ಪರಮಗೀತ
3 “ರಾತ್ರಿ ನಾ ಹಾಸಿಗೆಯಲ್ಲಿರುವಾಗ
ನನ್ನ ನಲ್ಲನಿಗಾಗಿ ಅರಸಿದೆ, ಹಂಬಲಿಸಿದೆ.+
ಆದ್ರೆ ನನ್ನ ಸನಿಹ ಅವನಿರಲಿಲ್ಲ.+
2 ನಾನೆದ್ದು ನನ್ನ ಪ್ರೇಮಿಗಾಗಿ ಹುಡುಕ್ತೀನಿ,
ಪಟ್ಟಣದ ಬೀದಿ, ಮುಖ್ಯಸ್ಥಳ, ಎಲ್ಲಾ ಕಡೆ ಅವನಿಗಾಗಿ ಹುಡುಕಾಡ್ತೀನಿ.
ನಾನೆಷ್ಟೇ ಹುಡುಕಿದ್ರೂ ನನ್ನ ಪ್ರೀತಿಯ ಹುಡುಗ ನನಗೆ ಸಿಗಲಿಲ್ಲ.
3 ಪಟ್ಟಣದಲ್ಲಿ ಗಸ್ತು ತಿರುಗೋ ಕಾವಲುಗಾರರ ಕಣ್ಣಿಗೆ ನಾ ಬಿದ್ದೆ.+
‘ನನ್ನ ಪ್ರಿಯತಮನನ್ನ ಎಲ್ಲಾದ್ರೂ ನೋಡಿದ್ರಾ?’ ಅಂದೆ.
4 ಅಲ್ಲಿಂದ ಮುಂದೆ ಎರಡೇ ಹೆಜ್ಜೆ ಇಟ್ಟೆ,
ನನ್ನ ಪ್ರಾಣ ಪ್ರಿಯನು ನನಗೆ ಎದುರಾದ!
5 ಯೆರೂಸಲೇಮಿನ ಹೆಣ್ಣುಮಕ್ಕಳೇ,
ನನ್ನಲ್ಲಿ ಪ್ರೀತಿ ತಾನಾಗಿ ಹುಟ್ಟೋ ತನಕ ನನ್ನೊಳಗೆ ಅದನ್ನ ಬಡಿದೆಬ್ಬಿಸೋಕೆ ಪ್ರಯತ್ನಿಸಬೇಡಿ,
ಹಾಗೆ ಮಾಡಲ್ಲ ಅಂತ ಕಾಡಿನ ಜಿಂಕೆಗಳ ಮೇಲೆ, ಹರಿಣಿಗಳ ಮೇಲೆ ಆಣೆಯಿಟ್ಟು ಹೇಳಿ.”+
6 “ಅದೇನದು? ಕಾಡಲ್ಲಿ* ದಟ್ಟ ಹೊಗೆ ತರ ಏನೋ ಕಾಣ್ತಿದ್ಯಲ್ಲಾ?
ಗಂಧರಸ, ಸಾಂಬ್ರಾಣಿ, ವ್ಯಾಪಾರಿಗಳು ಮಾರೋ ತರತರದ ಸುಗಂಧದ್ರವ್ಯ
ಎಲ್ಲ ಹಚ್ಕೊಂಡು ಬರ್ತಿರೋ ಆ ಮೆರವಣಿಗೆ ಯಾರ್ದು?”+
7 “ಅರೆರೆ ನೋಡಿ! ಸೊಲೊಮೋನನ ಪಲ್ಲಕ್ಕಿ ಬರ್ತಿದೆ!
ಅದರ ಜೊತೆ ಹೆಜ್ಜೆ ಹಾಕ್ತಿರೋರು ಅರವತ್ತು ವೀರ ಸೈನಿಕರು,
ಅವರು ಇಸ್ರಾಯೇಲಿನ ಪರಮಶೂರರು,+
8 ಎಲ್ರೂ ಯುದ್ಧಪ್ರವೀಣರು,
ಅವರೆಲ್ಲರ ಹತ್ರ ಖಡ್ಗ ಇದೆ,
ರಾತ್ರಿಯ ಅಪಾಯಗಳನ್ನ ಬಡಿದೋಡಿಸೋಕೆ
ಪ್ರತಿಯೊಬ್ಬ ಖಡ್ಗವನ್ನ ಸೊಂಟಕ್ಕೆ ಕಟ್ಟಿಕೊಂಡಿದ್ದಾನೆ.”
9 “ಅದು ರಾಜ ಸೊಲೊಮೋನನ ಭವ್ಯ ಪಲ್ಲಕ್ಕಿ,
ಲೆಬನೋನಿನ ಮರಗಳಿಂದ+ ಅವನು ತನಗಾಗಿ ಮಾಡಿಸಿದ ಪಲ್ಲಕ್ಕಿ.
10 ಅದರ ಕಂಬಗಳು ಬೆಳ್ಳಿ,
ಅದರ ಆಧಾರಗಳು ಬಂಗಾರ,
ಅದರ ಆಸನ ನೇರಳೆ ಬಣ್ಣದ ಉಣ್ಣೆ,
ಅದರ ಒಳಗಣ ಶೃಂಗಾರ ಯೆರೂಸಲೇಮಿನ ಹೆಣ್ಣುಮಕ್ಕಳ ಪ್ರೀತಿಯ ಕೊಡುಗೆ.”