ಹೋಶೇಯ
9 “ಇಸ್ರಾಯೇಲೇ, ಸಂತೋಷಪಡಬೇಡ,+
ಬೇರೆ ಜನಾಂಗಗಳ ತರ ಉಲ್ಲಾಸಪಡಬೇಡ.
ಯಾಕಂದ್ರೆ ನೀನು ವೇಶ್ಯಾವಾಟಿಕೆ ಮಾಡಿ ನಿನ್ನ ದೇವರಿಂದ ದೂರ ಹೋಗಿದ್ದೀಯ.+
ಧಾನ್ಯ ಒಕ್ಕೋ* ಪ್ರತಿಯೊಂದು ಕಣದಲ್ಲಿ ನಿನಗೆ ಸಿಗೋ ವೇಶ್ಯಾವಾಟಿಕೆಯ ಸಂಬಳವನ್ನ ನೀನು ಇಷ್ಟಪಟ್ಟಿದ್ದೀಯ.+
2 ಆದ್ರೆ ಕಣ ಮತ್ತು ದ್ರಾಕ್ಷಿತೊಟ್ಟಿ ಅವ್ರ ಹೊಟ್ಟೆ ತುಂಬಿಸಲ್ಲ,
ಹೊಸ ದ್ರಾಕ್ಷಾಮದ್ಯ ಅವಳಿಗೆ ಸಿಗಲ್ಲ.+
3 ಅವರು ಯೆಹೋವನ ದೇಶದಲ್ಲಿ ಇನ್ನು ಮುಂದೆ ಇರಲ್ಲ,+
ಎಫ್ರಾಯೀಮನು ಈಜಿಪ್ಟಿಗೆ ವಾಪಸ್ ಹೋಗ್ತಾನೆ,
ಅವರು ಅಶ್ಶೂರದಲ್ಲಿ ಅಶುದ್ಧವಾದದ್ದನ್ನ ತಿಂತಾರೆ.+
4 ಅವರು ಇನ್ನು ಮುಂದೆ ಯೆಹೋವನಿಗೆ ದ್ರಾಕ್ಷಾಮದ್ಯವನ್ನ ಪಾನ ಅರ್ಪಣೆಯಾಗಿ ಕೊಡಲ್ಲ.+
ಅವರು ಅರ್ಪಿಸೋ ಬಲಿಗಳಿಂದ ಆತನಿಗೆ ಸಂತೋಷವಾಗಲ್ಲ.+
ಅವರು ಶೋಕದ ಊಟದಂತಿದ್ದಾರೆ,
ಅದನ್ನ ತಿನ್ನುವವ್ರೆಲ್ಲ ತಮ್ಮನ್ನ ಅಶುದ್ಧ ಮಾಡ್ಕೊಳ್ತಾರೆ.
ಅವ್ರ ಆಹಾರ ಅವ್ರಿಗಷ್ಟೇ ಸೀಮಿತ,
ಯೆಹೋವನ ಆಲಯಕ್ಕೆ* ಅದನ್ನ ತರೋಕೆ ಅನುಮತಿ ಇಲ್ಲ.
5 ನೀವು ಒಟ್ಟು ಸೇರಿ ಬರಬೇಕಾದ* ದಿನ,
ಯೆಹೋವನ ಹಬ್ಬದ ದಿನ ಏನು ಮಾಡ್ತೀರ?
6 ನೋಡಿ ನಾಶ ಬರೋದ್ರಿಂದ ಅವರು ಓಡಿಹೋಗಬೇಕಾಗುತ್ತೆ.+
ಈಜಿಪ್ಟ್ ಅವ್ರನ್ನ ಒಟ್ಟುಸೇರಿಸುತ್ತೆ,+ ಮೋಫ್ ಪಟ್ಟಣ ಅವ್ರನ್ನ ಸಮಾಧಿ ಮಾಡುತ್ತೆ.+
ಅವ್ರ ಬೆಳ್ಳಿಯ ಬೆಲೆಬಾಳೋ ವಸ್ತುಗಳು ಚುರುಚುರಿಕೆ ಗಿಡಗಳ ಪಾಲಾಗುತ್ತೆ.
ಅವ್ರ ಡೇರೆಗಳಲ್ಲಿ ಮುಳ್ಳಿನ ಪೊದೆಗಳು ಬೆಳಿಯುತ್ತೆ.
ಅವ್ರ ಪ್ರವಾದಿ ಮೂರ್ಖ ಅಂತ ಗೊತ್ತಾಗುತ್ತೆ, ದೇವಪ್ರೇರಣೆಯಿಂದ ಮಾತಾಡ್ತೀನಿ ಅಂತ ಹೇಳುವವನು ಹುಚ್ಚನಾಗ್ತಾನೆ.
ನೀವು ಮಾಡಿರೋ ತಪ್ಪುಗಳು ಜಾಸ್ತಿ. ಅದಕ್ಕೆ ನಿಮಗೆ ಎದುರಾಗೋ ವೈರತ್ವನೂ ಹೇರಳ.”
8 ಎಫ್ರಾಯೀಮಿನ ಕಾವಲುಗಾರ+ ನನ್ನ ದೇವರಿಗೆ ನಂಬಿಗಸ್ತನಾಗಿದ್ದ.+
ಆದ್ರೆ ಈಗ ಅವನ ಪ್ರವಾದಿಗಳ+ ಕೆಲಸಗಳೆಲ್ಲ ಪಕ್ಷಿಹಿಡಿಯುವವನ ಬೋನುಗಳ ತರ ಇವೆ.
ಅವನ ದೇವರ ಆಲಯದಲ್ಲಿ* ವೈರತ್ವವಿದೆ.
9 ಗಿಬೆಯಾದಲ್ಲಿ ಆದ ಹಾಗೆ ಅವರು ವಿನಾಶಕಾರಿ ಕೆಲಸಗಳಲ್ಲಿ ಮುಳುಗಿಹೋಗಿದ್ದಾರೆ.+
ಆತನು ಅವ್ರ ತಪ್ಪುಗಳನ್ನ ನೆನಪಿಸ್ಕೊಂಡು ಅವ್ರ ಪಾಪಗಳಿಗೆ ಶಿಕ್ಷೆ ಕೊಡ್ತಾನೆ.+
10 “ಕಾಡಲ್ಲಿ ದ್ರಾಕ್ಷಿಹಣ್ಣು ಸಿಗೋ ತರ ನನಗೆ ಇಸ್ರಾಯೇಲ್ ಸಿಕ್ಕಿದ.+
ಅಂಜೂರ ಮರದ ಮೊದಲ ಫಸಲಿನಲ್ಲಿ ಮೊದಲು ಮಾಗಿದ ಹಣ್ಣುಗಳ ತರ ನಿಮ್ಮ ಪೂರ್ವಜರಿದ್ರು.
ಆದ್ರೆ ಅವರು ಪೆಗೋರದ ಬಾಳನ ಹತ್ರ ಹೋದ್ರು.+
ನಾಚಿಕೆಗೀಡು ಮಾಡೋ ದೇವರಿಗೆ ಅವರು ತಮ್ಮನ್ನ ಸಮರ್ಪಿಸಿಕೊಂಡ್ರು,+
ತಾವು ತುಂಬ ಇಷ್ಟಪಟ್ಟ ದೇವರ ತರ ಅವರು ಸಹ ಅಸಹ್ಯರಾದ್ರು.
11 ಎಫ್ರಾಯೀಮಿನ ಮಹಿಮೆಯೆಲ್ಲ ಹಕ್ಕಿ ತರ ಹಾರಿಹೋಗುತ್ತೆ,
ಅಲ್ಲಿ ಯಾರೂ ಮಕ್ಕಳನ್ನ ಹೆರಲ್ಲ, ಗರ್ಭಿಣಿಯರಾಗಲ್ಲ, ಗರ್ಭ ನಿಲ್ಲೋದು ಇಲ್ಲ.+
12 ಅವರು ಮಕ್ಕಳನ್ನ ಬೆಳೆಸಿದ್ರೂ
ನಾನು ಆ ಮಕ್ಕಳನ್ನ ಅವ್ರಿಂದ ಕಿತ್ಕೊಳ್ತೀನಿ, ಒಬ್ರನ್ನೂ ಉಳಿಸಲ್ಲ,+
ನಾನು ಅವ್ರನ್ನ ಬಿಟ್ಟು ಹೋದಾಗ ಅವರು ಹಾಳಾಗಿ ಹೋಗೋದು ಖಂಡಿತ!+
13 ಹುಲ್ಲುಗಾವಲಲ್ಲಿ ನೆಡಲಾಗಿದ್ದ ಎಫ್ರಾಯೀಮ್ ನನಗೆ ತೂರಿನ ತರ ಕಾಣ್ತಿತ್ತು,+
ಈಗ ಎಫ್ರಾಯೀಮ್ ತನ್ನ ಮಕ್ಕಳನ್ನ ಕೊಲ್ಲೋಕೆ ಕರ್ಕೊಂಡು ಬರಬೇಕು.”
14 ಯೆಹೋವನೇ, ಅವ್ರಿಗೆ ತಕ್ಕ ಶಿಕ್ಷೆ ಕೊಡು,
ಅವ್ರಿಗೆ ಗರ್ಭಸ್ರಾವವಾಗೋ ತರ, ಸ್ತನಗಳು ಬತ್ತಿ ಹೋಗೋ ತರ ಮಾಡು.
15 “ಗಿಲ್ಗಾಲಲ್ಲಿ ಅವರು ಎಲ್ಲ ರೀತಿಯ ಕೆಟ್ಟತನವನ್ನ ಮಾಡಿದ್ರು.+ ಹಾಗಾಗಿ ಅಲ್ಲಿ ನಾನು ಅವ್ರನ್ನ ದ್ವೇಷಿಸಿದೆ.
ಅವರು ಕೆಟ್ಟ ಕೆಲಸ ಮಾಡಿದ್ರಿಂದ ನಾನು ಅವ್ರನ್ನ ನನ್ನ ದೇಶದಿಂದ* ಓಡಿಸಿಬಿಡ್ತೀನಿ.+
ನಾನು ಇನ್ಮುಂದೆ ಅವ್ರನ್ನ ಪ್ರೀತಿಸಲ್ಲ,+
ಅವ್ರ ಅಧಿಕಾರಿಗಳೆಲ್ಲ ಹಠಮಾರಿಗಳೇ.
16 ಮರವನ್ನ ಕಡಿಯೋ ತರ ಎಫ್ರಾಯೀಮನ್ನ ಕಡಿದು ಹಾಕಲಾಗುತ್ತೆ.+
ಅವ್ರ ಬೇರು ಒಣಗಿಹೋಗುತ್ತೆ, ಅವರು ಫಲ ಕೊಡಲ್ಲ.
ಅವ್ರಿಗೆ ಮಕ್ಕಳು ಹುಟ್ಟಿದ್ರೂ ನಾನು ಅವ್ರ ಮುದ್ದು ಮಕ್ಕಳನ್ನ ಸಾಯಿಸ್ತೀನಿ.”