ಪರಮಗೀತ
6 “ಸ್ತ್ರೀಯರಲ್ಲಿ ಬಲು ಸುಂದರಿಯೇ,
ನಿನ್ನ ಪ್ರಿಯತಮ ಎಲ್ಲಿ ಹೋದ?
ಯಾವ ಕಡೆ ತಿರುಗಿದ?
ನಿನ್ನ ಜೊತೆ ನಾವೂ ಅವನನ್ನ ಹುಡುಕ್ತೀವಿ.”
2 “ನನ್ನ ಪ್ರಿಯತಮ ತನ್ನ ತೋಟಕ್ಕೆ,
ಸುಗಂಧ ಸಸ್ಯಗಳ ಹಾಸಿಗೆಯಂತಿರೋ ವನಕ್ಕೆ ಹೋಗಿದ್ದಾನೆ,
ತೋಟಗಳಲ್ಲಿ ಹಿಂಡನ್ನ ಮೇಯಿಸೋಕೆ,
ಲಿಲಿ ಹೂಗಳನ್ನ ಕೂಡಿಸೋಕೆ ಹೋಗಿದ್ದಾನೆ.+
3 ನಾನು ನನ್ನ ನಲ್ಲನ ಆಸ್ತಿ,
ನನ್ನ ನಲ್ಲ ನನ್ನ ಆಸ್ತಿ.+
ಅವನು ಲಿಲಿ ಹೂಗಳ ಮಧ್ಯೆ ಹಿಂಡನ್ನ ಮೇಯಿಸ್ತಿದ್ದಾನೆ.”+
4 “ನನ್ನ ಪ್ರೇಯಸಿಯೇ, ನೀನು ತಿರ್ಚದಷ್ಟು*+ ಅಂದ,+
ಯೆರೂಸಲೇಮಿನಷ್ಟು ರಮಣೀಯ,+
ಧ್ವಜಗಳ ಸುತ್ತ ನಿಂತಿರೋ ಸೈನ್ಯದಂಥ ನಿನ್ನ ಚೆಲುವಿಗೆ ನಾ ಮೂಕವಿಸ್ಮಿತ.+
5 ನಿನ್ನ ಕಣ್ಣೋಟ+ ನನ್ನ ಕೊಲ್ಲುತ್ತಿದೆ.
ನಿನ್ನ ಕಣ್ಗಳನ್ನ ನನ್ನ ಕಡೆಯಿಂದ ತಿರುಗಿಸು.
ನಿನ್ನ ಕೂದಲು ಗಿಲ್ಯಾದಿನ ಇಳಿಜಾರುಗಳಿಂದ
ಇಳಿದುಬರೋ ಆಡುಗಳ ಹಿಂಡಿನ ತರ ಇದೆ.+
6 ನಿನ್ನ ಹಲ್ಲುಗಳು ಸ್ನಾನವಾಗಿ ಬಂದಿರೋ ಕುರಿಗಳ ಹಿಂಡಿನ ತರ ಇವೆ,
ಎಲ್ಲವೂ ಜೋಡಿಜೋಡಿಯಾಗಿವೆ,
ಯಾವುದೂ ಒಂಟಿಯಾಗಿಲ್ಲ.
7 ಮುಸುಕಿನೊಳಗಿರೋ ನಿನ್ನ ಕೆನ್ನೆಗಳು
ದಾಳಿಂಬೆ ಹಣ್ಣಿನ ಎರಡು ಹೋಳುಗಳ ತರ ಇವೆ.
9 ಅವಳೊಬ್ಬಳೇ ನನ್ನ ಪಾರಿವಾಳ,+
ಅವಳಲ್ಲಿ ದೋಷವೇನೂ ಇಲ್ಲ.
ಅವಳ ತಾಯಿಗೆ ಅವಳೊಬ್ಬಳೇ ಮಗಳು,
ಹೆತ್ತವಳಿಗೆ ಅಚ್ಚುಮೆಚ್ಚಿನವಳು.
ಹೆಣ್ಣುಮಕ್ಕಳು ಅವಳನ್ನ ನೋಡಿ ಅವಳೇ ಸುಖಿ ಅಂತಾರೆ.
ರಾಣಿಯರು, ಉಪಪತ್ನಿಯರು ಅವಳನ್ನ ಹಾಡಿ ಹೊಗಳ್ತಾರೆ.
10 ‘ಸೂರ್ಯೋದಯದ ಹಾಗೆ ಹೊಳಿತಿರೋ ಇವಳ್ಯಾರು?
ಪೂರ್ಣಚಂದ್ರನ ತರ ಕಂಗೊಳಿಸೋ,
ಸೂರ್ಯರಶ್ಮಿ ತರ ನಿಷ್ಕಳಂಕವಾಗಿರೋ,
ಧ್ವಜ ಎತ್ತಿ ಹಿಡಿದಿರೋ ಸೈನ್ಯ ತರ ಮೂಕವಿಸ್ಮಯಗೊಳಿಸೋ ಇವಳ್ಯಾರು?’”+
11 “ಹಣ್ಣಿನ ಮರಗಳ ತೋಟಕ್ಕೆ+ ನಾ ಹೋದೆ.
ಕಣಿವೆಯ* ಮರಗಿಡಗಳು ಮೊಗ್ಗು ಬಿಟ್ಟಿವೆಯಾ,
ದ್ರಾಕ್ಷಿ ಬಳ್ಳಿಗಳು ಚಿಗುರೊಡೆದಿವೆಯಾ,*
ದಾಳಿಂಬೆ ಮರಗಳು ಹೂಬಿಟ್ಟಿವೆಯಾ ಅಂತ ನೋಡೋಕೆ ಹೋದೆ.
12 ಅದನ್ನೆಲ್ಲ ನೋಡೋ ಆಸೆಯಿಂದ
ನನಗೇ ಗೊತ್ತಿಲ್ಲದೆ ನಾನು ರಾಜನ ರಥಗಳ ಹತ್ರ ಹೋಗಿದ್ದೆ.”
13 “ಬಾ, ಶೂಲಮ್ಯಳೇ ಬಾ,
ತಿರುಗಿ ಬಾ, ನಾವು ನಿನ್ನನ್ನ ನೋಡಬೇಕು, ವಾಪಸ್ ಬಾ!”
“ಶೂಲಮ್ಯಳಾದ ನನ್ನನ್ನ ನೋಡೋಕೆ ನೀವ್ಯಾಕೆ ಆಸೆಪಡ್ತೀರಾ?”+
“ಅವಳು ಎರಡು ತಂಡಗಳ* ನೃತ್ಯದಂತಿದ್ದಾಳೆ!”