ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯಾಜಕಕಾಂಡ 3
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಯಾಜಕಕಾಂಡ ಮುಖ್ಯಾಂಶಗಳು

      • ಸಮಾಧಾನ ಬಲಿ (1-17)

        • ಕೊಬ್ಬು, ರಕ್ತ ತಿನ್ನಬೇಡಿ (17)

ಯಾಜಕಕಾಂಡ 3:1

ಪಾದಟಿಪ್ಪಣಿ

  • *

    ಅಥವಾ “ಸಹಭೋಜನ ಬಲಿ.” ಪದವಿವರಣೆಯಲ್ಲಿ “ಸಮಾಧಾನ ಬಲಿ” ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಯಾಜ 22:21; ಅರ 6:13, 14

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    8/15/2000, ಪು. 15-16

ಯಾಜಕಕಾಂಡ 3:3

ಮಾರ್ಜಿನಲ್ ರೆಫರೆನ್ಸ್

  • +ಯಾಜ 7:29-31
  • +ವಿಮೋ 29:13; ಯಾಜ 7:23-25; 1ಅರ 8:64

ಯಾಜಕಕಾಂಡ 3:4

ಮಾರ್ಜಿನಲ್ ರೆಫರೆನ್ಸ್

  • +ಯಾಜ 7:1-4

ಯಾಜಕಕಾಂಡ 3:5

ಪಾದಟಿಪ್ಪಣಿ

  • *

    ಅಥವಾ “ಸಮಾಧಾನ.” ಅಕ್ಷ. “ನೆಮ್ಮದಿ.”

ಮಾರ್ಜಿನಲ್ ರೆಫರೆನ್ಸ್

  • +ಯಾಜ 6:12
  • +ಯಾಜ 4:29, 31

ಯಾಜಕಕಾಂಡ 3:6

ಮಾರ್ಜಿನಲ್ ರೆಫರೆನ್ಸ್

  • +ಅರ 6:13, 14

ಯಾಜಕಕಾಂಡ 3:9

ಪಾದಟಿಪ್ಪಣಿ

  • *

    ಬೈಬಲಲ್ಲಿ ತಿಳಿಸಿರೋ ಪ್ರದೇಶಗಳಲ್ಲಿದ್ದ ಕುರಿಯ ಬಾಲ ತುಂಬ ದಪ್ಪ ಇರ್ತಿತ್ತು. ಅದ್ರಲ್ಲಿ ತುಂಬ ಕೊಬ್ಬು ಇರ್ತಿತ್ತು. ಆ ಬಾಲದ ತೂಕ ಕಡಿಮೆಪಕ್ಷ 5 ಕೆ.ಜಿ. ಇರ್ತಿತ್ತು.

ಮಾರ್ಜಿನಲ್ ರೆಫರೆನ್ಸ್

  • +ವಿಮೋ 29:22; ಯಾಜ 9:18-20; 2ಪೂರ್ವ 7:7

ಯಾಜಕಕಾಂಡ 3:10

ಮಾರ್ಜಿನಲ್ ರೆಫರೆನ್ಸ್

  • +ಯಾಜ 4:8, 9; 9:10

ಯಾಜಕಕಾಂಡ 3:11

ಪಾದಟಿಪ್ಪಣಿ

  • *

    ಅಥವಾ “ಆಹಾರ.”

ಮಾರ್ಜಿನಲ್ ರೆಫರೆನ್ಸ್

  • +ಯಾಜ 4:31

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 11/2020, ಪು. 3-4

ಯಾಜಕಕಾಂಡ 3:14

ಮಾರ್ಜಿನಲ್ ರೆಫರೆನ್ಸ್

  • +ಯಾಜ 4:24, 26

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    11/2019, ಪು. 22-23

ಯಾಜಕಕಾಂಡ 3:15

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    11/2019, ಪು. 22-23

ಯಾಜಕಕಾಂಡ 3:16

ಪಾದಟಿಪ್ಪಣಿ

  • *

    ಅಥವಾ “ಸಮಾಧಾನ.” ಅಕ್ಷ. “ನೆಮ್ಮದಿ.”

  • *

    ಅಥವಾ “ಆಹಾರ.”

ಮಾರ್ಜಿನಲ್ ರೆಫರೆನ್ಸ್

  • +ಯಾಜ 7:23; 1ಸಮು 2:15-17

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    11/2019, ಪು. 22-23

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 11/2020, ಪು. 3-4

ಯಾಜಕಕಾಂಡ 3:17

ಮಾರ್ಜಿನಲ್ ರೆಫರೆನ್ಸ್

  • +ಆದಿ 9:4; ಯಾಜ 17:10, 13; ಧರ್ಮೋ 12:23; ಅಕಾ 15:20, 29

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    12/15/2008, ಪು. 32

    5/15/2004, ಪು. 22

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಯಾಜ. 3:1ಯಾಜ 22:21; ಅರ 6:13, 14
ಯಾಜ. 3:3ಯಾಜ 7:29-31
ಯಾಜ. 3:3ವಿಮೋ 29:13; ಯಾಜ 7:23-25; 1ಅರ 8:64
ಯಾಜ. 3:4ಯಾಜ 7:1-4
ಯಾಜ. 3:5ಯಾಜ 6:12
ಯಾಜ. 3:5ಯಾಜ 4:29, 31
ಯಾಜ. 3:6ಅರ 6:13, 14
ಯಾಜ. 3:9ವಿಮೋ 29:22; ಯಾಜ 9:18-20; 2ಪೂರ್ವ 7:7
ಯಾಜ. 3:10ಯಾಜ 4:8, 9; 9:10
ಯಾಜ. 3:11ಯಾಜ 4:31
ಯಾಜ. 3:14ಯಾಜ 4:24, 26
ಯಾಜ. 3:16ಯಾಜ 7:23; 1ಸಮು 2:15-17
ಯಾಜ. 3:17ಆದಿ 9:4; ಯಾಜ 17:10, 13; ಧರ್ಮೋ 12:23; ಅಕಾ 15:20, 29
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಯಾಜಕಕಾಂಡ 3:1-17

ಯಾಜಕಕಾಂಡ

3 ಒಂದುವೇಳೆ ಗಂಡು ಅಥವಾ ಹೆಣ್ಣು ಹಸುನ ಯೆಹೋವನಿಗೆ ಸಮಾಧಾನ ಬಲಿಯಾಗಿ*+ ಅರ್ಪಿಸೋಕೆ ಯಾರಾದ್ರೂ ಇಷ್ಟಪಟ್ರೆ ಅದ್ರಲ್ಲಿ ಯಾವುದೇ ದೋಷ ಇರಬಾರದು. 2 ಅದನ್ನ ಕೊಡೋನು ತನ್ನ ಕೈಯನ್ನ ಆ ಪ್ರಾಣಿ ತಲೆ ಮೇಲೆ ಇಡಬೇಕು. ಪುರೋಹಿತರಾದ ಆರೋನನ ಮಕ್ಕಳು ದೇವದರ್ಶನ ಡೇರೆಯ ಬಾಗಿಲ ಹತ್ರ ಆ ಪ್ರಾಣಿನ ಕಡಿಬೇಕು. ಅದ್ರ ರಕ್ತನ ಯಜ್ಞವೇದಿಯ ಎಲ್ಲ ಬದಿಗಳಿಗೆ ಚಿಮಿಕಿಸಬೇಕು. 3 ಸಮಾಧಾನ ಬಲಿಗಾಗಿ ತಂದಿರೋ ಆ ಪ್ರಾಣಿಯ ಕೆಲವು ಭಾಗಗಳನ್ನ ಬೆಂಕಿಯಲ್ಲಿ ಅರ್ಪಿಸೋ ಅರ್ಪಣೆಯಾಗಿ ಯೆಹೋವನಿಗೆ ಕೊಡಬೇಕು.+ ಆ ಭಾಗಗಳು ಯಾವುದಂದ್ರೆ, ಕರುಳುಗಳ ಸುತ್ತ ಇರೋ ಕೊಬ್ಬು,+ ಕರುಳುಗಳಿಗೆ ಅಂಟ್ಕೊಂಡಿರೋ ಎಲ್ಲ ಕೊಬ್ಬು, 4 ಎರಡು ಮೂತ್ರಪಿಂಡಗಳು, ಅವುಗಳ ಮೇಲಿರೋ ಕೊಬ್ಬು ಅಂದ್ರೆ ಸೊಂಟದ ಹತ್ರ ಇರೋ ಕೊಬ್ಬು. ಮೂತ್ರಪಿಂಡಗಳ ಜೊತೆ ಪಿತ್ತಜನಕಾಂಗದ ಮೇಲಿರೋ ಕೊಬ್ಬು ಸಹ ಕೊಡಬೇಕು.+ 5 ಇದನ್ನೆಲ್ಲ ಆರೋನನ ಮಕ್ಕಳು ಯಜ್ಞವೇದಿಯಲ್ಲಿ ಉರಿತಿರೋ ಕಟ್ಟಿಗೆ ಮೇಲಿರೋ ಸರ್ವಾಂಗಹೋಮ ಬಲಿ ಮೇಲೆ ಅರ್ಪಿಸಬೇಕು.+ ಅದ್ರಿಂದ ಮೇಲೇರೋ ಹೊಗೆಯ ಸುವಾಸನೆಯಿಂದ ಯೆಹೋವನಿಗೆ ಸಂತೋಷ* ಆಗುತ್ತೆ.+ ಇದು ಬೆಂಕಿ ಮೂಲಕ ಕೊಡೋ ಅರ್ಪಣೆ.

6 ಆಡು ಅಥವಾ ಕುರಿಯನ್ನ ಯೆಹೋವನಿಗೆ ಸಮಾಧಾನ ಬಲಿಯಾಗಿ ಅರ್ಪಿಸೋಕೆ ಇಷ್ಟಪಟ್ರೆ ಗಂಡನ್ನಾಗಲಿ ಹೆಣ್ಣನ್ನಾಗಲಿ ಕೊಡಬಹುದು. ಅದ್ರಲ್ಲಿ ಯಾವುದೇ ದೋಷ ಇರಬಾರದು.+ 7 ಗಂಡು ಕುರಿಮರಿಯನ್ನ ಅರ್ಪಿಸೋದಾದ್ರೆ ಯೆಹೋವನ ಮುಂದೆ ತರಬೇಕು. 8 ಅದನ್ನ ಕೊಡೋನು ತನ್ನ ಕೈಯನ್ನ ಅದ್ರ ತಲೆ ಮೇಲೆ ಇಡಬೇಕು. ಆರೋನನ ಮಕ್ಕಳು ದೇವದರ್ಶನ ಡೇರೆ ಮುಂದೆ ಆ ಪ್ರಾಣಿನ ಕಡಿಬೇಕು. ಅದ್ರ ರಕ್ತನ ಯಜ್ಞವೇದಿಯ ಎಲ್ಲ ಬದಿಗಳಿಗೆ ಚಿಮಿಕಿಸಬೇಕು. 9 ಆ ಕುರಿಮರಿಯ ಕೊಬ್ಬನ್ನ ಬೆಂಕಿಯಲ್ಲಿ ಯೆಹೋವನಿಗೆ ಅರ್ಪಿಸಬೇಕು.+ ಅವನು ಅದ್ರ ಬೆನ್ನೆಲುಬಿನ ಕೊನೆಯಿಂದ ಕೊಬ್ಬಿದ ಇಡೀ ಬಾಲ,* ಕರುಳುಗಳ ಸುತ್ತ ಇರೋ ಕೊಬ್ಬು, ಕರುಳುಗಳಿಗೆ ಅಂಟ್ಕೊಂಡಿರೋ ಎಲ್ಲ ಕೊಬ್ಬು, 10 ಎರಡು ಮೂತ್ರಪಿಂಡಗಳು, ಅವುಗಳ ಮೇಲಿರೋ ಕೊಬ್ಬು ಅಂದ್ರೆ ಸೊಂಟದ ಹತ್ರ ಇರೋ ಕೊಬ್ಬು ಕೊಡಬೇಕು. ಮೂತ್ರಪಿಂಡಗಳ ಜೊತೆ ಪಿತ್ತಜನಕಾಂಗದ ಮೇಲಿರೋ ಕೊಬ್ಬನ್ನೂ ಕೊಡಬೇಕು.+ 11 ಇದನ್ನೆಲ್ಲ ಪುರೋಹಿತ ಯಜ್ಞವೇದಿ ಮೇಲೆ ಅರ್ಪಿಸಿದಾಗ ಅದ್ರ ಹೊಗೆ ಮೇಲೆ ಹೋಗಬೇಕು. ಬೆಂಕಿ ಮೂಲಕ ಅರ್ಪಿಸೋ ಈ ಅರ್ಪಣೆ ಯೆಹೋವನ ಪಾಲು.*+

12 ಅವನು ಆಡನ್ನ ಅರ್ಪಿಸೋದಾದ್ರೆ ಅದನ್ನ ಯೆಹೋವನ ಮುಂದೆ ತರಬೇಕು. 13 ತನ್ನ ಕೈಯನ್ನ ಅದ್ರ ತಲೆ ಮೇಲೆ ಇಡಬೇಕು. ಆರೋನನ ಮಕ್ಕಳು ದೇವದರ್ಶನ ಡೇರೆ ಮುಂದೆ ಅದನ್ನ ಕಡಿದು ರಕ್ತನ ಯಜ್ಞವೇದಿಯ ಎಲ್ಲ ಬದಿಗಳಿಗೆ ಚಿಮಿಕಿಸಬೇಕು. 14 ಅವನು ಆ ಪ್ರಾಣಿಯ ಕೆಲವು ಭಾಗಗಳನ್ನ ಬೆಂಕಿಯಲ್ಲಿ ಯೆಹೋವನಿಗೆ ಅರ್ಪಿಸೋಕೆ ಕೊಡಬೇಕು. ಆ ಭಾಗಗಳು ಯಾವುದಂದ್ರೆ, ಕರುಳುಗಳ ಸುತ್ತ ಇರೋ ಕೊಬ್ಬು, ಕರುಳುಗಳಿಗೆ ಅಂಟ್ಕೊಂಡಿರೋ ಎಲ್ಲ ಕೊಬ್ಬು,+ 15 ಎರಡು ಮೂತ್ರಪಿಂಡಗಳು, ಅವುಗಳ ಮೇಲಿರೋ ಕೊಬ್ಬು ಅಂದ್ರೆ ಸೊಂಟದ ಹತ್ರ ಇರೋ ಕೊಬ್ಬು. ಮೂತ್ರಪಿಂಡಗಳ ಜೊತೆ ಪಿತ್ತಜನಕಾಂಗದ ಮೇಲಿರೋ ಕೊಬ್ಬು ಸಹ ಕೊಡಬೇಕು. 16 ಇದನ್ನೆಲ್ಲ ಪುರೋಹಿತ ಯಜ್ಞವೇದಿ ಮೇಲೆ ಅರ್ಪಿಸಬೇಕು. ಅದ್ರಿಂದ ಮೇಲೇರೋ ಹೊಗೆಯ ಸುವಾಸನೆಯಿಂದ ದೇವರಿಗೆ ಸಂತೋಷ* ಆಗುತ್ತೆ. ಬೆಂಕಿ ಮೂಲಕ ಅರ್ಪಿಸೋ ಈ ಅರ್ಪಣೆ ದೇವರ ಪಾಲು.* ಎಲ್ಲ ಕೊಬ್ಬು ಯೆಹೋವನಿಗೆ ಸೇರಿದ್ದು.+

17 ನೀವು ಕೊಬ್ಬು ಮತ್ತು ರಕ್ತ ತಿನ್ನಲೇಬಾರದು.+ ನೀವು ಎಲ್ಲೇ ಇದ್ರೂ ಈ ನಿಯಮ ಪಾಲಿಸಬೇಕು. ಇದು ಎಲ್ಲ ಪೀಳಿಗೆಗೆ ಇರೋ ನಿಯಮ.’”

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ