ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 2 ಪೂರ್ವಕಾಲವೃತ್ತಾಂತ 9
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

2 ಪೂರ್ವಕಾಲವೃತ್ತಾಂತ ಮುಖ್ಯಾಂಶಗಳು

      • ಶೆಬದ ರಾಣಿ ಮತ್ತು ಸೊಲೊಮೋನನ ಭೇಟಿ (1-12)

      • ಸೊಲೊಮೋನನ ಆಸ್ತಿಪಾಸ್ತಿ (13-28)

      • ಸೊಲೊಮೋನನ ಮರಣ (29-31)

2 ಪೂರ್ವಕಾಲವೃತ್ತಾಂತ 9:1

ಪಾದಟಿಪ್ಪಣಿ

  • *

    ಅಥವಾ “ಒಗಟುಗಳನ್ನ.”

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 12:42; ಲೂಕ 11:31
  • +ಕೀರ್ತ 72:15
  • +1ಅರ 10:1-3

2 ಪೂರ್ವಕಾಲವೃತ್ತಾಂತ 9:2

ಪಾದಟಿಪ್ಪಣಿ

  • *

    ಅಕ್ಷ. “ಅವನಿಗೆ ಗೊತ್ತಿರದ ವಿಷ್ಯ ಒಂದೂ ಇರಲಿಲ್ಲ.”

2 ಪೂರ್ವಕಾಲವೃತ್ತಾಂತ 9:3

ಮಾರ್ಜಿನಲ್ ರೆಫರೆನ್ಸ್

  • +1ಅರ 3:28; ಪ್ರಸಂ 12:9
  • +1ಅರ 10:4-9

2 ಪೂರ್ವಕಾಲವೃತ್ತಾಂತ 9:4

ಪಾದಟಿಪ್ಪಣಿ

  • *

    ಅಥವಾ “ಅವಳ ಉಸಿರೇ ನಿಂತು ಹೋಯ್ತು.”

ಮಾರ್ಜಿನಲ್ ರೆಫರೆನ್ಸ್

  • +1ಅರ 4:22, 23
  • +2ಪೂರ್ವ 8:12, 13

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/1/1999, ಪು. 23

2 ಪೂರ್ವಕಾಲವೃತ್ತಾಂತ 9:6

ಮಾರ್ಜಿನಲ್ ರೆಫರೆನ್ಸ್

  • +ಲೂಕ 11:31
  • +ಪ್ರಸಂ 1:16
  • +1ಅರ 4:31, 34; 2ಪೂರ್ವ 1:11, 12

2 ಪೂರ್ವಕಾಲವೃತ್ತಾಂತ 9:8

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 2:11

2 ಪೂರ್ವಕಾಲವೃತ್ತಾಂತ 9:9

ಪಾದಟಿಪ್ಪಣಿ

  • *

    ಒಂದು ತಲಾಂತು=34.2 ಕೆಜಿ. ಪರಿಶಿಷ್ಟ ಬಿ14 ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 72:10
  • +1ಅರ 10:10

2 ಪೂರ್ವಕಾಲವೃತ್ತಾಂತ 9:10

ಮಾರ್ಜಿನಲ್ ರೆಫರೆನ್ಸ್

  • +1ಅರ 9:27, 28; 10:22; 2ಪೂರ್ವ 8:18
  • +1ಅರ 10:11, 12

2 ಪೂರ್ವಕಾಲವೃತ್ತಾಂತ 9:11

ಮಾರ್ಜಿನಲ್ ರೆಫರೆನ್ಸ್

  • +1ಅರ 7:1
  • +1ಅರ 6:8
  • +1ಪೂರ್ವ 25:1; ಕೀರ್ತ 92:3

2 ಪೂರ್ವಕಾಲವೃತ್ತಾಂತ 9:12

ಮಾರ್ಜಿನಲ್ ರೆಫರೆನ್ಸ್

  • +1ಅರ 10:13

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/1/1999, ಪು. 20

2 ಪೂರ್ವಕಾಲವೃತ್ತಾಂತ 9:13

ಮಾರ್ಜಿನಲ್ ರೆಫರೆನ್ಸ್

  • +1ಅರ 10:14, 15; 2ಪೂರ್ವ 1:15; ಕೀರ್ತ 68:29; 72:15

2 ಪೂರ್ವಕಾಲವೃತ್ತಾಂತ 9:14

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 72:10

2 ಪೂರ್ವಕಾಲವೃತ್ತಾಂತ 9:15

ಪಾದಟಿಪ್ಪಣಿ

  • *

    ಒಂದು ಶೆಕೆಲ್‌=11.4 ಗ್ರಾಂ. ಪರಿಶಿಷ್ಟ ಬಿ14 ನೋಡಿ.

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 12:9
  • +1ಅರ 10:16, 17

2 ಪೂರ್ವಕಾಲವೃತ್ತಾಂತ 9:16

ಪಾದಟಿಪ್ಪಣಿ

  • *

    ಸಾಮಾನ್ಯವಾಗಿ ಇಂಥ ಗುರಾಣಿಗಳನ್ನ ಬಿಲ್ಲುಗಾರರು ತಗೊಂಡು ಹೋಗ್ತಿದ್ರು.

  • *

    ಪವಿತ್ರಗ್ರಂಥದ ಹೀಬ್ರು ಭಾಗದಲ್ಲಿ ಒಂದು ಮೈನಾ=570 ಗ್ರಾಂ. ಪರಿಶಿಷ್ಟ ಬಿ14 ನೋಡಿ.

ಮಾರ್ಜಿನಲ್ ರೆಫರೆನ್ಸ್

  • +1ಅರ 7:2

2 ಪೂರ್ವಕಾಲವೃತ್ತಾಂತ 9:17

ಮಾರ್ಜಿನಲ್ ರೆಫರೆನ್ಸ್

  • +1ಅರ 10:18-20

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 3/2023, ಪು. 6

2 ಪೂರ್ವಕಾಲವೃತ್ತಾಂತ 9:18

ಮಾರ್ಜಿನಲ್ ರೆಫರೆನ್ಸ್

  • +ಆದಿ 49:9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 3/2023, ಪು. 6

2 ಪೂರ್ವಕಾಲವೃತ್ತಾಂತ 9:19

ಮಾರ್ಜಿನಲ್ ರೆಫರೆನ್ಸ್

  • +ಅರ 23:24

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 3/2023, ಪು. 6

2 ಪೂರ್ವಕಾಲವೃತ್ತಾಂತ 9:20

ಮಾರ್ಜಿನಲ್ ರೆಫರೆನ್ಸ್

  • +1ಅರ 10:21, 22, 27

2 ಪೂರ್ವಕಾಲವೃತ್ತಾಂತ 9:21

ಮಾರ್ಜಿನಲ್ ರೆಫರೆನ್ಸ್

  • +1ಅರ 9:27
  • +ಕೀರ್ತ 72:10; ಯೋನ 1:3
  • +1ಅರ 10:18

2 ಪೂರ್ವಕಾಲವೃತ್ತಾಂತ 9:22

ಮಾರ್ಜಿನಲ್ ರೆಫರೆನ್ಸ್

  • +1ಅರ 3:12, 13; 4:29; 10:23-25

2 ಪೂರ್ವಕಾಲವೃತ್ತಾಂತ 9:23

ಮಾರ್ಜಿನಲ್ ರೆಫರೆನ್ಸ್

  • +1ಅರ 3:28; 4:34; 2ಪೂರ್ವ 1:12; ಜ್ಞಾನೋ 2:6

2 ಪೂರ್ವಕಾಲವೃತ್ತಾಂತ 9:24

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 6:29

2 ಪೂರ್ವಕಾಲವೃತ್ತಾಂತ 9:25

ಪಾದಟಿಪ್ಪಣಿ

  • *

    ಅಥವಾ “ಕುದುರೆ ಸವಾರರಿದ್ದರು.”

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 17:16; 1ಅರ 4:26
  • +1ಅರ 10:26

2 ಪೂರ್ವಕಾಲವೃತ್ತಾಂತ 9:26

ಮಾರ್ಜಿನಲ್ ರೆಫರೆನ್ಸ್

  • +1ಅರ 4:21

2 ಪೂರ್ವಕಾಲವೃತ್ತಾಂತ 9:27

ಮಾರ್ಜಿನಲ್ ರೆಫರೆನ್ಸ್

  • +1ಅರ 10:27; 1ಪೂರ್ವ 27:28

2 ಪೂರ್ವಕಾಲವೃತ್ತಾಂತ 9:28

ಮಾರ್ಜಿನಲ್ ರೆಫರೆನ್ಸ್

  • +1ಅರ 10:28; 2ಪೂರ್ವ 1:16

2 ಪೂರ್ವಕಾಲವೃತ್ತಾಂತ 9:29

ಮಾರ್ಜಿನಲ್ ರೆಫರೆನ್ಸ್

  • +1ಅರ 11:41-43
  • +2ಸಮು 7:2; 12:1; 1ಅರ 1:8; 1ಪೂರ್ವ 29:29
  • +1ಅರ 11:30, 31; 14:2, 6, 10
  • +1ಅರ 11:26
  • +2ಪೂರ್ವ 12:15; 13:22

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/15/2012, ಪು. 25

2 ಪೂರ್ವಕಾಲವೃತ್ತಾಂತ 9:31

ಮಾರ್ಜಿನಲ್ ರೆಫರೆನ್ಸ್

  • +2ಸಮು 5:9; 1ಅರ 2:10
  • +1ಅರ 14:21

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

2 ಪೂರ್ವ. 9:1ಮತ್ತಾ 12:42; ಲೂಕ 11:31
2 ಪೂರ್ವ. 9:1ಕೀರ್ತ 72:15
2 ಪೂರ್ವ. 9:11ಅರ 10:1-3
2 ಪೂರ್ವ. 9:31ಅರ 3:28; ಪ್ರಸಂ 12:9
2 ಪೂರ್ವ. 9:31ಅರ 10:4-9
2 ಪೂರ್ವ. 9:41ಅರ 4:22, 23
2 ಪೂರ್ವ. 9:42ಪೂರ್ವ 8:12, 13
2 ಪೂರ್ವ. 9:6ಲೂಕ 11:31
2 ಪೂರ್ವ. 9:6ಪ್ರಸಂ 1:16
2 ಪೂರ್ವ. 9:61ಅರ 4:31, 34; 2ಪೂರ್ವ 1:11, 12
2 ಪೂರ್ವ. 9:82ಪೂರ್ವ 2:11
2 ಪೂರ್ವ. 9:9ಕೀರ್ತ 72:10
2 ಪೂರ್ವ. 9:91ಅರ 10:10
2 ಪೂರ್ವ. 9:101ಅರ 9:27, 28; 10:22; 2ಪೂರ್ವ 8:18
2 ಪೂರ್ವ. 9:101ಅರ 10:11, 12
2 ಪೂರ್ವ. 9:111ಅರ 7:1
2 ಪೂರ್ವ. 9:111ಅರ 6:8
2 ಪೂರ್ವ. 9:111ಪೂರ್ವ 25:1; ಕೀರ್ತ 92:3
2 ಪೂರ್ವ. 9:121ಅರ 10:13
2 ಪೂರ್ವ. 9:131ಅರ 10:14, 15; 2ಪೂರ್ವ 1:15; ಕೀರ್ತ 68:29; 72:15
2 ಪೂರ್ವ. 9:14ಕೀರ್ತ 72:10
2 ಪೂರ್ವ. 9:152ಪೂರ್ವ 12:9
2 ಪೂರ್ವ. 9:151ಅರ 10:16, 17
2 ಪೂರ್ವ. 9:161ಅರ 7:2
2 ಪೂರ್ವ. 9:171ಅರ 10:18-20
2 ಪೂರ್ವ. 9:18ಆದಿ 49:9
2 ಪೂರ್ವ. 9:19ಅರ 23:24
2 ಪೂರ್ವ. 9:201ಅರ 10:21, 22, 27
2 ಪೂರ್ವ. 9:211ಅರ 9:27
2 ಪೂರ್ವ. 9:21ಕೀರ್ತ 72:10; ಯೋನ 1:3
2 ಪೂರ್ವ. 9:211ಅರ 10:18
2 ಪೂರ್ವ. 9:221ಅರ 3:12, 13; 4:29; 10:23-25
2 ಪೂರ್ವ. 9:231ಅರ 3:28; 4:34; 2ಪೂರ್ವ 1:12; ಜ್ಞಾನೋ 2:6
2 ಪೂರ್ವ. 9:24ಮತ್ತಾ 6:29
2 ಪೂರ್ವ. 9:25ಧರ್ಮೋ 17:16; 1ಅರ 4:26
2 ಪೂರ್ವ. 9:251ಅರ 10:26
2 ಪೂರ್ವ. 9:261ಅರ 4:21
2 ಪೂರ್ವ. 9:271ಅರ 10:27; 1ಪೂರ್ವ 27:28
2 ಪೂರ್ವ. 9:281ಅರ 10:28; 2ಪೂರ್ವ 1:16
2 ಪೂರ್ವ. 9:291ಅರ 11:41-43
2 ಪೂರ್ವ. 9:292ಸಮು 7:2; 12:1; 1ಅರ 1:8; 1ಪೂರ್ವ 29:29
2 ಪೂರ್ವ. 9:291ಅರ 11:30, 31; 14:2, 6, 10
2 ಪೂರ್ವ. 9:291ಅರ 11:26
2 ಪೂರ್ವ. 9:292ಪೂರ್ವ 12:15; 13:22
2 ಪೂರ್ವ. 9:312ಸಮು 5:9; 1ಅರ 2:10
2 ಪೂರ್ವ. 9:311ಅರ 14:21
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
  • 31
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
2 ಪೂರ್ವಕಾಲವೃತ್ತಾಂತ 9:1-31

ಎರಡನೇ ಪೂರ್ವಕಾಲವೃತ್ತಾಂತ

9 ರಾಜ ಸೊಲೊಮೋನನ ಬಗ್ಗೆ ಶೆಬದ ರಾಣಿ+ ಕೇಳಿಸ್ಕೊಂಡಿದ್ದಳು. ಅದಕ್ಕೇ ಅವಳು ಕಷ್ಟವಾದ ಪ್ರಶ್ನೆಗಳನ್ನ* ಕೇಳಿ ಅವನನ್ನ ಪರೀಕ್ಷಿಸೋಕೆ ಯೆರೂಸಲೇಮಿಗೆ ಬಂದಳು. ಅವಳು ಮಹಾ ವೈಭವದಿಂದ ತನ್ನ ದೊಡ್ಡ ಕುಟುಂಬದ ಜೊತೆ ಅಲ್ಲಿಗೆ ಬಂದಳು. ಸುಗಂಧ ತೈಲ, ತುಂಬ ಚಿನ್ನ+ ಮತ್ತು ಅಮೂಲ್ಯ ರತ್ನಗಳನ್ನ ಒಂಟೆಗಳ ಮೇಲೆ ಹೊರಿಸ್ಕೊಂಡು ತಂದಳು. ತನ್ನ ಮನಸ್ಸಲ್ಲಿದ್ದ ಎಲ್ಲ ಪ್ರಶ್ನೆಗಳನ್ನ ಸೊಲೊಮೋನನಿಗೆ ಕೇಳಿದಳು.+ 2 ಅವನು ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಟ್ಟ. ಯಾವ ವಿಷ್ಯವನ್ನೂ ವಿವರಿಸಿ ಹೇಳೋಕೆ ಅವನಿಗೆ ಕಷ್ಟ ಆಗಲಿಲ್ಲ.*

3 ಶೆಬದ ರಾಣಿ ಸೊಲೊಮೋನನ ವಿವೇಕವನ್ನ,+ ಅವನು ಕಟ್ಟಿಸಿದ ಅರಮನೆಯನ್ನ,+ 4 ಅವನ ಮೇಜಿನ ಮೇಲೆ ಇಡ್ತಿದ್ದ ಆಹಾರವನ್ನ,+ ಅವನ ಅಧಿಕಾರಿಗಳಿಗೆ ಕೂತ್ಕೊಳ್ಳೋಕೆ ಮಾಡಿದ್ದ ಏರ್ಪಾಡನ್ನ, ಆಹಾರ ಬಡಿಸ್ತಿದ್ದವ್ರನ್ನ, ಅವನ ಪಾನದಾಯಕರನ್ನ, ಅವರು ಹಾಕಿದ್ದ ವಿಶೇಷ ಬಟ್ಟೆಯನ್ನ ಮತ್ತು ಅವನು ಯೆಹೋವನ ಆಲಯದಲ್ಲಿ ತಪ್ಪದೆ ಕೊಡ್ತಿದ್ದ ಸರ್ವಾಂಗಹೋಮ ಬಲಿಗಳನ್ನ+ ನೋಡಿ ಆಶ್ಚರ್ಯದಿಂದ ಅವಳಿಗೆ ಮಾತೇ ಬರಲಿಲ್ಲ.* 5 ಅವಳು ರಾಜನಿಗೆ “ನಾನು ನನ್ನ ದೇಶದಲ್ಲಿ ನಿನ್ನ ಸಾಧನೆಗಳ ಬಗ್ಗೆ, ನಿನ್ನ ವಿವೇಕದ ಬಗ್ಗೆ ಕೇಳಿದ್ದೆಲ್ಲ ನಿಜ ಅಂತ ನಂಗೊತ್ತಾಯ್ತು. 6 ಆದ್ರೆ ನಾನು ಬಂದು ಇದನ್ನೆಲ್ಲ ನನ್ನ ಕಣ್ಣಾರೆ ನೋಡೋ ತನಕ ನಂಬಿರಲಿಲ್ಲ.+ ನಾನು ನೋಡಿದ್ದಕ್ಕೆ ಹೋಲಿಸಿದ್ರೆ ಅವರು ಹೇಳಿದ್ದು ಏನೇನೂ ಅಲ್ಲ ಅಂತ ಈಗ ಗೊತ್ತಾಯ್ತು.+ ನಾನು ಕೇಳಿಸ್ಕೊಂಡಿದ್ದಕ್ಕಿಂತ ಎಷ್ಟೋ ಹೆಚ್ಚು ವಿವೇಕ ನಿನ್ನ ಹತ್ರ ಇದೆ.+ 7 ಯಾವಾಗ್ಲೂ ನಿನ್ನ ಮುಂದೆ ನಿಂತು ನಿನ್ನ ವಿವೇಕದ ಮಾತುಗಳನ್ನ ಕೇಳಿಸ್ಕೊಂಡು ನಿನ್ನ ಜನ್ರು, ನಿನ್ನ ಸೇವಕರು ಸಂತೋಷವಾಗಿ ಇದ್ದಾರೆ! 8 ನಿನ್ನನ್ನ ಮೆಚ್ಚಿ ಇಸ್ರಾಯೇಲಿನ ರಾಜ ಸಿಂಹಾಸನದ ಮೇಲೆ ಕೂರಿಸಿರೋ ನಿನ್ನ ದೇವರಾದ ಯೆಹೋವನಿಗೆ ಹೊಗಳಿಕೆ ಸಿಗಲಿ. ಯಾಕಂದ್ರೆ ಯೆಹೋವ ಇಸ್ರಾಯೇಲ್ಯರನ್ನ ಪ್ರೀತಿಸ್ತಾನೆ.+ ಅವರು ಅಳಿದು ಹೋಗದೆ ಇರೋಕೆ ಆತನು ನಿನ್ನನ್ನ ಅವ್ರ ರಾಜನಾಗಿ ಮಾಡಿ ಅವ್ರನ್ನ ನ್ಯಾಯ, ನೀತಿಯಿಂದ ಆಳೋ ತರ ಮಾಡಿದ್ದಾನೆ” ಅಂದಳು.

9 ಆಮೇಲೆ ಅವಳು ರಾಜನಿಗೆ 120 ತಲಾಂತು* ಚಿನ್ನ,+ ಸಾಕಷ್ಟು ಸುಗಂಧ ತೈಲವನ್ನ, ಅಮೂಲ್ಯ ರತ್ನಗಳನ್ನ ಕೊಟ್ಟಳು. ಶೆಬದ ರಾಣಿ ಕೊಟ್ಟಷ್ಟು ಸುಗಂಧ ತೈಲವನ್ನ ರಾಜ ಸೊಲೊಮೋನನಿಗೆ ಯಾವತ್ತೂ ಯಾರೂ ಕೊಡಲಿಲ್ಲ.+

10 ಹೀರಾಮನ ಮತ್ತು ಸೊಲೊಮೋನನ ಸೇವಕರು ಓಫೀರಿನಿಂದ+ ಚಿನ್ನ ತಗೊಂಡು ಬರೋದರ ಜೊತೆ ಗಂಧದ ಮರಗಳನ್ನ ಮತ್ತು ಅಮೂಲ್ಯ ರತ್ನಗಳನ್ನೂ ತಂದ್ರು.+ 11 ರಾಜ ಸೊಲೊಮೋನ ಆ ಗಂಧದ ಮರಗಳಿಂದ ಯೆಹೋವನ ಆಲಯಕ್ಕೆ ಮತ್ತು ತನ್ನ ಅರಮನೆಗೆ+ ಮೆಟ್ಟಿಲುಗಳನ್ನ,+ ಗಾಯಕರಿಗಾಗಿ ತಂತಿವಾದ್ಯಗಳನ್ನ ಮಾಡಿಸಿದ.+ ಇವತ್ತಿನ ತನಕ ಯೆಹೂದ ದೇಶದಲ್ಲಿ ಅಷ್ಟು ಗಂಧದ ಮರಗಳು ನೋಡಕ್ಕೂ ಸಿಗಲಿಲ್ಲ.

12 ರಾಜ ಸೊಲೊಮೋನನೂ ಶೆಬದ ರಾಣಿಗೆ ಉಡುಗೊರೆಗಳನ್ನ ಕೊಟ್ಟ. ಅವಳು ಇಷ್ಟಪಟ್ಟು ಕೇಳಿದ್ದನ್ನೆಲ್ಲ ಕೊಟ್ಟ. ಅವಳು ತಂದಿದ್ದಕ್ಕಿಂತ ಜಾಸ್ತಿನೇ ಅವಳಿಗೆ ಕೊಟ್ಟ. ಆಮೇಲೆ ಅವಳು ತನ್ನ ಸೇವಕರ ಜೊತೆ ಸ್ವದೇಶಕ್ಕೆ ಹೋದಳು.+

13 ಸೊಲೊಮೋನನಿಗೆ ಪ್ರತಿ ವರ್ಷ 666 ತಲಾಂತು ಚಿನ್ನ ಸಿಗ್ತಿತ್ತು.+ 14 ಅದ್ರ ಜೊತೆ ವ್ಯಾಪಾರಿಗಳು, ಅರಬ್‌ ದೇಶದ ಎಲ್ಲ ರಾಜರು ಮತ್ತು ದೇಶದ ರಾಜ್ಯಪಾಲರು ಅವನಿಗಾಗಿ ಚಿನ್ನ ಮತ್ತು ಬೆಳ್ಳಿಯನ್ನ ತರುತ್ತಿದ್ರು.+

15 ರಾಜ ಸೊಲೊಮೋನ ಗಟ್ಟಿ ಚಿನ್ನದಿಂದ 200 ದೊಡ್ಡದೊಡ್ಡ ಗುರಾಣಿ ಮಾಡಿಸಿದ.+ (ಪ್ರತಿಯೊಂದು ಗುರಾಣಿಗೆ 600 ಶೆಕೆಲ್‌* ಚಿನ್ನ ಬಳಸಿದ್ರು)+ 16 ಅಷ್ಟೇ ಅಲ್ಲ, 300 ಚಿಕ್ಕಚಿಕ್ಕ ಗುರಾಣಿ* ಮಾಡಿಸಿದ. (ಪ್ರತಿಯೊಂದು ಗುರಾಣಿಗೆ 3 ಮೈನಾ* ಚಿನ್ನ ಹಿಡಿತು.) ಆಮೇಲೆ ರಾಜ ಇವನ್ನ “ಲೆಬನೋನ್‌ ವನ” ಅನ್ನೋ ಅರಮನೆಯಲ್ಲಿ+ ಇಡಿಸಿದ.

17 ರಾಜ ಆನೆ ದಂತದಿಂದ ದೊಡ್ಡ ಸಿಂಹಾಸನ ಮಾಡಿಸಿ ಅದಕ್ಕೆ ಅಪ್ಪಟ ಚಿನ್ನದ ತಗಡನ್ನ ಹೊದಿಸಿದ.+ 18 ಆ ಸಿಂಹಾಸನಕ್ಕೆ ಆರು ಮೆಟ್ಟಿಲು ಇತ್ತು. ಸಿಂಹಾಸನಕ್ಕೆ ಅಂಟ್ಕೊಂಡೇ ಚಿನ್ನದ ಪಾದಪೀಠ ಇತ್ತು. ಸಿಂಹಾಸನಕ್ಕೆ ಎರಡು ಕೈಗಳಿತ್ತು. ಆ ಕೈಗಳ ಬದಿಯಲ್ಲಿ ಎರಡು ಸಿಂಹಗಳು+ ನಿಂತಿರೋ ಪ್ರತಿಮೆ ಇತ್ತು. 19 ಪ್ರತಿ ಮೆಟ್ಟಿಲಿನ ಎರಡೂ ಕೊನೆಯಲ್ಲಿ ಒಂದೊಂದು ಸಿಂಹದ ಪ್ರತಿಮೆ ಇತ್ತು. ಹೀಗೆ ಆರು ಮೆಟ್ಟಿಲಿಗೆ ಒಟ್ಟು 12 ಸಿಂಹದ+ ಪ್ರತಿಮೆಗಳು ಇದ್ವು. ಬೇರೆ ಯಾವ ರಾಜ್ಯದಲ್ಲೂ ಈ ತರದ ಸಿಂಹಾಸನ ಇರಲಿಲ್ಲ. 20 ರಾಜ ಸೊಲೊಮೋನನ ಪಾನಪಾತ್ರೆಗಳೆಲ್ಲ ಚಿನ್ನದ್ದಾಗಿತ್ತು. “ಲೆಬನೋನಿನ ವನ” ಅಂತ ಕರೀತಿದ್ದ ಅರಮನೆಯಲ್ಲಿ ಇದ್ದ ಪಾತ್ರೆಗಳೆಲ್ಲ ಅಪ್ಪಟ ಚಿನ್ನದ್ದಾಗಿತ್ತು. ಬೆಳ್ಳಿ ಪಾತ್ರೆಗಳು ಒಂದೂ ಇರಲಿಲ್ಲ. ಯಾಕಂದ್ರೆ ಸೊಲೊಮೋನನ ಕಾಲದಲ್ಲಿ ಬೆಳ್ಳಿಗೆ ಬೆಲೆನೇ ಇರಲಿಲ್ಲ.+ 21 ರಾಜನ ಹಡಗುಪಡೆ ಹೀರಾಮನ+ ಸೇವಕರ ಜೊತೆ ತಾರ್ಷೀಷಿಗೆ+ ಹೋಗ್ತಿತ್ತು. ಮೂರು ವರ್ಷಕ್ಕೆ ಒಂದುಸಲ ತಾರ್ಷೀಷಿನ ಹಡಗುಪಡೆ ಚಿನ್ನ, ಬೆಳ್ಳಿ, ಆನೆಯ ದಂತ,+ ಕೋತಿ ಮತ್ತು ನವಿಲುಗಳನ್ನ ತುಂಬಿಸ್ಕೊಂಡು ಬರ್ತಿತ್ತು.

22 ರಾಜ ಸೊಲೊಮೋನನ ಸಿರಿಸಂಪತ್ತು ಮತ್ತು ವಿವೇಕ ಭೂಮಿ ಮೇಲಿದ್ದ ಬೇರೆ ಎಲ್ಲ ರಾಜರಿಗಿಂತ ಎಷ್ಟೋ ಮಿಗಿಲಾಗಿತ್ತು.+ 23 ದೇವರು ಸೊಲೊಮೋನನಿಗೆ ವಿವೇಕ ಕೊಟ್ಟಿದ್ದನು. ಅವನ ವಿವೇಕದ ಮಾತನ್ನ ಕೇಳೋಕೆ ರಾಜರು ಭೂಮಿಯ ಮೂಲೆಮೂಲೆಯಿಂದ ಅವನ ಹತ್ರ ಬರ್ತಿದ್ರು.+ 24 ಅವ್ರಲ್ಲಿ ಯಾರೇ ಬಂದ್ರೂ ಅವನಿಗೆ ಉಡುಗೊರೆಯಾಗಿ ಚಿನ್ನ-ಬೆಳ್ಳಿಯ ವಸ್ತುಗಳನ್ನ, ಬಟ್ಟೆಗಳನ್ನ,+ ಆಯುಧಗಳನ್ನ, ಸುಗಂಧ ತೈಲವನ್ನ, ಕುದುರೆಗಳನ್ನ, ಹೇಸರಗತ್ತೆಗಳನ್ನ ತರ್ತಿದ್ರು. ಈ ಪದ್ಧತಿ ವರ್ಷಾನುಗಟ್ಟಲೆ ಮುಂದುವರಿತು. 25 ರಾಜ ಸೊಲೊಮೋನನ ರಥಗಳನ್ನ ಎಳೆಯೋ ಕುದುರೆಗಳನ್ನ ಕಟ್ಟೋಕೆ 4,000 ತಾಣಗಳಿದ್ವು ಮತ್ತು ಅವನ ಹತ್ರ 12,000 ಕುದುರೆಗಳು ಇದ್ವು.*+ ಅವನು ಅವುಗಳನ್ನ ರಥಗಳ ಪಟ್ಟಣಗಳಲ್ಲಿ ಇಟ್ಟ. ಆ ಪಟ್ಟಣಗಳು ಯೆರೂಸಲೇಮಿಗೆ ಹತ್ರ ಇತ್ತು.+ 26 ಸೊಲೊಮೋನ ಯೂಫ್ರೆಟಿಸ್‌ ನದಿಯಿಂದ ಫಿಲಿಷ್ಟಿಯರ ದೇಶದ ತನಕ, ಈಜಿಪ್ಟಿನ ಗಡಿಯ ತನಕ ಇದ್ದ ಎಲ್ಲ ರಾಜರನ್ನ ಆಳಿದ.+ 27 ರಾಜ ಬೆಳ್ಳಿಯನ್ನ ಕಲ್ಲುಗಳ ಹಾಗೆ, ದೇವದಾರು ಮರಗಳನ್ನ ಷೆಫೆಲಾದಲ್ಲಿದ್ದ ಅತ್ತಿ ಮರಗಳ ಹಾಗೆ ಯೆರೂಸಲೇಮಲ್ಲಿ ತುಂಬ ಕೂಡಿಸಿಟ್ಟ.+ 28 ಅವರು ಸೊಲೊಮೋನನಿಗಾಗಿ ಈಜಿಪ್ಟಿಂದ ಮತ್ತು ಬೇರೆಲ್ಲ ದೇಶಗಳಿಂದ ಕುದುರೆಗಳನ್ನ ತರಿಸ್ತಿದ್ರು.+

29 ಸೊಲೊಮೋನನ ಇಡೀ ಜೀವನಚರಿತ್ರೆ+ ಪ್ರವಾದಿ ನಾತಾನ+ ಬರೆದ ಪುಸ್ತಕದಲ್ಲಿ, ಶೀಲೋನ ಪ್ರವಾದಿ ಅಹೀಯನ+ ಪುಸ್ತಕದಲ್ಲಿ ಮತ್ತು ನೆಬಾಟನ ಮಗ ಯಾರೊಬ್ಬಾಮನ+ ಬಗ್ಗೆ ಇದ್ದೋವ+ ನೋಡಿದ ದರ್ಶನಗಳ ದಾಖಲೆಯಲ್ಲಿ ಇದೆ. 30 ಸೊಲೊಮೋನ ಯೆರೂಸಲೇಮಲ್ಲಿ ಇದ್ದು ಇಡೀ ಇಸ್ರಾಯೇಲನ್ನ 40 ವರ್ಷ ಆಳಿದ. 31 ಆಮೇಲೆ ಸೊಲೊಮೋನ ತೀರಿಹೋದ ಮತ್ತು ಅವನನ್ನ ದಾವೀದಪಟ್ಟಣದಲ್ಲಿ ಸಮಾಧಿ ಮಾಡಿದ್ರು.+ ಅವನು ಆದಮೇಲೆ ಅವನ ಮಗ ರೆಹಬ್ಬಾಮ ರಾಜ ಆದ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ