ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ನ್ಯಾಯಸ್ಥಾಪಕರು 18
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ನ್ಯಾಯಸ್ಥಾಪಕರು ಮುಖ್ಯಾಂಶಗಳು

      • ದಾನ್‌ ಕುಲದವರು ವಾಸಕ್ಕೆ ಜಾಗ ಹುಡುಕಿದ್ರು (1-31)

        • ಮೀಕನ ಮೂರ್ತಿಗಳನ್ನ, ಪುರೋಹಿತನನ್ನ ಕರ್ಕೊಂಡು ಹೋದ್ರು (14-20)

        • ಲಯಿಷನ್ನ ವಶ ಮಾಡ್ಕೊಂಡು ದಾನ್‌ ಅಂತ ಹೆಸ್ರಿಟ್ರು (27-29)

        • ದಾನಿನಲ್ಲಿ ಮೂರ್ತಿಪೂಜೆ (30, 31)

ನ್ಯಾಯಸ್ಥಾಪಕರು 18:1

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 8:23; 1ಸಮು 8:4, 5
  • +ಯೆಹೋ 19:40
  • +ಯೆಹೋ 19:47, 48; ನ್ಯಾಯ 1:34

ನ್ಯಾಯಸ್ಥಾಪಕರು 18:2

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 19:41, 48
  • +ನ್ಯಾಯ 17:1, 5

ನ್ಯಾಯಸ್ಥಾಪಕರು 18:3

ಪಾದಟಿಪ್ಪಣಿ

  • *

    ಅಥವಾ “ಮಾತಾಡೋ ಶೈಲಿ.”

ನ್ಯಾಯಸ್ಥಾಪಕರು 18:4

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 17:9, 10

ನ್ಯಾಯಸ್ಥಾಪಕರು 18:7

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 19:47, 48; ನ್ಯಾಯ 18:29
  • +ನ್ಯಾಯ 18:27

ನ್ಯಾಯಸ್ಥಾಪಕರು 18:8

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 15:20, 33; ನ್ಯಾಯ 18:2

ನ್ಯಾಯಸ್ಥಾಪಕರು 18:10

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 18:7, 27
  • +ವಿಮೋ 3:8; ಧರ್ಮೋ 8:7-9

ನ್ಯಾಯಸ್ಥಾಪಕರು 18:11

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 18:2

ನ್ಯಾಯಸ್ಥಾಪಕರು 18:12

ಪಾದಟಿಪ್ಪಣಿ

  • *

    ಅರ್ಥ “ದಾನಿನ ಪಾಳೆಯ.”

ಮಾರ್ಜಿನಲ್ ರೆಫರೆನ್ಸ್

  • +1ಸಮು 7:1
  • +ನ್ಯಾಯ 13:24, 25

ನ್ಯಾಯಸ್ಥಾಪಕರು 18:13

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 17:1, 5

ನ್ಯಾಯಸ್ಥಾಪಕರು 18:14

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 18:2, 29
  • +ಧರ್ಮೋ 27:15; ನ್ಯಾಯ 17:4, 5

ನ್ಯಾಯಸ್ಥಾಪಕರು 18:15

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 17:7, 12; 18:30

ನ್ಯಾಯಸ್ಥಾಪಕರು 18:16

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 18:11

ನ್ಯಾಯಸ್ಥಾಪಕರು 18:17

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 18:2
  • +ವಿಮೋ 28:6; ನ್ಯಾಯ 8:27
  • +ಆದಿ 31:19
  • +ಯಾಜ 19:4; ಧರ್ಮೋ 27:15; ನ್ಯಾಯ 17:3-5
  • +ನ್ಯಾಯ 17:12

ನ್ಯಾಯಸ್ಥಾಪಕರು 18:19

ಪಾದಟಿಪ್ಪಣಿ

  • *

    ಅಕ್ಷ. “ತಂದೆ.”

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 17:12
  • +ನ್ಯಾಯ 18:30

ನ್ಯಾಯಸ್ಥಾಪಕರು 18:20

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 17:4, 5

ನ್ಯಾಯಸ್ಥಾಪಕರು 18:27

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 19:47, 48; ನ್ಯಾಯ 18:29
  • +ನ್ಯಾಯ 18:7, 10

ನ್ಯಾಯಸ್ಥಾಪಕರು 18:28

ಮಾರ್ಜಿನಲ್ ರೆಫರೆನ್ಸ್

  • +ಅರ 13:17, 21

ನ್ಯಾಯಸ್ಥಾಪಕರು 18:29

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 19:47, 48; ನ್ಯಾಯ 20:1; 1ಅರ 4:25; 12:28, 29
  • +ಆದಿ 30:6; 32:28
  • +ನ್ಯಾಯ 18:7

ನ್ಯಾಯಸ್ಥಾಪಕರು 18:30

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 17:1, 4; 18:18
  • +ವಿಮೋ 2:21, 22
  • +ನ್ಯಾಯ 17:12

ನ್ಯಾಯಸ್ಥಾಪಕರು 18:31

ಮಾರ್ಜಿನಲ್ ರೆಫರೆನ್ಸ್

  • +ವಿಮೋ 40:2; ಯೆಹೋ 18:1; 1ಸಮು 1:3

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ನ್ಯಾಯ. 18:1ನ್ಯಾಯ 8:23; 1ಸಮು 8:4, 5
ನ್ಯಾಯ. 18:1ಯೆಹೋ 19:40
ನ್ಯಾಯ. 18:1ಯೆಹೋ 19:47, 48; ನ್ಯಾಯ 1:34
ನ್ಯಾಯ. 18:2ಯೆಹೋ 19:41, 48
ನ್ಯಾಯ. 18:2ನ್ಯಾಯ 17:1, 5
ನ್ಯಾಯ. 18:4ನ್ಯಾಯ 17:9, 10
ನ್ಯಾಯ. 18:7ಯೆಹೋ 19:47, 48; ನ್ಯಾಯ 18:29
ನ್ಯಾಯ. 18:7ನ್ಯಾಯ 18:27
ನ್ಯಾಯ. 18:8ಯೆಹೋ 15:20, 33; ನ್ಯಾಯ 18:2
ನ್ಯಾಯ. 18:10ನ್ಯಾಯ 18:7, 27
ನ್ಯಾಯ. 18:10ವಿಮೋ 3:8; ಧರ್ಮೋ 8:7-9
ನ್ಯಾಯ. 18:11ನ್ಯಾಯ 18:2
ನ್ಯಾಯ. 18:121ಸಮು 7:1
ನ್ಯಾಯ. 18:12ನ್ಯಾಯ 13:24, 25
ನ್ಯಾಯ. 18:13ನ್ಯಾಯ 17:1, 5
ನ್ಯಾಯ. 18:14ನ್ಯಾಯ 18:2, 29
ನ್ಯಾಯ. 18:14ಧರ್ಮೋ 27:15; ನ್ಯಾಯ 17:4, 5
ನ್ಯಾಯ. 18:15ನ್ಯಾಯ 17:7, 12; 18:30
ನ್ಯಾಯ. 18:16ನ್ಯಾಯ 18:11
ನ್ಯಾಯ. 18:17ನ್ಯಾಯ 18:2
ನ್ಯಾಯ. 18:17ವಿಮೋ 28:6; ನ್ಯಾಯ 8:27
ನ್ಯಾಯ. 18:17ಆದಿ 31:19
ನ್ಯಾಯ. 18:17ಯಾಜ 19:4; ಧರ್ಮೋ 27:15; ನ್ಯಾಯ 17:3-5
ನ್ಯಾಯ. 18:17ನ್ಯಾಯ 17:12
ನ್ಯಾಯ. 18:19ನ್ಯಾಯ 17:12
ನ್ಯಾಯ. 18:19ನ್ಯಾಯ 18:30
ನ್ಯಾಯ. 18:20ನ್ಯಾಯ 17:4, 5
ನ್ಯಾಯ. 18:27ಯೆಹೋ 19:47, 48; ನ್ಯಾಯ 18:29
ನ್ಯಾಯ. 18:27ನ್ಯಾಯ 18:7, 10
ನ್ಯಾಯ. 18:28ಅರ 13:17, 21
ನ್ಯಾಯ. 18:29ಯೆಹೋ 19:47, 48; ನ್ಯಾಯ 20:1; 1ಅರ 4:25; 12:28, 29
ನ್ಯಾಯ. 18:29ಆದಿ 30:6; 32:28
ನ್ಯಾಯ. 18:29ನ್ಯಾಯ 18:7
ನ್ಯಾಯ. 18:30ನ್ಯಾಯ 17:1, 4; 18:18
ನ್ಯಾಯ. 18:30ವಿಮೋ 2:21, 22
ನ್ಯಾಯ. 18:30ನ್ಯಾಯ 17:12
ನ್ಯಾಯ. 18:31ವಿಮೋ 40:2; ಯೆಹೋ 18:1; 1ಸಮು 1:3
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
  • 31
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ನ್ಯಾಯಸ್ಥಾಪಕರು 18:1-31

ನ್ಯಾಯಸ್ಥಾಪಕರು

18 ಆ ಕಾಲದಲ್ಲಿ ಇಸ್ರಾಯೇಲಲ್ಲಿ ರಾಜ ಇರಲಿಲ್ಲ.+ ಆಗ ದಾನ್‌ ಕುಲದವರು+ ವಾಸಿಸೋಕೆ ಜಾಗ ಹುಡುಕ್ತಾ ಇದ್ರು. ಯಾಕಂದ್ರೆ ಇಸ್ರಾಯೇಲ್‌ ಕುಲಗಳ ಮಧ್ಯ ಅವ್ರಿಗೆ ಸಾಕಷ್ಟು ಆಸ್ತಿ ಸಿಕ್ಕಿರಲಿಲ್ಲ.+

2 ದಾನ್‌ ಕುಲದವರು ದೇಶನ ಗೂಢಚಾರಿಕೆ ಮಾಡಿ ಅದನ್ನ ಪರೀಕ್ಷಿಸೋಕೆ ತಮ್ಮ ಕಡೆಯಿಂದ ಐದು ಸಮರ್ಥ ಗಂಡಸ್ರನ್ನ ಆರಿಸಿ ಕಳಿಸಿದ್ರು. ಆ ಗಂಡಸ್ರು ಚೊರ್ಗ ಮತ್ತು ಎಷ್ಟಾವೋಲಿನ+ ಜನ್ರು. ದಾನ್‌ ಕುಲದವರು ಅವ್ರಿಗೆ “ಹೋಗಿ ದೇಶ ನೋಡ್ಕೊಂಡು ಬನ್ನಿ” ಅಂದ್ರು. ಅವರು ಅಲ್ಲಿಂದ ಹೊರಟು ಎಫ್ರಾಯೀಮ್‌ ಬೆಟ್ಟ ಪ್ರದೇಶದಲ್ಲಿದ್ದ ಮೀಕನ+ ಮನೆಗೆ ಬಂದು ಆ ರಾತ್ರಿ ಅಲ್ಲೇ ಉಳ್ಕೊಂಡ್ರು. 3 ಅವರು ಮೀಕನ ಮನೆ ಹತ್ರ ಇದ್ದಾಗ ಆ ಯುವ ಲೇವಿಯ ಸ್ವರ* ಕಂಡುಹಿಡಿದು ಅವನ ಹತ್ರ “ನಿನ್ನನ್ನ ಯಾರು ಇಲ್ಲಿಗೆ ಕರ್ಕೊಂಡು ಬಂದ್ರು? ನೀನು ಇಲ್ಲೇನು ಮಾಡ್ತಿದ್ದೀಯ? ನೀನು ಇಲ್ಲಿದ್ರೆ ಏನು ಸಿಗುತ್ತೆ?” ಅಂತ ಕೇಳಿದ್ರು. 4 ಅದಕ್ಕೆ ಅವನು, ಮೀಕ ತನಗೆ ಮಾಡಿದ್ದನ್ನ ಹೇಳ್ತಾ “ಅವನಿಗೋಸ್ಕರ ನಾನು ಪುರೋಹಿತನಾಗಿ ಸೇವೆ ಮಾಡ್ತೀನಿ, ಅವನು ಸಂಬಳ ಕೊಡ್ತಾನೆ”+ ಅಂದ. 5 ಆಮೇಲೆ ಅವರು “ನಾವು ಬಂದ ಕೆಲಸ ಆಗುತ್ತಾ ಇಲ್ವಾ ಅಂತ ದಯವಿಟ್ಟು ದೇವ್ರನ್ನ ಕೇಳು” ಅಂದ್ರು. 6 ಅದಕ್ಕೆ ಆ ಪುರೋಹಿತ “ಸಮಾಧಾನದಿಂದ ಹೋಗಿ, ಯೆಹೋವ ನಿಮ್ಮ ಜೊತೆ ಇದ್ದಾನೆ” ಅಂದ.

7 ಆ ಐದು ಗಂಡಸ್ರು ಪ್ರಯಾಣ ಮಾಡ್ತಾ ಲಯಿಷಿಗೆ+ ಬಂದ್ರು. ಅಲ್ಲಿನ ಜನ ಸೀದೋನ್ಯರ ತರಾನೇ ಯಾರ ಮೇಲೂ ಭಾರ ಹಾಕದೆ ವಾಸಿಸ್ತಾ ಇರೋದನ್ನ ಅವರು ನೋಡಿದ್ರು. ಆ ಜನ್ರು ಪ್ರಶಾಂತವಾಗಿ, ನಿರ್ಭಯದಿಂದ ಇದ್ರು.+ ಅವ್ರ ಮೇಲೆ ದಬ್ಬಾಳಿಕೆ ಮಾಡೋಕೆ ಯಾವ ಅಧಿಕಾರಿನೂ ಇರಲಿಲ್ಲ. ಅವರು ಸೀದೋನ್‌ ಜನ್ರಿಂದ ತುಂಬ ದೂರದಲ್ಲಿದ್ರು, ಯಾರ ಜೊತೆನೂ ಯಾವ ವ್ಯವಹಾರನೂ ಮಾಡ್ತಿರಲಿಲ್ಲ.

8 ಆ ಐದು ಗಂಡಸ್ರು ಚೊರ್ಗ ಮತ್ತು ಎಷ್ಟಾವೋಲಿನಲ್ಲಿದ್ದ+ ತಮ್ಮ ಸಹೋದರರ ಹತ್ರ ವಾಪಸ್‌ ಬಂದಾಗ “ಹೋದ ಕೆಲಸ ಏನಾಯ್ತು?” ಅಂತ ಕೇಳಿದ್ರು. 9 ಅವರು “ಆ ದೇಶ ತುಂಬ ಚೆನ್ನಾಗಿದೆ. ಅದ್ರ ಮೇಲೆ ದಾಳಿ ಮಾಡೋಣ. ನೀವು ಯಾಕೆ ಹಿಂಜರಿತಾ ಇದ್ದೀರ? ಬನ್ನಿ ಬೇಗ ಆ ದೇಶಕ್ಕೆ ಹೋಗಿ ಅದನ್ನ ವಶ ಮಾಡ್ಕೊಳ್ಳೋಣ. 10 ನೀವೇ ಅಲ್ಲಿಗೆ ಬಂದು ನೋಡಿ. ಅಲ್ಲಿ ಜನ್ರು ಭಯ ಇಲ್ಲದೆ ಜೀವಿಸ್ತಾ ಇದ್ದಾರೆ,+ ಆ ದೇಶ ವಿಶಾಲವಾಗಿ ಇದೆ. ದೇವರು ಅದನ್ನ ನಿಮ್ಮ ಕೈಗೆ ಒಪ್ಪಿಸಿದ್ದಾನೆ. ಅಲ್ಲಿ ಯಾವುದಕ್ಕೂ ಕೊರತೆ ಇಲ್ಲ”+ ಅಂದ್ರು.

11 ಆಮೇಲೆ ದಾನ್‌ ಕುಲದಿಂದ 600 ಗಂಡಸ್ರು ಆಯುಧಗಳನ್ನ ತಗೊಂಡು ಯುದ್ಧ ಮಾಡೋಕೆ ಚೊರ್ಗ ಮತ್ತು ಎಷ್ಟಾವೋಲಿನಿಂದ+ ಹೊರಟ್ರು. 12 ಅವರು ಹೋಗಿ ಯೆಹೂದದ ಕಿರ್ಯತ್‌-ಯಾರೀಮಿನಲ್ಲಿ+ ಪಾಳೆಯ ಹಾಕಿದ್ರು. ಅದಕ್ಕೆ ಆ ಜಾಗನ ಇವತ್ತಿಗೂ ಮಾಹಾನೆಹದಾನ*+ ಅಂತ ಕರಿತಾರೆ. ಅದು ಕಿರ್ಯತ್‌-ಯಾರೀಮಿನ ಪಶ್ಚಿಮದಲ್ಲಿದೆ. 13 ಅವರು ಅಲ್ಲಿಂದ ಹೊರಟು ಎಫ್ರಾಯೀಮ್‌ ಬೆಟ್ಟ ಪ್ರದೇಶಕ್ಕೆ ಬಂದು ಮೀಕನ+ ಮನೆಗೆ ಹೋದ್ರು.

14 ಆಗ ಗೂಢಚಾರಿಕೆ ಮಾಡೋಕೆ ಲಯಿಷಿಗೆ+ ಹೋಗಿದ್ದ ಐದು ಗಂಡಸ್ರು ತಮ್ಮ ಸಹೋದರರಿಗೆ “ಈ ಮನೇಲಿ ಏಫೋದ್‌, ಮನೆದೇವರ ಮೂರ್ತಿಗಳು, ಕೆತ್ತಿದ ಮೂರ್ತಿ, ಲೋಹದ ಮೂರ್ತಿ ಇರೋ ವಿಷ್ಯ ನಿಮಗೆ ಗೊತ್ತಾ?+ ಏನು ಮಾಡಬೇಕಂತ ನೀವೇ ಯೋಚನೆ ಮಾಡಿ” ಅಂದ್ರು. 15 ಹಾಗಾಗಿ ಅವರು ಅಲ್ಲಿಗೇ ಪ್ರಯಾಣ ನಿಲ್ಲಿಸಿ ಮೀಕನ ಮನೆ ಹತ್ರ ಇದ್ದ ಲೇವಿಯ+ ಮನೆಗೆ ಬಂದು ಅವನು ಹೇಗಿದ್ದಾನೆ ಅಂತ ಕೇಳಿದ್ರು. 16 ಆಗ ಆಯುಧಗಳಿದ್ದ 600 ಗಂಡಸ್ರು+ ಬಾಗಿಲ ಹತ್ರ ನಿಂತಿದ್ರು. 17 ದೇಶನ ಗೂಢಚಾರಿಕೆ ಮಾಡೋಕೆ ಹೋಗಿದ್ದ ಐದು ಜನ+ ಏಫೋದನ್ನ,+ ಮನೆದೇವರ ಮೂರ್ತಿಗಳನ್ನ,+ ಕೆತ್ತಿದ ಮೂರ್ತಿನ, ಲೋಹದ ಮೂರ್ತಿನ+ ತಗೊಳ್ಳೋಕೆ ಒಳಗೆ ಹೋದ್ರು. (ಪುರೋಹಿತ+ ಆಗ ಆಯುಧಗಳಿದ್ದ 600 ಜನ್ರ ಜೊತೆ ಬಾಗಿಲ ಹತ್ರ ನಿಂತಿದ್ದ.) 18 ಅವರು ಮೀಕನ ಮನೆಯೊಳಗೆ ಹೋಗಿ ಏಫೋದನ್ನ, ಮನೆದೇವರ ಮೂರ್ತಿಗಳನ್ನ, ಕೆತ್ತಿದ ಮೂರ್ತಿನ, ಲೋಹದ ಮೂರ್ತಿನ ತಗೊಂಡ್ರು. ಪುರೋಹಿತ ಅವ್ರಿಗೆ “ಏನು ಮಾಡ್ತಿದ್ದೀರಾ?” ಅಂತ ಕೇಳಿದ. 19 ಅದಕ್ಕವರು “ಸುಮ್ನಿರು. ಮಾತಾಡಬೇಡ. ನಮ್ಮ ಜೊತೆ ಬಂದು ನಮಗೆ ಸಲಹೆಗಾರನಾಗಿ,* ಪುರೋಹಿತನಾಗಿ ಇರು. ನಿನಗೆ ಯಾವುದು ಒಳ್ಳೇದು? ಒಬ್ಬನ ಮನೆಗೆ ಪುರೋಹಿತನಾಗಿ ಇರೋದಾ?+ ಅಥವಾ ಇಸ್ರಾಯೇಲಿನ ಒಂದು ಕುಲಕ್ಕೆ, ಒಂದು ಕುಟುಂಬಕ್ಕೆ ಪುರೋಹಿತನಾಗಿ ಇರೋದಾ?”+ ಅಂತ ಕೇಳಿದ್ರು. 20 ಆ ಮಾತು ಕೇಳಿ ಪುರೋಹಿತನಿಗೆ ಖುಷಿ ಆಯ್ತು. ಹಾಗಾಗಿ ಅವನು ಏಫೋದನ್ನ, ಮನೆದೇವರ ಮೂರ್ತಿಗಳನ್ನ, ಕೆತ್ತಿದ ಮೂರ್ತಿನ+ ತಗೊಂಡು ಅವ್ರ ಜೊತೆ ಹೋದ.

21 ಅವರು ತಮ್ಮ ಮಕ್ಕಳನ್ನ, ಪ್ರಾಣಿಗಳನ್ನ, ಅಮೂಲ್ಯ ವಸ್ತುಗಳನ್ನ ತಮಗಿಂತ ಮುಂಚೆ ಕಳಿಸಿ ಅವ್ರೂ ಪ್ರಯಾಣ ಮುಂದುವರಿಸಿದ್ರು. 22 ದಾನ್‌ ಕುಲದವರು ಮೀಕನ ಮನೆಯಿಂದ ಸ್ವಲ್ಪ ದೂರ ಹೋದಾಗ ಮೀಕ ತನ್ನ ಅಕ್ಕಪಕ್ಕದವ್ರನ್ನ ಒಂದು ಕಡೆ ಒಟ್ಟುಸೇರಿಸಿದ. ಆಮೇಲೆ ದಾನ್‌ ಕುಲದವ್ರ ಹಿಂದೆನೇ ಹೋದ್ರು. 23 ಅವರು ದಾನ್‌ ಕುಲದವ್ರನ್ನ ಕೂಗಿ ಕರೆದಾಗ ಅವರು ಹಿಂದೆ ತಿರುಗಿ ಮೀಕನಿಗೆ “ಏನು ವಿಷ್ಯ? ಯಾಕೆ ಗುಂಪು ಕಟ್ಕೊಂಡು ಬಂದಿದ್ದೀಯಾ?” ಅಂತ ಕೇಳಿದ್ರು. 24 ಆಗ ಮೀಕ “ನಾನು ಮಾಡಿಸಿದ ದೇವರುಗಳನ್ನ ನೀವು ತಗೊಂಡಿದ್ದೀರ. ನನ್ನ ಪುರೋಹಿತನನ್ನೂ ಕರ್ಕೊಂಡು ಹೋಗ್ತಾ ಇದ್ದೀರ. ಎಲ್ಲ ಲೂಟಿ ಮಾಡಿ ನನಗೇ ‘ಏನ್‌ ವಿಷ್ಯ’ ಅಂತ ಕೇಳ್ತೀರಾ?” ಅಂದ. 25 ಅದಕ್ಕೆ ದಾನ್‌ ಕುಲದವರು “ನಮ್ಮ ಮೇಲೆ ಕಿರಿಚಾಡಬೇಡ. ನಮ್‌ ಜನ್ರಿಗೆ ಸಿಟ್ಟು ಬಂದ್ರೆ ನಿನ್ನನ್ನ ಸುಮ್ನೆ ಬಿಡಲ್ಲ. ನಿನ್ನ, ನಿನ್ನ ಕುಟುಂಬದವ್ರನ್ನ ಸಾಯಿಸಿಬಿಡ್ತಾರೆ” ಅಂದ್ರು. 26 ಅವರು ತನಗಿಂತ ಬಲಿಷ್ಠರಾಗಿ ಇರೋದನ್ನ ನೋಡಿ ಮೀಕ ಮನೆಗೆ ವಾಪಸ್‌ ಹೋದ. ಆಗ ದಾನ್‌ ಕುಲದವರು ತಮ್ಮ ದಾರಿ ಹಿಡಿದು ಹೋದ್ರು.

27 ಮೀಕ ಮಾಡಿಸಿದ್ದ ದೇವರುಗಳನ್ನ ಅವನ ಪುರೋಹಿತನನ್ನ ದಾನ್‌ ಕುಲದವರು ತಗೊಂಡು ಲಯಿಷಿಗೆ+ ಬಂದ್ರು. ಅಲ್ಲಿನ ಜನ ಪ್ರಶಾಂತವಾಗಿ, ಯಾವುದೇ ಭಯ ಇಲ್ಲದೆ ಜೀವನ ಮಾಡ್ತಿದ್ರು.+ ದಾನ್‌ ಕುಲದವರು ಆ ಪಟ್ಟಣದವರನ್ನ ಕತ್ತಿಯಿಂದ ಕೊಂದು ಪಟ್ಟಣನ ಸುಟ್ಟು ಹಾಕಿದ್ರು. 28 ಆ ಪಟ್ಟಣದ ಜನ್ರನ್ನ ಕಾಪಾಡೋಕೆ ಯಾರೂ ಇರಲಿಲ್ಲ. ಯಾಕಂದ್ರೆ ಅದು ಸೀದೋನಿಂದ ತುಂಬ ದೂರ ಇತ್ತು. ಅವರು ಯಾರ ಜೊತೆನೂ ವ್ಯವಹಾರ ಮಾಡ್ತಿರಲಿಲ್ಲ. ಅಷ್ಟೇ ಅಲ್ಲ ಆ ಪಟ್ಟಣ ಬೇತ್‌-ರೆಹೋಬಿಗೆ+ ಸೇರಿದ ಕಣಿವೆ ಬಯಲಲ್ಲಿ ಇತ್ತು. ಆಮೇಲೆ ದಾನ್‌ ಕುಲದವರು ಆ ಪಟ್ಟಣನ ಮತ್ತೆ ಕಟ್ಟಿ ಅಲ್ಲಿ ವಾಸಮಾಡಿದ್ರು. 29 ಆ ಪಟ್ಟಣಕ್ಕೆ ದಾನ್‌+ ಅಂತ ಹೆಸ್ರಿಟ್ರು. ದಾನ್‌ ಇಸ್ರಾಯೇಲನ ಮಗ.+ ಇವ್ರ ಪೂರ್ವಜ. ಆದ್ರೆ ಈ ಪಟ್ಟಣದ ಹೆಸ್ರು ಮುಂಚೆ ಲಯಿಷ್‌ ಅಂತ ಇತ್ತು.+ 30 ಆಮೇಲೆ ದಾನ್‌ ಕುಲದವರು ತಮಗೋಸ್ಕರ ಆ ಕೆತ್ತಿದ ಮೂರ್ತಿನ+ ಸ್ಥಾಪಿಸಿದ್ರು. ಮೋಶೆಯ ಮಗ ಗೇರ್ಷೋಮನ+ ವಂಶದಲ್ಲಿ ಹುಟ್ಟಿದ ಯೋನಾತಾನ+ ಮತ್ತು ಅವನ ವಂಶದವರು ದಾನ್‌ ಕುಲದವ್ರಿಗೆ ಪುರೋಹಿತರಾಗಿ ಕೆಲಸ ಮಾಡಿದ್ರು. ಹೀಗೆ ಆ ದೇಶದ ಜನ್ರನ್ನ ಕೈದಿಗಳಾಗಿ ಹಿಡ್ಕೊಂಡು ಹೋಗೋ ತನಕ ಇವರು ಪುರೋಹಿತರಾಗಿದ್ರು. 31 ಮೀಕ ಕೆತ್ತಿದ ಮೂರ್ತಿಯನ್ನ ಅವರು ಸ್ಥಾಪಿಸಿದ್ರು. ಸತ್ಯ ದೇವರ ಆಲಯ ಶೀಲೋನಲ್ಲಿ+ ಇದ್ದಷ್ಟು ದಿನ ಈ ಮೂರ್ತಿ ಅಲ್ಲೇ ಇತ್ತು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ