ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 1 ಸಮುವೇಲ 22
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

1 ಸಮುವೇಲ ಮುಖ್ಯಾಂಶಗಳು

      • ದಾವೀದ ಅದುಲ್ಲಾಮಲ್ಲಿ ಮತ್ತು ಮಿಚ್ಪೆಯಲ್ಲಿ (1-5)

      • ನೋಬಿನ ಪುರೋಹಿತರನ್ನ ಸೌಲ ಸಾಯಿಸಿದ (6-19)

      • ಎಬ್ಯಾತಾರ ತಪ್ಪಿಸ್ಕೊಂಡ (20-23)

1 ಸಮುವೇಲ 22:1

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 15:20, 35; 2ಸಮು 23:13; ಕೀರ್ತ 34:19; 56:13
  • +1ಸಮು 21:10

1 ಸಮುವೇಲ 22:3

ಮಾರ್ಜಿನಲ್ ರೆಫರೆನ್ಸ್

  • +ರೂತ್‌ 4:10, 17; 1ಸಮು 14:47

1 ಸಮುವೇಲ 22:4

ಮಾರ್ಜಿನಲ್ ರೆಫರೆನ್ಸ್

  • +1ಸಮು 22:1

1 ಸಮುವೇಲ 22:5

ಮಾರ್ಜಿನಲ್ ರೆಫರೆನ್ಸ್

  • +2ಸಮು 24:11, 12; 1ಪೂರ್ವ 21:9, 10; 29:29; 2ಪೂರ್ವ 29:25
  • +1ಸಮು 23:3

1 ಸಮುವೇಲ 22:6

ಮಾರ್ಜಿನಲ್ ರೆಫರೆನ್ಸ್

  • +1ಸಮು 10:26

1 ಸಮುವೇಲ 22:7

ಮಾರ್ಜಿನಲ್ ರೆಫರೆನ್ಸ್

  • +ರೂತ್‌ 4:22
  • +1ಸಮು 8:11, 12

1 ಸಮುವೇಲ 22:8

ಮಾರ್ಜಿನಲ್ ರೆಫರೆನ್ಸ್

  • +1ಸಮು 18:3; 20:17

1 ಸಮುವೇಲ 22:9

ಮಾರ್ಜಿನಲ್ ರೆಫರೆನ್ಸ್

  • +1ಸಮು 21:1, 7; ಕೀರ್ತ 52:ಶೀರ್ಷಿಕೆ
  • +ಕೀರ್ತ 52:2, 3
  • +1ಸಮು 14:3; 22:20

1 ಸಮುವೇಲ 22:10

ಮಾರ್ಜಿನಲ್ ರೆಫರೆನ್ಸ್

  • +1ಸಮು 21:6, 9

1 ಸಮುವೇಲ 22:14

ಮಾರ್ಜಿನಲ್ ರೆಫರೆನ್ಸ್

  • +1ಸಮು 19:4; 20:32; 24:11; 26:23
  • +1ಸಮು 17:25; 18:27
  • +1ಸಮು 18:5, 13

1 ಸಮುವೇಲ 22:15

ಮಾರ್ಜಿನಲ್ ರೆಫರೆನ್ಸ್

  • +1ಸಮು 22:10
  • +1ಸಮು 21:1, 2

1 ಸಮುವೇಲ 22:16

ಮಾರ್ಜಿನಲ್ ರೆಫರೆನ್ಸ್

  • +1ಸಮು 14:44; 20:31
  • +1ಸಮು 2:27, 32

1 ಸಮುವೇಲ 22:17

ಪಾದಟಿಪ್ಪಣಿ

  • *

    ಅಕ್ಷ. “ಓಟಗಾರರು.”

1 ಸಮುವೇಲ 22:18

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 52:ಶೀರ್ಷಿಕೆ
  • +ಆದಿ 25:30
  • +1ಸಮು 2:27, 31

1 ಸಮುವೇಲ 22:19

ಮಾರ್ಜಿನಲ್ ರೆಫರೆನ್ಸ್

  • +1ಸಮು 21:1; 22:9

1 ಸಮುವೇಲ 22:20

ಮಾರ್ಜಿನಲ್ ರೆಫರೆನ್ಸ್

  • +1ಸಮು 23:6; 30:7; 2ಸಮು 20:25; 1ಅರ 2:27

1 ಸಮುವೇಲ 22:22

ಮಾರ್ಜಿನಲ್ ರೆಫರೆನ್ಸ್

  • +1ಸಮು 21:1, 7

1 ಸಮುವೇಲ 22:23

ಮಾರ್ಜಿನಲ್ ರೆಫರೆನ್ಸ್

  • +1ಅರ 2:26

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

1 ಸಮು. 22:1ಯೆಹೋ 15:20, 35; 2ಸಮು 23:13; ಕೀರ್ತ 34:19; 56:13
1 ಸಮು. 22:11ಸಮು 21:10
1 ಸಮು. 22:3ರೂತ್‌ 4:10, 17; 1ಸಮು 14:47
1 ಸಮು. 22:41ಸಮು 22:1
1 ಸಮು. 22:52ಸಮು 24:11, 12; 1ಪೂರ್ವ 21:9, 10; 29:29; 2ಪೂರ್ವ 29:25
1 ಸಮು. 22:51ಸಮು 23:3
1 ಸಮು. 22:61ಸಮು 10:26
1 ಸಮು. 22:7ರೂತ್‌ 4:22
1 ಸಮು. 22:71ಸಮು 8:11, 12
1 ಸಮು. 22:81ಸಮು 18:3; 20:17
1 ಸಮು. 22:91ಸಮು 21:1, 7; ಕೀರ್ತ 52:ಶೀರ್ಷಿಕೆ
1 ಸಮು. 22:9ಕೀರ್ತ 52:2, 3
1 ಸಮು. 22:91ಸಮು 14:3; 22:20
1 ಸಮು. 22:101ಸಮು 21:6, 9
1 ಸಮು. 22:141ಸಮು 19:4; 20:32; 24:11; 26:23
1 ಸಮು. 22:141ಸಮು 17:25; 18:27
1 ಸಮು. 22:141ಸಮು 18:5, 13
1 ಸಮು. 22:151ಸಮು 22:10
1 ಸಮು. 22:151ಸಮು 21:1, 2
1 ಸಮು. 22:161ಸಮು 14:44; 20:31
1 ಸಮು. 22:161ಸಮು 2:27, 32
1 ಸಮು. 22:18ಕೀರ್ತ 52:ಶೀರ್ಷಿಕೆ
1 ಸಮು. 22:18ಆದಿ 25:30
1 ಸಮು. 22:181ಸಮು 2:27, 31
1 ಸಮು. 22:191ಸಮು 21:1; 22:9
1 ಸಮು. 22:201ಸಮು 23:6; 30:7; 2ಸಮು 20:25; 1ಅರ 2:27
1 ಸಮು. 22:221ಸಮು 21:1, 7
1 ಸಮು. 22:231ಅರ 2:26
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
1 ಸಮುವೇಲ 22:1-23

ಒಂದನೇ ಸಮುವೇಲ

22 ಆಮೇಲೆ ದಾವೀದ ಅಲ್ಲಿಂದ ಅದುಲ್ಲಾಮಿನ+ ಗವಿಗೆ ತಪ್ಪಿಸ್ಕೊಂಡು ಹೋದ.+ ಈ ವಿಷ್ಯ ಅವನ ಸಹೋದರರಿಗೆ, ತಂದೆ ಮನೆಯವ್ರಿಗೆ ಗೊತ್ತಾದಾಗ ಅವರು ಕೂಡ ಅವನ ಹತ್ರ ಹೋದ್ರು. 2 ಯಾರೆಲ್ಲ ಕಷ್ಟದಲ್ಲಿದ್ರೋ, ಸಾಲ ಮಾಡಿದ್ರೋ, ನೋವಲ್ಲಿ ಇದ್ರೋ ಅವ್ರೆಲ್ಲ ಬಂದು ದಾವೀದನನ್ನ ಸೇರ್ಕೊಂಡ್ರು. ಅವನು ಅವ್ರ ಮುಖ್ಯಸ್ಥನಾದ. ಹೀಗೆ ಅವನ ಜೊತೆ ಸುಮಾರು 400 ಗಂಡಸ್ರು ಇದ್ರು.

3 ದಾವೀದ ಮೋವಾಬಿನ+ ಮಿಚ್ಪೆಗೆ ಹೋಗಿ ಅಲ್ಲಿನ ರಾಜನಿಗೆ “ದೇವರು ನನಗೆ ಏನು ಮಾಡ್ತಾನಂತ ಗೊತ್ತಾಗೋ ತನಕ ದಯವಿಟ್ಟು ನನ್ನ ಅಪ್ಪಅಮ್ಮ ನಿನ್ನ ಹತ್ರ ಇರಲಿ” ಅಂತ ಕೇಳ್ಕೊಂಡ. 4 ತನ್ನ ತಂದೆತಾಯಿಯನ್ನ ಮೋವಾಬಿನ ರಾಜನ ಹತ್ರ ಬಿಟ್ಟು ಹೋದ. ದಾವೀದ ಬೆಟ್ಟದಲ್ಲಿದ್ದ ಕಾಲದಲ್ಲೆಲ್ಲ ಅವರು ರಾಜನ ಜೊತೆ ಇದ್ರು.+

5 ಸ್ವಲ್ಪ ಸಮಯ ಆದ್ಮೇಲೆ ಪ್ರವಾದಿ ಗಾದ+ ದಾವೀದನಿಗೆ “ಬೆಟ್ಟಗಳಲ್ಲಿ ಇರ್ಬೇಡ. ಅಲ್ಲಿಂದ ಯೆಹೂದ ಪ್ರದೇಶಕ್ಕೆ ಹೋಗು”+ ಅಂದ. ಹಾಗಾಗಿ ದಾವೀದ ಅಲ್ಲಿಂದ ಹೊರಟು ಹೆರೆತ್‌ ಕಾಡಿಗೆ ಹೋದ.

6 ದಾವೀದ, ಅವನ ಜೊತೆ ಇದ್ದ ಗಂಡಸ್ರು ಅಡಗಿರೋ ಸ್ಥಳ ಗೊತ್ತಾಗಿದೆ ಅನ್ನೋ ಸುದ್ದಿ ಸೌಲನ ಕಿವಿಗೆ ಬಿತ್ತು. ಆ ಸಮಯದಲ್ಲಿ ಸೌಲ ಗಿಬೆಯಾದ+ ಎತ್ರದ ಸ್ಥಳದಲ್ಲಿದ್ದ ಪಿಚುಲ ವೃಕ್ಷದ ಕೆಳಗೆ ತನ್ನ ಕೈಯಲ್ಲಿ ಈಟಿ ಹಿಡ್ಕೊಂಡು ಕೂತಿದ್ದ. ಅವನ ಸುತ್ತ ಅವನ ಎಲ್ಲ ಸೇವಕರು ನಿಂತಿದ್ರು. 7 ಸೌಲ ತನ್ನ ಸುತ್ತ ನಿಂತಿದ್ದ ಸೇವಕರಿಗೆ “ಬೆನ್ಯಾಮೀನ್ಯರೇ ದಯವಿಟ್ಟು ಕೇಳಿ. ಇಷಯನ ಮಗ+ ನಿಮ್ಮೆಲ್ರಿಗೂ ಹೊಲ, ದ್ರಾಕ್ಷಿ ತೋಟಗಳನ್ನ ಕೊಡ್ತಾನಾ? ಅವನು ನಿಮ್ಮನ್ನ 1,000 ಜನ್ರ ಮೇಲೆ, 100 ಜನ್ರ ಮೇಲೆ ಮುಖ್ಯಸ್ಥರಾಗಿ ನೇಮಿಸ್ತಾನಾ?+ 8 ನೀವೆಲ್ರೂ ಸೇರಿ ನನ್ನ ವಿರುದ್ಧ ಸಂಚು ಮಾಡಿದ್ದೀರ. ನನ್ನ ಸ್ವಂತ ಮಗ ಇಷಯನ ಮಗನ ಜೊತೆ ಒಪ್ಪಂದ ಮಾಡ್ಕೊಂಡಿದ್ದಾನೆ+ ಅಂತ ನಿಮ್ಮಲ್ಲಿ ಒಬ್ಬನೂ ನನಗೆ ಹೇಳಲಿಲ್ಲ. ನಿಮ್ಮಲ್ಲಿ ಯಾರಿಗೂ ನನ್ನ ಕಷ್ಟ ಅರ್ಥ ಆಗಲ್ಲ. ನನ್ನ ಸ್ವಂತ ಮಗನೇ ನನ್ನ ಸೇವಕನನ್ನ ಪುಸಲಾಯಿಸಿ ನನ್ನ ವಿರುದ್ಧ ಎತ್ತಿ ಕಟ್ಟಿದ್ದಾನೆ ಅನ್ನೋ ವಿಷ್ಯವನ್ನ ನೀವು ಯಾರೂ ನನಗೆ ಹೇಳಲಿಲ್ಲ. ಈಗ ನೋಡಿ ಆ ಸೇವಕ ನನ್ನ ಮೇಲೆ ದಾಳಿ ಮಾಡೋಕೆ ಹೊಂಚು ಹಾಕೊಂಡಿದ್ದಾನೆ” ಅಂದ.

9 ಸೌಲನ ಸುತ್ತ ನಿಂತಿದ್ದ ಸೇವಕರಲ್ಲಿದ್ದ ಎದೋಮ್ಯನಾದ ದೋಯೇಗ+ ಸೌಲನಿಗೆ+ “ಇಷಯನ ಮಗ ನೋಬ್‌ ನಗರದಲ್ಲಿದ್ದ ಅಹೀಟೂಬನ ಮಗ ಅಹೀಮೆಲೆಕನ+ ಹತ್ರ ಬಂದಿದ್ದನ್ನ ನಾನು ನೋಡ್ದೆ. 10 ಅಹೀಮೆಲೆಕ ದಾವೀದನಿಗೋಸ್ಕರ ಯೆಹೋವನ ಹತ್ರ ಬೇಡ್ಕೊಂಡ, ಅವನಿಗೆ ಆಹಾರ ಕೊಟ್ಟ. ಫಿಲಿಷ್ಟಿಯನಾದ ಗೊಲ್ಯಾತನ ಕತ್ತಿ+ ಸಹ ಕೊಟ್ಟ” ಅಂದ. 11 ತಕ್ಷಣ ರಾಜ ಅಹೀಟೂಬನ ಮಗನೂ ಪುರೋಹಿತನೂ ಆಗಿದ್ದ ಅಹೀಮೆಲೆಕನನ್ನ, ನೋಬ್‌ ನಗರದಲ್ಲಿದ್ದ ಅವನ ತಂದೆ ಮನೆಯ ಎಲ್ಲ ಪುರೋಹಿತರನ್ನ ಬರೋಕೆ ಹೇಳಿ ಕಳಿಸಿದ. ಅವ್ರೆಲ್ಲ ರಾಜನ ಹತ್ರ ಬಂದ್ರು.

12 ಆಗ ಸೌಲ “ಅಹೀಟೂಬನ ಮಗನೇ ದಯವಿಟ್ಟು ಕೇಳು” ಅಂದ. ಅದಕ್ಕೆ ಅವನು “ಹೇಳು ನನ್ನೊಡೆಯ” ಅಂದ. 13 ಸೌಲ ಅವನಿಗೆ “ನೀನು ಮತ್ತು ಇಷಯನ ಮಗ ಸೇರಿ ನನ್ನ ವಿರುದ್ಧ ಯಾಕೆ ಸಂಚು ಮಾಡ್ತಿದ್ರಿ? ಅವನಿಗೆ ರೊಟ್ಟಿ, ಕತ್ತಿ ಕೊಟ್ಟು ಅವನಿಗೋಸ್ಕರ ದೇವರ ಹತ್ರ ಯಾಕೆ ಬೇಡ್ದೆ? ನೋಡು, ಅವನೀಗ ನನ್ನನ್ನ ವಿರೋಧಿಸಿ ನನಗಾಗಿ ಹೊಂಚುಹಾಕಿ ಕೂತಿದ್ದಾನೆ” ಅಂದ. 14 ಅದಕ್ಕೆ ಅಹೀಮೆಲೆಕ “ನಿನ್ನ ಸೇವಕರಲ್ಲಿ ದಾವೀದನಷ್ಟು ನಂಬಿಗಸ್ತ ವ್ಯಕ್ತಿ ಯಾರಿದ್ದಾರೆ?+ ಅವನು ರಾಜನ ಅಳಿಯ,+ ನಿನ್ನ ಅಂಗರಕ್ಷಕರ ಮುಖ್ಯಸ್ಥ. ನಿನ್ನ ಮನೇಲಿ ಗೌರವ ಇರೋ ವ್ಯಕ್ತಿ.+ 15 ನಾನು ದೇವರ ಹತ್ರ ಅವನಿಗೋಸ್ಕರ ಬೇಡ್ಕೊಳ್ತಿರೋದು+ ಮೊದ್ಲ ಸಲ ಅಲ್ಲ. ನಾನು ನಿನ್ನ ವಿರುದ್ಧ ಸಂಚು ಮಾಡೋದಾ? ಆ ರೀತಿ ನಾನು ಯಾವತ್ತೂ ಯೋಚ್ನೆ ಮಾಡಿಲ್ಲ! ನಾನು, ನನ್ನ ತಂದೆ ಮನೆಯವರು ಯಾವ ತಪ್ಪೂ ಮಾಡಿಲ್ಲ. ರಾಜ, ಈ ನಿನ್ನ ಸೇವಕನಾದ ನನಗೆ ಇದ್ರ ಬಗ್ಗೆ ಏನೂ ಗೊತ್ತಿಲ್ಲ”+ ಅಂದ.

16 ಆದ್ರೆ ರಾಜ ಅವನಿಗೆ “ಅಹೀಮೆಲೆಕ, ನೀನು ಖಂಡಿತ ಸಾಯ್ತೀಯ.+ ನಿನ್ನ ಜೊತೆ ನಿನ್ನ ತಂದೆ ಮನೆಯವ್ರೆಲ್ಲ ಸಾಯ್ತಾರೆ”+ ಅಂದ. 17 ಹೀಗೆ ಹೇಳ್ತಾ ರಾಜ ತನ್ನ ಸುತ್ತ ನಿಂತಿದ್ದ ಸೈನಿಕರಿಗೆ* “ಹೋಗಿ, ಯೆಹೋವನ ಪುರೋಹಿತರನ್ನ ಸಾಯಿಸಿ. ಯಾಕಂದ್ರೆ ಅವರು ದಾವೀದನ ಪಕ್ಷ ವಹಿಸಿದ್ದಾರೆ! ದಾವೀದ ಓಡಿ ಹೋಗಿದ್ದಾನೆ ಅಂತ ಅವ್ರಿಗೆ ಗೊತ್ತಿತ್ತು. ಆದ್ರೂ ಅವರು ನನಗೆ ಅದನ್ನ ಹೇಳಲಿಲ್ಲ” ಅಂದ. ಆದ್ರೆ ರಾಜನ ಸೇವಕರು ಯೆಹೋವನ ಪುರೋಹಿತರನ್ನ ಸಾಯಿಸೋಕ್ಕೆ ಅವ್ರ ಮೇಲೆ ಕೈ ಎತ್ತೋಕೆ ಬಯಸಲಿಲ್ಲ. 18 ಆಗ ರಾಜ ದೋಯೇಗನಿಗೆ+ “ನೀನು ಹೋಗಿ ಆ ಪುರೋಹಿತರನ್ನ ಸಾಯಿಸು” ಅಂದ. ತಕ್ಷಣ ಎದೋಮ್ಯನಾದ+ ದೋಯೇಗ ಹೋಗಿ ಪುರೋಹಿತರನ್ನ ಸಾಯಿಸಿಬಿಟ್ಟ. ಅಂದು ಅವನು ನಾರಿನ ಏಫೋದನ್ನ ಹಾಕಿದ್ದ 85 ಗಂಡಸ್ರನ್ನ ಸಾಯಿಸಿದ.+ 19 ಅವನು ಪುರೋಹಿತರ ನಗರವಾಗಿದ್ದ ನೋಬಿನ+ ಜನ್ರನ್ನ ಸಹ ಕತ್ತಿಯಿಂದ ಸಾಯಿಸಿದ. ಅಲ್ಲಿದ್ದ ಗಂಡಸ್ರನ್ನ ಸ್ತ್ರೀಯರನ್ನ ಮಕ್ಕಳನ್ನ ಕೂಸುಗಳನ್ನ ಹೋರಿ ಕತ್ತೆ ಕುರಿ ಹೀಗೆ ಎಲ್ಲವನ್ನೂ ಕತ್ತಿಯಿಂದ ಸಾಯಿಸಿದ.

20 ಅಹೀಟೂಬನ ಮಗನಾದ ಅಹೀಮೆಲೆಕನ ಒಬ್ಬ ಮಗ ಅಲ್ಲಿಂದ ತಪ್ಪಿಸ್ಕೊಂಡು ದಾವೀದನ ಜೊತೆ ಇರೋಕೆ ಓಡಿಹೋದ. ಅವನ ಹೆಸ್ರು ಎಬ್ಯಾತಾರ.+ 21 ಅವನು ದಾವೀದನಿಗೆ “ಯೆಹೋವನ ಪುರೋಹಿತರನ್ನ ಸೌಲ ಸಾಯಿಸಿದ್ದಾನೆ” ಅಂದ. 22 ಅದಕ್ಕೆ ದಾವೀದ ಎಬ್ಯಾತಾರನಿಗೆ “ಎದೋಮ್ಯನಾದ ದೋಯೇಗನನ್ನ ಅವತ್ತು ಅಲ್ಲಿ ನೋಡಿದಾಗ್ಲೇ ಅವನು ಖಂಡಿತ ನನ್ನ ವಿಷ್ಯ ಸೌಲನಿಗೆ ಹೇಳ್ತಾನೆ ಅಂತ ನಂಗೊತ್ತಿತ್ತು.+ ನಿನ್ನ ತಂದೆ ಮನೆಯವ್ರ ಸಾವಿಗೆ ನಾನೇ ಕಾರಣ. 23 ನನ್ನ ಜೊತೆ ಇರು. ಹೆದರಬೇಡ, ನಾನು ನಿನ್ನನ್ನ ಕಾಪಾಡ್ತೀನಿ.+ ಯಾಕಂದ್ರೆ ಯಾರು ನಿನ್ನ ಪ್ರಾಣ ತೆಗಿಬೇಕು ಅಂತಿದ್ದಾನೋ ಅವನು ನನ್ನ ಪ್ರಾಣನೂ ತೆಗಿಬೇಕು ಅಂತಿದ್ದಾನೆ” ಅಂದ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ