ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆಹೋಶುವ 13
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಯೆಹೋಶುವ ಮುಖ್ಯಾಂಶಗಳು

      • ಇನ್ನೂ ವಶ ಮಾಡಬೇಕಾಗಿದ್ದ ಪ್ರದೇಶಗಳು (1-7)

      • ಹಂಚಿಕೊಡಲಾದ ಯೋರ್ದನಿನ ಪೂರ್ವಕ್ಕಿದ್ದ ಪ್ರದೇಶಗಳು (8-14)

      • ರೂಬೇನ್‌ಗೆ ಸಿಕ್ಕಿದ ಆಸ್ತಿ (15-23)

      • ಗಾದನಿಗೆ ಸಿಕ್ಕಿದ ಆಸ್ತಿ (24-28)

      • ಮನಸ್ಸೆಗೆ ಪೂರ್ವಕ್ಕೆ ಸಿಕ್ಕಿದ ಆಸ್ತಿ (29-32)

      • ಯೆಹೋವನೇ ಲೇವಿಯರ ಆಸ್ತಿ (33)

ಯೆಹೋಶುವ 13:1

ಪಾದಟಿಪ್ಪಣಿ

  • *

    ಅಥವಾ “ಜಯಿಸಬೇಕಾದ.”

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 23:1; 24:29

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    12/1/2004, ಪು. 11-12

ಯೆಹೋಶುವ 13:2

ಮಾರ್ಜಿನಲ್ ರೆಫರೆನ್ಸ್

  • +ವಿಮೋ 23:29, 30
  • +1ಸಮು 27:8

ಯೆಹೋಶುವ 13:3

ಪಾದಟಿಪ್ಪಣಿ

  • *

    ಅಕ್ಷ. “ಎದುರಿಗಿರೋ.”

  • *

    ಅಥವಾ “ಶೀಹೋರಿಂದ.”

ಮಾರ್ಜಿನಲ್ ರೆಫರೆನ್ಸ್

  • +ಆದಿ 10:19
  • +ನ್ಯಾಯ 3:1, 3; 1ಸಮು 6:4
  • +ಯೆಹೋ 15:20, 46
  • +ನ್ಯಾಯ 14:19
  • +2ಸಮು 21:19
  • +1ಸಮು 5:10
  • +ಧರ್ಮೋ 2:23

ಯೆಹೋಶುವ 13:4

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 1:31

ಯೆಹೋಶುವ 13:5

ಪಾದಟಿಪ್ಪಣಿ

  • *

    ಅಥವಾ “ಹಾಮಾತಿನ ಬಾಗಿಲ ತನಕದ.”

ಮಾರ್ಜಿನಲ್ ರೆಫರೆನ್ಸ್

  • +1ಅರ 5:18
  • +ಅರ 34:2, 8

ಯೆಹೋಶುವ 13:6

ಪಾದಟಿಪ್ಪಣಿ

  • *

    ಅಕ್ಷ. “ಹೊರಗೆ ಹಾಕು.”

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 3:25
  • +ಯೆಹೋ 11:8
  • +ನ್ಯಾಯ 3:1-3
  • +ವಿಮೋ 23:30
  • +ಅರ 34:17; ಯೆಹೋ 14:1

ಯೆಹೋಶುವ 13:7

ಮಾರ್ಜಿನಲ್ ರೆಫರೆನ್ಸ್

  • +ಅರ 33:54

ಯೆಹೋಶುವ 13:8

ಮಾರ್ಜಿನಲ್ ರೆಫರೆನ್ಸ್

  • +ಅರ 32:33; ಯೆಹೋ 22:4

ಯೆಹೋಶುವ 13:9

ಪಾದಟಿಪ್ಪಣಿ

  • *

    ಅಥವಾ “ಎತ್ತರದಲ್ಲಿ ಸಮತಟ್ಟಾದ ಪ್ರದೇಶದ ತನಕ.”

ಮಾರ್ಜಿನಲ್ ರೆಫರೆನ್ಸ್

  • +ಅರ 21:13
  • +ಧರ್ಮೋ 3:12

ಯೆಹೋಶುವ 13:10

ಮಾರ್ಜಿನಲ್ ರೆಫರೆನ್ಸ್

  • +ಅರ 21:23, 24

ಯೆಹೋಶುವ 13:11

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 3:14
  • +1ಪೂರ್ವ 5:11
  • +ಯೆಹೋ 17:1

ಯೆಹೋಶುವ 13:12

ಪಾದಟಿಪ್ಪಣಿ

  • *

    ಅಕ್ಷ. “ಹೊರಗೆ ಹಾಕು.”

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 3:11
  • +ಅರ 21:23, 24, 33-35

ಯೆಹೋಶುವ 13:13

ಪಾದಟಿಪ್ಪಣಿ

  • *

    ಅಕ್ಷ. “ಹೊರಗೆ ಹಾಕು.”

ಮಾರ್ಜಿನಲ್ ರೆಫರೆನ್ಸ್

  • +ಅರ 33:55; ಯೆಹೋ 23:12, 13

ಯೆಹೋಶುವ 13:14

ಮಾರ್ಜಿನಲ್ ರೆಫರೆನ್ಸ್

  • +ಅರ 18:20; ಧರ್ಮೋ 10:9; 12:12
  • +ಅರ 18:24
  • +ಯಾಜ 7:33-35; ಧರ್ಮೋ 18:1

ಯೆಹೋಶುವ 13:17

ಮಾರ್ಜಿನಲ್ ರೆಫರೆನ್ಸ್

  • +ಅರ 21:25, 26
  • +ಅರ 32:37, 38

ಯೆಹೋಶುವ 13:18

ಮಾರ್ಜಿನಲ್ ರೆಫರೆನ್ಸ್

  • +ಅರ 21:23
  • +ಧರ್ಮೋ 2:26
  • +ಯೆಹೋ 21:8, 37

ಯೆಹೋಶುವ 13:19

ಮಾರ್ಜಿನಲ್ ರೆಫರೆನ್ಸ್

  • +ಅರ 32:37, 38

ಯೆಹೋಶುವ 13:20

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 3:16, 17
  • +ಅರ 33:48, 49

ಯೆಹೋಶುವ 13:21

ಮಾರ್ಜಿನಲ್ ರೆಫರೆನ್ಸ್

  • +ಅರ 21:25
  • +ಅರ 31:7, 8
  • +ಧರ್ಮೋ 2:30

ಯೆಹೋಶುವ 13:22

ಮಾರ್ಜಿನಲ್ ರೆಫರೆನ್ಸ್

  • +ಅರ 22:7
  • +ಅರ 22:5; 2ಪೇತ್ರ 2:15

ಯೆಹೋಶುವ 13:25

ಮಾರ್ಜಿನಲ್ ರೆಫರೆನ್ಸ್

  • +ಅರ 32:34, 35
  • +2ಸಮು 11:1
  • +ಯೆಹೋ 12:2; ನ್ಯಾಯ 11:13

ಯೆಹೋಶುವ 13:26

ಮಾರ್ಜಿನಲ್ ರೆಫರೆನ್ಸ್

  • +ಅರ 21:26
  • +ಆದಿ 32:2; ಯೆಹೋ 21:8, 38

ಯೆಹೋಶುವ 13:27

ಪಾದಟಿಪ್ಪಣಿ

  • *

    ಅದು, ಗೆನೆಜರೇತ್‌ ಸರೋವರ ಅಥವಾ ಗಲಿಲಾಯ ಸಮುದ್ರ.

ಮಾರ್ಜಿನಲ್ ರೆಫರೆನ್ಸ್

  • +ಅರ 21:26
  • +ಅರ 32:34, 36
  • +ಆದಿ 33:17
  • +ಅರ 34:2, 11; ಧರ್ಮೋ 3:16, 17; ಯೋಹಾ 6:1

ಯೆಹೋಶುವ 13:29

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 3:13

ಯೆಹೋಶುವ 13:30

ಮಾರ್ಜಿನಲ್ ರೆಫರೆನ್ಸ್

  • +1ಪೂರ್ವ 6:77, 80
  • +ಅರ 32:40, 41; ಧರ್ಮೋ 3:14

ಯೆಹೋಶುವ 13:31

ಮಾರ್ಜಿನಲ್ ರೆಫರೆನ್ಸ್

  • +ಅರ 32:39
  • +ಅರ 21:33

ಯೆಹೋಶುವ 13:32

ಮಾರ್ಜಿನಲ್ ರೆಫರೆನ್ಸ್

  • +ಅರ 32:33

ಯೆಹೋಶುವ 13:33

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 10:9; ಯೆಹೋ 18:7
  • +ಅರ 18:24; 26:62, 63; ಧರ್ಮೋ 18:1

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಯೆಹೋ. 13:1ಯೆಹೋ 23:1; 24:29
ಯೆಹೋ. 13:2ವಿಮೋ 23:29, 30
ಯೆಹೋ. 13:21ಸಮು 27:8
ಯೆಹೋ. 13:3ಆದಿ 10:19
ಯೆಹೋ. 13:3ನ್ಯಾಯ 3:1, 3; 1ಸಮು 6:4
ಯೆಹೋ. 13:3ಯೆಹೋ 15:20, 46
ಯೆಹೋ. 13:3ನ್ಯಾಯ 14:19
ಯೆಹೋ. 13:32ಸಮು 21:19
ಯೆಹೋ. 13:31ಸಮು 5:10
ಯೆಹೋ. 13:3ಧರ್ಮೋ 2:23
ಯೆಹೋ. 13:4ನ್ಯಾಯ 1:31
ಯೆಹೋ. 13:51ಅರ 5:18
ಯೆಹೋ. 13:5ಅರ 34:2, 8
ಯೆಹೋ. 13:6ಧರ್ಮೋ 3:25
ಯೆಹೋ. 13:6ಯೆಹೋ 11:8
ಯೆಹೋ. 13:6ನ್ಯಾಯ 3:1-3
ಯೆಹೋ. 13:6ವಿಮೋ 23:30
ಯೆಹೋ. 13:6ಅರ 34:17; ಯೆಹೋ 14:1
ಯೆಹೋ. 13:7ಅರ 33:54
ಯೆಹೋ. 13:8ಅರ 32:33; ಯೆಹೋ 22:4
ಯೆಹೋ. 13:9ಅರ 21:13
ಯೆಹೋ. 13:9ಧರ್ಮೋ 3:12
ಯೆಹೋ. 13:10ಅರ 21:23, 24
ಯೆಹೋ. 13:11ಧರ್ಮೋ 3:14
ಯೆಹೋ. 13:111ಪೂರ್ವ 5:11
ಯೆಹೋ. 13:11ಯೆಹೋ 17:1
ಯೆಹೋ. 13:12ಧರ್ಮೋ 3:11
ಯೆಹೋ. 13:12ಅರ 21:23, 24, 33-35
ಯೆಹೋ. 13:13ಅರ 33:55; ಯೆಹೋ 23:12, 13
ಯೆಹೋ. 13:14ಅರ 18:20; ಧರ್ಮೋ 10:9; 12:12
ಯೆಹೋ. 13:14ಅರ 18:24
ಯೆಹೋ. 13:14ಯಾಜ 7:33-35; ಧರ್ಮೋ 18:1
ಯೆಹೋ. 13:17ಅರ 21:25, 26
ಯೆಹೋ. 13:17ಅರ 32:37, 38
ಯೆಹೋ. 13:18ಅರ 21:23
ಯೆಹೋ. 13:18ಧರ್ಮೋ 2:26
ಯೆಹೋ. 13:18ಯೆಹೋ 21:8, 37
ಯೆಹೋ. 13:19ಅರ 32:37, 38
ಯೆಹೋ. 13:20ಧರ್ಮೋ 3:16, 17
ಯೆಹೋ. 13:20ಅರ 33:48, 49
ಯೆಹೋ. 13:21ಅರ 21:25
ಯೆಹೋ. 13:21ಅರ 31:7, 8
ಯೆಹೋ. 13:21ಧರ್ಮೋ 2:30
ಯೆಹೋ. 13:22ಅರ 22:7
ಯೆಹೋ. 13:22ಅರ 22:5; 2ಪೇತ್ರ 2:15
ಯೆಹೋ. 13:25ಅರ 32:34, 35
ಯೆಹೋ. 13:252ಸಮು 11:1
ಯೆಹೋ. 13:25ಯೆಹೋ 12:2; ನ್ಯಾಯ 11:13
ಯೆಹೋ. 13:26ಅರ 21:26
ಯೆಹೋ. 13:26ಆದಿ 32:2; ಯೆಹೋ 21:8, 38
ಯೆಹೋ. 13:27ಅರ 21:26
ಯೆಹೋ. 13:27ಅರ 32:34, 36
ಯೆಹೋ. 13:27ಆದಿ 33:17
ಯೆಹೋ. 13:27ಅರ 34:2, 11; ಧರ್ಮೋ 3:16, 17; ಯೋಹಾ 6:1
ಯೆಹೋ. 13:29ಧರ್ಮೋ 3:13
ಯೆಹೋ. 13:301ಪೂರ್ವ 6:77, 80
ಯೆಹೋ. 13:30ಅರ 32:40, 41; ಧರ್ಮೋ 3:14
ಯೆಹೋ. 13:31ಅರ 32:39
ಯೆಹೋ. 13:31ಅರ 21:33
ಯೆಹೋ. 13:32ಅರ 32:33
ಯೆಹೋ. 13:33ಧರ್ಮೋ 10:9; ಯೆಹೋ 18:7
ಯೆಹೋ. 13:33ಅರ 18:24; 26:62, 63; ಧರ್ಮೋ 18:1
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
  • 31
  • 32
  • 33
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಯೆಹೋಶುವ 13:1-33

ಯೆಹೋಶುವ

13 ಯೆಹೋಶುವ ಈಗ ತುಂಬ ಮುದುಕನಾಗಿದ್ದ. ಅವನ ಸಾವು ಹತ್ರ ಇತ್ತು.+ ಹಾಗಾಗಿ ಯೆಹೋವ ಅವನಿಗೆ ಹೀಗೆ ಹೇಳಿದನು: “ನೀನು ಮುದುಕನಾಗಿದ್ದೀಯ, ಇನ್ನು ಹೆಚ್ಚು ದಿನ ಬದುಕಲ್ಲ. ಆದ್ರೆ ವಶ ಮಾಡ್ಕೊಳ್ಳಬೇಕಾದ* ಪ್ರದೇಶಗಳು ಇನ್ನೂ ತುಂಬ ಇವೆ. 2 ಉಳಿದಿರೋ ಪ್ರದೇಶಗಳು+ ಯಾವುದಂದ್ರೆ: ಫಿಲಿಷ್ಟಿಯರ ಮತ್ತು ಗೆಷೂರ್ಯರ+ ಎಲ್ಲ ಪ್ರದೇಶಗಳು 3 (ಈಜಿಪ್ಟಿನ ಪೂರ್ವಕ್ಕಿರೋ* ನೈಲ್‌ ನದಿಯ ಶಾಖೆಯಿಂದ* ಉತ್ತರಕ್ಕಿರೋ ಎಕ್ರೋನಿನ ಗಡಿಪ್ರದೇಶದ ತನಕ. ಇದನ್ನ ಕಾನಾನ್ಯರ ಪ್ರದೇಶ ಅಂತ ಹೇಳ್ತಿದ್ರು).+ ಇವುಗಳಲ್ಲಿ ಫಿಲಿಷ್ಟಿಯರ ಐದು ಪ್ರಭುಗಳ+ ಅಂದ್ರೆ ಗಾಜದವರ, ಅಷ್ಡೋದಿನವರ,+ ಅಷ್ಕೆಲೋನಿನವರ,+ ಗಿತ್ತೀಯರ,+ ಎಕ್ರೋನಿನವರ+ ಪ್ರದೇಶಗಳೂ ಇದ್ವು. ಅವ್ವೀಮ್ಯರ+ ಪ್ರದೇಶ 4 ದಕ್ಷಿಣದಲ್ಲಿತ್ತು. ಕಾನಾನ್ಯರ ಇಡೀ ಪ್ರದೇಶ, ಸೀದೋನ್ಯರಿಗೆ+ ಸೇರಿದ ಮೆಯಾರಾದಿಂದ ಅಮೋರಿಯರ ಗಡಿಪ್ರದೇಶದಲ್ಲಿದ್ದ ಅಫೇಕಿನ ತನಕದ ಪ್ರದೇಶ, 5 ಗೆಬಾಲ್ಯರ+ ಪ್ರದೇಶ, ಪೂರ್ವಕ್ಕಿರೋ ಇಡೀ ಲೆಬನೋನ್‌ ಪ್ರದೇಶ, ಹೆರ್ಮೋನ್‌ ಬೆಟ್ಟದ ಬುಡದಲ್ಲಿರೋ ಬಾಲ್ಗಾದಿನಿಂದ ಲೆಬೊ-ಹಾಮಾತಿನ+ ತನಕದ* ಪ್ರದೇಶ, 6 ಲೆಬನೋನಿನಿಂದ+ ಮಿಸ್ರೆಫೋತ್ಮಯಿಮ್‌ನ+ ತನಕ ಇರೋ ಬೆಟ್ಟ ಪ್ರದೇಶಗಳಲ್ಲಿ ಇರೋ ಜನ್ರ ಮತ್ತು ಸೀದೋನ್ಯರ+ ಎಲ್ಲ ಪ್ರದೇಶಗಳು. ಇಲ್ಲಿ ವಾಸ ಮಾಡ್ತಿರೋ ಎಲ್ಲ ಜನ್ರನ್ನ ನಾನು ಇಸ್ರಾಯೇಲ್ಯರ ಮುಂದಿಂದ ಓಡಿಸಿಬಿಡ್ತೀನಿ.*+ ನಾನು ಈಗಾಗ್ಲೇ ನಿನಗೆ ಆಜ್ಞೆ ಕೊಟ್ಟಿರೋ ತರ ನೀನು ಈ ದೇಶನ ಇಸ್ರಾಯೇಲ್ಯರಿಗೆ ಆಸ್ತಿಯಾಗಿ ನೇಮಿಸಿದ್ರೆ ಸಾಕು.+ 7 ಹಾಗಾಗಿ ಈಗ ಇದನ್ನ ಒಂಬತ್ತು ಕುಲಗಳಿಗೆ, ಮನಸ್ಸೆಯ ಅರ್ಧ ಕುಲದವರಿಗೆ ಪಾಲು ಮಾಡಿ ಕೊಡು.”+

8 ಮನಸ್ಸೆ ಕುಲದ ಉಳಿದ ಅರ್ಧ ಜನ್ರಿಗೆ, ರೂಬೇನ್ಯರಿಗೆ, ಗಾದ್ಯರಿಗೆ ಮೋಶೆ ಯೋರ್ದನಿನ ಪೂರ್ವದ ಕಡೆ ಕೊಟ್ಟಿದ್ದ ಆಸ್ತಿನ ಅವರು ತಗೊಂಡ್ರು. ಯೆಹೋವನ ಸೇವಕ ಮೋಶೆ ಅವರಿಗೆ ಕೊಟ್ಟಿದ್ದ ಪ್ರದೇಶಗಳು ಯಾವುದಂದ್ರೆ:+ 9 ಅರ್ನೋನ್‌ ಕಣಿವೆಯ+ ಅಂಚಲ್ಲಿದ್ದ ಅರೋಯೇರಿನಿಂದ+ ಕಣಿವೆಯ ಮಧ್ಯದಲ್ಲಿದ್ದ ಪಟ್ಟಣನೂ ಸೇರಿ, ದೀಬೋನಿನ ತನಕ ವಿಸ್ತರಿಸಿರೋ ಮೇದೆಬದ ಪ್ರಸ್ಥಭೂಮಿ ತನಕ* ಇರೋ ಎಲ್ಲ ಪ್ರದೇಶಗಳು, 10 ಹೆಷ್ಬೋನಲ್ಲಿ ಆಳ್ತಿದ್ದ ಅಮೋರಿಯರ ರಾಜ ಸೀಹೋನನ ಎಲ್ಲ ಪಟ್ಟಣಗಳು, ಇವು ಅಮ್ಮೋನಿಯರ ಗಡಿ ತನಕ ಇತ್ತು.+ 11 ಅಷ್ಟೇ ಅಲ್ಲ ಗಿಲ್ಯಾದ್‌, ಗೆಷೂರ್ಯರ ಮತ್ತು ಮಾಕಾತ್ಯರ+ ಪ್ರದೇಶಗಳು, ಇಡೀ ಹೆರ್ಮೋನ್‌ ಬೆಟ್ಟ ಹಾಗೂ ಸಲ್ಕಾ+ ತನಕ ಇರೋ ಬಾಷಾನಿನ ಎಲ್ಲ ಪ್ರದೇಶಗಳು,+ 12 ಅಷ್ಟರೋತ್‌ ಮತ್ತು ಎದ್ರೈಯಲ್ಲಿ ಆಳ್ತಿದ್ದ ಬಾಷಾನಿನ ರಾಜ ಓಗನ ಇಡೀ ಸಾಮ್ರಾಜ್ಯ. (ಇವನು ರೆಫಾಯರ ಕೊನೆಯವ್ರಲ್ಲಿ ಒಬ್ಬ.)+ ಮೋಶೆ ಇವ್ರನ್ನ ಸೋಲಿಸಿ ಆ ಪ್ರದೇಶಗಳಿಂದ ಓಡಿಸಿಬಿಟ್ಟ.*+ 13 ಆದ್ರೆ ಗೆಷೂರ್ಯರನ್ನ, ಮಾಕಾತ್ಯರನ್ನ ಇಸ್ರಾಯೇಲ್ಯರು ಓಡಿಸಲಿಲ್ಲ.*+ ಹಾಗಾಗಿ ಗೆಷೂರಿನ, ಮಾಕತಿನ ಜನ ಇವತ್ತಿನ ತನಕ ಇಸ್ರಾಯೇಲ್ಯರ ಮಧ್ಯದಲ್ಲೇ ಇದ್ದಾರೆ.

14 ಮೋಶೆ ಲೇವಿ ಕುಲದವ್ರಿಗೆ ಮಾತ್ರ ಆಸ್ತಿ ಕೊಡಲಿಲ್ಲ.+ ಇಸ್ರಾಯೇಲ್ಯರ ದೇವರಾದ ಯೆಹೋವ ಅವ್ರಿಗೆ ಮಾತು ಕೊಟ್ಟ ಹಾಗೇ+ ಜನ ದೇವರಿಗೆ ಬೆಂಕಿ ಮೂಲಕ ಕೊಡ್ತಿದ್ದ ಬಲಿಗಳ ಭಾಗನೇ ಅವ್ರ ಆಸ್ತಿಯಾಗಿತ್ತು.+

15 ಆಮೇಲೆ ಮೋಶೆ ರೂಬೇನ್‌ ಕುಲದವ್ರಿಗೆ ಅವ್ರ ಮನೆತನಗಳ ಪ್ರಕಾರ ಆಸ್ತಿ ಕೊಟ್ಟ. ಆ ಪ್ರದೇಶಗಳು ಯಾವುದಂದ್ರೆ: 16 ಅರ್ನೋನ್‌ ಕಣಿವೆಯ ಅಂಚಲ್ಲಿದ್ದ ಅರೋಯೇರಿನಿಂದ ಕಣಿವೆಯ ಮಧ್ಯದಲ್ಲಿದ್ದ ಪಟ್ಟಣನೂ ಸೇರಿ, ಮೇದೆಬದ ಪ್ರಸ್ಥಭೂಮಿ ತನಕ ಇರೋ ಎಲ್ಲ ಪ್ರದೇಶಗಳು, 17 ಹೆಷ್ಬೋನ್‌ ಮತ್ತು ಪ್ರಸ್ಥಭೂಮಿ ಮೇಲಿರೋ ಅದ್ರ ಎಲ್ಲ ಪಟ್ಟಣಗಳು,+ ದೀಬೋನ್‌, ಬಾಮೋತ್‌-ಬಾಳ್‌, ಬೇತ್‌-ಬಾಳ್‌-ಮೆಯೋನ್‌,+ 18 ಯಹಜ,+ ಕೆದೇಮೋತ್‌,+ ಮೇಫಾಯತ್‌,+ 19 ಕಿರ್ಯಾತಯಿಮ್‌, ಸಿಬ್ಮ,+ ಕಣಿವೆ ಹತ್ರ ಇರೋ ಬೆಟ್ಟದ ಮೇಲಿನ ಚೆರೆತ್‌-ಶಹರ್‌, 20 ಬೇತ್‌-ಪೆಗೋರ್‌, ಪಿಸ್ಗಾದ ಇಳಿಜಾರು+ ಪ್ರದೇಶ, ಬೇತ್‌-ಯೆಷಿಮೋತ್‌,+ 21 ಪ್ರಸ್ಥಭೂಮಿಯ ಎಲ್ಲ ಪಟ್ಟಣಗಳು ಮತ್ತು ಹೆಷ್ಬೋನಲ್ಲಿ+ ಆಳ್ತಿದ್ದ ಅಮೋರಿಯರ ರಾಜ ಸೀಹೋನನ ಇಡೀ ಸಾಮ್ರಾಜ್ಯ. ಮೋಶೆ ಸೀಹೋನನನ್ನ ಮತ್ತು ಅದೇ ಪ್ರದೇಶದಲ್ಲಿ ವಾಸವಾಗಿದ್ದು ಇವನ ಕೈಕೆಳಗಿದ್ದ ಮಿದ್ಯಾನಿನ ಪ್ರಧಾನರಾದ ಎವೀ, ರೆಕೆಮ್‌, ಚೂರ್‌, ಹೂರ್‌ ಮತ್ತು ರೆಬಾ+ ಅನ್ನೋವ್ರನ್ನ ಸೋಲಿಸಿದ.+ 22 ಇಸ್ರಾಯೇಲ್ಯರು ಕತ್ತಿಯಿಂದ ಕೊಂದವ್ರಲ್ಲಿ ಬೆಯೋರನ ಮಗನೂ ಕಣಿಹೇಳುವವನೂ+ ಆಗಿದ್ದ ಬಿಳಾಮನೂ+ ಒಬ್ಬನಾಗಿದ್ದ. 23 ಯೋರ್ದನ್‌ ನದಿ ರೂಬೇನ್ಯರ ಗಡಿ ಆಗಿತ್ತು. ಈ ಪ್ರದೇಶದಲ್ಲಿದ್ದ ಪಟ್ಟಣಗಳು, ಹಳ್ಳಿಗಳು ರೂಬೇನ್‌ ಕುಲದ ಮನೆತನಗಳಿಗೆ ಸಿಕ್ಕಿದ ಆಸ್ತಿ.

24 ಆಮೇಲೆ ಮೋಶೆ ಗಾದ್‌ ಕುಲದವ್ರಿಗೆ ಅವ್ರ ಮನೆತನಗಳ ಪ್ರಕಾರ ಆಸ್ತಿ ಕೊಟ್ಟ. ಆ ಪ್ರದೇಶಗಳು ಯಾವುದಂದ್ರೆ: 25 ಯಜ್ಜೇರ್‌,+ ಗಿಲ್ಯಾದಿನ ಎಲ್ಲ ಪಟ್ಟಣಗಳು, ಅರೋಯೇರಿನ ತನಕ ವಿಸ್ತರಿಸಿರೋ ರಬ್ಬಾದ+ ಎದುರಿಗಿದ್ದ ಅಮ್ಮೋನಿಯರ+ ಅರ್ಧ ರಾಜ್ಯ, 26 ಹೆಷ್ಬೋನಿಂದ+ ರಾಮತ್‌-ಮಿಚ್ಪೆವರೆಗೆ, ಬೆಟೋನೀಮ್‌, ಮಹನಯಿಮಿನಿಂದ+ ದೆಬೀರಿನ ಗಡಿ ತನಕ, 27 ಹೆಷ್ಬೋನಿನ ರಾಜನಾಗಿದ್ದ ಸೀಹೋನನ+ ಉಳಿದ ಸಾಮ್ರಾಜ್ಯ ಅಂದ್ರೆ ಕಣಿವೆಯಲ್ಲಿದ್ದ ಬೇತ್‌-ಹಾರಾಮ್‌, ಬೇತ್‌-ನಿಮ್ರಾ,+ ಸುಕ್ಕೋತ್‌,+ ಚಾಫೋನ್‌ ಪ್ರದೇಶಗಳು. ಅವ್ರ ಪ್ರದೇಶ ಯೋರ್ದನಿನ ಪೂರ್ವ ಪ್ರದೇಶದಿಂದ ಕಿನ್ನೆರೆತ್‌ ಸಮುದ್ರದ+ ತನಕ* ಇತ್ತು. 28 ಈ ಪ್ರದೇಶದಲ್ಲಿದ್ದ ಪಟ್ಟಣಗಳು ಮತ್ತು ಹಳ್ಳಿಗಳು ಗಾದ್ಯರ ಮನೆತನಗಳಿಗೆ ಸಿಕ್ಕಿದ ಆಸ್ತಿ.

29 ಅಷ್ಟೇ ಅಲ್ಲ ಮೋಶೆ ಮನಸ್ಸೆಯ ಅರ್ಧ ಕುಲದವ್ರಿಗೆ ಅವ್ರ ಮನೆತನಗಳ ಪ್ರಕಾರ ಈ ಪ್ರದೇಶಗಳನ್ನ ಆಸ್ತಿಯಾಗಿ ಕೊಟ್ಟ.+ ಅವು ಯಾವುದಂದ್ರೆ: 30 ಮಹನಯಿಮಿನಿಂದ + ಬಾಷಾನಿನ ಎಲ್ಲ ಪ್ರದೇಶಗಳು ಅಂದ್ರೆ ಬಾಷಾನಿನ ರಾಜ ಓಗನ ಇಡೀ ಸಾಮ್ರಾಜ್ಯ, ಬಾಷಾನಿನಲ್ಲಿದ್ದ ಯಾಯೀರನ+ ಡೇರೆಗಳಿರೋ ಎಲ್ಲ ಗ್ರಾಮಗಳು, ಜೊತೆಗೆ 60 ಪಟ್ಟಣಗಳು, 31 ಮನಸ್ಸೆಯ ಮಗನಾಗಿದ್ದ ಮಾಕೀರನಿಗೆ+ ಅಂದ್ರೆ ಅವನ ಗಂಡು ಮಕ್ಕಳಲ್ಲಿ ಅರ್ಧ ಜನ್ರ ಕುಟುಂಬಗಳಿಗೆ ಗಿಲ್ಯಾದಿನ ಅರ್ಧ ಭಾಗ, ಬಾಷಾನಿನ ರಾಜ ಓಗನ ಸಾಮ್ರಾಜ್ಯದಲ್ಲಿದ್ದ ಅಷ್ಟರೋತ್‌ ಮತ್ತು ಎದ್ರೈ+ ಪಟ್ಟಣಗಳು ಸಿಕ್ತು.

32 ಇದಿಷ್ಟು ಯೋರ್ದನಿನ ಆಕಡೆ, ಯೆರಿಕೋವಿನ ಪೂರ್ವಕ್ಕಿದ್ದ ಮೋವಾಬಿನ ಬಯಲು ಪ್ರದೇಶಗಳಲ್ಲಿ ಮೋಶೆ ಅವ್ರಿಗೆ ಕೊಟ್ಟಿದ್ದ ಆಸ್ತಿಗಳು.+

33 ಆದ್ರೆ ಮೋಶೆ ಲೇವಿ ಕುಲದವ್ರಿಗೆ ಆಸ್ತಿ ಕೊಟ್ಟಿರಲಿಲ್ಲ.+ ಇಸ್ರಾಯೇಲ್‌ ದೇವರಾದ ಯೆಹೋವ ಮಾತು ಕೊಟ್ಟ ಹಾಗೆ ಆತನೇ ಅವ್ರ ಆಸ್ತಿ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ