ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ನ್ಯಾಯಸ್ಥಾಪಕರು 14
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ನ್ಯಾಯಸ್ಥಾಪಕರು ಮುಖ್ಯಾಂಶಗಳು

      • ಸಂಸೋನ ಫಿಲಿಷ್ಟಿಯ ಹುಡುಗಿಯನ್ನ ಮದುವೆಯಾಗೋಕೆ ಬಯಸಿದ (1-4)

      • ಯೆಹೋವನ ಪವಿತ್ರಶಕ್ತಿ ಸಹಾಯದಿಂದ ಸಂಸೋನ ಸಿಂಹ ಕೊಂದ (5-9)

      • ಮದುವೆ ಸಮಾರಂಭದಲ್ಲಿ ಸಂಸೋನನ ಒಗಟು (10-19)

      • ಸಂಸೋನನ ಹೆಂಡತಿಯನ್ನ ಮತ್ತೊಬ್ಬ ಮದುವೆ ಆದ (20)

ನ್ಯಾಯಸ್ಥಾಪಕರು 14:3

ಪಾದಟಿಪ್ಪಣಿ

  • *

    ಅಕ್ಷ. “ಅವಳು ನನ್ನ ಕಣ್ಣಿಗೆ ಸರಿಯಾದವಳು.”

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 7:3

ನ್ಯಾಯಸ್ಥಾಪಕರು 14:4

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 13:1

ನ್ಯಾಯಸ್ಥಾಪಕರು 14:5

ಪಾದಟಿಪ್ಪಣಿ

  • *

    ಅಥವಾ “ಪ್ರಾಯದ ಸಿಂಹ.”

ನ್ಯಾಯಸ್ಥಾಪಕರು 14:6

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 13:24, 25

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/15/2005, ಪು. 31

ನ್ಯಾಯಸ್ಥಾಪಕರು 14:7

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 14:2

ನ್ಯಾಯಸ್ಥಾಪಕರು 14:8

ಮಾರ್ಜಿನಲ್ ರೆಫರೆನ್ಸ್

  • +ಆದಿ 24:67; ಮತ್ತಾ 1:24

ನ್ಯಾಯಸ್ಥಾಪಕರು 14:14

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 14:8, 9

ನ್ಯಾಯಸ್ಥಾಪಕರು 14:15

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 16:5

ನ್ಯಾಯಸ್ಥಾಪಕರು 14:16

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 16:15

ನ್ಯಾಯಸ್ಥಾಪಕರು 14:17

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 16:16, 18

ನ್ಯಾಯಸ್ಥಾಪಕರು 14:18

ಪಾದಟಿಪ್ಪಣಿ

  • *

    ಬಹುಶಃ, “ಅವನು ಒಳಕೋಣೆಗೆ ಹೋಗೋ ಮುಂಚೆ.”

  • *

    ಅಥವಾ “ಕಡಸಿನಿಂದ.”

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 14:14
  • +ನ್ಯಾಯ 14:15

ನ್ಯಾಯಸ್ಥಾಪಕರು 14:19

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 13:24, 25; 14:6; 15:14
  • +ಯೆಹೋ 13:2, 3; ನ್ಯಾಯ 1:18
  • +ನ್ಯಾಯ 14:12

ನ್ಯಾಯಸ್ಥಾಪಕರು 14:20

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 14:2
  • +ನ್ಯಾಯ 14:11; 15:1, 2

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ನ್ಯಾಯ. 14:3ಧರ್ಮೋ 7:3
ನ್ಯಾಯ. 14:4ನ್ಯಾಯ 13:1
ನ್ಯಾಯ. 14:6ನ್ಯಾಯ 13:24, 25
ನ್ಯಾಯ. 14:7ನ್ಯಾಯ 14:2
ನ್ಯಾಯ. 14:8ಆದಿ 24:67; ಮತ್ತಾ 1:24
ನ್ಯಾಯ. 14:14ನ್ಯಾಯ 14:8, 9
ನ್ಯಾಯ. 14:15ನ್ಯಾಯ 16:5
ನ್ಯಾಯ. 14:16ನ್ಯಾಯ 16:15
ನ್ಯಾಯ. 14:17ನ್ಯಾಯ 16:16, 18
ನ್ಯಾಯ. 14:18ನ್ಯಾಯ 14:14
ನ್ಯಾಯ. 14:18ನ್ಯಾಯ 14:15
ನ್ಯಾಯ. 14:19ನ್ಯಾಯ 13:24, 25; 14:6; 15:14
ನ್ಯಾಯ. 14:19ಯೆಹೋ 13:2, 3; ನ್ಯಾಯ 1:18
ನ್ಯಾಯ. 14:19ನ್ಯಾಯ 14:12
ನ್ಯಾಯ. 14:20ನ್ಯಾಯ 14:2
ನ್ಯಾಯ. 14:20ನ್ಯಾಯ 14:11; 15:1, 2
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ನ್ಯಾಯಸ್ಥಾಪಕರು 14:1-20

ನ್ಯಾಯಸ್ಥಾಪಕರು

14 ಆಮೇಲೆ ಸಂಸೋನ ತಿಮ್ನಾಗೆ ಹೋದ. ಅಲ್ಲಿ ಅವನು ಒಬ್ಬ ಫಿಲಿಷ್ಟಿಯ ಹುಡುಗಿನ ನೋಡ್ದ. 2 ಅವನು ಹೋಗಿ ಅಪ್ಪಅಮ್ಮಗೆ “ತಿಮ್ನಾದಲ್ಲಿ ಒಬ್ಬ ಫಿಲಿಷ್ಟಿಯ ಹುಡುಗಿನ ನೋಡ್ದೆ. ನೀವು ಹೋಗಿ ಅವಳನ್ನ ನಂಗೆ ಮದುವೆ ಮಾಡಿ ಕೊಡಿ” ಅಂದ. 3 ಅದಕ್ಕೆ ಅವನ ಅಪ್ಪಅಮ್ಮ “ನಮ್ಮ ಸಂಬಂಧಿಕರಲ್ಲಿ, ನಮ್ಮ ಜನ್ರಲ್ಲಿ ಯಾವ ಹುಡುಗಿನೂ ಸಿಗ್ಲಿಲ್ವಾ?+ ಹೋಗಿಹೋಗಿ ಸುನ್ನತಿ ಆಗದಿರೋ ಆ ಫಿಲಿಷ್ಟಿಯರ ಹುಡುಗಿನ ಮದುವೆ ಆಗಬೇಕಾ?” ಅಂದ್ರು. ಆದ್ರೆ ಸಂಸೋನ “ನನಗೋಸ್ಕರ ಅವಳನ್ನ ಕರ್ಕೊಂಡು ಬನ್ನಿ. ನನಗೆ ಸರಿಯಾದ ಜೋಡಿ”* ಅಂದ. 4 ಇದ್ರ ಹಿಂದೆ ಯೆಹೋವನ ಕೈ ಇದೆ ಅಂತ ಅವನ ಅಪ್ಪಅಮ್ಮಗೆ ಗೊತ್ತಾಗಲಿಲ್ಲ. ಆ ಕಾಲದಲ್ಲಿ ಫಿಲಿಷ್ಟಿಯರು ಇಸ್ರಾಯೇಲ್ಯರನ್ನ ಆಳ್ತಿದ್ರು. ಹಾಗಾಗಿ ಸಂಸೋನ ಫಿಲಿಷ್ಟಿಯರ ವಿರುದ್ಧ ಹೋರಾಡೋಕೆ ಅವಕಾಶ ಹುಡುಕ್ತಿದ್ದ.+

5 ಸಂಸೋನ ಅಪ್ಪಅಮ್ಮ ಜೊತೆ ತಿಮ್ನಾಗೆ ಹೋದ. ಅವನು ತಿಮ್ನಾದ ದ್ರಾಕ್ಷಿ ತೋಟಗಳ ಹತ್ರ ಹೋದಾಗ ಅಚಾನಕ್ಕಾಗಿ ಒಂದು ಸಿಂಹ* ಗರ್ಜಿಸ್ತಾ ಅವನ ಮುಂದೆ ಬಂತು! 6 ಆಗ ಯೆಹೋವನ ಪವಿತ್ರಶಕ್ತಿ ಅವನಿಗೆ ಬಲ ಕೊಡ್ತು.+ ಅವನು ಬರೀ ಕೈಯಿಂದ ಎಳೇ ಮೇಕೆನ ಸೀಳಿ ಹಾಕೋ ಹಾಗೆ ಆ ಸಿಂಹನ ಸೀಳಿ ಹಾಕಿ ಎರಡು ಭಾಗ ಮಾಡಿಬಿಟ್ಟ. ಆದ್ರೆ ಹೀಗೆ ಮಾಡಿದ್ದನ್ನ ಅಪ್ಪಅಮ್ಮಗೆ ಹೇಳಲಿಲ್ಲ. 7 ಆಮೇಲೆ ಅವನು ಆ ಹುಡುಗಿ ಹತ್ರ ಹೋಗಿ ಮಾತಾಡಿದ. ಆಗ ಇವಳೇ ನನಗೆ ಸರಿಯಾದ ಜೋಡಿ ಅಂತ ಅವನಿಗೆ ಅನಿಸ್ತು.+

8 ಸ್ವಲ್ಪ ಸಮಯ ಆದ್ಮೇಲೆ ಅವಳನ್ನ ತನ್ನ ಮನೆಗೆ ಕರ್ಕೊಂಡು ಬರೋಕೆ ತಿಮ್ನಾಗೆ ಹೋಗ್ತಿದ್ದಾಗ+ ಸಿಂಹದ ಶವ ನೋಡೋಕೆ ಆ ಕಡೆಗೆ ತಿರುಗಿದ. ಆಗ ಆ ಸತ್ತ ಸಿಂಹದ ದೇಹದಲ್ಲಿ ಜೇನುಗೂಡನ್ನ ನೋಡಿದ. 9 ಆಗ ಅವನು ಜೇನನ್ನ ಕೈಯಲ್ಲಿ ತಗೊಂಡು ತಿಂತಾ ಹೋದ. ಅವನ ಅಪ್ಪಅಮ್ಮ ಹತ್ರ ಬಂದು ಅವ್ರಿಗೂ ಜೇನು ಕೊಟ್ಟ. ಆದ್ರೆ ಅದನ್ನ ಸತ್ತ ಸಿಂಹದ ದೇಹದಿಂದ ತೆಗೆದಿರೋದು ಅಂತ ಹೇಳಲಿಲ್ಲ.

10 ಆಮೇಲೆ ಸಂಸೋನ ಅವನ ಅಪ್ಪನ ಜೊತೆ ಆ ಹುಡುಗಿನ ನೋಡೋಕೆ ಅವಳ ಮನೆಗೆ ಹೋದ. ಸಂಸೋನ ಅಲ್ಲಿ ಒಂದು ಔತಣ ಏರ್ಪಾಡು ಮಾಡ್ದ. ಯಾಕಂದ್ರೆ ಆ ಸಮಯದಲ್ಲಿ ಯುವಕರು ಹೀಗೆ ಮಾಡೋ ಪದ್ಧತಿ ಇತ್ತು. 11 ಮದುಮಗ ಸಂಸೋನ ಔತಣಕ್ಕೆ ಬಂದಾಗ ಅವನ ಜೊತೆ ಇರೋಕೆ 30 ಯುವಕರನ್ನ ಕರ್ಕೊಂಡು ಬಂದ್ರು. 12 ಆಗ ಸಂಸೋನ “ಒಂದು ಒಗಟು ಹೇಳ್ತೀನಿ. ಅದನ್ನ ಔತಣದ ಈ ಏಳು ದಿನದ ಒಳಗೆ ಬಿಡಿಸಿದ್ರೆ ನಿಮಗೆ 30 ನಾರಿನ ಬಟ್ಟೆ, 30 ಜೊತೆ ಬಟ್ಟೆ ಕೊಡ್ತೀನಿ. 13 ಉತ್ತರ ಕೊಡೋಕೆ ಆಗದಿದ್ರೆ ನೀವು 30 ನಾರಿನ ಬಟ್ಟೆ, 30 ಜೊತೆ ಬಟ್ಟೆ ನನಗೆ ಕೊಡಬೇಕು” ಅಂದ. ಅವರು “ನೀನು ಮೊದ್ಲು ಒಗಟು ಹೇಳು, ನೋಡೋಣ” ಅಂದ್ರು. 14 ಆಗ ಅವನು:

“ಎಲ್ರನ್ನ ತಿಂದುಹಾಕುತ್ತೆ, ಆದ್ರೆ ಅದ್ರಿಂದಾನೇ ತಿನ್ನೋಕೆ ಸಿಕ್ತು,

ಅದ್ರ ಶಕ್ತಿ ಅಪಾರ, ಅದ್ರಿಂದ ಬಂದ ಸಿಹಿ ಮಧುರ.”+

ಮೂರು ದಿನ ಆದ್ರೂ ಅವ್ರಿಗೆ ಒಗಟನ್ನ ಬಿಡಿಸೋಕೆ ಆಗಲಿಲ್ಲ. 15 ನಾಲ್ಕನೇ ದಿನ ಅವರು ಸಂಸೋನನ ಹೆಂಡತಿ ಹತ್ರ ಹೋಗಿ “ಹೇಗಾದ್ರೂ ಮಾಡಿ ನಿನ್ನ ಗಂಡನ ಹತ್ರ ಆ ಒಗಟಿನ ಅರ್ಥ ತಿಳ್ಕೊ.+ ಇಲ್ಲಾಂದ್ರೆ ನಿನ್ನನ್ನ, ನಿನ್ನ ಅಪ್ಪನ ಕುಟುಂಬದವ್ರನ್ನ ಸುಟ್ಟು ಹಾಕ್ತೀವಿ. ನಮ್ಮ ಆಸ್ತಿ ಕಿತ್ಕೊಳ್ಳೋಕೆ ನಮ್ಮನ್ನ ಇಲ್ಲಿಗೆ ಕರ್ಕೊಂಡು ಬಂದ್ರಾ?” ಅಂದ್ರು. 16 ಆಗ ಅವಳು ಸಂಸೋನನ ಹತ್ರ ಹೋಗಿ ಅಳ್ತಾ “ನಿಂಗೆ ನಾನಂದ್ರೆ ಇಷ್ಟ ಇಲ್ಲ, ನನ್ನನ್ನ ಪ್ರೀತಿಸಲ್ಲ.+ ನನ್ನ ಜನ್ರಿಗೆ ಒಗಟು ಹೇಳ್ದೆ. ಅದ್ರ ಅರ್ಥಾನೇ ನಂಗೆ ಹೇಳಲಿಲ್ಲ” ಅಂದಳು. ಅದಕ್ಕೆ ಅವನು “ಅದನ್ನ ನನ್ನ ಅಪ್ಪಅಮ್ಮಾಗೇ ಹೇಳಿಲ್ಲ! ಇನ್ನು ನಿಂಗೆ ಹೇಳ್ತೀನಾ?” ಅಂದ. 17 ಆದ್ರೆ ಅವಳು ಔತಣದ ಆ ಏಳೂ ದಿನ ಅವನ ಹತ್ರ ಹೋಗಿ ಅಳ್ತಾ ಇದ್ದಳು. ಕೊನೆಗೆ ಏಳನೇ ದಿನ ಅದನ್ನ ಹೇಳಿಬಿಟ್ಟ. ಯಾಕಂದ್ರೆ ಅವಳು ಅಷ್ಟು ಕಾಡಿಸಿದ್ದಳು. ಅವಳು ಆ ಒಗಟಿನ ಅರ್ಥನ ಆ ಯುವಕರಿಗೆ ಹೇಳಿದಳು.+ 18 ಏಳನೇ ದಿನ ಸೂರ್ಯ ಮುಳುಗೋ ಮುಂಚೆ* ಪಟ್ಟಣದ ಯುವಕರು

“ಸಿಂಹಕ್ಕಿಂತ ಅಪಾರ ಶಕ್ತಿ ಯಾರಿಗಿದೆ,

ಜೇನಿಗಿಂತ ಮಧುರ ಯಾವುದಿದೆ?”+

ಅಂದ್ರು. ಆಗ ಅವನು

“ನೀವು ನನ್ನ ಹಸುವಿಂದ* ಉಳದಿದ್ರೆ,+

ಒಗಟು ಬಿಡಿಸೋಕೆ ನಿಮಗೆ ಕಷ್ಟ ಆಗ್ತಿತ್ತು” ಅಂದ.

19 ಆಮೇಲೆ ಯೆಹೋವನ ಪವಿತ್ರಶಕ್ತಿ ಅವನಲ್ಲಿ ಬಲ ತುಂಬ್ತು.+ ಅವನು ಅಷ್ಕೆಲೋನಿಗೆ ಹೋಗಿ+ ಅಲ್ಲಿನ 30 ಗಂಡಸ್ರನ್ನ ಕೊಂದು ಅವ್ರ ಬಟ್ಟೆಗಳನ್ನ ತಗೊಂಡು ಆ ಒಗಟು ಬಿಡಿಸಿದ್ದ ಯುವಕರಿಗೆ ಕೊಟ್ಟ.+ ಅವನು ತುಂಬ ಕೋಪದಿಂದ ಅಪ್ಪನ ಮನೆಗೆ ವಾಪಸ್‌ ಹೋದ.

20 ಆಮೇಲೆ ಸಂಸೋನನ ಹೆಂಡತಿಯನ್ನ+ ಆ ಔತಣದಲ್ಲಿದ್ದ ಒಬ್ಬ ಯುವಕನಿಗೆ ಕೊಟ್ಟು ಮದುವೆ ಮಾಡಿದ್ರು.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ