ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ವಿಮೋಚನಕಾಂಡ 12
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ವಿಮೋಚನಕಾಂಡ ಮುಖ್ಯಾಂಶಗಳು

      • ಪಸ್ಕ ಶುರು ಆಗಿದ್ದು (1-28)

        • ಬಾಗಿಲಿನ ಚೌಕಟ್ಟಿಗೆ ರಕ್ತ ಹಚ್ಚೋದು (7)

      • ಶಿಕ್ಷೆ 10: ಮೊದಲ್ನೇ ಗಂಡು ಮಕ್ಕಳ ಸಾವು (29-32)

      • ಇಸ್ರಾಯೇಲ್ಯರು ಈಜಿಪ್ಟಿಂದ ಹೊರಟ್ರು (33-42)

        • 430 ವರ್ಷ ಮುಗಿತು (40, 41)

      • ಪಸ್ಕದ ಬಗ್ಗೆ ನಿರ್ದೇಶನ (43-51)

ವಿಮೋಚನಕಾಂಡ 12:2

ಮಾರ್ಜಿನಲ್ ರೆಫರೆನ್ಸ್

  • +ವಿಮೋ 13:4; 23:15; ಅರ 28:16; ಧರ್ಮೋ 16:1

ವಿಮೋಚನಕಾಂಡ 12:3

ಪಾದಟಿಪ್ಪಣಿ

  • *

    ಅಕ್ಷ. “ತಂದೆಯ ಮನೆಗಾಗಿ.”

ಮಾರ್ಜಿನಲ್ ರೆಫರೆನ್ಸ್

  • +ಯೋಹಾ 1:29; 1ಕೊರಿಂ 5:7; ಪ್ರಕ 5:6

ವಿಮೋಚನಕಾಂಡ 12:5

ಮಾರ್ಜಿನಲ್ ರೆಫರೆನ್ಸ್

  • +ಯಾಜ 22:18-20; ಧರ್ಮೋ 17:1; 1ಪೇತ್ರ 1:19

ವಿಮೋಚನಕಾಂಡ 12:6

ಪಾದಟಿಪ್ಪಣಿ

  • *

    ಅಕ್ಷ. “ಎರಡು ಸಂಜೆಗಳ ಮಧ್ಯ.” ಇದು, ಸೂರ್ಯ ಮುಳುಗಿದ ಮೇಲೆ ಪೂರ್ತಿ ಕತ್ತಲಾಗೋ ಮುಂಚೆ ಇರಬೇಕು.

  • *

    ಅಕ್ಷ. “ಇಸ್ರಾಯೇಲ್‌ ಸಮೂಹದ ಇಡೀ ಸಭೆ.”

ಮಾರ್ಜಿನಲ್ ರೆಫರೆನ್ಸ್

  • +ಅರ 28:16
  • +ವಿಮೋ 12:18; ಯಾಜ 23:5; ಧರ್ಮೋ 16:6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    6/15/2014, ಪು. 22

    12/15/2013, ಪು. 19-20

    2/1/1991, ಪು. 23

ವಿಮೋಚನಕಾಂಡ 12:7

ಮಾರ್ಜಿನಲ್ ರೆಫರೆನ್ಸ್

  • +1ಕೊರಿಂ 5:7; ಇಬ್ರಿ 11:28

ವಿಮೋಚನಕಾಂಡ 12:8

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 16:6, 7
  • +ವಿಮೋ 13:3; 34:25; ಧರ್ಮೋ 16:3; 1ಕೊರಿಂ 5:8
  • +ಅರ 9:11

ವಿಮೋಚನಕಾಂಡ 12:9

ಪಾದಟಿಪ್ಪಣಿ

  • *

    ಅಂದ್ರೆ, ಹಸಿಯಾಗಿ ಅಥವಾ ಅರ್ಧ ಬೇಯಿಸಿ.

ವಿಮೋಚನಕಾಂಡ 12:10

ಮಾರ್ಜಿನಲ್ ರೆಫರೆನ್ಸ್

  • +ಯಾಜ 7:15; 22:29, 30; ಧರ್ಮೋ 16:4

ವಿಮೋಚನಕಾಂಡ 12:11

ಪಾದಟಿಪ್ಪಣಿ

  • *

    ಇದ್ರ ಅರ್ಥ “ದಾಟಿ ಹೋಗು.” ಪದವಿವರಣೆಯಲ್ಲಿ “ಪಸ್ಕ” ನೋಡಿ.

ವಿಮೋಚನಕಾಂಡ 12:12

ಮಾರ್ಜಿನಲ್ ರೆಫರೆನ್ಸ್

  • +ವಿಮೋ 11:4, 5; 12:29
  • +ಅರ 33:4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 7/2020, ಪು. 8

ವಿಮೋಚನಕಾಂಡ 12:13

ಪಾದಟಿಪ್ಪಣಿ

  • *

    ಅಕ್ಷ. “ನಿಮ್ಮನ್ನ ದಾಟಿಹೋಗ್ತೀನಿ.”

ಮಾರ್ಜಿನಲ್ ರೆಫರೆನ್ಸ್

  • +ವಿಮೋ 8:22; 9:4, 26; 10:23; 11:7

ವಿಮೋಚನಕಾಂಡ 12:15

ಮಾರ್ಜಿನಲ್ ರೆಫರೆನ್ಸ್

  • +ವಿಮೋ 23:15; ಯಾಜ 23:6

ವಿಮೋಚನಕಾಂಡ 12:16

ಮಾರ್ಜಿನಲ್ ರೆಫರೆನ್ಸ್

  • +ಯಾಜ 23:8

ವಿಮೋಚನಕಾಂಡ 12:17

ಪಾದಟಿಪ್ಪಣಿ

  • *

    ಅಕ್ಷ. “ನಿಮ್ಮ ಸೈನ್ಯಗಳನ್ನ.”

ಮಾರ್ಜಿನಲ್ ರೆಫರೆನ್ಸ್

  • +ಯಾಜ 23:6; ಲೂಕ 22:1; 1ಕೊರಿಂ 5:8

ವಿಮೋಚನಕಾಂಡ 12:18

ಮಾರ್ಜಿನಲ್ ರೆಫರೆನ್ಸ್

  • +ಯಾಜ 23:5, 6

ವಿಮೋಚನಕಾಂಡ 12:19

ಮಾರ್ಜಿನಲ್ ರೆಫರೆನ್ಸ್

  • +ಅರ 9:14
  • +ಧರ್ಮೋ 16:3; 1ಕೊರಿಂ 5:7

ವಿಮೋಚನಕಾಂಡ 12:21

ಮಾರ್ಜಿನಲ್ ರೆಫರೆನ್ಸ್

  • +ವಿಮೋ 3:16; ಅರ 11:16

ವಿಮೋಚನಕಾಂಡ 12:22

ಪಾದಟಿಪ್ಪಣಿ

  • *

    ಪದವಿವರಣೆ ನೋಡಿ.

ವಿಮೋಚನಕಾಂಡ 12:23

ಪಾದಟಿಪ್ಪಣಿ

  • *

    ಅಕ್ಷ. “ಬಾಗಿಲು ದಾಟಿ ಹೋಗ್ತಾನೆ.”

ಮಾರ್ಜಿನಲ್ ರೆಫರೆನ್ಸ್

  • +ಇಬ್ರಿ 11:28

ವಿಮೋಚನಕಾಂಡ 12:24

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 16:3

ವಿಮೋಚನಕಾಂಡ 12:25

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 5:10

ವಿಮೋಚನಕಾಂಡ 12:26

ಮಾರ್ಜಿನಲ್ ರೆಫರೆನ್ಸ್

  • +ವಿಮೋ 13:3, 8; ಧರ್ಮೋ 6:6, 7

ವಿಮೋಚನಕಾಂಡ 12:28

ಮಾರ್ಜಿನಲ್ ರೆಫರೆನ್ಸ್

  • +ಇಬ್ರಿ 11:28

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    12/15/1995, ಪು. 12

ವಿಮೋಚನಕಾಂಡ 12:29

ಪಾದಟಿಪ್ಪಣಿ

  • *

    ಅಕ್ಷ. “ಗುಂಡಿ-ಮನೆ.”

ಮಾರ್ಜಿನಲ್ ರೆಫರೆನ್ಸ್

  • +ಅರ 33:4; ಕೀರ್ತ 78:51; 105:36
  • +ಆದಿ 15:14; ವಿಮೋ 11:4, 5; ಅರ 3:13; ಕೀರ್ತ 135:8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/15/2004, ಪು. 25-26

ವಿಮೋಚನಕಾಂಡ 12:30

ಮಾರ್ಜಿನಲ್ ರೆಫರೆನ್ಸ್

  • +ವಿಮೋ 11:6

ವಿಮೋಚನಕಾಂಡ 12:31

ಮಾರ್ಜಿನಲ್ ರೆಫರೆನ್ಸ್

  • +ವಿಮೋ 10:28, 29
  • +ವಿಮೋ 3:19, 20; 6:1; 10:8-11; ಕೀರ್ತ 105:38

ವಿಮೋಚನಕಾಂಡ 12:32

ಮಾರ್ಜಿನಲ್ ರೆಫರೆನ್ಸ್

  • +ವಿಮೋ 10:26

ವಿಮೋಚನಕಾಂಡ 12:33

ಮಾರ್ಜಿನಲ್ ರೆಫರೆನ್ಸ್

  • +ವಿಮೋ 10:7
  • +ವಿಮೋ 12:11

ವಿಮೋಚನಕಾಂಡ 12:35

ಮಾರ್ಜಿನಲ್ ರೆಫರೆನ್ಸ್

  • +ಆದಿ 15:14; ವಿಮೋ 3:21; 11:2; ಕೀರ್ತ 105:37

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/1/1999, ಪು. 30

ವಿಮೋಚನಕಾಂಡ 12:36

ಮಾರ್ಜಿನಲ್ ರೆಫರೆನ್ಸ್

  • +ವಿಮೋ 3:22

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/15/2004, ಪು. 26

    11/1/1999, ಪು. 30

    12/1/1994, ಪು. 13

ವಿಮೋಚನಕಾಂಡ 12:37

ಪಾದಟಿಪ್ಪಣಿ

  • *

    ಅಕ್ಷ. “ಕಾಲುನಡಿಗೆಯಲ್ಲಿ ಹೊರಟ ಗಂಡಸರು.” ಇದು, ಸೈನಿಕರಾಗೋಕೆ ಯೋಗ್ಯರಾದ ಗಂಡಸರನ್ನ ಸೂಚಿಸುತ್ತಿರಬೇಕು.

ಮಾರ್ಜಿನಲ್ ರೆಫರೆನ್ಸ್

  • +ಆದಿ 47:11; ವಿಮೋ 1:11
  • +ಅರ 33:5
  • +ಆದಿ 12:1, 2; 15:1, 5; 46:2, 3; ವಿಮೋ 1:7; ಅರ 2:32

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/1/1990, ಪು. 13

ವಿಮೋಚನಕಾಂಡ 12:38

ಪಾದಟಿಪ್ಪಣಿ

  • *

    ಅಂದ್ರೆ, ಇಸ್ರಾಯೇಲ್ಯರಲ್ಲದ ಬೇರೆ ಜನ್ರು ಮತ್ತು ಈಜಿಪ್ಟಿನವರು.

ಮಾರ್ಜಿನಲ್ ರೆಫರೆನ್ಸ್

  • +ಅರ 11:4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    10/2023, ಪು. 30-31

    ಕಾವಲಿನಬುರುಜು,

    11/15/2014, ಪು. 20

    7/15/1992, ಪು. 8

    5/1/1990, ಪು. 13

ವಿಮೋಚನಕಾಂಡ 12:39

ಮಾರ್ಜಿನಲ್ ರೆಫರೆನ್ಸ್

  • +ವಿಮೋ 12:31

ವಿಮೋಚನಕಾಂಡ 12:40

ಮಾರ್ಜಿನಲ್ ರೆಫರೆನ್ಸ್

  • +ಗಲಾ 3:17
  • +ಆದಿ 46:2, 3; 47:27; ಅಕಾ 13:17

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/15/2004, ಪು. 26

ವಿಮೋಚನಕಾಂಡ 12:41

ಪಾದಟಿಪ್ಪಣಿ

  • *

    ಅಕ್ಷ. “ಸೈನ್ಯಗಳು.”

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    7/2016, ಪು. 14-15

ವಿಮೋಚನಕಾಂಡ 12:42

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 16:1

ವಿಮೋಚನಕಾಂಡ 12:43

ಮಾರ್ಜಿನಲ್ ರೆಫರೆನ್ಸ್

  • +ಯಾಜ 22:10

ವಿಮೋಚನಕಾಂಡ 12:44

ಮಾರ್ಜಿನಲ್ ರೆಫರೆನ್ಸ್

  • +ಆದಿ 17:12, 23

ವಿಮೋಚನಕಾಂಡ 12:46

ಮಾರ್ಜಿನಲ್ ರೆಫರೆನ್ಸ್

  • +ಅರ 9:12; ಕೀರ್ತ 34:19, 20; ಯೋಹಾ 19:33, 36

ವಿಮೋಚನಕಾಂಡ 12:48

ಮಾರ್ಜಿನಲ್ ರೆಫರೆನ್ಸ್

  • +ಅರ 9:14

ವಿಮೋಚನಕಾಂಡ 12:49

ಮಾರ್ಜಿನಲ್ ರೆಫರೆನ್ಸ್

  • +ಯಾಜ 24:22; ಅರ 15:16

ವಿಮೋಚನಕಾಂಡ 12:50

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    12/15/1995, ಪು. 12

ವಿಮೋಚನಕಾಂಡ 12:51

ಪಾದಟಿಪ್ಪಣಿ

  • *

    ಅಕ್ಷ. “ಇಸ್ರಾಯೇಲ್ಯರನ್ನ ಅವರ ಸೈನ್ಯಗಳ ಜೊತೆ.”

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/1/1990, ಪು. 13

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ವಿಮೋ. 12:2ವಿಮೋ 13:4; 23:15; ಅರ 28:16; ಧರ್ಮೋ 16:1
ವಿಮೋ. 12:3ಯೋಹಾ 1:29; 1ಕೊರಿಂ 5:7; ಪ್ರಕ 5:6
ವಿಮೋ. 12:5ಯಾಜ 22:18-20; ಧರ್ಮೋ 17:1; 1ಪೇತ್ರ 1:19
ವಿಮೋ. 12:6ಅರ 28:16
ವಿಮೋ. 12:6ವಿಮೋ 12:18; ಯಾಜ 23:5; ಧರ್ಮೋ 16:6
ವಿಮೋ. 12:71ಕೊರಿಂ 5:7; ಇಬ್ರಿ 11:28
ವಿಮೋ. 12:8ಧರ್ಮೋ 16:6, 7
ವಿಮೋ. 12:8ವಿಮೋ 13:3; 34:25; ಧರ್ಮೋ 16:3; 1ಕೊರಿಂ 5:8
ವಿಮೋ. 12:8ಅರ 9:11
ವಿಮೋ. 12:10ಯಾಜ 7:15; 22:29, 30; ಧರ್ಮೋ 16:4
ವಿಮೋ. 12:12ವಿಮೋ 11:4, 5; 12:29
ವಿಮೋ. 12:12ಅರ 33:4
ವಿಮೋ. 12:13ವಿಮೋ 8:22; 9:4, 26; 10:23; 11:7
ವಿಮೋ. 12:15ವಿಮೋ 23:15; ಯಾಜ 23:6
ವಿಮೋ. 12:16ಯಾಜ 23:8
ವಿಮೋ. 12:17ಯಾಜ 23:6; ಲೂಕ 22:1; 1ಕೊರಿಂ 5:8
ವಿಮೋ. 12:18ಯಾಜ 23:5, 6
ವಿಮೋ. 12:19ಅರ 9:14
ವಿಮೋ. 12:19ಧರ್ಮೋ 16:3; 1ಕೊರಿಂ 5:7
ವಿಮೋ. 12:21ವಿಮೋ 3:16; ಅರ 11:16
ವಿಮೋ. 12:23ಇಬ್ರಿ 11:28
ವಿಮೋ. 12:24ಧರ್ಮೋ 16:3
ವಿಮೋ. 12:25ಯೆಹೋ 5:10
ವಿಮೋ. 12:26ವಿಮೋ 13:3, 8; ಧರ್ಮೋ 6:6, 7
ವಿಮೋ. 12:28ಇಬ್ರಿ 11:28
ವಿಮೋ. 12:29ಅರ 33:4; ಕೀರ್ತ 78:51; 105:36
ವಿಮೋ. 12:29ಆದಿ 15:14; ವಿಮೋ 11:4, 5; ಅರ 3:13; ಕೀರ್ತ 135:8
ವಿಮೋ. 12:30ವಿಮೋ 11:6
ವಿಮೋ. 12:31ವಿಮೋ 10:28, 29
ವಿಮೋ. 12:31ವಿಮೋ 3:19, 20; 6:1; 10:8-11; ಕೀರ್ತ 105:38
ವಿಮೋ. 12:32ವಿಮೋ 10:26
ವಿಮೋ. 12:33ವಿಮೋ 10:7
ವಿಮೋ. 12:33ವಿಮೋ 12:11
ವಿಮೋ. 12:35ಆದಿ 15:14; ವಿಮೋ 3:21; 11:2; ಕೀರ್ತ 105:37
ವಿಮೋ. 12:36ವಿಮೋ 3:22
ವಿಮೋ. 12:37ಆದಿ 47:11; ವಿಮೋ 1:11
ವಿಮೋ. 12:37ಅರ 33:5
ವಿಮೋ. 12:37ಆದಿ 12:1, 2; 15:1, 5; 46:2, 3; ವಿಮೋ 1:7; ಅರ 2:32
ವಿಮೋ. 12:38ಅರ 11:4
ವಿಮೋ. 12:39ವಿಮೋ 12:31
ವಿಮೋ. 12:40ಗಲಾ 3:17
ವಿಮೋ. 12:40ಆದಿ 46:2, 3; 47:27; ಅಕಾ 13:17
ವಿಮೋ. 12:42ಧರ್ಮೋ 16:1
ವಿಮೋ. 12:43ಯಾಜ 22:10
ವಿಮೋ. 12:44ಆದಿ 17:12, 23
ವಿಮೋ. 12:46ಅರ 9:12; ಕೀರ್ತ 34:19, 20; ಯೋಹಾ 19:33, 36
ವಿಮೋ. 12:48ಅರ 9:14
ವಿಮೋ. 12:49ಯಾಜ 24:22; ಅರ 15:16
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
  • 31
  • 32
  • 33
  • 34
  • 35
  • 36
  • 37
  • 38
  • 39
  • 40
  • 41
  • 42
  • 43
  • 44
  • 45
  • 46
  • 47
  • 48
  • 49
  • 50
  • 51
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ವಿಮೋಚನಕಾಂಡ 12:1-51

ವಿಮೋಚನಕಾಂಡ

12 ಈಜಿಪ್ಟ್‌ ದೇಶದಲ್ಲಿದ್ದ ಮೋಶೆ ಆರೋನರಿಗೆ ಯೆಹೋವ ಹೀಗಂದನು: 2 “ಈ ತಿಂಗಳು ನಿಮಗೆ ವರ್ಷದ ಎಲ್ಲ ತಿಂಗಳಲ್ಲಿ ಮೊದಲನೇ ತಿಂಗಳಾಗಿರುತ್ತೆ.+ 3 ನೀವು ಇಸ್ರಾಯೇಲ್ಯರ ಇಡೀ ಸಮೂಹಕ್ಕೆ ಹೀಗೆ ಹೇಳಿ: ‘ಈ ತಿಂಗಳ ಹತ್ತನೇ ದಿನ ನಿಮ್ಮಲ್ಲಿ ಪ್ರತಿಯೊಬ್ರು ತಮ್ಮತಮ್ಮ ಕುಟುಂಬಕ್ಕಾಗಿ,* ಒಂದು ಮನೆಗೆ ಒಂದು ಕುರಿ+ ತಗೋಬೇಕು. 4 ಆದ್ರೆ ನಿಮ್ಮ ಕುಟುಂಬ ಚಿಕ್ಕದಾಗಿದ್ದು ಒಂದು ಇಡೀ ಕುರಿ ತಿನ್ನೋಕೆ ಆಗದಿದ್ರೆ ನೀವು, ನಿಮ್ಮ ಪಕ್ಕದ ಮನೆಯ ಕುಟುಂಬ ಸೇರಿ ನಿಮ್ಮ ಮನೇಲಿ ತಿನ್ನಬೇಕು. ಹೀಗೆ ಮಾಡುವಾಗ ಒಟ್ಟು ಎಷ್ಟು ಜನ ಇದ್ದಾರೆ, ಒಬ್ಬೊಬ್ರು ಎಷ್ಟೆಷ್ಟು ಮಾಂಸ ತಿಂದ್ರು ಅನ್ನೋದನ್ನ ಲೆಕ್ಕಮಾಡಬೇಕು. 5 ನೀವು ಗಂಡು ಕುರಿಮರಿಯನ್ನೇ ತಗೋಬೇಕು, ಅದು ಒಂದು ವರ್ಷದ್ದಾಗಿರಬೇಕು. ಅದ್ರಲ್ಲಿ ಯಾವುದೇ ದೋಷ ಇರಬಾರದು.+ ಕುರಿಮರಿ ಬದಲು ಆಡುಮರಿಯನ್ನ ಸಹ ತಗೋಬಹುದು. 6 ಅದನ್ನ ಈ ತಿಂಗಳ 14ನೇ ದಿನದ ತನಕ ಚೆನ್ನಾಗಿ ನೋಡ್ಕೊಬೇಕು.+ ಅದೇ ದಿನ ಸೂರ್ಯ ಮುಳುಗಿದ ಮೇಲೆ* ಇಸ್ರಾಯೇಲ್‌ ಸಭೆಯ ಪ್ರತಿಯೊಂದು ಕುಟುಂಬ* ತಮ್ಮತಮ್ಮ ಕುರಿ ಕಡಿಬೇಕು.+ 7 ಅದ್ರ ರಕ್ತದಲ್ಲಿ ಸ್ವಲ್ಪ ತಗೊಂಡು ಯಾವ ಮನೇಲಿ ಕುರಿ ಮಾಂಸ ತಿಂತಾರೋ ಆ ಮನೆ ಬಾಗಿಲ ಚೌಕಟ್ಟಿನ ಎರಡೂ ಬದಿಗಳಿಗೆ ಮತ್ತು ಮೇಲೆ ಹಚ್ಚಬೇಕು.+

8 ಕುರಿ ಮಾಂಸನ ಆ ರಾತ್ರಿನೇ ತಿನ್ನಬೇಕು.+ ಅದನ್ನ ಬೆಂಕಿಯಲ್ಲಿ ಸುಟ್ಟು ಹುಳಿಯಿಲ್ಲದ ರೊಟ್ಟಿ+ ಮತ್ತು ಕಹಿಯಾದ ಸೊಪ್ಪಿನ ಜೊತೆ+ ತಿನ್ನಬೇಕು. 9 ಕುರಿಯ ಯಾವ ಭಾಗನೂ ನೀವು ಹಸಿಯಾಗಿ* ತಿನ್ನಬಾರದು, ನೀರಲ್ಲಿ ಬೇಯಿಸಿ ತಿನ್ನಬಾರದು. ಅದ್ರ ತಲೆ, ಕಾಲು, ಒಳಗಿನ ಅಂಗಗಳ ಸಮೇತ ಅದನ್ನೆಲ್ಲ ಬೆಂಕಿಯಲ್ಲಿ ಸುಟ್ಟು ತಿನ್ನಬೇಕು. 10 ಅದ್ರಲ್ಲಿ ಸ್ವಲ್ಪನೂ ಬೆಳಿಗ್ಗೆಗಂತ ಉಳಿಸಬಾರದು. ಬೆಳಿಗ್ಗೆ ಏನಾದ್ರೂ ಮಿಕ್ಕಿದ್ರೆ ಅದನ್ನ ಬೆಂಕಿಯಲ್ಲಿ ಸುಟ್ಟುಬಿಡಬೇಕು.+ 11 ನೀವು ಸೊಂಟಪಟ್ಟಿ ಕಟ್ಕೊಂಡು, ಕಾಲಿಗೆ ಚಪ್ಪಲಿ ಹಾಕೊಂಡು, ಕೈಯಲ್ಲಿ ಕೋಲು ಹಿಡಿದು ಅವಸರ ಅವಸರದಿಂದ ಅದನ್ನ ತಿನ್ನಬೇಕು. ಇದು ಯೆಹೋವನ ಘನತೆಗಾಗಿ ಆಚರಿಸೋ ಪಸ್ಕ* ಹಬ್ಬ. 12 ಯಾಕಂದ್ರೆ ನಾನು ಆ ರಾತ್ರಿ ಈಜಿಪ್ಟ್‌ ದೇಶವನ್ನ ದಾಟಿ ಹೋಗ್ತೀನಿ. ಆಗ ಈಜಿಪ್ಟ್‌ ದೇಶದ ಎಲ್ಲ ಮನುಷ್ಯರ ಮೊದಲನೇ ಮಕ್ಕಳನ್ನ, ಎಲ್ಲ ಪ್ರಾಣಿಗಳ ಮೊದಲನೇ ಮರಿಗಳನ್ನ ಕೊಲ್ತೀನಿ.+ ನಾನು ಈಜಿಪ್ಟಿನ ಎಲ್ಲ ದೇವರುಗಳಿಗೆ ಶಿಕ್ಷೆ ಕೊಡ್ತೀನಿ.+ ನಾನು ಯೆಹೋವ. 13 ನಿಮ್ಮ ಬಾಗಿಲ ಚೌಕಟ್ಟಿನ ಮೇಲಿರೋ ರಕ್ತ ನೀವಿರೋ ಮನೆಗಳಿಗೆ ಗುರುತಾಗಿರುತ್ತೆ. ನಾನು ಆ ರಕ್ತದ ಗುರುತು ನೋಡಿ ನಿಮ್ಮ ಮನೆ ಬಿಟ್ಟು ಮುಂದೆ ಹೋಗ್ತೀನಿ.* ನಾನು ಈಜಿಪ್ಟ್‌ ದೇಶಕ್ಕೆ ಶಿಕ್ಷೆ ಕೊಡುವಾಗ ಆ ವಿಪತ್ತು ನಿಮ್ಮ ಮೇಲೆ ಬರಲ್ಲ, ನೀವು ನಾಶ ಆಗೋದೂ ಇಲ್ಲ.+

14 ಆ ದಿನ ನೀವು ಸ್ಮರಿಸಬೇಕಾದ ದಿನವಾಗಿರುತ್ತೆ. ಅವತ್ತು ನೀವು ಯೆಹೋವನ ಘನತೆಗಾಗಿ ಹಬ್ಬ ಆಚರಿಸಬೇಕು. ಇದನ್ನ ಎಲ್ಲ ಪೀಳಿಗೆಯವರು ಆಚರಿಸಬೇಕು. ಇದು ನಿಮಗಿರೋ ಶಾಶ್ವತ ನಿಯಮ. 15 ಏಳು ದಿನ ನೀವು ಹುಳಿ ಇಲ್ಲದ ರೊಟ್ಟಿಗಳನ್ನ ತಿನ್ನಬೇಕು.+ ಮೊದಲನೇ ದಿನದಲ್ಲೇ ಹುಳಿಹಿಟ್ಟನ್ನೆಲ್ಲ ನಿಮ್ಮ ಮನೆಯಿಂದ ತೆಗೆದುಹಾಕಬೇಕು. ಮೊದಲನೇ ದಿನದಿಂದ ಏಳನೇ ದಿನ ತನಕ ಹುಳಿ ಸೇರಿಸಿದ್ದನ್ನ ಯಾರಾದ್ರೂ ತಿಂದ್ರೆ ಅವನನ್ನ ಸಾಯಿಸಬೇಕು. 16 ನೀವು ಮೊದಲನೇ ದಿನ ದೇವರ ಆರಾಧನೆ ಮಾಡೋಕೆ ಸೇರಿಬರಬೇಕು. ಏಳನೇ ದಿನ ಇನ್ನೊಂದು ಸಾರಿ ಎಲ್ರೂ ಒಟ್ಟು ಸೇರಬೇಕು. ಆ ದಿನಗಳಲ್ಲಿ ಯಾವ ಕೆಲಸನೂ ಮಾಡಬಾರದು.+ ಪ್ರತಿಯೊಬ್ರಿಗೆ ಬೇಕಾಗುವಷ್ಟು ಆಹಾರ ಮಾತ್ರ ತಯಾರಿಸಬಹುದು.

17 ಹುಳಿ ಇಲ್ಲದ ರೊಟ್ಟಿ ಹಬ್ಬನ ನೀವು ಆಚರಿಸ್ಲೇ ಬೇಕು.+ ಯಾಕಂದ್ರೆ ಆ ದಿನ ನಾನು ನಿಮ್ಮ ದೊಡ್ಡ ಸಮೂಹನ* ಈಜಿಪ್ಟಿಂದ ಕರ್ಕೊಂಡು ಬರ್ತಿನಿ. ಎಲ್ಲ ಪೀಳಿಗೆಯವರು ಆ ದಿನವನ್ನ ಆಚರಿಸಬೇಕು. ಇದು ನಿಮಗಿರೋ ಶಾಶ್ವತ ನಿಯಮ. 18 ಮೊದಲನೇ ತಿಂಗಳ 14ನೇ ದಿನದ ಸಂಜೆಯಿಂದ ಹಿಡಿದು ಅದೇ ತಿಂಗಳ 21ನೇ ದಿನದ ಸಂಜೆ ತನಕ ನೀವು ಹುಳಿ ಇಲ್ಲದ ರೊಟ್ಟಿ ತಿನ್ನಬೇಕು.+ 19 ಏಳು ದಿನ ನಿಮ್ಮ ಮನೆಗಳಲ್ಲಿ ಹುಳಿಹಿಟ್ಟು ಇರಲೇಬಾರದು. ಆ ಏಳು ದಿನ ವಿದೇಶದವನಾಗಲಿ ಸ್ವದೇಶದವನಾಗಲಿ+ ಹುಳಿ ಸೇರಿಸಿದ್ದನ್ನ ತಿಂದ್ರೆ ಅವನನ್ನ ಸಾಯಿಸಬೇಕು.+ 20 ಹುಳಿ ಸೇರಿಸಿರೋ ಯಾವುದನ್ನೂ ತಿನ್ನಬಾರದು. ನಿಮ್ಮೆಲ್ರ ಮನೇಲಿ ಹುಳಿ ಇಲ್ಲದ ರೊಟ್ಟಿಗಳನ್ನೇ ತಿನ್ನಬೇಕು.’”

21 ಮೋಶೆ ಕೂಡಲೇ ಇಸ್ರಾಯೇಲ್ಯರ ಎಲ್ಲ ಹಿರಿಯರನ್ನ+ ಕರೆದು ಅವರಿಗೆ ಹೀಗಂದ: “ನೀವು ಹೋಗಿ ನಿಮ್ಮನಿಮ್ಮ ಕುಟುಂಬಕ್ಕಾಗಿ ಒಂದೊಂದು ಕುರಿಮರಿಯನ್ನೋ ಆಡಿನ ಮರಿಯನ್ನೋ ಆರಿಸ್ಕೊಳ್ಳಿ. ಪಸ್ಕದ ಬಲಿ ಆಗಿರೋ ಆ ಮರಿನ ಕೊಯ್ಯಿರಿ. 22 ಆಮೇಲೆ ಅದ್ರ ರಕ್ತನ ಬೋಗುಣಿಯಲ್ಲಿ ಹಾಕಿ ಹಿಸ್ಸೋಪ್‌* ಗಿಡದ ಕಟ್ಟನ್ನ ರಕ್ತದಲ್ಲಿ ಅದ್ದಿ ಅದ್ರಿಂದ ನಿಮ್ಮ ಮನೆ ಬಾಗಿಲ ಚೌಕಟ್ಟಿನ ಮೇಲೆ ಮತ್ತು ಎರಡೂ ಬದಿಗೆ ಗುರುತು ಮಾಡಬೇಕು. ಬೆಳಿಗ್ಗೆ ತನಕ ನಿಮ್ಮಲ್ಲಿ ಯಾರೂ ಮನೆಯಿಂದ ಹೊರಗೆ ಹೋಗಬಾರದು. 23 ಯೆಹೋವ ಈಜಿಪ್ಟ್‌ ಜನ್ರಿಗೆ ಶಿಕ್ಷೆ ಕೊಡೋಕೆ ದಾಟಿ ಹೋಗ್ತಾನೆ. ಆಗ ನಿಮ್ಮ ಮನೆ ಬಾಗಿಲ ಚೌಕಟ್ಟಿನ ಮೇಲೆ ಮತ್ತು ಎರಡು ಬದಿಗಳಲ್ಲಿ ರಕ್ತದ ಗುರುತು ಇರೋದು ನೋಡಿ ನಿಮ್ಮ ಮನೆನ ದಾಟಿ ಹೋಗ್ತಾನೆ.* ನಿಮ್ಮ ಮನೆ ಒಳಗಿರೋ ಯಾರನ್ನೂ ಯೆಹೋವ ಸಾಯಿಸಲ್ಲ.+

24 ನೀವು ಈ ಹಬ್ಬ ಆಚರಿಸಬೇಕು. ಈ ನಿಯಮವನ್ನ ನೀವು ನಿಮ್ಮ ಮಕ್ಕಳು ಯಾವಾಗ್ಲೂ ಪಾಲಿಸಬೇಕು.+ 25 ಯೆಹೋವ ನಿಮಗೆ ಕೊಡ್ತಿನಂತ ಹೇಳಿದ ದೇಶಕ್ಕೆ ಆತನು ನಿಮ್ಮನ್ನ ಕರ್ಕೊಂಡು ಹೋದಾಗ ನೀವು ಈ ಆಚರಣೆ ಮಾಡಬೇಕು.+ 26 ಮುಂದೆ ನಿಮ್ಮ ಮಕ್ಕಳು ‘ಈ ಆಚರಣೆನ ಯಾಕೆ ಮಾಡಬೇಕು?’+ ಅಂತ ಕೇಳಿದಾಗ 27 ನೀವು ಅವರಿಗೆ ‘ಇಸ್ರಾಯೇಲ್ಯರು ಈಜಿಪ್ಟಲ್ಲಿದ್ದಾಗ ಆತನು ಈಜಿಪ್ಟಿನವರಿಗೆ ಶಿಕ್ಷೆ ಕೊಟ್ಟನು. ಆದ್ರೆ ಇಸ್ರಾಯೇಲ್ಯರ ಮನೆಗಳನ್ನ ದಾಟಿಹೋದನು. ಹೀಗೆ ನಮ್ಮ ಮನೆಗಳಲ್ಲಿ ಇದ್ದವರ ಜೀವ ಉಳಿಸಿದನು. ಹಾಗಾಗಿ ನಾವು ಯೆಹೋವನ ಘನತೆಗಾಗಿ ಈ ಪಸ್ಕದ ಬಲಿ ಅರ್ಪಿಸ್ತೀವಿ’ ಅಂತ ಹೇಳಬೇಕು.”

ಇದನ್ನ ಕೇಳಿ ಜನ್ರು ಅಡ್ಡಬಿದ್ದು ನಮಸ್ಕಾರ ಮಾಡಿದ್ರು. 28 ಇಸ್ರಾಯೇಲ್ಯರು ಅಲ್ಲಿಂದ ಹೋಗಿ ಮೋಶೆ ಆರೋನರಿಗೆ ಯೆಹೋವ ಆಜ್ಞೆಕೊಟ್ಟ ಹಾಗೇ ಮಾಡಿದ್ರು.+ ದೇವರು ಹೇಳಿದ ತರಾನೇ ಮಾಡಿದ್ರು.

29 ಮಧ್ಯರಾತ್ರಿ ಯೆಹೋವ ಈಜಿಪ್ಟ್‌ ದೇಶದ ಪ್ರತಿಯೊಬ್ಬ ಮೊದಲನೇ ಮಗನನ್ನ ಸಾಯಿಸಿದನು.+ ಸಿಂಹಾಸನದ ಮೇಲೆ ಕೂತಿದ್ದ ಫರೋಹನ ಮೊದಲನೇ ಮಗನಿಂದ ಹಿಡಿದು ಜೈಲಲ್ಲಿದ್ದ* ಕೈದಿಯ ಮೊದಲನೇ ಮಗನ ತನಕ ಎಲ್ಲ ಮೊದಲ ಮಕ್ಕಳನ್ನ ಸಾಯಿಸಿದನು. ಅಷ್ಟೇ ಅಲ್ಲ ಪ್ರತಿಯೊಂದು ಪ್ರಾಣಿಯ ಮೊದಲ ಮರಿನ ಸಹ ಸಾಯಿಸಿದನು.+ 30 ಆ ರಾತ್ರಿ ಫರೋಹನಿಗೆ, ಅವನ ಎಲ್ಲ ಸೇವಕರಿಗೆ, ಈಜಿಪ್ಟಿನ ಬೇರೆ ಜನರಿಗೆಲ್ಲ ನಿದ್ದೆಯಿಂದ ಎಚ್ಚರ ಆಯ್ತು. ಈಜಿಪ್ಟಲ್ಲಿ ಎಲ್ಲೆಲ್ಲೂ ಅಳು, ಗೋಳಾಟದ ಶಬ್ದ ಜೋರಾಗಿತ್ತು. ಯಾಕಂದ್ರೆ ಈಜಿಪ್ಟಿನವರ ಮಧ್ಯ ಸಾವಿಲ್ಲದ ಮನೆ ಒಂದೂ ಇರಲಿಲ್ಲ.+ 31 ಫರೋಹ ತಕ್ಷಣ ಆ ರಾತ್ರಿ ಮೋಶೆ ಆರೋನರನ್ನ ಕರೆಸಿ+ “ನೀವು ಎಲ್ಲ ಇಸ್ರಾಯೇಲ್ಯರನ್ನ ಕರ್ಕೊಂಡು ಇಲ್ಲಿಂದ ಹೋಗಿ. ನನ್ನ ಜನ್ರ ಮಧ್ಯ ಇರಲೇಬೇಡಿ, ನೀವು ಯೆಹೋವನ ಆರಾಧನೆ ಮಾಡಬೇಕು ಅಂತ ಕೇಳ್ಕೊಂಡ್ರಲ್ಲಾ, ಹೋಗಿ.+ 32 ನೀವು ಹೇಳಿದ ಹಾಗೇ ನಿಮ್ಮ ಕುರಿ ಆಡು ದನ ಎಲ್ಲ ತಗೊಂಡು ಹೋಗಿ.+ ಆದ್ರೆ ನನ್ನನ್ನ ಆಶೀರ್ವದಿಸಬೇಕು ಅಂತ ನಿಮ್ಮ ದೇವರ ಹತ್ರ ಬೇಡ್ಕೊಳ್ಳಿ” ಅಂದ.

33 ಈಜಿಪ್ಟಿನವರು ಇಸ್ರಾಯೇಲ್ಯರಿಗೆ “ನೀವು ಹೋಗದಿದ್ರೆ ನಾವೆಲ್ಲ ಸತ್ತುಹೋಗ್ತೀವಿ!”+ ಅಂತ ಹೇಳಿ ಈಜಿಪ್ಟನ್ನ ಬೇಗ ಬಿಟ್ಟುಹೋಗಿ ಅಂತ ಒತ್ತಾಯ ಮಾಡಿದ್ರು.+ 34 ಹಾಗಾಗಿ ಇಸ್ರಾಯೇಲ್ಯರು ನಾದಿದ ಹಿಟ್ಟಿಗೆ ಹುಳಿಹಾಕದೆ ಅದನ್ನ ಹಿಟ್ಟು ನಾದೋ ಪಾತ್ರೆ ಸಮೇತ ಬಟ್ಟೆಯಲ್ಲಿ ಸುತ್ತಿ ಹೆಗಲ ಮೇಲೆ ಹಾಕೊಂಡ್ರು. 35 ಇಸ್ರಾಯೇಲ್ಯರು ಮೋಶೆ ಹೇಳಿದ ಹಾಗೇ ಈಜಿಪ್ಟಿನವರ ಹತ್ರ ಹೋಗಿ ಚಿನ್ನಬೆಳ್ಳಿಯ ಒಡವೆ, ವಸ್ತುಗಳನ್ನ, ಬಟ್ಟೆಗಳನ್ನ ಕೇಳಿದ್ರು.+ 36 ಈಜಿಪ್ಟಿನವರು ಇಸ್ರಾಯೇಲ್ಯರಿಗೆ ದಯೆ ತೋರಿಸೋ ತರ ಯೆಹೋವ ಮಾಡಿದನು. ಹಾಗಾಗಿ ಇಸ್ರಾಯೇಲ್ಯರು ಕೇಳಿದ್ದನ್ನೆಲ್ಲ ಈಜಿಪ್ಟಿನವರು ಕೊಟ್ರು. ಹೀಗೆ ಅವರು ಈಜಿಪ್ಟಿನವರನ್ನ ಲೂಟಿ ಮಾಡಿದ್ರು.+

37 ಆಮೇಲೆ ಇಸ್ರಾಯೇಲ್ಯರು ರಮ್ಸೇಸ್‌+ ಪ್ರದೇಶದಿಂದ ಸುಕ್ಕೋತಿಗೆ+ ಹೊರಟ್ರು. ಅವರಲ್ಲಿ ಮಕ್ಕಳನ್ನ ಬಿಟ್ಟು ಸುಮಾರು 6,00,000 ಗಂಡಸರು* ಇದ್ರು.+ 38 ಇಸ್ರಾಯೇಲ್ಯರು ಪ್ರಾಣಿಗಳ ದೊಡ್ಡ ಹಿಂಡನ್ನೂ ತಮ್ಮ ಜೊತೆ ತಗೊಂಡು ಹೋದ್ರು. ಜೊತೆಗೆ ಬೇರೆ ಜನ್ರು*+ ಸಹ ಹೊರಟ್ರು. 39 ಅವರು ಈಜಿಪ್ಟಿಂದ ತಂದಿದ್ದ ನಾದಿದ ಹಿಟ್ಟಿಂದ ದುಂಡಗಿನ ರೊಟ್ಟಿಗಳನ್ನ ಮಾಡೋಕೆ ಶುರು ಮಾಡಿದ್ರು. ಅವು ಹುಳಿಯಿಲ್ಲದ ರೊಟ್ಟಿಗಳಾಗಿತ್ತು. ಇಸ್ರಾಯೇಲ್ಯರನ್ನ ಇದ್ದಕ್ಕಿದ್ದ ಹಾಗೆ ಈಜಿಪ್ಟಿಂದ ಓಡಿಸಿದ್ರಿಂದ ಹಿಟ್ಟಿಗೆ ಹುಳಿ ಸೇರಿಸೋಕೆ, ತಮಗಾಗಿ ಯಾವುದೇ ಆಹಾರ ಸಿದ್ಧ ಮಾಡೋಕೆ ಅವರಿಗೆ ಆಗಲಿಲ್ಲ.+

40 ಈಜಿಪ್ಟ್‌ ಬಿಟ್ಟು ಹೋಗೋಷ್ಟರಲ್ಲಿ ಇಸ್ರಾಯೇಲ್ಯರು ಒಟ್ಟು 430 ವರ್ಷ+ ವಿದೇಶಿಯರಾಗಿ ಜೀವಿಸಿದ್ರು.+ 41 ಆ 430 ವರ್ಷಗಳು ಮುಗಿದ ಅದೇ ದಿನ ಯೆಹೋವನ ಜನ್ರ ದೊಡ್ಡ ಸಮೂಹ* ಈಜಿಪ್ಟ್‌ ದೇಶ ಬಿಟ್ಟು ಹೊರಗೆ ಬಂತು. 42 ಯೆಹೋವ ಇಸ್ರಾಯೇಲ್ಯರನ್ನ ಈಜಿಪ್ಟ್‌ ದೇಶದಿಂದ ಆ ರಾತ್ರಿ ಹೊರಗೆ ಕರ್ಕೊಂಡು ಬಂದಿದ್ದನ್ನ ನೆನಪಿಸ್ಕೊಳ್ಳೋಕೆ ಅವರು ಪ್ರತಿವರ್ಷ ಆ ರಾತ್ರಿ ಹಬ್ಬ ಆಚರಿಸ್ತಾರೆ. ಇಸ್ರಾಯೇಲ್ಯರ ಎಲ್ಲ ಪೀಳಿಗೆಯವರು ಆ ರಾತ್ರಿಯನ್ನ ಯೆಹೋವನ ಘನತೆಗಾಗಿ ಸ್ಮರಿಸಿ ಆಚರಿಸಬೇಕು.+

43 ಆಮೇಲೆ ಯೆಹೋವ ಮೋಶೆ ಆರೋನರಿಗೆ ಹೀಗಂದನು: “ಪಸ್ಕ ಹಬ್ಬದ ನಿಯಮ ಏನಂದ್ರೆ, ಯಾವ ವಿದೇಶಿ ಕೂಡ ಪಸ್ಕದ ಊಟ ತಿನ್ನಬಾರದು.+ 44 ಹಣಕ್ಕೆ ತಗೊಂಡ ದಾಸ ನಿಮಗೆ ಇರೋದಾದ್ರೆ ಅವನಿಗೆ ಸುನ್ನತಿ ಮಾಡಿಸಬೇಕು.+ ಆಗ ಮಾತ್ರ ಅವನು ಪಸ್ಕದ ಊಟ ತಿನ್ನಬಹುದು. 45 ವಲಸೆ ಬಂದವನು, ನಿಮ್ಮ ಹತ್ರ ಕೂಲಿ ಕೆಲಸ ಮಾಡೋನು ಅದನ್ನ ತಿನ್ನಬಾರದು. 46 ಪಸ್ಕದ ಒಂದು ಕುರಿಮರಿನ ಒಂದೇ ಮನೆಯೊಳಗೆ ತಿನ್ನಬೇಕು. ಅದ್ರ ಮಾಂಸದಲ್ಲಿ ಸ್ವಲ್ಪನೂ ಮನೆ ಹೊರಗೆ ತಗೊಂಡು ಹೋಗಬಾರದು. ಅದ್ರ ಒಂದು ಮೂಳೆನೂ ಮುರಿಬಾರದು.+ 47 ಎಲ್ಲ ಇಸ್ರಾಯೇಲ್ಯರು ಈ ಹಬ್ಬ ಆಚರಿಸಬೇಕು. 48 ನಿಮ್ಮ ಜೊತೆ ವಾಸ ಮಾಡ್ತಿರೋ ವಿದೇಶಿ ಯೆಹೋವನ ಘನತೆಗಾಗಿ ಪಸ್ಕ ಹಬ್ಬ ಆಚರಿಸೋಕೆ ಇಷ್ಟಪಟ್ರೆ ಅವನ ಕುಟುಂಬದಲ್ಲಿರೋ ಪ್ರತಿಯೊಬ್ಬ ಹುಡುಗನಿಗೂ ಪುರುಷನಿಗೂ ಸುನ್ನತಿ ಆಗಬೇಕು. ಆಗ ಅವನು ಪಸ್ಕ ಆಚರಿಸಬಹುದು. ಅಷ್ಟೇ ಅಲ್ಲ ಅವನು ಸ್ವದೇಶದವನ ತರಾನೇ ಆಗ್ತಾನೆ. ಆದ್ರೆ ಸುನ್ನತಿ ಆಗಿರದ ಯಾವ ಪುರುಷನೂ ಪಸ್ಕದ ಊಟ ತಿನ್ನಬಾರದು.+ 49 ಇಸ್ರಾಯೇಲ್ಯರಿಗೂ ನಿಮ್ಮ ಮಧ್ಯ ವಾಸಿಸೋ ವಿದೇಶಿಯರಿಗೂ ಒಂದೇ ನಿಯಮ.”+

50 ಯೆಹೋವ ಮೋಶೆ ಆರೋನರಿಗೆ ಆಜ್ಞೆಕೊಟ್ಟ ಹಾಗೇ ಎಲ್ಲ ಇಸ್ರಾಯೇಲ್ಯರು ಮಾಡಿದ್ರು. ದೇವರು ಹೇಳಿದ ಹಾಗೇ ಅವರು ಮಾಡಿದ್ರು. 51 ಅದೇ ದಿನ ಯೆಹೋವ ಎಲ್ಲ ಇಸ್ರಾಯೇಲ್ಯರನ್ನ* ಈಜಿಪ್ಟ್‌ ದೇಶದಿಂದ ಹೊರಗೆ ಕರ್ಕೊಂಡು ಬಂದನು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ