ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆರೆಮೀಯ 48
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಯೆರೆಮೀಯ ಮುಖ್ಯಾಂಶಗಳು

      • ಮೋವಾಬಿನ ವಿರುದ್ಧ ಭವಿಷ್ಯವಾಣಿ (1-47)

ಯೆರೆಮೀಯ 48:1

ಮಾರ್ಜಿನಲ್ ರೆಫರೆನ್ಸ್

  • +ಆದಿ 19:36, 37; ಯೆಶಾ 15:1
  • +ಅರ 32:37, 38
  • +ಯೆಹೋ 13:15, 19; ಯೆಹೆ 25:9
  • +ಯೆಶಾ 15:2

ಯೆರೆಮೀಯ 48:2

ಮಾರ್ಜಿನಲ್ ರೆಫರೆನ್ಸ್

  • +ಅರ 32:37; ಯೆಶಾ 16:8

ಯೆರೆಮೀಯ 48:3

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 15:5; ಯೆರೆ 48:34

ಯೆರೆಮೀಯ 48:5

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 15:5

ಯೆರೆಮೀಯ 48:7

ಮಾರ್ಜಿನಲ್ ರೆಫರೆನ್ಸ್

  • +ಅರ 21:29; 1ಅರ 11:7

ಯೆರೆಮೀಯ 48:8

ಪಾದಟಿಪ್ಪಣಿ

  • *

    ಅಥವಾ “ಪ್ರಸ್ಥಭೂಮಿ; ಸುತ್ತಮುತ್ತ ಇರೋ ಭೂಭಾಗಕ್ಕಿಂತ ಎತ್ತರದಲ್ಲಿರೋ ವಿಸ್ತಾರವಾದ ಚಪ್ಪಟೆ ಭೂಮಿ.”

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 25:9

ಯೆರೆಮೀಯ 48:9

ಮಾರ್ಜಿನಲ್ ರೆಫರೆನ್ಸ್

  • +ಚೆಫ 2:9

ಯೆರೆಮೀಯ 48:13

ಮಾರ್ಜಿನಲ್ ರೆಫರೆನ್ಸ್

  • +1ಅರ 12:28, 29; ಹೋಶೇ 10:15; ಆಮೋ 5:5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 5/2017, ಪು. 4

ಯೆರೆಮೀಯ 48:14

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 16:6

ಯೆರೆಮೀಯ 48:15

ಮಾರ್ಜಿನಲ್ ರೆಫರೆನ್ಸ್

  • +ಯೆರೆ 48:8
  • +ಯೆಶಾ 34:2
  • +ಕೀರ್ತ 24:8

ಯೆರೆಮೀಯ 48:16

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 25:11

ಯೆರೆಮೀಯ 48:18

ಪಾದಟಿಪ್ಪಣಿ

  • *

    ಬಹುಶಃ, “ಒಣನೆಲದಲ್ಲಿ.”

ಮಾರ್ಜಿನಲ್ ರೆಫರೆನ್ಸ್

  • +ಅರ 21:30; ಯೆಹೋ 13:15, 17; ಯೆಶಾ 15:2
  • +ಯೆರೆ 48:8

ಯೆರೆಮೀಯ 48:19

ಮಾರ್ಜಿನಲ್ ರೆಫರೆನ್ಸ್

  • +ಅರ 32:34; ಧರ್ಮೋ 2:36

ಯೆರೆಮೀಯ 48:20

ಮಾರ್ಜಿನಲ್ ರೆಫರೆನ್ಸ್

  • +ಅರ 21:13; ಯೆಹೋ 13:8, 9

ಯೆರೆಮೀಯ 48:21

ಪಾದಟಿಪ್ಪಣಿ

  • *

    ಅಥವಾ “ಪ್ರಸ್ಥಭೂಮಿ; ಸುತ್ತಮುತ್ತ ಇರೋ ಭೂಭಾಗಕ್ಕಿಂತ ಎತ್ತರದಲ್ಲಿರೋ ವಿಸ್ತಾರವಾದ ಚಪ್ಪಟೆ ಭೂಮಿಗೆ.”

ಮಾರ್ಜಿನಲ್ ರೆಫರೆನ್ಸ್

  • +ಚೆಫ 2:9
  • +ಅರ 21:23; ಯೆಶಾ 15:4
  • +ಯೆಹೋ 13:15, 18

ಯೆರೆಮೀಯ 48:22

ಮಾರ್ಜಿನಲ್ ರೆಫರೆನ್ಸ್

  • +ಅರ 32:34
  • +ಅರ 32:3, 4

ಯೆರೆಮೀಯ 48:23

ಮಾರ್ಜಿನಲ್ ರೆಫರೆನ್ಸ್

  • +ಅರ 32:37; ಯೆರೆ 48:1
  • +ಅರ 32:37, 38; ಯೆಹೋ 13:15, 17; ಯೆಹೆ 25:9

ಯೆರೆಮೀಯ 48:24

ಮಾರ್ಜಿನಲ್ ರೆಫರೆನ್ಸ್

  • +ಆಮೋ 2:2

ಯೆರೆಮೀಯ 48:25

ಪಾದಟಿಪ್ಪಣಿ

  • *

    ಅಥವಾ “ಬಲವನ್ನ.”

ಯೆರೆಮೀಯ 48:26

ಮಾರ್ಜಿನಲ್ ರೆಫರೆನ್ಸ್

  • +ಯೆರೆ 48:42
  • +ಯೆರೆ 25:15, 16

ಯೆರೆಮೀಯ 48:27

ಮಾರ್ಜಿನಲ್ ರೆಫರೆನ್ಸ್

  • +ಪ್ರಲಾ 2:15; ಚೆಫ 2:8

ಯೆರೆಮೀಯ 48:28

ಪಾದಟಿಪ್ಪಣಿ

  • *

    ಇದು ಕಡಿದಾದ ಬಂಡೆಗಳ ಮಧ್ಯ ಇರೋ ಕಿರಿದಾದ ಕಣಿವೆ.

ಯೆರೆಮೀಯ 48:29

ಪಾದಟಿಪ್ಪಣಿ

  • *

    ಅಕ್ಷ. “ಹೃದಯ.”

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 16:6; 25:10, 11; ಚೆಫ 2:9, 10

ಯೆರೆಮೀಯ 48:31

ಮಾರ್ಜಿನಲ್ ರೆಫರೆನ್ಸ್

  • +2ಅರ 3:24, 25; ಯೆಶಾ 16:7

ಯೆರೆಮೀಯ 48:32

ಮಾರ್ಜಿನಲ್ ರೆಫರೆನ್ಸ್

  • +ಅರ 32:37, 38; ಯೆಹೋ 13:15, 19
  • +ಅರ 21:32; 32:34, 35; ಯೆಹೋ 21:8, 39
  • +ಯೆಶಾ 16:8, 9; ಯೆರೆ 48:8

ಯೆರೆಮೀಯ 48:33

ಮಾರ್ಜಿನಲ್ ರೆಫರೆನ್ಸ್

  • +ಯೆರೆ 25:10
  • +ಯೆಶಾ 16:10

ಯೆರೆಮೀಯ 48:34

ಮಾರ್ಜಿನಲ್ ರೆಫರೆನ್ಸ್

  • +ಅರ 21:25; ಯೆಹೋ 13:15, 17
  • +ಅರ 32:37; ಯೆಶಾ 16:9
  • +ಅರ 21:23
  • +ಯೆರೆ 48:2, 3
  • +ಯೆಶಾ 15:4-6

ಯೆರೆಮೀಯ 48:36

ಪಾದಟಿಪ್ಪಣಿ

  • *

    ಅಕ್ಷ. “ಹೃದಯ.”

  • *

    ಅದು, ಶವಸಂಸ್ಕಾರದ ಸಮಯದಲ್ಲಿ ಅಳುವಾಗ ಊದೋ ಕೊಳಲು.

  • *

    ಅದು, ಶವಸಂಸ್ಕಾರದ ಸಮಯದಲ್ಲಿ ಅಳುವಾಗ ಊದೋ ಕೊಳಲು.

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 16:11

ಯೆರೆಮೀಯ 48:37

ಮಾರ್ಜಿನಲ್ ರೆಫರೆನ್ಸ್

  • +ಯೆರೆ 16:6
  • +ಯಾಜ 19:28
  • +ಆದಿ 37:34; ಯೆಶಾ 15:2, 3

ಯೆರೆಮೀಯ 48:40

ಮಾರ್ಜಿನಲ್ ರೆಫರೆನ್ಸ್

  • +ಪ್ರಲಾ 4:19; ಹಬ 1:8
  • +ಯೆರೆ 49:22

ಯೆರೆಮೀಯ 48:42

ಮಾರ್ಜಿನಲ್ ರೆಫರೆನ್ಸ್

  • +ಯೆರೆ 48:29
  • +ಯೆರೆ 30:11

ಯೆರೆಮೀಯ 48:45

ಮಾರ್ಜಿನಲ್ ರೆಫರೆನ್ಸ್

  • +ಅರ 21:26, 28
  • +ಅರ 24:17; ಆಮೋ 2:2

ಯೆರೆಮೀಯ 48:46

ಮಾರ್ಜಿನಲ್ ರೆಫರೆನ್ಸ್

  • +ಅರ 21:29; 1ಅರ 11:7
  • +ಯೆರೆ 48:7

ಯೆರೆಮೀಯ 48:47

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 25:11

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಯೆರೆ. 48:1ಆದಿ 19:36, 37; ಯೆಶಾ 15:1
ಯೆರೆ. 48:1ಅರ 32:37, 38
ಯೆರೆ. 48:1ಯೆಹೋ 13:15, 19; ಯೆಹೆ 25:9
ಯೆರೆ. 48:1ಯೆಶಾ 15:2
ಯೆರೆ. 48:2ಅರ 32:37; ಯೆಶಾ 16:8
ಯೆರೆ. 48:3ಯೆಶಾ 15:5; ಯೆರೆ 48:34
ಯೆರೆ. 48:5ಯೆಶಾ 15:5
ಯೆರೆ. 48:7ಅರ 21:29; 1ಅರ 11:7
ಯೆರೆ. 48:8ಯೆಹೆ 25:9
ಯೆರೆ. 48:9ಚೆಫ 2:9
ಯೆರೆ. 48:131ಅರ 12:28, 29; ಹೋಶೇ 10:15; ಆಮೋ 5:5
ಯೆರೆ. 48:14ಯೆಶಾ 16:6
ಯೆರೆ. 48:15ಯೆರೆ 48:8
ಯೆರೆ. 48:15ಯೆಶಾ 34:2
ಯೆರೆ. 48:15ಕೀರ್ತ 24:8
ಯೆರೆ. 48:16ಯೆಹೆ 25:11
ಯೆರೆ. 48:18ಅರ 21:30; ಯೆಹೋ 13:15, 17; ಯೆಶಾ 15:2
ಯೆರೆ. 48:18ಯೆರೆ 48:8
ಯೆರೆ. 48:19ಅರ 32:34; ಧರ್ಮೋ 2:36
ಯೆರೆ. 48:20ಅರ 21:13; ಯೆಹೋ 13:8, 9
ಯೆರೆ. 48:21ಚೆಫ 2:9
ಯೆರೆ. 48:21ಅರ 21:23; ಯೆಶಾ 15:4
ಯೆರೆ. 48:21ಯೆಹೋ 13:15, 18
ಯೆರೆ. 48:22ಅರ 32:34
ಯೆರೆ. 48:22ಅರ 32:3, 4
ಯೆರೆ. 48:23ಅರ 32:37; ಯೆರೆ 48:1
ಯೆರೆ. 48:23ಅರ 32:37, 38; ಯೆಹೋ 13:15, 17; ಯೆಹೆ 25:9
ಯೆರೆ. 48:24ಆಮೋ 2:2
ಯೆರೆ. 48:26ಯೆರೆ 48:42
ಯೆರೆ. 48:26ಯೆರೆ 25:15, 16
ಯೆರೆ. 48:27ಪ್ರಲಾ 2:15; ಚೆಫ 2:8
ಯೆರೆ. 48:29ಯೆಶಾ 16:6; 25:10, 11; ಚೆಫ 2:9, 10
ಯೆರೆ. 48:312ಅರ 3:24, 25; ಯೆಶಾ 16:7
ಯೆರೆ. 48:32ಅರ 32:37, 38; ಯೆಹೋ 13:15, 19
ಯೆರೆ. 48:32ಅರ 21:32; 32:34, 35; ಯೆಹೋ 21:8, 39
ಯೆರೆ. 48:32ಯೆಶಾ 16:8, 9; ಯೆರೆ 48:8
ಯೆರೆ. 48:33ಯೆರೆ 25:10
ಯೆರೆ. 48:33ಯೆಶಾ 16:10
ಯೆರೆ. 48:34ಅರ 21:25; ಯೆಹೋ 13:15, 17
ಯೆರೆ. 48:34ಅರ 32:37; ಯೆಶಾ 16:9
ಯೆರೆ. 48:34ಅರ 21:23
ಯೆರೆ. 48:34ಯೆರೆ 48:2, 3
ಯೆರೆ. 48:34ಯೆಶಾ 15:4-6
ಯೆರೆ. 48:36ಯೆಶಾ 16:11
ಯೆರೆ. 48:37ಯೆರೆ 16:6
ಯೆರೆ. 48:37ಯಾಜ 19:28
ಯೆರೆ. 48:37ಆದಿ 37:34; ಯೆಶಾ 15:2, 3
ಯೆರೆ. 48:40ಪ್ರಲಾ 4:19; ಹಬ 1:8
ಯೆರೆ. 48:40ಯೆರೆ 49:22
ಯೆರೆ. 48:42ಯೆರೆ 48:29
ಯೆರೆ. 48:42ಯೆರೆ 30:11
ಯೆರೆ. 48:45ಅರ 21:26, 28
ಯೆರೆ. 48:45ಅರ 24:17; ಆಮೋ 2:2
ಯೆರೆ. 48:46ಅರ 21:29; 1ಅರ 11:7
ಯೆರೆ. 48:46ಯೆರೆ 48:7
ಯೆರೆ. 48:47ಯೆಹೆ 25:11
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
  • 31
  • 32
  • 33
  • 34
  • 35
  • 36
  • 37
  • 38
  • 39
  • 40
  • 41
  • 42
  • 43
  • 44
  • 45
  • 46
  • 47
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಯೆರೆಮೀಯ 48:1-47

ಯೆರೆಮೀಯ

48 ಸೈನ್ಯಗಳ ದೇವರಾದ ಇಸ್ರಾಯೇಲಿನ ದೇವರಾದ ಯೆಹೋವ ಮೋವಾಬಿನ+ ಬಗ್ಗೆ ಹೇಳೋದು ಏನಂದ್ರೆ

“ನೆಬೋ+ ಪಟ್ಟಣದ ಗತಿಯನ್ನ ಏನಂತ ಹೇಳಲಿ, ಅದು ನಾಶ ಆಗಿಹೋಗಿದ್ಯಲ್ಲಾ,

ಕಿರ್ಯಾತಯಿಮ್‌ಗೆ+ ಅವಮಾನ ಆಗಿದೆ, ಶತ್ರು ಕೈಸೇರಿದೆ.

ಸುರಕ್ಷಿತ ಕೋಟೆಗೆ ನಾಚಿಕೆ ಆಗಿದೆ, ಅದನ್ನ ಪೂರ್ತಿ ಹಾಳು ಮಾಡಿದ್ದಾರೆ.+

 2 ಇನ್ಮುಂದೆ ಮೋವಾಬನ್ನ ಯಾರೂ ಹೊಗಳಲ್ಲ.

ಅದನ್ನ ನಾಶ ಮಾಡೋಕೆ ಶತ್ರುಗಳು ಹೆಷ್ಬೋನಲ್ಲಿ+ ಸಂಚು ಮಾಡಿದ್ದಾರೆ.

‘ಬನ್ನಿ, ಆ ಇಡೀ ದೇಶವನ್ನ ನಾಶ ಮಾಡೋಣ’ ಅಂತ ಹೇಳ್ತಿದ್ದಾರೆ.

ಮದ್ಮೆನೇ, ನೀನು ಕೂಡ ಸುಮ್ಮನೆ ಇರಬೇಕು,

ಯಾಕಂದ್ರೆ ಕತ್ತಿ ನಿನ್ನನ್ನ ಅಟ್ಟಿಸ್ಕೊಂಡು ಬರ್ತಿದೆ.

 3 ಹೊರೊನಯಿಮಿನಿಂದ ಕೂಗಾಟ ಕೇಳಿಸ್ತಿದೆ,+

ಯಾಕಂದ್ರೆ ಆ ಊರು ನಾಶ ಆಗಿದೆ, ಪೂರ್ತಿ ನಾಶ ಆಗಿದೆ.

 4 ಮೋವಾಬ್‌ ಪೂರ್ತಿ ನಾಶ ಆಗಿಬಿಟ್ಟಿದೆ.

ಅವಳ ಚಿಕ್ಕ ಮಕ್ಕಳು ಚೀರಾಡ್ತಿದ್ದಾರೆ.

 5 ಜನ್ರು ದಾರಿಯಲ್ಲೆಲ್ಲ ಅಳ್ತಾ ಲೂಹೀತಿಗೆ ಹತ್ತಿ ಹೋಗ್ತಿದ್ದಾರೆ.

ಹೊರೊನಯಿಮಿನಿಂದ ಇಳಿದು ಹೋಗುವಾಗ ಅವ್ರಿಗೆ ದೊಡ್ಡ ಕಷ್ಟದಿಂದಾಗಿ ಕೂಗ್ತಿರೋ ಜನ್ರ ಶಬ್ದ ಕೇಳಿಸ್ತಿದೆ.+

 6 ನಿಮ್ಮ ಜೀವ ಉಳಿಸ್ಕೊಳ್ಳೋಕೆ ಓಡಿ, ತಪ್ಪಿಸ್ಕೊಳ್ಳಿ!

ನೀವು ಕಾಡಲ್ಲಿರೋ ಜುನಿಪರ್‌ ಮರದ ತರ ಆಗಬೇಕು.

 7 ಮೋವಾಬೇ, ನೀನು ನಿನ್ನ ಸಾಧನೆಗಳನ್ನ, ನಿನ್ನ ಸಿರಿಸಂಪತ್ತನ್ನೇ ನಂಬಿರೋದ್ರಿಂದ

ನೀನು ಕೂಡ ಶತ್ರು ಕೈಗೆ ಸಿಕ್ಕಿಬೀಳ್ತಿಯ.

ನಿನ್ನ ದೇವರಾದ ಕೆಮೋಷ+ ಕೈದಿಯಾಗಿ ಹೋಗ್ತಾನೆ,

ಅವನ ಜೊತೆ ಅವನ ಪುರೋಹಿತರು, ಅವನ ಅಧಿಕಾರಿಗಳು ಕೈದಿಗಳಾಗಿ ಹೋಗ್ತಾರೆ.

 8 ಶತ್ರು ಪ್ರತಿಯೊಂದು ಪಟ್ಟಣದ ಮೇಲೆ ದಾಳಿ ಮಾಡ್ತಾನೆ,

ಒಂದು ಪಟ್ಟಣನೂ ಉಳಿಯಲ್ಲ.+

ಕಣಿವೆ ನಾಶ ಆಗುತ್ತೆ,

ಸಮತಟ್ಟಾದ ನೆಲ* ಸರ್ವನಾಶ ಆಗುತ್ತೆ,

ಹೀಗೆ ಯೆಹೋವ ಹೇಳಿದ ತರಾನೇ ಆಗುತ್ತೆ.

 9 ಎಲ್ಲಿಗೆ ಹೋಗಬೇಕಂತ ಮೋವಾಬಿಗೆ ತೋರಿಸೋಕೆ ರಸ್ತೆಯಲ್ಲಿ ಗುರುತು ಹಾಕಿ,

ಅದ್ರ ಪಟ್ಟಣಗಳು ನಾಶ ಆದಾಗ ಜನ್ರೆಲ್ಲ ಓಡಿಹೋಗ್ತಾರೆ,

ಪಟ್ಟಣಗಳಿಗೆ ಆಗಿರೋ ಗತಿಯನ್ನ ನೋಡೋರ ಎದೆ ಭಯದಿಂದ ಡವಡವ ಅಂತ ಹೊಡ್ಕೊಳ್ಳುತ್ತೆ,

ಅಲ್ಲಿ ಒಬ್ಬ ವ್ಯಕ್ತಿನೂ ವಾಸ ಮಾಡಲ್ಲ.+

10 ಯೆಹೋವ ಕೊಟ್ಟ ಕೆಲಸವನ್ನ ಅಸಡ್ಡೆಯಿಂದ ಮಾಡೋನಿಗೆ ಶಾಪ ತಟ್ಟಲಿ!

ರಕ್ತ ಸುರಿಸೋಕೆ ಕತ್ತಿ ಉಪಯೋಗಿಸೋಕೆ ಹಿಂದೆ ಮುಂದೆ ನೋಡೋನಿಗೆ ಶಾಪ ತಟ್ಟಲಿ!

11 ತಳದಲ್ಲಿ ಮಡ್ಡಿ ನಿಂತಿರೋ ದ್ರಾಕ್ಷಾಮದ್ಯದ ತರ

ಮೋವಾಬ್ಯರು ಚಿಕ್ಕ ವಯಸ್ಸಿಂದ ನೆಮ್ಮದಿಯಾಗಿ ಇದ್ರು.

ಅವ್ರನ್ನ ಒಂದು ಪಾತ್ರೆಯಿಂದ ಇನ್ನೊಂದು ಪಾತ್ರೆಗೆ ಸುರಿಲಿಲ್ಲ,

ಅವ್ರನ್ನ ಯಾವತ್ತೂ ಕೈದಿಗಳಾಗಿ ಹಿಡ್ಕೊಂಡು ಹೋಗಲಿಲ್ಲ.

ಹಾಗಾಗಿ ಅವ್ರ ರುಚಿ ಇದ್ದ ಹಾಗೇ ಇದೆ,

ಅವ್ರ ಪರಿಮಳ ಬದಲಾಗಲಿಲ್ಲ.

12 ಯೆಹೋವ ಹೇಳೋದು ಏನಂದ್ರೆ ‘ನಾನು ಅವ್ರನ್ನ ಬುಡಮೇಲು ಮಾಡೋಕೆ ಜನ್ರನ್ನ ಕಳಿಸೋ ದಿನ ಬರುತ್ತೆ. ಆ ಜನ್ರು ದೊಡ್ಡ ದೊಡ್ಡ ಪಾತ್ರೆಗಳಲ್ಲಿ ಇರೋದನ್ನ ಹೊಯ್ದು ಆ ಪಾತ್ರೆಗಳನ್ನ ಖಾಲಿಮಾಡ್ತಾರೆ. ಆ ಪಾತ್ರೆಗಳನ್ನ ಒಡೆದು ಪುಡಿಪುಡಿ ಮಾಡ್ತಾರೆ. 13 ಬೆತೆಲಲ್ಲಿ ಸುಳ್ಳು ದೇವರುಗಳ ಮೇಲೆ ನಂಬಿಕೆ ಇಡ್ತಿದ್ದ ಇಸ್ರಾಯೇಲ್ಯರಿಗೆ ಈಗ ಅವಮಾನ ಆಗಿದ್ಯಲ್ಲಾ? ಹಾಗೇ ಮೋವಾಬ್ಯರು ತಮ್ಮ ದೇವರಾದ ಕೆಮೋಷಲ್ಲಿ ನಂಬಿಕೆ ಇಟ್ಟಿದ್ರಿಂದ ಅವ್ರಿಗೆ ನಾಚಿಕೆ ಆಗಿದೆ.+

14 “ನಾವು ವೀರ ಸೈನಿಕರು, ನಾವು ಯುದ್ಧಕ್ಕೆ ಸಿದ್ಧ” ಅಂತ ಹೇಳೋಕೆ ನಿಮಗೆಷ್ಟು ಧೈರ್ಯ?’+

15 ‘ಮೋವಾಬ್‌ ನಾಶ ಆಗಿದೆ,

ಅವಳ ಪಟ್ಟಣಗಳ ಮೇಲೆ ದಾಳಿ ನಡಿದಿದೆ,+

ಅವಳ ಅತ್ಯುತ್ತಮ ಯುವಕರನ್ನ ಕೊಂದುಬಿಟ್ಟಿದ್ದಾರೆ’+

ಅಂತ ಸೈನ್ಯಗಳ ದೇವರಾದ ಯೆಹೋವ ಅನ್ನೋ ಹೆಸ್ರಿರೋ ರಾಜ ಹೇಳ್ತಾನೆ.+

16 ಮೋವಾಬ್ಯರ ಮೇಲೆ ಕಷ್ಟ ಬರುತ್ತೆ,

ನಾಶ ತುಂಬ ವೇಗವಾಗಿ ಬಂದು ಅವ್ರ ಮೇಲೆ ಬೀಳುತ್ತೆ.+

17 ಅವ್ರ ಸುತ್ತಮುತ್ತ ಇರೋ ಎಲ್ರೂ

ಅವ್ರಿಗಿದ್ದ ಹೆಸ್ರಿನ ಬಗ್ಗೆ ಗೊತ್ತಿರೋ ಎಲ್ರೂ ಅವ್ರನ್ನ ನೋಡಿ ಅಯ್ಯೋ ಪಾಪ ಅಂತಾರೆ.

‘ಗಟ್ಟಿಯಾದ ಕೋಲನ್ನ, ಚಂದದ ದಂಡವನ್ನ ಮುರಿದುಹಾಕಿದ್ದಾರೆ!’ ಅಂತ ಅವ್ರಿಗೆ ಹೇಳಿ.

18 ದೀಬೋನಲ್ಲಿ+ ಇರೋ ಮಗಳೇ,

ನಿನ್ನ ಗೌರವದ ಸ್ಥಾನದಿಂದ ಕೆಳಗೆ ಇಳಿದು ಬಂದು ಬಾಯಾರಿಕೆಯಿಂದ* ಕೂತ್ಕೊ,

ಯಾಕಂದ್ರೆ ಮೋವಾಬಿನ ಶತ್ರು ನಿನ್ನ ವಿರುದ್ಧ ಬಂದಿದ್ದಾನೆ,

ಅವನು ನಿನ್ನ ಭದ್ರ ಕೋಟೆಗಳನ್ನ ಹಾಳು ಮಾಡ್ತಾನೆ.+

19 ಅರೋಯೇರಿನ+ ಜನ್ರೇ, ರಸ್ತೆ ಅಕ್ಕಪಕ್ಕ ನಿಂತ್ಕೊಂಡು ನೋಡಿ,

ಓಡಿಹೋಗ್ತಿರೋ ಗಂಡಸಿಗೆ, ತಪ್ಪಿಸ್ಕೊಂಡು ಓಡ್ತಿರೋ ಹೆಂಗಸಿಗೆ, ‘ಏನಾಯ್ತು?’ ಅಂತ ಕೇಳು.

20 ಮೋವಾಬಿಗೆ ಅವಮಾನ ಮಾಡಿದ್ದಾರೆ, ಅದ್ರ ಜನ್ರಿಗೆ ಭಯದಿಂದ ಕೈಕಾಲು ಓಡ್ತಿಲ್ಲ.

ಗೋಳಾಡಿ, ಅತ್ತು ಕೂಗಾಡಿ.

ಮೋವಾಬ್‌ ನಾಶ ಆಗಿದೆ ಅಂತ ಅರ್ನೋನ್‌+ ಕಣಿವೆಯಲ್ಲಿ ಸಾರಿಹೇಳಿ.

21 ದೇವರು ಸಮತಟ್ಟಾದ ನೆಲಕ್ಕೆ* ಶಿಕ್ಷೆ ವಿಧಿಸಿದ್ದಾನೆ.+ ಹೋಲೋನ್‌, ಯಹಜ,+ ಮೇಫಾಯತ್‌+ ವಿರುದ್ಧ, 22 ದೀಬೋನ್‌,+ ನೆಬೋ,+ ಬೇತ್‌-ದಿಬ್ಲಾತಯಿಮ್‌ ವಿರುದ್ಧ, 23 ಕಿರ್ಯಾತಯಿಮ್‌,+ ಬೇತ್‌-ಗಾಮೂಲ್‌, ಬೇತ್‌-ಮೆಯೋನ್‌+ ವಿರುದ್ಧ, 24 ಕೆರೀಯೋತ್‌,+ ಬೊಚ್ರ, ಮೋವಾಬ್‌ ದೇಶದ ಒಳಗೆ ಎಲ್ಲಾ ಕಡೆ ಇರೋ ಪಟ್ಟಣಗಳ ವಿರುದ್ಧ ದೇವರು ಶಿಕ್ಷೆ ವಿಧಿಸಿದ್ದಾನೆ.

25 ‘ಮೋವಾಬಿನ ಕೊಂಬನ್ನ* ಕಡಿದುಹಾಕಿದ್ದಾರೆ,

ಅವನ ತೋಳನ್ನ ಮುರಿದುಹಾಕಿದ್ದಾರೆ’ ಅಂತ ಯೆಹೋವ ಹೇಳ್ತಾನೆ.

26 ‘ಯೆಹೋವನ ವಿರುದ್ಧ ಹೋಗಿ ತನ್ನನ್ನೇ ಮೇಲಕ್ಕೆ ಏರಿಸ್ಕೊಂಡಿದ್ದಾನೆ,+ ಅದಕ್ಕೆ ಅವನಿಗೆ ಮತ್ತೇರುವಷ್ಟು ಕುಡಿಸಿ.+

ಅವನು ತನ್ನ ವಾಂತಿಯಲ್ಲೇ ಹೊರಳಾಡ್ತಿದ್ದಾನೆ,

ಅವನಿಗೆ ಅವಮಾನ ಆಗುತ್ತೆ.

27 ನೀನು ಇಸ್ರಾಯೇಲನ್ನ ಅವಮಾನ ಮಾಡಿದ್ಯಲ್ಲಾ,+

ಅವನನ್ನ ನೋಡಿ ತಲೆ ಆಡಿಸಿದ್ಯಲ್ಲಾ, ಅವನ ವಿರುದ್ಧ ಮಾತಾಡಿದ್ಯಲ್ಲಾ,

ಅವನೇನು ಕಳ್ಳರ ಜೊತೆ ಇದ್ನಾ?

28 ಮೋವಾಬಿನ ಜನ್ರೇ, ನೀವು ಪಟ್ಟಣಗಳನ್ನ ಬಿಟ್ಟು ಕಡಿದಾದ ಬಂಡೆ ಮೇಲೆ ವಾಸ ಮಾಡಿ,

ಕಣಿವೆ* ಬದಿಗಳಲ್ಲಿ ಗೂಡುಕಟ್ಟೋ ಪಾರಿವಾಳದ ತರ ಇರಿ.’”

29 “ನಾವು ಮೋವಾಬಿನ ಸೊಕ್ಕಿನ ಬಗ್ಗೆ ಕೇಳಿದ್ದೀವಿ, ಅವನಿಗೆ ತುಂಬ ಜಂಬ.

ಅವನ ದುರಹಂಕಾರ, ಸೊಕ್ಕು, ಜಂಬದ ಬಗ್ಗೆ ಕೇಳಿದ್ದೀವಿ, ಅವನ ಮನಸ್ಸು* ಸೊಕ್ಕಿಂದ ಉಬ್ಕೊಂಡಿದೆ.”+

30 “ಯೆಹೋವ ಹೇಳೋದು ಏನಂದ್ರೆ ‘ಅವನ ಕೋಪತಾಪದ ಬಗ್ಗೆ ನಂಗೊತ್ತು,

ಅವನು ಹೇಳೋ ಟೊಳ್ಳು ಮಾತುಗಳಿಂದ ಏನೂ ಆಗಲ್ಲ.

ಅವ್ರಿಂದೇನೂ ಮಾಡೋಕೆ ಆಗಲ್ಲ.

31 ಹಾಗಾಗಿ ನಾನು ಮೋವಾಬನ್ನ ನೆನಸಿ ಗೋಳಾಡ್ತೀನಿ,

ಇಡೀ ಮೋವಾಬನ್ನ ನೆನಸಿ ಗೊಳೋ ಅಂತ ಅಳ್ತೀನಿ,

ಕೀರ್‌-ಹೆರೆಸಿನ ಜನ್ರಿಗಾಗಿ ಎದೆಬಡ್ಕೊಂಡು ಗೋಳಾಡಿ.+

32 ಸಿಬ್ಮದ+ ದ್ರಾಕ್ಷಿ ಬಳ್ಳಿಯೇ, ನಾನು ಯಜ್ಜೇರನ್ನ+ ನೆನಸಿ ಅತ್ತದ್ದಕ್ಕಿಂತ

ನಿನ್ನನ್ನ ನೆನಸಿ ಜಾಸ್ತಿ ಅತ್ತಿದ್ದೀನಿ.

ಸೊಂಪಾಗಿ ಬೆಳೆದಿರೋ ನಿನ್ನ ಕೊಂಬೆಗಳು ಸಮುದ್ರದ ಆ ಕಡೆ ತನಕ ಹೋಗಿವೆ.

ಅವು ಸಮುದ್ರದ ತನಕ, ಯಜ್ಜೇರಿನ ತನಕ ತಲುಪಿದೆ.

ನಿನ್ನ ಬೇಸಿಗೆಕಾಲದ ಹಣ್ಣುಗಳ, ದ್ರಾಕ್ಷಿ ಫಸಲಿನ ಮೇಲೆ

ಶತ್ರು ದಾಳಿ ಮಾಡಿದ್ದಾನೆ.+

33 ಹಣ್ಣಿನ ತೋಟದಿಂದ ಮೋವಾಬ್‌ ದೇಶದಿಂದ

ಸಂತೋಷ, ಸಂಭ್ರಮವನ್ನ ಕಸಿದುಬಿಟ್ಟಿದ್ದಾರೆ.+

ದ್ರಾಕ್ಷಿ ತೊಟ್ಟಿಯಿಂದ ದ್ರಾಕ್ಷಾಮದ್ಯ ಹರಿಯದ ಹಾಗೆ ಮಾಡಿದ್ದೀನಿ.

ಇನ್ಮುಂದೆ ಯಾರೂ ಸಂತೋಷದಿಂದ ಕೂಗ್ತಾ ದ್ರಾಕ್ಷಿ ತುಳಿಯಲ್ಲ.

ಇನ್ಮುಂದೆ ಅವರ ಕೂಗಾಟ ಸಂತೋಷದ ಕೂಗಾಟ ಅಲ್ಲ.’”+

34 “‘ಹೆಷ್ಬೋನಲ್ಲಿ+ ಜೋರಾಗಿ ಕೂಗೋ ಸದ್ದು ಎಲೆಯಾಲೆ+ ಅನ್ನೋ ಜಾಗದ ತನಕ ಕೇಳಿಸ್ತಿದೆ.

ಅವರು ಎಷ್ಟು ಜೋರಾಗಿ ಅರಚಿಕೊಳ್ತಾ ಇದ್ದಾರೆ ಅಂದ್ರೆ ಅದು ಯಹಜದ+ ತನಕ ಕೇಳಿಸ್ತಿದೆ,

ಚೋಗರಿಂದ ಹೊರೊನಯಿಮ್‌+ ಮತ್ತು ಎಗ್ಲತ್‌-ಶೆಲಿಶೀಯದ ತನಕ ಕೇಳಿಸ್ತಿದೆ.

ಅಷ್ಟೇ ಅಲ್ಲ ನಿಮ್ರೀಮಿನ ನೀರು ಸಹ ಬತ್ತಿ ಹೋಗುತ್ತೆ.’+

35 ಯೆಹೋವ ಹೇಳೋದು ಏನಂದ್ರೆ ‘ನಾನು ಮೋವಾಬಿಗೆ ಯಾವ ಗತಿ ಮಾಡ್ತೀನಿ ಅಂದ್ರೆ

ಪೂಜಾಸ್ಥಳಕ್ಕೆ ಹೋಗಿ ಅರ್ಪಣೆ ಮಾಡೋಕೆ ಯಾರೂ ಇರಲ್ಲ,

ಅವ್ರ ದೇವರಿಗೆ ಬಲಿಗಳನ್ನ ಅರ್ಪಿಸೋಕೆ ಒಬ್ಬ ಮನುಷ್ಯನೂ ಉಳಿಯಲ್ಲ.

36 ಹಾಗಾಗಿ ನನ್ನ ಮನಸ್ಸು* ಮೋವಾಬನ್ನ ನೆನಸಿ ಕೊಳಲಿನ ತರ* ದುಃಖ ಪಡುತ್ತೆ.+

ನನ್ನ ಮನಸ್ಸು ಕೀರ್‌-ಹೆರೆಸಿನ ಜನ್ರನ್ನ ನೆನಸಿ ಕೊಳಲಿನ ತರ* ಶೋಕಿಸುತ್ತೆ.

ಯಾಕಂದ್ರೆ ಅವನು ಕೂಡಿಸಿಟ್ಟ ಸಂಪತ್ತು ಹಾಳಾಗಿ ಹೋಗುತ್ತೆ.

37 ಎಲ್ರ ತಲೆ ಬೋಳಾಗಿದೆ,+

ಎಲ್ರೂ ಗಡ್ಡ ಬೋಳಿಸ್ಕೊಂಡಿದ್ದಾರೆ,

ಎಲ್ರ ಕೈಗಳಿಗೂ ಗಾಯ ಆಗಿದೆ,+

ಅವರು ಸೊಂಟಕ್ಕೆ ಗೋಣಿ ಸುತ್ಕೊಂಡಿದ್ದಾರೆ!’”+

38 “‘ಮೋವಾಬಿನ ಎಲ್ಲ ಚಾವಣಿಗಳ ಮೇಲೆ,

ಅವಳ ಎಲ್ಲ ಪಟ್ಟಣಗಳ ಮುಖ್ಯಸ್ಥಳಗಳಲ್ಲಿ,

ದುಃಖದಿಂದ ಜೋರಾಗಿ ಅಳೋ ಶಬ್ದ ಬಿಟ್ರೆ ಬೇರೇನೂ ಕೇಳಿಸ್ತಿಲ್ಲ.

ಯಾಕಂದ್ರೆ ಬೇಡವಾದ ಪಾತ್ರೆಯನ್ನ ಒಡೆದುಬಿಡೋ ತರ,

ನಾನು ಮೋವಾಬನ್ನ ಒಡೆದು ಬಿಟ್ಟಿದ್ದೀನಿ’ ಅಂತ ಯೆಹೋವ ಹೇಳ್ತಾನೆ.

39 ‘ಮೋವಾಬ್‌ಗೆ ತುಂಬ ಭಯ ಆಗಿದೆ!

ಮೋವಾಬಿನ ಜನ್ರೇ, ಜೋರು ಜೋರಾಗಿ ಅಳಿ!

ಮುಖ ತೋರಿಸೋಕೆ ಆಗದೆ ಮೋವಾಬ್‌ ಬೆನ್ನು ಹಾಕಿದೆ.

ಅದಕ್ಕೆ ಅವಮಾನ ಆಗಿದೆ,

ಅವನನ್ನ ನೋಡಿ ಸುತ್ತಮುತ್ತ ಇರೋರೆಲ್ಲ ಬೆಚ್ಚಿ ಬಿದ್ದಿದ್ದಾರೆ.’”

40 “ಯೆಹೋವ ಹೀಗೆ ಹೇಳ್ತಾನೆ,

‘ನೋಡು! ಹದ್ದು ಹಠಾತ್ತನೆ ತನ್ನ ಬೇಟೆ ಮೇಲೆ ಬೀಳೋ ತರ+

ಶತ್ರು ರೆಕ್ಕೆಗಳನ್ನ ಚಾಚಿ ಮೋವಾಬಿನ ಮೇಲೆ ದಾಳಿ ಮಾಡ್ತಾನೆ.+

41 ಅದ್ರ ಪಟ್ಟಣಗಳು ಶತ್ರು ಕೈಗೆ ಹೋಗುತ್ತೆ,

ಭದ್ರಕೋಟೆಗಳ ಮೇಲೆ ದಾಳಿ ಮಾಡ್ತಾರೆ.

ಹೆರಿಗೆ ಸಮಯದಲ್ಲಿ ತಾಯಿ ಅನುಭವಿಸೋ ನೋವನ್ನ

ಮೋವಾಬಿನ ವೀರ ಸೈನಿಕರು ಆ ದಿನ ಅನುಭವಿಸ್ತಾರೆ.’”

42 “‘ಮೋವಾಬ್‌ ಯೆಹೋವನ ವಿರುದ್ಧ ಹೋಗಿ ಹೆಮ್ಮೆ ಪಟ್ಕೊಂಡಿದೆ,+

ಹಾಗಾಗಿ ಅದು ಸರ್ವನಾಶ ಆಗುತ್ತೆ, ಇನ್ಮುಂದೆ ಅವನು ಒಂದು ದೇಶವಾಗಿ ಇರಲ್ಲ.+

43 ಮೋವಾಬಿನ ಜನ್ರೇ,

ಭಯ, ಗುಂಡಿ, ಬೋನು ನಿನ್ನ ಮುಂದಿದೆ’ ಅಂತ ಯೆಹೋವ ಹೇಳ್ತಾನೆ.

44 ‘ಭಯದಿಂದ ಓಡಿಹೋಗ್ತಿರೋ ವ್ಯಕ್ತಿ ಗುಂಡಿಯಲ್ಲಿ ಬೀಳ್ತಾನೆ,

ಗುಂಡಿಯಿಂದ ಮೇಲೆ ಬರುವವನು ಬೋನಲ್ಲಿ ಸಿಕ್ಕಿಕೊಳ್ತಾನೆ.’

‘ಯಾಕಂದ್ರೆ ನಾನು ಮೋವಾಬಿಗೆ ಶಿಕ್ಷೆ ಕೊಡೋ ವರ್ಷ ಬರುತ್ತೆ’ ಅಂತ ಯೆಹೋವ ಹೇಳ್ತಾನೆ.

45 ‘ಓಡಿಹೋಗುವವರು ಸುಸ್ತಾಗಿ ಹೆಷ್ಬೋನಿನ ನೆರಳಲ್ಲಿ ನಿಲ್ತಾರೆ.

ಹೆಷ್ಬೋನಿಂದ ಬೆಂಕಿ ಬರುತ್ತೆ,

ಸೀಹೋನಿನ ಮಧ್ಯದಿಂದ ಜ್ವಾಲೆ ಬರುತ್ತೆ.+

ಅದು ಮೋವಾಬಿನ ಹಣೆಯನ್ನ ಸುಟ್ಟುಬಿಡುತ್ತೆ,

ಕ್ರೂರ ಸೈನಿಕರ ತಲೆಬುರುಡೆಗಳನ್ನ ಸುಟ್ಟುಬಿಡುತ್ತೆ.’+

46 ‘ಮೋವಾಬೇ, ನಿನ್ನ ಗತಿಯನ್ನ ಏನಂತ ಹೇಳಲಿ!

ಕೆಮೋಷನ+ ಜನ್ರು ನಾಶ ಆಗಿದ್ದಾರೆ.

ನಿನ್ನ ಗಂಡುಮಕ್ಕಳನ್ನ ಹಿಡ್ಕೊಂಡು ಹೋಗಿದ್ದಾರೆ,

ನಿನ್ನ ಹೆಣ್ಣುಮಕ್ಕಳು ಕೈದಿಗಳಾಗಿ ಹೋಗಿದ್ದಾರೆ.+

47 ಆದ್ರೆ ಕೈದಿಗಳಾಗಿ ಹೋಗಿರೋ ಮೋವಾಬಿನ ಜನ್ರನ್ನ ನಾನು ಕೊನೆ ದಿನಗಳಲ್ಲಿ ಒಟ್ಟುಗೂಡಿಸ್ತೀನಿ’ ಅಂತ ಯೆಹೋವ ಹೇಳ್ತಾನೆ.

‘ಮೋವಾಬಿನ ತೀರ್ಪಿನ ಸಂದೇಶ ಇಲ್ಲಿಗೆ ಮುಗೀತು.’”+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ