ಆಮೋಸ
1 ಆಮೋಸನಿಗೆ* ದರ್ಶನದ ಮೂಲಕ ಇಸ್ರಾಯೇಲಿನ ಬಗ್ಗೆ ಹೇಳಲಾದ ಮಾತುಗಳಿವು. ಆಮೋಸ ತೆಕೋವದವನು.+ ಅವನು ಕುರಿ ಸಾಕ್ತಿದ್ದ. ಭೂಕಂಪ ಆಗೋ ಎರಡು ವರ್ಷ ಮುಂಚೆ+ ಅವನು ದರ್ಶನ ನೋಡಿದ. ಆಗ ಯೆಹೂದದಲ್ಲಿ ರಾಜ ಉಜ್ಜೀಯ+ ಮತ್ತು ಇಸ್ರಾಯೇಲಲ್ಲಿ ಯೋವಾಷನ+ ಮಗ ಯಾರೊಬ್ಬಾಮ ಆಳ್ತಿದ್ರು.+ 2 ಆಮೋಸ ಹೇಳಿದ್ದು:
“ಯೆಹೋವ ಚೀಯೋನಿಂದ ಸಿಂಹದ ತರ ಗರ್ಜಿಸ್ತಾನೆ,
ಯೆರೂಸಲೇಮಿಂದ ಆರ್ಭಟಿಸ್ತಾನೆ.
ಆಗ ಕುರುಬರು ಮಂದೆಗಳನ್ನ ಮೇಯಿಸೋ ಹುಲ್ಲುಗಾವಲುಗಳು ಶೋಕಿಸುತ್ತೆ,
ಕರ್ಮೆಲಿನ ತುದಿ ಒಣಗಿ ಹೋಗುತ್ತೆ.”+
3 “ಯೆಹೋವ ಹೀಗೆ ಹೇಳ್ತಾನೆ:
‘“ದಮಸ್ಕ ಪದೇಪದೇ* ದಂಗೆ* ಎದ್ದಿದೆ. ಹಾಗಾಗಿ ಅದಕ್ಕೆ ಕೊಡಬೇಕಂತಿರೋ ಶಿಕ್ಷೆಯನ್ನ ನಾನು ತಪ್ಪಿಸೋದೇ ಇಲ್ಲ,
ಅವರು ಕಬ್ಬಿಣದ ಸಲಕರಣೆಗಳಿಂದ ಧಾನ್ಯ ಒಕ್ಕೋ* ಹಾಗೆ ಗಿಲ್ಯಾದನ್ನ ಒಕ್ಕಿದ್ರು.+
5 ನಾನು ದಮಸ್ಕದ ಬಾಗಿಲುಗಳ ಕಂಬಿಗಳನ್ನ ಮುರಿದುಬಿಡ್ತೀನಿ,+
ಬಿಕತ್-ಆವೆನಿನ ಜನ್ರನ್ನ, ಬೇತ್-ಏದೆನಲ್ಲಿ ಆಳೋ ರಾಜನನ್ನ ನಾಶ ಮಾಡ್ತೀನಿ,
ಸಿರಿಯದ ಜನ್ರು ಕೀರಿಗೆ ಕೈದಿಯಾಗಿ ಹೋಗ್ತಾರೆ,”+
ಇದು ಯೆಹೋವನ ಮಾತು.’
6 ಯೆಹೋವ ಹೀಗೆ ಹೇಳ್ತಾನೆ:
‘“ಗಾಜಾ ಪದೇಪದೇ* ದಂಗೆ ಎದ್ದಿದೆ,+ ಹಾಗಾಗಿ ಅದಕ್ಕೆ ಕೊಡಬೇಕಂತಿರೋ ಶಿಕ್ಷೆಯನ್ನ ನಾನು ತಪ್ಪಿಸೋದೇ ಇಲ್ಲ,
ಅವರು ಸೆರೆವಾಸಿಗಳನ್ನೆಲ್ಲ+ ಎದೋಮಿನ ಕೈಗೊಪ್ಪಿಸಿದ್ರು.
7 ಹಾಗಾಗಿ ನಾನು ಗಾಜಾದ+ ಗೋಡೆ ಮೇಲೆ ಬೆಂಕಿ ಕಳಿಸ್ತೀನಿ,
ಆ ಬೆಂಕಿ ಅದ್ರ ಭದ್ರ ಕೋಟೆಗಳನ್ನ ಸುಟ್ಟುಬಿಡುತ್ತೆ.
8 ನಾನು ಅಷ್ಡೋದಿನ+ ಜನ್ರನ್ನ, ಅಷ್ಕೆಲೋನಲ್ಲಿ+ ಆಳೋ ರಾಜನನ್ನ ನಾಶ ಮಾಡ್ತೀನಿ,
ಎಕ್ರೋನ್ ವಿರುದ್ಧ ನನ್ನ ಕೈ ಎತ್ತುತ್ತೀನಿ,+
ಫಿಲಿಷ್ಟಿಯರಲ್ಲಿ ಉಳಿದವರು ನಾಶವಾಗಿ ಹೋಗ್ತಾರೆ,”+
ಇದು ವಿಶ್ವದ ರಾಜ ಯೆಹೋವನ ಮಾತು.’
9 ಯೆಹೋವ ಹೀಗೆ ಹೇಳ್ತಾನೆ:
‘ತೂರ್ ಪದೇಪದೇ* ದಂಗೆ ಎದ್ದಿದೆ.+ ಹಾಗಾಗಿ ಅದಕ್ಕೆ ಕೊಡಬೇಕಂತಿರೋ ಶಿಕ್ಷೆಯನ್ನ ನಾನು ತಪ್ಪಿಸೋದೇ ಇಲ್ಲ,
ಅವರು ಸೆರೆವಾಸಿಗಳನ್ನೆಲ್ಲ ಎದೋಮಿನ ಕೈಗೊಪ್ಪಿಸಿದ್ರು,
ಸಹೋದರರ ಒಪ್ಪಂದವನ್ನ ಅವರು ನೆನಪಿಸ್ಕೊಳ್ಳಲೇ ಇಲ್ಲ.+
10 ಹಾಗಾಗಿ ನಾನು ತೂರಿನ ಗೋಡೆ ಮೇಲೆ ಬೆಂಕಿ ಕಳಿಸ್ತೀನಿ,
ಆ ಬೆಂಕಿ ಅದ್ರ ಭದ್ರ ಕೋಟೆಗಳನ್ನ ಸುಟ್ಟುಬಿಡುತ್ತೆ.’+
11 ಯೆಹೋವ ಹೀಗೆ ಹೇಳ್ತಾನೆ:
‘ಎದೋಮ್+ ಪದೇಪದೇ* ದಂಗೆ ಎದ್ದಿದೆ. ಹಾಗಾಗಿ ಅದಕ್ಕೆ ಕೊಡಬೇಕಂತಿರೋ ಶಿಕ್ಷೆಯನ್ನ ನಾನು ತಪ್ಪಿಸೋದೇ ಇಲ್ಲ,
ಅವನು ಕತ್ತಿಯನ್ನ ಹಿಡಿದು ತನ್ನ ಸ್ವಂತ ಸಹೋದರನನ್ನ ಅಟ್ಟಿಸ್ಕೊಂಡು ಹೋದ,+
ತನ್ನ ಸಹೋದರನಿಗೆ ಕರುಣೆ ತೋರಿಸಲಿಲ್ಲ,
ಕೋಪದಿಂದ ಪಟ್ಟುಬಿಡದೆ ಅವ್ರನ್ನ ಸಿಗಿದುಹಾಕ್ತಾ ಇದ್ದಾನೆ,
ಅವನು ಸದಾ ಅವ್ರ ಜೊತೆ ತುಂಬ ಕೋಪದಿಂದ ನಡ್ಕೊಳ್ತಿದ್ದಾನೆ.+
13 ಯೆಹೋವ ಹೀಗೆ ಹೇಳ್ತಾನೆ:
‘“ಅಮ್ಮೋನಿಯರು ಪದೇಪದೇ* ದಂಗೆ ಎದ್ದಿದ್ದಾರೆ.+ ಹಾಗಾಗಿ ಅವ್ರಿಗೆ ಕೊಡಬೇಕಂತಿರೋ ಶಿಕ್ಷೆಯನ್ನ ನಾನು ತಪ್ಪಿಸೋದೇ ಇಲ್ಲ,
ಅವರು ತಮ್ಮ ಪ್ರದೇಶವನ್ನ ವಿಸ್ತರಿಸೋಕೆ ಗಿಲ್ಯಾದಿನ ಗರ್ಭಿಣಿಯರ ಹೊಟ್ಟೆಗಳನ್ನ ಸೀಳಿದ್ರು.+
14 ಹಾಗಾಗಿ ನಾನು ರಬ್ಬಾದ ಗೋಡೆಗೆ ಬೆಂಕಿ ಹಚ್ತೀನಿ,+
ಆ ಬೆಂಕಿ ಅದ್ರ ಭದ್ರ ಕೋಟೆಗಳನ್ನ ಸುಟ್ಟುಬಿಡುತ್ತೆ,
ಯುದ್ಧದ ದಿನದಲ್ಲಿ ಯುದ್ಧ ಘೋಷ ಕೇಳಿಬರುತ್ತೆ,
ಬಿರುಗಾಳಿಯ ದಿನ ಭೀಕರ ಚಂಡಮಾರುತ ಬರುತ್ತೆ.
15 ಅವ್ರ ರಾಜ ತನ್ನ ಅಧಿಕಾರಿಗಳ ಸಮೇತ ಕೈದಿಯಾಗಿ ಹೋಗ್ತಾನೆ,”+
ಇದು ಯೆಹೋವನ ಮಾತು.’