ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆಹೆಜ್ಕೇಲ 14
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಯೆಹೆಜ್ಕೇಲ ಮುಖ್ಯಾಂಶಗಳು

      • ಮೂರ್ತಿಪೂಜೆ ಮಾಡುವವರಿಗೆ ಶಿಕ್ಷೆ ಕೊಡ್ತೀನಿ ಅಂತ ಹೇಳಿದ್ದು (1-11)

      • ಯೆರೂಸಲೇಮಿಗೆ ಶಿಕ್ಷೆ ತಪ್ಪಲ್ಲ (12-23)

        • ನೀತಿವಂತರಾದ ನೋಹ, ದಾನಿಯೇಲ ಮತ್ತು ಯೋಬ (14, 20)

ಯೆಹೆಜ್ಕೇಲ 14:1

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 33:30, 31

ಯೆಹೆಜ್ಕೇಲ 14:3

ಪಾದಟಿಪ್ಪಣಿ

  • *

    ಹೀಬ್ರು ಭಾಷೆಯಲ್ಲಿ ಇಲ್ಲಿ “ಸಗಣಿ” ಅನ್ನೋ ಪದ ಬಳಸಿರಬಹುದು. ತುಂಬ ಅಸಹ್ಯ ಅಂತ ತೋರಿಸೋಕೆ ಆ ಪದ ಬಳಸಲಾಗಿದೆ.

ಮಾರ್ಜಿನಲ್ ರೆಫರೆನ್ಸ್

  • +2ಅರ 3:13; ಯೆಶಾ 1:15; ಯೆರೆ 11:11

ಯೆಹೆಜ್ಕೇಲ 14:5

ಮಾರ್ಜಿನಲ್ ರೆಫರೆನ್ಸ್

  • +ಯೆರೆ 2:5

ಯೆಹೆಜ್ಕೇಲ 14:6

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 55:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಶುದ್ಧ ಆರಾಧನೆ, ಪು. 105

ಯೆಹೆಜ್ಕೇಲ 14:7

ಮಾರ್ಜಿನಲ್ ರೆಫರೆನ್ಸ್

  • +ಯೆರೆ 21:1, 2; ಯೆಹೆ 33:31

ಯೆಹೆಜ್ಕೇಲ 14:8

ಮಾರ್ಜಿನಲ್ ರೆಫರೆನ್ಸ್

  • +ಯಾಜ 20:2, 3

ಯೆಹೆಜ್ಕೇಲ 14:9

ಮಾರ್ಜಿನಲ್ ರೆಫರೆನ್ಸ್

  • +1ಅರ 22:21, 22; ಯೆರೆ 4:10; 2ಥೆಸ 2:10, 11

ಯೆಹೆಜ್ಕೇಲ 14:11

ಮಾರ್ಜಿನಲ್ ರೆಫರೆನ್ಸ್

  • +ಯೆರೆ 24:7; ಯೆಹೆ 11:19, 20

ಯೆಹೆಜ್ಕೇಲ 14:13

ಪಾದಟಿಪ್ಪಣಿ

  • *

    ಅಕ್ಷ. “ರೊಟ್ಟಿ ಕೋಲುಗಳನ್ನ ಮುರಿತೀನಿ.” ಬಹುಶಃ ರೊಟ್ಟಿ ಇಡೋಕೆ ಬಳಸ್ತಿದ್ದ ಕೋಲನ್ನ ಸೂಚಿಸುತ್ತೆ.

ಮಾರ್ಜಿನಲ್ ರೆಫರೆನ್ಸ್

  • +ಯಾಜ 26:26
  • +ಯೆಶಾ 3:1; ಯೆರೆ 15:2
  • +ಯೆರೆ 7:20

ಯೆಹೆಜ್ಕೇಲ 14:14

ಮಾರ್ಜಿನಲ್ ರೆಫರೆನ್ಸ್

  • +ಆದಿ 6:8, 9; ಇಬ್ರಿ 11:7
  • +ದಾನಿ 10:11
  • +ಯೋಬ 1:8; 42:8
  • +ಜ್ಞಾನೋ 11:4; ಯೆರೆ 15:1; 2ಪೇತ್ರ 2:9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    8/2023, ಪು. 2

    ಕಾವಲಿನಬುರುಜು (ಅಧ್ಯಯನ),

    2/2018, ಪು. 3-7

    ಕಾವಲಿನಬುರುಜು (ಅಧ್ಯಯನ),

    5/2016, ಪು. 26

    ಎಚ್ಚರ!—2009,

    7/2009, ಪು. 16

ಯೆಹೆಜ್ಕೇಲ 14:15

ಮಾರ್ಜಿನಲ್ ರೆಫರೆನ್ಸ್

  • +ಯಾಜ 26:22; ಯೆರೆ 15:3

ಯೆಹೆಜ್ಕೇಲ 14:17

ಮಾರ್ಜಿನಲ್ ರೆಫರೆನ್ಸ್

  • +ಯಾಜ 26:25; ಯೆರೆ 25:9; ಯೆಹೆ 21:3
  • +ಚೆಫ 1:3

ಯೆಹೆಜ್ಕೇಲ 14:19

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 28:21, 22

ಯೆಹೆಜ್ಕೇಲ 14:20

ಮಾರ್ಜಿನಲ್ ರೆಫರೆನ್ಸ್

  • +ಆದಿ 7:1
  • +ದಾನಿ 10:11
  • +ಯೋಬ 1:8; 42:8
  • +ಯೆಹೆ 18:20; ಚೆಫ 2:3

ಯೆಹೆಜ್ಕೇಲ 14:21

ಮಾರ್ಜಿನಲ್ ರೆಫರೆನ್ಸ್

  • +ಯೆರೆ 32:43
  • +ಯೆಹೆ 5:17; 33:27
  • +ಯೆರೆ 15:2

ಯೆಹೆಜ್ಕೇಲ 14:22

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 4:31; 2ಪೂರ್ವ 36:20; ಯೆಹೆ 6:8; ಮೀಕ 5:7

ಯೆಹೆಜ್ಕೇಲ 14:23

ಮಾರ್ಜಿನಲ್ ರೆಫರೆನ್ಸ್

  • +ನೆಹೆ 9:33; ಯೆರೆ 22:8, 9; ಯೆಹೆ 9:9; ದಾನಿ 9:7

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಯೆಹೆ. 14:1ಯೆಹೆ 33:30, 31
ಯೆಹೆ. 14:32ಅರ 3:13; ಯೆಶಾ 1:15; ಯೆರೆ 11:11
ಯೆಹೆ. 14:5ಯೆರೆ 2:5
ಯೆಹೆ. 14:6ಯೆಶಾ 55:7
ಯೆಹೆ. 14:7ಯೆರೆ 21:1, 2; ಯೆಹೆ 33:31
ಯೆಹೆ. 14:8ಯಾಜ 20:2, 3
ಯೆಹೆ. 14:91ಅರ 22:21, 22; ಯೆರೆ 4:10; 2ಥೆಸ 2:10, 11
ಯೆಹೆ. 14:11ಯೆರೆ 24:7; ಯೆಹೆ 11:19, 20
ಯೆಹೆ. 14:13ಯಾಜ 26:26
ಯೆಹೆ. 14:13ಯೆಶಾ 3:1; ಯೆರೆ 15:2
ಯೆಹೆ. 14:13ಯೆರೆ 7:20
ಯೆಹೆ. 14:14ಆದಿ 6:8, 9; ಇಬ್ರಿ 11:7
ಯೆಹೆ. 14:14ದಾನಿ 10:11
ಯೆಹೆ. 14:14ಯೋಬ 1:8; 42:8
ಯೆಹೆ. 14:14ಜ್ಞಾನೋ 11:4; ಯೆರೆ 15:1; 2ಪೇತ್ರ 2:9
ಯೆಹೆ. 14:15ಯಾಜ 26:22; ಯೆರೆ 15:3
ಯೆಹೆ. 14:17ಯಾಜ 26:25; ಯೆರೆ 25:9; ಯೆಹೆ 21:3
ಯೆಹೆ. 14:17ಚೆಫ 1:3
ಯೆಹೆ. 14:19ಧರ್ಮೋ 28:21, 22
ಯೆಹೆ. 14:20ಆದಿ 7:1
ಯೆಹೆ. 14:20ದಾನಿ 10:11
ಯೆಹೆ. 14:20ಯೋಬ 1:8; 42:8
ಯೆಹೆ. 14:20ಯೆಹೆ 18:20; ಚೆಫ 2:3
ಯೆಹೆ. 14:21ಯೆರೆ 32:43
ಯೆಹೆ. 14:21ಯೆಹೆ 5:17; 33:27
ಯೆಹೆ. 14:21ಯೆರೆ 15:2
ಯೆಹೆ. 14:22ಧರ್ಮೋ 4:31; 2ಪೂರ್ವ 36:20; ಯೆಹೆ 6:8; ಮೀಕ 5:7
ಯೆಹೆ. 14:23ನೆಹೆ 9:33; ಯೆರೆ 22:8, 9; ಯೆಹೆ 9:9; ದಾನಿ 9:7
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಯೆಹೆಜ್ಕೇಲ 14:1-23

ಯೆಹೆಜ್ಕೇಲ

14 ಇಸ್ರಾಯೇಲಿನ ಕೆಲವು ಹಿರಿಯರು ಬಂದು ನನ್ನ ಮುಂದೆ ಕೂತ್ಕೊಂಡ್ರು.+ 2 ಆಗ ಯೆಹೋವ ನನಗೆ ಹೀಗಂದನು: 3 “ಮನುಷ್ಯಕುಮಾರನೇ, ಈ ಗಂಡಸರು ಅಸಹ್ಯ ಮೂರ್ತಿಗಳನ್ನ* ಆರಾಧಿಸೋಕೆ ಗಟ್ಟಿ ಮನಸ್ಸು ಮಾಡ್ಕೊಂಡಿದ್ದಾರೆ ಮತ್ತು ಜನ್ರನ್ನ ಪಾಪಕ್ಕೆ ನಡಿಸೋ ಎಡವುಗಲ್ಲನ್ನ ಅವ್ರ ಮುಂದೆ ಇಟ್ಟಿದ್ದಾರೆ. ಹೀಗಿದ್ದ ಮೇಲೆ ನನ್ನ ಇಷ್ಟ ಏನಂತ ತಿಳಿಯೋಕೆ ಬಂದಿರೋ ಇವ್ರಿಗೆ ನಾನ್ಯಾಕೆ ಉತ್ತರ ಕೊಡ್ಲಿ?+ 4 ನೀನೀಗ ಅವ್ರಿಗೆ ‘ವಿಶ್ವದ ರಾಜ ಯೆಹೋವ ಹೀಗಂತಾನೆ: “ಒಬ್ಬ ಇಸ್ರಾಯೇಲ್ಯನು ಅವನ ಅಸಹ್ಯ ಮೂರ್ತಿಗಳನ್ನೇ ಆರಾಧಿಸೋಕೆ ಗಟ್ಟಿ ಮನಸ್ಸು ಮಾಡ್ಕೊಂಡು ಜನ್ರನ್ನ ಪಾಪಕ್ಕೆ ನಡಿಸೋ ಎಡವುಗಲ್ಲನ್ನ ಅವ್ರ ಮುಂದೆ ಇಟ್ಟು ಆಮೇಲೆ ಒಬ್ಬ ಪ್ರವಾದಿ ಹತ್ರ ಬಂದು ನನ್ನ ಇಷ್ಟ ಏನಂತ ವಿಚಾರಿಸಿದ್ರೆ ನಾನು ಹೀಗೆ ಮಾಡ್ತೀನಿ: ಆ ಇಸ್ರಾಯೇಲ್ಯನ ಹತ್ರ ಎಷ್ಟು ಅಸಹ್ಯ ಮೂರ್ತಿಗಳು ಇವೆಯೋ ಯೆಹೋವನಾದ ನಾನು ಅವನಿಗೆ ಅಷ್ಟೇ ಶಿಕ್ಷೆ ಕೊಡ್ತೀನಿ. 5 ಇಸ್ರಾಯೇಲ್ಯರ ಹೃದಯದಲ್ಲಿ ಭಯ ಹುಟ್ಟಿಸ್ತೀನಿ. ಯಾಕಂದ್ರೆ ಅವ್ರೆಲ್ಲ ನನ್ನನ್ನ ಬಿಟ್ಟು ಅಸಹ್ಯ ಮೂರ್ತಿಗಳ ಹಿಂದೆ ಹೋಗಿದ್ದಾರೆ”+ ಅಂತ ಹೇಳು.’

6 ಹಾಗಾಗಿ ನೀನು ಇಸ್ರಾಯೇಲ್ಯರಿಗೆ ಹೀಗೆ ಹೇಳು: ‘ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ “ನಿಮ್ಮ ಅಸಹ್ಯ ಮೂರ್ತಿಗಳನ್ನ ಬಿಟ್ಟು ನನ್ನ ಹತ್ರ ವಾಪಸ್‌ ಬನ್ನಿ ಮತ್ತು ನಿಮ್ಮ ಅಸಹ್ಯ ಕೆಲಸಗಳನ್ನೆಲ್ಲ ಬಿಟ್ಟುಬಿಡಿ.+ 7 ಒಬ್ಬ ಇಸ್ರಾಯೇಲ್ಯನು ಅಥವಾ ಇಸ್ರಾಯೇಲಿನಲ್ಲಿ ಇರೋ ವಿದೇಶಿ ನನ್ನಿಂದ ದೂರ ಹೋಗಿ ಅವನ ಅಸಹ್ಯ ಮೂರ್ತಿಗಳನ್ನೇ ಆರಾಧಿಸೋಕೆ ಗಟ್ಟಿ ಮನಸ್ಸು ಮಾಡ್ಕೊಂಡಿದ್ರೆ ಮತ್ತು ಜನ್ರನ್ನ ಪಾಪಕ್ಕೆ ನಡಿಸೋ ಎಡವುಗಲ್ಲನ್ನ ಅವ್ರ ಮುಂದಿಟ್ಟು ಆಮೇಲೆ ನನ್ನ ಪ್ರವಾದಿ ಹತ್ರ ಬಂದು ನನ್ನ ಇಷ್ಟ ಏನಂತ ವಿಚಾರಿಸಿದ್ರೆ+ ಯೆಹೋವನಾದ ನಾನು, ಹೌದು ನಾನೇ ಅವನಿಗೆ ಉತ್ತರ ಕೊಡ್ತೀನಿ. 8 ನಾನು ಅವನನ್ನ ವಿರೋಧಿಸ್ತೀನಿ. ಅವನನ್ನ ಎಚ್ಚರಿಕೆಯ ಉದಾಹರಣೆಯಾಗಿ, ಗಾದೆ ಮಾತಾಗಿ ಮಾಡ್ತೀನಿ. ಅವನು ನನ್ನ ಜನ್ರ ಮಧ್ಯ ಇರದ ಹಾಗೆ ಅವನನ್ನ ನಾಶ ಮಾಡ್ತೀನಿ.+ ಆಗ, ನಾನೇ ಯೆಹೋವ ಅಂತ ನಿಮಗೆ ಗೊತ್ತಾಗುತ್ತೆ.”’

9 ‘ಆದ್ರೆ ಆ ಪ್ರವಾದಿ ಮೋಸಹೋಗಿ ಅವನ ಹತ್ರ ವಿಚಾರಿಸೋಕೆ ಬಂದವನಿಗೆ ಏನಾದ್ರೂ ಉತ್ತರ ಕೊಟ್ರೆ ಆ ಪ್ರವಾದಿಯನ್ನ ಮೂರ್ಖನಾಗಿ ಮಾಡಿದ್ದು ಯೆಹೋವನಾದ ನಾನೇ.+ ನಾನಾಗ ಅವನ ವಿರುದ್ಧ ಕೈಚಾಚಿ ನನ್ನ ಜನ್ರಾದ ಇಸ್ರಾಯೇಲ್ಯರಲ್ಲಿ ಇರದ ಹಾಗೆ ಅವನನ್ನ ನಾಶಮಾಡ್ತೀನಿ. 10 ಪ್ರವಾದಿ ಅಪರಾಧಿ ಆದ ಹಾಗೇ ವಿಚಾರಿಸೋಕೆ ಬಂದವನೂ ಅಪರಾಧಿ ಆಗಿದ್ದಾನೆ. ಆ ಪ್ರವಾದಿ ಮತ್ತು ಅವನನ್ನ ವಿಚಾರಿಸೋಕೆ ಬಂದವನು, ಇಬ್ರೂ ತಮ್ಮ ತಪ್ಪಿನ ಪರಿಣಾಮಗಳನ್ನ ಅನುಭವಿಸಲೇಬೇಕು. 11 ಹೀಗಾದ್ರೆ ಇಸ್ರಾಯೇಲ್ಯರು ನನ್ನನ್ನ ಬಿಟ್ಟು ಅಲ್ಲಿ ಇಲ್ಲಿ ಅಲೆದಾಡೋದನ್ನ ಮತ್ತು ಅಪರಾಧಗಳನ್ನ ಮಾಡಿ ಅಶುದ್ಧರಾಗೋದನ್ನ ಬಿಟ್ಟುಬಿಡಬಹುದು. ಆಗ ಅವರು ನನ್ನ ಜನ್ರಾಗಿ ಇರ್ತಾರೆ ಮತ್ತು ನಾನು ಅವ್ರ ದೇವರಾಗಿ ಇರ್ತಿನಿ’+ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.”

12 ಯೆಹೋವ ಮತ್ತೆ ನನಗೆ 13 “ಮನುಷ್ಯಕುಮಾರನೇ, ಒಂದುವೇಳೆ ಒಂದು ದೇಶ ನಂಬಿಕೆ ದ್ರೋಹ ಮಾಡಿ ನನ್ನ ವಿರುದ್ಧ ಪಾಪ ಮಾಡಿದ್ರೆ ನಾನು ಅದ್ರ ವಿರುದ್ಧ ಕೈಚಾಚಿ ಅದಕ್ಕೆ ಆಹಾರ ಬರೋದನ್ನ ನಿಲ್ಲಿಸಿ ನಾಶ ಮಾಡಿಬಿಡ್ತೀನಿ.*+ ಆ ದೇಶದಲ್ಲಿ ಬರಗಾಲ ತರ್ತಿನಿ+ ಮತ್ತು ಅಲ್ಲಿರೋ ಮನುಷ್ಯರನ್ನ ಪ್ರಾಣಿಗಳನ್ನ ಸಾಯಿಸ್ತೀನಿ.”+ 14 “‘ಆ ದೇಶದಲ್ಲಿ ನೋಹ,+ ದಾನಿಯೇಲ,+ ಯೋಬ+ ಈ ಮೂರು ಜನ ಇದ್ದಿದ್ರೂ ಅವರು ನೀತಿವಂತರಾಗಿ ಇದ್ದಿದ್ರಿಂದ ತಮ್ಮನ್ನ ಮಾತ್ರ ಕಾಪಾಡ್ಕೊಳ್ಳೋಕೆ ಆಗ್ತಿತ್ತು’+ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.”

15 “‘ಅಥವಾ ನಾನು ದೇಶದಲ್ಲಿ ಕ್ರೂರ ಪ್ರಾಣಿಗಳು ಬರೋ ಹಾಗೆ ಮಾಡಿದ್ರೆ ಅವು ಎಲ್ಲ ಕಡೆ ತಿರುಗಾಡಿ ದೇಶದಲ್ಲಿ ಜನ್ರೇ ಇಲ್ಲದ ಹಾಗೆ ಮಾಡಿ ಹಾಳುಮಾಡ್ತವೆ. ಜನ್ರು ಕಾಡುಪ್ರಾಣಿಗಳಿಗೆ ಹೆದರೋದ್ರಿಂದ ಯಾರೂ ಹೊರಗೆ ಬರಲ್ಲ.+ 16 ನನ್ನಾಣೆ, ಆ ಮೂರು ಜನ ಆ ದೇಶದಲ್ಲಿ ಇದ್ದಿದ್ರೂ ಅವರು ತಮ್ಮ ಮಕ್ಕಳನ್ನ ಕಾಪಾಡೋಕೆ ಆಗ್ತಿರಲಿಲ್ಲ. ಅವರು ಅವ್ರನ್ನ ಮಾತ್ರ ಕಾಪಾಡ್ಕೊಳ್ಳೋಕೆ ಆಗ್ತಿತ್ತು ಮತ್ತು ಆ ದೇಶ ಖಾಲಿಖಾಲಿ ಹೊಡಿತಿತ್ತು’ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.”

17 “‘ಅಥವಾ ನಾನು ಆ ದೇಶದ ವಿರುದ್ಧ ಕತ್ತಿ ಕಳಿಸಿ+ “ಕತ್ತಿ ದೇಶದಲ್ಲೆಲ್ಲಾ ಹೋಗ್ಲಿ” ಅಂತ ಹೇಳಿ, ಆ ದೇಶದಲ್ಲಿರೋ ಮನುಷ್ಯರನ್ನೂ ಪ್ರಾಣಿಗಳನ್ನೂ ಕೊಂದ್ರೆ+ 18 ನನ್ನಾಣೆ, ಆ ಮೂರು ಜನ ಆ ದೇಶದಲ್ಲಿ ಇದ್ದಿದ್ರೂ ಅವರು ತಮ್ಮ ಮಕ್ಕಳನ್ನ ಕಾಪಾಡೋಕೆ ಆಗ್ತಿರಲಿಲ್ಲ. ಅವರು ಅವ್ರನ್ನ ಮಾತ್ರ ಕಾಪಾಡ್ಕೊಳ್ಳೋಕೆ ಆಗ್ತಿತ್ತು’ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.”

19 “‘ಅಥವಾ ಒಂದುವೇಳೆ ನಾನು ಆ ದೇಶದಲ್ಲಿ ಅಂಟುರೋಗ ತಂದು+ ಆ ದೇಶದ ಮೇಲೆ ನನ್ನ ಕೋಪ ಸುರಿಸಿ ಮನುಷ್ಯರನ್ನೂ ಪ್ರಾಣಿಗಳನ್ನೂ ಕೊಂದು ರಕ್ತಕೋಡಿ ಹರಿಸಿದ್ರೆ 20 ನನ್ನಾಣೆ, ನೋಹ,+ ದಾನಿಯೇಲ,+ ಯೋಬ+ ಈ ಮೂರು ಜನ ಆ ದೇಶದಲ್ಲಿ ಇದ್ದಿದ್ರೂ ಅವರು ತಮ್ಮ ಮಕ್ಕಳನ್ನ ಕಾಪಾಡೋಕೆ ಆಗ್ತಿರಲಿಲ್ಲ. ಅವರು ನೀತಿವಂತರಾಗಿ ಇರೋದ್ರಿಂದ ಅವರು ತಮ್ಮನ್ನ ಮಾತ್ರ ಕಾಪಾಡ್ಕೊಳ್ಳೋಕೆ ಆಗ್ತಿತ್ತು’+ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.”

21 “ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ನಾನು ಯೆರೂಸಲೇಮಲ್ಲಿರೋ ಮನುಷ್ಯರನ್ನೂ ಪ್ರಾಣಿಗಳನ್ನೂ ನಾಶಮಾಡೋಕೆ+ ಕತ್ತಿ, ಬರಗಾಲ, ಕ್ರೂರ ಕಾಡುಪ್ರಾಣಿಗಳು ಮತ್ತು ಅಂಟುರೋಗ+ ಅನ್ನೋ ನಾಲ್ಕು ಶಿಕ್ಷೆಗಳನ್ನ+ ತಂದಾಗ ಅಲ್ಲಿ ಇದೇ ಪರಿಸ್ಥಿತಿ ಬರುತ್ತೆ. 22 ಆದ್ರೂ ಅಲ್ಲಿ ಉಳಿದ ಸ್ವಲ್ಪ ಜನ ತಪ್ಪಿಸ್ಕೊಳ್ತಾರೆ. ಅವ್ರ ಜೊತೆ ಅವ್ರ ಮಕ್ಕಳೂ ಇರ್ತಾರೆ. ಅವ್ರೆಲ್ಲ ಅಲ್ಲಿಂದ ಹೊರಗೆ ಬರ್ತಾರೆ.+ ಅವರು ನಿಮ್ಮ ಹತ್ರ ಬರ್ತಾರೆ. ಅವ್ರ ನಡತೆ, ಅವ್ರ ಕೆಲಸಗಳನ್ನ ನೀವು ನೋಡಿದಾಗ ನಾನು ಯೆರೂಸಲೇಮಿನ ಮೇಲೆ ಕಷ್ಟ ತಂದಿದ್ದು ಮತ್ತು ಆ ಪಟ್ಟಣಕ್ಕೆ ನಾನು ಹೀಗೆಲ್ಲ ಮಾಡಿದ್ದು ನ್ಯಾಯವಾಗೇ ಇತ್ತು ಅಂತ ಗೊತ್ತಾದಾಗ ನಿಮಗೆ ಸಮಾಧಾನ ಆಗುತ್ತೆ.’”

23 “‘ನೀವು ಅವ್ರ ನಡತೆ ಅವ್ರ ಕೆಲಸಗಳನ್ನ ನೋಡಿದಾಗ ನಾನು ಸುಮ್ಮಸುಮ್ನೆ ಅವ್ರ ಮೇಲೆ ಕಷ್ಟ ತರಲಿಲ್ಲ, ಬದಲಿಗೆ ನಾನು ಹಾಗೆ ಮಾಡಿದ್ದು ಸರಿ ಅಂತ ನಿಮಗೆ ಅರ್ಥ ಆಗುತ್ತೆ, ಆಗ ನಿಮಗೆ ಸಮಾಧಾನ ಆಗುತ್ತೆ’+ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.”

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ