ಜೆಕರ್ಯ
14 “ನೋಡು! ಆ ದಿನ ಬರ್ತಿದೆ. ಅದು ಯೆಹೋವನ ದಿನ. ನಿನ್ನಿಂದ* ಕೊಳ್ಳೆ ಹೊಡೆದದ್ದನ್ನ ಅವತ್ತು ನಿನ್ನ ಮುಂದೆನೇ ಹಂಚ್ಕೊಳ್ಳಲಾಗುತ್ತೆ. 2 ಯೆರೂಸಲೇಮಿನ ವಿರುದ್ಧ ಯುದ್ಧ ಮಾಡೋಕೆ ನಾನು ಎಲ್ಲ ರಾಷ್ಟ್ರಗಳನ್ನ ಒಟ್ಟುಸೇರಿಸಿದ್ದೀನಿ. ಪಟ್ಟಣಕ್ಕೆ ಮುತ್ತಿಗೆ ಹಾಕಲಾಗುತ್ತೆ, ಅಲ್ಲಿನ ಮನೆಗಳನ್ನ ದೋಚಲಾಗುತ್ತೆ ಮತ್ತು ಅಲ್ಲಿನ ಸ್ತ್ರೀಯರನ್ನ ಅತ್ಯಾಚಾರ ಮಾಡಲಾಗುತ್ತೆ. ಪಟ್ಟಣದ ಅರ್ಧ ಜನ್ರನ್ನ ಕೈದಿಗಳನ್ನಾಗಿ ಕರ್ಕೊಂಡು ಹೋಗಲಾಗುತ್ತೆ. ಉಳಿದ ಜನ್ರನ್ನ ಪಟ್ಟಣದಿಂದ ಕರ್ಕೊಂಡು ಹೋಗಲ್ಲ.
3 ಯುದ್ಧದ ದಿನದಲ್ಲಿ ಹೋರಾಡೋ ತರ+ ಯೆಹೋವ ಹೋಗಿ ಆ ರಾಷ್ಟ್ರಗಳ ವಿರುದ್ಧ ಹೋರಾಡ್ತಾನೆ.+ 4 ಆ ದಿನ ಆತನು ತನ್ನ ಕಾಲುಗಳನ್ನ ಯೆರೂಸಲೇಮಿನ ಪೂರ್ವಕ್ಕಿರೋ ಆಲಿವ್ ಬೆಟ್ಟದ ಮೇಲೆ ಇಡ್ತಾನೆ.+ ಆಗ ಆಲಿವ್ ಬೆಟ್ಟ ಪೂರ್ವದಿಂದ ಪಶ್ಚಿಮದ ತನಕ* ಸೀಳಿ ಅರ್ಧ ಬೆಟ್ಟ ಉತ್ತರಕ್ಕೆ ಇನ್ನರ್ಧ ಬೆಟ್ಟ ದಕ್ಷಿಣಕ್ಕೆ ಸರಿಯುತ್ತೆ. ಮಧ್ಯದಲ್ಲಿ ಒಂದು ದೊಡ್ಡ ಕಣಿವೆ ಉಂಟಾಗುತ್ತೆ. 5 ನೀವು ನನ್ನ ಬೆಟ್ಟಗಳ ಮಧ್ಯದಲ್ಲಿರೋ ಕಣಿವೆಗೆ ಓಡಿಹೋಗ್ತೀರ. ಯಾಕಂದ್ರೆ ಆ ಕಣಿವೆಯ ದಾರಿ ಆಚೇಲ್ ತನಕ ಹೋಗುತ್ತೆ. ಯೆಹೂದದ ರಾಜ ಉಜ್ಜೀಯನ ಕಾಲದಲ್ಲಿ ಭೂಕಂಪ ಆದಾಗ ಓಡಿಹೋದ ತರ ಓಡಿಹೋಗಬೇಕು.+ ಆಗ ನನ್ನ ದೇವರಾದ ಯೆಹೋವ ಬರ್ತಾನೆ. ಅವನ ಜೊತೆ ಪವಿತ್ರ ಜನ್ರೂ ಬರ್ತಾರೆ.+
6 ಆ ದಿನದಲ್ಲಿ, ಪ್ರಕಾಶಮಾನವಾದ ಬೆಳಕು ಇರಲ್ಲ.+ ವಸ್ತುಗಳು ಮರಗಟ್ಟಿ ಹೋಗುತ್ತೆ.* 7 ಆ ದಿನ ಹಗಲಿಗೂ ರಾತ್ರಿಗೂ ಯಾವುದೇ ವ್ಯತ್ಯಾಸ ಇರಲ್ಲ. ಸಂಜೆಯಾದ್ರೂ ಬೆಳಕಿರುತ್ತೆ. ಆ ದಿನವನ್ನ ಯೆಹೋವನ ದಿನ ಅಂತ ಕರೆಯಲಾಗುತ್ತೆ.+ 8 ಆ ದಿನ ಯೆರೂಸಲೇಮಿಂದ ಜೀವಜಲ+ ಹರಿದು ಬರುತ್ತೆ.+ ಅರ್ಧ ನೀರು ಪೂರ್ವದ ಸಮುದ್ರದ*+ ಕಡೆಗೂ ಇನ್ನರ್ಧ ನೀರು ಪಶ್ಚಿಮದ ಸಮುದ್ರದ* ಕಡೆಗೂ ಹರಿದು ಹೋಗುತ್ತೆ.+ ಬೇಸಿಗೆ ಕಾಲದಲ್ಲೂ ಚಳಿಗಾಲದಲ್ಲೂ ನೀರು ಹರಿತಾ ಇರುತ್ತೆ. 9 ಆಗ ಯೆಹೋವ ಇಡೀ ಭೂಮಿಗೆ ರಾಜನಾಗ್ತಾನೆ.+ ಆ ದಿನ ಪ್ರತಿಯೊಬ್ರೂ ಯೆಹೋವನನ್ನೇ ಆರಾಧಿಸ್ತಾರೆ+ ಮತ್ತು ಆತನ ಹೆಸ್ರನ್ನ ಮಾತ್ರ ಹೊಗಳ್ತಾರೆ.+
10 ಗೆಬದಿಂದ+ ಯೆರೂಸಲೇಮಿನ ದಕ್ಷಿಣದಲ್ಲಿರೋ ರಿಮ್ಮೋನಿನ+ ತನಕ ಇಡೀ ದೇಶ ಅರಾಬಾದ+ ತರ ಆಗುತ್ತೆ. ಯೆರೂಸಲೇಮ್ ಮತ್ತೆ ಅದ್ರ ಸ್ಥಳದಲ್ಲೇ ಏಳುತ್ತೆ+ ಮತ್ತು ಅದ್ರ ಜನ್ರು ‘ಬೆನ್ಯಾಮಿನ್ ಬಾಗಿಲಿಂದ’+ ‘ಮೊದಲನೇ ಬಾಗಿಲಿನ ತನಕ’ ‘ಮೂಲೆಬಾಗಿಲಿನ ತನಕ’ ಮತ್ತು ಹನನೇಲ್ ಬುರುಜಿಂದ+ ರಾಜನ ದ್ರಾಕ್ಷಿತೊಟ್ಟಿ ತನಕ ವಾಸಿಸ್ತಾರೆ. 11 ಯೆರೂಸಲೇಮಲ್ಲಿ ಜನ್ರು ವಾಸಿಸ್ತಾರೆ. ಅದಕ್ಕೆ ಇನ್ನು ಯಾವತ್ತೂ ನಾಶದ ಶಾಪವಿರಲ್ಲ.+ ಅಲ್ಲಿ ಜನ ನೆಮ್ಮದಿಯಿಂದ ಜೀವನ ಮಾಡ್ತಾರೆ.+
12 ಯೆರೂಸಲೇಮಿನ ವಿರುದ್ಧ ಯುದ್ಧ ಮಾಡೋ ಎಲ್ಲ ಜನ್ರ ಮೇಲೆ ಯೆಹೋವ ದೊಡ್ಡ ಕಾಯಿಲೆ ತರ್ತಾನೆ.+ ನಿಂತಲ್ಲೇ ಅವ್ರ ಮಾಂಸ ಕೊಳೆತು ಹೋಗುತ್ತೆ. ಅವ್ರ ಕಣ್ಣುಗಳು ಇಂಗಿಹೋಗುತ್ತೆ. ಅವ್ರ ನಾಲಿಗೆ ಬಾಯೊಳಗೇ ಕೊಳೆತು ಹೋಗುತ್ತೆ.
13 ಆ ದಿನ ಯೆಹೋವ ಅವ್ರನ್ನ ಸಂಪೂರ್ಣವಾಗಿ ಗಲಿಬಿಲಿಗೊಳಿಸ್ತಾನೆ. ಪ್ರತಿಯೊಬ್ಬನೂ ತನ್ನ ಸಂಗಡಿಗನನ್ನ ಕೈಹಿಡಿದು ಎಳ್ಕೊಂಡು ಹೋಗ್ತಾನೆ. ಅವರು ಒಬ್ರ ಮೇಲೊಬ್ರು ದಾಳಿ ಮಾಡ್ತಾರೆ.+ 14 ಯೆರೂಸಲೇಮಲ್ಲಿ ನಡಿಯೋ ಯುದ್ಧದಲ್ಲಿ ಯೆಹೂದವೂ ಪಾಲ್ಗೊಳ್ಳುತ್ತೆ. ಸುತ್ತಮುತ್ತಲಿನ ರಾಷ್ಟ್ರಗಳ ಸೊತ್ತನ್ನ ಅಂದ್ರೆ ಚಿನ್ನ, ಬೆಳ್ಳಿ, ಬಟ್ಟೆಗಳನ್ನ ದೊಡ್ಡ ಮೊತ್ತದಲ್ಲಿ ಒಟ್ಟುಸೇರಿಸಲಾಗುತ್ತೆ.+
15 ಆ ದೊಡ್ಡ ಕಾಯಿಲೆಗೆ ಸಮನಾದ ಇನ್ನೊಂದು ದೊಡ್ಡ ಕಾಯಿಲೆ ಶತ್ರುಗಳ ಪಾಳೆಯಗಳಲ್ಲಿರೋ ಕುದುರೆ, ಹೇಸರಗತ್ತೆ, ಒಂಟೆ, ಕತ್ತೆ ಮತ್ತು ಎಲ್ಲ ಜಾನುವಾರುಗಳ ಮೇಲೆ ಬರುತ್ತೆ.
16 ಯೆರೂಸಲೇಮಿನ ವಿರುದ್ಧ ಯುದ್ಧಮಾಡೋ ರಾಷ್ಟ್ರಗಳಲ್ಲಿ ಉಳಿದವ್ರೆಲ್ಲ ಪ್ರತಿವರ್ಷ ರಾಜನಿಗೆ ಅಂದ್ರೆ ಸೈನ್ಯಗಳ ದೇವರಾದ ಯೆಹೋವನಿಗೆ ಬಗ್ಗಿ ನಮಸ್ಕಾರ ಮಾಡೋಕೆ+ ಯೆರೂಸಲೇಮಿಗೆ ಹೋಗ್ತಾರೆ,+ ಚಪ್ಪರಗಳ* ಹಬ್ಬ ಆಚರಿಸ್ತಾರೆ.+ 17 ಆದ್ರೆ ಇಡೀ ಭೂಮಿಯಲ್ಲಿರೋ ಕುಟುಂಬಗಳಲ್ಲಿ ಯಾರಾದ್ರೂ ರಾಜನಿಗೆ ಅಂದ್ರೆ ಸೈನ್ಯಗಳ ದೇವರಾದ ಯೆಹೋವನಿಗೆ ಬಗ್ಗಿ ನಮಸ್ಕಾರ ಮಾಡೋಕೆ ಯೆರೂಸಲೇಮಿಗೆ ಹೋಗದಿದ್ರೆ ಅವ್ರಿಗೆ ಮಳೆ ಆಗಲ್ಲ.+ 18 ಈಜಿಪ್ಟಿನ ಜನ್ರು ಯೆರೂಸಲೇಮಿಗೆ ಬರದಿದ್ರೆ ಆ ಪಟ್ಟಣಕ್ಕೆ ಕಾಲಿಡದಿದ್ರೆ ಅವ್ರಿಗೆ ಮಳೆ ಆಗಲ್ಲ. ಬದಲಿಗೆ ಚಪ್ಪರಗಳ ಹಬ್ಬ ಆಚರಿಸದ ಬೇರೆ ರಾಷ್ಟ್ರಗಳ ಮೇಲೆ ಯೆಹೋವ ಬರಮಾಡೋ ಕಾಯಿಲೆಗಳನ್ನೇ ಇವ್ರ ಮೇಲೂ ಬರಮಾಡ್ತಾನೆ. 19 ಈಜಿಪ್ಟಿನ ಪಾಪಗಳಿಗೆ ಮತ್ತು ಚಪ್ಪರಗಳ ಹಬ್ಬವನ್ನ ಆಚರಿಸೋಕೆ ಬರದ ಎಲ್ಲ ರಾಷ್ಟ್ರಗಳ ಪಾಪಗಳಿಗೆ ಬರೋ ಶಿಕ್ಷೆ ಇದೇ.
20 ಆ ದಿನ ‘ಪವಿತ್ರತೆ ಯೆಹೋವನಿಗೆ ಸೇರಿದ್ದು!’+ ಅನ್ನೋ ಮಾತುಗಳು ಕುದುರೆಗಳ ಕುತ್ತಿಗೆಯಲ್ಲಿರೋ ಗಂಟೆಗಳ ಮೇಲೆ ಬರೆದಿರುತ್ತೆ. ಯೆಹೋವನ ಆಲಯದಲ್ಲಿರೋ ಅಡುಗೆ ಪಾತ್ರೆಗಳು*+ ಯಜ್ಞವೇದಿ ಮುಂದೆ ಇರೋ ಬಟ್ಟಲುಗಳ+ ತರ ಇರುತ್ತೆ. 21 ಯೆರೂಸಲೇಮಲ್ಲಿರೋ ಮತ್ತು ಯೆಹೂದದಲ್ಲಿರೋ ಎಲ್ಲ ಅಡುಗೆ ಪಾತ್ರೆಗಳು* ಪವಿತ್ರವಾಗಿ ಇರುತ್ತೆ ಮತ್ತು ಸೈನ್ಯಗಳ ದೇವರಾದ ಯೆಹೋವನಿಗೆ ಮೀಸಲಾಗಿ ಇರುತ್ತೆ. ಬಲಿಗಳನ್ನ ಅರ್ಪಿಸೋಕೆ ಬರುವವ್ರೆಲ್ಲ ಆ ಪಾತ್ರೆಗಳಲ್ಲಿ ಕೆಲವನ್ನ ಮಾಂಸ ಬೇಯಿಸೋಕೆ ಉಪಯೋಗಿಸ್ತಾರೆ. ಆ ದಿನ ಸೈನ್ಯಗಳ ದೇವರಾದ ಯೆಹೋವನ ಆಲಯದಲ್ಲಿ ಒಬ್ಬ ಕಾನಾನ್ಯನೂ* ಇರಲ್ಲ.”+