ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಮತ್ತಾಯ 21
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಮತ್ತಾಯ ಮುಖ್ಯಾಂಶಗಳು

      • ಯೇಸು ಅದ್ಧೂರಿಯಾಗಿ ಒಳಗೆ ಬಂದನು (1-11)

      • ಯೇಸು ದೇವಾಲಯ ಶುಚಿ ಮಾಡಿದನು (12-17)

      • ಅಂಜೂರ ಮರಕ್ಕೆ ಶಾಪ (18-22)

      • ಯೇಸುವಿನ ಅಧಿಕಾರವನ್ನ ಪ್ರಶ್ನಿಸಿದ್ರು (23-27)

      • ಇಬ್ರು ಮಕ್ಕಳ ಉದಾಹರಣೆ (28-32)

      • ಕೊಲೆಗಾರ ರೈತರ ಉದಾಹರಣೆ (33-46)

        • ಮುಖ್ಯವಾದ ಮೂಲೆಗಲ್ಲನ್ನ ಬೇಡಂತ ಬಿಟ್ಟುಬಿಟ್ರು (42)

ಮತ್ತಾಯ 21:1

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 11:1-3; ಲೂಕ 19:28-31

ಮತ್ತಾಯ 21:4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    8/1/1999, ಪು. 14-15

    ಮಹಾನ್‌ ಪುರುಷ, ಅಧ್ಯಾ. 102

ಮತ್ತಾಯ 21:5

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 11:29
  • +ಯೆಶಾ 62:11; ಯೋಹಾ 12:15
  • +ಜೆಕ 9:9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    8/15/2011, ಪು. 12

    8/1/1999, ಪು. 14-15

    ಮಹಾನ್‌ ಪುರುಷ, ಅಧ್ಯಾ. 102

ಮತ್ತಾಯ 21:6

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 11:4-6; ಲೂಕ 19:32-35

ಮತ್ತಾಯ 21:7

ಮಾರ್ಜಿನಲ್ ರೆಫರೆನ್ಸ್

  • +1ಅರ 1:38, 40; ಮಾರ್ಕ 11:7-11; ಯೋಹಾ 12:14, 15

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/1/1997, ಪು. 30-31

    ಮಹಾನ್‌ ಪುರುಷ, ಅಧ್ಯಾ. 102

ಮತ್ತಾಯ 21:8

ಮಾರ್ಜಿನಲ್ ರೆಫರೆನ್ಸ್

  • +ಲೂಕ 19:36-38

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/1/1997, ಪು. 30-31

ಮತ್ತಾಯ 21:9

ಪಾದಟಿಪ್ಪಣಿ

  • *

    ಪರಿಶಿಷ್ಟ ಎ5 ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 9:27; 21:15
  • +ಕೀರ್ತ 118:25, 26; ಯೋಹಾ 12:13
  • +ಮಾರ್ಕ 11:9, 10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    12/2017, ಪು. 9

    ಕಾವಲಿನಬುರುಜು,

    3/1/1997, ಪು. 30-31

ಮತ್ತಾಯ 21:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/1/2011, ಪು. 3

ಮತ್ತಾಯ 21:11

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 21:46; ಲೂಕ 7:16; 24:19

ಮತ್ತಾಯ 21:12

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 11:15, 16; ಲೂಕ 19:45; ಯೋಹಾ 2:15

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    12/15/2011, ಪು. 10

    3/15/1998, ಪು. 6

    ಮಹಾನ್‌ ಪುರುಷ, ಅಧ್ಯಾ. 103

ಮತ್ತಾಯ 21:13

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 56:7
  • +ಯೆರೆ 7:11; ಮಾರ್ಕ 11:17; ಲೂಕ 19:46; ಯೋಹಾ 2:16

ಇಂಡೆಕ್ಸಸ್

  • ಸಂಶೋಧನಾ ಸಾಧನ

    “ನನ್ನನ್ನು ಹಿಂಬಾಲಿಸಿರಿ”, ಪು. 101-102

    ಕಾವಲಿನಬುರುಜು (ಅಧ್ಯಯನ),

    6/2017, ಪು. 32

    ಕಾವಲಿನಬುರುಜು,

    12/15/2011, ಪು. 10

    3/15/1998, ಪು. 6

    ಮಹಾನ್‌ ಪುರುಷ, ಅಧ್ಯಾ. 103

ಮತ್ತಾಯ 21:15

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 21:9
  • +ಮಾರ್ಕ 11:18; ಲೂಕ 19:39, 40

ಮತ್ತಾಯ 21:16

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 8:2

ಇಂಡೆಕ್ಸಸ್

  • ಸಂಶೋಧನಾ ಸಾಧನ

    “ನನ್ನನ್ನು ಹಿಂಬಾಲಿಸಿರಿ”, ಪು. 101-102

    ಕಾವಲಿನಬುರುಜು,

    1/1/1995, ಪು. 24-26

ಮತ್ತಾಯ 21:17

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 11:11; ಲೂಕ 21:37; ಯೋಹಾ 11:1

ಮತ್ತಾಯ 21:18

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 11:12

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಮಹಾನ್‌ ಪುರುಷ, ಅಧ್ಯಾ. 103, 105

ಮತ್ತಾಯ 21:19

ಮಾರ್ಜಿನಲ್ ರೆಫರೆನ್ಸ್

  • +ಲೂಕ 13:6
  • +ಮತ್ತಾ 3:10; ಮಾರ್ಕ 11:13, 14

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಮಹಾನ್‌ ಪುರುಷ, ಅಧ್ಯಾ. 103, 105

ಮತ್ತಾಯ 21:20

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 11:20, 21

ಮತ್ತಾಯ 21:21

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 17:20; ಮಾರ್ಕ 11:22, 23; ಲೂಕ 17:6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಮಹಾನ್‌ ಪುರುಷ, ಅಧ್ಯಾ. 105

ಮತ್ತಾಯ 21:22

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 11:24; ಲೂಕ 11:9; ಯೋಹಾ 14:13; ಯಾಕೋ 1:5; 1ಯೋಹಾ 3:22

ಮತ್ತಾಯ 21:23

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 11:27-33; ಲೂಕ 20:1-8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/15/1999, ಪು. 25, 26-27

    ಮಹಾನ್‌ ಪುರುಷ, ಅಧ್ಯಾ. 105

ಮತ್ತಾಯ 21:25

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 21:32; ಮಾರ್ಕ 11:30, 31; ಲೂಕ 7:29, 30

ಮತ್ತಾಯ 21:28

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/1/1994, ಪು. 28-29

ಮತ್ತಾಯ 21:29

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/1/1994, ಪು. 28-29

    ಮಹಾನ್‌ ಪುರುಷ, ಅಧ್ಯಾ. 106

ಮತ್ತಾಯ 21:30

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/1/1994, ಪು. 28-29

    ಮಹಾನ್‌ ಪುರುಷ, ಅಧ್ಯಾ. 106

ಮತ್ತಾಯ 21:31

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/1/1994, ಪು. 28-29

    ಮಹಾನ್‌ ಪುರುಷ, ಅಧ್ಯಾ. 106

ಮತ್ತಾಯ 21:32

ಮಾರ್ಜಿನಲ್ ರೆಫರೆನ್ಸ್

  • +ಲೂಕ 3:12; 7:29, 30

ಮತ್ತಾಯ 21:33

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 5:7
  • +ಯೆಶಾ 5:2
  • +ಮಾರ್ಕ 12:1-9; ಲೂಕ 20:9-16

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಮಹಾನ್‌ ಪುರುಷ, ಅಧ್ಯಾ. 106

ಮತ್ತಾಯ 21:34

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಮಹಾನ್‌ ಪುರುಷ, ಅಧ್ಯಾ. 106

ಮತ್ತಾಯ 21:35

ಮಾರ್ಜಿನಲ್ ರೆಫರೆನ್ಸ್

  • +ನೆಹೆ 9:26

ಮತ್ತಾಯ 21:36

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 36:15; ಅಕಾ 7:52; ಇಬ್ರಿ 11:32, 37

ಮತ್ತಾಯ 21:38

ಮಾರ್ಜಿನಲ್ ರೆಫರೆನ್ಸ್

  • +ಇಬ್ರಿ 1:2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಮಹಾನ್‌ ಪುರುಷ, ಅಧ್ಯಾ. 106

ಮತ್ತಾಯ 21:39

ಮಾರ್ಜಿನಲ್ ರೆಫರೆನ್ಸ್

  • +ಅಕಾ 2:23; 3:15

ಮತ್ತಾಯ 21:41

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಮಹಾನ್‌ ಪುರುಷ, ಅಧ್ಯಾ. 106

ಮತ್ತಾಯ 21:42

ಪಾದಟಿಪ್ಪಣಿ

  • *

    ಪರಿಶಿಷ್ಟ ಎ5 ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 28:16; ಲೂಕ 20:17; ಅಕಾ 4:11; ರೋಮ 9:33; ಎಫೆ 2:20; 1ಪೇತ್ರ 2:7
  • +ಕೀರ್ತ 118:22, 23; ಮಾರ್ಕ 12:10, 11

ಮತ್ತಾಯ 21:43

ಪಾದಟಿಪ್ಪಣಿ

  • *

    ಅಥವಾ “ದೇವರ ಆಳ್ವಿಕೆಗೆ ಯೋಗ್ಯವಾದ ಫಲ ಕೊಡೋ.”

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/15/2010, ಪು. 24

    2/15/2006, ಪು. 22

    3/15/1998, ಪು. 13

    7/1/1995, ಪು. 11

    ಮಹಾನ್‌ ಪುರುಷ, ಅಧ್ಯಾ. 106

ಮತ್ತಾಯ 21:44

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 8:14; 1ಪೇತ್ರ 2:7, 8
  • +ಲೂಕ 20:18

ಮತ್ತಾಯ 21:45

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 12:12; ಲೂಕ 20:19

ಮತ್ತಾಯ 21:46

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 21:11; ಯೋಹಾ 7:40

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಮತ್ತಾ. 21:1ಮಾರ್ಕ 11:1-3; ಲೂಕ 19:28-31
ಮತ್ತಾ. 21:5ಮತ್ತಾ 11:29
ಮತ್ತಾ. 21:5ಯೆಶಾ 62:11; ಯೋಹಾ 12:15
ಮತ್ತಾ. 21:5ಜೆಕ 9:9
ಮತ್ತಾ. 21:6ಮಾರ್ಕ 11:4-6; ಲೂಕ 19:32-35
ಮತ್ತಾ. 21:71ಅರ 1:38, 40; ಮಾರ್ಕ 11:7-11; ಯೋಹಾ 12:14, 15
ಮತ್ತಾ. 21:8ಲೂಕ 19:36-38
ಮತ್ತಾ. 21:9ಮತ್ತಾ 9:27; 21:15
ಮತ್ತಾ. 21:9ಕೀರ್ತ 118:25, 26; ಯೋಹಾ 12:13
ಮತ್ತಾ. 21:9ಮಾರ್ಕ 11:9, 10
ಮತ್ತಾ. 21:11ಮತ್ತಾ 21:46; ಲೂಕ 7:16; 24:19
ಮತ್ತಾ. 21:12ಮಾರ್ಕ 11:15, 16; ಲೂಕ 19:45; ಯೋಹಾ 2:15
ಮತ್ತಾ. 21:13ಯೆಶಾ 56:7
ಮತ್ತಾ. 21:13ಯೆರೆ 7:11; ಮಾರ್ಕ 11:17; ಲೂಕ 19:46; ಯೋಹಾ 2:16
ಮತ್ತಾ. 21:15ಮತ್ತಾ 21:9
ಮತ್ತಾ. 21:15ಮಾರ್ಕ 11:18; ಲೂಕ 19:39, 40
ಮತ್ತಾ. 21:16ಕೀರ್ತ 8:2
ಮತ್ತಾ. 21:17ಮಾರ್ಕ 11:11; ಲೂಕ 21:37; ಯೋಹಾ 11:1
ಮತ್ತಾ. 21:18ಮಾರ್ಕ 11:12
ಮತ್ತಾ. 21:19ಲೂಕ 13:6
ಮತ್ತಾ. 21:19ಮತ್ತಾ 3:10; ಮಾರ್ಕ 11:13, 14
ಮತ್ತಾ. 21:20ಮಾರ್ಕ 11:20, 21
ಮತ್ತಾ. 21:21ಮತ್ತಾ 17:20; ಮಾರ್ಕ 11:22, 23; ಲೂಕ 17:6
ಮತ್ತಾ. 21:22ಮಾರ್ಕ 11:24; ಲೂಕ 11:9; ಯೋಹಾ 14:13; ಯಾಕೋ 1:5; 1ಯೋಹಾ 3:22
ಮತ್ತಾ. 21:23ಮಾರ್ಕ 11:27-33; ಲೂಕ 20:1-8
ಮತ್ತಾ. 21:25ಮತ್ತಾ 21:32; ಮಾರ್ಕ 11:30, 31; ಲೂಕ 7:29, 30
ಮತ್ತಾ. 21:32ಲೂಕ 3:12; 7:29, 30
ಮತ್ತಾ. 21:33ಯೆಶಾ 5:7
ಮತ್ತಾ. 21:33ಯೆಶಾ 5:2
ಮತ್ತಾ. 21:33ಮಾರ್ಕ 12:1-9; ಲೂಕ 20:9-16
ಮತ್ತಾ. 21:35ನೆಹೆ 9:26
ಮತ್ತಾ. 21:362ಪೂರ್ವ 36:15; ಅಕಾ 7:52; ಇಬ್ರಿ 11:32, 37
ಮತ್ತಾ. 21:38ಇಬ್ರಿ 1:2
ಮತ್ತಾ. 21:39ಅಕಾ 2:23; 3:15
ಮತ್ತಾ. 21:42ಯೆಶಾ 28:16; ಲೂಕ 20:17; ಅಕಾ 4:11; ರೋಮ 9:33; ಎಫೆ 2:20; 1ಪೇತ್ರ 2:7
ಮತ್ತಾ. 21:42ಕೀರ್ತ 118:22, 23; ಮಾರ್ಕ 12:10, 11
ಮತ್ತಾ. 21:44ಯೆಶಾ 8:14; 1ಪೇತ್ರ 2:7, 8
ಮತ್ತಾ. 21:44ಲೂಕ 20:18
ಮತ್ತಾ. 21:45ಮಾರ್ಕ 12:12; ಲೂಕ 20:19
ಮತ್ತಾ. 21:46ಮತ್ತಾ 21:11; ಯೋಹಾ 7:40
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಓದಿ ನೂತನ ಲೋಕ ಭಾಷಾಂತರ (bi7)
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
  • 31
  • 32
  • 33
  • 34
  • 35
  • 36
  • 37
  • 38
  • 39
  • 40
  • 41
  • 42
  • 43
  • 44
  • 45
  • 46
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಮತ್ತಾಯ 21:1-46

ಮತ್ತಾಯ

21 ಅವರು ಪ್ರಯಾಣಮಾಡಿ ಯೆರೂಸಲೇಮಿನ ಹತ್ರ ಬಂದ್ರು. ಆಲೀವ್‌ ಗುಡ್ಡದ ಮೇಲಿದ್ದ ಬೇತ್ಫಗೆಗೆ ಬಂದಾಗ ಯೇಸು ಇಬ್ರು ಶಿಷ್ಯರನ್ನ ಕರೆದು+ 2 “ಅಲ್ಲಿ ಮುಂದೆ ಕಾಣ್ತಾ ಇದ್ಯಲ್ಲಾ, ಆ ಹಳ್ಳಿಗೆ ಹೋಗಿ. ಅಲ್ಲಿ ಒಂದು ಕತ್ತೆಯನ್ನ, ಅದ್ರ ಮರಿನ ಕಟ್ಟಿಹಾಕಿರೋದು ನಿಮಗೆ ಕಾಣಿಸುತ್ತೆ. ಅವನ್ನ ಬಿಚ್ಚಿ ನನ್ನ ಹತ್ರ ತನ್ನಿ. 3 ಯಾರಾದ್ರೂ ಕೇಳಿದ್ರೆ ‘ಇವು ನಮ್ಮ ಸ್ವಾಮಿಗೆ ಬೇಕು’ ಅಂತ ಹೇಳಿ. ಆಗ ಅವನು ಬಿಟ್ಟುಬಿಡ್ತಾನೆ” ಅಂದನು.

4 ಪ್ರವಾದಿ ಮೂಲಕ ಹೇಳಿದ್ದ ಮಾತು ನಿಜ ಆಗೋಕೆ ಇದೆಲ್ಲ ನಡಿತು. ಆ ಮಾತು ಏನಂದ್ರೆ 5 “‘ನಿನ್ನ ರಾಜ ಮೃದುಸ್ವಭಾವದವನು.+ ಆತನು ಕತ್ತೆ ಮೇಲೆ, ಕತ್ತೆಮರಿ ಮೇಲೆ ಹತ್ತಿ ನಿನ್ನ ಹತ್ರ ಬರ್ತಿದ್ದಾನೆ’+ ಅಂತ ಚೀಯೋನ್‌ ಪಟ್ಟಣಕ್ಕೆ ಹೇಳಿ.”+

6 ಶಿಷ್ಯರು ಯೇಸು ಹೇಳಿದ ಹಾಗೆ ಮಾಡಿದ್ರು.+ 7 ಆ ಕತ್ತೆ ಮತ್ತು ಮರಿಯನ್ನ ತಂದು ಅವುಗಳ ಮೇಲೆ ತಮ್ಮ ಬಟ್ಟೆಗಳನ್ನ ಹಾಕಿದ್ರು. ಯೇಸು ಅದ್ರ ಮೇಲೆ ಹತ್ತಿ ಕೂತನು.+ 8 ತುಂಬ ಜನ ಅವ್ರ ಬಟ್ಟೆಯನ್ನ ದಾರಿಯಲ್ಲಿ ಹಾಸಿದ್ರು.+ ಇನ್ನು ಸ್ವಲ್ಪ ಜನ ಮರದ ಗರಿಗಳನ್ನ ಕತ್ತರಿಸಿ ದಾರಿಯಲ್ಲಿ ಹಾಸಿದ್ರು. 9 ಆತನ ಹಿಂದೆ-ಮುಂದೆ ಇದ್ದ ಜನ “ದೇವರೇ, ದಾವೀದನ ಮಗನಿಗೆ ಜಯವಾಗಲಿ!+ ಯೆಹೋವನ* ಹೆಸ್ರಲ್ಲಿ ಬರ್ತಿರೋ ಇವನಿಗೆ ಆಶೀರ್ವಾದ ಸಿಗಲಿ!+ ಸ್ವರ್ಗದಲ್ಲಿ ವಾಸಿಸೋ ದೇವರೇ ಇವನಿಗೆ ಜಯವಾಗಲಿ!” ಅಂತ ಕೂಗ್ತಿದ್ರು.+

10 ಆತನು ಯೆರೂಸಲೇಮಿಗೆ ಬಂದಾಗ ಪಟ್ಟಣದಲ್ಲೆಲ್ಲ ಗದ್ದಲ ಶುರು ಆಯ್ತು. “ಇವನು ಯಾರು?” ಅಂತ ಎಲ್ರೂ ಮಾತಾಡ್ಕೊಳ್ತಿದ್ರು. 11 ಅದಕ್ಕೆ ಜನ “ಇವನು ಯೇಸು. ಗಲಿಲಾಯದ ನಜರೇತಿನಲ್ಲಿರೋ ಪ್ರವಾದಿ”+ ಅಂತ ಹೇಳ್ತಿದ್ರು.

12 ಆಮೇಲೆ ಯೇಸು ದೇವಾಲಯಕ್ಕೆ ಬಂದು ಅಲ್ಲಿದ್ದ ವ್ಯಾಪಾರಿಗಳನ್ನ, ಗಿರಾಕಿಗಳನ್ನ ಹೊರಗೆ ಓಡಿಸಿದನು. ಹಣ ಬದಲಾಯಿಸ್ತಿದ್ದ ಜನ್ರ ಮೇಜುಗಳನ್ನ, ಪಾರಿವಾಳ ಮಾರ್ತಿದ್ದ ಜನ್ರ ಕುರ್ಚಿಗಳನ್ನ ಎತ್ತಿ ಬಿಸಾಡಿದನು.+ 13 ಅವ್ರಿಗೆ “‘ನನ್ನ ಆಲಯಕ್ಕೆ ಪ್ರಾರ್ಥನಾ ಮಂದಿರ ಅನ್ನೋ ಹೆಸ್ರು ಬರುತ್ತೆ’+ ಅಂತ ಬರೆದಿದೆ. ಆದ್ರೆ ನೀವು ಇದನ್ನ ‘ಕಳ್ಳರ ಸಂತೆ’ ಮಾಡ್ತಾ ಇದ್ದೀರ”+ ಅಂದನು. 14 ಅಷ್ಟೇ ಅಲ್ಲ ಆಲಯದಲ್ಲಿದ್ದಾಗ ಕುರುಡರು ಕುಂಟರು ಆತನ ಹತ್ರ ಬಂದ್ರು. ಆತನು ಅವ್ರನ್ನ ವಾಸಿಮಾಡಿದನು.

15 ಮುಖ್ಯ ಪುರೋಹಿತರು, ಪಂಡಿತರು ಯೇಸು ಮಾಡಿದ ಅದ್ಭುತಗಳನ್ನ ನೋಡಿದ್ರು. ಅಷ್ಟೇ ಅಲ್ಲ ದೇವಾಲಯದಲ್ಲಿ ಹುಡುಗರು “ದೇವರೇ, ದಾವೀದನ ಮಗನನ್ನ ಕಾಪಾಡು!” ಅಂತ ಕೂಗ್ತಿದ್ರು.+ ಇದೆಲ್ಲ ನೋಡಿ ಮುಖ್ಯ ಪುರೋಹಿತರಿಗೆ ಪಂಡಿತರಿಗೆ ತುಂಬ ಕೋಪ ಬಂತು.+ 16 ಅವರು ಯೇಸುಗೆ “ಇವರು ಹೇಳ್ತಿರೋದು ನಿನಗೆ ಕೇಳ್ತಿದ್ಯಾ?” ಅಂದ್ರು. ಅದಕ್ಕೆ ಯೇಸು “ಹಾ, ಕೇಳ್ತಿದೆ. ‘ಚಿಕ್ಕಮಕ್ಕಳು ಪುಟಾಣಿಗಳು ನಿನ್ನನ್ನ ಹೊಗಳೋ ಹಾಗೆ ಮಾಡಿದ್ದೀಯ’ ಅಂತ ಬರೆದಿರೋದನ್ನ ನೀವು ಓದಿಲ್ವಾ?” ಅಂದನು.+ 17 ಆಮೇಲೆ ಯೇಸು ಆ ಪಟ್ಟಣ ಬಿಟ್ಟು ಬೇಥಾನ್ಯಕ್ಕೆ ಬಂದು ರಾತ್ರಿ ಅಲ್ಲೇ ಉಳಿದನು.+

18 ಬೆಳಿಗ್ಗೆ ಪಟ್ಟಣಕ್ಕೆ ವಾಪಸ್‌ ಬರ್ತಿದ್ದಾಗ ಯೇಸುಗೆ ಹಸಿವಾಯ್ತು.+ 19 ದಾರಿ ಪಕ್ಕದಲ್ಲಿದ್ದ ಒಂದು ಅಂಜೂರ ಮರ ನೋಡಿ ಹತ್ರ ಹೋದನು. ಅದ್ರಲ್ಲಿ ಎಲೆ ಬಿಟ್ಟು ಬೇರೇನೂ ಇರ್ಲಿಲ್ಲ.+ ಆಗ ಯೇಸು “ಇನ್ಮುಂದೆ ಯಾವತ್ತೂ ನೀನು ಹಣ್ಣು ಕೊಡದ ಹಾಗೆ ಆಗಲಿ” ಅಂದನು.+ ಅದೇ ಕ್ಷಣ ಅಂಜೂರ ಮರ ಒಣಗಿಹೋಯ್ತು. 20 ಶಿಷ್ಯರು ಇದನ್ನ ನೋಡಿ ಆಶ್ಚರ್ಯದಿಂದ “ಈ ಅಂಜೂರ ಮರ ಹೇಗೆ ಒಂದೇ ಕ್ಷಣದಲ್ಲಿ ಒಣಗಿಹೋಯ್ತು?”+ ಅಂದ್ರು. 21 ಅದಕ್ಕೆ ಯೇಸು “ನಿಮಗೆ ನಿಜ ಹೇಳ್ತೀನಿ, ನಿಮಗೆ ನಂಬಿಕೆ ಇದ್ರೆ, ಸಂಶಯಪಡದೆ ಇದ್ರೆ, ನಾನು ಆ ಅಂಜೂರ ಮರಕ್ಕೆ ಮಾಡಿದ್ದನ್ನ ನೀವೂ ಮಾಡ್ತೀರ. ಅಷ್ಟೇ ಅಲ್ಲ ಆ ಬೆಟ್ಟಕ್ಕೆ ‘ಹೋಗಿ ಆ ಸಮುದ್ರಕ್ಕೆ ಬೀಳು’ ಅಂತ ಹೇಳಿದ್ರೆ ಹಾಗೇ ಆಗುತ್ತೆ.+ 22 ನಂಬಿಕೆಯಿಂದ ಏನೇ ಬೇಡ್ಕೊಂಡ್ರೂ ಅದೆಲ್ಲ ಸಿಗುತ್ತೆ”+ ಅಂದನು.

23 ಯೇಸು ದೇವಾಲಯದಲ್ಲಿ ಕಲಿಸ್ತಿದ್ದಾಗ ಮುಖ್ಯ ಪುರೋಹಿತರು, ಹಿರಿಯರು ಬಂದು “ಯಾವ ಅಧಿಕಾರದಿಂದ ನೀನು ಇದೆಲ್ಲ ಮಾಡ್ತಿದ್ದೀಯ? ಯಾರು ನಿನಗೆ ಅಧಿಕಾರ ಕೊಟ್ರು?” ಅಂತ ಕೇಳಿದ್ರು.+ 24 ಅದಕ್ಕೆ ಯೇಸು “ನಾನೂ ನಿಮಗೆ ಒಂದು ಪ್ರಶ್ನೆ ಕೇಳ್ತೀನಿ. ಅದಕ್ಕೆ ಉತ್ರ ಕೊಟ್ರೆ ನಾನು ಯಾವ ಅಧಿಕಾರದಿಂದ ಇದೆಲ್ಲ ಮಾಡ್ತಾ ಇದ್ದೀನಿ ಅಂತ ಹೇಳ್ತೀನಿ. 25 ದೀಕ್ಷಾಸ್ನಾನ ಮಾಡಿಸೋ ಅಧಿಕಾರ ಯೋಹಾನನಿಗೆ ಯಾರು ಕೊಟ್ರು? ದೇವರಾ? ಮನುಷ್ಯರಾ?” ಅಂದನು. ಅದಕ್ಕೆ ಅವರು ಒಬ್ಬರಿಗೊಬ್ರು “‘ದೇವರು’ ಅಂತ ಹೇಳಿದ್ರೆ ‘ನೀವ್ಯಾಕೆ ಅವನನ್ನ ನಂಬಲಿಲ್ಲ?’ ಅಂತ ಕೇಳ್ತಾನೆ.+ 26 ‘ಮನುಷ್ಯರು’ ಅಂತ ಹೇಳಿದ್ರೆ ಈ ಜನ್ರೆಲ್ಲ ನಮ್ಮನ್ನ ಸುಮ್ನೆ ಬಿಡಲ್ಲ. ಯಾಕಂದ್ರೆ ಅವ್ರೆಲ್ಲ ಯೋಹಾನ ಒಬ್ಬ ಪ್ರವಾದಿ ಅಂತ ನಂಬ್ತಾರೆ” ಅಂತ ಮಾತಾಡ್ಕೊಂಡ್ರು. 27 ಹಾಗಾಗಿ ಅವರು “ನಮಗೆ ಗೊತ್ತಿಲ್ಲ” ಅಂತ ಉತ್ರ ಕೊಟ್ರು. ಆಗ ಯೇಸು “ಹಾಗಾದ್ರೆ ಯಾವ ಅಧಿಕಾರದಿಂದ ಇದನ್ನೆಲ್ಲ ಮಾಡ್ತೀನಿ ಅಂತ ನಾನೂ ನಿಮಗೆ ಹೇಳಲ್ಲ” ಅಂದನು.

28 “ನಿಮಗೇನು ಅನ್ಸುತ್ತೆ? ಒಬ್ಬನಿಗೆ ಇಬ್ರು ಮಕ್ಕಳಿದ್ರು. ಅವನು ತನ್ನ ದೊಡ್ಡ ಮಗನ ಹತ್ರ ಬಂದು ‘ಇವತ್ತು ದ್ರಾಕ್ಷಿ ತೋಟದಲ್ಲಿ ಕೆಲಸಮಾಡು’ ಅಂದ. 29 ಅವನು ‘ನಾನು ಹೋಗಲ್ಲ’ ಅಂದ. ಆಮೇಲೆ ಹಾಗೆ ಹೇಳಿದ್ದಕ್ಕೆ ಬೇಜಾರಾಗಿ ತೋಟಕ್ಕೆ ಹೋದ. 30 ಅಪ್ಪ ಚಿಕ್ಕವನ ಹತ್ರ ಬಂದು ಅವನಿಗೂ ಇದನ್ನೇ ಹೇಳಿದ. ಅವನು ‘ಹೋಗ್ತಿನಿ ಅಪ್ಪಾ’ ಅಂದ, ಆದ್ರೆ ಹೋಗಲಿಲ್ಲ. 31 ಇವ್ರಲ್ಲಿ ತಂದೆ ಮಾತು ಕೇಳಿದವರು ಯಾರು?” ಅಂತ ಕೇಳಿದನು. ಅವರು “ದೊಡ್ಡ ಮಗ” ಅಂದ್ರು. ಯೇಸು ಅವ್ರಿಗೆ “ನಿಮಗೆ ನಿಜ ಹೇಳ್ತೀನಿ, ತೆರಿಗೆ ವಸೂಲಿ ಮಾಡುವವರು, ವೇಶ್ಯೆಯರು ನಿಮಗಿಂತ ಮುಂಚೆ ದೇವರ ಆಳ್ವಿಕೆಯಲ್ಲಿ ಇರ್ತಾರೆ. 32 ಯಾಕಂದ್ರೆ ಯೋಹಾನ ನಿಮಗೆ ನೀತಿಯ ದಾರಿ ತೋರಿಸೋಕೆ ನಿಮ್ಮ ಹತ್ರ ಬಂದ. ಆದ್ರೆ ನೀವು ಅವನನ್ನ ನಂಬಲಿಲ್ಲ. ತೆರಿಗೆ ವಸೂಲಿ ಮಾಡುವವರು, ವೇಶ್ಯೆಯರು ಅವನನ್ನ ನಂಬಿದ್ರು.+ ಅದನ್ನೆಲ್ಲ ನೋಡಿದ್ರೂ ನಿಮ್ಮ ಮನಸ್ಸು ಬದಲಾಗಿಲ್ಲ, ನೀವು ಅವನನ್ನ ನಂಬಲಿಲ್ಲ.

33 ಇನ್ನೊಂದು ಉದಾಹರಣೆ ಹೇಳ್ತೀನಿ ಕೇಳಿ: ಒಬ್ಬ ಯಜಮಾನ ದ್ರಾಕ್ಷಿ ತೋಟ ಮಾಡಿ+ ಸುತ್ತಲೂ ಬೇಲಿ ಹಾಕಿಸಿದ. ದ್ರಾಕ್ಷಾರಸ ತೆಗೆಯೋಕೆ ದೊಡ್ಡ ತೊಟ್ಟಿ ಮಾಡಿಸಿದ. ಕಾವಲುಗೋಪುರ ಕಟ್ಟಿಸಿದ.+ ಆಮೇಲೆ ತೋಟವನ್ನ ರೈತರಿಗೆ ಗುತ್ತಿಗೆಗೆ ಕೊಟ್ಟು ವಿದೇಶಕ್ಕೆ ಹೋದ.+ 34 ದ್ರಾಕ್ಷಿಹಣ್ಣು ಕೀಳೋ ಸಮಯ ಬಂದಾಗ ಯಜಮಾನ ತನ್ನ ಪಾಲನ್ನ ತಗೊಂಡು ಬರೋಕೆ ಆ ರೈತರ ಹತ್ರ ಸೇವಕರನ್ನ ಕಳಿಸಿದ. 35 ಆ ರೈತರು ಆ ಸೇವಕರನ್ನ ಹಿಡ್ಕೊಂಡು ಒಬ್ಬನನ್ನ ಹೊಡೆದ್ರು, ಇನ್ನೊಬ್ಬನನ್ನ ಕೊಂದ್ರು, ಮತ್ತೊಬ್ಬನನ್ನ ಕಲ್ಲು ಹೊಡೆದು ಸಾಯಿಸಿದ್ರು.+ 36 ಯಜಮಾನ ಈ ಸಾರಿ ಹೆಚ್ಚು ಸೇವಕರನ್ನ ಕಳ್ಸಿದ. ಅವರನ್ನೂ ಆ ರೈತರು ಬಿಡಲಿಲ್ಲ.+ 37 ಕೊನೆಗೆ ಯಜಮಾನ ‘ಕಡೆಪಕ್ಷ ಅವರು ನನ್ನ ಮಗನಿಗೆ ಗೌರವ ಕೊಡಬಹುದು’ ಅಂದ್ಕೊಂಡು ಮಗನನ್ನ ಅವ್ರ ಹತ್ರ ಕಳಿಸಿದ. 38 ಆದ್ರೆ ಆ ರೈತರು ಅವನನ್ನ ನೋಡಿ ಅವ್ರಲ್ಲೇ ‘ಇವನೇ ವಾರಸುದಾರ.+ ಬನ್ನಿ, ಇವನನ್ನ ಕೊಂದುಹಾಕೋಣ. ಆಗ ಆಸ್ತಿಯೆಲ್ಲಾ ನಮ್ಮದೇ ಆಗುತ್ತೆ’ ಅಂತ ಮಾತಾಡ್ಕೊಂಡ್ರು. 39 ಅವರು ಅವನನ್ನ ಹಿಡ್ಕೊಂಡು ದ್ರಾಕ್ಷಿತೋಟದಿಂದ ಹೊರಗೆ ಎಳ್ಕೊಂಡು ಹೋಗಿ ಕೊಂದುಬಿಟ್ರು.+ 40 ದ್ರಾಕ್ಷಿತೋಟದ ಯಜಮಾನ ಬಂದಾಗ ಆ ರೈತರನ್ನ ಏನು ಮಾಡ್ತಾನೆ?” ಅಂದನು. 41 ಅದಕ್ಕೆ ಅವರು “ಆ ರೈತರು ತುಂಬ ಕೆಟ್ಟವರು. ಹಾಗಾಗಿ ಯಜಮಾನ ಅವ್ರನ್ನ ಸುಮ್ಮನೆ ಬಿಡಲ್ಲ. ಖಂಡಿತ ಕೊಂದುಹಾಕ್ತಾನೆ. ದ್ರಾಕ್ಷಿಹಣ್ಣು ಕೀಳೋ ಸಮಯ ಬಂದಾಗ ತನ್ನ ಪಾಲನ್ನ ಸರಿಯಾಗಿ ಕೊಡೋ ಬೇರೆ ರೈತರ ಕೈಗೆ ದ್ರಾಕ್ಷಿತೋಟ ಕೊಡ್ತಾನೆ” ಅಂದ್ರು.

42 ಯೇಸು ಅವ್ರಿಗೆ “‘ಕಟ್ಟುವವರು ಬೇಡ ಅಂತ ಬಿಟ್ಟ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು.+ ಯೆಹೋವನೇ* ಈ ಕಾರ್ಯ ಮಾಡಿದ್ದಾನೆ. ನೋಡೋಕೆ ಅದೆಂಥ ಆಶ್ಚರ್ಯ’ ಅಂತ ನೀವು ಪವಿತ್ರ ಗ್ರಂಥದಲ್ಲಿ ಓದಿಲ್ವಾ?+ 43 ನಾನು ನಿಮಗೆ ಹೇಳ್ತೀನಿ, ದೇವರು ತನ್ನ ಆಳ್ವಿಕೆಯನ್ನ ನಿಮ್ಮಿಂದ ಕಿತ್ಕೊಂಡು ತನ್ನ ಇಷ್ಟದ ಪ್ರಕಾರ ನಡೆಯೋ* ಬೇರೆ ಜನ್ರಿಗೆ ಕೊಡ್ತಾನೆ. 44 ಅಷ್ಟೇ ಅಲ್ಲ ಈ ಕಲ್ಲಿನ ಮೇಲೆ ಬೀಳುವವರು ಚೂರುಚೂರು ಆಗ್ತಾರೆ.+ ಈ ಕಲ್ಲು ಯಾರ ಮೇಲೆ ಬೀಳುತ್ತೋ ಅವ್ರನ್ನ ಪುಡಿಪುಡಿ ಮಾಡುತ್ತೆ” ಅಂದನು.+

45 ಮುಖ್ಯ ಪುರೋಹಿತರು, ಫರಿಸಾಯರು ಯೇಸು ಹೇಳಿದ ಉದಾಹರಣೆಗಳನ್ನ ಕೇಳಿಸ್ಕೊಂಡಾಗ ತಮ್ಮ ಬಗ್ಗೆನೇ ಮಾತಾಡ್ತಾ ಇದ್ದಾನೆ ಅಂತ ಅರ್ಥ ಮಾಡ್ಕೊಂಡ್ರು.+ 46 ಯೇಸುನ ಬಂಧಿಸಬೇಕಂತ ಇದ್ರೂ ಜನ್ರಿಗೆ ಹೆದರಿ ಸುಮ್ಮನಿದ್ರು. ಯಾಕಂದ್ರೆ ಜನ ಆತನನ್ನ ಪ್ರವಾದಿ ಅಂತ ನಂಬ್ತಿದ್ರು.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ