ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಅ. ಕಾರ್ಯ 26
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಅಪೊಸ್ತಲರ ಕಾರ್ಯ ಮುಖ್ಯಾಂಶಗಳು

      • ಅಗ್ರಿಪ್ಪನ ಮುಂದೆ ಪೌಲನ ವಿವರಣೆ (1-11)

      • ಪೌಲ ಎಲ್ಲ ವಿವರಿಸಿ ಹೇಳಿದ (12-23)

      • ಫೆಸ್ತ ಮತ್ತು ಅಗ್ರಿಪ್ಪನ ಪ್ರತಿಕ್ರಿಯೆ (24-32)

ಅ. ಕಾರ್ಯ 26:1

ಮಾರ್ಜಿನಲ್ ರೆಫರೆನ್ಸ್

  • +ಅಕಾ 25:13

ಅ. ಕಾರ್ಯ 26:2

ಮಾರ್ಜಿನಲ್ ರೆಫರೆನ್ಸ್

  • +ಅಕಾ 24:5, 9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/15/2003, ಪು. 15-16

ಅ. ಕಾರ್ಯ 26:3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/15/2003, ಪು. 15-16

ಅ. ಕಾರ್ಯ 26:4

ಮಾರ್ಜಿನಲ್ ರೆಫರೆನ್ಸ್

  • +ಗಲಾ 1:13, 14

ಅ. ಕಾರ್ಯ 26:5

ಮಾರ್ಜಿನಲ್ ರೆಫರೆನ್ಸ್

  • +ಅಕಾ 23:6; ಫಿಲಿ 3:4, 5
  • +ಅಕಾ 22:3

ಅ. ಕಾರ್ಯ 26:6

ಮಾರ್ಜಿನಲ್ ರೆಫರೆನ್ಸ್

  • +ಅಕಾ 24:15

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 198-199

ಅ. ಕಾರ್ಯ 26:7

ಮಾರ್ಜಿನಲ್ ರೆಫರೆನ್ಸ್

  • +ಅಕಾ 24:20, 21

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 199

ಅ. ಕಾರ್ಯ 26:9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    6/15/1999, ಪು. 29-31

ಅ. ಕಾರ್ಯ 26:10

ಮಾರ್ಜಿನಲ್ ರೆಫರೆನ್ಸ್

  • +ಅಕಾ 9:1, 2, 14
  • +ಯೋಹಾ 16:2; ಅಕಾ 8:3; 1ಕೊರಿಂ 15:9; ಗಲಾ 1:13; 1ತಿಮೊ 1:13

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    6/15/1999, ಪು. 30

ಅ. ಕಾರ್ಯ 26:11

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    6/15/1999, ಪು. 31

ಅ. ಕಾರ್ಯ 26:13

ಮಾರ್ಜಿನಲ್ ರೆಫರೆನ್ಸ್

  • +ಅಕಾ 9:3-5; 22:6-8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 200

ಅ. ಕಾರ್ಯ 26:14

ಪಾದಟಿಪ್ಪಣಿ

  • *

    ಅಕ್ಷ. “ಮುಳ್ಳಿನ ಕೋಲಿಗೆ ಒದಿತಾ ಇದ್ರೆ.”

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 199-200

    ಹೊಸ ಲೋಕ ಭಾಷಾಂತರ, ಪು. 2667

    ಕಾವಲಿನಬುರುಜು,

    10/1/2003, ಪು. 32

    9/1/1998, ಪು. 30

    2/1/1991, ಪು. 15

ಅ. ಕಾರ್ಯ 26:16

ಮಾರ್ಜಿನಲ್ ರೆಫರೆನ್ಸ್

  • +ಅಕಾ 22:14, 15; ಗಲಾ 1:11, 12; 1ತಿಮೊ 1:12

ಅ. ಕಾರ್ಯ 26:17

ಮಾರ್ಜಿನಲ್ ರೆಫರೆನ್ಸ್

  • +ಅಕಾ 22:21; ರೋಮ 11:13

ಅ. ಕಾರ್ಯ 26:18

ಮಾರ್ಜಿನಲ್ ರೆಫರೆನ್ಸ್

  • +ಕೊಲೊ 1:13
  • +ಯೋಹಾ 8:12; 2ಕೊರಿಂ 4:6
  • +ಯೆಶಾ 61:1
  • +ಎಫೆ 2:1, 2
  • +1ಯೋಹಾ 3:5

ಅ. ಕಾರ್ಯ 26:20

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 3:8
  • +ಅಕಾ 9:22
  • +ಅಕಾ 9:28

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 200-201

ಅ. ಕಾರ್ಯ 26:21

ಮಾರ್ಜಿನಲ್ ರೆಫರೆನ್ಸ್

  • +ಅಕಾ 21:30, 31

ಅ. ಕಾರ್ಯ 26:22

ಮಾರ್ಜಿನಲ್ ರೆಫರೆನ್ಸ್

  • +ಲೂಕ 24:27, 44; ರೋಮ 3:21

ಅ. ಕಾರ್ಯ 26:23

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 22:7; 35:19; ಯೆಶಾ 50:6; 53:5
  • +ಕೀರ್ತ 16:10
  • +ಕೀರ್ತ 18:49; ಯೆಶಾ 11:10; ಲೂಕ 2:30-32

ಅ. ಕಾರ್ಯ 26:24

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 202

    ಕಾವಲಿನಬುರುಜು,

    12/15/2001, ಪು. 24

ಅ. ಕಾರ್ಯ 26:26

ಮಾರ್ಜಿನಲ್ ರೆಫರೆನ್ಸ್

  • +ಯೋಹಾ 18:20

ಅ. ಕಾರ್ಯ 26:27

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/15/2003, ಪು. 16-17

ಅ. ಕಾರ್ಯ 26:28

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 202

    ಕಾವಲಿನಬುರುಜು,

    11/15/2003, ಪು. 16-17

ಅ. ಕಾರ್ಯ 26:29

ಇಂಡೆಕ್ಸಸ್

  • ಸಂಶೋಧನಾ ಸಾಧನ

    ರಾಜ್ಯ ಸೇವೆ,

    9/1991, ಪು. 4

ಅ. ಕಾರ್ಯ 26:30

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 202

ಅ. ಕಾರ್ಯ 26:31

ಮಾರ್ಜಿನಲ್ ರೆಫರೆನ್ಸ್

  • +ಅಕಾ 23:26, 29; 25:24, 25

ಅ. ಕಾರ್ಯ 26:32

ಮಾರ್ಜಿನಲ್ ರೆಫರೆನ್ಸ್

  • +ಅಕಾ 25:11, 12

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಅ. ಕಾ. 26:1ಅಕಾ 25:13
ಅ. ಕಾ. 26:2ಅಕಾ 24:5, 9
ಅ. ಕಾ. 26:4ಗಲಾ 1:13, 14
ಅ. ಕಾ. 26:5ಅಕಾ 23:6; ಫಿಲಿ 3:4, 5
ಅ. ಕಾ. 26:5ಅಕಾ 22:3
ಅ. ಕಾ. 26:6ಅಕಾ 24:15
ಅ. ಕಾ. 26:7ಅಕಾ 24:20, 21
ಅ. ಕಾ. 26:10ಅಕಾ 9:1, 2, 14
ಅ. ಕಾ. 26:10ಯೋಹಾ 16:2; ಅಕಾ 8:3; 1ಕೊರಿಂ 15:9; ಗಲಾ 1:13; 1ತಿಮೊ 1:13
ಅ. ಕಾ. 26:13ಅಕಾ 9:3-5; 22:6-8
ಅ. ಕಾ. 26:16ಅಕಾ 22:14, 15; ಗಲಾ 1:11, 12; 1ತಿಮೊ 1:12
ಅ. ಕಾ. 26:17ಅಕಾ 22:21; ರೋಮ 11:13
ಅ. ಕಾ. 26:18ಕೊಲೊ 1:13
ಅ. ಕಾ. 26:18ಯೋಹಾ 8:12; 2ಕೊರಿಂ 4:6
ಅ. ಕಾ. 26:18ಯೆಶಾ 61:1
ಅ. ಕಾ. 26:18ಎಫೆ 2:1, 2
ಅ. ಕಾ. 26:181ಯೋಹಾ 3:5
ಅ. ಕಾ. 26:20ಮತ್ತಾ 3:8
ಅ. ಕಾ. 26:20ಅಕಾ 9:22
ಅ. ಕಾ. 26:20ಅಕಾ 9:28
ಅ. ಕಾ. 26:21ಅಕಾ 21:30, 31
ಅ. ಕಾ. 26:22ಲೂಕ 24:27, 44; ರೋಮ 3:21
ಅ. ಕಾ. 26:23ಕೀರ್ತ 22:7; 35:19; ಯೆಶಾ 50:6; 53:5
ಅ. ಕಾ. 26:23ಕೀರ್ತ 16:10
ಅ. ಕಾ. 26:23ಕೀರ್ತ 18:49; ಯೆಶಾ 11:10; ಲೂಕ 2:30-32
ಅ. ಕಾ. 26:26ಯೋಹಾ 18:20
ಅ. ಕಾ. 26:31ಅಕಾ 23:26, 29; 25:24, 25
ಅ. ಕಾ. 26:32ಅಕಾ 25:11, 12
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಓದಿ ನೂತನ ಲೋಕ ಭಾಷಾಂತರ (bi7)
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
  • 31
  • 32
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಅ. ಕಾರ್ಯ 26:1-32

ಅಪೊಸ್ತಲರ ಕಾರ್ಯ

26 ಆಗ ಅಗ್ರಿಪ್ಪ+ ಪೌಲನಿಗೆ “ನೀನು ನಿನ್ನ ಪರವಾಗಿ ಮಾತಾಡಬಹುದು” ಅಂದ. ಆಗ ಪೌಲ ತನ್ನ ಪರವಾಗಿ ಮಾತಾಡ್ತಾ ಹೀಗೆ ಹೇಳಿದ

2 “ಅಗ್ರಿಪ್ಪ ರಾಜನೇ, ಯೆಹೂದ್ಯರು ನನ್ನ ಮೇಲೆ ಯಾವೆಲ್ಲ ಆರೋಪ ಹಾಕಿದ್ದಾರೋ ಅದ್ರ ಬಗ್ಗೆ ಇವತ್ತು ನಿಮ್ಮ ಮುಂದೆ ಮಾತಾಡೋ ಅವಕಾಶ ಕೊಟ್ಟಿದ್ದಕ್ಕೆ ತುಂಬ ಖುಷಿ ಆಗ್ತಾ ಇದೆ.+ 3 ಯಾಕಂದ್ರೆ ನಿಮ್ಗೆ ಯೆಹೂದ್ಯರ ಎಲ್ಲ ಆಚಾರವಿಚಾರಗಳ ಬಗ್ಗೆ ಮತ್ತು ಅವ್ರ ವಾದವಿವಾದಗಳ ಬಗ್ಗೆ ಚೆನ್ನಾಗಿ ಗೊತ್ತು. ಹಾಗಾಗಿ ನನ್ನ ಮಾತನ್ನ ದಯವಿಟ್ಟು ತಾಳ್ಮೆಯಿಂದ ಕೇಳೋಕೆ ಬೇಡ್ಕೊಳ್ತೀನಿ.

4 “ನಾನು ಚಿಕ್ಕವನಿದ್ದಾಗಿನಿಂದ ನನ್ನ ಜನ್ರ ಜೊತೆ ಹೇಗಿದ್ದೆ ಮತ್ತು ಯೆರೂಸಲೇಮಲ್ಲಿ ನನ್ನ ಜೀವನ ಹೇಗಿತ್ತು ಅಂತ ಯೆಹೂದ್ಯರಿಗೆಲ್ಲ ಚೆನ್ನಾಗಿ ಗೊತ್ತು.+ 5 ತುಂಬ ಸಮಯದಿಂದ ಅವ್ರಿಗೆ ನನ್ನ ಪರಿಚಯ ಇದೆ. ಅವ್ರಿಗೆ ಇಷ್ಟ ಇದ್ರೆ, ನಾನೊಬ್ಬ ಫರಿಸಾಯ ಅಂತ ಅವರು ಹೇಳಬಹುದು.+ ಬೇರೆ ಎಲ್ಲ ಯೆಹೂದ್ಯರಿಗಿಂತ ಫರಿಸಾಯರು ತುಂಬ ಕಟ್ಟುನಿಟ್ಟಾಗಿ ಇರ್ತಾರೆ ಅಂತಾನೂ ನಿಮ್ಗೆ ಗೊತ್ತು.+ 6 ಆದ್ರೆ ದೇವರು ನಮ್ಮ ಪೂರ್ವಜರಿಗೆ ಕೊಟ್ಟ ಮಾತು ನೆರವೇರುತ್ತೆ ಅಂತ ನಾನು ಕಾಯ್ತಾ ಇದ್ದೀನಿ.+ ಅದಕ್ಕೇ ಈಗ ನಂಗೆ ವಿಚಾರಣೆ ಆಗ್ತಾ ಇದೆ. 7 ಆ ಮಾತು ನೆರವೇರಬೇಕು ಅಂತಾನೇ ನಮ್ಮ 12 ಕುಲದವರು ಕಾಯ್ತಾ ಇದ್ದಾರೆ. ಅದಕ್ಕಾಗಿ ಅವರು ತುಂಬ ಉತ್ಸಾಹದಿಂದ ಹಗಲೂರಾತ್ರಿ ಪವಿತ್ರಸೇವೆ ಮಾಡಿದ್ರು. ರಾಜನೇ, ನಾನೂ ಹಾಗೆ ಕಾಯ್ತಾ ಇದ್ದೀನಿ ಅಂತಾನೇ ಯೆಹೂದ್ಯರು ನನ್ನ ಮೇಲೆ ಆರೋಪ ಹಾಕ್ತಿದ್ದಾರೆ.+

8 “ದೇವರು ಸತ್ತವ್ರಿಗೆ ಮತ್ತೆ ಜೀವ ಕೊಡ್ತಾನೆ ಅನ್ನೋದನ್ನ ನಂಬೋಕೆ ನಿಮ್ಗೆ ಯಾಕೆ ಕಷ್ಟ ಆಗ್ತಾ ಇದೆ? 9 ಒಂದು ಸಮಯದಲ್ಲಿ ನಾನೂ ನಜರೇತಿನ ಯೇಸು ವಿರುದ್ಧ ತುಂಬ ಕೆಲಸಗಳನ್ನ ಮಾಡಬೇಕು ಅಂತ ನಂಬಿದ್ದೆ. 10 ಯೆರೂಸಲೇಮಲ್ಲಿ ನಾನು ಅದನ್ನೇ ಮಾಡ್ದೆ. ಮುಖ್ಯ ಪುರೋಹಿತರ ಅಧಿಕಾರ ಪಡ್ಕೊಂಡು+ ಶಿಷ್ಯರಲ್ಲಿ ತುಂಬ ಜನ್ರನ್ನ ಜೈಲಿಗೆ ಹಾಕಿದೆ.+ ಅವ್ರನ್ನ ಸಾಯಿಸೋಕೂ ಬೆಂಬಲ ಕೊಟ್ಟೆ. 11 ಎಲ್ಲ ಸಭಾಮಂದಿರಗಳಿಗೆ ಹೋಗಿ ಅವ್ರನ್ನ ಹಿಂಸಿಸಿದೆ. ಅವ್ರ ನಂಬಿಕೆ ಬಿಟ್ಟುಬಿಡೋಕೆ ಒತ್ತಾಯ ಮಾಡಿದೆ. ನಂಗೆ ಅವ್ರ ಮೇಲೆ ತುಂಬ ಕೋಪ ಇದ್ದಿದ್ರಿಂದ ಅವ್ರಿಗೆ ಹಿಂಸೆ ಕೊಡೋಕೆ ಬೇರೆಬೇರೆ ಊರುಗಳಿಗೂ ಹೋದೆ.

12 “ಅದೇ ನನ್ನ ಕೆಲಸ ಆಗಿಬಿಟ್ಟಿತ್ತು. ಒಂದು ಸಾರಿ ನಂಗೆ ದಮಸ್ಕಕ್ಕೆ ಹೋಗೋಕೆ ಮುಖ್ಯ ಪುರೋಹಿತರು ಅಧಿಕಾರ ಮತ್ತು ಅಪ್ಪಣೆ ಕೊಟ್ರು. 13 ರಾಜನೇ, ದಾರಿಯಲ್ಲಿ ಹೋಗ್ತಿರುವಾಗ ಮಧ್ಯಾಹ್ನದ ಹೊತ್ತಲ್ಲಿ ಸೂರ್ಯನಿಗಿಂತ ಹೆಚ್ಚು ಬೆಳಕು ಬೆಳ್ಳಗೆ ನನ್ನ ಸುತ್ತಲೂ ನನ್ನ ಜೊತೆ ಇದ್ದವ್ರ ಸುತ್ತಲೂ ಮಿಂಚಿತು.+ 14 ಆಗ ನಾವೆಲ್ಲ ನೆಲಕ್ಕೆ ಬಿದ್ವಿ. ಒಂದು ಧ್ವನಿ ನಂಗೆ ಹೀಬ್ರು ಭಾಷೆಯಲ್ಲಿ ‘ಸೌಲ, ಸೌಲ, ನಂಗೆ ಯಾಕೆ ಹಿಂಸೆ ಕೊಡ್ತಾ ಇದ್ದೀಯಾ? ನನ್ನ ವಿರುದ್ಧ ಹೋರಾಡಿದ್ರೆ* ನಿನಗೇ ನೋವಾಗುತ್ತೆ” ಅಂತ ಹೇಳೋದನ್ನ ಕೇಳಿಸ್ಕೊಂಡೆ. 15 ಆಗ ನಾನು ‘ಪ್ರಭು, ನೀನು ಯಾರು?’ ಅಂತ ಕೇಳಿದೆ. ಅದಕ್ಕೆ ಪ್ರಭು ನಂಗೆ ‘ನೀನು ಹಿಂಸಿಸ್ತಾ ಇರೋ ಯೇಸುನೇ ನಾನು. 16 ಈಗ ನೀನು ಎದ್ದು ನಿಂತ್ಕೊ. ನಾನು ನಿನ್ನನ್ನ ನನ್ನ ಸೇವಕನಾಗಿ ಆರಿಸ್ಕೊಂಡಿದ್ದೀನಿ. ನೀನು ನನ್ನ ಬಗ್ಗೆ ನೋಡಿರೋ ವಿಷ್ಯಗಳನ್ನ ಮತ್ತು ಮುಂದೆ ನಾನು ತೋರಿಸೋ ವಿಷ್ಯಗಳನ್ನ ನೀನು ಎಲ್ರಿಗೆ ಹೇಳಬೇಕು. ಅದಕ್ಕೇ ನಾನು ಇವತ್ತು ನಿಂಗೆ ಕಾಣಿಸ್ಕೊಂಡೆ.+ 17 ನಾನು ನಿನ್ನನ್ನ ಈ ಜನ್ರಿಂದ ಮತ್ತು ಯೆಹೂದ್ಯರಲ್ಲದ ಜನ್ರಿಂದ ಕಾಪಾಡ್ತೀನಿ. ಅವ್ರ ಹತ್ರ ನಾನು ನಿನ್ನನ್ನ ಕಳಿಸ್ತೀನಿ.+ 18 ಅವರು ಕತ್ತಲಿಂದ+ ಬೆಳಕಿನ+ ಕಡೆ ತಿರುಗೋ ತರ ನೀನು ಅವ್ರ ಕಣ್ಣು ತೆರಿಬೇಕು.+ ಸೈತಾನನ ಅಧಿಕಾರದಿಂದ+ ದೇವ್ರ ಅಧಿಕಾರದ ಕೆಳಗೆ ಬರೋಕೆ ಅವ್ರಿಗೆ ಸಹಾಯ ಮಾಡಬೇಕು. ಆಗ ದೇವರು ಅವ್ರ ಪಾಪಗಳನ್ನ ಕ್ಷಮಿಸ್ತಾನೆ.+ ಅವರು ನನ್ನ ಮೇಲೆ ನಂಬಿಕೆ ಇಟ್ರೆ ದೇವರು ಅವ್ರಿಗೆ ಆಶೀರ್ವಾದ ಮಾಡಿ ತನ್ನ ಪವಿತ್ರ ಜನ್ರನ್ನಾಗಿ ಮಾಡ್ಕೊಳ್ತಾನೆ’ ಅಂದನು.

19 “ಹಾಗಾಗಿ ಅಗ್ರಿಪ್ಪ ರಾಜನೇ, ಸ್ವರ್ಗದಿಂದ ಬಂದ ಆ ದರ್ಶನದಲ್ಲಿ ಯೇಸು ನಂಗೆ ಹೇಳಿದ್ದನ್ನೇ ನಾನು ಮಾಡಿದೆ. 20 ‘ಪಶ್ಚಾತ್ತಾಪಪಡಿ, ತಪ್ಪು ತಿದ್ಕೊಂಡು ಜೀವನ ಮಾಡಿ.+ ದೇವ್ರ ಹತ್ರ ವಾಪಸ್‌ ಬನ್ನಿ’ ಅನ್ನೋ ಸಂದೇಶನ ಮೊದಲು ದಮಸ್ಕಕ್ಕೆ+ ಹೋಗಿ ಸಾರಿದೆ. ಆಮೇಲೆ ಯೆರೂಸಲೇಮಲ್ಲಿ,+ ಇಡೀ ಯೂದಾಯದಲ್ಲಿ ಸುತ್ತಾಡಿ ಯೆಹೂದ್ಯರಿಗೂ ಯೆಹೂದ್ಯರಲ್ಲದ ಜನ್ರಿಗೂ ಈ ಸಂದೇಶ ಸಾರಿದೆ. 21 ಅದಕ್ಕೇ ಯೆಹೂದ್ಯರು ದೇವಾಲಯದಲ್ಲಿ ನನ್ನನ್ನ ಹಿಡಿದು ಸಾಯಿಸೋಕೆ ಪ್ರಯತ್ನ ಮಾಡಿದ್ರು.+ 22 ಆದ್ರೆ ದೇವರು ನಂಗೆ ಸಹಾಯ ಮಾಡಿದ್ರಿಂದ ಇವತ್ತಿನ ತನಕ ನಾನು ಚಿಕ್ಕವರಿಂದ ದೊಡ್ಡವರ ತನಕ ಸಾರ್ತಾ ಇದ್ದೀನಿ. ಪ್ರವಾದಿಗಳು ಮತ್ತು ಮೋಶೆ ಏನಾಗುತ್ತೆ ಅಂತ ಹೇಳಿದ್ರೋ ಅದನ್ನೇ ನಾನು ಹೇಳ್ತಾ ಇದ್ದೀನಿ.+ ಅದನ್ನ ಬಿಟ್ಟು ಬೇರೇನೂ ಹೇಳಿಲ್ಲ. 23 ಕ್ರಿಸ್ತ ಚಿತ್ರಹಿಂಸೆ+ ಅನುಭವಿಸ್ತಾನೆ, ಸತ್ತವ್ರಲ್ಲೇ ಮೊದಲು ಮತ್ತೆ ಬದುಕಿ ಬರೋದು ಆತನೇ,+ ಯೆಹೂದ್ಯರಿಗೂ ಯೆಹೂದ್ಯರಲ್ಲದ ಜನ್ರಿಗೂ ಸಿಹಿಸುದ್ದಿ ಹೇಳಿ ಬೆಳಕನ್ನ ಕೊಡ್ತಾನೆ ಅಂತ ಅವರು ಬರೆದ್ರು.”+

24 ಪೌಲ ಹೀಗೆ ಮಾತಾಡ್ತಾ ಇರುವಾಗ ಫೆಸ್ತ ಜೋರಾಗಿ “ಪೌಲ ನಿಂಗೆ ಹುಚ್ಚು ಹಿಡಿದಿದೆ! ತುಂಬ ಓದಿ ನಿನ್ನ ತಲೆ ಕೆಟ್ಟಿದೆ!” ಅಂದ. 25 ಆದ್ರೆ ಪೌಲ “ಮಹಾ ಪ್ರಭು ಫೆಸ್ತ, ನಂಗೆ ಹುಚ್ಚು ಹಿಡಿದಿಲ್ಲ. ನಾನು ಹೇಳ್ತಾ ಇರೋದು ನಿಜ. ನಾನು ಚೆನ್ನಾಗಿ ಯೋಚನೆ ಮಾಡಿ ಮಾತಾಡ್ತಾ ಇದ್ದೀನಿ. 26 ನಾನು ಯಾರ ಜೊತೆ ಮುಚ್ಚುಮರೆ ಇಲ್ಲದೆ ಮಾತಾಡ್ತಾ ಇದ್ದೀನೋ ಆ ರಾಜನಿಗೆ ಈ ವಿಷ್ಯಗಳ ಬಗ್ಗೆ ಚೆನ್ನಾಗಿ ಗೊತ್ತು. ಅದ್ರಲ್ಲಿ ಒಂದ್ರ ಬಗ್ಗೆನೂ ಆತನಿಗೆ ಗೊತ್ತಿಲ್ಲ ಅಂತಿಲ್ಲ. ಯಾಕಂದ್ರೆ ಇದೆಲ್ಲ ಯಾವುದೋ ಒಂದು ಮೂಲೆಯಲ್ಲಿ ಗುಟ್ಟಾಗಿ ನಡೆದಿದ್ದಲ್ಲ.+ 27 ಅಗ್ರಿಪ್ಪ ರಾಜಾ, ನೀನು ಪ್ರವಾದಿಗಳು ಹೇಳಿದ್ದನ್ನ ನಂಬ್ತೀಯಾ? ನೀನು ನಂಬ್ತೀಯ ಅಂತ ನಂಗೊತ್ತು” ಅಂದ. 28 ಆಗ ಅಗ್ರಿಪ್ಪ ರಾಜ ಪೌಲನಿಗೆ “ನಿನಗೆ ಇನ್ನು ಸ್ವಲ್ಪ ಸಮಯ ಕೊಟ್ರೆ ನನ್ನನ್ನ ಕ್ರೈಸ್ತನನ್ನಾಗಿ ಬದಲಾಯಿಸಿ ಬಿಡ್ತೀಯ” ಅಂದ. 29 ಅದಕ್ಕೆ ಪೌಲ “ಇವತ್ತಲ್ಲ ನಾಳೆ ನೀನು ಮಾತ್ರ ಅಲ್ಲ, ನಾನು ಮಾತಾಡ್ತಾ ಇರೋದನ್ನ ಕೇಳಿಸ್ಕೊಳ್ತಾ ಇರೋ ಜನ್ರೆಲ್ಲ ನನ್ನ ತರ ಆಗಬೇಕು ಅಂತ ದೇವ್ರ ಹತ್ರ ಬೇಡ್ಕೊಳ್ತೀನಿ. ಆದ್ರೆ ಅವ್ರಿಗೆ ನನ್ನ ತರ ಬೇಡಿ ಹಾಕೊಳ್ಳೋ ಪರಿಸ್ಥಿತಿ ಬರಬಾರದು” ಅಂದ.

30 ಆಗ ರಾಜ ಎದ್ದುನಿಂತ. ರಾಜ್ಯಪಾಲ, ಬೆರ್ನಿಕೆ ಮತ್ತು ಅವ್ರ ಜೊತೆ ಕೂತವ್ರೆಲ್ಲ ಎದ್ದುನಿಂತ್ರು. 31 ಅವರು ಅಲ್ಲಿಂದ ಹೋಗ್ತಾ ಇದ್ದಾಗ “ಮರಣಶಿಕ್ಷೆ ಕೊಡುವಂಥ ತಪ್ಪಾಗಲಿ, ಜೈಲಿಗೆ ಹಾಕುವಷ್ಟು ದೊಡ್ಡ ಅಪರಾಧವಾಗಲಿ ಈ ಮನುಷ್ಯ ಮಾಡಿಲ್ಲ”+ ಅಂತ ಮಾತಾಡ್ಕೊಂಡ್ರು. 32 ಆಮೇಲೆ ಅಗ್ರಿಪ್ಪ ಫೆಸ್ತನಿಗೆ “ಈ ಮನುಷ್ಯ ತನ್ನ ಕೇಸನ್ನ ರಾಜನ ಹತ್ರ ತಗೊಂಡು ಹೋಗೋಕೆ ಕೇಳದೆ ಇದ್ದಿದ್ರೆ ಇವನನ್ನ ಬಿಡುಗಡೆ ಮಾಡಬಹುದಿತ್ತು”+ ಅಂದ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ