ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಫಿಲಿಪ್ಪಿ 1
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಫಿಲಿಪ್ಪಿ ಮುಖ್ಯಾಂಶಗಳು

      • ವಂದನೆ (1, 2)

      • ದೇವರಿಗೆ ಧನ್ಯವಾದ, ಪೌಲನ ಪ್ರಾರ್ಥನೆ (3-11)

      • ತೊಂದ್ರೆ ಇದ್ರೂ ಸಿಹಿಸುದ್ದಿ ಹರಡ್ತಿದೆ (12-20)

      • ಬದುಕಿದ್ರೆ ಕ್ರಿಸ್ತನಿಗಾಗಿ, ಸತ್ರೂ ಲಾಭವಿದೆ (21-26)

      • ಸಿಹಿಸುದ್ದಿಗೆ ತಕ್ಕ ಹಾಗೆ ನಡೆದ್ಕೊಳ್ಳಿ (27-30)

ಫಿಲಿಪ್ಪಿ 1:1

ಪಾದಟಿಪ್ಪಣಿ

  • *

    ಅಥವಾ “ಹಿರಿಯರಿಗೂ.”

ಮಾರ್ಜಿನಲ್ ರೆಫರೆನ್ಸ್

  • +ಅಕಾ 16:12
  • +1ತಿಮೊ 3:1, 8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಸಂಘಟಿತರು, ಪು. 51

ಫಿಲಿಪ್ಪಿ 1:4

ಮಾರ್ಜಿನಲ್ ರೆಫರೆನ್ಸ್

  • +1ಥೆಸ 1:2

ಫಿಲಿಪ್ಪಿ 1:5

ಪಾದಟಿಪ್ಪಣಿ

  • *

    ಅಥವಾ “ನಿಮ್ಮ ಕೊಡುಗೆ ದೊಡ್ಡದು.”

ಫಿಲಿಪ್ಪಿ 1:6

ಮಾರ್ಜಿನಲ್ ರೆಫರೆನ್ಸ್

  • +1ಕೊರಿಂ 1:8
  • +ಫಿಲಿ 2:13

ಫಿಲಿಪ್ಪಿ 1:7

ಪಾದಟಿಪ್ಪಣಿ

  • *

    ಅಥವಾ “ಕಾನೂನಿನ ಪ್ರಕಾರ ಸಮರ್ಥಿಸಿದಾಗ.”

ಮಾರ್ಜಿನಲ್ ರೆಫರೆನ್ಸ್

  • +ಎಫೆ 3:1; ಫಿಲಿ 1:13; ಕೊಲೊ 4:18; 2ತಿಮೊ 1:8; ಫಿಲೆ 13
  • +ಅಕಾ 24:10, 14; 25:10-12

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ,

    7/2023, ಪು. 3

    ಕೂಲಂಕಷ ಸಾಕ್ಷಿ, ಪು. 131-132

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 21

    ಕಾವಲಿನಬುರುಜು,

    2/15/2015, ಪು. 22

    8/15/1999, ಪು. 21-22

    12/1/1998, ಪು. 18

ಫಿಲಿಪ್ಪಿ 1:8

ಪಾದಟಿಪ್ಪಣಿ

  • *

    ಅಕ್ಷ. “ದೇವರೇ ಸಾಕ್ಷಿ.”

ಫಿಲಿಪ್ಪಿ 1:9

ಮಾರ್ಜಿನಲ್ ರೆಫರೆನ್ಸ್

  • +ಯೋಹಾ 17:3
  • +ಇಬ್ರಿ 5:14
  • +1ಥೆಸ 3:12

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    8/2022, ಪು. 3

    ಕಾವಲಿನಬುರುಜು (ಅಧ್ಯಯನ),

    8/2019, ಪು. 9-10

    ಕಾವಲಿನಬುರುಜು,

    3/15/1997, ಪು. 16-17

    6/15/1995, ಪು. 20

ಫಿಲಿಪ್ಪಿ 1:10

ಮಾರ್ಜಿನಲ್ ರೆಫರೆನ್ಸ್

  • +ರೋಮ 12:2
  • +ರೋಮ 14:13, 21

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 12

    ಎಚ್ಚರ!,

    ನಂ. 1 2020 ಪು. 12

    ಕಾವಲಿನಬುರುಜು (ಅಧ್ಯಯನ),

    8/2019, ಪು. 10-12

    ಕಾವಲಿನಬುರುಜು,

    11/15/2008, ಪು. 24

    3/15/1997, ಪು. 16-17

ಫಿಲಿಪ್ಪಿ 1:11

ಮಾರ್ಜಿನಲ್ ರೆಫರೆನ್ಸ್

  • +ಯೋಹಾ 15:5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    8/2019, ಪು. 12

    ಕಾವಲಿನಬುರುಜು,

    5/1/2007, ಪು. 11-12

ಫಿಲಿಪ್ಪಿ 1:13

ಮಾರ್ಜಿನಲ್ ರೆಫರೆನ್ಸ್

  • +ಎಫೆ 3:1
  • +ಅಕಾ 28:30, 31

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/15/2013, ಪು. 14-16

    ಹೊಸ ಲೋಕ ಭಾಷಾಂತರ, ಪು. 2645

ಫಿಲಿಪ್ಪಿ 1:15

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/1/1992, ಪು. 21

ಫಿಲಿಪ್ಪಿ 1:16

ಮಾರ್ಜಿನಲ್ ರೆಫರೆನ್ಸ್

  • +ಫಿಲಿ 1:7

ಫಿಲಿಪ್ಪಿ 1:17

ಪಾದಟಿಪ್ಪಣಿ

  • *

    ಅಥವಾ “ಜಗಳ ಮಾಡೋ ಮನಸ್ಸಿಂದ.”

ಫಿಲಿಪ್ಪಿ 1:19

ಮಾರ್ಜಿನಲ್ ರೆಫರೆನ್ಸ್

  • +2ಕೊರಿಂ 1:11
  • +ಯೋಹಾ 15:26

ಫಿಲಿಪ್ಪಿ 1:20

ಪಾದಟಿಪ್ಪಣಿ

  • *

    ಅಕ್ಷ. “ನನ್ನ ದೇಹ.”

ಮಾರ್ಜಿನಲ್ ರೆಫರೆನ್ಸ್

  • +ರೋಮ 14:8; 1ಪೇತ್ರ 4:16

ಫಿಲಿಪ್ಪಿ 1:21

ಮಾರ್ಜಿನಲ್ ರೆಫರೆನ್ಸ್

  • +ಗಲಾ 2:20
  • +1ಥೆಸ 4:14; 2ತಿಮೊ 4:8; ಪ್ರಕ 14:13

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/1/1995, ಪು. 30

ಫಿಲಿಪ್ಪಿ 1:23

ಮಾರ್ಜಿನಲ್ ರೆಫರೆನ್ಸ್

  • +2ತಿಮೊ 4:6
  • +2ಕೊರಿಂ 5:6, 8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    8/15/2008, ಪು. 28

    3/1/1995, ಪು. 30-31

ಫಿಲಿಪ್ಪಿ 1:27

ಪಾದಟಿಪ್ಪಣಿ

  • *

    ಅಥವಾ “ನಾಗರೀಕರ ತರ ನಡ್ಕೊಳ್ಳಿ.”

  • *

    ಅಥವಾ “ಒಂದೇ ಮನಸ್ಸಿಂದ.”

ಮಾರ್ಜಿನಲ್ ರೆಫರೆನ್ಸ್

  • +ಎಫೆ 4:1, 3; ಕೊಲೊ 1:10
  • +ರೋಮ 15:5, 6; 1ಕೊರಿಂ 1:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    8/15/2012, ಪು. 11-12

    9/15/2010, ಪು. 13-14

ಫಿಲಿಪ್ಪಿ 1:28

ಪಾದಟಿಪ್ಪಣಿ

  • *

    ಅಥವಾ “ಸಾಕ್ಷಿಯಾಗಿದೆ.”

ಮಾರ್ಜಿನಲ್ ರೆಫರೆನ್ಸ್

  • +2ಥೆಸ 1:6
  • +ಲೂಕ 21:19; 2ಥೆಸ 1:4, 5

ಫಿಲಿಪ್ಪಿ 1:29

ಮಾರ್ಜಿನಲ್ ರೆಫರೆನ್ಸ್

  • +ಅಕಾ 5:41

ಫಿಲಿಪ್ಪಿ 1:30

ಮಾರ್ಜಿನಲ್ ರೆಫರೆನ್ಸ್

  • +ಅಕಾ 16:22, 23; 1ಥೆಸ 2:2

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಫಿಲಿ. 1:1ಅಕಾ 16:12
ಫಿಲಿ. 1:11ತಿಮೊ 3:1, 8
ಫಿಲಿ. 1:41ಥೆಸ 1:2
ಫಿಲಿ. 1:61ಕೊರಿಂ 1:8
ಫಿಲಿ. 1:6ಫಿಲಿ 2:13
ಫಿಲಿ. 1:7ಎಫೆ 3:1; ಫಿಲಿ 1:13; ಕೊಲೊ 4:18; 2ತಿಮೊ 1:8; ಫಿಲೆ 13
ಫಿಲಿ. 1:7ಅಕಾ 24:10, 14; 25:10-12
ಫಿಲಿ. 1:9ಯೋಹಾ 17:3
ಫಿಲಿ. 1:9ಇಬ್ರಿ 5:14
ಫಿಲಿ. 1:91ಥೆಸ 3:12
ಫಿಲಿ. 1:10ರೋಮ 12:2
ಫಿಲಿ. 1:10ರೋಮ 14:13, 21
ಫಿಲಿ. 1:11ಯೋಹಾ 15:5
ಫಿಲಿ. 1:13ಎಫೆ 3:1
ಫಿಲಿ. 1:13ಅಕಾ 28:30, 31
ಫಿಲಿ. 1:16ಫಿಲಿ 1:7
ಫಿಲಿ. 1:192ಕೊರಿಂ 1:11
ಫಿಲಿ. 1:19ಯೋಹಾ 15:26
ಫಿಲಿ. 1:20ರೋಮ 14:8; 1ಪೇತ್ರ 4:16
ಫಿಲಿ. 1:21ಗಲಾ 2:20
ಫಿಲಿ. 1:211ಥೆಸ 4:14; 2ತಿಮೊ 4:8; ಪ್ರಕ 14:13
ಫಿಲಿ. 1:232ತಿಮೊ 4:6
ಫಿಲಿ. 1:232ಕೊರಿಂ 5:6, 8
ಫಿಲಿ. 1:27ಎಫೆ 4:1, 3; ಕೊಲೊ 1:10
ಫಿಲಿ. 1:27ರೋಮ 15:5, 6; 1ಕೊರಿಂ 1:10
ಫಿಲಿ. 1:282ಥೆಸ 1:6
ಫಿಲಿ. 1:28ಲೂಕ 21:19; 2ಥೆಸ 1:4, 5
ಫಿಲಿ. 1:29ಅಕಾ 5:41
ಫಿಲಿ. 1:30ಅಕಾ 16:22, 23; 1ಥೆಸ 2:2
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಓದಿ ನೂತನ ಲೋಕ ಭಾಷಾಂತರ (bi7)
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಫಿಲಿಪ್ಪಿ 1:1-30

ಫಿಲಿಪ್ಪಿಯವರಿಗೆ ಬರೆದ ಪತ್ರ

1 ಈ ಪತ್ರ ಬರಿತಾ ಇರೋದು ಕ್ರಿಸ್ತ ಯೇಸುವಿನ ದಾಸರಾದ ಪೌಲ ಮತ್ತು ತಿಮೊತಿ. ಇದನ್ನ ಫಿಲಿಪ್ಪಿ+ ನಗರದಲ್ಲಿರೋ ಮೇಲ್ವಿಚಾರಕರಿಗೂ* ಸಹಾಯಕ ಸೇವಕರಿಗೂ+ ಕ್ರಿಸ್ತ ಯೇಸುವಿನ ಜೊತೆ ಒಂದಾಗಿರೋ ಎಲ್ಲ ಪವಿತ್ರ ಜನ್ರಿಗೂ ಬರಿತಾ ಇದ್ದೀವಿ.

2 ನಮ್ಮ ತಂದೆಯಾದ ದೇವರು ಮತ್ತು ಪ್ರಭು ಯೇಸು ಕ್ರಿಸ್ತ ನಿಮಗೆ ಅಪಾರ ಕೃಪೆ ತೋರಿಸ್ಲಿ, ಶಾಂತಿ ಕೊಡ್ಲಿ.

3 ನನ್ನ ಮನದಾಳದ ಪ್ರಾರ್ಥನೆಯಲ್ಲಿ ನಿಮ್ಮನ್ನ ನೆನಸ್ಕೊಂಡಾಗೆಲ್ಲ ನನ್ನ ದೇವರಿಗೆ ಧನ್ಯವಾದ ಹೇಳ್ತೀನಿ. 4 ನಾನು ನಿಮ್ಮೆಲ್ರಿಗಾಗಿ ಶ್ರದ್ಧೆಯಿಂದ ಪ್ರಾರ್ಥಿಸ್ತೀನಿ, ಖುಷಿಖುಷಿಯಾಗಿ ಪ್ರಾರ್ಥಿಸ್ತೀನಿ.+ 5 ಯಾಕಂದ್ರೆ ನೀವು ಸಿಹಿಸುದ್ದಿ ಕೇಳಿಸ್ಕೊಂಡ ದಿನದಿಂದ ಹಿಡಿದು ಇವತ್ತಿನ ತನಕ ಆ ಸುದ್ದಿ ಸಾರೋದ್ರಲ್ಲಿ ಶ್ರಮ ಹಾಕಿದ್ದೀರ.* 6 ದೇವರು ನಿಮ್ಮಲ್ಲಿ ಶುರುಮಾಡಿದ ಒಳ್ಳೇ ಕೆಲಸವನ್ನ ದೇವರೇ ಮುಗಿಸ್ತಾನೆ ಅನ್ನೋ ನಂಬಿಕೆ ನನಗಿದೆ. ಆ ಕೆಲಸ ಕ್ರಿಸ್ತ ಯೇಸು ಬರೋ+ ತನಕ ನಡಿಯುತ್ತೆ.+ 7 ಈ ತರ ನಿಮ್ಮೆಲ್ರ ಬಗ್ಗೆ ಯೋಚಿಸೋದು ಸರಿ, ಯಾಕಂದ್ರೆ ನೀವು ನನ್ನ ಹೃದಯದಲ್ಲಿ ಇದ್ದೀರ. ನಾನು ಜೈಲಲ್ಲಿ ಇದ್ದಾಗ,+ ಅಧಿಕಾರಿಗಳ ಮುಂದೆ ಸಿಹಿಸುದ್ದಿ ಪರವಾಗಿ ಮಾತಾಡಿದಾಗ,* ಆ ಸುದ್ದಿ ಸಾರೋಕೆ ಕಾನೂನುಬದ್ಧ ಹಕ್ಕು ಪಡಿಯೋಕೆ ಪ್ರಯತ್ನಿಸಿದಾಗ+ ನೀವು ನನಗೆ ಸಹಾಯ ಮಾಡಿದ್ದೀರ. ಹೀಗೆ ನಾವೆಲ್ಲ ದೇವರ ಅಪಾರ ಕೃಪೆಯಿಂದ ಪ್ರಯೋಜನ ಪಡೀತಾ ಇದ್ದೀವಿ.

8 ನನಗೆ ನಿಮ್ಮೆಲ್ರನ್ನ ಯಾವಾಗ ನೋಡ್ತೀನೋ ಅಂತ ಅನಿಸ್ತಿದೆ, ಕ್ರಿಸ್ತ ಯೇಸುಗೆ ನಿಮ್ಮ ಮೇಲೆ ಇರುವಷ್ಟೇ ಕೋಮಲ ಮಮತೆ ನನಗೂ ಇದೆ, ಇದು ದೇವರಿಗೆ ಗೊತ್ತು.* 9 ಸರಿಯಾದ ಜ್ಞಾನ,+ ಪೂರ್ತಿ ತಿಳುವಳಿಕೆಯ+ ಜೊತೆ ನಿಮ್ಮ ಪ್ರೀತಿ ಇನ್ನೂ ಜಾಸ್ತಿಯಾಗಲಿ ಅಂತ ಯಾವಾಗ್ಲೂ ಪ್ರಾರ್ಥಿಸ್ತೀನಿ.+ 10 ತುಂಬ ಮುಖ್ಯವಾದ ವಿಷ್ಯ ಯಾವುದು ಅಂತ ನೀವು ಚೆನ್ನಾಗಿ ತಿಳ್ಕೊಬೇಕು+ ಅಂತಾನೂ ನಾನು ಪ್ರಾರ್ಥಿಸ್ತೀನಿ. ಹಾಗೆ ತಿಳ್ಕೊಂಡ್ರೆ ನೀವು ಕ್ರಿಸ್ತನ ದಿನದ ತನಕ ಪ್ರಾಮಾಣಿಕವಾಗಿ ಇರ್ತಿರ ಮತ್ತು ಯಾರನ್ನೂ ಎಡವಿಸಲ್ಲ.+ 11 ಯೇಸು ಕ್ರಿಸ್ತ ನಮ್ಮ ಮೂಲಕ ಮಾಡಿಸೋ ಎಲ್ಲ ನೀತಿಯ ಕೆಲಸಗಳಿಂದ ನೀವು ಪೂರ್ಣ ಪ್ರಯೋಜನ ಪಡೀಬೇಕಂತಾನೂ ಪ್ರಾರ್ಥಿಸ್ತೀನಿ.+ ಅದ್ರಿಂದ ದೇವರಿಗೆ ಹೊಗಳಿಕೆ ಗೌರವ ಸಿಗುತ್ತೆ.

12 ಸಹೋದರರೇ, ನಿಮಗೆ ಇದು ಗೊತ್ತಿರಬೇಕು ಅಂತ ಇಷ್ಟಪಡ್ತೀನಿ, ಏನಂದ್ರೆ ನಾನು ಈ ಪರಿಸ್ಥಿತಿಯಲ್ಲಿ ಇರೋದು ಸಿಹಿಸುದ್ದಿ ಇನ್ನೂ ಹರಡೋಕೆ ಸಹಾಯ ಆಗಿದೆ. 13 ಕ್ರಿಸ್ತನಿಂದಾಗಿ ನಾನು ಜೈಲಲ್ಲಿದ್ದೀನಿ+ ಅಂತ ಅರಮನೆಯ ಎಲ್ಲ ಕಾವಲುಗಾರರಿಗೆ ಮತ್ತು ಬೇರೆಯವ್ರಿಗೆ ಗೊತ್ತಾಗಿದೆ.+ 14 ನಾನು ಜೈಲಲ್ಲಿ ಇರೋದನ್ನ ನೋಡಿ ಒಡೆಯನ ಸೇವೆ ಮಾಡೋ ಎಷ್ಟೋ ಸಹೋದರರ ನಂಬಿಕೆ ಬಲವಾಗಿದೆ. ಹಾಗಾಗಿ ಅವರು ಭಯಪಡದೆ ದೇವರ ಸಂದೇಶವನ್ನ ಇನ್ನೂ ಧೈರ್ಯವಾಗಿ ಸಾರ್ತಿದ್ದಾರೆ.

15 ಸ್ವಲ್ಪ ಜನ ಹೊಟ್ಟೆಕಿಚ್ಚಿಂದ, ಪೈಪೋಟಿಯಿಂದ ಕ್ರಿಸ್ತನ ಬಗ್ಗೆ ಸಾರ್ತಿದ್ದಾರೆ ಅನ್ನೋದೆನೋ ನಿಜ. ಆದ್ರೆ ಬೇರೆಯವರು ಒಳ್ಳೇ ಮನಸ್ಸಿಂದ ಸಾರ್ತಿದ್ದಾರೆ. 16 ಅವರು ಪ್ರೀತಿಯಿಂದ ಕ್ರಿಸ್ತನ ಬಗ್ಗೆ ಸಾರ್ತಿದ್ದಾರೆ. ಯಾಕಂದ್ರೆ ಸಿಹಿಸುದ್ದಿಯ ಪರವಾಗಿ ಮಾತಾಡೋಕೆ ನನ್ನನ್ನ ನೇಮಿಸಲಾಗಿದೆ ಅಂತ ಅವ್ರಿಗೆ ಗೊತ್ತು.+ 17 ಆದ್ರೆ ಪೈಪೋಟಿಯಿಂದ* ಸಾರುವವ್ರಿಗೆ ಒಳ್ಳೇ ಉದ್ದೇಶ ಇಲ್ಲ. ಜೈಲಲ್ಲಿರೋ ನನಗೆ ಬೇಜಾರು ಮಾಡೋದೆ ಅವ್ರ ಆಸೆ. 18 ಇದ್ರಿಂದ ಏನಾಗಿದೆ? ಸಾರುವವ್ರಿಗೆ ಒಳ್ಳೇ ಉದ್ದೇಶ ಇರಲಿ, ಕೆಟ್ಟ ಉದ್ದೇಶ ಇರಲಿ ಒಟ್ಟಿನಲ್ಲಿ ಅವರು ಕ್ರಿಸ್ತನ ಬಗ್ಗೆ ಸಾರ್ತಿದ್ದಾರೆ. ಅದಕ್ಕಾಗಿ ನಾನು ಖುಷಿಪಡ್ತೀನಿ. ನಿಜ ಏನಂದ್ರೆ, ಯಾವಾಗ್ಲೂ ಖುಷಿಪಡ್ತೀನಿ. 19 ಯಾಕಂದ್ರೆ ನೀವು ಅಂಗಲಾಚಿ ಬೇಡೋದ್ರಿಂದ,+ ಯೇಸು ಕ್ರಿಸ್ತ ಕೊಡೋ ಪವಿತ್ರಶಕ್ತಿಯ ಬೆಂಬಲದಿಂದ+ ನಾನು ರಕ್ಷಣೆ ಪಡಿತೀನಿ ಅಂತ ಗೊತ್ತಿದೆ. 20 ನಾನು ಯಾವ ಕಾರಣಕ್ಕೂ ನಾಚಿಕೆ ಪಡಬೇಕಾಗಿಲ್ಲ. ಈ ವಿಷ್ಯದಲ್ಲಿ ನನಗೆ ನಂಬಿಕೆ ಇದೆ, ಅದೇ ನನ್ನ ಮನದಾಳದ ಆಸೆ. ನಾನು ಭಯಪಡದೆ ಮಾತಾಡೋದ್ರಿಂದ ಕ್ರಿಸ್ತನಿಗೆ ಈ ಮುಂಚೆ ಗೌರವ ಕೊಟ್ಟ ಹಾಗೆ ಈಗಲೂ ಗೌರವ ಕೊಡ್ತೀನಿ. ನಾನು* ಬದುಕಿದ್ರೂ ಸತ್ರೂ ಆತನಿಗೆ ಗೌರವ ಕೊಡ್ತೀನಿ.+

21 ನಾನು ಬದುಕಿದ್ರೆ ಕ್ರಿಸ್ತನಿಗಾಗಿ ಬದುಕ್ತೀನಿ,+ ಸತ್ರೂ ಅದ್ರಿಂದ ನನಗೆ ಲಾಭ ಇದೆ.+ 22 ನನ್ನ ಉಸಿರಿರೋ ತನಕ ಕ್ರಿಸ್ತನಿಗಾಗಿ ಜಾಸ್ತಿ ಸೇವೆ ಮಾಡ್ತೀನಿ. ಆದ್ರೆ ಸಾವು ಬದುಕಲ್ಲಿ ನಾನು ಯಾವುದನ್ನ ಆರಿಸ್ಕೊಳ್ತೀನಿ ಅಂತ ಹೇಳಲ್ಲ. 23 ಇವೆರಡ್ರಲ್ಲಿ ಯಾವುದನ್ನ ಆರಿಸ್ಕೊಳ್ಳೋದು ಅಂತ ಗೊತ್ತಾಗ್ತಿಲ್ಲ. ಈ ದೇಹದಿಂದ ಬಿಡುಗಡೆಯಾಗಿ ಕ್ರಿಸ್ತನ ಜೊತೆ ಇರೋಕೆ ನಾನು ಆಸೆಪಡ್ತೀನಿ.+ ನಿಜವಾಗ್ಲೂ ಅದೇ ಒಳ್ಳೇದು.+ 24 ಆದ್ರೆ ನಾನು ಬದುಕಿರೋದೇ ನಿಮಗೆ ಒಳ್ಳೇದು. 25 ಹಾಗಾಗಿ ನಾನು ಬದುಕಿರ್ತಿನಿ ಅಂತ ನಂಗೊತ್ತು. ನೀವು ನಂಬಿಕೆಯಲ್ಲಿ ಬೆಳಿಯೋ ಹಾಗೆ, ಅದ್ರಲ್ಲಿ ಖುಷಿ ಪಡ್ಕೊಳ್ಳೋ ಹಾಗೆ ನಾನು ನಿಮ್ಮೆಲ್ರ ಜೊತೆ ಇನ್ನೂ ಇರ್ತಿನಿ. 26 ನಾನು ಮತ್ತೆ ನಿಮ್ಮ ಹತ್ರ ಬಂದಾಗ ಕ್ರಿಸ್ತ ಯೇಸುವಿನ ಶಿಷ್ಯರಾದ ನಿಮ್ಮ ಖುಷಿ ನನ್ನಿಂದ ಇನ್ನೂ ಜಾಸ್ತಿ ಆಗುತ್ತೆ.

27 ಒಂದೇ ಒಂದು ವಿಷ್ಯ ನೆನಪಲ್ಲಿಡಿ, ಏನಂದ್ರೆ ನೀವು ಕ್ರಿಸ್ತನ ಬಗ್ಗೆ ಇರೋ ಸಿಹಿಸುದ್ದಿಗೆ ತಕ್ಕ ಹಾಗೆ ಒಳ್ಳೇ ರೀತಿ ನಡ್ಕೊಳ್ಳಿ.*+ ಆಗ ನಿಮ್ಮನ್ನ ನೋಡೋಕೆ ನಾನು ಬರಲಿ, ಬರದೇ ಇರಲಿ ನಿಮ್ಮ ಬಗ್ಗೆ ಒಳ್ಳೇದನ್ನೇ ಕೇಳಿಸ್ಕೊಳ್ತೀನಿ. ನೀವು ಸ್ಥಿರವಾಗಿ ನಿಂತಿದ್ದೀರ, ಒಂದೇ ತರ ಯೋಚಿಸ್ತಿದ್ದೀರ, ಒಗ್ಗಟ್ಟಾಗಿ* ಇದ್ದೀರ,+ ಸಿಹಿಸುದ್ದಿಯಲ್ಲಿ ನಂಬಿಕೆ ಉಳಿಸ್ಕೊಳ್ಳೋಕೆ ಹೆಗಲಿಗೆ ಹೆಗಲು ಕೊಟ್ಟು ಶ್ರಮ ಹಾಕ್ತಿದ್ದೀರ ಅಂತ ಕೇಳಿಸ್ಕೊಳ್ತೀನಿ. 28 ಅಷ್ಟೇ ಅಲ್ಲ, ವಿರೋಧಿಗಳಿಗೆ ನೀವು ಒಂಚೂರೂ ಭಯಪಡಲಿಲ್ಲ ಅಂತಾನೂ ಕೇಳಿಸ್ಕೊಳ್ಳೋಕೆ ಇಷ್ಟಪಡ್ತೀನಿ. ನಿಮ್ಮ ಎದೆಗಾರಿಕೆ ಅವ್ರಿಗೆ ನಾಶನದ ಗುರುತಾಗಿದೆ.*+ ಆದ್ರೆ ನಿಮಗೆ ರಕ್ಷಣೆಯ ಗುರುತಾಗಿದೆ.+ ಇದನ್ನ ದೇವರೇ ಕೊಟ್ಟಿದ್ದು. 29 ಯಾಕಂದ್ರೆ ನಿಮಗೆ ಕ್ರಿಸ್ತನಲ್ಲಿ ನಂಬಿಕೆ ಇಡೋ ಸದವಕಾಶ ಮಾತ್ರವಲ್ಲ ಆತನಿಗಾಗಿ ಕಷ್ಟ ಅನುಭವಿಸೋ ಸದವಕಾಶನೂ ಇದೆ.+ 30 ನಾನು ಎದುರಿಸಿದ ಅದೇ ಕಷ್ಟವನ್ನ ನೀವೂ ಎದುರಿಸ್ತಿದ್ದೀರ.+ ನೀವು ಕೇಳಿಸ್ಕೊಂಡ ಹಾಗೆ ಈಗ್ಲೂ ನಾನು ಕಷ್ಟ ಅನುಭವಿಸ್ತಾ ಇದ್ದೀನಿ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ