ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಧರ್ಮೋಪದೇಶಕಾಂಡ 14
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಧರ್ಮೋಪದೇಶಕಾಂಡ ಮುಖ್ಯಾಂಶಗಳು

      • ಈ ರೀತಿ ದುಃಖಿಸಬಾರದು (1, 2)

      • ಶುದ್ಧ ಅಶುದ್ಧ ಆಹಾರ (3-21)

      • ಯೆಹೋವನಿಗೆ ಹತ್ತನೇ ಒಂದು ಭಾಗ (22-29)

ಧರ್ಮೋಪದೇಶಕಾಂಡ 14:1

ಪಾದಟಿಪ್ಪಣಿ

  • *

    ಅಥವಾ “ಹಣೆಯನ್ನ.”

ಮಾರ್ಜಿನಲ್ ರೆಫರೆನ್ಸ್

  • +ಯಾಜ 21:1, 5
  • +ಯಾಜ 19:28

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 1/2021, ಪು. 2-3

    ಕಾವಲಿನಬುರುಜು,

    9/15/2004, ಪು. 27

ಧರ್ಮೋಪದೇಶಕಾಂಡ 14:2

ಮಾರ್ಜಿನಲ್ ರೆಫರೆನ್ಸ್

  • +ಯಾಜ 19:2; 20:26; ಧರ್ಮೋ 28:9; 1ಪೇತ್ರ 1:15
  • +ವಿಮೋ 19:5, 6; ಧರ್ಮೋ 7:6

ಧರ್ಮೋಪದೇಶಕಾಂಡ 14:3

ಮಾರ್ಜಿನಲ್ ರೆಫರೆನ್ಸ್

  • +ಯಾಜ 11:43; 20:25; ಅಕಾ 10:14

ಧರ್ಮೋಪದೇಶಕಾಂಡ 14:4

ಮಾರ್ಜಿನಲ್ ರೆಫರೆನ್ಸ್

  • +ಯಾಜ 11:2, 3

ಧರ್ಮೋಪದೇಶಕಾಂಡ 14:7

ಮಾರ್ಜಿನಲ್ ರೆಫರೆನ್ಸ್

  • +ಯಾಜ 11:4-8

ಧರ್ಮೋಪದೇಶಕಾಂಡ 14:9

ಮಾರ್ಜಿನಲ್ ರೆಫರೆನ್ಸ್

  • +ಯಾಜ 11:9, 10

ಧರ್ಮೋಪದೇಶಕಾಂಡ 14:12

ಮಾರ್ಜಿನಲ್ ರೆಫರೆನ್ಸ್

  • +ಯಾಜ 11:13-20

ಧರ್ಮೋಪದೇಶಕಾಂಡ 14:17

ಪಾದಟಿಪ್ಪಣಿ

  • *

    ಅಂದ್ರೆ, ಪೆಲಿಕನ್‌.

ಧರ್ಮೋಪದೇಶಕಾಂಡ 14:19

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 1/2021, ಪು. 2

ಧರ್ಮೋಪದೇಶಕಾಂಡ 14:21

ಮಾರ್ಜಿನಲ್ ರೆಫರೆನ್ಸ್

  • +ವಿಮೋ 22:31; ಯಾಜ 17:15
  • +ವಿಮೋ 23:19; 34:26

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/1/2005, ಪು. 27

    9/15/2004, ಪು. 26

ಧರ್ಮೋಪದೇಶಕಾಂಡ 14:22

ಪಾದಟಿಪ್ಪಣಿ

  • *

    ಅಥವಾ “ದಶಮಾಂಶ.”

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 12:11; 26:12

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 7/2021, ಪು. 1-2

ಧರ್ಮೋಪದೇಶಕಾಂಡ 14:23

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 12:5, 17; 15:19, 20
  • +ಕೀರ್ತ 111:10

ಧರ್ಮೋಪದೇಶಕಾಂಡ 14:24

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 12:5, 6

ಧರ್ಮೋಪದೇಶಕಾಂಡ 14:26

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 12:7; 26:11; ಕೀರ್ತ 100:2

ಧರ್ಮೋಪದೇಶಕಾಂಡ 14:27

ಮಾರ್ಜಿನಲ್ ರೆಫರೆನ್ಸ್

  • +ಅರ 18:21; 2ಪೂರ್ವ 31:4; 1ಕೊರಿಂ 9:13
  • +ಅರ 18:20; ಧರ್ಮೋ 10:9

ಧರ್ಮೋಪದೇಶಕಾಂಡ 14:28

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 26:12

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 7/2021, ಪು. 1-2

ಧರ್ಮೋಪದೇಶಕಾಂಡ 14:29

ಪಾದಟಿಪ್ಪಣಿ

  • *

    ಅಥವಾ “ತಂದೆ ಇಲ್ಲದ ಮಕ್ಕಳು.”

ಮಾರ್ಜಿನಲ್ ರೆಫರೆನ್ಸ್

  • +ವಿಮೋ 22:21; ಧರ್ಮೋ 10:18; ಯಾಕೋ 1:27
  • +ಧರ್ಮೋ 15:10; ಕೀರ್ತ 41:1; ಜ್ಞಾನೋ 11:24; 19:17; ಮಲಾ 3:10; ಲೂಕ 6:35

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 7/2021, ಪು. 1-2

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಧರ್ಮೋ. 14:1ಯಾಜ 21:1, 5
ಧರ್ಮೋ. 14:1ಯಾಜ 19:28
ಧರ್ಮೋ. 14:2ಯಾಜ 19:2; 20:26; ಧರ್ಮೋ 28:9; 1ಪೇತ್ರ 1:15
ಧರ್ಮೋ. 14:2ವಿಮೋ 19:5, 6; ಧರ್ಮೋ 7:6
ಧರ್ಮೋ. 14:3ಯಾಜ 11:43; 20:25; ಅಕಾ 10:14
ಧರ್ಮೋ. 14:4ಯಾಜ 11:2, 3
ಧರ್ಮೋ. 14:7ಯಾಜ 11:4-8
ಧರ್ಮೋ. 14:9ಯಾಜ 11:9, 10
ಧರ್ಮೋ. 14:12ಯಾಜ 11:13-20
ಧರ್ಮೋ. 14:21ವಿಮೋ 22:31; ಯಾಜ 17:15
ಧರ್ಮೋ. 14:21ವಿಮೋ 23:19; 34:26
ಧರ್ಮೋ. 14:22ಧರ್ಮೋ 12:11; 26:12
ಧರ್ಮೋ. 14:23ಧರ್ಮೋ 12:5, 17; 15:19, 20
ಧರ್ಮೋ. 14:23ಕೀರ್ತ 111:10
ಧರ್ಮೋ. 14:24ಧರ್ಮೋ 12:5, 6
ಧರ್ಮೋ. 14:26ಧರ್ಮೋ 12:7; 26:11; ಕೀರ್ತ 100:2
ಧರ್ಮೋ. 14:27ಅರ 18:21; 2ಪೂರ್ವ 31:4; 1ಕೊರಿಂ 9:13
ಧರ್ಮೋ. 14:27ಅರ 18:20; ಧರ್ಮೋ 10:9
ಧರ್ಮೋ. 14:28ಧರ್ಮೋ 26:12
ಧರ್ಮೋ. 14:29ವಿಮೋ 22:21; ಧರ್ಮೋ 10:18; ಯಾಕೋ 1:27
ಧರ್ಮೋ. 14:29ಧರ್ಮೋ 15:10; ಕೀರ್ತ 41:1; ಜ್ಞಾನೋ 11:24; 19:17; ಮಲಾ 3:10; ಲೂಕ 6:35
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಧರ್ಮೋಪದೇಶಕಾಂಡ 14:1-29

ಧರ್ಮೋಪದೇಶಕಾಂಡ

14 ನೀವು ನಿಮ್ಮ ದೇವರಾದ ಯೆಹೋವನ ಮಕ್ಕಳು. ಹಾಗಾಗಿ ಯಾರಾದ್ರೂ ತೀರಿಹೋದಾಗ ನಿಮ್ಮ ಹುಬ್ಬುಗಳನ್ನ* ಬೋಳಿಸ್ಕೊಬೇಡಿ,+ ದೇಹಕ್ಕೆ ಗಾಯ ಮಾಡ್ಕೊಬೇಡಿ.+ 2 ಯಾಕಂದ್ರೆ ನಿಮ್ಮ ದೇವರಾದ ಯೆಹೋವನಿಗೆ ನೀವು ಪವಿತ್ರ ಜನ್ರಾಗಿದ್ದೀರ.+ ಯೆಹೋವ ಭೂಮಿಯಲ್ಲಿರೋ ಎಲ್ಲ ಜನ್ರಿಂದ ನಿಮ್ಮನ್ನ ಆರಿಸ್ಕೊಂಡು ತನ್ನ ಜನ್ರಾಗಿ, ತನ್ನ ವಿಶೇಷ ಸೊತ್ತಾಗಿ ಮಾಡ್ಕೊಂಡಿದ್ದಾನೆ.+

3 ಅಸಹ್ಯವಾದ ಯಾವುದನ್ನೂ ನೀವು ತಿನ್ನಬಾರದು.+ 4 ಯಾವ ಪ್ರಾಣಿಗಳನ್ನ ನೀವು ತಿನ್ನಬಹುದಂದ್ರೆ+ ಹಸು, ಕುರಿ, ಆಡು, 5 ಜಿಂಕೆ, ಎರಳೆ, ಕಡವೆ, ಕಾಡುಮೇಕೆ, ಸಾರಂಗ, ಕಾಡುಕುರಿ, ಬೆಟ್ಟದ ಕುರಿ. 6 ಕಾಲಿನ ಗೊರಸು ಪೂರ್ತಿ ಸೀಳಿ ಎರಡು ಭಾಗವಾಗಿರೋ ಮೆಲುಕು ಹಾಕೋ ಯಾವುದೇ ಪ್ರಾಣಿನ ನೀವು ತಿನ್ನಬಹುದು. 7 ಆದ್ರೆ ಮೆಲುಕು ಹಾಕಿದ್ರೂ ಕಾಲಿನ ಗೊರಸು ಸೀಳಿರದ ಪ್ರಾಣಿನ ಅಥವಾ ಕಾಲಿನ ಗೊರಸು ಸೀಳಿದ್ರೂ ಮೆಲುಕು ಹಾಕದಿರೋ ಪ್ರಾಣಿನ ನೀವು ತಿನ್ನಬಾರದು. ಒಂಟೆ, ಮೊಲ, ಬಿಲಕರಡಿ ಮೆಲುಕು ಹಾಕುತ್ತೆ, ಆದ್ರೆ ಅವುಗಳ ಕಾಲಿನ ಗೊರಸು ಸೀಳಿರಲ್ಲ. ಹಾಗಾಗಿ ಅವು ನಿಮಗೆ ಅಶುದ್ಧ.+ 8 ಹಂದಿಯ ಗೊರಸು ಸೀಳಿರುತ್ತೆ, ಆದ್ರೆ ಮೆಲುಕು ಹಾಕಲ್ಲ. ಹಾಗಾಗಿ ಅದು ನಿಮಗೆ ಅಶುದ್ಧ. ನೀವು ಇವುಗಳಲ್ಲಿ ಯಾವುದ್ರ ಮಾಂಸವನ್ನೂ ತಿನ್ನಬಾರದು. ಅವು ಸತ್ತಾಗ ಮುಟ್ಲೂಬಾರದು.

9 ಜಲಚರಗಳಲ್ಲಿ ಯಾವ ಜೀವಿಗಳಿಗೆ ಈಜು ರೆಕ್ಕೆಗಳು, ಹುರುಪೆಗಳು ಇರುತ್ತೋ ಆ ಎಲ್ಲ ಜೀವಿಗಳನ್ನ ತಿನ್ನಬಹುದು.+ 10 ಆದ್ರೆ ಯಾವುದಕ್ಕೆ ಈಜು ರೆಕ್ಕೆಗಳು, ಹುರುಪೆಗಳು ಇಲ್ವೋ ಅಂಥ ಜೀವಿಗಳನ್ನ ತಿನ್ನಬಾರದು. ಅವು ನಿಮಗೆ ಅಶುದ್ಧ.

11 ಶುದ್ಧವಾದ ಎಲ್ಲ ಪಕ್ಷಿಗಳನ್ನ ತಿನ್ನಬಹುದು. 12 ಆದ್ರೆ ತಿನ್ನಬಾರದ ಪಕ್ಷಿಗಳು ಯಾವುದಂದ್ರೆ ಹದ್ದು, ಕಡಲ ಗಿಡುಗ, ಕಪ್ಪು ರಣಹದ್ದು,+ 13 ಕೆಂಪು ಗಿಡುಗ, ಕಪ್ಪು ಗಿಡುಗ, ಎಲ್ಲ ಜಾತಿಯ ಹದ್ದುಗಳು, 14 ಎಲ್ಲ ಜಾತಿಯ ಕಾಗೆಗಳು, 15 ಉಷ್ಟ್ರಪಕ್ಷಿ, ಗೂಬೆ, ಕಡಲ ಹಕ್ಕಿ, ಎಲ್ಲ ಜಾತಿಯ ಗಿಡುಗಗಳು, 16 ಚಿಕ್ಕ ಗೂಬೆ, ಉದ್ದ ಕಿವಿಯ ಗೂಬೆ, ಹಂಸ, 17 ನೇರೆಹಕ್ಕಿ,* ರಣಹದ್ದು, ನೀರುಕಾಗೆ, 18 ಕೊಕ್ಕರೆ, ಎಲ್ಲ ಜಾತಿಯ ಕ್ರೌಂಚ, ಚಂದ್ರಮುಕುಟ ಹಕ್ಕಿ ಮತ್ತು ಬಾವಲಿ. 19 ರೆಕ್ಕೆ ಇರೋ ಗುಂಪು ಗುಂಪಾಗಿರೋ ಕೀಟಗಳೂ ನಿಮಗೆ ಅಶುದ್ಧ, ಅದನ್ನ ತಿನ್ನಬಾರದು. 20 ಹಾರೋ ಜೀವಿಗಳಲ್ಲಿ ಶುದ್ಧವಾದ ಎಲ್ಲವನ್ನ ತಿನ್ನಬಹುದು.

21 ಸತ್ತುಬಿದ್ದಿರೋ ಪ್ರಾಣಿನ ನಿಮ್ಮ ಪಟ್ಟಣಗಳಲ್ಲಿ ವಾಸಿಸೋ ವಿದೇಶಿಯರಿಗೆ ಕೊಡಬಹುದು, ಅವರು ಅದನ್ನ ತಿನ್ನಬಹುದು. ನೀವು ವಿದೇಶಿಯರಿಗೆ ಮಾರಲೂಬಹುದು. ಆದ್ರೆ ಸತ್ತುಬಿದ್ದಿರೋ ಪ್ರಾಣಿನ ನೀವು ತಿನ್ನಬಾರದು.+ ಯಾಕಂದ್ರೆ ನಿಮ್ಮ ದೇವರಾದ ಯೆಹೋವನಿಗೆ ನೀವು ಪವಿತ್ರ ಜನ್ರಾಗಿದ್ದೀರ.

ನೀವು ಆಡುಮರಿಯ ಮಾಂಸನ ಅದ್ರ ತಾಯಿ ಹಾಲಲ್ಲಿ ಬೇಯಿಸಬಾರದು.+

22 ನೀವು ಪ್ರತಿವರ್ಷ ಹೊಲದಲ್ಲಿ ಬೀಜ ಬಿತ್ತಿ ಬೆಳೆದ ಎಲ್ಲ ಬೆಳೆಯಲ್ಲಿ ಹತ್ತನೇ ಒಂದು ಭಾಗ* ಕಾಣಿಕೆಯಾಗಿ ಕೊಡ್ಲೇಬೇಕು.+ 23 ನೀವು ಬೆಳೆದ ಧಾನ್ಯ, ಹೊಸ ದ್ರಾಕ್ಷಾಮದ್ಯ, ಎಣ್ಣೆ ಇವುಗಳಲ್ಲಿ ಹತ್ತನೇ ಒಂದು ಭಾಗನ ಮತ್ತು ಹಸು, ಆಡು-ಕುರಿಗಳ ಮೊದಲ ಮರಿಗಳನ್ನ ನಿಮ್ಮ ದೇವರಾದ ಯೆಹೋವ ತನ್ನ ಹೆಸ್ರಿನ ಗೌರವಕ್ಕಾಗಿ ಆರಿಸ್ಕೊಳ್ಳೋ ಜಾಗಕ್ಕೆ ತಂದು ಅಲ್ಲಿ ಆತನ ಮುಂದೆ ತಿನ್ನಬೇಕು.+ ಇದ್ರಿಂದ ನೀವು ನಿಮ್ಮ ದೇವರಾದ ಯೆಹೋವನಿಗೆ ಯಾವಾಗ್ಲೂ ಭಯಪಡೋಕೆ ಕಲಿತೀರ.+

24 ಆದ್ರೆ ನಿಮ್ಮ ದೇವರಾದ ಯೆಹೋವ ತನ್ನ ಹೆಸ್ರಿನ ಗೌರವಕ್ಕಾಗಿ ಆರಿಸ್ಕೊಳ್ಳೋ ಸ್ಥಳ+ ತುಂಬ ದೂರದಲ್ಲಿದ್ರೆ, ನಿಮ್ಮ ದೇವರಾದ ಯೆಹೋವ ನಿಮ್ಮನ್ನ ಆಶೀರ್ವಾದ ಮಾಡಿರೋದ್ರಿಂದ ನಿಮಗೆ ಸಿಕ್ಕಿರೋ ಸಮೃದ್ಧಿಯಲ್ಲಿ ಹತ್ತನೇ ಒಂದು ಭಾಗವನ್ನ, ಮೊದಲ ಮರಿಗಳನ್ನ ಅಷ್ಟು ದೂರ ತಗೊಂಡು ಹೋಗೋಕೆ ಆಗದಿದ್ರೆ 25 ಅವನ್ನ ಮಾರಿ ಅದ್ರಿಂದ ಸಿಕ್ಕಿದ ಹಣ ತಗೊಂಡು ನಿಮ್ಮ ದೇವರಾದ ಯೆಹೋವ ಆರಿಸ್ಕೊಳ್ಳೋ ಸ್ಥಳಕ್ಕೆ ಹೋಗಬೇಕು. 26 ಅಲ್ಲಿ ಆ ಹಣದಿಂದ ಹಸು, ಕುರಿ, ಆಡು, ದ್ರಾಕ್ಷಾಮದ್ಯ, ಬೇರೆ ಮದ್ಯ ಅಥವಾ ನಿಮಗೆ ಇಷ್ಟವಾದ ಯಾವುದನ್ನ ಬೇಕಾದ್ರೂ ಕೊಂಡ್ಕೊಳ್ಳಬಹುದು. ಅದನ್ನ ನೀವು, ನಿಮ್ಮ ಕುಟುಂಬದವರು ನಿಮ್ಮ ದೇವರಾದ ಯೆಹೋವನ ಮುಂದೆ ತಿಂದು ಸಂತೋಷ ಸಂಭ್ರಮದಿಂದ ಇರಬೇಕು.+ 27 ಆಗ ನಿಮ್ಮ ಪಟ್ಟಣದಲ್ಲಿರೋ ಲೇವಿಯರನ್ನ ಅಸಡ್ಡೆ ಮಾಡಬಾರದು.+ ಯಾಕಂದ್ರೆ ನಿಮಗೆ ಸಿಕ್ಕಿದ ಹಾಗೆ ಅವ್ರಿಗೆ ಯಾವ ಪಾಲು ಅಥವಾ ಆಸ್ತಿ ಸಿಗಲಿಲ್ಲ.+

28 ಪ್ರತಿ ಮೂರು ವರ್ಷಗಳ ಕೊನೇಲಿ ನೀವು ಆ ವರ್ಷದ ಬೆಳೆಯ ಹತ್ತನೇ ಒಂದು ಭಾಗವನ್ನ ಪೂರ್ತಿಯಾಗಿ ತಂದು ನಿಮ್ಮ ಪಟ್ಟಣಗಳ ಒಳಗೆ ಶೇಖರಿಸಿಡಬೇಕು.+ 29 ನಿಮ್ಮ ಜೊತೆ ಯಾವ ಪಾಲು ಅಥವಾ ಆಸ್ತಿ ಸಿಗದಿರೋ ಮತ್ತು ನಿಮ್ಮ ಪಟ್ಟಣಗಳಲ್ಲಿ ವಾಸಿಸೋ ಲೇವಿಯರು, ನಿಮ್ಮ ಪಟ್ಟಣಗಳಲ್ಲಿರೋ ವಿದೇಶಿಯರು, ಅನಾಥ ಮಕ್ಕಳು,* ವಿಧವೆಯರು ಅದನ್ನ ತಗೊಂಡು ತೃಪ್ತಿ ಆಗೋಷ್ಟು ತಿಂತಾರೆ.+ ಆಗ ನಿಮ್ಮ ದೇವರಾದ ಯೆಹೋವ ನೀವು ಮಾಡೋ ಎಲ್ಲ ಕೆಲಸಗಳನ್ನ ಆಶೀರ್ವಾದ ಮಾಡ್ತಾನೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ