ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಆದಿಕಾಂಡ 8
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಆದಿಕಾಂಡ ಮುಖ್ಯಾಂಶಗಳು

      • ಜಲಪ್ರಳಯದ ನೀರು ಕಮ್ಮಿ ಆಯ್ತು (1-14)

        • ಪಾರಿವಾಳ ಹೊರಗೆ ಬಿಟ್ಟದ್ದು (8-12)

      • ಹಡಗಿಂದ ಹೊರಗೆ (15-19)

      • ಭೂಮಿ ಬಗ್ಗೆ ದೇವರ ಆಶೀರ್ವಾದ (20-22)

ಆದಿಕಾಂಡ 8:1

ಪಾದಟಿಪ್ಪಣಿ

  • *

    ಅಥವಾ “ಗಮನ ಕೊಟ್ಟ.”

ಮಾರ್ಜಿನಲ್ ರೆಫರೆನ್ಸ್

  • +ಆದಿ 6:19, 20; ಇಬ್ರಿ 11:7

ಆದಿಕಾಂಡ 8:2

ಪಾದಟಿಪ್ಪಣಿ

  • *

    ಅಕ್ಷ. “ಆಳವಾದ ನೀರಿನ ಬುಗ್ಗೆಗಳೆಲ್ಲ.”

  • *

    ಅಥವಾ “ಮಳೆಯನ್ನ ತಡೆಯಲಾಗಿತ್ತು.”

ಮಾರ್ಜಿನಲ್ ರೆಫರೆನ್ಸ್

  • +ಆದಿ 7:11, 12

ಆದಿಕಾಂಡ 8:3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/15/2003, ಪು. 5

ಆದಿಕಾಂಡ 8:4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/1/2013, ಪು. 12

    5/15/2003, ಪು. 5

ಆದಿಕಾಂಡ 8:5

ಮಾರ್ಜಿನಲ್ ರೆಫರೆನ್ಸ್

  • +ಆದಿ 7:20

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/1/2013, ಪು. 12

    5/15/2003, ಪು. 5

ಆದಿಕಾಂಡ 8:6

ಮಾರ್ಜಿನಲ್ ರೆಫರೆನ್ಸ್

  • +ಆದಿ 6:16

ಆದಿಕಾಂಡ 8:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    4/15/1992, ಪು. 31

ಆದಿಕಾಂಡ 8:8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    4/15/1992, ಪು. 31

ಆದಿಕಾಂಡ 8:9

ಮಾರ್ಜಿನಲ್ ರೆಫರೆನ್ಸ್

  • +ಆದಿ 7:19

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    4/15/1992, ಪು. 31

ಆದಿಕಾಂಡ 8:11

ಮಾರ್ಜಿನಲ್ ರೆಫರೆನ್ಸ್

  • +ಆದಿ 7:20; 8:3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/15/2004, ಪು. 31

    1/1/2004, ಪು. 31

ಆದಿಕಾಂಡ 8:13

ಮಾರ್ಜಿನಲ್ ರೆಫರೆನ್ಸ್

  • +ಆದಿ 7:6, 11

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/1/2013, ಪು. 12

    5/15/2003, ಪು. 5

ಆದಿಕಾಂಡ 8:14

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/1/2013, ಪು. 12

    5/15/2003, ಪು. 5

ಆದಿಕಾಂಡ 8:16

ಮಾರ್ಜಿನಲ್ ರೆಫರೆನ್ಸ್

  • +ಆದಿ 7:7; 1ಪೇತ್ರ 3:20; 2ಪೇತ್ರ 2:5

ಆದಿಕಾಂಡ 8:17

ಮಾರ್ಜಿನಲ್ ರೆಫರೆನ್ಸ್

  • +ಆದಿ 6:19, 20; 7:14, 15
  • +ಆದಿ 1:22

ಆದಿಕಾಂಡ 8:18

ಮಾರ್ಜಿನಲ್ ರೆಫರೆನ್ಸ್

  • +ಆದಿ 6:10

ಆದಿಕಾಂಡ 8:19

ಮಾರ್ಜಿನಲ್ ರೆಫರೆನ್ಸ್

  • +ಆದಿ 7:13, 14

ಆದಿಕಾಂಡ 8:20

ಮಾರ್ಜಿನಲ್ ರೆಫರೆನ್ಸ್

  • +ಆದಿ 12:7
  • +ಆದಿ 7:2; ಯಾಜ 20:25
  • +ಧರ್ಮೋ 27:6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/1/2013, ಪು. 13

ಆದಿಕಾಂಡ 8:21

ಪಾದಟಿಪ್ಪಣಿ

  • *

    ಅಥವಾ “ಸಮಾಧಾನ ಆಯ್ತು.” ಅಕ್ಷ. “ನೆಮ್ಮದಿ ಕೊಟ್ಟಿತು.”

ಮಾರ್ಜಿನಲ್ ರೆಫರೆನ್ಸ್

  • +ಆದಿ 6:5; ಪ್ರಸಂ 7:20; ಮತ್ತಾ 15:19
  • +ಆದಿ 3:17; 5:29
  • +ಆದಿ 6:7, 17; 9:11; ಯೆಶಾ 54:9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    6/2017, ಪು. 8

    ಕಾವಲಿನಬುರುಜು,

    10/1/2013, ಪು. 13

    11/1/1996, ಪು. 7-8

ಆದಿಕಾಂಡ 8:22

ಮಾರ್ಜಿನಲ್ ರೆಫರೆನ್ಸ್

  • +ಆದಿ 1:14; ಕೀರ್ತ 74:17; ಪ್ರಸಂ 1:4

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಆದಿ. 8:1ಆದಿ 6:19, 20; ಇಬ್ರಿ 11:7
ಆದಿ. 8:2ಆದಿ 7:11, 12
ಆದಿ. 8:5ಆದಿ 7:20
ಆದಿ. 8:6ಆದಿ 6:16
ಆದಿ. 8:9ಆದಿ 7:19
ಆದಿ. 8:11ಆದಿ 7:20; 8:3
ಆದಿ. 8:13ಆದಿ 7:6, 11
ಆದಿ. 8:16ಆದಿ 7:7; 1ಪೇತ್ರ 3:20; 2ಪೇತ್ರ 2:5
ಆದಿ. 8:17ಆದಿ 6:19, 20; 7:14, 15
ಆದಿ. 8:17ಆದಿ 1:22
ಆದಿ. 8:18ಆದಿ 6:10
ಆದಿ. 8:19ಆದಿ 7:13, 14
ಆದಿ. 8:20ಆದಿ 12:7
ಆದಿ. 8:20ಆದಿ 7:2; ಯಾಜ 20:25
ಆದಿ. 8:20ಧರ್ಮೋ 27:6
ಆದಿ. 8:21ಆದಿ 6:5; ಪ್ರಸಂ 7:20; ಮತ್ತಾ 15:19
ಆದಿ. 8:21ಆದಿ 3:17; 5:29
ಆದಿ. 8:21ಆದಿ 6:7, 17; 9:11; ಯೆಶಾ 54:9
ಆದಿ. 8:22ಆದಿ 1:14; ಕೀರ್ತ 74:17; ಪ್ರಸಂ 1:4
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಆದಿಕಾಂಡ 8:1-22

ಆದಿಕಾಂಡ

8 ಆದ್ರೆ ದೇವರು ನೋಹ ಮತ್ತು ಅವನ ಜೊತೆ ಹಡಗಲ್ಲಿದ್ದ ಎಲ್ಲ ಕಾಡುಪ್ರಾಣಿ, ಸಾಕುಪ್ರಾಣಿಗಳನ್ನ ನೆನಪಿಸ್ಕೊಂಡ.*+ ಆತನು ಭೂಮಿ ಮೇಲೆ ಗಾಳಿ ಬೀಸೋ ತರ ಮಾಡಿದ್ರಿಂದ ನೀರಿನ ಮಟ್ಟ ಕಮ್ಮಿ ಆಗ್ತಾ ಬಂತು. 2 ಆಕಾಶದಲ್ಲಿದ್ದ ನೀರಿನ ಬುಗ್ಗೆಗಳನ್ನ,* ಆಕಾಶದ ಪ್ರವಾಹ ಬಾಗಿಲುಗಳನ್ನ ಮುಚ್ಚಲಾಗಿತ್ತು. ಹಾಗಾಗಿ ಆಕಾಶದಿಂದ ಸುರಿತಿದ್ದ ಮಳೆ ನಿಂತಿತ್ತು.*+ 3 ಹೀಗೆ ಭೂಮಿ ಮೇಲಿದ್ದ ನೀರು ನಿಧಾನವಾಗಿ ಕಮ್ಮಿ ಆಗ್ತಾ ಇತ್ತು. 150 ದಿನ ಆದ್ಮೇಲೆ ನೀರು ತುಂಬ ಕಮ್ಮಿ ಆಯ್ತು. 4 ಏಳನೇ ತಿಂಗಳಿನ 17ನೇ ದಿನ ಹಡಗು ಅರರಾಟ್‌ ಬೆಟ್ಟದ ಮೇಲೆ ಹೋಗಿ ನಿಂತಿತು. 5 ಹತ್ತನೇ ತಿಂಗಳ ತನಕ ನೀರು ಕಮ್ಮಿ ಆಗ್ತಾ ಬಂತು. ಹತ್ತನೇ ತಿಂಗಳ ಮೊದಲನೇ ದಿನ ಬೆಟ್ಟದ ತುದಿ ಕಾಣಿಸ್ತು.+

6 ಅದಾಗಿ 40 ದಿನ ಆದ್ಮೇಲೆ ನೋಹ ಹಡಗಿನ ಕಿಟಕಿ ತೆಗೆದು+ 7 ಒಂದು ಕಾಗೆನ ಹೊರಗೆ ಬಿಟ್ಟ. ಅದು ಭೂಮಿ ಮೇಲಿದ್ದ ನೀರು ಒಣಗೋ ತನಕ ಹೊರಗೆ ಹಾರಾಡ್ತಾ ಹಡಗಿಗೆ ವಾಪಾಸ್‌ ಬರ್ತಾ ಇತ್ತು.

8 ಆಮೇಲೆ ನೋಹ ಭೂಮಿ ಮೇಲೆ ನೀರು ಕಮ್ಮಿ ಆಗಿದ್ಯಾ ಅಂತ ತಿಳ್ಕೊಳ್ಳೋಕೆ ಒಂದು ಪಾರಿವಾಳನ ಹೊರಗೆ ಬಿಟ್ಟ. 9 ಇಡೀ ಭೂಮೀಲಿ ಎಲ್ಲ ಕಡೆ ನೀರು ತುಂಬಿದ್ರಿಂದ ಅದಕ್ಕೆ ಕಾಲಿಡೋಕೆ ಎಲ್ಲೂ ಜಾಗ ಸಿಗಲಿಲ್ಲ.+ ಹಾಗಾಗಿ ಪಾರಿವಾಳ ನೋಹನ ಹತ್ರ ವಾಪಾಸ್‌ ಬಂತು. ಅವನು ತನ್ನ ಕೈಯನ್ನ ಹೊರಗೆ ಚಾಚಿ ಅದನ್ನ ಹಡಗಿನ ಒಳಗೆ ತಗೊಂಡ. 10 ಅವನು ಇನ್ನೂ ಏಳು ದಿನ ಕಾದು ಮತ್ತೆ ಪಾರಿವಾಳನ ಹಡಗಿನ ಹೊರಗೆ ಬಿಟ್ಟ. 11 ಸಂಜೆ ಆಗ್ತಿದ್ದಾಗ ಆ ಪಾರಿವಾಳ ಅವನ ಹತ್ರ ವಾಪಾಸ್‌ ಬಂತು. ಈ ಸಾರಿ ಅದ್ರ ಕೊಕ್ಕಲ್ಲಿ ಆಲಿವ್‌ ಮರದ ಚಿಗುರೆಲೆ ಇತ್ತು! ಇದನ್ನ ನೋಡಿ ನೋಹಗೆ ಭೂಮಿ ಮೇಲೆ ನೀರು ಕಮ್ಮಿ ಆಗಿದೆ ಅಂತ ಗೊತ್ತಾಯ್ತು.+ 12 ಅವನು ಇನ್ನೂ ಏಳು ದಿನ ಕಾದು ಮತ್ತೆ ಪಾರಿವಾಳನ ಹೊರಗೆ ಬಿಟ್ಟ. ಅದು ವಾಪಾಸ್‌ ಬರಲೇ ಇಲ್ಲ.

13 ನೋಹನ ಜೀವನದ 601ನೇ ವರ್ಷದ+ ಮೊದಲನೇ ತಿಂಗಳ ಮೊದಲನೇ ದಿನ ಭೂಮಿ ಮೇಲಿದ್ದ ನೀರು ಇಳಿದುಹೋಗಿತ್ತು. ನೋಹ ಹಡಗಿನ ಚಾವಣಿಯನ್ನ ಸ್ವಲ್ಪ ತೆಗೆದು ನೋಡಿದಾಗ ನೆಲ ಒಣಗ್ತಾ ಇದೆ ಅಂತ ಗೊತ್ತಾಯ್ತು. 14 ಎರಡನೇ ತಿಂಗಳ 27ನೇ ದಿನ ನೆಲ ಪೂರ್ತಿ ಒಣಗಿತ್ತು.

15 ಆಗ ದೇವರು ನೋಹಗೆ 16 “ನೀನು ನಿನ್ನ ಹೆಂಡತಿ, ಮಕ್ಕಳು ಮತ್ತು ಸೊಸೆಯಂದಿರನ್ನ ಕರ್ಕೊಂಡು ಹಡಗಿಂದ ಹೊರಗೆ ಬಾ.+ 17 ಹಾರಾಡೋ ಜೀವಿಗಳು, ಪ್ರಾಣಿಗಳು, ನೆಲದ ಮೇಲೆ ಹರಿದಾಡೋ ಎಲ್ಲ ಪ್ರಾಣಿಗಳು ಹೀಗೆ ಎಲ್ಲ ರೀತಿಯ ಜೀವಿಗಳನ್ನ+ ನಿನ್ನ ಜೊತೆ ಹಡಗಿಂದ ಹೊರಗೆ ಕರ್ಕೊಂಡು ಬಾ. ಅವು ಮಕ್ಕಳುಮರಿ ಮಾಡ್ಕೊಂಡು ಭೂಮಿಯಲ್ಲಿ ಹೆಚ್ಚಾಗ್ಲಿ. ಅವುಗಳ ಸಂಖ್ಯೆ ತುಂಬ ಜಾಸ್ತಿ ಆಗ್ಲಿ”+ ಅಂದನು.

18 ಆಗ ನೋಹ ತನ್ನ ಹೆಂಡತಿ, ಮಕ್ಕಳು+ ಸೊಸೆಯರ ಜೊತೆ ಹೊರಗೆ ಬಂದ. 19 ಹರಿದಾಡೋ, ಹಾರಾಡೋ, ನೆಲದ ಮೇಲೆ ಓಡಾಡೋ ಎಲ್ಲ ಪ್ರಾಣಿಗಳು ತಮ್ಮ ತಮ್ಮ ಗುಂಪಿನ ಜೊತೆ ಹಡಗಿಂದ ಹೊರಗೆ ಬಂದ್ವು.+ 20 ಆಮೇಲೆ ನೋಹ ಯೆಹೋವನಿಗಾಗಿ ಯಜ್ಞವೇದಿ+ ಕಟ್ಟಿದ. ಶುದ್ಧ ಪ್ರಾಣಿಗಳಿಂದ, ಶುದ್ಧ ಪಕ್ಷಿಗಳಿಂದ+ ಕೆಲವನ್ನ ಅದ್ರ ಮೇಲೆ ಸರ್ವಾಂಗಹೋಮ ಬಲಿಯಾಗಿ ಕೊಟ್ಟ.+ 21 ಆ ಬಲಿಯ ಪರಿಮಳದಿಂದ ಯೆಹೋವನಿಗೆ ಖುಷಿ ಆಯ್ತು.* ಹಾಗಾಗಿ ಯೆಹೋವ ತನ್ನ ಹೃದಯದಲ್ಲಿ ಹೀಗೆ ಅಂದ್ಕೊಂಡನು: “ಇನ್ಮುಂದೆ ಯಾವತ್ತೂ ನಾನು ಮನುಷ್ಯನ ಸಲುವಾಗಿ ಭೂಮಿಗೆ+ ಶಾಪ ಕೊಡಲ್ಲ. ಯಾಕಂದ್ರೆ ಚಿಕ್ಕಂದಿನಿಂದಾನೇ+ ಮನುಷ್ಯನ ಹೃದಯದ ಆಸೆಗಳು ಕೆಟ್ಟದ್ರ ಕಡೆಗೆ ವಾಲುತ್ತೆ. ಅಷ್ಟೇ ಅಲ್ಲ, ನಾನು ಯಾವತ್ತೂ ಮತ್ತೆ ಈ ರೀತಿ ಎಲ್ಲ ಜೀವಿಗಳನ್ನ ನಾಶಮಾಡಲ್ಲ.+ 22 ಈಗಿಂದ ಭೂಮಿ ಮೇಲೆ ಬಿತ್ತನೆ-ಕೊಯ್ಲು, ಚಳಿ-ಸೆಕೆ, ಬೇಸಿಗೆ-ಚಳಿಗಾಲ, ಹಗಲು-ರಾತ್ರಿ ಯಾವತ್ತೂ ನಿಂತು ಹೋಗಲ್ಲ.”+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ