ಎರಡನೇ ಪೂರ್ವಕಾಲವೃತ್ತಾಂತ
11 ರೆಹಬ್ಬಾಮ ಯೆರೂಸಲೇಮಿಗೆ ಬಂದ ತಕ್ಷಣ ಯೆಹೂದ ಮತ್ತು ಬೆನ್ಯಾಮೀನಿನ+ ಎಲ್ಲ ಮನೆತನದಿಂದ ತರಬೇತಿ ಪಡೆದ* 1,80,000 ವೀರ ಸೈನಿಕರನ್ನ ಒಟ್ಟುಸೇರಿಸಿದ. ಇಸ್ರಾಯೇಲ್ ಜನ್ರ ವಿರುದ್ಧ ಯುದ್ಧ ಮಾಡಿ ಮತ್ತೆ ರಾಜ ಆಗೋಕೆ ಹೀಗೆ ಮಾಡಿದ.+ 2 ಆಗ ಯೆಹೋವನ ಸಂದೇಶ ಸತ್ಯ ದೇವರ ಸೇವಕ ಶೆಮಾಯಗೆ+ ಸಿಕ್ತು. ಅದೇನೆಂದ್ರೆ 3 “ನೀನು ಸೊಲೊಮೋನನ ಮಗ, ಯೆಹೂದದ ರಾಜ ಆಗಿರೋ ರೆಹಬ್ಬಾಮನಿಗೆ, ಯೆಹೂದ ಮತ್ತು ಬೆನ್ಯಾಮೀನಿನಲ್ಲಿರೋ ಎಲ್ಲ ಇಸ್ರಾಯೇಲ್ಯರಿಗೆ ಹೀಗೆ ಹೇಳು 4 ‘ಯೆಹೋವ ಹೀಗೆ ಹೇಳಿದ್ದಾನೆ, ನೀವು ನಿಮ್ಮ ಸಹೋದರರ ವಿರುದ್ಧ ಯುದ್ಧ ಮಾಡೋಕೆ ಹೋಗಬಾರದು. ನೀವೆಲ್ಲ ನಿಮ್ಮನಿಮ್ಮ ಮನೆಗಳಿಗೆ ವಾಪಸ್ ಹೋಗಬೇಕು. ಯಾಕಂದ್ರೆ, ಹೀಗೆ ಆಗೋ ತರ ಮಾಡಿದವನು ನಾನೇ.’”+ ಹಾಗಾಗಿ ಅವರು ಯೆಹೋವನ ಮಾತನ್ನ ಕೇಳಿ ಯಾರೊಬ್ಬಾಮನ ವಿರುದ್ಧ ಹೋಗದೆ ತಮ್ಮತಮ್ಮ ಮನೆಗೆ ವಾಪಸ್ ಹೋದ್ರು.
5 ರೆಹಬ್ಬಾಮ ಯೆರೂಸಲೇಮಲ್ಲೇ ಇದ್ದು ಯೆಹೂದದಲ್ಲಿ ಭದ್ರಕೋಟೆಗಳಿದ್ದ ಪಟ್ಟಣಗಳನ್ನ ಕಟ್ಟಿದ. 6 ಹೀಗೆ ಅವನು ಬೆತ್ಲೆಹೇಮ್,+ ಏಟಾಮ್, ತೆಕೋವ,+ 7 ಬೇತ್-ಚೂರ್, ಸೋಕೋ,+ ಅದುಲ್ಲಾಮ್,+ 8 ಗತ್,+ ಮಾರೇಷ, ಜೀಫ್,+ 9 ಅದೋರೈಮ್, ಲಾಕೀಷ್,+ ಅಜೇಕ,+ 10 ಚೊರ್ಗ, ಅಯ್ಯಾಲೋನ್,+ ಹೆಬ್ರೋನ್+ ಪಟ್ಟಣಗಳನ್ನ ಕಟ್ಟಿದ.* ಭದ್ರ ಕೋಟೆಗಳಿದ್ದ ಈ ಪಟ್ಟಣಗಳು ಯೆಹೂದ ಮತ್ತು ಬೆನ್ಯಾಮೀನಿನಲ್ಲಿ ಇದ್ವು. 11 ಅಷ್ಟೇ ಅಲ್ಲ ಅವನು ಈ ಪಟ್ಟಣಗಳನ್ನು ಬಲಪಡಿಸಿ ಅಲ್ಲಿಗೆ ಸೇನಾಪತಿಗಳನ್ನ ನೇಮಿಸಿದ. ಅವ್ರಿಗೆ ಬೇಕಾದ ಊಟ, ಎಣ್ಣೆ ಮತ್ತು ದ್ರಾಕ್ಷಾಮದ್ಯದ ಏರ್ಪಾಡು ಮಾಡಿದ. 12 ಬೇರೆಬೇರೆ ಪಟ್ಟಣಗಳಿಗೆ ಎಷ್ಟೋ ದೊಡ್ಡದೊಡ್ಡ ಗುರಾಣಿಗಳನ್ನ ಮತ್ತು ಈಟಿಗಳನ್ನ ಕಳಿಸಿದ. ಅವನು ಆ ಪಟ್ಟಣಗಳನ್ನ ತುಂಬ ಬಲಪಡಿಸಿದ. ಯೆಹೂದ ಮತ್ತು ಬೆನ್ಯಾಮೀನ್ ಅವನ ಕೈ ಕೆಳಗೇ ಇದ್ವು.
13 ಇಸ್ರಾಯೇಲಿನಲ್ಲಿ ಇದ್ದ ಪುರೋಹಿತರು ಮತ್ತು ಲೇವಿಯರು ಅವರವರ ಪ್ರದೇಶಗಳಿಂದ ಬಂದು ರೆಹಬ್ಬಾಮನ ಪಕ್ಷ ವಹಿಸಿದ್ರು. 14 ಲೇವಿಯರು ತಮಗೆ ಸೇರಿದ ಹುಲ್ಲುಗಾವಲನ್ನ ಮತ್ತು ಆಸ್ತಿಯನ್ನ+ ಬಿಟ್ಟು ಯೆಹೂದಕ್ಕೆ ಮತ್ತು ಯೆರೂಸಲೇಮಿಗೆ ಬಂದ್ರು. ಯಾಕಂದ್ರೆ ಯಾರೊಬ್ಬಾಮ ಮತ್ತು ಅವನ ಗಂಡುಮಕ್ಕಳು ಅವ್ರನ್ನ ಯೆಹೋವನ ಪುರೋಹಿತ ಸೇವೆಯಿಂದ ತಳ್ಳಿಬಿಟ್ಟಿದ್ರು.+ 15 ಆಮೇಲೆ ಯಾರೊಬ್ಬಾಮ ಸ್ವಂತ ಪುರೋಹಿತರನ್ನ ನೇಮಿಸ್ಕೊಂಡ. ಅವನೇ ಮಾಡ್ಕೊಂಡಿದ್ದ ದೇವಸ್ಥಾನಗಳಲ್ಲಿ ಸೇವೆಮಾಡೋಕೆ,+ ಆಡು*+ ಮತ್ತು ಕರುವಿನ ಮೂರ್ತಿಗಳಿಗೆ+ ಸೇವೆಮಾಡೋಕೆ ಅವ್ರನ್ನ ಇಟ್ಟ. 16 ಇಸ್ರಾಯೇಲ್ ದೇವರಾದ ಯೆಹೋವನನ್ನ ನಿಜವಾಗ್ಲೂ ಹುಡುಕೋರು ಇಸ್ರಾಯೇಲಿನ ಎಲ್ಲ ಕುಲಗಳಿಂದ ಯೆರೂಸಲೇಮಿಗೆ ಬಂದ್ರು. ಅವ್ರ ಪೂರ್ವಜರ ದೇವರಾದ ಯೆಹೋವನಿಗೆ ಬಲಿ ಕೊಟ್ರು.+ 17 ಅವರು ಸೊಲೊಮೋನನ ಮಗ ರೆಹಬ್ಬಾಮನಿಗೆ ಮೂರು ವರ್ಷ ಸಹಕಾರ ಕೊಟ್ಟು ಯೆಹೂದ ರಾಜ್ಯವನ್ನ ಬಲಪಡಿಸಿದ್ರು. ಯಾಕಂದ್ರೆ ಮೂರು ವರ್ಷದ ತನಕ ಅವರು ದಾವೀದ ಮತ್ತು ಸೊಲೊಮೋನ ತೋರಿಸಿದ ದಾರಿಯಲ್ಲೇ ನಡೆದ್ರು.
18 ಆಮೇಲೆ ರೆಹಬ್ಬಾಮ ಮಹ್ಲತಳನ್ನ ಮದ್ವೆ ಮಾಡ್ಕೊಂಡ. ಅವಳು ದಾವೀದನ ಮಗ ಯೆರೀಮೋತ ಮತ್ತು ಅಬೀಹೈಲಳ ಮಗಳು. ಅಬೀಹೈಲ್ ಇಷಯನ ಮಗ ಎಲೀಯಾಬನ+ ಮಗಳು. 19 ಸ್ವಲ್ಪ ಸಮಯ ಆದ್ಮೇಲೆ ರೆಹಬ್ಬಾಮ ಮತ್ತು ಮಹ್ಲತಳಿಗೆ ಯೆಗೂಷ್, ಶೆಮರ್ಯ ಮತ್ತು ಜಾಹಮ್ ಹುಟ್ಟಿದ್ರು. 20 ಆಮೇಲೆ ರೆಹಬ್ಬಾಮ ಅಬ್ಷಾಲೋಮನ+ ಮೊಮ್ಮಗಳಾದ ಮಾಕಾಳನ್ನ ಮದ್ವೆ ಮಾಡ್ಕೊಂಡ. ಅವ್ರಿಗೆ ಅಬೀಯ,+ ಅತ್ತೈ, ಜೀಜ ಮತ್ತು ಶೆಲೋಮೀತ್ ಹುಟ್ಟಿದ್ರು. 21 ರೆಹಬ್ಬಾಮ ತನ್ನ ಬೇರೆ ಹೆಂಡತಿಯರಿಗಿಂತ ಮತ್ತು ಉಪಪತ್ನಿಯರಿಗಿಂತ+ ಅಬ್ಷಾಲೋಮನ ಮೊಮ್ಮಗಳಾದ ಮಾಕಾಳನ್ನ ತುಂಬ ಪ್ರೀತಿಸಿದ. ಅವನಿಗೆ 18 ಹೆಂಡತಿಯರು ಮತ್ತು 60 ಉಪಪತ್ನಿಯರು ಇದ್ರು. ಅವ್ರಲ್ಲಿ ಅವನಿಗೆ 28 ಗಂಡುಮಕ್ಕಳು ಮತ್ತು 60 ಹೆಣ್ಣುಮಕ್ಕಳು ಹುಟ್ಟಿದ್ರು. 22 ರೆಹಬ್ಬಾಮ ಮಾಕಾಳ ಮಗ ಅಬೀಯನನ್ನ ತನ್ನ ಸಹೋದರರ ಮೇಲೆ ನಾಯಕನಾಗಿ ನೇಮಿಸಿದ. ಅಬೀಯನನ್ನ ರಾಜನಾಗಿ ಮಾಡಬೇಕಂತ ರೆಹಬ್ಬಾಮ ಅಂದ್ಕೊಂಡಿದ್ದ. 23 ಅದಕ್ಕೇ ಅವನು ಬುದ್ಧಿವಂತಿಕೆಯಿಂದ ತನ್ನ ಮಕ್ಕಳಲ್ಲಿ ಕೆಲವರನ್ನ ಭದ್ರ ಕೋಟೆಗಳಿದ್ದ ಎಲ್ಲ ಪಟ್ಟಣಗಳಿಗೆ+ ಅಂದ್ರೆ ಯೆಹೂದ ಮತ್ತು ಬೆನ್ಯಾಮೀನಿನ ಎಲ್ಲ ಪ್ರದೇಶಗಳಿಗೆ ಕಳಿಸಿದ.* ಅವ್ರಿಗೆ ಎಷ್ಟು ಬೇಕೋ ಅಷ್ಟು ಆಹಾರ ಕೊಟ್ಟ. ತುಂಬ ಹುಡುಗೀರ ಜೊತೆ ಅವ್ರ ಮದ್ವೆ ಮಾಡಿಸಿದ.