. 30

ನ್ಯಾಯಸ್ಥಾಪಕರು 3:21

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/15/2005, ಪು. 26

    3/15/1997, ಪು. 30

ನ್ಯಾಯಸ್ಥಾಪಕರು 3:22

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/15/2004, ಪು. 30

ನ್ಯಾಯಸ್ಥಾಪಕರು 3:23

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/15/2004, ಪು. 30-31

    3/15/1997, ಪು. 30

ನ್ಯಾಯಸ್ಥಾಪಕರು 3:24

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/15/2004, ಪು. 30-31

    3/15/1997, ಪು. 30-31

ನ್ಯಾಯಸ್ಥಾಪಕರು 3:25

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/15/1997, ಪು. 31

ನ್ಯಾಯಸ್ಥಾಪಕರು 3:26

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 3:19

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/15/1997, ಪು. 31

ನ್ಯಾಯಸ್ಥಾಪಕರು 3:27

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 7:24
  • +ನ್ಯಾಯ 6:34; 1ಸಮು 13:3

ನ್ಯಾಯಸ್ಥಾಪಕರು 3:28

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/15/2004, ಪು. 31

ನ್ಯಾಯಸ್ಥಾಪಕರು 3:29

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 28:7
  • +ಯಾಜ 26:7, 8

ನ್ಯಾಯಸ್ಥಾಪಕರು 3:30

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 3:11

ನ್ಯಾಯಸ್ಥಾಪಕರು 3:31

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 5:6
  • +ನ್ಯಾಯ 15:3, 15; 1ಸಮು 17:47, 50
  • +ಯೆಹೋ 13:1, 2

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ನ್ಯಾಯ. 3:1ಧರ್ಮೋ 8:2; ನ್ಯಾಯ 2:10
ನ್ಯಾಯ. 3:3ನ್ಯಾಯ 1:18, 19
ನ್ಯಾಯ. 3:3ಯೆಹೋ 13:1, 4; ನ್ಯಾಯ 1:31
ನ್ಯಾಯ. 3:3ಅರ 34:2, 8; ಯೆಹೋ 13:1, 5
ನ್ಯಾಯ. 3:3ಯೆಹೋ 13:1, 6
ನ್ಯಾಯ. 3:3ಯೆಹೋ 9:1, 2
ನ್ಯಾಯ. 3:4ವಿಮೋ 23:33; ನ್ಯಾಯ 2:21, 22
ನ್ಯಾಯ. 3:5ನ್ಯಾಯ 1:29; ಕೀರ್ತ 106:34
ನ್ಯಾಯ. 3:6ವಿಮೋ 34:15, 16; ಅರ 25:1, 2; ಧರ್ಮೋ 7:3, 4; 1ಅರ 11:1, 4
ನ್ಯಾಯ. 3:7ಧರ್ಮೋ 31:16; ನ್ಯಾಯ 2:11; 10:6
ನ್ಯಾಯ. 3:7ವಿಮೋ 34:13; ಧರ್ಮೋ 12:3; 16:21
ನ್ಯಾಯ. 3:9ಧರ್ಮೋ 4:30; ನ್ಯಾಯ 10:10, 15
ನ್ಯಾಯ. 3:91ಪೂರ್ವ 4:13
ನ್ಯಾಯ. 3:9ನ್ಯಾಯ 2:16, 18; 3:15
ನ್ಯಾಯ. 3:10ಅರ 11:16, 17; ನ್ಯಾಯ 6:34; 11:29; 14:5, 6; 15:14; 1ಸಮು 11:6; 16:13; 2ಪೂರ್ವ 15:1
ನ್ಯಾಯ. 3:12ನ್ಯಾಯ 2:19
ನ್ಯಾಯ. 3:12ಆದಿ 19:36, 37
ನ್ಯಾಯ. 3:13ಆದಿ 19:36, 38; ನ್ಯಾಯ 11:4, 5
ನ್ಯಾಯ. 3:13ವಿಮೋ 17:8; ನ್ಯಾಯ 6:3
ನ್ಯಾಯ. 3:13ಧರ್ಮೋ 34:3
ನ್ಯಾಯ. 3:14ಧರ್ಮೋ 28:48
ನ್ಯಾಯ. 3:15ಕೀರ್ತ 78:34
ನ್ಯಾಯ. 3:15ನ್ಯಾಯ 4:1
ನ್ಯಾಯ. 3:15ನ್ಯಾಯ 3:9
ನ್ಯಾಯ. 3:15ಆದಿ 49:27
ನ್ಯಾಯ. 3:15ನ್ಯಾಯ 20:15, 16
ನ್ಯಾಯ. 3:19ಯೆಹೋ 4:19; 5:8, 9
ನ್ಯಾಯ. 3:26ನ್ಯಾಯ 3:19
ನ್ಯಾಯ. 3:27ನ್ಯಾಯ 7:24
ನ್ಯಾಯ. 3:27ನ್ಯಾಯ 6:34; 1ಸಮು 13:3
ನ್ಯಾಯ. 3:29ಧರ್ಮೋ 28:7
ನ್ಯಾಯ. 3:29ಯಾಜ 26:7, 8
ನ್ಯಾಯ. 3:30ನ್ಯಾಯ 3:11
ನ್ಯಾಯ. 3:31ನ್ಯಾಯ 5:6
ನ್ಯಾಯ. 3:31ನ್ಯಾಯ 15:3, 15; 1ಸಮು 17:47, 50
ನ್ಯಾಯ. 3:31ಯೆಹೋ 13:1, 2
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
  • 31
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ನ್ಯಾಯಸ್ಥಾಪಕರು 3:1-31

ನ್ಯಾಯಸ್ಥಾಪಕರು

3 ಕಾನಾನ್ಯರ ವಿರುದ್ಧ ಯುದ್ಧ ಮಾಡಿ ಅನುಭವ ಇಲ್ಲದ ಎಲ್ಲ ಇಸ್ರಾಯೇಲ್ಯರನ್ನ ಯೆಹೋವ ಪರೀಕ್ಷಿಸೋಕೆ ಬಯಸಿದನು. ಹಾಗಾಗಿ, ಕೆಲವು ಜನಾಂಗದ ಜನ್ರನ್ನ ಓಡಿಸಲಿಲ್ಲ.+ ಅವರು ಯಾರಂದ್ರೆ: 2 (ಈ ಮುಂಚೆ ಯುದ್ಧದ ಅನುಭವ ಇಲ್ಲದಿದ್ದ ಇಸ್ರಾಯೇಲ್ಯರ ಪೀಳಿಗೆಗೆ ಯುದ್ಧದ ಅನುಭವ, ತರಬೇತಿ ಸಿಗೋಕೆ ಆತನು ಈ ಶತ್ರುಗಳನ್ನ ಹಾಗೇ ಬಿಟ್ಟನು) 3 ಫಿಲಿಷ್ಟಿಯರ+ ಐದು ರಾಜರು, ಎಲ್ಲ ಕಾನಾನ್ಯರು, ಸೀದೋನ್ಯರು,+ ಬಾಳ್‌-ಹೆರ್ಮೋನ್‌ ಬೆಟ್ಟದಿಂದ ಲೆಬೊ-ಹಾಮಾತ್‌+ ತನಕ* ಹಬ್ಬಿದ್ದ ಲೆಬನೋನ್‌ ಬೆಟ್ಟದಲ್ಲಿ+ ವಾಸ ಇದ್ದ ಹಿವ್ವಿಯರು.+ 4 ಯೆಹೋವ ಮೋಶೆ ಮೂಲಕ ಪೂರ್ವಜರಿಗೆ ಕೊಟ್ಟಿದ್ದ ಆಜ್ಞೆಗಳನ್ನ ಇಸ್ರಾಯೇಲ್ಯರು ಪಾಲಿಸ್ತಾರಾ ಇಲ್ವಾ ಅಂತ ಪರೀಕ್ಷಿಸೋಕೆ ಈ ಜನ್ರನ್ನ ಉಪಯೋಗಿಸಿದನು.+ 5 ಹಾಗಾಗಿ ಇಸ್ರಾಯೇಲ್ಯರು ಕಾನಾನ್ಯರ,+ ಹಿತ್ತಿಯರ, ಅಮೋರಿಯರ, ಪೆರಿಜೀಯರ, ಹಿವ್ವಿಯರ, ಯೆಬೂಸಿಯರ ಮಧ್ಯ ವಾಸಿಸಿದ್ರು. 6 ಇಸ್ರಾಯೇಲ್ಯರು ಈ ಜನ್ರ ಹೆಣ್ಣು ಮಕ್ಕಳನ್ನ ಮದುವೆ ಮಾಡ್ಕೊಂಡ್ರು. ತಮ್ಮ ಹೆಣ್ಣು ಮಕ್ಕಳನ್ನ ಅವ್ರಿಗೆ ಮದುವೆ ಮಾಡ್ಕೊಟ್ರು. ಅವ್ರ ದೇವರುಗಳನ್ನ ಆರಾಧಿಸೋಕೆ ಶುರು ಮಾಡಿದ್ರು.+

7 ಹೀಗೆ ಇಸ್ರಾಯೇಲ್ಯರು ಯೆಹೋವನಿಗೆ ಸ್ವಲ್ಪನೂ ಇಷ್ಟ ಆಗದ ವಿಷ್ಯಗಳನ್ನೇ ಮಾಡಿದ್ರು. ಅವರು ತಮ್ಮ ದೇವರಾದ ಯೆಹೋವನನ್ನ ಮರೆತು ಬಾಳನ ಮೂರ್ತಿಗಳನ್ನ,+ ಪೂಜಾಕಂಬಗಳನ್ನ*+ ಆರಾಧಿಸ್ತಿದ್ರು. 8 ಇದ್ರಿಂದಾಗಿ ಇಸ್ರಾಯೇಲ್ಯರ ಮೇಲೆ ಯೆಹೋವನಿಗೆ ತುಂಬ ಕೋಪ ಬಂತು. ಅವ್ರನ್ನ ಮೆಸಪಟೇಮ್ಯದ* ರಾಜ ಕೂಷನ್‌-ರಿಷಾತಯಿಮನ ಕೈಗೆ ಒಪ್ಪಿಸಿಬಿಟ್ಟನು. ಇಸ್ರಾಯೇಲ್ಯರು ಕೂಷನ್‌-ರಿಷಾತಯಿಮನಿಗೆ ಎಂಟು ವರ್ಷ ದಾಸರಾಗಿದ್ರು. 9 ಇಸ್ರಾಯೇಲ್ಯರು ಸಹಾಯಕ್ಕಾಗಿ ಯೆಹೋವನನ್ನ ಬೇಡ್ಕೊಂಡಾಗ+ ಯೆಹೋವ ಅವ್ರನ್ನ ಕಾಪಾಡೋಕೆ ಒತ್ನೀಯೇಲನನ್ನ+ ಕಳಿಸಿದನು.+ ಅವನು ಕಾಲೇಬನ ತಮ್ಮನಾದ ಕೆನಜನ ಮಗ. 10 ಯೆಹೋವನ ಪವಿತ್ರಶಕ್ತಿ ಅವನ ಮೇಲೆ ಬಂದಿದ್ರಿಂದ+ ಅವನು ಇಸ್ರಾಯೇಲಿನ ನ್ಯಾಯಾಧೀಶನಾದ. ಅವನು ಯುದ್ಧಕ್ಕೆ ಹೋದಾಗ ಮೆಸಪಟೇಮ್ಯದ* ರಾಜ ಕೂಷನ್‌-ರಿಷಾತಯಿಮನನ್ನ ಯೆಹೋವ ಅವನ ಕೈಗೆ ಒಪ್ಪಿಸಿದನು. ಹಾಗಾಗಿ ಅವನು ಕೂಷನ್‌-ರಿಷಾತಯಿಮನನ್ನ ಸೋಲಿಸಿದ. 11 ಇದಾದ ಮೇಲೆ 40 ವರ್ಷ ದೇಶದಲ್ಲಿ ಸಮಾಧಾನ ಇತ್ತು. ಆಮೇಲೆ ಕೆನಜನ ಮಗ ಒತ್ನೀಯೇಲ್‌ ತೀರಿಹೋದ.

12 ಇಸ್ರಾಯೇಲ್ಯರು ಯೆಹೋವನಿಗೆ ಸ್ವಲ್ಪನೂ ಇಷ್ಟ ಆಗದ ವಿಷ್ಯಗಳನ್ನೇ ಮಾಡೋಕೆ ಮತ್ತೆ ಶುರು ಮಾಡಿದ್ರು.+ ಹಾಗಾಗಿ ಮೋವಾಬಿನ+ ರಾಜ ಎಗ್ಲೋನ ಇಸ್ರಾಯೇಲ್ಯರ ವಿರುದ್ಧ ಗೆಲ್ಲೋಕೆ ಯೆಹೋವ ಬಿಟ್ಟುಕೊಟ್ಟನು. ಯಾಕಂದ್ರೆ ಇಸ್ರಾಯೇಲ್ಯರು ಯೆಹೋವನಿಗೆ ಇಷ್ಟ ಇಲ್ಲದ್ದನ್ನೇ ಮಾಡ್ತಿದ್ರು. 13 ಅಷ್ಟೇ ಅಲ್ಲ ಇಸ್ರಾಯೇಲ್ಯರ ವಿರುದ್ಧ ಅಮ್ಮೋನಿಯರು,+ ಅಮಾಲೇಕ್ಯರು+ ಯುದ್ಧಕ್ಕೆ ಬರೋ ಹಾಗೆ ಮಾಡಿದನು. ಅವರು ಇಸ್ರಾಯೇಲ್ಯರ ಮೇಲೆ ದಾಳಿ ಮಾಡಿ ಖರ್ಜೂರ ಮರಗಳ ಪಟ್ಟಣವನ್ನ ವಶ ಮಾಡ್ಕೊಂಡ್ರು.+ 14 ಇಸ್ರಾಯೇಲ್ಯರು ಮೋವಾಬಿನ ರಾಜ ಎಗ್ಲೋನನಿಗೆ 18 ವರ್ಷ ದಾಸರಾಗಿದ್ರು.+ 15 ಆಮೇಲೆ ಇಸ್ರಾಯೇಲ್ಯರು ಸಹಾಯಕ್ಕಾಗಿ ಯೆಹೋವನನ್ನ ಬೇಡ್ಕೊಂಡ್ರು.+ ಆಗ ಯೆಹೋವ ಅವ್ರನ್ನ ಬಿಡಿಸೋಕೆ ಏಹೂದನನ್ನ+ ಕಳಿಸಿದನು.+ ಅವನು ಬೆನ್ಯಾಮೀನ್‌+ ಕುಲದ ಗೇರನ ಮಗ. ಏಹೂದ ಎಡಗೈಯವನಾಗಿದ್ದ.*+ ಆಮೇಲೆ ಇಸ್ರಾಯೇಲ್ಯರು ಅವನ ಮೂಲಕ ಮೋವಾಬಿನ ರಾಜ ಎಗ್ಲೋನನಿಗೆ ಕಪ್ಪ ಕೊಟ್ಟು ಕಳಿಸಿದ್ರು. 16 ಅದೇ ಸಮಯದಲ್ಲಿ ಏಹೂದ ಒಂದು ಇಬ್ಬಾಯಿಕತ್ತಿ ಮಾಡ್ಕೊಂಡ. ಅದು ಒಂದು ಮೊಳ* ಉದ್ದ ಇತ್ತು. ಅದನ್ನ ತನ್ನ ಬಲ ತೊಡೆಗೆ ಕಟ್ಕೊಂಡು, ಬಟ್ಟೆಯಿಂದ ಮುಚ್ಚಿದ. 17 ಆಮೇಲೆ ಕಪ್ಪ ತಗೊಂಡು ಹೋಗಿ ಮೋವಾಬಿನ ರಾಜ ಎಗ್ಲೋನನಿಗೆ ಕೊಟ್ಟ. ಎಗ್ಲೋನ ತುಂಬ ದಪ್ಪಗಿದ್ದ.

18 ಏಹೂದ ಕಪ್ಪ ಕೊಟ್ಟ ಮೇಲೆ ಅದನ್ನ ಹೊತ್ಕೊಂಡು ಬಂದಿದ್ದ ಆಳುಗಳ ಜೊತೆ ಅಲ್ಲಿಂದ ಹೋದ. 19 ಆದ್ರೆ ಗಿಲ್ಗಾಲಲ್ಲಿ+ ಮೂರ್ತಿಗಳಿರೋ ಜಾಗಕ್ಕೆ* ಬಂದಾಗ ಅವನೊಬ್ಬನೇ ವಾಪಸ್‌ ಬಂದು “ರಾಜ, ನಿನಗೊಂದು ಗುಟ್ಟು ಹೇಳೋಕೆ ಬಂದೆ” ಅಂದ. ಆಗ ರಾಜ ಸೇವಕರನ್ನ ಹೊರಗೆ ಕಳಿಸಿದ. ಸೇವಕರೆಲ್ಲ ಹೊರಗೆ ಹೋದ್ರು. 20 ತಂಪಾದ ಕೋಣೆಯಲ್ಲಿ ಒಬ್ಬನೇ ಕೂತಿದ್ದ ರಾಜನ ಹತ್ರ ಏಹೂದ ಹೋಗಿ “ನಾನು ನಿನಗಾಗಿ ದೇವ್ರಿಂದ ಒಂದು ಸಂದೇಶ ತಂದಿದ್ದೀನಿ” ಅಂದ. ಇದನ್ನ ಕೇಳಿ ರಾಜ ಸಿಂಹಾಸನದಿಂದ ಎದ್ದು ನಿಂತ. 21 ಆಗ ಏಹೂದ ಬಲ ತೊಡೆಗೆ ಕಟ್ಕೊಂಡಿದ್ದ ಕತ್ತಿಯನ್ನ ಎಡಗೈಯಿಂದ ತೆಗೆದು ರಾಜನ ಹೊಟ್ಟೆಗೆ ತಿವಿದ. 22 ಆಗ ಕತ್ತಿ ಜೊತೆಗೆ ಕತ್ತಿ ಹಿಡಿನೂ ಹೊಟ್ಟೆ ಒಳಗೆ ಹೋಯ್ತು. ಏಹೂದ ಕತ್ತಿಯನ್ನ ಹೊಟ್ಟೆಯಿಂದ ತೆಗೀದೆ ಇದ್ದಿದ್ರಿಂದ ಕತ್ತಿ ಮೇಲೆಲ್ಲ ಕೊಬ್ಬು ಮೆತ್ಕೊಂಡಿತು, ಜೊತೆಗೆ ಮಲ ಹೊರಗೆ ಬಂತು. 23 ಏಹೂದ ಒಳಗಿಂದ ಕೋಣೆ ಬಾಗಿಲು ಮುಚ್ಚಿ ಬೀಗ ಹಾಕಿ ಕಿಟಕಿಯಿಂದ ಹೊರಗೆ ಹೋದ. 24 ಹೋದ ಮೇಲೆ ರಾಜನ ಸೇವಕರು ಬಂದ್ರು. ಕೋಣೆ ಬಾಗಿಲು ಮುಚ್ಚಿರೋದನ್ನ ನೋಡಿ “ರಾಜ ತಂಪಾದ ಕೋಣೆಯಲ್ಲಿ ಇರೋ ಶೌಚಾಲಯಕ್ಕೆ ಹೋಗಿರಬೇಕು” ಅಂದ್ಕೊಂಡ್ರು. 25 ಕಾದು ಕಾದು ಅವ್ರಿಗೆ ಸಾಕಾಯ್ತು. ಎಷ್ಟು ಹೊತ್ತಾದ್ರೂ ರಾಜ ಬಾಗಿಲು ತೆಗೀದೆ ಇರೋದನ್ನ ನೋಡಿ ಬೀಗದ ಕೈ ತಂದು ಬಾಗಿಲು ತೆಗೆದ್ರು. ಅಲ್ಲಿ ರಾಜ ಸತ್ತು ಬಿದ್ದಿರೋದನ್ನ ನೋಡಿದ್ರು.

26 ಸೇವಕರು ರಾಜನಿಗೋಸ್ಕರ ಕಾಯ್ತಾ ಇದ್ದಾಗ ಏಹೂದ ತಪ್ಪಿಸ್ಕೊಂಡು ಹೋದ. ಅವನು ಮೂರ್ತಿಗಳಿರೋ ಜಾಗ+ ದಾಟಿ ಸುರಕ್ಷಿತವಾಗಿ ಸೆಯೀರಾ ತಲುಪಿದ. 27 ಅವನು ಎಫ್ರಾಯೀಮ್‌ ಬೆಟ್ಟ ಪ್ರದೇಶಕ್ಕೆ+ ಬಂದಾಗ ಕೊಂಬು ಊದಿದ.+ ಆಗ ಇಸ್ರಾಯೇಲ್ಯರು ಅವನ ಜೊತೆ ಬೆಟ್ಟ ಪ್ರದೇಶದಿಂದ ಇಳಿದು ಬಂದ್ರು. ಅವನು ಅವ್ರ ಮುಂದೆ ಮುಂದೆ ನಡೆದ. 28 ಅವನು “ನಿಮ್ಮ ಶತ್ರುಗಳಾದ ಮೋವಾಬ್ಯರನ್ನ ಯೆಹೋವ ನಿಮ್ಮ ಕೈಗೆ ಒಪ್ಪಿಸಿರೋದ್ರಿಂದ ನನ್ನ ಹಿಂದೆ ಬನ್ನಿ” ಅಂದ. ಅವರು ಅವನ ಹಿಂದೆನೇ ಬಂದ್ರು. ಮೋವಾಬ್‌ ಸೈನಿಕರು ತಪ್ಪಿಸ್ಕೊಂಡು ಹೋಗದ ಹಾಗೆ ಯೋರ್ದನ್‌ ನದಿ ದಾಟೋ ಜಾಗಗಳನ್ನ ವಶ ಮಾಡ್ಕೊಂಡ್ರು. ಯಾರಿಗೂ ನದಿ ದಾಟೋಕೆ ಬಿಡಲಿಲ್ಲ. 29 ಬಲಿಷ್ಠರು, ವೀರರು ಆಗಿದ್ದ ಸುಮಾರು 10,000 ಮೋವಾಬ್ಯರನ್ನ ಕೊಂದ್ರು.+ ಅವ್ರಲ್ಲಿ ಒಬ್ರೂ ತಪ್ಪಿಸ್ಕೊಳ್ಳಲಿಲ್ಲ.+ 30 ಹೀಗೆ ಮೋವಾಬ್ಯರು ಆ ದಿನ ಇಸ್ರಾಯೇಲ್ಯರ ಕೈಯಲ್ಲಿ ಸೋತು ಹೋದ್ರು. ಇದಾದ ಮೇಲೆ ದೇಶದಲ್ಲಿ 80 ವರ್ಷ ತನಕ ಸಮಾಧಾನ ಇತ್ತು.+

31 ಏಹೂದನ ನಂತ್ರ ಬಂದ ನ್ಯಾಯಾಧೀಶ ಶಮ್ಗರ. ಇವನು ಅನಾತನ ಮಗ.+ ಪ್ರಾಣಿಗಳನ್ನ ತಿವಿಯೋಕೆ ಬಳಸೋ ಮುಳ್ಳುಗೋಲಿಂದ+ 600 ಫಿಲಿಷ್ಟಿಯರನ್ನ+ ಕೊಂದು ಇವನು ಕೂಡ ಇಸ್ರಾಯೇಲ್ಯರನ್ನ ಕಾಪಾಡಿದ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ