ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆಹೋಶುವ 23
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಯೆಹೋಶುವ ಮುಖ್ಯಾಂಶಗಳು

      • ಇಸ್ರಾಯೇಲಿನ ನಾಯಕರಿಗೆ ಯೆಹೋಶುವನ ವಿದಾಯ (1-16)

        • ಯೆಹೋವನ ಎಲ್ಲ ಮಾತು ಚಾಚೂತಪ್ಪದೆ ನೆರವೇರಿತು (14)

ಯೆಹೋಶುವ 23:1

ಮಾರ್ಜಿನಲ್ ರೆಫರೆನ್ಸ್

  • +ವಿಮೋ 33:14; ಯಾಜ 26:6; ಯೆಹೋ 21:44
  • +ಯೆಹೋ 13:1

ಯೆಹೋಶುವ 23:2

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 16:18
  • +ಧರ್ಮೋ 31:28

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/1/1992, ಪು. 12

ಯೆಹೋಶುವ 23:3

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 20:4; ಯೆಹೋ 10:11-14, 40, 42

ಯೆಹೋಶುವ 23:4

ಪಾದಟಿಪ್ಪಣಿ

  • *

    ಅದು, ಮೆಡಿಟರೇನಿಯನ್‌ ಸಮುದ್ರ.

  • *

    ಅಥವಾ “ಹಂಚ್ಕೊಟ್ಟಿದ್ದೀನಿ.”

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 7:1
  • +ಯೆಹೋ 18:10
  • +ಯೆಹೋ 13:2-6

ಯೆಹೋಶುವ 23:5

ಪಾದಟಿಪ್ಪಣಿ

  • *

    ಅಥವಾ “ಹೊರಗೆ ಹಾಕಿದನು.”

ಮಾರ್ಜಿನಲ್ ರೆಫರೆನ್ಸ್

  • +ವಿಮೋ 23:30; 33:2; ಧರ್ಮೋ 11:23
  • +ಅರ 33:53

ಯೆಹೋಶುವ 23:6

ಮಾರ್ಜಿನಲ್ ರೆಫರೆನ್ಸ್

  • +ವಿಮೋ 24:7; ಧರ್ಮೋ 17:18; 31:26
  • +ಧರ್ಮೋ 5:32; 12:32; ಯೆಹೋ 1:7, 8

ಯೆಹೋಶುವ 23:7

ಮಾರ್ಜಿನಲ್ ರೆಫರೆನ್ಸ್

  • +ವಿಮೋ 23:33; ಧರ್ಮೋ 7:2
  • +ವಿಮೋ 20:5
  • +ವಿಮೋ 23:13

ಯೆಹೋಶುವ 23:8

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 10:20; ಯೆಹೋ 22:5

ಯೆಹೋಶುವ 23:9

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 11:23
  • +ಯೆಹೋ 1:3-5

ಯೆಹೋಶುವ 23:10

ಮಾರ್ಜಿನಲ್ ರೆಫರೆನ್ಸ್

  • +ಯಾಜ 26:8; ನ್ಯಾಯ 3:31; 2ಸಮು 23:8
  • +ಧರ್ಮೋ 28:7
  • +ವಿಮೋ 23:27; ಧರ್ಮೋ 3:22

ಯೆಹೋಶುವ 23:11

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 6:5
  • +ಧರ್ಮೋ 4:9; ಯೆಹೋ 22:5

ಯೆಹೋಶುವ 23:12

ಮಾರ್ಜಿನಲ್ ರೆಫರೆನ್ಸ್

  • +ವಿಮೋ 23:29; ಯೆಹೋ 13:2-6
  • +ವಿಮೋ 34:16; ಧರ್ಮೋ 7:3; ನ್ಯಾಯ 3:6; 1ಅರ 11:4; ಎಜ್ರ 9:2

ಯೆಹೋಶುವ 23:13

ಪಾದಟಿಪ್ಪಣಿ

  • *

    ಅಥವಾ “ಹೊರಗೆ ಹಾಕಲ್ಲ.”

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 2:3, 21
  • +ಅರ 33:55

ಯೆಹೋಶುವ 23:14

ಪಾದಟಿಪ್ಪಣಿ

  • *

    ಅಕ್ಷ. “ಎಲ್ರೂ ಹೋಗೋ ದಾರೀಲಿ ನಾನೂ ಈಗ ಹೋಗಬೇಕು.”

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 21:45; 1ಅರ 8:56

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/15/2008, ಪು. 17-18

    11/1/2007, ಪು. 24-26

ಯೆಹೋಶುವ 23:15

ಮಾರ್ಜಿನಲ್ ರೆಫರೆನ್ಸ್

  • +ಯಾಜ 26:3-12; ಧರ್ಮೋ 28:1
  • +ಯಾಜ 26:14-17; ಧರ್ಮೋ 28:15, 63

ಯೆಹೋಶುವ 23:16

ಮಾರ್ಜಿನಲ್ ರೆಫರೆನ್ಸ್

  • +2ಅರ 24:20
  • +ಯೆಹೋ 23:12, 13

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಯೆಹೋ. 23:1ವಿಮೋ 33:14; ಯಾಜ 26:6; ಯೆಹೋ 21:44
ಯೆಹೋ. 23:1ಯೆಹೋ 13:1
ಯೆಹೋ. 23:2ಧರ್ಮೋ 16:18
ಯೆಹೋ. 23:2ಧರ್ಮೋ 31:28
ಯೆಹೋ. 23:3ಧರ್ಮೋ 20:4; ಯೆಹೋ 10:11-14, 40, 42
ಯೆಹೋ. 23:4ಧರ್ಮೋ 7:1
ಯೆಹೋ. 23:4ಯೆಹೋ 18:10
ಯೆಹೋ. 23:4ಯೆಹೋ 13:2-6
ಯೆಹೋ. 23:5ವಿಮೋ 23:30; 33:2; ಧರ್ಮೋ 11:23
ಯೆಹೋ. 23:5ಅರ 33:53
ಯೆಹೋ. 23:6ವಿಮೋ 24:7; ಧರ್ಮೋ 17:18; 31:26
ಯೆಹೋ. 23:6ಧರ್ಮೋ 5:32; 12:32; ಯೆಹೋ 1:7, 8
ಯೆಹೋ. 23:7ವಿಮೋ 23:33; ಧರ್ಮೋ 7:2
ಯೆಹೋ. 23:7ವಿಮೋ 20:5
ಯೆಹೋ. 23:7ವಿಮೋ 23:13
ಯೆಹೋ. 23:8ಧರ್ಮೋ 10:20; ಯೆಹೋ 22:5
ಯೆಹೋ. 23:9ಧರ್ಮೋ 11:23
ಯೆಹೋ. 23:9ಯೆಹೋ 1:3-5
ಯೆಹೋ. 23:10ಯಾಜ 26:8; ನ್ಯಾಯ 3:31; 2ಸಮು 23:8
ಯೆಹೋ. 23:10ಧರ್ಮೋ 28:7
ಯೆಹೋ. 23:10ವಿಮೋ 23:27; ಧರ್ಮೋ 3:22
ಯೆಹೋ. 23:11ಧರ್ಮೋ 6:5
ಯೆಹೋ. 23:11ಧರ್ಮೋ 4:9; ಯೆಹೋ 22:5
ಯೆಹೋ. 23:12ವಿಮೋ 23:29; ಯೆಹೋ 13:2-6
ಯೆಹೋ. 23:12ವಿಮೋ 34:16; ಧರ್ಮೋ 7:3; ನ್ಯಾಯ 3:6; 1ಅರ 11:4; ಎಜ್ರ 9:2
ಯೆಹೋ. 23:13ನ್ಯಾಯ 2:3, 21
ಯೆಹೋ. 23:13ಅರ 33:55
ಯೆಹೋ. 23:14ಯೆಹೋ 21:45; 1ಅರ 8:56
ಯೆಹೋ. 23:15ಯಾಜ 26:3-12; ಧರ್ಮೋ 28:1
ಯೆಹೋ. 23:15ಯಾಜ 26:14-17; ಧರ್ಮೋ 28:15, 63
ಯೆಹೋ. 23:162ಅರ 24:20
ಯೆಹೋ. 23:16ಯೆಹೋ 23:12, 13
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಯೆಹೋಶುವ 23:1-16

ಯೆಹೋಶುವ

23 ಯೆಹೋವ ಇಸ್ರಾಯೇಲ್ಯರನ್ನ ಸುತ್ತಮುತ್ತ ಇದ್ದ ಶತ್ರುಗಳಿಂದ ಕಾಪಾಡಿ ವಿಶ್ರಾಂತಿ ಕೊಟ್ಟನು.+ ಹೀಗೆ ತುಂಬ ದಿನ ಕಳೀತು. ಯೆಹೋಶುವನಿಗೆ ತುಂಬ ವಯಸ್ಸಾಗಿತ್ತು.+ 2 ಆಗ ಯೆಹೋಶುವ ಎಲ್ಲ ಇಸ್ರಾಯೇಲ್ಯರನ್ನ ಹಿರಿಯರನ್ನ ಮುಖ್ಯಸ್ಥರನ್ನ ನ್ಯಾಯಾಧೀಶರನ್ನ ಅಧಿಕಾರಿಗಳನ್ನ+ ಕರೆದು+ ಹೀಗಂದ: “ನನಗೆ ತುಂಬ ವಯಸ್ಸಾಗಿದೆ, ಮುದುಕ ಆಗಿದ್ದೀನಿ. 3 ನಿಮ್ಮ ದೇವರಾದ ಯೆಹೋವ ನಿಮಗೋಸ್ಕರ ಈ ಎಲ್ಲ ಜನಾಂಗಗಳಿಗೆ ಏನೆಲ್ಲ ಮಾಡಿದನು ಅಂತ ನೀವು ಕಣ್ಣಾರೆ ನೋಡಿದ್ದೀರ. ಯಾಕಂದ್ರೆ ನಿಮ್ಮ ದೇವರಾದ ಯೆಹೋವನೇ ನಿಮ್ಮ ಪರವಾಗಿ ಯುದ್ಧ ಮಾಡ್ತಿದ್ದನು.+ 4 ಯೋರ್ದನಿಂದ ಪಶ್ಚಿಮದ ಮಹಾ ಸಮುದ್ರದ* ತನಕ ಇರೋ ಜನ್ರನ್ನ ಓಡಿಸಿಬಿಟ್ಟು+ ಆ ಪ್ರದೇಶಗಳನ್ನ ಚೀಟಿ ಹಾಕಿ+ ಕೊಟ್ಟಿದ್ದೀನಿ.* ಉಳಿದ ಪ್ರದೇಶಗಳಲ್ಲಿ ಬೇರೆ ಜನ್ರು ಇದ್ರೂ ಅವೂ ನಿಮಗೆ ಸೇರಿದೆ.+ 5 ಆ ಜನ್ರನ್ನ ನಿಮ್ಮ ದೇವರಾದ ಯೆಹೋವನೇ ನಿಮ್ಮ ಮುಂದಿಂದ ಓಡಿಸಿಬಿಟ್ಟನು.*+ ನಿಮ್ಮ ದೇವರಾದ ಯೆಹೋವ ಮಾತು ಕೊಟ್ಟ ಹಾಗೇ ನೀವು ಅವ್ರ ಪ್ರದೇಶಗಳನ್ನ ವಶ ಮಾಡ್ಕೊಂಡಿದ್ದೀರ.+

6 ಮೋಶೆಯ ನಿಯಮ ಪುಸ್ತಕದಲ್ಲಿ+ ಬರೆದಿರೋ ಎಲ್ಲವನ್ನ ಪಾಲಿಸೋಕೆ, ಅದೇ ತರ ನಡಿಯೋಕೆ ಈಗ ನಿಮಗೆ ತುಂಬ ಧೈರ್ಯ ಬೇಕು. ಅದ್ರಲ್ಲಿರೋ ಒಂದು ನಿಯಮವನ್ನೂ ಮೀರಬಾರದು.+ 7 ಯಾವುದೇ ಕಾರಣಕ್ಕೂ ನಿಮ್ಮ ಮಧ್ಯ ಇರೋ ಈ ಜನಾಂಗಗಳ ಜೊತೆ ಸೇರಬಾರದು.+ ಅವ್ರ ದೇವರುಗಳನ್ನ ಆರಾಧಿಸಬಾರದು, ಅಡ್ಡ ಬೀಳಬಾರದು.+ ಅವುಗಳ ಹೆಸ್ರನ್ನೂ ಎತ್ತಬಾರದು,+ ಅವುಗಳ ಹೆಸ್ರಲ್ಲಿ ಆಣೆ ಮಾಡಬಾರದು. 8 ನೀವು ಇಲ್ಲಿ ತನಕ ಇದ್ದ ಹಾಗೇ ಇನ್ನು ಮುಂದಕ್ಕೂ ನಿಮ್ಮ ದೇವರಾದ ಯೆಹೋವನಿಗೆ ನಿಷ್ಠೆಯಿಂದ ಇರಬೇಕು.+ 9 ಬಲಿಷ್ಠ ಜನಾಂಗಗಳನ್ನೇ ಯೆಹೋವ ನಿಮ್ಮ ಮುಂದಿಂದ ಓಡಿಸಿಬಿಡ್ತಾನೆ.+ ಯಾಕಂದ್ರೆ ಇಲ್ಲಿ ತನಕ ಒಬ್ಬನಿಗೂ ನಿಮ್ಮ ಮುಂದೆ ನಿಲ್ಲೋಕೆ ಆಗಲಿಲ್ಲ.+ 10 ಸಾವಿರ ಜನ್ರನ್ನ ಓಡಿಸ್ಕೊಂಡು ಹೋಗೋಕೆ ನಿಮ್ಮಲ್ಲಿ ಒಬ್ಬನೇ ಸಾಕು.+ ಯಾಕಂದ್ರೆ ನಿಮಗೆ ಮಾತು ಕೊಟ್ಟ+ ಹಾಗೇ ನಿಮ್ಮ ದೇವರಾದ ಯೆಹೋವ ನಿಮ್ಮ ಪರವಾಗಿ ಯುದ್ಧ ಮಾಡ್ತಿದ್ದಾನೆ.+ 11 ಹಾಗಾಗಿ ನಿಮ್ಮ ದೇವರಾದ ಯೆಹೋವನನ್ನ ಪ್ರೀತಿಸ್ತಾ+ ಯಾವಾಗ್ಲೂ ನಿಮ್ಮ ವಿಷ್ಯದಲ್ಲಿ ಜಾಗ್ರತೆಯಿಂದ ಇರಿ.+

12 ನೀವು ಆತನಿಗೆ ಬೆನ್ನುಹಾಕಿ ನಿಮ್ಮ ಮಧ್ಯ ಇರೋ ಬೇರೆ ಜನಾಂಗಗಳ+ ಜೊತೆ ಸೇರಿ ಅವ್ರ ಜೊತೆ ಮದುವೆ ಸಂಬಂಧ ಬೆಳೆಸಿದ್ರೆ,+ ಅವ್ರ ಸಹವಾಸ ಮಾಡಿದ್ರೆ, 13 ನಿಮ್ಮ ದೇವರಾದ ಯೆಹೋವ ಈ ಜನಾಂಗಗಳನ್ನ ನಿಮ್ಮ ಮುಂದಿಂದ ಓಡಿಸಲ್ಲ*+ ಅನ್ನೋದನ್ನ ಮನಸ್ಸಲ್ಲಿಡಿ. ನಿಮ್ಮ ದೇವರಾದ ಯೆಹೋವ ಕೊಟ್ಟಿರೋ ಈ ಒಳ್ಳೇ ದೇಶದಿಂದ ನಾಶ ಆಗೋ ತನಕ ಅವರು ನಿಮಗೆ ಉರ್ಲಾಗಿ, ಬಲೆಯಾಗಿ, ನಿಮ್ಮ ಪಕ್ಕೆಗೆ ಹೊಡಿಯೋ ಚಾಟಿಯಾಗಿ,+ ನಿಮ್ಮ ಕಣ್ಣಿಗೆ ಚುಚ್ಚೋ ಮುಳ್ಳಾಗಿ ಇರ್ತಾರೆ.

14 ನೋಡಿ, ನಾನು ಇನ್ನು ಹೆಚ್ಚು ಕಾಲ ಬದುಕಿರಲ್ಲ.* ನಿಮ್ಮ ದೇವರಾದ ಯೆಹೋವ ನಿಮಗೆ ಕೊಟ್ಟ ಮಾತಲ್ಲಿ ಒಂದೂ ಸುಳ್ಳಾಗಲಿಲ್ಲ ಅಂತ ನೀವು ನಿಮ್ಮ ಪೂರ್ಣ ಹೃದಯದಿಂದ, ಪೂರ್ಣ ಪ್ರಾಣದಿಂದ ಚೆನ್ನಾಗಿ ತಿಳ್ಕೊಂಡಿದ್ದೀರ. ಅದೆಲ್ಲ ನಿಮಗೋಸ್ಕರನೇ ನಿಜ ಆದ್ವು. ಅದ್ರಲ್ಲಿ ಒಂದೂ ತಪ್ಪಲಿಲ್ಲ.+ 15 ಆದ್ರೆ ನಿಮ್ಮ ದೇವರಾದ ಯೆಹೋವ ನಿಮಗೆ ಕೊಟ್ಟ ಮಾತುಗಳೆಲ್ಲ ನಿಮ್ಮ ವಿಷ್ಯದಲ್ಲಿ ಹೇಗೆ ನಿಜ ಆದ್ವೋ+ ಅದೇ ತರ ಈ ಮುಂಚೆ ಹೇಳಿದ ಕಷ್ಟಗಳನ್ನೂ ಯೆಹೋವ ನಿಮ್ಮ ಮೇಲೆ ಬರೋ ತರ ಮಾಡಕ್ಕಾಗುತ್ತೆ. ಅಷ್ಟೇ ಅಲ್ಲ ನಿಮ್ಮ ದೇವರಾದ ಯೆಹೋವ ಕೊಟ್ಟಿರೋ ಈ ಒಳ್ಳೇ ದೇಶದಿಂದ ನಿಮ್ಮನ್ನ ಅಳಿಸಿಹಾಕ್ತಾನೆ.+ 16 ನೀವು ಪಾಲಿಸಬೇಕಂತ ನಿಮ್ಮ ದೇವರಾದ ಯೆಹೋವ ಹೇಳಿದ ಒಪ್ಪಂದವನ್ನ ನೀವು ಮುರಿದ್ರೆ, ಬೇರೆ ದೇವರುಗಳನ್ನ ಆರಾಧಿಸಿದ್ರೆ, ಅಡ್ಡಬಿದ್ರೆ ಯೆಹೋವನಿಗೆ ಕೋಪ ಬರಿಸ್ತೀರ.+ ಆತನು ನಿಮಗೆ ಕೊಟ್ಟಿರೋ ಈ ಒಳ್ಳೇ ದೇಶದಿಂದ ಒಂದೇ ಕ್ಷಣದಲ್ಲಿ ನಾಶವಾಗಿ ಹೋಗ್ತೀರ.”+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ