ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಆದಿಕಾಂಡ 23
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಆದಿಕಾಂಡ ಮುಖ್ಯಾಂಶಗಳು

      • ಸಾರಳ ಮರಣ ಮತ್ತು ಸಮಾಧಿ ಸ್ಥಳ (1-20)

ಆದಿಕಾಂಡ 23:1

ಮಾರ್ಜಿನಲ್ ರೆಫರೆನ್ಸ್

  • +ಆದಿ 17:17

ಆದಿಕಾಂಡ 23:2

ಮಾರ್ಜಿನಲ್ ರೆಫರೆನ್ಸ್

  • +ಆದಿ 12:5
  • +ಯೆಹೋ 14:15
  • +ಆದಿ 35:27; ಅರ 13:22

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಸಾರ್ವಜನಿಕ),

    ನಂ. 3 2016, ಪು. 4

    ಕಾವಲಿನಬುರುಜು,

    6/1/1995, ಪು. 7

    ಎಚ್ಚರ!,

    5/8/1994, ಪು. 22

ಆದಿಕಾಂಡ 23:3

ಮಾರ್ಜಿನಲ್ ರೆಫರೆನ್ಸ್

  • +ಆದಿ 10:15

ಆದಿಕಾಂಡ 23:4

ಮಾರ್ಜಿನಲ್ ರೆಫರೆನ್ಸ್

  • +ಆದಿ 17:1, 8; ಇಬ್ರಿ 11:9, 13

ಆದಿಕಾಂಡ 23:6

ಪಾದಟಿಪ್ಪಣಿ

  • *

    ಬಹುಶಃ “ಮಹಾಪ್ರಭು.”

ಮಾರ್ಜಿನಲ್ ರೆಫರೆನ್ಸ್

  • +ಆದಿ 21:22

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    8/15/2001, ಪು. 21

ಆದಿಕಾಂಡ 23:7

ಮಾರ್ಜಿನಲ್ ರೆಫರೆನ್ಸ್

  • +1ಪೂರ್ವ 1:13

ಆದಿಕಾಂಡ 23:9

ಮಾರ್ಜಿನಲ್ ರೆಫರೆನ್ಸ್

  • +ಆದಿ 23:15
  • +ಆದಿ 25:9, 10; 49:29-33; 50:13, 14

ಆದಿಕಾಂಡ 23:10

ಮಾರ್ಜಿನಲ್ ರೆಫರೆನ್ಸ್

  • +ರೂತ್‌ 4:1

ಆದಿಕಾಂಡ 23:15

ಪಾದಟಿಪ್ಪಣಿ

  • *

    ಒಂದು ಶೆಕೆಲ್‌ನ ತೂಕ 11.4 ಗ್ರಾಂ. ಪರಿಶಿಷ್ಟ ಬಿ14 ನೋಡಿ.

ಆದಿಕಾಂಡ 23:16

ಪಾದಟಿಪ್ಪಣಿ

  • *

    ಒಂದು ಶೆಕೆಲ್‌ನ ತೂಕ 11.4 ಗ್ರಾಂ. ಪರಿಶಿಷ್ಟ ಬಿ14 ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಅಕಾ 7:15, 16

ಆದಿಕಾಂಡ 23:20

ಮಾರ್ಜಿನಲ್ ರೆಫರೆನ್ಸ್

  • +ಆದಿ 25:9, 10; 49:29-33; 50:13, 14

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    6/15/1994, ಪು. 32

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಆದಿ. 23:1ಆದಿ 17:17
ಆದಿ. 23:2ಆದಿ 12:5
ಆದಿ. 23:2ಯೆಹೋ 14:15
ಆದಿ. 23:2ಆದಿ 35:27; ಅರ 13:22
ಆದಿ. 23:3ಆದಿ 10:15
ಆದಿ. 23:4ಆದಿ 17:1, 8; ಇಬ್ರಿ 11:9, 13
ಆದಿ. 23:6ಆದಿ 21:22
ಆದಿ. 23:71ಪೂರ್ವ 1:13
ಆದಿ. 23:9ಆದಿ 23:15
ಆದಿ. 23:9ಆದಿ 25:9, 10; 49:29-33; 50:13, 14
ಆದಿ. 23:10ರೂತ್‌ 4:1
ಆದಿ. 23:16ಅಕಾ 7:15, 16
ಆದಿ. 23:20ಆದಿ 25:9, 10; 49:29-33; 50:13, 14
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಆದಿಕಾಂಡ 23:1-20

ಆದಿಕಾಂಡ

23 ಸಾರ ಒಟ್ಟು 127 ವರ್ಷ ಬದುಕಿದಳು.+ 2 ಕಾನಾನ್‌+ ದೇಶದಲ್ಲಿರೋ ಕಿರ್ಯತ್‌-ಅರ್ಬ+ ಅಂದ್ರೆ ಹೆಬ್ರೋನಲ್ಲಿ+ ಸಾರ ತೀರಿಹೋದಳು. ಆಗ ಅಬ್ರಹಾಮ ಅತ್ತು ತುಂಬ ಗೋಳಾಡಿದ. 3 ಆಮೇಲೆ ಅಬ್ರಹಾಮ ತನ್ನ ಹೆಂಡತಿ ಶವದ ಹತ್ರದಿಂದ ಎದ್ದು ಹೋಗಿ ಹಿತ್ತಿಯರಿಗೆ+ 4 “ನಾನು ಬೇರೆ ದೇಶದವನು, ಇಲ್ಲಿಗೆ ವಲಸೆ ಬಂದಿದ್ದೀನಿ.+ ಹಾಗಾಗಿ ನನ್ನ ಹೆಂಡತಿ ಸಮಾಧಿಗೋಸ್ಕರ ನನಗೆ ಇಲ್ಲಿ ಒಂದು ಜಾಗ ಕೊಡಿ” ಅಂದ. 5 ಅದಕ್ಕೆ ಹಿತ್ತಿಯರು 6 “ಸ್ವಾಮಿ ನಮ್ಮ ಮಾತು ಕೇಳು. ದೇವರು ಆರಿಸಿರೋ ಪ್ರಭು* ನೀನು.+ ತೀರಿಹೋಗಿರೋ ನಿನ್ನ ಪತ್ನಿಯ ದೇಹನ ನಮ್ಮಲ್ಲಿರುವ ಸಮಾಧಿಗಳಲ್ಲೇ ತುಂಬಾ ಒಳ್ಳೇ ಸಮಾಧಿಯಲ್ಲೇ ಇಡಬಹುದು. ನಿನಗೆ ಸಮಾಧಿಗೆ ಸ್ಥಳ ಕೊಡೋಕೆ ನಮ್ಮಲ್ಲಿ ಯಾರೂ ಇಲ್ಲ ಅನ್ನಲ್ಲ” ಅಂದ್ರು.

7 ಆಗ ಅಬ್ರಹಾಮ ಆ ಪ್ರದೇಶದ ಜನರಿಗೆ, ಹಿತ್ತಿಯರಿಗೆ+ ಬಗ್ಗಿ ನಮಸ್ಕಾರ ಮಾಡಿ 8 “ನಾನು ನನ್ನ ಹೆಂಡತಿಯನ್ನ ಈ ಪ್ರದೇಶದಲ್ಲೇ ಸಮಾಧಿ ಮಾಡೋಕೆ ನೀವು ಒಪ್ಪೋದಾದ್ರೆ ನನ್ನದೊಂದು ಕೋರಿಕೆ ಇದೆ. ಅದೇನಂದ್ರೆ ಚೋಹರನ ಮಗ ಎಫ್ರೋನನ ಹತ್ರ ಮಾತಾಡಿ 9 ಅವನ ಜಮೀನಿನ ಅಂಚಿನಲ್ಲಿರೋ ಮಕ್ಪೇಲದ ಗವಿನ ದಯವಿಟ್ಟು ನನಗೆ ಕೊಡಿಸಿ. ಅವನು ಅದನ್ನ ನಿಮ್ಮೆಲ್ಲರ ಮುಂದೆ ನನಗೆ ಮಾರಲಿ. ಅದಕ್ಕೆ ಎಷ್ಟು ಬೆಳ್ಳಿಯಾಗುತ್ತೋ+ ಅಷ್ಟು ನಾನು ಕೊಡ್ತೀನಿ. ಆಗ ನನ್ನ ಹೆಂಡ್ತಿ ಸಮಾಧಿ ಮಾಡೋಕೆ ನನ್ನ ಹತ್ರ ಒಂದು ಸ್ವಂತ ಸ್ಥಳ ಇರುತ್ತೆ”+ ಅಂದ.

10 ಎಫ್ರೋನ ಹಿತ್ತಿಯರ ಮಧ್ಯದಲ್ಲೇ ಕುಳಿತಿದ್ದ. ಹಾಗಾಗಿ ಅವನು ಎಲ್ಲ ಹಿತ್ತಿಯರ ಮುಂದೆ, ಪಟ್ಟಣದ ಬಾಗಿಲಲ್ಲಿ+ ಸೇರಿಬಂದಿದ್ದ ಎಲ್ಲರ ಮುಂದೆ ಅಬ್ರಹಾಮನಿಗೆ 11 “ಬೇಡ ಸ್ವಾಮಿ, ನಾನು ಹೇಳೋದನ್ನ ಕೇಳು. ಆ ಗವಿ ಅಷ್ಟೇ ಅಲ್ಲ, ಇಡೀ ಜಮೀನು ತಗೋ. ನನ್ನ ಜನರ ಮುಂದೆನೇ ನಾನು ಅದನ್ನ ನಿನಗೆ ಕೊಡ್ತೀನಿ. ತೀರಿಹೋಗಿರೋ ನಿನ್ನ ಹೆಂಡತಿನ ಅಲ್ಲಿ ಸಮಾಧಿ ಮಾಡಬಹುದು” ಅಂದ. 12 ಆಗ ಅಬ್ರಹಾಮ ಆ ಜನರ ಮುಂದೆ ಬಗ್ಗಿ ನಮಸ್ಕಾರ ಮಾಡಿ 13 ಎಲ್ಲರ ಮುಂದೆ ಎಫ್ರೋನನಿಗೆ “ಸರಿ, ನಾನು ಇಡೀ ಜಮೀನು ತಗೊಳ್ತೀನಿ. ಅದಕ್ಕೆಷ್ಟು ಬೆಳ್ಳಿ ಆಗುತ್ತೋ ಅದನ್ನ ಪೂರ್ತಿ ಕೊಡ್ತೀನಿ. ನೀನು ಅದನ್ನ ತಗೊಂಡ್ರೆ ಮಾತ್ರ ನನ್ನ ಹೆಂಡತಿನ ಅಲ್ಲಿ ಸಮಾಧಿ ಮಾಡ್ತೀನಿ” ಅಂದ.

14 ಅದಕ್ಕೆ ಎಫ್ರೋನ ಅಬ್ರಹಾಮನಿಗೆ 15 “ಸ್ವಾಮಿ, ಆ ಜಮೀನಿನ ಬೆಲೆ 400 ಬೆಳ್ಳಿ ಶೆಕೆಲ್‌.* ಆದ್ರೆ ಹಣದ ಬಗ್ಗೆ ತಲೆಕೆಡಿಸ್ಕೋಬೇಡ. ನೀನು ಅಲ್ಲಿ ನಿನ್ನ ಹೆಂಡತಿನ ಸಮಾಧಿಮಾಡು” ಅಂದ. 16 ಅಬ್ರಹಾಮ ಎಫ್ರೋನನ ಮಾತಿಗೆ ಒಪ್ಪಿ ಹಿತ್ತಿಯರ ಮುಂದೆ ಹೇಳಿದಷ್ಟು ಬೆಳ್ಳಿಯನ್ನ ಅಂದ್ರೆ 400 ಬೆಳ್ಳಿ ಶೆಕೆಲ್‌ಗಳನ್ನ* ವ್ಯಾಪಾರಿಗಳ ತೂಕದ ಪ್ರಕಾರ ತೂಗಿ ಕೊಟ್ಟ.+ 17 ಹೀಗೆ ಮಮ್ರೆಗೆ ಪಕ್ಕದಲ್ಲಿರೋ ಮಕ್ಪೇಲದಲ್ಲಿದ್ದ ಎಫ್ರೋನನ ಜಮೀನು, ಅಲ್ಲಿದ್ದ ಗವಿ, ಎಲ್ಲ ಮರಗಳನ್ನ 18 ಅಬ್ರಹಾಮ ಖರೀದಿಸಿದ ಆಸ್ತಿ ಅಂತ ಹಿತ್ತಿಯರ, ಪಟ್ಟಣದ ಬಾಗಿಲಲ್ಲಿ ಸೇರಿಬಂದಿದ್ದ ಎಲ್ಲ ಜನ್ರ ಮುಂದೆ ಪಕ್ಕಾ ಆಯ್ತು. 19 ಆಮೇಲೆ ಅಬ್ರಹಾಮ ತನ್ನ ಹೆಂಡತಿ ಸಾರಳನ್ನ ಮಕ್ಪೇಲದ ಜಮೀನನ ಗವಿಯಲ್ಲಿ ಸಮಾಧಿ ಮಾಡಿದ. ಆ ಗವಿ ಕಾನಾನ್‌ ದೇಶದ ಮಮ್ರೆಗೆ ಅಂದ್ರೆ ಹೆಬ್ರೋನಿಗೆ ಹತ್ರ ಇತ್ತು. 20 ಹೀಗೆ ಹಿತ್ತಿಯರು ಆ ಜಮೀನನ್ನ ಅದ್ರಲ್ಲಿದ್ದ ಗವಿನ ಅಬ್ರಹಾಮನ ಹೆಸರಿಗೆ ಮಾಡಿದ್ರು. ಅವನು ಆ ಸ್ಥಳನ ಸಮಾಧಿ ಮಾಡೋಕೆ ಉಪಯೋಗಿಸಿದ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ