ಪುಸ್ತಕ
1 ಯೆಹೋವ ಪೆತೂವೇಲನ ಮಗನಾದ ಯೋವೇಲನ* ಮೂಲಕ ಹೇಳಿದ ಮಾತುಗಳು:
ನಿಮ್ಮ ಕಾಲದಲ್ಲಾಗಲಿ ನಿಮ್ಮ ಪೂರ್ವಜರ ಕಾಲದಲ್ಲಾಗಲಿ ಇಂಥದ್ದೇನಾದ್ರೂ ನಡೆದಿದ್ಯಾ?+
4 ವಿನಾಶಕಾರಿ ಮಿಡತೆಗಳು ತಿಂದು ಉಳಿದದ್ದನ್ನ
ಹಿಂಡು ಹಿಂಡಾಗಿರೋ ಮಿಡತೆಗಳು ತಿಂದು ಹಾಕಿವೆ,+
ಹಿಂಡು ಹಿಂಡಾಗಿರೋ ಮಿಡತೆಗಳು ತಿಂದು ಉಳಿದದ್ದನ್ನ
ಇನ್ನೂ ರೆಕ್ಕೆ ಬೆಳೆದಿರದ ಮಿಡತೆಗಳು ತಿಂದು ಹಾಕಿವೆ,
ಇನ್ನೂ ರೆಕ್ಕೆ ಬೆಳೆದಿರದ ಮಿಡತೆಗಳು ತಿಂದು ಉಳಿದದ್ದನ್ನ
ಹೊಟ್ಟೆಬಾಕ ಮಿಡತೆಗಳು ತಿಂದು ಹಾಕಿವೆ.+
ದ್ರಾಕ್ಷಾಮದ್ಯ ಕುಡಿಯುವವ್ರೇ ಗೋಳಾಡಿ,
ಯಾಕಂದ್ರೆ ಸಿಹಿ ದ್ರಾಕ್ಷಾಮದ್ಯ ಇನ್ನು ಮುಂದೆ ನಿಮ್ಮ ಬಾಯಿಗೆ ಬೀಳಲ್ಲ.+
6 ಲೆಕ್ಕ ಇಲ್ಲದಷ್ಟು ಮಿಡತೆಗಳು ಒಂದು ಜನಾಂಗದ ತರ ನನ್ನ ದೇಶವನ್ನ ದಾಳಿ ಮಾಡಿವೆ.+
ಅವು ಬಲಿಷ್ಠವಾಗಿವೆ, ಅವುಗಳ ಹಲ್ಲುಗಳು ಸಿಂಹದ ಹಲ್ಲುಗಳ ತರ ಇವೆ,+
ದವಡೆಗಳು ಸಿಂಹದ ದವಡೆಗಳ ತರ ಇವೆ.
7 ಅವು ನನ್ನ ದ್ರಾಕ್ಷಿಬಳ್ಳಿಯನ್ನ ಹಾಳು ಮಾಡಿವೆ, ಅಂಜೂರ ಮರದ ಬುಡವನ್ನ ಮಾತ್ರ ಉಳಿಸಿವೆ,
ಅವುಗಳನ್ನ ಬೋಳು ಮಾಡಿ ಚೆಲ್ಲಾಪಿಲ್ಲಿ ಮಾಡಿವೆ,
ರೆಂಬೆಕೊಂಬೆಗಳ ತೊಗಟೆಯನ್ನ ಸುಲಿದು ಬೆಳ್ಳಗೆ ಮಾಡಿವೆ.
9 ಯೆಹೋವನ ಆಲಯಕ್ಕೆ ಧಾನ್ಯ ಅರ್ಪಣೆ+ ಮತ್ತು ಪಾನ ಅರ್ಪಣೆ+ ಬರೋದು ನಿಂತುಹೋಗಿದೆ,
ಯೆಹೋವನ ಸೇವೆ ಮಾಡೋ ಪುರೋಹಿತರು ಶೋಕಿಸ್ತಿದ್ದಾರೆ.
10 ಹೊಲ ಹಾಳಾಗಿದೆ, ನೆಲ ಶೋಕಿಸ್ತಿದೆ,+
ಯಾಕಂದ್ರೆ ಬೆಳೆ ಹಾಳಾಗಿ ಹೋಗಿದೆ, ಹೊಸ ದ್ರಾಕ್ಷಾಮದ್ಯ ಇಲ್ಲವಾಗಿದೆ, ಎಣ್ಣೆ ಖಾಲಿಯಾಗಿದೆ.+
11 ಗೋದಿ, ಬಾರ್ಲಿ* ನಾಶವಾಗಿದೆ, ಹೊಲದ ಬೆಳೆ ಹಾಳಾಗಿದೆ.
ಹಾಗಾಗಿ ರೈತರು ಗಾಬರಿಯಾಗಿದ್ದಾರೆ, ದ್ರಾಕ್ಷಿ ತೋಟಗಾರರು ಗೋಳಾಡ್ತಿದ್ದಾರೆ.
12 ದ್ರಾಕ್ಷಿಬಳ್ಳಿ ಒಣಗಿಹೋಗಿದೆ,
ಅಂಜೂರ ಮರ ಬಾಡಿಹೋಗಿದೆ.
ದಾಳಿಂಬೆ, ಖರ್ಜೂರ, ಸೇಬು ಅಂತೂ ಎಲ್ಲ ಮರಗಳು ಒಣಗಿಹೋಗಿವೆ.+
ಜನ್ರಲ್ಲಿ ಆನಂದ ಮರೆಯಾಗಿ ಅವಮಾನ ಮನೆಮಾಡಿದೆ.
ನನ್ನ ದೇವರ ಸೇವಕರೇ ಒಳಗೆ ಬನ್ನಿ, ಗೋಣಿ ಹಾಕೊಂಡು ರಾತ್ರಿ ಕಳಿರಿ.
ಯಾಕಂದ್ರೆ ದೇವರ ಆಲಯಕ್ಕೆ ಯಾರೂ ಧಾನ್ಯ ಅರ್ಪಣೆಯನ್ನಾಗಲಿ+ ಪಾನ ಅರ್ಪಣೆಯನ್ನಾಗಲಿ+ ತರ್ತಿಲ್ಲ.
14 ಉಪವಾಸ ದಿನವನ್ನ ಪ್ರಕಟಿಸಿ, ವಿಶೇಷ ಕೂಟಕ್ಕಾಗಿ ಸೇರಿಬರೋಕೆ ಕರೆಕೊಡಿ.+
ನಿಮ್ಮ ದೇವರಾದ ಯೆಹೋವನ ಆಲಯಕ್ಕೆ ಹಿರಿಯರನ್ನೂ ದೇಶದ ಎಲ್ಲ ಜನ್ರನ್ನೂ ಬರೋಕೆ ಹೇಳಿ.+
ಸಹಾಯ ಮಾಡೋಕೆ ಯೆಹೋವನಿಗೆ ಮೊರೆಯಿಡಿ.
15 ಅಯ್ಯೋ! ಆ ದಿನ ಬರ್ತಿದೆ!
ಯೆಹೋವನ ದಿನ ಹತ್ರವಾಗಿದೆ!+
ಸರ್ವಶಕ್ತ ನಾಶವನ್ನ ತರೋ ದಿನ ಅದಾಗಿದೆ!
16 ನಮ್ಮ ಕಣ್ಮುಂದೆನೇ ಆಹಾರ ಕಿತ್ಕೊಂಡ್ರು,
ನಮ್ಮ ದೇವರ ಆಲಯದಿಂದ ಹರ್ಷಾನಂದ ಕಣ್ಮರೆ ಆಯ್ತು.
17 ಸಲಿಕೆಗಳ ಕೆಳಗೆ ಬೀಜಗಳು* ಒಣಗಿ ಹೋಗಿವೆ.
ಉಗ್ರಾಣಗಳು ಖಾಲಿಬಿದ್ದಿವೆ.
ಬೆಳೆ ಒಣಗಿರೋದ್ರಿಂದ ಗೋಡೌನ್ಗಳನ್ನ ಕೆಡವಿಹಾಕಲಾಗಿದೆ.
18 ಪ್ರಾಣಿಗಳು ಕೂಡ ನರಳ್ತಿವೆ!
ಮೇವು ಇಲ್ಲದ ಕಾರಣ ದನದ ಹಿಂಡುಗಳು ಗಲಿಬಿಲಿಗೊಂಡು ಅಡ್ಡಾಡ್ತಿವೆ!
ಕುರಿ ಮಂದೆಗಳು ಶಿಕ್ಷೆ ಅನುಭವಿಸ್ತಿವೆ.
19 ಯೆಹೋವನೇ ನಾನು ನಿನ್ನ ಹತ್ರ ಬೇಡ್ತಿದ್ದೀನಿ,+
ಯಾಕಂದ್ರೆ ಅಗ್ನಿ ಕಾಡಿನ* ಹುಲ್ಲುಗಾವಲುಗಳನ್ನ ಸುಟ್ಟು ಹಾಕಿದೆ,
ಜ್ವಾಲೆ ಬಯಲಿನ ಎಲ್ಲ ಮರಗಳನ್ನ ದಹಿಸಿದೆ.
20 ಕಾಡುಪ್ರಾಣಿಗಳು ಕೂಡ ಸಹಾಯಕ್ಕಾಗಿ ನಿನ್ನ ಕಡೆ ನೋಡ್ತಿವೆ,
ಯಾಕಂದ್ರೆ ತೊರೆಗಳು ಬತ್ತಿಹೋಗಿವೆ,
ಅಗ್ನಿ ಕಾಡಿನ ಹುಲ್ಲುಗಾವಲುಗಳನ್ನ ಸುಟ್ಟು ಹಾಕಿದೆ.”