ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 1 ಪೂರ್ವಕಾಲವೃತ್ತಾಂತ 10
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

1 ಪೂರ್ವಕಾಲವೃತ್ತಾಂತ ಮುಖ್ಯಾಂಶಗಳು

      • ಸೌಲನ ಮತ್ತು ಅವನ ಗಂಡು ಮಕ್ಕಳ ಮರಣ (1-14)

1 ಪೂರ್ವಕಾಲವೃತ್ತಾಂತ 10:1

ಮಾರ್ಜಿನಲ್ ರೆಫರೆನ್ಸ್

  • +1ಸಮು 31:1-5; 2ಸಮು 1:21, 25

1 ಪೂರ್ವಕಾಲವೃತ್ತಾಂತ 10:2

ಮಾರ್ಜಿನಲ್ ರೆಫರೆನ್ಸ್

  • +1ಪೂರ್ವ 8:33

1 ಪೂರ್ವಕಾಲವೃತ್ತಾಂತ 10:3

ಮಾರ್ಜಿನಲ್ ರೆಫರೆನ್ಸ್

  • +1ಸಮು 26:9, 10

1 ಪೂರ್ವಕಾಲವೃತ್ತಾಂತ 10:4

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 16:21, 23
  • +1ಪೂರ್ವ 10:13

1 ಪೂರ್ವಕಾಲವೃತ್ತಾಂತ 10:6

ಮಾರ್ಜಿನಲ್ ರೆಫರೆನ್ಸ್

  • +1ಸಮು 31:6, 7

1 ಪೂರ್ವಕಾಲವೃತ್ತಾಂತ 10:8

ಮಾರ್ಜಿನಲ್ ರೆಫರೆನ್ಸ್

  • +1ಸಮು 28:4; 31:8-10

1 ಪೂರ್ವಕಾಲವೃತ್ತಾಂತ 10:9

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 16:23, 24

1 ಪೂರ್ವಕಾಲವೃತ್ತಾಂತ 10:10

ಮಾರ್ಜಿನಲ್ ರೆಫರೆನ್ಸ್

  • +1ಸಮು 5:2

1 ಪೂರ್ವಕಾಲವೃತ್ತಾಂತ 10:11

ಮಾರ್ಜಿನಲ್ ರೆಫರೆನ್ಸ್

  • +1ಸಮು 11:1
  • +1ಸಮು 31:11-13

1 ಪೂರ್ವಕಾಲವೃತ್ತಾಂತ 10:12

ಮಾರ್ಜಿನಲ್ ರೆಫರೆನ್ಸ್

  • +2ಸಮು 2:5; 21:12

1 ಪೂರ್ವಕಾಲವೃತ್ತಾಂತ 10:13

ಮಾರ್ಜಿನಲ್ ರೆಫರೆನ್ಸ್

  • +1ಸಮು 13:13; 15:22, 23
  • +ಯಾಜ 20:6; 1ಸಮು 28:7

1 ಪೂರ್ವಕಾಲವೃತ್ತಾಂತ 10:14

ಮಾರ್ಜಿನಲ್ ರೆಫರೆನ್ಸ್

  • +ರೂತ್‌ 4:17; 1ಸಮು 13:14; 15:27, 28; 2ಸಮು 5:3

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

1 ಪೂರ್ವ. 10:11ಸಮು 31:1-5; 2ಸಮು 1:21, 25
1 ಪೂರ್ವ. 10:21ಪೂರ್ವ 8:33
1 ಪೂರ್ವ. 10:31ಸಮು 26:9, 10
1 ಪೂರ್ವ. 10:4ನ್ಯಾಯ 16:21, 23
1 ಪೂರ್ವ. 10:41ಪೂರ್ವ 10:13
1 ಪೂರ್ವ. 10:61ಸಮು 31:6, 7
1 ಪೂರ್ವ. 10:81ಸಮು 28:4; 31:8-10
1 ಪೂರ್ವ. 10:9ನ್ಯಾಯ 16:23, 24
1 ಪೂರ್ವ. 10:101ಸಮು 5:2
1 ಪೂರ್ವ. 10:111ಸಮು 11:1
1 ಪೂರ್ವ. 10:111ಸಮು 31:11-13
1 ಪೂರ್ವ. 10:122ಸಮು 2:5; 21:12
1 ಪೂರ್ವ. 10:131ಸಮು 13:13; 15:22, 23
1 ಪೂರ್ವ. 10:13ಯಾಜ 20:6; 1ಸಮು 28:7
1 ಪೂರ್ವ. 10:14ರೂತ್‌ 4:17; 1ಸಮು 13:14; 15:27, 28; 2ಸಮು 5:3
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
1 ಪೂರ್ವಕಾಲವೃತ್ತಾಂತ 10:1-14

ಒಂದನೇ ಪೂರ್ವಕಾಲವೃತ್ತಾಂತ

10 ಫಿಲಿಷ್ಟಿಯರು ಇಸ್ರಾಯೇಲ್ಯರ ವಿರುದ್ಧ ಯುದ್ಧ ಮಾಡ್ತಿದ್ರು. ಇಸ್ರಾಯೇಲ್‌ ಗಂಡಸ್ರು ಸೋತು ಓಡಿಹೋದ್ರು. ತುಂಬ ಜನ್ರನ್ನ ಗಿಲ್ಬೋವ ಬೆಟ್ಟದಲ್ಲಿ ಕೊಂದುಹಾಕಿದ್ರು.+ 2 ಫಿಲಿಷ್ಟಿಯರು ಸೌಲನನ್ನ, ಅವನ ಮಕ್ಕಳನ್ನ ಅಟ್ಟಿಸ್ಕೊಂಡು ತುಂಬ ಹತ್ರ ಬಂದ್ರು. ಸೌಲನ ಮಕ್ಕಳಾದ ಯೋನಾತಾನ, ಅಬೀನಾದಾಬ, ಮಲ್ಕೀಷೂವನನ್ನ+ ಫಿಲಿಷ್ಟಿಯರು ಕೊಂದ್ರು. 3 ಸೌಲನ ವಿರುದ್ಧ ನಡೆದ ಯುದ್ಧ ತುಂಬ ಭಯಂಕರವಾಗಿತ್ತು. ಬಿಲ್ಲುಗಾರರು ಅವನನ್ನ ನೋಡಿದಾಗ ಅವನಿಗೆ ತುಂಬ ಗಾಯ ಮಾಡಿಬಿಟ್ರು.+ 4 ಆಗ ಸೌಲ ತನ್ನ ಆಯುಧಗಳನ್ನ ಹೊರುವವನಿಗೆ “ನಿನ್ನ ಕತ್ತಿ ತೆಗೆದು ನನ್ನನ್ನ ಕೊಂದುಬಿಡು. ಇಲ್ಲಾಂದ್ರೆ ಸುನ್ನತಿಯಾಗದ ಈ ಗಂಡಸ್ರು ನನಗೆ ಒಂಚೂರೂ ದಯೆ ತೋರಿಸದೆ ಕೊಂದುಬಿಡ್ತಾರೆ”+ ಅಂದ. ಆದ್ರೆ ಆಯುಧ ಹೊರುವವನು ಭಯಪಟ್ಟು ಹಾಗೆ ಮಾಡಲಿಲ್ಲ. ಹಾಗಾಗಿ ಸೌಲ ಕತ್ತಿ ತಗೊಂಡು ತಾನೇ ಅದ್ರ ಮೇಲೆ ಬಿದ್ದ.+ 5 ಸೌಲ ಸತ್ತದ್ದನ್ನ ಆಯುಧ ಹೊರುವವನು ನೋಡಿ, ಅವನೂ ತನ್ನ ಕತ್ತಿ ಮೇಲೆ ಬಿದ್ದು ಸತ್ತುಹೋದ. 6 ಹೀಗೆ ಸೌಲ, ಅವನ ಮೂರು ಗಂಡು ಮಕ್ಕಳು, ಅವನ ಮನೆತನದವ್ರೆಲ್ಲ ಅವತ್ತೇ ಸತ್ತುಹೋದ್ರು.+ 7 ಇಸ್ರಾಯೇಲಿನ ಗಂಡಸ್ರು ಓಡಿ ಹೋಗಿದ್ದಾರೆ, ಸೌಲ, ಅವನ ಮಕ್ಕಳು ಸತ್ತು ಹೋಗಿದ್ದಾರೆ ಅಂತ ಗೊತ್ತಾದಾಗ ಕಣಿವೆ ಪ್ರದೇಶದಲ್ಲಿದ್ದ ಇಸ್ರಾಯೇಲ್‌ ಜನ್ರೆಲ್ಲ ತಮ್ಮತಮ್ಮ ಪಟ್ಟಣಗಳನ್ನ ಬಿಟ್ಟು ಓಡಿಹೋದ್ರು. ಆಗ ಫಿಲಿಷ್ಟಿಯರು ಬಂದು ಅವುಗಳನ್ನ ವಶ ಮಾಡ್ಕೊಂಡ್ರು.

8 ಮಾರನೇ ದಿನ ಫಿಲಿಷ್ಟಿಯರು ಸತ್ತು ಬಿದ್ದವ್ರ ಬಟ್ಟೆಗಳನ್ನ, ಆಯುಧಗಳನ್ನ ತಗೊಂಡು ಹೋಗೋಕೆ ಬಂದಾಗ ಸೌಲ, ಅವನ ಗಂಡು ಮಕ್ಕಳು ಗಿಲ್ಬೋವ+ ಬೆಟ್ಟದಲ್ಲಿ ಸತ್ತುಬಿದ್ದಿರೋದನ್ನ ನೋಡಿದ್ರು. 9 ಆಗ ಅವರು ಸೌಲನನ್ನ ದೋಚಿ ಅವನ ತಲೆ ಕಡಿದು ಅವನ ಆಯುಧಗಳನ್ನ ತಗೊಂಡ್ರು. ಈ ಸುದ್ದಿ ಎಲ್ಲ ಜನ್ರಿಗೆ, ಮೂರ್ತಿಗಳಿರೋ ಅವ್ರ ದೇವಸ್ಥಾನಗಳಿಗೆ ಹಬ್ಬಿಸಿ+ ಅಂತ ಫಿಲಿಷ್ಟಿಯರ ದೇಶದ ಮೂಲೆಮೂಲೆಗೂ ಸಂದೇಶ ಕಳಿಸಿದ್ರು. 10 ಆಮೇಲೆ ಅವರು ಸೌಲನ ಆಯುಧಗಳನ್ನ ತಮ್ಮ ದೇವರ ಆಲಯದಲ್ಲಿ ಇಟ್ರು. ಅವನ ಬುರುಡೆಯನ್ನ ದಾಗೋನನ+ ಆಲಯದಲ್ಲಿ ನೇತು ಹಾಕಿದ್ರು.

11 ಫಿಲಿಷ್ಟಿಯರು ಸೌಲನಿಗೆ ಏನು ಮಾಡಿದ್ರು ಅಂತ ಗಿಲ್ಯಾದಿನ ಯಾಬೆಷಿನಲ್ಲಿ+ ಇರೋ ಜನ್ರಿಗೆಲ್ಲ ಗೊತ್ತಾಯ್ತು.+ 12 ಆಗ ಅವ್ರಲ್ಲಿದ್ದ ವೀರ ಸೈನಿಕರೆಲ್ಲ ಹೋಗಿ ಸೌಲನ, ಅವನ ಮಕ್ಕಳ ಶವಗಳನ್ನ ತಗೊಂಡು ಯಾಬೇಷಿಗೆ ಬಂದ್ರು. ಆಮೇಲೆ ಅವ್ರ ಮೂಳೆಗಳನ್ನ ಯಾಬೇಷಿನ ದೊಡ್ಡ ಮರದ ಕೆಳಗೆ ಸಮಾಧಿ ಮಾಡಿ+ ಏಳು ದಿನ ಉಪವಾಸ ಮಾಡಿದ್ರು.

13 ಸೌಲ ಯೆಹೋವನ ಮಾತು ಕೇಳದೆ ಯೆಹೋವನಿಗೆ ನಂಬಿಕೆದ್ರೋಹ ಮಾಡಿದ್ರಿಂದ ಸತ್ತುಹೋದ.+ ಸತ್ತವ್ರನ್ನ ಮಾತಾಡಿಸ್ತಾ ಇದ್ದೀವಿ+ ಅಂತ ಹೇಳ್ಕೊಳ್ತಿದ್ದ ಸ್ತ್ರೀ ಹತ್ರ ಅವನು ಹೋಗಿದ್ದ. 14 ಅದ್ರ ಬದ್ಲು ಅವನು ಯೆಹೋವನ ಹತ್ರ ಕೇಳಬಹುದಿತ್ತು. ಹಾಗಾಗಿ ದೇವರು ಅವನನ್ನ ಕೊಂದು ಅವನ ಅಧಿಕಾರವನ್ನ ಇಷಯನ ಮಗ ದಾವೀದನಿಗೆ ಕೊಟ್ಟನು.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ