ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 2 ಪೂರ್ವಕಾಲವೃತ್ತಾಂತ 12
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

2 ಪೂರ್ವಕಾಲವೃತ್ತಾಂತ ಮುಖ್ಯಾಂಶಗಳು

      • ಶೀಶಕ ಯೆರೂಸಲೇಮಿನ ಮೇಲೆ ದಾಳಿ ಮಾಡಿದ (1-12)

      • ರೆಹಬ್ಬಾಮನ ಆಳ್ವಿಕೆಯ ಅಂತ್ಯ (13-16)

2 ಪೂರ್ವಕಾಲವೃತ್ತಾಂತ 12:1

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 11:17
  • +ಧರ್ಮೋ 32:15; 2ಪೂರ್ವ 26:11, 16

2 ಪೂರ್ವಕಾಲವೃತ್ತಾಂತ 12:2

ಮಾರ್ಜಿನಲ್ ರೆಫರೆನ್ಸ್

  • +1ಅರ 11:40; 14:25

2 ಪೂರ್ವಕಾಲವೃತ್ತಾಂತ 12:3

ಮಾರ್ಜಿನಲ್ ರೆಫರೆನ್ಸ್

  • +ನಹೂ 3:9

2 ಪೂರ್ವಕಾಲವೃತ್ತಾಂತ 12:5

ಮಾರ್ಜಿನಲ್ ರೆಫರೆನ್ಸ್

  • +1ಅರ 12:22-24
  • +ಧರ್ಮೋ 28:15; 2ಪೂರ್ವ 15:2

2 ಪೂರ್ವಕಾಲವೃತ್ತಾಂತ 12:6

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 33:10, 12

2 ಪೂರ್ವಕಾಲವೃತ್ತಾಂತ 12:7

ಮಾರ್ಜಿನಲ್ ರೆಫರೆನ್ಸ್

  • +1ಅರ 21:29; 2ಪೂರ್ವ 34:26, 27

2 ಪೂರ್ವಕಾಲವೃತ್ತಾಂತ 12:8

ಪಾದಟಿಪ್ಪಣಿ

  • *

    ಅಕ್ಷ. “ರಾಜ್ಯಗಳ.”

2 ಪೂರ್ವಕಾಲವೃತ್ತಾಂತ 12:9

ಮಾರ್ಜಿನಲ್ ರೆಫರೆನ್ಸ್

  • +1ಅರ 7:51
  • +1ಅರ 10:16, 17; 14:25-28

2 ಪೂರ್ವಕಾಲವೃತ್ತಾಂತ 12:10

ಪಾದಟಿಪ್ಪಣಿ

  • *

    ಅಕ್ಷ. “ಓಟಗಾರರ.”

2 ಪೂರ್ವಕಾಲವೃತ್ತಾಂತ 12:12

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 33:10, 12
  • +ಆದಿ 18:23-25; 1ಅರ 14:1, 13; 2ಪೂರ್ವ 19:2, 3
  • +ಪ್ರಲಾ 3:22

2 ಪೂರ್ವಕಾಲವೃತ್ತಾಂತ 12:13

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 23:3; 1ಅರ 11:1; 14:21

2 ಪೂರ್ವಕಾಲವೃತ್ತಾಂತ 12:14

ಮಾರ್ಜಿನಲ್ ರೆಫರೆನ್ಸ್

  • +1ಸಮು 7:3; 1ಅರ 18:21; ಮಾರ್ಕ 12:30

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    6/2018, ಪು. 14-15

2 ಪೂರ್ವಕಾಲವೃತ್ತಾಂತ 12:15

ಮಾರ್ಜಿನಲ್ ರೆಫರೆನ್ಸ್

  • +1ಅರ 12:22-24
  • +2ಪೂರ್ವ 9:29; 13:22
  • +1ಅರ 14:30, 31

2 ಪೂರ್ವಕಾಲವೃತ್ತಾಂತ 12:16

ಮಾರ್ಜಿನಲ್ ರೆಫರೆನ್ಸ್

  • +2ಸಮು 5:9
  • +ಮತ್ತಾ 1:7

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

2 ಪೂರ್ವ. 12:12ಪೂರ್ವ 11:17
2 ಪೂರ್ವ. 12:1ಧರ್ಮೋ 32:15; 2ಪೂರ್ವ 26:11, 16
2 ಪೂರ್ವ. 12:21ಅರ 11:40; 14:25
2 ಪೂರ್ವ. 12:3ನಹೂ 3:9
2 ಪೂರ್ವ. 12:51ಅರ 12:22-24
2 ಪೂರ್ವ. 12:5ಧರ್ಮೋ 28:15; 2ಪೂರ್ವ 15:2
2 ಪೂರ್ವ. 12:62ಪೂರ್ವ 33:10, 12
2 ಪೂರ್ವ. 12:71ಅರ 21:29; 2ಪೂರ್ವ 34:26, 27
2 ಪೂರ್ವ. 12:91ಅರ 7:51
2 ಪೂರ್ವ. 12:91ಅರ 10:16, 17; 14:25-28
2 ಪೂರ್ವ. 12:122ಪೂರ್ವ 33:10, 12
2 ಪೂರ್ವ. 12:12ಆದಿ 18:23-25; 1ಅರ 14:1, 13; 2ಪೂರ್ವ 19:2, 3
2 ಪೂರ್ವ. 12:12ಪ್ರಲಾ 3:22
2 ಪೂರ್ವ. 12:13ಧರ್ಮೋ 23:3; 1ಅರ 11:1; 14:21
2 ಪೂರ್ವ. 12:141ಸಮು 7:3; 1ಅರ 18:21; ಮಾರ್ಕ 12:30
2 ಪೂರ್ವ. 12:151ಅರ 12:22-24
2 ಪೂರ್ವ. 12:152ಪೂರ್ವ 9:29; 13:22
2 ಪೂರ್ವ. 12:151ಅರ 14:30, 31
2 ಪೂರ್ವ. 12:162ಸಮು 5:9
2 ಪೂರ್ವ. 12:16ಮತ್ತಾ 1:7
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
2 ಪೂರ್ವಕಾಲವೃತ್ತಾಂತ 12:1-16

ಎರಡನೇ ಪೂರ್ವಕಾಲವೃತ್ತಾಂತ

12 ರೆಹಬ್ಬಾಮ ತನಗೆ ಅಧಿಕಾರ ಸಿಕ್ಕ ಮೇಲೆ ಬಲಿಷ್ಠನಾದ+ ತಕ್ಷಣ ಯೆಹೋವನ ನಿಯಮ ಪಾಲಿಸೋದನ್ನ ಬಿಟ್ಟುಬಿಟ್ಟ.+ ಎಲ್ಲ ಇಸ್ರಾಯೇಲ್ಯರು ಹಾಗೇ ಮಾಡಿದ್ರು. 2 ಅವರು ಯೆಹೋವನಿಗೆ ನಂಬಿಕೆದ್ರೋಹ ಮಾಡಿದ್ರು. ಹಾಗಾಗಿ ರಾಜ ರೆಹಬ್ಬಾಮನ ಆಳ್ವಿಕೆಯ ಐದನೇ ವರ್ಷದಲ್ಲಿ ಈಜಿಪ್ಟಿನ ರಾಜ ಶೀಶಕ್‌+ ಯೆರೂಸಲೇಮನ್ನ ಆಕ್ರಮಣ ಮಾಡಿದ. 3 ಅವನ ಹತ್ರ 1,200 ರಥಗಳು, 60,000 ಕುದುರೆ ಸವಾರರು ಮತ್ತು ಈಜಿಪ್ಟಿಂದ ಅಂದ್ರೆ ಲಿಬ್ಯ, ಸುಕ್ಕೀ, ಇಥಿಯೋಪ್ಯದವರಿಂದ+ ಬಂದಿದ್ದ ಲೆಕ್ಕಾನೇ ಇಲ್ಲದಷ್ಟು ಸೈನಿಕರ ಗುಂಪಿತ್ತು. 4 ಅವನು ಯೆಹೂದದ ಭದ್ರ ಕೋಟೆಗಳಿದ್ದ ಪಟ್ಟಣಗಳನ್ನ ವಶ ಮಾಡ್ಕೊಂಡು ಕೊನೆಗೆ ಯೆರೂಸಲೇಮನ್ನ ತಲುಪಿದ.

5 ರೆಹಬ್ಬಾಮ ಮತ್ತು ಯೆಹೂದದ ಅಧಿಕಾರಿಗಳು ಶೀಶಕನಿಗೆ ಭಯಪಟ್ಟು ಯೆರೂಸಲೇಮಲ್ಲಿ ಒಟ್ಟುಸೇರಿದ್ರು. ಪ್ರವಾದಿ ಶೆಮಾಯ+ ಅವ್ರ ಹತ್ರ ಬಂದು “ಯೆಹೋವ ಹೀಗೆ ಹೇಳ್ತಾನೆ, ‘ನೀವು ನನ್ನನ್ನ ಬಿಟ್ಟುಬಿಟ್ರಿ. ಅದಕ್ಕೇ ನಾನು ನಿಮ್ಮನ್ನ ಶೀಶಕನ ಕೈಗೆ ಒಪ್ಪಿಸಿದ್ದೀನಿ’”+ ಅಂದ. 6 ಆಗ ರಾಜ ಮತ್ತು ಇಸ್ರಾಯೇಲಿನ ಅಧಿಕಾರಿಗಳು ತಮ್ಮನ್ನ ತಗ್ಗಿಸಿಕೊಂಡು+ “ಯೆಹೋವ ನೀತಿವಂತನು” ಅಂದ್ರು. 7 ಅವರು ತಮ್ಮನ್ನ ತಗ್ಗಿಸಿಕೊಂಡಿದ್ದನ್ನ ಯೆಹೋವ ನೋಡಿದಾಗ ಶೆಮಾಯಗೆ ಯೆಹೋವ ಈ ಸಂದೇಶ ಕೊಟ್ಟನು “ಅವರು ತಮ್ಮನ್ನೇ ತಗ್ಗಿಸಿಕೊಂಡ್ರು. ಹಾಗಾಗಿ ನಾನು ಅವ್ರನ್ನ ನಾಶಮಾಡಲ್ಲ.+ ಆದಷ್ಟು ಬೇಗ ನಾನು ಅವ್ರನ್ನ ಕಾಪಾಡ್ತೀನಿ. ಶೀಶಕನ ಮೂಲಕ ನಾನು ನನ್ನ ರೋಷವನ್ನ ಯೆರೂಸಲೇಮಿನ ಮೇಲೆ ಸುರಿಸಲ್ಲ. 8 ಆದ್ರೆ ಅವರು ಶೀಶಕನ ಸೇವಕರಾಗ್ತಾರೆ. ಆಗ ಅವ್ರಿಗೆ, ನನಗೆ ಸೇವೆ ಮಾಡೋದಕ್ಕೂ ಬೇರೆ ದೇಶದ ರಾಜರ* ಸೇವೆ ಮಾಡೋದಕ್ಕೂ ಇರೋ ವ್ಯತ್ಯಾಸ ಗೊತ್ತಾಗುತ್ತೆ” ಅಂದನು.

9 ಹಾಗಾಗಿ ಈಜಿಪ್ಟಿನ ರಾಜ ಶೀಶಕ್‌ ಯೆರೂಸಲೇಮಿನ ವಿರುದ್ಧ ಬಂದ. ಅವನು ಯೆಹೋವನ ಆಲಯ ಮತ್ತು ರಾಜನ ಅರಮನೆಯಲ್ಲಿದ್ದ ನಿಕ್ಷೇಪಗಳನ್ನ ತಗೊಂಡ.+ ಅಷ್ಟೆ ಅಲ್ಲ ಸೊಲೊಮೋನ ಮಾಡಿಸಿದ್ದ ಚಿನ್ನದ ಗುರಾಣಿಗಳ ಸಮೇತ ಎಲ್ಲ ತಗೊಂಡು ಹೋದ.+ 10 ಹಾಗಾಗಿ ರಾಜ ರೆಹಬ್ಬಾಮ ಚಿನ್ನದ ಗುರಾಣಿಗಳ ಬದ್ಲು ತಾಮ್ರದ ಗುರಾಣಿಗಳನ್ನ ಮಾಡಿಸಿದ. ಅವುಗಳನ್ನ ಅರಮನೆಯ ಬಾಗಿಲು ಕಾಯುವವರ* ಮುಖ್ಯಸ್ಥರಿಗೆ ಕೊಟ್ಟ. 11 ರಾಜ ಯೆಹೋವನ ಆಲಯಕ್ಕೆ ಬಂದಾಗೆಲ್ಲ ಬಾಗಿಲು ಕಾಯೋರು ಒಳಗೆ ಬಂದು ಗುರಾಣಿಗಳನ್ನ ತಗೊಂಡು ಅವನ ಜೊತೆ ಹೋಗ್ತಿದ್ರು. ಆಮೇಲೆ ಅವರು ಅದನ್ನ ವಾಪಸ್‌ ಅವ್ರ ಕೋಣೆಯಲ್ಲಿ ಇಡ್ತಿದ್ರು. 12 ರಾಜ ತನ್ನನೇ ತಗ್ಗಿಸಿಕೊಂಡಿದ್ರಿಂದ ಯೆಹೋವ ಅವನ ಮೇಲೆ ಕೋಪ ತೋರಿಸಲಿಲ್ಲ.+ ಅಷ್ಟೇ ಅಲ್ಲ ಯೆಹೂದದ ಜನ್ರಲ್ಲಿ ಕೆಲವು ಒಳ್ಳೇ ವಿಷ್ಯಗಳೂ ಇದ್ವು.+ ಹಾಗಾಗಿ ಆತನು ಅವ್ರನ್ನ ಪೂರ್ತಿ ನಾಶಮಾಡಲಿಲ್ಲ.+

13 ರಾಜ ರೆಹಬ್ಬಾಮ ಯೆರೂಸಲೇಮಲ್ಲಿ ರಾಜನಾಗೇ ಆಳ್ವಿಕೆ ಮುಂದುವರಿಸಿದ. ಅವನು ರಾಜನಾದಾಗ ಅವನಿಗೆ 41 ವರ್ಷ. ಯೆಹೋವ ಇಸ್ರಾಯೇಲಿನ ಎಲ್ಲ ಕುಲಗಳಿಂದ ತನ್ನ ಹೆಸ್ರಿಗಾಗಿ ಆರಿಸಿಕೊಂಡ ಪಟ್ಟಣದಲ್ಲಿ ಅಂದ್ರೆ ಯೆರೂಸಲೇಮಲ್ಲಿ ಅವನು 17 ವರ್ಷ ಆಳಿದ. ಅಮ್ಮೋನಿಯಳಾದ ನಯಮಾ ಅವನ ತಾಯಿ.+ 14 ಅವನು ಕೆಟ್ಟ ಕೆಲಸಗಳನ್ನ ಮಾಡಿದ. ಯಾಕಂದ್ರೆ ಅವನು ಯೆಹೋವನನ್ನ ಹುಡುಕಬೇಕು ಅಂತ ಹೃದಯದಲ್ಲಿ ತೀರ್ಮಾನ ಮಾಡಿರಲಿಲ್ಲ.+

15 ರೆಹಬ್ಬಾಮನ ಜೀವನಚರಿತ್ರೆಯ ಬಗ್ಗೆ ಪ್ರವಾದಿ ಶೆಮಾಯ+ ಮತ್ತು ದೇವದರ್ಶನ ನೋಡ್ತಿದ್ದ ಇದ್ದೋ+ ಬರೆದ ವಂಶಾವಳಿಯ ದಾಖಲೆಯಲ್ಲಿದೆ. ರೆಹಬ್ಬಾಮ ಮತ್ತು ಯಾರೊಬ್ಬಾಮನ ಮಧ್ಯ ಯಾವಾಗ್ಲೂ ಯುದ್ಧ ನಡೀತಾನೇ ಇತ್ತು.+ 16 ಆಮೇಲೆ ರೆಹಬ್ಬಾಮ ಸತ್ತುಹೋದ. ಅವನನ್ನ ದಾವೀದಪಟ್ಟಣದಲ್ಲಿ+ ಸಮಾಧಿ ಮಾಡಿದ್ರು. ಅವನಾದ ಮೇಲೆ ಅವನ ಮಗ ಅಬೀಯ+ ರಾಜನಾದ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ