ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 2 ಪೂರ್ವಕಾಲವೃತ್ತಾಂತ 16
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

2 ಪೂರ್ವಕಾಲವೃತ್ತಾಂತ ಮುಖ್ಯಾಂಶಗಳು

      • ಆಸ ಅರಾಮ್ಯರ ಜೊತೆ ಮಾಡಿದ ಒಪ್ಪಂದ (1-6)

      • ಹನಾನೀ ಆಸನನ್ನ ಗದರಿಸಿದ (7-10)

      • ಆಸನ ಮರಣ (11-14)

2 ಪೂರ್ವಕಾಲವೃತ್ತಾಂತ 16:1

ಪಾದಟಿಪ್ಪಣಿ

  • *

    ಅಥವಾ “ಭದ್ರ ಮಾಡೋಕೆ, ಪುನಃ ಕಟ್ಟೋಕೆ.”

ಮಾರ್ಜಿನಲ್ ರೆಫರೆನ್ಸ್

  • +1ಅರ 15:25, 27
  • +ಯೆಹೋ 18:21, 25
  • +1ಅರ 15:17-19

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    8/15/2012, ಪು. 10

2 ಪೂರ್ವಕಾಲವೃತ್ತಾಂತ 16:2

ಮಾರ್ಜಿನಲ್ ರೆಫರೆನ್ಸ್

  • +1ಅರ 7:51
  • +1ಅರ 20:1; 2ಅರ 12:18; 16:8

2 ಪೂರ್ವಕಾಲವೃತ್ತಾಂತ 16:4

ಮಾರ್ಜಿನಲ್ ರೆಫರೆನ್ಸ್

  • +2ಅರ 15:29
  • +ನ್ಯಾಯ 18:29
  • +1ಅರ 15:20-22

2 ಪೂರ್ವಕಾಲವೃತ್ತಾಂತ 16:6

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 18:21, 25; 1ಅರ 15:17
  • +ಯೆಹೋ 18:21, 24; 1ಪೂರ್ವ 6:60, 64
  • +ಯೆಹೋ 18:21, 26; ನ್ಯಾಯ 20:1

2 ಪೂರ್ವಕಾಲವೃತ್ತಾಂತ 16:7

ಪಾದಟಿಪ್ಪಣಿ

  • *

    ಅಕ್ಷ. “ಒರಗಿಕೊಳ್ಳದೆ.”

ಮಾರ್ಜಿನಲ್ ರೆಫರೆನ್ಸ್

  • +1ಅರ 16:1; 2ಪೂರ್ವ 19:2; 20:34
  • +ಯೆರೆ 17:5

2 ಪೂರ್ವಕಾಲವೃತ್ತಾಂತ 16:8

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 14:9, 11; ಕೀರ್ತ 37:39, 40

2 ಪೂರ್ವಕಾಲವೃತ್ತಾಂತ 16:9

ಪಾದಟಿಪ್ಪಣಿ

  • *

    ಅಕ್ಷ. “ತನ್ನ ಶಕ್ತಿ ತೋರಿಸೋಕೆ.”

ಮಾರ್ಜಿನಲ್ ರೆಫರೆನ್ಸ್

  • +ಜೆಕ 4:10; 1ಪೇತ್ರ 3:12
  • +1ಅರ 15:32

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಯೆಹೋವನ ಸಮೀಪಕ್ಕೆ ಬನ್ನಿರಿ, ಪು. 43

    ಕಾವಲಿನಬುರುಜು,

    10/15/2002, ಪು. 14

2 ಪೂರ್ವಕಾಲವೃತ್ತಾಂತ 16:11

ಮಾರ್ಜಿನಲ್ ರೆಫರೆನ್ಸ್

  • +1ಅರ 15:23

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/15/2009, ಪು. 32

2 ಪೂರ್ವಕಾಲವೃತ್ತಾಂತ 16:12

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    8/15/2012, ಪು. 10

2 ಪೂರ್ವಕಾಲವೃತ್ತಾಂತ 16:13

ಮಾರ್ಜಿನಲ್ ರೆಫರೆನ್ಸ್

  • +1ಅರ 15:24

2 ಪೂರ್ವಕಾಲವೃತ್ತಾಂತ 16:14

ಪಾದಟಿಪ್ಪಣಿ

  • *

    ಇಲ್ಲಿ ಆಸನ ಶವ ಸುಡೋದರ ಬಗ್ಗೆ ಅಲ್ಲ, ಬದಲಿಗೆ ಮಸಾಲೆ ಪದಾರ್ಥ ಸುಟ್ಟಿದ್ದರ ಬಗ್ಗೆ ಹೇಳ್ತಿರಬೇಕು.

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 16:1; ಲೂಕ 23:55, 56; ಯೋಹಾ 19:40
  • +2ಸಮು 5:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    12/1/2005, ಪು. 20

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

2 ಪೂರ್ವ. 16:11ಅರ 15:25, 27
2 ಪೂರ್ವ. 16:1ಯೆಹೋ 18:21, 25
2 ಪೂರ್ವ. 16:11ಅರ 15:17-19
2 ಪೂರ್ವ. 16:21ಅರ 7:51
2 ಪೂರ್ವ. 16:21ಅರ 20:1; 2ಅರ 12:18; 16:8
2 ಪೂರ್ವ. 16:42ಅರ 15:29
2 ಪೂರ್ವ. 16:4ನ್ಯಾಯ 18:29
2 ಪೂರ್ವ. 16:41ಅರ 15:20-22
2 ಪೂರ್ವ. 16:6ಯೆಹೋ 18:21, 25; 1ಅರ 15:17
2 ಪೂರ್ವ. 16:6ಯೆಹೋ 18:21, 24; 1ಪೂರ್ವ 6:60, 64
2 ಪೂರ್ವ. 16:6ಯೆಹೋ 18:21, 26; ನ್ಯಾಯ 20:1
2 ಪೂರ್ವ. 16:71ಅರ 16:1; 2ಪೂರ್ವ 19:2; 20:34
2 ಪೂರ್ವ. 16:7ಯೆರೆ 17:5
2 ಪೂರ್ವ. 16:82ಪೂರ್ವ 14:9, 11; ಕೀರ್ತ 37:39, 40
2 ಪೂರ್ವ. 16:9ಜೆಕ 4:10; 1ಪೇತ್ರ 3:12
2 ಪೂರ್ವ. 16:91ಅರ 15:32
2 ಪೂರ್ವ. 16:111ಅರ 15:23
2 ಪೂರ್ವ. 16:131ಅರ 15:24
2 ಪೂರ್ವ. 16:14ಮಾರ್ಕ 16:1; ಲೂಕ 23:55, 56; ಯೋಹಾ 19:40
2 ಪೂರ್ವ. 16:142ಸಮು 5:7
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
2 ಪೂರ್ವಕಾಲವೃತ್ತಾಂತ 16:1-14

ಎರಡನೇ ಪೂರ್ವಕಾಲವೃತ್ತಾಂತ

16 ಆಸನ ಆಳ್ವಿಕೆಯ 36ನೇ ವರ್ಷದಲ್ಲಿ ಇಸ್ರಾಯೇಲ್‌ ರಾಜ ಬಾಷ+ ಯೆಹೂದದ ವಿರುದ್ಧ ಬಂದು ರಾಮ+ ಅನ್ನೋ ಕೋಟೆ ಕಟ್ಟೋಕೆ* ಶುರುಮಾಡಿದ. ಯೆಹೂದದ ರಾಜ ಆಸನ ಹತ್ರ ಯಾರೂ ಹೋಗಬಾರ್ದು ಮತ್ತು ಅಲ್ಲಿಂದ ಯಾರೂ ಬರಬಾರ್ದು ಅಂತ ಹೀಗೆ ಮಾಡಿದ.+ 2 ಆಗ ಆಸ ಯೆಹೋವನ ಆಲಯ ಮತ್ತು ರಾಜನ ಅರಮನೆಯಲ್ಲಿದ್ದ ನಿಕ್ಷೇಪಗಳಿಂದ ಚಿನ್ನಬೆಳ್ಳಿ+ ಎಲ್ಲ ತಗೊಂಡು ದಮಸ್ಕದಲ್ಲಿದ್ದ ಅರಾಮ್ಯ ರಾಜ ಬೆನ್ಹದದನಿಗೆ ಕಳಿಸಿಕೊಟ್ಟ.+ ಆಸ ಅವನಿಗೆ 3 “ನಿನ್ನ ಮತ್ತು ನನ್ನ ಮಧ್ಯ, ನಿನ್ನ ಅಪ್ಪ ಮತ್ತು ನನ್ನ ಅಪ್ಪನ ಮಧ್ಯ ಒಂದು ಒಪ್ಪಂದ ಇದೆ. ನಾನು ನಿನಗೆ ಚಿನ್ನ ಮತ್ತು ಬೆಳ್ಳಿಯನ್ನ ಕಳಿಸ್ತಿದ್ದೀನಿ. ನೀನು ಬಂದು, ಇಸ್ರಾಯೇಲ್‌ ರಾಜ ಬಾಷನ ಜೊತೆ ನೀನು ಮಾಡಿಕೊಂಡ ಒಪ್ಪಂದನ ಮುರಿದುಹಾಕು. ಆಗ ಅವನು ನನ್ನನ್ನ ಬಿಟ್ಟುಹೋಗ್ತಾನೆ” ಅಂತ ಹೇಳಿ ಕಳಿಸಿದ.

4 ಅದಕ್ಕೆ ಬೆನ್ಹದದ ಆಸನ ಮಾತನ್ನ ಕೇಳಿ ಇಸ್ರಾಯೇಲಿನ ಪಟ್ಟಣಗಳ ವಿರುದ್ಧ ತನ್ನ ಅಧಿಪತಿಗಳನ್ನ ಕಳಿಸಿದ. ಅವರು ಇಯ್ಯೋನ್‌,+ ದಾನ್‌,+ ಆಬೇಲ್‌-ಮಯಿಮ್‌ ಮತ್ತು ನಫ್ತಾಲಿಯಲ್ಲಿದ್ದ ಎಲ್ಲ ಕಣಜದ ಪ್ರದೇಶಗಳನ್ನ ನಾಶಮಾಡಿದ್ರು.+ 5 ಬಾಷ ಇದನ್ನ ಕೇಳಿದ ತಕ್ಷಣ ರಾಮದ ಕೋಟೆ ಕಟ್ಟೋದನ್ನ ನಿಲ್ಲಿಸಿದ. 6 ಆಮೇಲೆ ರಾಜ ಆಸ ಯೆಹೂದದಲ್ಲಿದ್ದ ಎಲ್ಲರನ್ನ ಕರ್ಕೊಂಡು ಹೋದ. ಅವರು ಹೋಗಿ ಬಾಷ ಕೋಟೆ ಕಟ್ಟೋಕೆ ಬಳಸ್ತಿದ್ದ ಕಲ್ಲು ಮತ್ತು ಮರಗಳನ್ನ ತಗೊಂಡು ಬಂದ್ರು.+ ಅದ್ರಿಂದ ರಾಜ ಆಸ ಗೆಬ+ ಮತ್ತು ಮಿಚ್ಪಾ+ ಪಟ್ಟಣವನ್ನ ಕಟ್ಟಿದ.

7 ಆಗ ದೇವದರ್ಶನಗಳನ್ನ ನೋಡ್ತಿದ್ದ ಹನಾನೀ+ ಯೆಹೂದದ ರಾಜ ಆಸನ ಹತ್ರ ಬಂದು ಅವನಿಗೆ “ನೀನು ನಿನ್ನ ದೇವರಾದ ಯೆಹೋವನಲ್ಲಿ ಭರವಸೆ ಇಡದೆ* ಅರಾಮ್ಯರ ರಾಜನಲ್ಲಿ ಭರವಸೆ ಇಟ್ಟಿದ್ರಿಂದ ಅವನ ಸೈನ್ಯ ನಿನ್ನ ಕೈಯಿಂದ ತಪ್ಪಿಸಿಕೊಳ್ತು.+ 8 ಇಥಿಯೋಪ್ಯ ಮತ್ತು ಲಿಬ್ಯದವರ ಹತ್ರ ಎಷ್ಟೋ ರಥಗಳು ಮತ್ತು ಕುದುರೆ ಸವಾರರು ಇದ್ದ ದೊಡ್ಡ ಸೈನ್ಯ ಇತ್ತಲ್ವಾ? ಹಾಗಿದ್ರೂ ನೀನು ಯೆಹೋವನ ಮೇಲೆ ಭರವಸೆ ಇಟ್ಟಿದ್ರಿಂದ ಆತನು ಅವ್ರನ್ನ ನಿನ್ನ ಕೈಗೆ ಒಪ್ಪಿಸಿದನು.+ 9 ಯಾರ ಹೃದಯ ಪೂರ್ಣವಾಗಿ ತನ್ನ ಕಡೆ ಇರುತ್ತೋ ಅಂಥವರಿಗೆ ಸಹಾಯ ಮಾಡೋಕೆ* ಯೆಹೋವ ಭೂಮಿಯಲ್ಲಿ ಎಲ್ಲ ಕಡೆ ನೋಡ್ತಾ ಇದ್ದಾನೆ.+ ನೀನು ಈ ವಿಷ್ಯದಲ್ಲಿ ಮೂರ್ಖನ ತರ ನಡ್ಕೊಂಡೆ. ಹಾಗಾಗಿ ಈಗಿಂದ ನಿನ್ನ ವಿರುದ್ಧ ಯುದ್ಧಗಳು ನಡೀತಾನೇ ಇರುತ್ತೆ”+ ಅಂದ.

10 ಇದನ್ನ ಕೇಳಿ ಹನಾನೀ ಮೇಲೆ ಆಸನಿಗೆ ತುಂಬ ಕೋಪ ಬಂತು. ಹಾಗಾಗಿ ಅವನನ್ನ ಜೈಲಿಗೆ ಹಾಕಿದ. ಅದೇ ಸಮಯಕ್ಕೆ ಆಸ ಸ್ವಲ್ಪ ಜನ್ರನ್ನ ಪೀಡಿಸೋಕೆ ಶುರುಮಾಡಿದ. 11 ಆಸನ ಇಡೀ ಜೀವನಚರಿತ್ರೆ ಇಸ್ರಾಯೇಲ್‌ ಮತ್ತು ಯೆಹೂದದ ರಾಜರ ಇತಿಹಾಸ ಪುಸ್ತಕದಲ್ಲಿ ಇದೆ.+

12 ಆಸನ ಆಳ್ವಿಕೆಯ 39ನೇ ವರ್ಷದಲ್ಲಿ ಅವನ ಕಾಲಿಗೆ ರೋಗ ಬಂದು ತುಂಬ ಹುಷಾರಿಲ್ಲದ ಹಾಗೆ ಆಯ್ತು. ಅಂಥ ಪರಿಸ್ಥಿತಿಯಲ್ಲೂ ಅವನು ಯೆಹೋವನ ಸಹಾಯ ಕೇಳದೆ ವೈದ್ಯರ ಹತ್ರ ಹೋದ. 13 ಕೊನೆಗೆ ಆಸ ತನ್ನ ಆಳ್ವಿಕೆಯ 41ನೇ ವರ್ಷದಲ್ಲಿ ತೀರಿಹೋದ.+ 14 ಸುಗಂಧದ್ರವ್ಯ ಮತ್ತು ಬೇರೆಬೇರೆ ಪದಾರ್ಥಗಳನ್ನ ಸೇರಿಸಿ ಮಿಶ್ರಣ ತಯಾರುಮಾಡಿ+ ತುಂಬಿಸಿದ್ದ ಚಟ್ಟದ ಮೇಲೆ ಅವನ ಶವವನ್ನ ಇಟ್ರು. ಆಮೇಲೆ ಅವನ ಶವನ ದಾವೀದಪಟ್ಟಣದ+ ಒಂದು ದೊಡ್ಡ ಸಮಾಧಿಯಲ್ಲಿ ಹೂಣಿಟ್ರು. ಕೊನೆಗೆ ಅವನಿಗೆ ಗೌರವ ಕೊಡೋಕೆ ದೊಡ್ಡ ಬೆಂಕಿ ಹಾಕಿದ್ರು.*

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ