ಕೀರ್ತನೆ
ಯಾತ್ರೆ ಗೀತೆ. ದಾವೀದನ ಕೀರ್ತನೆ.
124 “ಯೆಹೋವ ನಮ್ಮ ಜೊತೆ ಇಲ್ಲ ಅಂದಿದ್ರೆ”+
ಇಸ್ರಾಯೇಲ್ ಈಗ ಹೀಗೆ ಹೇಳಲಿ
2 “ಯೆಹೋವ ನಮ್ಮ ಜೊತೆ ಇಲ್ಲ ಅಂದಿದ್ರೆ+
ಮನುಷ್ಯರು ನಮ್ಮ ಮೇಲೆ ದಾಳಿಮಾಡೋಕೆ ಬಂದಾಗ,+
3 ಅವ್ರ ಕೋಪ ನಮ್ಮ ಮೇಲೆ ಹೊತ್ತಿ ಉರಿದು,+
ಅವರು ನಮ್ಮನ್ನ ಜೀವಂತ ನುಂಗಿಬಿಡ್ತಿದ್ರು.+
4 ಆಗ ನೀರು ನಮ್ಮನ್ನ ಹೊಡ್ಕೊಂಡು ಹೋಗ್ತಿತ್ತು,
ಪ್ರವಾಹ ನಮ್ಮ ಮೇಲೆ ಉಕ್ಕಿ ಹರೀತಿತ್ತು.+
5 ಸಮುದ್ರದ ಅಬ್ಬರ ನಮ್ಮನ್ನ ಮುಳುಗಿಸಿಬಿಡ್ತಿತ್ತು.
6 ಯೆಹೋವನಿಗೆ ಹೊಗಳಿಕೆ ಸಿಗಲಿ,
ಯಾಕಂದ್ರೆ ಆತನು ನಮ್ಮನ್ನ ಶತ್ರುಗಳ ಕೈಗೆ ಒಪ್ಪಿಸಲಿಲ್ಲ.
ಒಪ್ಪಿಸಿಬಿಟ್ಟಿದ್ರೆ ಅವರು ನಮ್ಮನ್ನ ಬೇಟೆ ಆಡಿಬಿಡ್ತಿದ್ರು.
7 ಬೇಟೆಗಾರನ ಬಲೆಯಿಂದ ತಪ್ಪಿಸ್ಕೊಂಡ
ಪಕ್ಷಿ ತರ ನಾವಿದ್ದೀವಿ.+
ಬಲೆ ಹರಿದು ಹೋಯ್ತು,
ನಾವು ತಪ್ಪಿಸ್ಕೊಂಡ್ವಿ.+
8 ಭೂಮಿ ಆಕಾಶಗಳನ್ನ ಸೃಷ್ಟಿಸಿದ,
ಯೆಹೋವನ ಹೆಸ್ರಲ್ಲಿ ನಮಗೆ ಸಹಾಯ ಸಿಗುತ್ತೆ.+