ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 2 ಥೆಸಲೊನೀಕ 1
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

2 ಥೆಸಲೊನೀಕ ಮುಖ್ಯಾಂಶಗಳು

      • ವಂದನೆ (1, 2)

      • ಥೆಸಲೊನೀಕದ ನಂಬಿಕೆ ಬಲಗೊಳ್ತಿದೆ (3-5)

      • ವಿಧೇಯತೆ ತೋರಿಸದವ್ರಿಗೆ ಶಿಕ್ಷೆ (6-10)

      • ಸಭೆಯವ್ರಿಗಾಗಿ ಪ್ರಾರ್ಥನೆ (11, 12)

2 ಥೆಸಲೊನೀಕ 1:1

ಪಾದಟಿಪ್ಪಣಿ

  • *

    ಇನ್ನೊಂದು ಹೆಸ್ರು ಸೀಲ.

ಮಾರ್ಜಿನಲ್ ರೆಫರೆನ್ಸ್

  • +2ಕೊರಿಂ 1:19

2 ಥೆಸಲೊನೀಕ 1:3

ಮಾರ್ಜಿನಲ್ ರೆಫರೆನ್ಸ್

  • +1ಥೆಸ 3:12; 4:9, 10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/15/2005, ಪು. 32

2 ಥೆಸಲೊನೀಕ 1:4

ಮಾರ್ಜಿನಲ್ ರೆಫರೆನ್ಸ್

  • +1ಥೆಸ 2:19
  • +1ಥೆಸ 1:6; 2:14; 1ಪೇತ್ರ 2:21

2 ಥೆಸಲೊನೀಕ 1:5

ಮಾರ್ಜಿನಲ್ ರೆಫರೆನ್ಸ್

  • +ಅಕಾ 14:22; ರೋಮ 8:17; 2ತಿಮೊ 2:12

2 ಥೆಸಲೊನೀಕ 1:6

ಮಾರ್ಜಿನಲ್ ರೆಫರೆನ್ಸ್

  • +ರೋಮ 12:19; ಪ್ರಕ 6:9, 10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 33

    ಕಾವಲಿನಬುರುಜು,

    11/15/2004, ಪು. 19

2 ಥೆಸಲೊನೀಕ 1:7

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 8:38
  • +ಲೂಕ 17:29, 30; 1ಪೇತ್ರ 1:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/15/2004, ಪು. 19

2 ಥೆಸಲೊನೀಕ 1:8

ಮಾರ್ಜಿನಲ್ ರೆಫರೆನ್ಸ್

  • +ರೋಮ 2:8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 33

    ಕಾವಲಿನಬುರುಜು (ಅಧ್ಯಯನ),

    9/2019, ಪು. 12-13

    ಕಾವಲಿನಬುರುಜು,

    11/15/2004, ಪು. 19

2 ಥೆಸಲೊನೀಕ 1:9

ಮಾರ್ಜಿನಲ್ ರೆಫರೆನ್ಸ್

  • +2ಪೇತ್ರ 3:7

2 ಥೆಸಲೊನೀಕ 1:11

ಮಾರ್ಜಿನಲ್ ರೆಫರೆನ್ಸ್

  • +ರೋಮ 8:30

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

2 ಥೆಸ. 1:12ಕೊರಿಂ 1:19
2 ಥೆಸ. 1:31ಥೆಸ 3:12; 4:9, 10
2 ಥೆಸ. 1:41ಥೆಸ 2:19
2 ಥೆಸ. 1:41ಥೆಸ 1:6; 2:14; 1ಪೇತ್ರ 2:21
2 ಥೆಸ. 1:5ಅಕಾ 14:22; ರೋಮ 8:17; 2ತಿಮೊ 2:12
2 ಥೆಸ. 1:6ರೋಮ 12:19; ಪ್ರಕ 6:9, 10
2 ಥೆಸ. 1:7ಮಾರ್ಕ 8:38
2 ಥೆಸ. 1:7ಲೂಕ 17:29, 30; 1ಪೇತ್ರ 1:7
2 ಥೆಸ. 1:8ರೋಮ 2:8
2 ಥೆಸ. 1:92ಪೇತ್ರ 3:7
2 ಥೆಸ. 1:11ರೋಮ 8:30
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಓದಿ ನೂತನ ಲೋಕ ಭಾಷಾಂತರ (bi7)
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
2 ಥೆಸಲೊನೀಕ 1:1-12

ಥೆಸಲೊನೀಕದವರಿಗೆ ಬರೆದ ಎರಡನೇ ಪತ್ರ

1 ಈ ಪತ್ರ ಬರಿತಾ ಇರೋದು ಪೌಲ, ಸಿಲ್ವಾನ* ಮತ್ತು ತಿಮೊತಿ.+ ನಾವು ಈ ಪತ್ರವನ್ನ ತಂದೆಯಾದ ದೇವರ ಜೊತೆ ಮತ್ತು ಪ್ರಭು ಯೇಸು ಕ್ರಿಸ್ತನ ಜೊತೆ ಒಂದಾಗಿರೋ ಥೆಸಲೊನೀಕದ ಸಭೆಗೆ ಬರಿತಾ ಇದ್ದೀವಿ.

2 ನಮ್ಮ ತಂದೆಯಾದ ದೇವರು ಮತ್ತು ಪ್ರಭು ಯೇಸು ಕ್ರಿಸ್ತ ನಿಮಗೆ ಅಪಾರ ಕೃಪೆ ತೋರಿಸಿ ಶಾಂತಿ ಕೊಡ್ಲಿ.

3 ಸಹೋದರರೇ, ನಿಮಗೋಸ್ಕರ ಯಾವಾಗ್ಲೂ ದೇವರಿಗೆ ಧನ್ಯವಾದ ಹೇಳೋ ಕರ್ತವ್ಯ ನಮ್ಮದು. ಹೀಗೆ ಮಾಡೋದು ಸರಿ, ಯಾಕಂದ್ರೆ ನಿಮ್ಮ ನಂಬಿಕೆ ತುಂಬ ಬಲವಾಗ್ತಿದೆ. ಪ್ರತಿಯೊಬ್ರಲ್ಲೂ ಒಬ್ರಿಗೆ ಇನ್ನೊಬ್ರ ಮೇಲಿರೋ ಪ್ರೀತಿ ಜಾಸ್ತಿ ಆಗ್ತಿದೆ.+ 4 ಹಾಗಾಗಿ ದೇವರ ಸಭೆಗಳಲ್ಲಿ ನಾವು ನಿಮ್ಮ ಬಗ್ಗೆ ತುಂಬ ಹೆಮ್ಮೆಯಿಂದ ಹೇಳ್ಕೊತೀವಿ.+ ಎಷ್ಟೇ ಹಿಂಸೆ, ಕಷ್ಟ ಬಂದ್ರೂ ನೀವು ಸಹಿಸ್ಕೊಂಡು ನಂಬಿಕೆ ತೋರಿಸ್ತಾ ಇದ್ದೀರ.+ 5 ದೇವರು ನೀತಿಯಿಂದ ತೀರ್ಪು ಮಾಡ್ತಾನೆ ಅನ್ನೋದಕ್ಕೆ ಇದೇ ಸಾಕ್ಷಿ. ಹಾಗಾಗಿ ದೇವರು ನಿಮ್ಮನ್ನ ಆತನ ಆಳ್ವಿಕೆಯಲ್ಲಿ ಇರೋಕೆ ಯೋಗ್ಯರಾಗಿ ನೋಡ್ತಾನೆ. ನೀವು ಇಷ್ಟೆಲ್ಲ ಕಷ್ಟ ಅನುಭವಿಸ್ತಾ ಇರೋದು ಅದಕ್ಕೇ ಅಲ್ವಾ?+

6 ದೇವರು ನೀತಿವಂತ, ಹಾಗಾಗಿ ನಿಮಗೆ ಕಷ್ಟ ಕೊಡುವವ್ರಿಗೆ ಶಿಕ್ಷೆ ಕೊಡ್ತಾನೆ.+ 7 ಪ್ರಭು ಯೇಸು ಉರಿಯೋ ಬೆಂಕಿ ಜೊತೆ, ಬಲಿಷ್ಠ ದೇವದೂತರ ಜೊತೆ ಸ್ವರ್ಗದಿಂದ ಬರುವಾಗ+ ಕಷ್ಟ ಅನುಭವಿಸೋ ನಿಮ್ಮನ್ನೂ ನಮ್ಮ ಜೊತೆ ಬಿಡುಗಡೆ ಮಾಡ್ತಾನೆ.+ 8 ಆಗ, ದೇವರನ್ನ ತಿಳ್ಕೊಳ್ಳದವ್ರಿಗೆ ಮತ್ತು ನಮ್ಮ ಪ್ರಭು ಯೇಸು ಬಗ್ಗೆ ಇರೋ ಸಿಹಿಸುದ್ದಿಗೆ ತಕ್ಕ ಹಾಗೆ ನಡಿಯದವ್ರಿಗೆ ಆತನು ಶಿಕ್ಷೆ ಕೊಡ್ತಾನೆ.+ 9 ಪ್ರಭು ಅವ್ರಿಗೆ ನ್ಯಾಯತೀರಿಸ್ತಾನೆ. ಅವ್ರನ್ನ ಸರ್ವನಾಶ ಮಾಡಿ ಶಿಕ್ಷಿಸ್ತಾನೆ.+ ಅವರು ಇನ್ಯಾವತ್ತೂ ಆತನ ಕಣ್ಮುಂದೆ ಇರಲ್ಲ, ಆತನು ತನ್ನ ಮಹಾ ಶಕ್ತಿಯಿಂದ ಅವ್ರಿಗೆ ಸಹಾಯ ಮಾಡೋದೂ ಇಲ್ಲ. 10 ಆ ಸಮಯದಲ್ಲಿ ಆತನು ಮಹಿಮೆ ಪಡಿಯೋಕೆ ತನ್ನ ಪವಿತ್ರ ಜನ್ರ ಜೊತೆ ಬರ್ತಾನೆ. ಆತನಲ್ಲಿ ನಂಬಿಕೆ ಇಟ್ಟಿರೋ ಎಲ್ರೂ ಆ ದಿನ ಆಶ್ಚರ್ಯದಿಂದ ಖುಷಿಪಡ್ತಾರೆ. ನಾವು ಹೇಳಿದ ವಿಷ್ಯದಲ್ಲಿ ನೀವು ನಂಬಿಕೆ ಇಟ್ಟಿದ್ರಿಂದ ಆ ಖುಷಿಯಲ್ಲಿ ನಿಮಗೂ ಪಾಲಿದೆ.

11 ಹಾಗಾಗಿ ನಾವು ಯಾವಾಗ್ಲೂ ನಿಮಗೋಸ್ಕರ ಪ್ರಾರ್ಥಿಸ್ತೀವಿ. ನಮ್ಮ ದೇವರು ನಿಮ್ಮನ್ನ ಯಾವುದಕ್ಕಾಗಿ ಆರಿಸ್ಕೊಂಡಿದ್ದಾನೋ ಅದಕ್ಕೆ ನೀವು ಯೋಗ್ಯರು ಅಂತ ಆತನು ನೋಡ್ಲಿ,+ ಆತನು ತನ್ನ ಶಕ್ತಿಯಿಂದ ನಿಮಗೆ ಏನೆಲ್ಲ ಒಳ್ಳೇದು ಮಾಡೋಕೆ ಇಷ್ಟಪಡ್ತಾನೋ ಅದನ್ನೆಲ್ಲ ಮಾಡ್ಲಿ. ನಂಬಿಕೆಯಿಂದ ನೀವು ಮಾಡ್ತಿರೋ ಕೆಲಸಕ್ಕೆ ಯಶಸ್ಸು ಕೊಡ್ಲಿ ಅಂತ ಬೇಡ್ತೀವಿ. 12 ಆಗ ನಿಮ್ಮಿಂದ ನಮ್ಮ ಪ್ರಭು ಯೇಸು ಹೆಸ್ರಿಗೆ ಗೌರವ ಸಿಗುತ್ತೆ, ಆತನಿಗೆ ಆಪ್ತರಾಗಿರೋ ನಿಮಗೂ ಗೌರವ ಸಿಗುತ್ತೆ. ಈ ಗೌರವಕ್ಕೆ ನಮ್ಮ ದೇವರ ಮತ್ತು ಪ್ರಭು ಯೇಸು ಕ್ರಿಸ್ತನ ಅಪಾರ ಕೃಪೆನೇ ಕಾರಣ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ