ಹೋಶೇಯ
8 “ಕೊಂಬು ಊದಿ!+
ಯೆಹೋವನ ಜನ್ರ* ವಿರುದ್ಧ ಶತ್ರು ಹದ್ದಿನ ತರ ಬರ್ತಾನೆ,+
ಯಾಕಂದ್ರೆ ಅವರು ನನ್ನ ಒಪ್ಪಂದ ಮುರಿದಿದ್ದಾರೆ,+ ನನ್ನ ನಿಯಮ ಮೀರಿದ್ದಾರೆ.+
2 ಅವರು ನನಗೆ ‘ನಮ್ಮ ದೇವರೇ, ಇಸ್ರಾಯೇಲ್ಯರಾದ ನಾವು ನಿನ್ನನ್ನ ತಿಳ್ಕೊಂಡಿದ್ದೀವಿ!’ ಅಂತ ಮೊರೆ ಇಡ್ತಿದ್ದಾರೆ.+
3 ಇಸ್ರಾಯೇಲ್ಯರು ಒಳ್ಳೇದನ್ನ ತಳ್ಳಿಬಿಟ್ಟಿದ್ದಾರೆ.+
ಶತ್ರು ಅವ್ರನ್ನ ಬೆನ್ನಟ್ಟಲಿ.
4 ಅವರು ನನ್ನ ಅಪ್ಪಣೆ ಇಲ್ಲದೆ ರಾಜರನ್ನ ನೇಮಿಸ್ಕೊಂಡಿದ್ದಾರೆ.
ನನ್ನ ಒಪ್ಪಿಗೆ ಪಡೆಯದೆ ಅಧಿಕಾರಿಗಳನ್ನ ನೇಮಿಸ್ಕೊಂಡಿದ್ದಾರೆ.
ತಮ್ಮ ಹತ್ರ ಇರೋ ಚಿನ್ನಬೆಳ್ಳಿಯಿಂದ ಮೂರ್ತಿಗಳನ್ನ ಮಾಡ್ಕೊಂಡು+ ತಮ್ಮನ್ನ ವಿನಾಶಕ್ಕೆ ಗುರಿ ಮಾಡ್ಕೊಂಡಿದ್ದಾರೆ.+
5 ಸಮಾರ್ಯವೇ, ನಿನ್ನ ಕರುವಿನ ಮೂರ್ತಿಯನ್ನ ತಿರಸ್ಕರಿಸಿದ್ದೀನಿ.+
ನನ್ನ ಕೋಪ ಅವ್ರ ಮೇಲೆ ಭಗ್ಗನೆ ಉರಿಯುತ್ತೆ.+
ಇನ್ನೆಷ್ಟರ ತನಕ ಅವರು ಹೀಗೇ ಇರ್ತಾರೆ? ಅವರು ಶುದ್ಧರಾಗೋದು ಯಾವಾಗ?
6 ಆ ಮೂರ್ತಿಯನ್ನ ಮಾಡಿದ್ದು ಇಸ್ರಾಯೇಲೇ.
ಅದನ್ನ ಕರಕುಶಲಗಾರ ಮಾಡಿದ, ಅದು ದೇವರಲ್ಲ,
ಸಮಾರ್ಯದ ಕರುವಿನ ಮೂರ್ತಿ ಚೂರು ಚೂರಾಗುತ್ತೆ.
ದಂಟುಗಳಲ್ಲಿ ಬಲಿತ ತೆನೆಗಳು ಬರಲ್ಲ,+
ತೆನೆ ಬಂದ್ರೂ ಹಿಟ್ಟು ಸಿಗಲ್ಲ.
ಸಿಕ್ಕಿದ್ರೂ ಅದನ್ನ ವಿದೇಶಿಯರು* ನುಂಗಿಬಿಡ್ತಾರೆ.+
8 ಶತ್ರು ಇಸ್ರಾಯೇಲನ್ನ ನುಂಗಿಬಿಡ್ತಾನೆ.+
ಬೇರೆ ಜನಾಂಗಗಳ ಮಧ್ಯದಲ್ಲಿ ಅವರು ಬೇಡವಾದ ಪಾತ್ರೆ ತರ ಇರ್ತಾರೆ.+
9 ಅವರು ಒಂಟಿ ಕಾಡುಕತ್ತೆ ತರ ಅಶ್ಶೂರ್ಯಕ್ಕೆ ಹೋಗಿದ್ದಾರೆ.+
ಎಫ್ರಾಯೀಮ್ ವೇಶ್ಯೆಯರನ್ನ ಹಣ ಕೊಟ್ಟು ಕರೆಸಿ ತನ್ನ ಪ್ರೇಯಸಿಯರನ್ನಾಗಿ ಮಾಡ್ಕೊಂಡಿದ್ದಾನೆ.+
10 ಅವರು ಆ ಪ್ರೇಯಸಿಯರನ್ನ ಬೇರೆ ಜನಾಂಗಗಳಿಂದ ಹಣಕೊಟ್ಟು ಕರೆಸಿದ್ರೂ
ನಾನು ಅವ್ರನ್ನ ಒಟ್ಟುಗೂಡಿಸ್ತೀನಿ.
ರಾಜ ಮತ್ತು ಅಧಿಕಾರಿಗಳು ಹೊರಿಸಿದ ಹೊರೆಯನ್ನ ಅವರು ತಾಳಲಾರದೆ ಕಷ್ಟದಲ್ಲಿ ಬೀಳ್ತಾರೆ.+
11 ಎಫ್ರಾಯೀಮ್ ಯಜ್ಞವೇದಿಗಳನ್ನ ಹೆಚ್ಚೆಚ್ಚಾಗಿ ಕಟ್ಟಿ ಪಾಪ ಮಾಡಿದ್ದಾನೆ.+
ಯಜ್ಞವೇದಿಗಳನ್ನ ಮಾಡ್ಕೊಂಡು ಪಾಪವನ್ನ ಜಾಸ್ತಿ ಮಾಡ್ಕೊಂಡಿದ್ದಾನೆ.+
13 ಅವರು ನನಗೆ ಬಲಿಗಳನ್ನ ಅರ್ಪಿಸ್ತಾರೆ, ಅವುಗಳ ಮಾಂಸ ತಿಂತಾರೆ,
ಆದ್ರೆ ಯೆಹೋವನಾದ ನಾನು ಆ ಬಲಿಗಳನ್ನ ಇಷ್ಟಪಡಲ್ಲ.+
ಅವ್ರ ತಪ್ಪುಗಳನ್ನ ಈಗ ನೆನಪು ಮಾಡ್ಕೊಳ್ತೀನಿ, ಅವರು ಪಾಪಮಾಡಿದ್ದಕ್ಕಾಗಿ ಅವ್ರಿಗೆ ಶಿಕ್ಷೆ ಕೊಡ್ತೀನಿ.+
ಅವರು ಈಜಿಪ್ಟಿಗೆ ವಾಪಸ್ ಹೋಗಿದ್ದಾರೆ.*+
14 ಇಸ್ರಾಯೇಲನು ತನ್ನನ್ನ ನಿರ್ಮಿಸಿದಾತನನ್ನೇ ಮರೆತು+ ದೇವಾಲಯಗಳನ್ನ ಕಟ್ಟಿದ್ದಾನೆ,+
ಯೆಹೂದನು ಕೋಟೆಗಳಿರೋ ಪಟ್ಟಣಗಳನ್ನ ಹೆಚ್ಚಿಸ್ಕೊಂಡಿದ್ದಾನೆ.+
ಆದ್ರೆ ನಾನು ಅವನ ಪಟ್ಟಣಗಳ ಮೇಲೆ ಬೆಂಕಿ ಕಳಿಸ್ತೀನಿ,
ಅದು ಪ್ರತಿಯೊಂದು ಪಟ್ಟಣದ ಕೋಟೆಗಳನ್ನ ಸುಟ್ಟುಬಿಡುತ್ತೆ.”+