ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 1 ಥೆಸಲೊನೀಕ 1
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

1 ಥೆಸಲೋನಿಕ ಮುಖ್ಯಾಂಶಗಳು

      • ವಂದನೆ (1)

      • ಥೆಸಲೊನೀಕದವ್ರ ನಂಬಿಕೆಗಾಗಿ ಧನ್ಯವಾದ (2-10)

1 ಥೆಸಲೊನೀಕ 1:1

ಪಾದಟಿಪ್ಪಣಿ

  • *

    ಇನ್ನೊಂದು ಹೆಸ್ರು ಸೀಲ.

ಮಾರ್ಜಿನಲ್ ರೆಫರೆನ್ಸ್

  • +ಅಕಾ 15:22; 1ಪೇತ್ರ 5:12
  • +ಅಕಾ 16:1, 2

1 ಥೆಸಲೊನೀಕ 1:2

ಮಾರ್ಜಿನಲ್ ರೆಫರೆನ್ಸ್

  • +2ಥೆಸ 1:11, 12

1 ಥೆಸಲೊನೀಕ 1:3

ಮಾರ್ಜಿನಲ್ ರೆಫರೆನ್ಸ್

  • +1ಪೇತ್ರ 1:3, 4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ರಾಜ್ಯ ಸೇವೆ,

    2/2000, ಪು. 4

1 ಥೆಸಲೊನೀಕ 1:5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಶುಶ್ರೂಷಾ ಶಾಲೆ, ಪು. 194

    ಕಾವಲಿನಬುರುಜು,

    3/1/2000, ಪು. 16

    ರಾಜ್ಯ ಸೇವೆ,

    2/2000, ಪು. 3-4

1 ಥೆಸಲೊನೀಕ 1:6

ಮಾರ್ಜಿನಲ್ ರೆಫರೆನ್ಸ್

  • +1ಥೆಸ 2:14
  • +1ಕೊರಿಂ 11:1; ಫಿಲಿ 3:17; 2ಥೆಸ 3:9
  • +1ಪೇತ್ರ 2:21

ಇಂಡೆಕ್ಸಸ್

  • ಸಂಶೋಧನಾ ಸಾಧನ

    ರಾಜ್ಯ ಸೇವೆ,

    2/2000, ಪು. 3-4

1 ಥೆಸಲೊನೀಕ 1:8

ಪಾದಟಿಪ್ಪಣಿ

  • *

    ಪರಿಶಿಷ್ಟ ಎ5 ನೋಡಿ.

ಮಾರ್ಜಿನಲ್ ರೆಫರೆನ್ಸ್

  • +2ಥೆಸ 1:4

1 ಥೆಸಲೊನೀಕ 1:9

ಪಾದಟಿಪ್ಪಣಿ

  • *

    ಅಕ್ಷ. “ದಾಸರಾಗೋಕೆ.”

ಮಾರ್ಜಿನಲ್ ರೆಫರೆನ್ಸ್

  • +1ಕೊರಿಂ 10:14; 12:2; ಗಲಾ 4:8; 1ಯೋಹಾ 5:21

1 ಥೆಸಲೊನೀಕ 1:10

ಮಾರ್ಜಿನಲ್ ರೆಫರೆನ್ಸ್

  • +ಅಕಾ 1:10, 11; ತೀತ 2:13
  • +1ಥೆಸ 5:2; 2ಪೇತ್ರ 3:12

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    8/15/2010, ಪು. 13

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

1 ಥೆಸ. 1:1ಅಕಾ 15:22; 1ಪೇತ್ರ 5:12
1 ಥೆಸ. 1:1ಅಕಾ 16:1, 2
1 ಥೆಸ. 1:22ಥೆಸ 1:11, 12
1 ಥೆಸ. 1:31ಪೇತ್ರ 1:3, 4
1 ಥೆಸ. 1:61ಥೆಸ 2:14
1 ಥೆಸ. 1:61ಕೊರಿಂ 11:1; ಫಿಲಿ 3:17; 2ಥೆಸ 3:9
1 ಥೆಸ. 1:61ಪೇತ್ರ 2:21
1 ಥೆಸ. 1:82ಥೆಸ 1:4
1 ಥೆಸ. 1:91ಕೊರಿಂ 10:14; 12:2; ಗಲಾ 4:8; 1ಯೋಹಾ 5:21
1 ಥೆಸ. 1:101ಥೆಸ 5:2; 2ಪೇತ್ರ 3:12
1 ಥೆಸ. 1:10ಅಕಾ 1:10, 11; ತೀತ 2:13
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಓದಿ ನೂತನ ಲೋಕ ಭಾಷಾಂತರ (bi7)
  • 1
  • 2
  • 3
  • 4
  • 5
  • 6
  • 7
  • 8
  • 9
  • 10
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
1 ಥೆಸಲೊನೀಕ 1:1-10

ಥೆಸಲೋನಿಕದವರಿಗೆ ಬರೆದ ಮೊದಲನೇ ಪತ್ರ

1 ಈ ಪತ್ರ ಬರಿತಾ ಇರೋದು ಪೌಲ, ಸಿಲ್ವಾನ*+ ಮತ್ತು ತಿಮೊತಿ.+ ನಾವು ಈ ಪತ್ರವನ್ನ ತಂದೆಯಾದ ದೇವರ ಜೊತೆ ಮತ್ತು ಒಡೆಯ ಯೇಸು ಕ್ರಿಸ್ತನ ಜೊತೆ ಒಂದಾಗಿರೋ ಥೆಸಲೊನೀಕದ ಸಭೆಗೆ ಬರಿತಾ ಇದ್ದೀವಿ.

ದೇವರು ನಿಮಗೆ ಅಪಾರ ಕೃಪೆ ತೋರಿಸ್ಲಿ, ಶಾಂತಿ ಕೊಡ್ಲಿ.

2 ನಾವು ನಿಮಗೋಸ್ಕರ ಪ್ರಾರ್ಥನೆ ಮಾಡುವಾಗೆಲ್ಲ ದೇವರಿಗೆ ಧನ್ಯವಾದ ಹೇಳ್ತೀವಿ.+ 3 ನಂಬಿಕೆಯಿಂದ ನೀವು ಮಾಡೋ ಸೇವೆಯನ್ನ, ಪ್ರೀತಿಯಿಂದ ನೀವು ಪಡೋ ಶ್ರಮವನ್ನ ನಾವು ನಮ್ಮ ತಂದೆಯಾದ ದೇವರ ಮುಂದೆ ಯಾವತ್ತೂ ಮರೆತಿಲ್ಲ. ನಮ್ಮ ಪ್ರಭು ಯೇಸು ಕ್ರಿಸ್ತನ ಮೇಲೆ ನಿಮಗಿರೋ ನಿರೀಕ್ಷೆಯಿಂದ ನೀವು ಕಷ್ಟಗಳನ್ನ ಸಹಿಸ್ತಾ ಇರೋದನ್ನ ನೆನಪಲ್ಲಿ ಇಟ್ಟಿದ್ದೀವಿ.+ 4 ಸಹೋದರರೇ, ನಿಮ್ಮನ್ನ ದೇವರು ಪ್ರೀತಿಸ್ತಾನೆ, ಆತನೇ ನಿಮ್ಮನ್ನ ಆರಿಸ್ಕೊಂಡಿದ್ದಾನೆ ಅಂತ ನಮಗೆ ಗೊತ್ತು. 5 ಯಾಕಂದ್ರೆ ನಾವು ನಿಮಗೆ ಸಿಹಿಸುದ್ದಿಯನ್ನ ಬರೀ ಮಾತಿಂದ ಅಲ್ಲ, ಮನಸ್ಸಿಗೆ ಮುಟ್ಟೋ ಹಾಗೆ ಪವಿತ್ರಶಕ್ತಿಯಿಂದ, ಬಲವಾದ ನಂಬಿಕೆಯಿಂದ ಸಾರಿದ್ವಿ. ನಿಮ್ಮ ಒಳ್ಳೇದಕ್ಕಾಗಿ ನಿಮ್ಮ ಜೊತೆ ಹೇಗೆ ನಡ್ಕೊಂಡ್ವಿ ಅನ್ನೋದು ನಿಮಗೆ ಗೊತ್ತು. 6 ನೀವು ತುಂಬ ಕಷ್ಟದಲ್ಲಿದ್ರೂ+ ಪವಿತ್ರಶಕ್ತಿಯಿಂದ ಸಿಗೋ ಆನಂದದಿಂದ ದೇವರ ಮಾತನ್ನ ಒಪ್ಕೊಂಡ್ರಿ, ನಮ್ಮ ತರ+ ಮತ್ತು ಯೇಸು ತರ ನಡ್ಕೊಂಡ್ರಿ.+ 7 ಹೀಗೆ ಮಕೆದೋನ್ಯ ಮತ್ತು ಅಖಾಯದಲ್ಲಿ ಇರೋ ಕ್ರಿಸ್ತನ ಎಲ್ಲ ಶಿಷ್ಯರಿಗೆ ಮಾದರಿಗಳಾಗಿ ಇದ್ದೀರ.

8 ನಿಜ ಹೇಳಬೇಕಂದ್ರೆ, ನೀವು ಯೆಹೋವನ* ಮಾತನ್ನ ಮಕೆದೋನ್ಯ, ಅಖಾಯದಲ್ಲಿ ಮಾತ್ರ ಅಲ್ಲ ಎಲ್ಲ ಕಡೆನೂ ಸಾರಿದ್ದೀರ. ದೇವರ ಮೇಲೆ ನಿಮಗಿರೋ ನಂಬಿಕೆ ಬಗ್ಗೆ ಎಲ್ಲ ಕಡೆ ಇರೋ ಜನ ಕೇಳಿಸ್ಕೊಂಡಿದ್ದಾರೆ.+ ಹಾಗಾಗಿ ನಮಗೆ ಹೇಳೋಕೆ ಬೇರೆ ಏನೂ ಇಲ್ಲ. 9 ನಾವು ಮೊದಲ ಸಲ ನಿಮ್ಮನ್ನ ನೋಡಿದ್ರ ಬಗ್ಗೆ, ನೀವು ಮೂರ್ತಿಗಳನ್ನ ತೆಗೆದುಹಾಕಿ+ ಜೀವ ಇರೋ ಸತ್ಯ ದೇವರ ಸೇವೆ ಮಾಡೋಕೆ* ಆತನ ಕಡೆ ತಿರುಗಿದ್ರ ಬಗ್ಗೆ ಅವರು ಆಗಾಗ ಹೇಳ್ತಾ ಇರ್ತಾರೆ. 10 ಅಷ್ಟೇ ಅಲ್ಲ, ದೇವರು ಜೀವಂತವಾಗಿ ಎಬ್ಬಿಸಿದ ಆತನ ಮಗ ಯೇಸು ಸ್ವರ್ಗದಿಂದ ಬರೋದಕ್ಕೆ ನೀವು ಕಾಯ್ತಾ ಇರೋದನ್ನೂ+ ಅವರು ಹೇಳ್ತಾ ಇರ್ತಾರೆ. ಆತನೇ ನಮ್ಮನ್ನ ಮುಂದೆ ದೇವರ ಕೋಪದಿಂದ ತಪ್ಪಿಸಿ ರಕ್ಷಿಸ್ತಾನೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ