ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆರೆಮೀಯ 43
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಯೆರೆಮೀಯ ಮುಖ್ಯಾಂಶಗಳು

      • ಮಾತು ಕೇಳದೆ ಜನ ಈಜಿಪ್ಟಿಗೆ ಹೋದ್ರು (1-7)

      • ಈಜಿಪ್ಟಲ್ಲಿ ಯೆರೆಮೀಯನಿಗೆ ಯೆಹೋವನ ಮಾತು (8-13)

ಯೆರೆಮೀಯ 43:2

ಮಾರ್ಜಿನಲ್ ರೆಫರೆನ್ಸ್

  • +ಯೆರೆ 41:16; 42:1-3

ಯೆರೆಮೀಯ 43:3

ಮಾರ್ಜಿನಲ್ ರೆಫರೆನ್ಸ್

  • +ಯೆರೆ 36:4; 45:1
  • +ಯೆರೆ 38:4, 6

ಯೆರೆಮೀಯ 43:5

ಮಾರ್ಜಿನಲ್ ರೆಫರೆನ್ಸ್

  • +ಯೆರೆ 40:11, 12

ಯೆರೆಮೀಯ 43:6

ಮಾರ್ಜಿನಲ್ ರೆಫರೆನ್ಸ್

  • +ಯೆರೆ 39:10
  • +2ಪೂರ್ವ 34:20, 21; ಯೆರೆ 26:24
  • +2ಅರ 22:8
  • +2ಅರ 25:22

ಯೆರೆಮೀಯ 43:7

ಮಾರ್ಜಿನಲ್ ರೆಫರೆನ್ಸ್

  • +ಯೆರೆ 2:14, 16; 44:1; ಯೆಹೆ 30:4, 18

ಯೆರೆಮೀಯ 43:10

ಪಾದಟಿಪ್ಪಣಿ

  • *

    ಅಕ್ಷ. “ನೆಬೂಕದ್ರೆಚ್ಚರ.” ಆ ಹೆಸ್ರನ್ನ ಹೀಗೂ ಬರಿತಿದ್ರು.

ಮಾರ್ಜಿನಲ್ ರೆಫರೆನ್ಸ್

  • +ಯೆರೆ 25:9; 27:6; ಯೆಹೆ 29:19, 20
  • +ದಾನಿ 2:21; 5:18

ಯೆರೆಮೀಯ 43:11

ಮಾರ್ಜಿನಲ್ ರೆಫರೆನ್ಸ್

  • +ಯೆರೆ 25:17, 19; 46:13; ಯೆಹೆ 29:19; 30:4, 18
  • +ಯೆರೆ 44:13; ಯೆಹೆ 5:12

ಯೆರೆಮೀಯ 43:12

ಪಾದಟಿಪ್ಪಣಿ

  • *

    ಅಕ್ಷ. “ಶಾಂತಿಯಿಂದ.”

ಮಾರ್ಜಿನಲ್ ರೆಫರೆನ್ಸ್

  • +ಯೆರೆ 46:25

ಯೆರೆಮೀಯ 43:13

ಪಾದಟಿಪ್ಪಣಿ

  • *

    ಅಥವಾ “ಸೂರ್ಯನ ಮನೆ (ದೇವಸ್ಥಾನ)” ಅಂದ್ರೆ ಹಿಲಿಯೋಪೊಲಿಸ್‌.

  • *

    ಅಥವಾ “ಸ್ಮಾರಕ ಕಂಬಗಳನ್ನ.”

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಯೆರೆ. 43:2ಯೆರೆ 41:16; 42:1-3
ಯೆರೆ. 43:3ಯೆರೆ 36:4; 45:1
ಯೆರೆ. 43:3ಯೆರೆ 38:4, 6
ಯೆರೆ. 43:5ಯೆರೆ 40:11, 12
ಯೆರೆ. 43:6ಯೆರೆ 39:10
ಯೆರೆ. 43:62ಪೂರ್ವ 34:20, 21; ಯೆರೆ 26:24
ಯೆರೆ. 43:62ಅರ 22:8
ಯೆರೆ. 43:62ಅರ 25:22
ಯೆರೆ. 43:7ಯೆರೆ 2:14, 16; 44:1; ಯೆಹೆ 30:4, 18
ಯೆರೆ. 43:10ಯೆರೆ 25:9; 27:6; ಯೆಹೆ 29:19, 20
ಯೆರೆ. 43:10ದಾನಿ 2:21; 5:18
ಯೆರೆ. 43:11ಯೆರೆ 25:17, 19; 46:13; ಯೆಹೆ 29:19; 30:4, 18
ಯೆರೆ. 43:11ಯೆರೆ 44:13; ಯೆಹೆ 5:12
ಯೆರೆ. 43:12ಯೆರೆ 46:25
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಯೆರೆಮೀಯ 43:1-13

ಯೆರೆಮೀಯ

43 ಎಲ್ಲ ಜನ್ರಿಗೆ ತಿಳಿಸಬೇಕು ಅಂತ ಯೆಹೋವ ದೇವರು ಹೇಳಿದ ಎಲ್ಲ ಮಾತನ್ನ ಯೆರೆಮೀಯ ಅವ್ರಿಗೆ ಹೇಳಿದ. ಅವ್ರ ದೇವರಾದ ಯೆಹೋವ ಹೇಳಿದ ಮಾತನ್ನೆಲ್ಲ ಒಂದನ್ನೂ ಬಿಡ್ದೆ ಎಲ್ಲವನ್ನ ಯೆರೆಮೀಯ ಅವ್ರಿಗೆ ಹೇಳಿದ. 2 ಆಮೇಲೆ ಹೋಷಾಯನ ಮಗ ಅಜರ್ಯ, ಕಾರೇಹನ ಮಗ ಯೋಹಾನಾನ,+ ಅಹಂಕಾರಿಗಳಾದ ಎಲ್ಲ ಗಂಡಸರು ಯೆರೆಮೀಯನಿಗೆ “ಇಲ್ಲ, ನೀನು ಹೇಳ್ತಿರೋದೆಲ್ಲ ಸುಳ್ಳು! ‘ಈಜಿಪ್ಟಿಗೆ ಹೋಗಿ ವಾಸ ಮಾಡಬೇಡಿ’ ಅಂತ ನಮ್ಮ ದೇವರಾದ ಯೆಹೋವ ನಿನಗೆ ಹೇಳಲಿಲ್ಲ. 3 ನಮ್ಮ ಹತ್ರ ಈ ರೀತಿ ಹೇಳಬೇಕು ಅಂತ ನೇರೀಯನ ಮಗ ಬಾರೂಕನೇ+ ನಿನಗೆ ಹೇಳ್ಕೊಟ್ಟಿದ್ದಾನೆ. ಹೇಗಾದ್ರೂ ಮಾಡಿ ನಮ್ಮನ್ನ ಕಸ್ದೀಯರ ಕೈಗೆ ಒಪ್ಪಿಸಬೇಕು, ನಮ್ಮನ್ನ ಸಾಯಿಸಬೇಕು ಅಥವಾ ಬಾಬೆಲಿಗೆ ನಾವು ಕೈದಿಯಾಗಿ ಹೋಗಬೇಕು ಅನ್ನೋ ಉದ್ದೇಶದಿಂದನೇ ಅವನು ಹೀಗೆ ಮಾಡಿದ್ದಾನೆ”+ ಅಂದ್ರು.

4 ಯೆಹೂದ ದೇಶದಲ್ಲೇ ಇರಬೇಕು ಅಂತ ಯೆಹೋವ ಹೇಳಿದ್ರೂ ಕಾರೇಹನ ಮಗ ಯೋಹಾನಾನ, ಎಲ್ಲ ಸೇನಾಪತಿಗಳು, ಎಲ್ಲ ಜನ್ರು ಆತನ ಮಾತು ಕೇಳಲಿಲ್ಲ. 5 ಕಾರೇಹನ ಮಗ ಯೋಹಾನಾನ, ಎಲ್ಲ ಸೇನಾಪತಿಗಳು ಯೆಹೂದದಲ್ಲಿ ಉಳಿದಿದ್ದ ಜನ್ರನ್ನ ತಮ್ಮ ಜೊತೆ ಕರ್ಕೊಂಡು ಹೋದ್ರು. ಈ ಜನ್ರು ಬೇರೆ ಬೇರೆ ದೇಶಗಳಿಂದ ಚದರಿಹೋಗಿ ಯೆಹೂದದಲ್ಲಿ ವಾಸಿಸೋಕೆ ವಾಪಸ್‌ ಬಂದಿದ್ದ ಜನ್ರು.+ 6 ಕಾವಲುಗಾರರ ಮುಖ್ಯಸ್ಥನಾದ ನೆಬೂಜರದಾನ+ ಅಹೀಕಾಮನ+ ಮಗ ಶಾಫಾನನ+ ಮೊಮ್ಮಗ ಆದ ಗೆದಲ್ಯನ+ ಕೈಗೆ ಒಪ್ಪಿಸಿದ್ದ ಗಂಡಸ್ರನ್ನ, ಹೆಂಗಸ್ರನ್ನ, ಮಕ್ಕಳನ್ನ, ರಾಜಕುಮಾರಿಯರನ್ನ, ಬೇರೆ ಜನ್ರನ್ನೆಲ್ಲ ಕರ್ಕೊಂಡು ಹೋದ್ರು. ಜೊತೆಗೆ ಪ್ರವಾದಿ ಯೆರೆಮೀಯನನ್ನ ನೇರೀಯನ ಮಗ ಬಾರೂಕನನ್ನ ಕರ್ಕೊಂಡು ಹೋದ್ರು. 7 ಅವರು ಯೆಹೋವನ ಮಾತು ಕೇಳ್ದೆ ಈಜಿಪ್ಟ್‌ ದೇಶದ ತಹಪನೇಸ್‌+ ಅನ್ನೋ ಜಾಗದ ತನಕ ಹೋದ್ರು.

8 ಆಮೇಲೆ ತಹಪನೇಸಲ್ಲಿ ಯೆಹೋವ ಯೆರೆಮೀಯನಿಗೆ ಹೀಗೆ ಹೇಳಿದನು 9 “ನೀನು ಕೈಯಲ್ಲಿ ದೊಡ್ಡ ದೊಡ್ಡ ಕಲ್ಲುಗಳನ್ನ ತಗೊ. ಅವುಗಳನ್ನ ತಹಪನೇಸಲ್ಲಿರೋ ಫರೋಹನ ಮನೆಯ ಪ್ರವೇಶಸ್ಥಳದ ಹತ್ರ ಇರೋ ಇಟ್ಟಿಗೆಯಿಂದ ಮಾಡಿದ ದಾರಿ ಒಳಗೆ ಬಚ್ಚಿಟ್ಟು ಅದನ್ನ ಗಾರೆಯಿಂದ ಮುಚ್ಚು. ಇದನ್ನೆಲ್ಲ ನೀನು ಯೆಹೂದಿ ಗಂಡಸ್ರ ಕಣ್ಮುಂದೆನೇ ಮಾಡು. 10 ಅವ್ರಿಗೆ ಹೀಗೆ ಹೇಳು ‘ಸೈನ್ಯಗಳ ದೇವರಾದ ಇಸ್ರಾಯೇಲಿನ ದೇವರಾದ ಯೆಹೋವ ಹೇಳೋದು ಏನಂದ್ರೆ “ಬಾಬೆಲಿನ ರಾಜ ನನ್ನ ಸೇವಕ ಆದ ನೆಬೂಕದ್ನೆಚ್ಚರನನ್ನ* ನಾನು ಕರಿಸ್ತೀನಿ.+ ನಾನು ಬಚ್ಚಿಟ್ಟ ಈ ಕಲ್ಲುಗಳ ಮೇಲೆ ಅವನ ಸಿಂಹಾಸನ ಇಡ್ತೀನಿ. ಅವನು ತನ್ನ ರಾಜವೈಭವದ ಡೇರೆಯನ್ನ ಅವುಗಳ ಮೇಲೆ ಹರಡ್ತಾನೆ.+ 11 ಅವನು ಬಂದು ಈಜಿಪ್ಟ್‌ ದೇಶದ ಮೇಲೆ ದಾಳಿ ಮಾಡ್ತಾನೆ.+ ಮಾರಕ ರೋಗದಿಂದ ಸಾಯಬೇಕಾದವರು ಮಾರಕ ರೋಗದಿಂದ ಸಾಯ್ತಾರೆ, ಕೈದಿಯಾಗಿ ಹೋಗಬೇಕಾದವರು ಕೈದಿಯಾಗಿ ಹೋಗ್ತಾರೆ, ಕತ್ತಿಯಿಂದ ಸಾಯಬೇಕಾದವರು ಕತ್ತಿಯಿಂದ ಸಾಯ್ತಾರೆ.+ 12 ನಾನು ಈಜಿಪ್ಟ್‌ ದೇವರುಗಳ ದೇವಸ್ಥಾನಗಳಿಗೆ ಬೆಂಕಿ ಹಚ್ತೀನಿ.+ ಬಾಬೆಲಿನ ರಾಜ ಅವುಗಳನ್ನ ಸುಟ್ಟುಬಿಟ್ಟು ಆ ದೇವರುಗಳನ್ನ ಸೆರೆಹಿಡ್ಕೊಂಡು ಹೋಗ್ತಾನೆ. ಕುರುಬ ತನ್ನ ಬಟ್ಟೆಯನ್ನ ತನಗೆ ಸುತ್ಕೊಳ್ಳೋ ತರ ಆ ರಾಜ ಈಜಿಪ್ಟ್‌ ದೇಶವನ್ನ ತನಗೆ ಸುತ್ಕೊಂಡು ಅಲ್ಲಿಂದ ಸುರಕ್ಷಿತವಾಗಿ* ಹೋಗಿಬಿಡ್ತಾನೆ. 13 ಅಷ್ಟೇ ಅಲ್ಲ ಅವನು ಈಜಿಪ್ಟ್‌ ದೇಶದಲ್ಲಿರೋ ಬೇತ್‌-ಷೆಮೆಷಿನ* ಕಂಬಗಳನ್ನ* ತುಂಡು ತುಂಡು ಮಾಡ್ತಾನೆ. ಈಜಿಪ್ಟ್‌ ದೇವರುಗಳ ದೇವಸ್ಥಾನಗಳನ್ನ ಬೆಂಕಿಯಿಂದ ಸುಟ್ಟುಬಿಡ್ತಾನೆ.”’”

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ