ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಎಸ್ತೇರ್‌ 6
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಎಸ್ತೇರ್‌ ಮುಖ್ಯಾಂಶಗಳು

      • ರಾಜನಿಂದ ಮೊರ್ದೆಕೈಗೆ ಸನ್ಮಾನ (1-14)

ಎಸ್ತೇರ್‌ 6:1

ಪಾದಟಿಪ್ಪಣಿ

  • *

    ಅಕ್ಷ. “ರಾಜನ ನಿದ್ರೆ ಹಾರಿಹೋಯ್ತು.”

ಮಾರ್ಜಿನಲ್ ರೆಫರೆನ್ಸ್

  • +ಎಸ್ತೇ 10:2

ಎಸ್ತೇರ್‌ 6:2

ಪಾದಟಿಪ್ಪಣಿ

  • *

    ಅಕ್ಷ. “ಮೇಲೆ ಕೈಹಾಕೋಕೆ.”

ಮಾರ್ಜಿನಲ್ ರೆಫರೆನ್ಸ್

  • +ಎಸ್ತೇ 2:21, 23

ಎಸ್ತೇರ್‌ 6:4

ಮಾರ್ಜಿನಲ್ ರೆಫರೆನ್ಸ್

  • +ಎಸ್ತೇ 5:14
  • +ಎಸ್ತೇ 4:11

ಎಸ್ತೇರ್‌ 6:5

ಮಾರ್ಜಿನಲ್ ರೆಫರೆನ್ಸ್

  • +ಎಸ್ತೇ 3:1

ಎಸ್ತೇರ್‌ 6:6

ಮಾರ್ಜಿನಲ್ ರೆಫರೆನ್ಸ್

  • +ಎಸ್ತೇ 3:2; 5:11

ಎಸ್ತೇರ್‌ 6:8

ಮಾರ್ಜಿನಲ್ ರೆಫರೆನ್ಸ್

  • +ಎಸ್ತೇ 8:15

ಎಸ್ತೇರ್‌ 6:9

ಪಾದಟಿಪ್ಪಣಿ

  • *

    ಪದವಿವರಣೆ ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಆದಿ 41:42, 43

ಎಸ್ತೇರ್‌ 6:11

ಪಾದಟಿಪ್ಪಣಿ

  • *

    ಪದವಿವರಣೆ ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಎಸ್ತೇ 2:5, 6

ಎಸ್ತೇರ್‌ 6:13

ಪಾದಟಿಪ್ಪಣಿ

  • *

    ಅಕ್ಷ. “ವಿವೇಕಿಗಳಾದ ಅವನ ಪುರುಷರು.”

ಮಾರ್ಜಿನಲ್ ರೆಫರೆನ್ಸ್

  • +ಎಸ್ತೇ 5:10, 14

ಎಸ್ತೇರ್‌ 6:14

ಮಾರ್ಜಿನಲ್ ರೆಫರೆನ್ಸ್

  • +ಎಸ್ತೇ 5:8

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಎಸ್ತೇ. 6:1ಎಸ್ತೇ 10:2
ಎಸ್ತೇ. 6:2ಎಸ್ತೇ 2:21, 23
ಎಸ್ತೇ. 6:4ಎಸ್ತೇ 5:14
ಎಸ್ತೇ. 6:4ಎಸ್ತೇ 4:11
ಎಸ್ತೇ. 6:5ಎಸ್ತೇ 3:1
ಎಸ್ತೇ. 6:6ಎಸ್ತೇ 3:2; 5:11
ಎಸ್ತೇ. 6:8ಎಸ್ತೇ 8:15
ಎಸ್ತೇ. 6:9ಆದಿ 41:42, 43
ಎಸ್ತೇ. 6:11ಎಸ್ತೇ 2:5, 6
ಎಸ್ತೇ. 6:13ಎಸ್ತೇ 5:10, 14
ಎಸ್ತೇ. 6:14ಎಸ್ತೇ 5:8
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಎಸ್ತೇರ್‌ 6:1-14

ಎಸ್ತೇರ್‌

6 ಅವತ್ತು ರಾತ್ರಿ ರಾಜನಿಗೆ ನಿದ್ದೆ ಬರಲಿಲ್ಲ.* ಹಾಗಾಗಿ ಅರಮನೆಯ ಇತಿಹಾಸ ಪುಸ್ತಕ ತಗೊಂಡು ಬರೋಕೆ ಹೇಳಿದ.+ ಅದನ್ನ ತನ್ನ ಮುಂದೆ ಓದಿಸಿದ. 2 ರಾಜನ ಹತ್ರ ಬಾಗಿಲು ಕಾಯೋ ಕೆಲಸಮಾಡ್ತಿದ್ದ ಬಿಗೆತಾನ್‌ ಮತ್ತು ತೆರೆಷ್‌ ಅನ್ನೋ ಆಸ್ಥಾನದ ಅಧಿಕಾರಿಗಳ ಬಗ್ಗೆ ಮೊರ್ದೆಕೈ ಹೇಳಿದ್ದ ವಿಷ್ಯ ಅದ್ರಲ್ಲಿ ಸಿಕ್ತು. ಅವರು ರಾಜ ಅಹಷ್ವೇರೋಷನನ್ನ ಕೊಲ್ಲಬೇಕಂತ* ಸಂಚು ಮಾಡಿದ್ರು.+ 3 ಆಗ ರಾಜ “ಇದಕ್ಕೆ ಮೊರ್ದೆಕೈಗೆ ಯಾವ ಬಹುಮಾನ ಸಿಕ್ತು, ಯಾವ ಗೌರವ ಸಿಕ್ತು?” ಅಂತ ಕೇಳಿದ. ಆಗ ರಾಜನ ಆಪ್ತ ಸೇವಕರು “ಅವನಿಗೆ ಏನೂ ಸಿಗಲಿಲ್ಲ” ಅಂದ್ರು.

4 ಅದೇ ಸಮಯಕ್ಕೆ ಹಾಮಾನ ತಾನು ಸಿದ್ಧಪಡಿಸಿದ್ದ ಕಂಬಕ್ಕೆ+ ಮೊರ್ದೆಕೈಯನ್ನ ನೇತುಹಾಕಿಸೋ ವಿಷ್ಯದ ಬಗ್ಗೆ ರಾಜನ ಹತ್ರ ಮಾತಾಡೋಕೆ ಅರಮನೆಯ ಹೊರಗಿನ ಅಂಗಳದಲ್ಲಿ+ ನಿಂತಿದ್ದ. ಆಗ ರಾಜ “ಅಂಗಳದಲ್ಲಿ ಯಾರಿದ್ದಾರೆ?” ಅಂತ ಕೇಳಿದ. 5 ಅದಕ್ಕೆ ಸೇವಕರು “ಹಾಮಾನ+ ನಿಂತಿದ್ದಾನೆ” ಅಂದ್ರು. ಆಗ ರಾಜ “ಅವನನ್ನ ಒಳಗೆ ಕರಿರಿ” ಅಂದ.

6 ಹಾಮಾನ ಒಳಗೆ ಬಂದಾಗ ರಾಜ ಅವನಿಗೆ “ರಾಜ ಗೌರವಿಸಬೇಕು ಅಂತ ಇರೋ ವ್ಯಕ್ತಿಯನ್ನ ಹೇಗೆ ಸನ್ಮಾನಿಸಬಹುದು?” ಅಂತ ಕೇಳಿದ. ಹಾಮಾನ ತನ್ನ ಹೃದಯದಲ್ಲೇ “ರಾಜ ನನ್ನನ್ನಲ್ದೆ ಇನ್ಯಾರನ್ನ ಸನ್ಮಾನಿಸೋಕೆ ಸಾಧ್ಯ!”+ ಅಂದ್ಕೊಂಡ. 7 ಹಾಗಾಗಿ ಹಾಮಾನ ರಾಜನಿಗೆ “ರಾಜ ಯಾರನ್ನಾದ್ರೂ ಸನ್ಮಾನಿಸಬೇಕು ಅಂತಿದ್ರೆ 8 ಆ ವ್ಯಕ್ತಿಗಾಗಿ ರಾಜ ಹಾಕೋ ಬಟ್ಟೆ+ ತರಬೇಕು. ರಾಜ ಸವಾರಿ ಮಾಡೋ ಕುದುರೆಯನ್ನ ತಂದು ಅದ್ರ ತಲೆಗೆ ಅಲಂಕಾರ ಮಾಡಬೇಕು. 9 ಆ ಬಟ್ಟೆಯನ್ನ, ಆ ಕುದುರೆಯನ್ನ ರಾಜನ ಪ್ರಮುಖ ಅಧಿಕಾರಿಗಳಲ್ಲಿ ಒಬ್ಬನ ಕೈಗೆ ಕೊಡಬೇಕು. ರಾಜ ಸನ್ಮಾನಿಸಬೇಕು ಅಂತಿರೋ ವ್ಯಕ್ತಿಗೆ ಸೇವಕರು ಬಟ್ಟೆ ಹಾಕಿಸಿ ಅವನನ್ನ ಕುದುರೆ ಮೇಲೆ ಕೂರಿಸಿ ಪಟ್ಟಣದ ಮುಖ್ಯಸ್ಥಳದಲ್ಲಿ* ಮೆರವಣಿಗೆ ಮಾಡಿಸಬೇಕು. ಎಲ್ರೂ ಅವನ ಮುಂದೆ ಜೋರಾಗಿ ‘ರಾಜ ಸನ್ಮಾನಿಸಬೇಕು ಅಂತಿರೋ ವ್ಯಕ್ತಿಯನ್ನ ಹೀಗೇ ಗೌರವಿಸಬೇಕು!’+ ಅಂತ ಕೂಗಬೇಕು” ಅಂದ. 10 ರಾಜ ತಕ್ಷಣ ಹಾಮಾನನಿಗೆ “ತಡಮಾಡಬೇಡ! ಈಗ್ಲೇ ಆ ಬಟ್ಟೆ, ಆ ಕುದುರೆ ತಗೊಂಡು ಹೋಗು. ಅರಮನೆಯ ಹೆಬ್ಬಾಗಲಲ್ಲಿ ಕೂತಿರೋ ಯೆಹೂದ್ಯನಾದ ಮೊರ್ದೆಕೈಗೆ ನೀನು ಹೇಳಿದ್ದನ್ನೆಲ್ಲ ಮಾಡು. ಒಂದನ್ನೂ ಬಿಡದೆ ಎಲ್ಲ ಮಾಡು” ಅಂದ.

11 ಆಗ ಹಾಮಾನ ಬಟ್ಟೆಯನ್ನ, ಕುದುರೆಯನ್ನ ತಗೊಂಡು ಹೋಗಿ, ಮೊರ್ದೆಕೈಗೆ+ ಆ ಬಟ್ಟೆ ಹಾಕಿಸಿ, ಅವನನ್ನ ಕುದುರೆ ಮೇಲೆ ಕೂರಿಸಿ ಪಟ್ಟಣದ ಮುಖ್ಯಸ್ಥಳದಲ್ಲಿ* ಮೆರವಣಿಗೆ ಮಾಡಿಸ್ತಾ “ರಾಜ ಸನ್ಮಾನಿಸಬೇಕು ಅಂತಿರೋ ವ್ಯಕ್ತಿಯನ್ನ ಹೀಗೇ ಗೌರವಿಸಬೇಕು!” ಅಂತ ಜೋರಾಗಿ ಕೂಗಿದ. 12 ಇದಾದ ಮೇಲೆ ಮೊರ್ದೆಕೈ ಅರಮನೆಯ ಹೆಬ್ಬಾಗಿಲ ಹತ್ರ ವಾಪಸ್‌ ಹೋದ. ಆದ್ರೆ ಹಾಮಾನ ತನ್ನ ತಲೆ ಮೇಲೆ ಮುಸುಕು ಹಾಕೊಂಡು ದುಃಖದಿಂದ ಬೇಗಬೇಗ ತನ್ನ ಮನೆ ಕಡೆ ಹೋದ. 13 ನಡೆದ ವಿಷ್ಯನ್ನೆಲ್ಲ ಹಾಮಾನ ತನ್ನ ಹೆಂಡತಿ ಜೆರೆಷಳಿಗೆ,+ ತನ್ನ ಸ್ನೇಹಿತರಿಗೆ ಹೇಳಿದ. ಆಗ ಅವನ ಸಲಹೆಗಾರರು,* ಅವನ ಹೆಂಡತಿ “ಇವತ್ತು ನೀನು ತಲೆ ತಗ್ಗಿಸೋ ತರ ಮಾಡಿದ ಆ ಮೊರ್ದೆಕೈ ಒಬ್ಬ ಯೆಹೂದಿ ಆಗಿರೋದ್ರಿಂದ ನೀನು ಅವನ ಮೇಲೆ ಗೆಲುವು ಸಾಧಿಸೋಕೆ ಆಗಲ್ಲ. ನೀನು ಖಂಡಿತ ಅವನ ಮುಂದೆ ಸೋತು ಹೋಗ್ತೀಯ” ಅಂದ್ರು.

14 ಅವರು ಮಾತಾಡ್ತಾ ಇರುವಾಗ್ಲೇ, ರಾಜನ ಆಸ್ಥಾನದ ಅಧಿಕಾರಿಗಳು ಅಲ್ಲಿಗೆ ಬಂದು ಹಾಮಾನನನ್ನ ಎಸ್ತೇರ್‌ ಕರೆದಿದ್ದ ಔತಣಕ್ಕೆ ಕರ್ಕೊಂಡು ಹೋದ್ರು.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ