ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಆದಿಕಾಂಡ 49
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಆದಿಕಾಂಡ ಮುಖ್ಯಾಂಶಗಳು

      • ಸಾಯೋ ಮುಂಚೆ ಯಾಕೋಬನ ಭವಿಷ್ಯವಾಣಿ (1-28)

        • ಯೆಹೂದನಿಂದ ಶೀಲೋ ಬರ್ತಾನೆ (10)

      • ಶವಸಂಸ್ಕಾರದ ಬಗ್ಗೆ ಯಾಕೋಬನ ನಿರ್ದೇಶನ (29-32)

      • ಯಾಕೋಬನ ಮರಣ (33)

ಆದಿಕಾಂಡ 49:1

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 6/2020, ಪು. 4

ಆದಿಕಾಂಡ 49:3

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 33:6
  • +ಆದಿ 29:32; ವಿಮೋ 6:14; 1ಪೂರ್ವ 5:1

ಆದಿಕಾಂಡ 49:4

ಮಾರ್ಜಿನಲ್ ರೆಫರೆನ್ಸ್

  • +ಆದಿ 35:22

ಆದಿಕಾಂಡ 49:5

ಮಾರ್ಜಿನಲ್ ರೆಫರೆನ್ಸ್

  • +ಆದಿ 29:33, 34; 35:23
  • +ಆದಿ 34:25

ಆದಿಕಾಂಡ 49:6

ಪಾದಟಿಪ್ಪಣಿ

  • *

    ಪದವಿವರಣೆ ನೋಡಿ.

  • *

    ಅಥವಾ “ಘನತೆಯೇ.”

ಮಾರ್ಜಿನಲ್ ರೆಫರೆನ್ಸ್

  • +ಆದಿ 34:7

ಆದಿಕಾಂಡ 49:7

ಮಾರ್ಜಿನಲ್ ರೆಫರೆನ್ಸ್

  • +ಆದಿ 34:25
  • +ಯೆಹೋ 19:1; 21:41

ಆದಿಕಾಂಡ 49:8

ಮಾರ್ಜಿನಲ್ ರೆಫರೆನ್ಸ್

  • +ಆದಿ 29:35; ಧರ್ಮೋ 33:7
  • +ಆದಿ 43:8, 9; 46:28; 1ಪೂರ್ವ 5:2
  • +ನ್ಯಾಯ 1:2
  • +ಅರ 10:14; 2ಸಮು 5:3

ಆದಿಕಾಂಡ 49:9

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 5:5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರಕಟನೆ, ಪು. 83-84

ಆದಿಕಾಂಡ 49:10

ಪಾದಟಿಪ್ಪಣಿ

  • *

    ಅರ್ಥ “ಇದು ಯಾರದ್ದೋ ಅವನು; ಇದು ಯಾರಿಗೆ ಸೇರಿದ್ದೋ ಅವನು.”

  • *

    ಅಕ್ಷ. “ಆಜ್ಞೆ ಕೊಡುವವನ.”

ಮಾರ್ಜಿನಲ್ ರೆಫರೆನ್ಸ್

  • +ಅರ 24:17; 2ಸಮು 2:4; 7:16, 17
  • +ಯೆಶಾ 9:6; ಯೆಹೆ 21:27; ಲೂಕ 1:32; ಇಬ್ರಿ 7:14
  • +ಕೀರ್ತ 2:8; ಯೆಶಾ 11:10; ಮತ್ತಾ 2:6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಯೆಹೋವನ ಸಮೀಪಕ್ಕೆ ಬನ್ನಿರಿ, ಪು. 192

    ಕಾವಲಿನಬುರುಜು,

    8/15/2011, ಪು. 9

    12/1/2007, ಪು. 5-7

    1/15/2004, ಪು. 29

    10/1/2002, ಪು. 17-20

    4/1/1993, ಪು. 8

    ಪ್ರಕಟನೆ, ಪು. 83-84

    ಜ್ಞಾನ, ಪು. 92-93

ಆದಿಕಾಂಡ 49:13

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 33:18, 19
  • +ಮತ್ತಾ 4:13
  • +ಯೆಹೋ 19:10

ಆದಿಕಾಂಡ 49:14

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 33:18; 1ಪೂರ್ವ 7:5

ಆದಿಕಾಂಡ 49:15

ಪಾದಟಿಪ್ಪಣಿ

  • *

    ಅಕ್ಷ. “ಕಡ್ಡಾಯ ದುಡಿಮೆ.”

ಆದಿಕಾಂಡ 49:16

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 33:22
  • +ನ್ಯಾಯ 13:2, 24; 15:20

ಆದಿಕಾಂಡ 49:17

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 14:19; 15:15

ಆದಿಕಾಂಡ 49:19

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 33:20
  • +ಯೆಹೋ 13:8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    6/1/2004, ಪು. 15

ಆದಿಕಾಂಡ 49:20

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 33:24
  • +1ಅರ 4:7, 16

ಆದಿಕಾಂಡ 49:21

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 33:23
  • +ಮತ್ತಾ 4:13, 15

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    8/15/2002, ಪು. 12

ಆದಿಕಾಂಡ 49:22

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 33:13-17

ಆದಿಕಾಂಡ 49:23

ಮಾರ್ಜಿನಲ್ ರೆಫರೆನ್ಸ್

  • +ಆದಿ 37:5, 8; 40:15

ಆದಿಕಾಂಡ 49:24

ಮಾರ್ಜಿನಲ್ ರೆಫರೆನ್ಸ್

  • +ಆದಿ 50:20
  • +ಯೆಹೋ 1:1, 6; ನ್ಯಾಯ 11:32

ಆದಿಕಾಂಡ 49:25

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 33:13

ಆದಿಕಾಂಡ 49:26

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 17:14
  • +ಧರ್ಮೋ 33:16

ಆದಿಕಾಂಡ 49:27

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 33:12
  • +ನ್ಯಾಯ 20:15, 16; 1ಸಮು 9:16
  • +ಎಸ್ತೇ 2:5; 8:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಅನುಕರಿಸಿ, ಪು. 162-165

ಆದಿಕಾಂಡ 49:28

ಮಾರ್ಜಿನಲ್ ರೆಫರೆನ್ಸ್

  • +ಇಬ್ರಿ 11:21

ಆದಿಕಾಂಡ 49:29

ಮಾರ್ಜಿನಲ್ ರೆಫರೆನ್ಸ್

  • +ಆದಿ 35:29; 49:33
  • +ಆದಿ 23:17, 18

ಆದಿಕಾಂಡ 49:31

ಮಾರ್ಜಿನಲ್ ರೆಫರೆನ್ಸ್

  • +ಆದಿ 23:2, 19; 25:9, 10
  • +ಆದಿ 35:29

ಆದಿಕಾಂಡ 49:32

ಮಾರ್ಜಿನಲ್ ರೆಫರೆನ್ಸ್

  • +ಆದಿ 23:17, 18

ಆದಿಕಾಂಡ 49:33

ಮಾರ್ಜಿನಲ್ ರೆಫರೆನ್ಸ್

  • +ಅಕಾ 7:15

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಆದಿ. 49:3ಧರ್ಮೋ 33:6
ಆದಿ. 49:3ಆದಿ 29:32; ವಿಮೋ 6:14; 1ಪೂರ್ವ 5:1
ಆದಿ. 49:4ಆದಿ 35:22
ಆದಿ. 49:5ಆದಿ 29:33, 34; 35:23
ಆದಿ. 49:5ಆದಿ 34:25
ಆದಿ. 49:6ಆದಿ 34:7
ಆದಿ. 49:7ಆದಿ 34:25
ಆದಿ. 49:7ಯೆಹೋ 19:1; 21:41
ಆದಿ. 49:8ಆದಿ 29:35; ಧರ್ಮೋ 33:7
ಆದಿ. 49:8ಆದಿ 43:8, 9; 46:28; 1ಪೂರ್ವ 5:2
ಆದಿ. 49:8ನ್ಯಾಯ 1:2
ಆದಿ. 49:8ಅರ 10:14; 2ಸಮು 5:3
ಆದಿ. 49:9ಪ್ರಕ 5:5
ಆದಿ. 49:10ಅರ 24:17; 2ಸಮು 2:4; 7:16, 17
ಆದಿ. 49:10ಯೆಶಾ 9:6; ಯೆಹೆ 21:27; ಲೂಕ 1:32; ಇಬ್ರಿ 7:14
ಆದಿ. 49:10ಕೀರ್ತ 2:8; ಯೆಶಾ 11:10; ಮತ್ತಾ 2:6
ಆದಿ. 49:13ಧರ್ಮೋ 33:18, 19
ಆದಿ. 49:13ಮತ್ತಾ 4:13
ಆದಿ. 49:13ಯೆಹೋ 19:10
ಆದಿ. 49:14ಧರ್ಮೋ 33:18; 1ಪೂರ್ವ 7:5
ಆದಿ. 49:16ಧರ್ಮೋ 33:22
ಆದಿ. 49:16ನ್ಯಾಯ 13:2, 24; 15:20
ಆದಿ. 49:17ನ್ಯಾಯ 14:19; 15:15
ಆದಿ. 49:19ಧರ್ಮೋ 33:20
ಆದಿ. 49:19ಯೆಹೋ 13:8
ಆದಿ. 49:20ಧರ್ಮೋ 33:24
ಆದಿ. 49:201ಅರ 4:7, 16
ಆದಿ. 49:21ಧರ್ಮೋ 33:23
ಆದಿ. 49:21ಮತ್ತಾ 4:13, 15
ಆದಿ. 49:22ಧರ್ಮೋ 33:13-17
ಆದಿ. 49:23ಆದಿ 37:5, 8; 40:15
ಆದಿ. 49:24ಆದಿ 50:20
ಆದಿ. 49:24ಯೆಹೋ 1:1, 6; ನ್ಯಾಯ 11:32
ಆದಿ. 49:25ಧರ್ಮೋ 33:13
ಆದಿ. 49:26ಯೆಹೋ 17:14
ಆದಿ. 49:26ಧರ್ಮೋ 33:16
ಆದಿ. 49:27ಧರ್ಮೋ 33:12
ಆದಿ. 49:27ನ್ಯಾಯ 20:15, 16; 1ಸಮು 9:16
ಆದಿ. 49:27ಎಸ್ತೇ 2:5; 8:7
ಆದಿ. 49:28ಇಬ್ರಿ 11:21
ಆದಿ. 49:29ಆದಿ 35:29; 49:33
ಆದಿ. 49:29ಆದಿ 23:17, 18
ಆದಿ. 49:31ಆದಿ 23:2, 19; 25:9, 10
ಆದಿ. 49:31ಆದಿ 35:29
ಆದಿ. 49:32ಆದಿ 23:17, 18
ಆದಿ. 49:33ಅಕಾ 7:15
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
  • 31
  • 32
  • 33
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಆದಿಕಾಂಡ 49:1-33

ಆದಿಕಾಂಡ

49 ಆಮೇಲೆ ಯಾಕೋಬ ಮಕ್ಕಳನ್ನ ಕರೆದು ಹೀಗಂದ: “ನೀವೆಲ್ಲ ಒಟ್ಟಾಗಿ ಬನ್ನಿ. ಮುಂದೆ ನಿಮಗೆ ಏನಾಗುತ್ತೆ ಅಂತ ಹೇಳ್ತೀನಿ. 2 ಯಾಕೋಬನ ಮಕ್ಕಳೇ, ನೀವೆಲ್ಲ ಜೊತೆಯಾಗಿ ಬಂದು ಕೇಳಿ. ನಿಮ್ಮ ತಂದೆ ಇಸ್ರಾಯೇಲ ಹೇಳೋ ಮಾತು ಕೇಳಿ.

3 ರೂಬೇನ,+ ನೀನು ನನ್ನ ಮೊದಲನೇ ಮಗ,+ ನನ್ನ ಚೈತನ್ಯ, ನನ್ನ ಸಂತಾನಶಕ್ತಿಗೆ ಪ್ರಥಮಫಲ. ನೀನು ಗೌರವದಲ್ಲಿ ಬಲದಲ್ಲಿ ಶ್ರೇಷ್ಠ. 4 ಆದ್ರೆ ನೀನು ಇನ್ನು ಮುಂದೆ ನಿನ್ನ ತಮ್ಮಂದಿರಿಗಿಂತ ಶ್ರೇಷ್ಠನಾಗಿರಲ್ಲ. ಯಾಕಂದ್ರೆ ನೀನು ಪ್ರವಾಹದ ನೀರಿನ ಹಾಗೆ ನಿನ್ನನ್ನ ನಿಯಂತ್ರಣದಲ್ಲಿ ಇಡಲಿಲ್ಲ. ನಿನ್ನ ತಂದೆಯ ಹಾಸಿಗೆ ಹತ್ತಿ ಅದನ್ನ ಅಶುದ್ಧಮಾಡ್ದೆ.+ ಇವನು ನನ್ನ ಹಾಸಿಗೆ ಹತ್ತಿದ್ದು ನಿಜ!

5 ಸಿಮೆಯೋನ ಮತ್ತು ಲೇವಿ ಅಣ್ಣತಮ್ಮಂದಿರು.+ ಅವರ ಕತ್ತಿಗಳು ಹಿಂಸೆಯ ಆಯುಧಗಳು.+ 6 ನನ್ನ ಪ್ರಾಣವೇ,* ಅವರ ಸಹವಾಸ ಮಾಡಬೇಡ. ನನ್ನ ಹೃದಯವೇ,* ಅವರ ಗುಂಪಿಗೆ ಸೇರಬೇಡ. ಯಾಕಂದ್ರೆ ಅವರು ಕೋಪದಿಂದ ಜನ್ರನ್ನ ಕೊಂದ್ರು.+ ಮಜಾ ಸಿಗೋಕೆ ಹೋರಿಗಳನ್ನ ಕುಂಟುಮಾಡಿದ್ರು. 7 ಅವರ ಕೋಪ ಮತ್ತು ರೋಷಕ್ಕೆ ಶಾಪ ತಟ್ಟಲಿ. ಯಾಕಂದ್ರೆ ಅವರ ಕೋಪ ಕ್ರೂರ, ಅವರ ರೋಷ ಉಗ್ರ.+ ಹಾಗಾಗಿ ಯಾಕೋಬನ ದೇಶದಲ್ಲಿ ಅವರನ್ನ ಚದರಿಸ್ತೀನಿ. ಇಸ್ರಾಯೇಲನ ದೇಶದಲ್ಲಿ ಅವರನ್ನ ಚೆಲ್ಲಾಪಿಲ್ಲಿ ಮಾಡ್ತೀನಿ.+

8 ಯೆಹೂದ,+ ನಿನ್ನ ಅಣ್ಣತಮ್ಮಂದಿರು ನಿನ್ನನ್ನ ಹೊಗಳ್ತಾರೆ.+ ನಿನ್ನ ಕೈ ನಿನ್ನ ಶತ್ರುಗಳ ಕುತ್ತಿಗೆ ಮೇಲಿರುತ್ತೆ.+ ನಿನ್ನ ತಂದೆಯ ಮಕ್ಕಳು ನಿನ್ನ ಮುಂದೆ ತಲೆ ಬಾಗ್ತಾರೆ.+ 9 ಯೆಹೂದ ಸಿಂಹದ ಮರಿ.+ ನನ್ನ ಮಗನೇ ನೀನು ಬೇಟೆ ಹಿಡ್ಕೊಂಡೇ ಬರ್ತಿಯ. ಅವನು ಸಿಂಹದ ತರ ಕಾಲು ಚಾಚಿ ಮಲಗಿದ್ದಾನೆ. ಸಿಂಹದ ತರ ಇರೋ ಅವನನ್ನ ಕೆಣಕೋ ಧೈರ್ಯ ಯಾರಿಗಿದೆ? 10 ಶೀಲೋ* ಬರೋ ತನಕ ರಾಜದಂಡ ಯೆಹೂದನ ಕೈಯಿಂದ ತಪ್ಪಿ ಹೋಗಲ್ಲ.+ ರಾಜನ* ಕೋಲೂ ಅವನ ಪಾದಗಳ ಮಧ್ಯದಿಂದ ಕದಲಲ್ಲ.+ ಜನ್ರೆಲ್ಲ ಶೀಲೋಗೆ ವಿಧೇಯರಾಗ್ತಾರೆ.+ 11 ಯೆಹೂದ ತನ್ನ ಕತ್ತೆಯನ್ನ ದ್ರಾಕ್ಷಿ ಬಳ್ಳಿಗೆ, ತನ್ನ ಕತ್ತೆಮರಿಯನ್ನ ಅತ್ಯುತ್ತಮ ದ್ರಾಕ್ಷಿ ಬಳ್ಳಿಗೆ ಕಟ್ತಾನೆ. ತನ್ನ ಬಟ್ಟೆಯನ್ನ ದ್ರಾಕ್ಷಾಮದ್ಯದಲ್ಲೂ ತನ್ನ ಅಂಗಿಯನ್ನ ದ್ರಾಕ್ಷಾರಸದಲ್ಲೂ ಒಗಿತಾನೆ. 12 ದ್ರಾಕ್ಷಾಮದ್ಯದಿಂದಾಗಿ ಅವನ ಕಣ್ಣುಗಳು ಕಡು ಕೆಂಪಾಗಿದೆ, ಹಾಲಿನಿಂದಾಗಿ ಅವನ ಹಲ್ಲುಗಳು ಬೆಳ್ಳಗಿದೆ.

13 ಜೆಬುಲೂನ+ ಸಮುದ್ರತೀರದ ಹತ್ರ, ಹಡಗುಗಳನ್ನ ಲಂಗರು ಹಾಕಿ ನಿಲ್ಲಿಸೋ ತೀರದ ಹತ್ರ ವಾಸಿಸ್ತಾನೆ.+ ಅವನ ಪ್ರದೇಶದ ಗಡಿ ಸೀದೋನಿನ ದಿಕ್ಕಿನ ತನಕ ಇರುತ್ತೆ.+

14 ಇಸ್ಸಾಕಾರ+ ಎರಡು ತಡಿಚೀಲಗಳಲ್ಲಿ ಹೊರೆಗಳನ್ನ ಹೊತ್ಕೊಂಡು ಮಲಗಿರೋ ಬಲಿಷ್ಠ ಕತ್ತೆ ತರ ಇದ್ದಾನೆ. 15 ಅವನು ಆರಾಮವಾಗಿರೋ ಜಾಗ ತುಂಬ ಚೆನ್ನಾಗಿದೆ, ಸುಂದರವಾಗಿದೆ ಅಂತ ಅನಿಸುತ್ತೆ. ಹೊರೆ ಹೊರೋಕೆ ಹೆಗಲು ಬಗ್ಗಿಸ್ತಾನೆ. ಅವನು ಕಷ್ಟದ ಕೆಲಸ* ಮಾಡೋಕೆ ಹಿಂಜರಿಯಲ್ಲ.

16 ದಾನ್‌+ ಇಸ್ರಾಯೇಲಿನ ಕುಲಗಳಲ್ಲಿ ಒಂದಾಗಿದ್ದು ಎಲ್ಲ ಜನ್ರಿಗೆ ನ್ಯಾಯತೀರಿಸ್ತಾನೆ.+ 17 ದಾನ್‌ ರಸ್ತೆಪಕ್ಕದಲ್ಲಿರೋ ಹಾವಿನ ತರ ಇರ್ತಾನೆ. ದಾರಿ ಪಕ್ಕದಲ್ಲಿದ್ದು ಕುದುರೆಯ ಹಿಮ್ಮಡಿ ಕಚ್ಚಿ ಸವಾರನನ್ನ ಕೆಳಗೆ ಉರುಳಿಸೋ ಕೊಂಬಿರೋ ವಿಷಹಾವಿನ ತರ ಇರ್ತಾನೆ.+ 18 ಯೆಹೋವ, ನೀನು ರಕ್ಷಿಸೋ ಸಮಯಕ್ಕಾಗಿ ನಾನು ಕಾಯ್ತೀನಿ.

19 ಗಾದನ+ ಮೇಲೆ ಕೊಳ್ಳೆ ಹೊಡೆಯುವವರ ಗುಂಪು ದಾಳಿ ಮಾಡುತ್ತೆ. ಆದ್ರೆ ಅವನು ಅವರನ್ನ ಅಟ್ಟಿಸಿಕೊಂಡು ಹೋಗಿ ಹೊಡಿತಾನೆ.+

20 ಅಶೇರನ+ ಹತ್ರ ಸಾಕಷ್ಟು ಆಹಾರ ಇರುತ್ತೆ. ಅವನು ರಾಜಭೋಜನಕ್ಕೆ ಯೋಗ್ಯ ಆಹಾರ ಒದಗಿಸ್ತಾನೆ.+

21 ನಫ್ತಾಲಿ+ ಹೆಣ್ಣುಜಿಂಕೆ ತರ ಚುರುಕಾಗಿ ಇರ್ತಾನೆ. ಅವನು ಆಡೋ ಮಾತು ತುಂಬ ಇಂಪು.+

22 ಯೋಸೇಫ,+ ತುಂಬ ಹಣ್ಣುಗಳನ್ನ ಬಿಡೋ ಮರದ ಕೊಂಬೆ. ಬುಗ್ಗೆ ಹತ್ರಾನೇ ಬೆಳೆಯೋ ಮರದ ಕೊಂಬೆ. ಉದ್ದುದ್ದ ಕೊಂಬೆಗಳು ಬೆಳೆದು ಗೋಡೆ ದಾಟುತ್ತೆ. 23 ಆದ್ರೆ ಬಿಲ್ಲುಗಾರರು ಪದೇ ಪದೇ ಅವನ ಮೇಲೆ ಬಾಣ ಎಸೆದು ದಾಳಿ ಮಾಡಿದ್ರು. ಅವನ ವಿರುದ್ಧ ಯಾವಾಗ್ಲೂ ಮನಸ್ಸಲ್ಲಿ ಕಡುದ್ವೇಷ ಇಟ್ಕೊಂಡ್ರು.+ 24 ಆದ್ರೂ ಅವನ ಬಿಲ್ಲು ನಡುಗಲಿಲ್ಲ.+ ಅವನ ಕೈಗಳು ಬಲಿಷ್ಠವಾಗಿ, ಚುರುಕಾಗಿಯೇ ಇತ್ತು.+ ಇದು ಯಾಕೋಬನಿಗೆ ಸಹಾಯ ಮಾಡೋ ಪರಾಕ್ರಮಿಯ ಕೈಯಿಂದ, ಇಸ್ರಾಯೇಲನ ಬಂಡೆ, ಕುರುಬ ಆಗಿರುವವನ ಕೈಯಿಂದ ಆಯ್ತು. 25 ಯೋಸೇಫ ಅವನ ತಂದೆಯ ದೇವರು ಕೊಟ್ಟ ಉಡುಗೊರೆ. ದೇವರು ಅವನಿಗೆ ಸಹಾಯ ಮಾಡ್ತಾನೆ. ಅವನು ಸರ್ವಶಕ್ತನ ಜೊತೆ ಇದ್ದಾನೆ. ಆತನು ಅವನಿಗೆ ಮೇಲಿನ ಆಕಾಶದ ಆಶೀರ್ವಾದಗಳನ್ನೂ ಕೆಳಗಿನ ಆಳವಾದ ನೀರಿನ ಆಶೀರ್ವಾದಗಳನ್ನೂ ಕೊಡ್ತಾನೆ.+ ಅವನಿಗೆ ತುಂಬ ಮಕ್ಕಳನ್ನ, ಪ್ರಾಣಿಗಳನ್ನ ಕೊಟ್ಟು ಆಶೀರ್ವದಿಸ್ತಾನೆ. 26 ಶಾಶ್ವತವಾಗಿ ಇರೋ ಬೆಟ್ಟಗಳಲ್ಲಿ ಸಿಗೋ ಉತ್ತಮ ವಸ್ತುಗಳಿಗಿಂತ, ಯಾವಾಗ್ಲೂ ಇರೋ ಬೆಟ್ಟಗಳ ಸೌಂದರ್ಯಕ್ಕಿಂತ ನಿನ್ನ ತಂದೆಯ ಆಶೀರ್ವಾದ ಹೆಚ್ಚು ಶ್ರೇಷ್ಠ.+ ಆ ಆಶೀರ್ವಾದಗಳು ಯೋಸೇಫನ ತಲೆ ಮೇಲೆ ಅಂದ್ರೆ ತನ್ನ ಅಣ್ಣತಮ್ಮಂದಿರಲ್ಲಿ ಆಯ್ಕೆ ಆಗಿರುವವನ ತಲೆ ಮೇಲೆ ಯಾವಾಗ್ಲೂ ಇರುತ್ತೆ.+

27 ಬೆನ್ಯಾಮೀನ+ ತೋಳದ ಹಾಗೆ ಬೇಟೆಯನ್ನ ಸೀಳಿ ಹಾಕ್ತಾ ಇರ್ತಾನೆ.+ ಅವನು ಬೇಟೆಯನ್ನ ಬೆಳಿಗ್ಗೆ ತಿಂತಾನೆ, ಕೊಳ್ಳೆ ಹೊಡೆದದ್ದನ್ನ ಸಂಜೆ ಹಂಚಿಕೊಳ್ತಾನೆ.”+

28 ಇವರೆಲ್ಲರಿಂದ ಇಸ್ರಾಯೇಲಿನ 12 ಕುಲ ಬಂತು. ಇವು ಅವರ ತಂದೆ ಅವರನ್ನ ಆಶೀರ್ವದಿಸುವಾಗ ಹೇಳಿದ ಮಾತುಗಳು. ಅವನು ಪ್ರತಿಯೊಬ್ಬನಿಗೆ ತಕ್ಕ ಆಶೀರ್ವಾದ ಕೊಟ್ಟ.+

29 ಆಮೇಲೆ ಅವನು ತನ್ನ ಮಕ್ಕಳಿಗೆ ಈ ಆಜ್ಞೆ ಕೊಟ್ಟ: “ನನ್ನ ಸಾವು ತುಂಬ ಹತ್ರ ಇದೆ.+ ನನ್ನ ಪೂರ್ವಜರನ್ನ ಸಮಾಧಿ ಮಾಡಿದ ಜಾಗದಲ್ಲಿ ಅಂದ್ರೆ ಹಿತ್ತಿಯನಾದ ಎಫ್ರೋನನ ಜಮೀನಲ್ಲಿರೋ ಗವಿಯಲ್ಲಿ ನನ್ನನ್ನ ಸಮಾಧಿ ಮಾಡಿ.+ 30 ಆ ಗವಿ ಕಾನಾನ್‌ ದೇಶದಲ್ಲಿ ಮಮ್ರೆಗೆ ಪಕ್ಕದಲ್ಲಿರೋ ಮಕ್ಪೇಲದ ಜಮೀನಲ್ಲಿದೆ. ಸಮಾಧಿಗೆ ಅಂತಾನೇ ಅಬ್ರಹಾಮ ಆ ಜಮೀನನ್ನ ಹಿತ್ತಿಯನಾದ ಎಫ್ರೋನನಿಂದ ತಗೊಂಡಿದ್ದ. 31 ಅಲ್ಲೇ ಅಬ್ರಹಾಮ, ಅವನ ಹೆಂಡತಿ ಸಾರಳನ್ನ ಸಮಾಧಿ ಮಾಡಿದ್ದು.+ ಇಸಾಕನಿಗೂ+ ಅವನ ಹೆಂಡತಿ ರೆಬೆಕ್ಕಗೂ ಸಮಾಧಿ ಮಾಡಿದ್ದು ಅಲ್ಲೇ. ನಾನು ಲೇಯಳನ್ನೂ ಅಲ್ಲೇ ಸಮಾಧಿ ಮಾಡ್ದೆ. 32 ಆ ಜಮೀನನ್ನ, ಅದ್ರಲ್ಲಿರೋ ಗವಿಯನ್ನ ಹಿತ್ತಿಯರಿಂದ ತಗೊಂಡಿದ್ದು.”+

33 ಯಾಕೋಬ ಗಂಡುಮಕ್ಕಳಿಗೆ ಈ ಎಲ್ಲ ನಿರ್ದೇಶನ ಕೊಟ್ಟು ಮುಗಿಸಿದ ಮೇಲೆ ಹಾಸಿಗೆ ಮೇಲೆ ಮಲಗಿ ಕೊನೆ ಉಸಿರೆಳೆದ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ