ಜೆಕರ್ಯ
12 ದೇವರಿಂದ ಒಂದು ಸಂದೇಶ:
“ಇಸ್ರಾಯೇಲಿನ ಬಗ್ಗೆ ಯೆಹೋವನಾದ ನಾನು ಹೇಳೋದು ಏನಂದ್ರೆ:
2 ನಾನು ಯೆರೂಸಲೇಮನ್ನ ಒಂದು ಲೋಟದ ತರ ಮಾಡ್ತೀನಿ. ಅದು ಸುತ್ತಮುತ್ತಲಿನ ಜನ್ರೆಲ್ಲ ಮತ್ತೇರಿ ತೂರಾಡೋ ತರ ಮಾಡುತ್ತೆ. ಅಷ್ಟೇ ಅಲ್ಲ ಯೆಹೂದಕ್ಕೆ ಮತ್ತು ಯೆರೂಸಲೇಮಿಗೆ ಮುತ್ತಿಗೆ ಹಾಕಲಾಗುತ್ತೆ.+ 3 ಆ ದಿನ ನಾನು ಯೆರೂಸಲೇಮನ್ನ ಎಲ್ಲ ಜನ್ರಿಗೂ ಒಂದು ಭಾರವಾದ ಕಲ್ಲಿನ ತರ ಮಾಡ್ತೀನಿ. ಖಂಡಿತ ಅದನ್ನ ಹೊರೋ ಜನ್ರಿಗೆಲ್ಲ ತುಂಬ ಗಾಯ ಆಗುತ್ತೆ.+ ಭೂಮಿಯಲ್ಲಿರೋ ಎಲ್ಲ ರಾಷ್ಟ್ರಗಳು ಅದ್ರ ವಿರುದ್ಧ ಒಟ್ಟುಸೇರುತ್ತೆ.”+ 4 ಯೆಹೋವ ಹೀಗೆ ಹೇಳ್ತಿದ್ದಾನೆ: “ಆ ದಿನ, ಪ್ರತಿಯೊಂದು ಕುದುರೆ ಆತಂಕಕ್ಕೆ ಒಳಗಾಗೋ ತರ ನಾನು ಮಾಡ್ತೀನಿ. ಅದ್ರ ಸವಾರನಿಗೆ ಹುಚ್ಚುಹಿಡಿಯೋ ತರ ಮಾಡ್ತೀನಿ. ನಾನು ನನ್ನ ಕಣ್ಣುಗಳನ್ನ ತೆರೆದು ಯೆಹೂದದ ಮನೆತನವನ್ನ ಕಾಯ್ತೀನಿ. ಆದ್ರೆ ಜನ್ರ ಎಲ್ಲ ಕುದುರೆಗಳು ಕುರುಡಾಗೋ ತರ ಮಾಡ್ತೀನಿ. 5 ಆಗ ಯೆಹೂದದ ಶೇಕ್‌ಗಳು ತಮ್ಮ ಮನಸ್ಸಲ್ಲಿ ಹೀಗೆ ಅಂದ್ಕೊಳ್ತಾರೆ: ‘ಯೆರೂಸಲೇಮಿನ ನಿವಾಸಿಗಳು ನಮ್ಮ ಬಲ. ಯಾಕಂದ್ರೆ ಸೈನ್ಯಗಳ ದೇವರಾದ ಯೆಹೋವ ಅವ್ರ ದೇವರಾಗಿದ್ದಾನೆ.’+ 6 ಆ ದಿನ ನಾನು ಯೆಹೂದದ ಶೇಕ್‌ಗಳನ್ನ ಕಾಡ್ಗಿಚ್ಚಿನ ತರ ಮತ್ತು ಕಟಾವು ಮಾಡಿರೋ ಸಿವುಡುಗಳ ಮಧ್ಯ ಉರಿಯೋ ಪಂಜಿನ ತರ ಮಾಡ್ತೀನಿ.+ ಅವರು ತಮ್ಮ ಎಡಬಲದಲ್ಲಿರೋ ಎಲ್ಲ ಜನ್ರನ್ನ ಸುಟ್ಟು ಬೂದಿ ಮಾಡ್ತಾರೆ.+ ಯೆರೂಸಲೇಮಿನ ನಿವಾಸಿಗಳು ತಮ್ಮ ಸ್ವಂತ ಪಟ್ಟಣವಾಗಿರೋ ಯೆರೂಸಲೇಮಿಗೆ ವಾಪಸ್ ಹೋಗಿ ಇರ್ತಾರೆ.+
7 ಯೆಹೂದಕ್ಕಿಂತ ದಾವೀದನ ಮನೆತನದ ವೈಭವ* ಮತ್ತು ಯೆರೂಸಲೇಮಿನ ನಿವಾಸಿಗಳ ವೈಭವ* ಹೆಚ್ಚಾಗದೆ ಇರೋ ತರ, ಯೆಹೋವ ಮೊದ್ಲು ಯೆಹೂದದ ಡೇರೆಗಳನ್ನ ಕಾಪಾಡ್ತಾನೆ. 8 ಆ ದಿನ ಯೆಹೋವ ಗುರಾಣಿ ತರ ಯೆರೂಸಲೇಮಿನ ನಿವಾಸಿಗಳನ್ನ ಕಾಪಾಡ್ತಾನೆ.+ ಆ ದಿನ ಅವ್ರಲ್ಲಿರೋ ಬಲ ಇಲ್ಲದವನು* ದಾವೀದನ ತರ ಬಲಶಾಲಿ ಆಗ್ತಾನೆ. ದಾವೀದನ ಮನೆತನ ದೇವರ ತರ, ಯೆಹೋವನ ದೂತನ ತರ ಜನ್ರಿಗೆ ದಾರಿ ತೋರಿಸುತ್ತೆ.+ 9 ಆ ದಿನ ಯೆರೂಸಲೇಮಿನ ವಿರುದ್ಧ ಬರೋ ಎಲ್ಲ ರಾಷ್ಟ್ರಗಳನ್ನ ನಾನು ಖಂಡಿತ ಸರ್ವನಾಶ ಮಾಡ್ತೀನಿ.+
10 ದಾವೀದನ ಮನೆತನದವರು ಮತ್ತು ಯೆರೂಸಲೇಮಿನ ನಿವಾಸಿಗಳಿಗೆ ನನ್ನ ಆಶೀರ್ವಾದ ಸಿಗುತ್ತೆ, ನಾನು ಅವ್ರ ಪ್ರಾರ್ಥನೆಗಳನ್ನ ಕೇಳಿಸ್ಕೊಳ್ತೀನಿ. ಅವರು ಯಾರನ್ನ ಇರಿದಿದ್ರೋ ಆತನನ್ನ ನೋಡ್ತಾರೆ+ ಮತ್ತು ತಮ್ಮ ಒಬ್ಬನೇ ಮಗನನ್ನ ಕಳ್ಕೊಂಡಾಗ ಗೋಳಾಡೋ ತರ ಆತನಿಗಾಗಿ ಗೋಳಾಡ್ತಾರೆ. ತಮ್ಮ ಮೊದಲ ಮಗನಿಗಾಗಿ ದುಃಖಿಸೋ ತರ ಆತನಿಗಾಗಿ ತುಂಬ ದುಃಖಪಡ್ತಾರೆ. 11 ಆ ದಿನ ಯೆರೂಸಲೇಮಲ್ಲಿ ಆಗೋ ಗೋಳಾಟ ಮೆಗಿದ್ದೋ ಬಯಲಲ್ಲಿರೋ ಹದದ್ರಿಮ್ಮೋನಲ್ಲಿ ಆದ ಗೋಳಾಟದ ತರ ಹೆಚ್ಚಾಗುತ್ತೆ.+ 12 ರಾಷ್ಟ್ರಕ್ಕೆ ರಾಷ್ಟ್ರವೇ ಗೋಳಾಡುತ್ತೆ, ಪ್ರತಿ ಮನೆತನ ಬೇರೆಬೇರೆ ಗುಂಪುಗಳಾಗಿ ಗೋಳಾಡುತ್ತೆ. ದಾವೀದನ ವಂಶದವರು, ಅವ್ರ ಸ್ತ್ರೀಯರು, ನಾತಾನನ+ ವಂಶದವರು, ಅವ್ರ ಸ್ತ್ರೀಯರು ಬೇರೆಬೇರೆ ಗುಂಪುಗಳಾಗಿ ಗೋಳಾಡ್ತಾರೆ. 13 ಲೇವಿ ವಂಶದವರು,+ ಅವ್ರ ಸ್ತ್ರೀಯರು, ಶಿಮ್ಮಿ ವಂಶದವರು,+ ಅವ್ರ ಸ್ತ್ರೀಯರು ಬೇರೆಬೇರೆ ಗುಂಪುಗಳಾಗಿ ಗೋಳಾಡ್ತಾರೆ. 14 ಉಳಿದ ಮನೆತನಗಳು, ಅವ್ರ ಸ್ತ್ರೀಯರು ಬೇರೆಬೇರೆ ಗುಂಪುಗಳಾಗಿ ಗೋಳಾಡ್ತಾರೆ.