ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 1 ಸಮುವೇಲ 13
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

1 ಸಮುವೇಲ ಮುಖ್ಯಾಂಶಗಳು

      • ಸೌಲ ಸೈನಿಕರನ್ನ ಆರಿಸ್ಕೊಂಡ (1-4)

      • ಸೌಲನ ಅಹಂಕಾರದ ವರ್ತನೆ (5-9)

      • ಸಮುವೇಲ ಸೌಲನಿಗೆ ಬುದ್ಧಿ ಹೇಳಿದ (10-14)

      • ಇಸ್ರಾಯೇಲ್ಯರ ಹತ್ರ ಆಯುಧಗಳಿರಲಿಲ್ಲ (15-23)

1 ಸಮುವೇಲ 13:1

ಪಾದಟಿಪ್ಪಣಿ

  • *

    ಪವಿತ್ರಗ್ರಂಥದ ಹೀಬ್ರು ಭಾಗದ ಪ್ರಾಚೀನ ಪ್ರತಿಗಳಲ್ಲಿ ಸಂಖ್ಯೆ ಕೊಟ್ಟಿಲ್ಲ.

ಮಾರ್ಜಿನಲ್ ರೆಫರೆನ್ಸ್

  • +ಅಕಾ 13:21

1 ಸಮುವೇಲ 13:2

ಮಾರ್ಜಿನಲ್ ರೆಫರೆನ್ಸ್

  • +1ಸಮು 18:1; 2ಸಮು 1:4; 21:7
  • +ಯೆಹೋ 18:28; 1ಸಮು 10:26

1 ಸಮುವೇಲ 13:3

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 21:8, 17
  • +ಯೆಹೋ 13:2, 3; 1ಸಮು 9:16
  • +ನ್ಯಾಯ 3:26, 27; 6:34; 2ಸಮು 2:28

1 ಸಮುವೇಲ 13:4

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 5:9; 1ಸಮು 11:14

1 ಸಮುವೇಲ 13:5

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 20:1
  • +ಯೆಹೋ 7:2; 18:11, 12; 1ಸಮು 14:23

1 ಸಮುವೇಲ 13:6

ಮಾರ್ಜಿನಲ್ ರೆಫರೆನ್ಸ್

  • +1ಸಮು 14:11

1 ಸಮುವೇಲ 13:7

ಮಾರ್ಜಿನಲ್ ರೆಫರೆನ್ಸ್

  • +ಅರ 32:1, 33; ಯೆಹೋ 13:24, 25

1 ಸಮುವೇಲ 13:9

ಮಾರ್ಜಿನಲ್ ರೆಫರೆನ್ಸ್

  • +1ಸಮು 15:22, 23

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    1/2017, ಪು. 17

1 ಸಮುವೇಲ 13:11

ಮಾರ್ಜಿನಲ್ ರೆಫರೆನ್ಸ್

  • +1ಸಮು 13:6, 8
  • +1ಸಮು 13:5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    8/1/2000, ಪು. 13

1 ಸಮುವೇಲ 13:12

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    8/1/2000, ಪು. 13

1 ಸಮುವೇಲ 13:13

ಮಾರ್ಜಿನಲ್ ರೆಫರೆನ್ಸ್

  • +1ಸಮು 15:11

1 ಸಮುವೇಲ 13:14

ಮಾರ್ಜಿನಲ್ ರೆಫರೆನ್ಸ್

  • +1ಸಮು 15:28
  • +1ಸಮು 16:1; 2ಸಮು 7:15; ಕೀರ್ತ 78:70; ಅಕಾ 13:22
  • +ಆದಿ 49:10; 2ಸಮು 5:2; 7:8; 1ಪೂರ್ವ 28:4
  • +ಜ್ಞಾನೋ 11:2

1 ಸಮುವೇಲ 13:15

ಮಾರ್ಜಿನಲ್ ರೆಫರೆನ್ಸ್

  • +1ಸಮು 13:7; 14:2

1 ಸಮುವೇಲ 13:16

ಮಾರ್ಜಿನಲ್ ರೆಫರೆನ್ಸ್

  • +1ಸಮು 13:3
  • +1ಸಮು 13:2

1 ಸಮುವೇಲ 13:18

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 10:11

1 ಸಮುವೇಲ 13:21

ಪಾದಟಿಪ್ಪಣಿ

  • *

    ಹೀಬ್ರು ಭಾಷೆಯಲ್ಲಿ ಪಿಮ್‌, ಇದು ಪ್ರಾಚೀನ ಸಮಯದಲ್ಲಿ ಬಳಸ್ತಿದ್ದ ತೂಕದ ಪ್ರಮಾಣ.

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಶುದ್ಧ ಆರಾಧನೆ, ಪು. 75

    ಹೊಸ ಲೋಕ ಭಾಷಾಂತರ, ಪು. 2661

    ಕಾವಲಿನಬುರುಜು,

    3/15/2005, ಪು. 29

1 ಸಮುವೇಲ 13:22

ಮಾರ್ಜಿನಲ್ ರೆಫರೆನ್ಸ್

  • +1ಸಮು 17:47, 50

1 ಸಮುವೇಲ 13:23

ಪಾದಟಿಪ್ಪಣಿ

  • *

    ಅಥವಾ “ಕಾವಲು ಪಡೆ.”

ಮಾರ್ಜಿನಲ್ ರೆಫರೆನ್ಸ್

  • +1ಸಮು 13:2; 14:4, 5

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

1 ಸಮು. 13:1ಅಕಾ 13:21
1 ಸಮು. 13:21ಸಮು 18:1; 2ಸಮು 1:4; 21:7
1 ಸಮು. 13:2ಯೆಹೋ 18:28; 1ಸಮು 10:26
1 ಸಮು. 13:3ಯೆಹೋ 21:8, 17
1 ಸಮು. 13:3ಯೆಹೋ 13:2, 3; 1ಸಮು 9:16
1 ಸಮು. 13:3ನ್ಯಾಯ 3:26, 27; 6:34; 2ಸಮು 2:28
1 ಸಮು. 13:4ಯೆಹೋ 5:9; 1ಸಮು 11:14
1 ಸಮು. 13:5ಧರ್ಮೋ 20:1
1 ಸಮು. 13:5ಯೆಹೋ 7:2; 18:11, 12; 1ಸಮು 14:23
1 ಸಮು. 13:61ಸಮು 14:11
1 ಸಮು. 13:7ಅರ 32:1, 33; ಯೆಹೋ 13:24, 25
1 ಸಮು. 13:91ಸಮು 15:22, 23
1 ಸಮು. 13:111ಸಮು 13:6, 8
1 ಸಮು. 13:111ಸಮು 13:5
1 ಸಮು. 13:131ಸಮು 15:11
1 ಸಮು. 13:141ಸಮು 15:28
1 ಸಮು. 13:141ಸಮು 16:1; 2ಸಮು 7:15; ಕೀರ್ತ 78:70; ಅಕಾ 13:22
1 ಸಮು. 13:14ಆದಿ 49:10; 2ಸಮು 5:2; 7:8; 1ಪೂರ್ವ 28:4
1 ಸಮು. 13:14ಜ್ಞಾನೋ 11:2
1 ಸಮು. 13:151ಸಮು 13:7; 14:2
1 ಸಮು. 13:161ಸಮು 13:3
1 ಸಮು. 13:161ಸಮು 13:2
1 ಸಮು. 13:18ಯೆಹೋ 10:11
1 ಸಮು. 13:221ಸಮು 17:47, 50
1 ಸಮು. 13:231ಸಮು 13:2; 14:4, 5
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
1 ಸಮುವೇಲ 13:1-23

ಒಂದನೇ ಸಮುವೇಲ

13 ಸೌಲ ರಾಜ ಆದಾಗ+ ಅವನಿಗೆ . . .* ವರ್ಷ. ಅವನು ಇಸ್ರಾಯೇಲ್ಯರನ್ನ ಆಳೋಕೆ ಶುರು ಮಾಡಿ ಎರಡು ವರ್ಷ ಆಗಿತ್ತು. 2 ಸೌಲ ಇಸ್ರಾಯೇಲ್ಯರಲ್ಲಿ 3,000 ಗಂಡಸರನ್ನ ಆರಿಸ್ಕೊಂಡು ಉಳಿದವ್ರನ್ನ ಅವ್ರವ್ರ ಡೇರೆಗಳಿಗೆ ಕಳಿಸಿಬಿಟ್ಟ. ಆ 3,000 ಜನ್ರಲ್ಲಿ 2,000 ಜನ ಸೌಲನ ಜೊತೆ ಮಿಕ್ಮಾಷಿನಲ್ಲಿ ಮತ್ತು ಬೆತೆಲಿನ ಬೆಟ್ಟದ ಪ್ರದೇಶದಲ್ಲಿ ಇದ್ರು. 1,000 ಜನ ಯೋನಾತಾನನ+ ಜೊತೆ ಬೆನ್ಯಾಮೀನಿನ ಗಿಬೆಯಾದಲ್ಲಿದ್ರು.+ 3 ಆಮೇಲೆ ಯೋನಾತಾನ ಗೆಬದಲ್ಲಿದ್ದ+ ಫಿಲಿಷ್ಟಿಯ+ ಸೈನಿಕರ ಗುಂಪನ್ನ ಸಾಯಿಸಿಬಿಟ್ಟ. ಈ ವಿಷ್ಯ ಫಿಲಿಷ್ಟಿಯರ ಕಿವಿಗೆ ಬಿತ್ತು. ಅದೇ ಸಮಯದಲ್ಲಿ ಸೌಲ ದೇಶದಲ್ಲೆಲ್ಲ ಕೊಂಬು ಊದಿಸಿ+ “ಇಬ್ರಿಯರೇ ಕೇಳಿ! 4 ಸೌಲ ಫಿಲಿಷ್ಟಿಯರ ಸೈನಿಕರ ಗುಂಪನ್ನ ಸಾಯಿಸಿದ್ದಾನೆ. ಹಾಗಾಗಿ ಫಿಲಿಷ್ಟಿಯರಿಗೆ ಇಸ್ರಾಯೇಲ್ಯರ ಮೇಲೆ ತುಂಬ ಕೋಪ ಬಂದಿದೆ” ಅಂತ ಹೇಳಿಸಿದ. ಈ ಸುದ್ದಿ ಕೇಳಿಸ್ಕೊಂಡ ಎಲ್ಲ ಇಸ್ರಾಯೇಲ್ಯರು ಗಿಲ್ಗಾಲಿನಲ್ಲಿ ಸೌಲನ ಹತ್ರ+ ಕೂಡಿಬಂದ್ರು.

5 ಫಿಲಿಷ್ಟಿಯರು ಇಸ್ರಾಯೇಲ್ಯರ ವಿರುದ್ಧ ಹೋರಾಡೋಕೆ 30,000 ಯುದ್ಧರಥ ಜೊತೆ, 6,000 ಕುದುರೆಸವಾರರು, ಸಮುದ್ರ ತೀರದ ಮರಳಿನ ಹಾಗೆ ಲೆಕ್ಕ ಮಾಡೋಕೆ ಆಗದಷ್ಟು ಸೈನಿಕರ ಗುಂಪಿನ ಜೊತೆ+ ಬೇತಾವೆನಿನ+ ಪೂರ್ವಕ್ಕಿದ್ದ ಮಿಕ್ಮಾಷಿಗೆ ಹೋಗಿ ಅಲ್ಲಿ ಪಾಳೆಯ ಹಾಕಿದ್ರು. 6 ಇಸ್ರಾಯೇಲ್‌ ಗಂಡಸ್ರಿಗೆ ತಾವು ತೊಂದರೆಗೆ ಸಿಕ್ಕಿಕೊಂಡಿದ್ದೀವಿ ಅಂತ ಗೊತ್ತಾಯ್ತು. ಅದಕ್ಕೆ ಅವರು ಗವಿಗಳಲ್ಲಿ,+ ಗುಹೆಗಳಲ್ಲಿ, ಕಡಿದಾದ ಬಂಡೆಗಳ ಮಧ್ಯದಲ್ಲಿ, ನೆಲಮಾಳಿಗೆಗಳಲ್ಲಿ, ಹಳ್ಳಗಳಲ್ಲಿ ಅಡಗಿಕೊಂಡ್ರು. 7 ಕೆಲವು ಇಬ್ರಿಯರು ಯೋರ್ದನ್‌ ನದಿ ದಾಟಿ ಗಾದ್‌ ಮತ್ತು ಗಿಲ್ಯಾದ್‌+ ಪ್ರದೇಶಗಳಿಗೂ ಹೋದ್ರು. ಆದ್ರೆ ಸೌಲ ಗಿಲ್ಗಾಲಿನಲ್ಲೇ ಇದ್ದ. ಅವನ ಜೊತೆ ಇದ್ದ ಜನ್ರೆಲ್ಲ ಭಯದಿಂದ ನಡುಗ್ತಿದ್ರು. 8 ಸಮುವೇಲ ಹೇಳಿದ್ದ ಸಮಯದ ತನಕ ಅಂದ್ರೆ ಏಳು ದಿನ ತನಕ ಸೌಲ ಅವನಿಗೋಸ್ಕರ ಕಾಯ್ತಿದ್ದ. ಆದ್ರೆ ಸಮುವೇಲ ಗಿಲ್ಗಾಲಿಗೆ ಬರಲಿಲ್ಲ. ಜನ ಸೌಲನನ್ನ ಬಿಟ್ಟು ಹೋಗೋಕೆ ಶುರು ಮಾಡಿದ್ರು. 9 ಕೊನೆಗೆ ಸೌಲ ಜನ್ರಿಗೆ “ಸರ್ವಾಂಗಹೋಮ ಬಲಿ, ಸಮಾಧಾನ ಬಲಿಗಳನ್ನ ನನ್ನ ಹತ್ರ ತಗೊಂಡು ಬನ್ನಿ” ಅಂತ ಹೇಳಿ ಬಲಿಯನ್ನ ಅವನೇ ಸಮರ್ಪಿಸಿದ.+

10 ಸೌಲ ಸರ್ವಾಂಗಹೋಮ ಬಲಿ ಅರ್ಪಿಸಿದ ತಕ್ಷಣ ಸಮುವೇಲ ಬಂದ. ಆಗ ಸೌಲ ಹೋಗಿ ಅವನನ್ನ ಭೇಟಿಮಾಡಿ ವಂದಿಸಿದ. 11 ಸಮುವೇಲ ಸೌಲನಿಗೆ “ಯಾಕೆ ಹೀಗೆ ಮಾಡ್ದೆ?” ಅಂತ ಕೇಳಿದಾಗ “ಆ ಕಡೆ ಜನ್ರೆಲ್ಲ ನನ್ನನ್ನ ಬಿಟ್ಟುಹೋಗೋಕೆ ಶುರು ಮಾಡಿದ್ರು.+ ಈ ಕಡೆ ನೀನೂ ಹೇಳಿದ ಸಮಯಕ್ಕೆ ಬರಲಿಲ್ಲ. ಅಷ್ಟೇ ಅಲ್ಲ ಫಿಲಿಷ್ಟಿಯರು ಮಿಕ್ಮಾಷಿನಲ್ಲಿ+ ಒಟ್ಟುಸೇರ್ತಿದ್ರು. 12 ಆಗ ನಾನು ‘ಫಿಲಿಷ್ಟಿಯರು ಇನ್ನೇನು ನನ್ನ ವಿರುದ್ಧ ಹೋರಾಡೋಕೆ ಗಿಲ್ಗಾಲಿಗೆ ಬರ್ತಾರೆ. ಆದ್ರೆ ನಾನು ಯೆಹೋವನ ಮೆಚ್ಚುಗೆ ಪಡಿಯೋಕೆ ಏನೂ ಮಾಡಿಲ್ವಲ್ಲಾ’ ಅಂದ್ಕೊಂಡೆ. ಅದಕ್ಕೇ ನಾನೇ ಸರ್ವಾಂಗಹೋಮ ಬಲಿ ಅರ್ಪಿಸಬೇಕಾದ ಪರಿಸ್ಥಿತಿ ಬಂತು” ಅಂದ.

13 ಅದಕ್ಕೆ ಸಮುವೇಲ “ನೀನು ಮೂರ್ಖತನದಿಂದ ನಡ್ಕೊಂಡಿದ್ದೀಯ. ನಿನ್ನ ದೇವರಾದ ಯೆಹೋವ ನಿನಗೆ ಕೊಟ್ಟ ಆಜ್ಞೆನ ಮೀರಿದ್ದೀಯ.+ ಆತನ ಮಾತು ಕೇಳಿದ್ರೆ ಯೆಹೋವ ನಿನ್ನ ರಾಜ್ಯಾನ ಇಸ್ರಾಯೇಲಿನ ಮೇಲೆ ಶಾಶ್ವತವಾಗಿ ಇರೋ ತರ ಮಾಡ್ತಿದ್ದನು. 14 ಆದ್ರೆ ಈಗ ನಿನ್ನ ರಾಜ್ಯ ಶಾಶ್ವತವಾಗಿರಲ್ಲ.+ ಯೆಹೋವ ತನ್ನ ಮನಸ್ಸಿಗೆ ತುಂಬ ಇಷ್ಟ ಆಗುವವನನ್ನ ಹುಡುಕ್ತಾನೆ.+ ಯೆಹೋವ ಅವನನ್ನ ತನ್ನ ಜನ್ರ ಮೇಲೆ ನಾಯಕನಾಗಿ ಮಾಡ್ತಾನೆ.+ ಯಾಕಂದ್ರೆ ನೀನು ಯೆಹೋವನ ಆಜ್ಞೆ ಪ್ರಕಾರ ನಡಿತಿಲ್ಲ”+ ಅಂದ.

15 ಆಮೇಲೆ ಸಮುವೇಲ ಎದ್ದು, ಗಿಲ್ಗಾಲಿಂದ ಬೆನ್ಯಾಮೀನಿನ ಗಿಬೆಯಾಕ್ಕೆ ಹೋದ. ಸೌಲ ಜನ್ರನ್ನ ಲೆಕ್ಕ ಮಾಡಿ ನೋಡಿದಾಗ ಅವನ ಜೊತೆ 600 ಗಂಡಸ್ರು ಉಳ್ಕೊಂಡಿದ್ರು.+ 16 ಸೌಲ, ಅವನ ಮಗ ಯೋನಾತಾನ, ಅವನ ಜೊತೆ ಉಳ್ಕೊಂಡಿದ್ದ ಜನ ಬೆನ್ಯಾಮೀನಿನ ಗೆಬದಲ್ಲಿ+ ವಾಸಿಸ್ತಿದ್ರು ಮತ್ತು ಫಿಲಿಷ್ಟಿಯರು ಮಿಕ್ಮಾಷಿನಲ್ಲಿ+ ಪಾಳೆಯ ಹಾಕಿದ್ರು. 17 ಫಿಲಿಷ್ಟಿಯರ ಪಾಳೆಯದಿಂದ ಸುಲಿಗೆ ಮಾಡುವವರು ಮೂರು ಗುಂಪಾಗಿ ಹೋಗ್ತಿದ್ರು. ಒಂದು ಗುಂಪು ಒಫ್ರದ ದಾರಿ ಕಡೆ ತಿರುಗಿ ಶುವಲ್‌ ಪ್ರದೇಶಕ್ಕೆ ಹೋಗ್ತಿತ್ತು. 18 ಇನ್ನೊಂದು ಗುಂಪು ಬೇತ್‌-ಹೋರೋನ್‌+ ದಾರೀಲಿ ಹೋಗ್ತಿತ್ತು. ಮೂರನೇ ಗುಂಪು ಚೆಬೋಯೀಮ್‌ ಕಣಿವೆ ಮುಂದೆ ಇದ್ದ ಗಡಿಯ ದಾರೀಲಿ ಹೋಗ್ತಿತ್ತು. ಅದು ಕಾಡಿನ ಕಡೆ ಇತ್ತು.

19 “ಇಬ್ರಿಯರಿಗೆ ಕತ್ತಿ ಈಟಿ ಮಾಡಿಸ್ಕೊಳ್ಳೋಕೆ ಆಗಬಾರದು” ಅಂತ ಫಿಲಿಷ್ಟಿಯರು ಹೇಳಿದ್ರಿಂದ ಇಡೀ ಇಸ್ರಾಯೇಲ್‌ ಪ್ರದೇಶದಲ್ಲಿ ಒಬ್ಬ ಲೋಹದ ಕೆಲಸಗಾರನೂ ಇರ್ಲಿಲ್ಲ. 20 ಹಾಗಾಗಿ ಇಸ್ರಾಯೇಲ್ಯರೆಲ್ಲ ತಮ್ಮ ನೇಗಿಲಿನ ಗುಳ, ಗುದ್ದಲಿ, ಕೊಡಲಿ ಅಥವಾ ಕುಡುಗೋಲುಗಳನ್ನ ಹರಿತ ಮಾಡೋಕೆ ಫಿಲಿಷ್ಟಿಯರ ಹತ್ರಾನೇ ಹೋಗಬೇಕಿತ್ತು. 21 ನೇಗಿಲಿನ ಗುಳ, ಗುದ್ದಲಿ, ಮೂರು ಮುಳ್ಳುಗಳಿರೋ ಕವಲುಗೋಲು, ಕೊಡಲಿ, ಪ್ರಾಣಿಗಳನ್ನ ತಿವಿಯೋಕೆ ಬಳಸೋ ಮುಳ್ಳುಗೋಲುಗಳನ್ನ ಹರಿತ ಮಾಡೋಕೆ ಎಂಟು ಗ್ರಾಂ ಬೆಳ್ಳಿ* ಕೊಡಬೇಕಿತ್ತು. 22 ಯುದ್ಧದ ದಿನ ಸೌಲ ಮತ್ತು ಯೋನಾತಾನರ ಜೊತೆ ಇದ್ದ ಜನ್ರಲ್ಲಿ ಒಬ್ರ ಕೈಯಲ್ಲೂ ಕತ್ತಿ ಆಗ್ಲಿ ಈಟಿಯಾಗ್ಲಿ ಇರ್ಲಿಲ್ಲ.+ ಕೇವಲ ಸೌಲ ಮತ್ತು ಅವನ ಮಗ ಯೋನಾತಾನನ ಹತ್ರ ಆಯುಧ ಇತ್ತು.

23 ಫಿಲಿಷ್ಟಿಯರ ಸೈನಿಕರ ಒಂದು ಗುಂಪು* ಮಿಕ್ಮಾಷಿನ+ ಕಂದಕದ ಮೂಲಕ ಈಗಾಗ್ಲೇ ಹೋಗಿತ್ತು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ