ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ನೆಹೆಮೀಯ 6
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ನೆಹೆಮೀಯ ಮುಖ್ಯಾಂಶಗಳು

      • ಕಟ್ಟೋ ಕೆಲಸಕ್ಕೆ ಮತ್ತೆ ವಿರೋಧ (1-14)

      • 52 ದಿನಗಳಲ್ಲಿ ಗೋಡೆ ಪೂರ್ಣ (15-19)

ನೆಹೆಮೀಯ 6:1

ಮಾರ್ಜಿನಲ್ ರೆಫರೆನ್ಸ್

  • +ನೆಹೆ 2:10; 4:3
  • +ನೆಹೆ 2:19; 4:7
  • +ದಾನಿ 9:25
  • +ನೆಹೆ 3:1, 3

ನೆಹೆಮೀಯ 6:2

ಮಾರ್ಜಿನಲ್ ರೆಫರೆನ್ಸ್

  • +1ಪೂರ್ವ 8:12; ನೆಹೆ 11:31, 35

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/1/2007, ಪು. 30

ನೆಹೆಮೀಯ 6:5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/1/2007, ಪು. 30

    2/1/2006, ಪು. 9

ನೆಹೆಮೀಯ 6:6

ಮಾರ್ಜಿನಲ್ ರೆಫರೆನ್ಸ್

  • +ಎಜ್ರ 4:14, 15
  • +ನೆಹೆ 2:19

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/1/2007, ಪು. 30

ನೆಹೆಮೀಯ 6:8

ಪಾದಟಿಪ್ಪಣಿ

  • *

    ಅಕ್ಷ. “ನಿನ್ನ ಹೃದಯದ ಕಲ್ಪನೆ.”

ನೆಹೆಮೀಯ 6:9

ಪಾದಟಿಪ್ಪಣಿ

  • *

    ಅಕ್ಷ. “ಅವ್ರ ಕೈಗಳು ಬಲಹೀನ ಆಗುತ್ತೆ.”

ಮಾರ್ಜಿನಲ್ ರೆಫರೆನ್ಸ್

  • +ಎಜ್ರ 4:4
  • +ಕೀರ್ತ 68:35; 138:3; ಯೆಶಾ 41:10

ನೆಹೆಮೀಯ 6:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/1/2007, ಪು. 30-31

ನೆಹೆಮೀಯ 6:11

ಮಾರ್ಜಿನಲ್ ರೆಫರೆನ್ಸ್

  • +ಅರ 1:51; 18:7; 2ಪೂರ್ವ 26:18, 19

ನೆಹೆಮೀಯ 6:12

ಮಾರ್ಜಿನಲ್ ರೆಫರೆನ್ಸ್

  • +ನೆಹೆ 2:10

ನೆಹೆಮೀಯ 6:14

ಮಾರ್ಜಿನಲ್ ರೆಫರೆನ್ಸ್

  • +ನೆಹೆ 4:3, 4

ನೆಹೆಮೀಯ 6:15

ಪಾದಟಿಪ್ಪಣಿ

  • *

    ಪರಿಶಿಷ್ಟ ಬಿ15 ನೋಡಿ.

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಹೊಸ ಲೋಕ ಭಾಷಾಂತರ, ಪು. 2648, 2756

ನೆಹೆಮೀಯ 6:16

ಪಾದಟಿಪ್ಪಣಿ

  • *

    ಅಕ್ಷ. “ತಮ್ಮ ದೃಷ್ಟಿಯಲ್ಲೇ ತಾವು ಬಿದ್ದು ಹೋದ್ರು.”

ಮಾರ್ಜಿನಲ್ ರೆಫರೆನ್ಸ್

  • +ನೆಹೆ 4:7; ಕೀರ್ತ 129:5

ನೆಹೆಮೀಯ 6:17

ಮಾರ್ಜಿನಲ್ ರೆಫರೆನ್ಸ್

  • +ನೆಹೆ 5:7

ನೆಹೆಮೀಯ 6:18

ಮಾರ್ಜಿನಲ್ ರೆಫರೆನ್ಸ್

  • +ಎಜ್ರ 2:1, 5
  • +ನೆಹೆ 3:4

ನೆಹೆಮೀಯ 6:19

ಮಾರ್ಜಿನಲ್ ರೆಫರೆನ್ಸ್

  • +ನೆಹೆ 6:9, 10, 13

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ನೆಹೆ. 6:1ನೆಹೆ 2:10; 4:3
ನೆಹೆ. 6:1ನೆಹೆ 2:19; 4:7
ನೆಹೆ. 6:1ದಾನಿ 9:25
ನೆಹೆ. 6:1ನೆಹೆ 3:1, 3
ನೆಹೆ. 6:21ಪೂರ್ವ 8:12; ನೆಹೆ 11:31, 35
ನೆಹೆ. 6:6ಎಜ್ರ 4:14, 15
ನೆಹೆ. 6:6ನೆಹೆ 2:19
ನೆಹೆ. 6:9ಎಜ್ರ 4:4
ನೆಹೆ. 6:9ಕೀರ್ತ 68:35; 138:3; ಯೆಶಾ 41:10
ನೆಹೆ. 6:11ಅರ 1:51; 18:7; 2ಪೂರ್ವ 26:18, 19
ನೆಹೆ. 6:12ನೆಹೆ 2:10
ನೆಹೆ. 6:14ನೆಹೆ 4:3, 4
ನೆಹೆ. 6:16ನೆಹೆ 4:7; ಕೀರ್ತ 129:5
ನೆಹೆ. 6:17ನೆಹೆ 5:7
ನೆಹೆ. 6:18ಎಜ್ರ 2:1, 5
ನೆಹೆ. 6:18ನೆಹೆ 3:4
ನೆಹೆ. 6:19ನೆಹೆ 6:9, 10, 13
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ನೆಹೆಮೀಯ 6:1-19

ನೆಹೆಮೀಯ

6 ಸನ್ಬಲ್ಲಟನಿಗೆ, ಟೋಬೀಯನಿಗೆ,+ ಅರಬಿಯನಾದ ಗೆಷೆಮನಿಗೆ,+ ಉಳಿದ ಶತ್ರುಗಳಿಗೆ ನಾನು ಗೋಡೆಯನ್ನ ಮತ್ತೆ ಕಟ್ಟಿದ್ದೀನಿ+ ಮತ್ತು ಗೋಡೆಯಲ್ಲಿದ್ದ ಎಲ್ಲ ಸಂದುಗಳನ್ನ ಮುಚ್ಚಿದ್ದೀನಿ ಅಂತ ಗೊತ್ತಾದಾಗ (ಆಗಿನ್ನೂ ನಾನು ಬಾಗಿಲುಗಳ್ನ ಇಟ್ಟಿರಲಿಲ್ಲ),+ 2 ಸನ್ಬಲ್ಲಟ, ಗೆಷೆಮ ತಕ್ಷಣ “ನಿನ್ನ ಜೊತೆ ಮಾತಾಡಬೇಕು. ಓನೋ+ ಕಣಿವೆ ಬಯಲಲ್ಲಿರೋ ಒಂದು ಹಳ್ಳಿಯಲ್ಲಿ ಸಿಗೋಣ. ಯಾವಾಗ ಸಿಗೋಣ ಅಂತ ಹೇಳು” ಅಂತ ಸಂದೇಶ ಕಳಿಸಿದ್ರು. ನನಗೆ ತೊಂದ್ರೆ ಮಾಡೋಕೆ ಸಂಚು ಮಾಡ್ತಾ ಇದ್ರು. 3 ಅವ್ರಿಗೆ “ನಾನು ಮಾಡ್ತಿರೋ ಈ ಕೆಲ್ಸ ತುಂಬ ಮುಖ್ಯ. ಇದನ್ನ ಬಿಟ್ಟು ಬರೋಕೆ ಆಗಲ್ಲ. ಬಂದ್ರೆ ಕೆಲ್ಸ ನಿಂತೋಗುತ್ತೆ” ಅಂತ ಸಂದೇಶವಾಹಕರ ಮೂಲಕ ಹೇಳಿ ಕಳಿಸಿದೆ. 4 ಆದ್ರೆ ಅದೇ ಸಂದೇಶನ ಮತ್ತೆ ಮತ್ತೆ ನಾಲ್ಕು ಸಲ ಕಳಿಸಿದ್ರು. ನಾಲ್ಕೂ ಸಲ ನಾನು ಇದೇ ಉತ್ರ ಕೊಟ್ಟೆ.

5 ಆಮೇಲೆ ಸನ್ಬಲ್ಲಟ ಅವನ ಸೇವಕನ ಮೂಲಕ ಅದೇ ಸಂದೇಶವನ್ನ ಐದನೇ ಸಲ ತೆರೆದ ಪತ್ರದಲ್ಲಿ ಕಳಿಸಿದ. 6 ಅದ್ರಲ್ಲಿ ಹೀಗಿತ್ತು: “ನೀನು ಮತ್ತು ಯೆಹೂದ್ಯರು ರಾಜನ ವಿರುದ್ಧ ತಿರುಗಿ ಬಿಳೋಕೆ ಸಂಚು ಮಾಡ್ತಿದ್ದೀರ+ ಅಂತ ದೇಶದಲ್ಲೆಲ್ಲಾ ಮಾತಾಡ್ಕೊಳ್ತಿದ್ದಾರೆ, ಗೆಷೆಮ+ ಕೂಡ ಅದನ್ನೇ ಹೇಳ್ತಿದ್ದಾನೆ. ನೀನು ಯೆಹೂದ್ಯರ ರಾಜನಾಗಬೇಕಂತ ಆಸೆ ಪಡ್ತಿದ್ದೀಯ, ಅದಕ್ಕೇ ಗೋಡೆ ಕಟ್ತಾ ಇದ್ದೀಯ ಅಂತಾನೂ ಹೇಳ್ತಿದ್ದಾರೆ. 7 ಅದೂ ಅಲ್ದೆ ‘ಯೆಹೂದದಲ್ಲಿ ಒಬ್ಬ ರಾಜ ಇದ್ದಾನೆ’ ಅಂತ ನಿನ್ನ ಬಗ್ಗೆ ಇಡೀ ಯೆರೂಸಲೇಮಲ್ಲಿ ಹೇಳೋಕೆ ಪ್ರವಾದಿಗಳನ್ನ ನೇಮಿಸಿದ್ದೀಯ. ಇದೆಲ್ಲ ರಾಜನ ಕಿವಿಗೆ ಬಿದ್ದೇ ಬೀಳುತ್ತೆ. ಹಾಗಾಗಿ ಬಾ, ಮಾತಾಡಿ ಆ ವಿಷ್ಯಗಳನ್ನ ಸರಿ ಮಾಡ್ಕೊಳ್ಳೋಣ.”

8 ಆಗ ನಾನು “ನೀನು ಹೇಳೋ ತರ ಏನೂ ಇಲ್ಲಿ ನಡಿದಿಲ್ಲ. ಅದೆಲ್ಲ ನಿನ್ನ ಊಹೆ ಅಷ್ಟೇ”* ಅಂತ ಉತ್ರ ಕಳಿಸಿದೆ. 9 ಅವರು ನಮ್ಮನ್ನ ಹೆದ್ರಿಸೋಕೆ ಪ್ರಯತ್ನಿಸಿದ್ರು. “ಧೈರ್ಯ ಕಳ್ಕೊಳ್ತಾರೆ,* ಕೆಲಸ ನಿಂತೋಗುತ್ತೆ” ಅಂತ ಮಾತಾಡ್ಕೊಂಡ್ರು.+ ಆದ್ರೆ ನಾನು “ದೇವರೇ ನನಗೆ ಧೈರ್ಯ ಕೊಡು” ಅಂತ ಪ್ರಾರ್ಥನೆ ಮಾಡ್ದೆ.+

10 ನಾನು ಮಹೇಟಬೇಲನ ಮೊಮ್ಮಗನೂ ದೆಲಾಯನ ಮಗನೂ ಆದ ಶೆಮಾಯನ ಮನೆಗೆ ಹೋದೆ. ತನ್ನ ಮನೆಯಲ್ಲೇ ಬಚ್ಚಿಟ್ಕೊಂಡಿದ್ದ ಅವನು “ನಿನ್ನನ್ನ ಕೊಲ್ಲೋಕೆ ಬರ್ತಿದ್ದಾರೆ. ಇವತ್ತು ರಾತ್ರಿನೇ ನಿನ್ನನ್ನ ಕೊಲ್ಲಬೇಕು ಅಂತಿದ್ದಾರೆ. ಸತ್ಯ ದೇವರ ಆಲಯದಲ್ಲಿ ಯಾವಾಗ ಸಿಗೋಣ ಅಂತ ಸಮಯ ಹೇಳು, ಒಳಗೆ ಹೋಗಿ ಆಲಯದ ಬಾಗಿಲುಗಳನ್ನ ಮುಚ್ಕೊಳ್ಳೋಣ” ಅಂದ. 11 ಆದ್ರೆ ನಾನು “ಹೆದರಿ ಓಡಿಹೋಗೋಕೆ ನಾನೇನು ಹೇಡಿನಾ? ನನ್ನ ತರ ವ್ಯಕ್ತಿ ಆಲಯದ ಒಳಗೆ ಹೋದ್ರೆ ಜೀವಂತ ಇರೋಕೆ ಸಾಧ್ಯನಾ?+ ಇಲ್ಲ ನಾನು ಹೋಗಲ್ಲ” ಅಂದೆ. 12 ಶೆಮಾಯ ದೇವರ ಪರವಾಗಿ ಮಾತಾಡ್ತಿಲ್ಲ. ಟೋಬೀಯ ಮತ್ತು ಸನ್ಬಲ್ಲಟ+ ಅವನಿಗೆ ದುಡ್ಡು ಕೊಟ್ಟು ನನ್ನ ವಿರುದ್ಧ ಮಾತಾಡೋಕೆ ಅವನನ್ನ ತಗೊಂಡಿದ್ದಾರೆ ಅಂತ ಗೊತ್ತಾಯ್ತು. 13 ನಾನು ಹೆದರಿ ಅವನು ಹೇಳಿದ್ದನ್ನ ಕೇಳಿ ತಪ್ಪು ಮಾಡಿದ್ರೆ ನನ್ನ ಹೆಸ್ರಿಗೆ ಮಸಿ ಬಳಿದು ನನ್ನ ಮೇಲೆ ಆರೋಪ ಹಾಕೋಕೆ ಅವನನ್ನ ದುಡ್ಡು ಕೊಟ್ಟು ತಗೊಂಡಿದ್ರು.

14 ನನ್ನ ದೇವರೇ, ಟೋಬೀಯನ,+ ಸನ್ಬಲ್ಲಟನ ಈ ಕೆಟ್ಟ ಕೆಲಸಗಳನ್ನ ಮರಿಬೇಡ. ಪ್ರವಾದಿನಿ ನೋವದ್ಯ ಮತ್ತು ಬೇರೆ ಪ್ರವಾದಿಗಳು ನನ್ನನ್ನ ಹೆದರಿಸೋಕೆ ಪದೇಪದೇ ಮಾಡ್ತಿರೋ ಪ್ರಯತ್ನವನ್ನ ಕೂಡ ಮರಿಬೇಡ.

15 ಎಲೂಲ್‌* ತಿಂಗಳ 25ನೇ ದಿನ ಗೋಡೆ ಕೆಲಸ ಪೂರ್ತಿ ಆಯ್ತು. ಕಟ್ಟಿ ಮುಗಿಸೋಕೆ 52 ದಿನ ಹಿಡಿತು.

16 ನಮ್ಮ ಶತ್ರುಗಳೆಲ್ಲ ಈ ವಿಷ್ಯ ಕೇಳಿದಾಗ, ನಮ್ಮ ಅಕ್ಕಪಕ್ಕದ ದೇಶಗಳ ಜನ ಇದನ್ನ ನೋಡಿದಾಗ ಅವ್ರಿಗೆ ತುಂಬ ನಾಚಿಕೆ ಆಯ್ತು.*+ ಈ ಕೆಲಸವನ್ನ ನಮ್ಮ ದೇವರ ಸಹಾಯದಿಂದಾನೇ ಮಾಡಿದ್ದೀವಿ ಅಂತ ಅವ್ರಿಗೆ ಗೊತ್ತಾಯ್ತು. 17 ಆ ದಿನಗಳಲ್ಲಿ ಯೆಹೂದದ ಪ್ರಧಾನರು+ ಟೋಬೀಯನಿಗೆ ತುಂಬ ಪತ್ರಗಳನ್ನ ಕಳಿಸ್ತಿದ್ರು, ಟೋಬೀಯ ಅವುಗಳಿಗೆ ಉತ್ರ ಕೊಡ್ತಿದ್ದ. 18 ತುಂಬ ಯೆಹೂದ್ಯರು ಅವನಿಗೆ ಬೆಂಬಲ ಕೊಡ್ತೀವಿ ಅಂತ ಆಣೆ ಮಾಡಿದ್ರು. ಯಾಕಂದ್ರೆ ಟೋಬೀಯ ಆರಹನ+ ಮಗ ಶೆಕನ್ಯನ ಅಳಿಯನಾಗಿದ್ದ. ಟೋಬೀಯನ ಮಗ ಯೆಹೋಹಾನಾನ ಬೆರೆಕ್ಯನ ಮಗ ಮೆಷುಲ್ಲಾಮನ+ ಮಗಳನ್ನ ಮದುವೆಯಾಗಿದ್ದ. 19 ಅಷ್ಟೇ ಅಲ್ಲ ಆ ಯೆಹೂದ್ಯರು ಯಾವಾಗ್ಲೂ ನನ್ನ ಹತ್ರ ಅವನ ಬಗ್ಗೆ ಹೊಗಳಿ ಮಾತಾಡ್ತಿದ್ರು. ನಾನು ಹೇಳಿದ್ದನ್ನೆಲ್ಲ ಹೋಗಿ ಅವನಿಗೆ ಹೇಳ್ತಾ ಇದ್ರು. ಆಗ ಟೋಬೀಯ ನನ್ನನ್ನ ಹೆದರಿಸೋಕೆ ಪತ್ರಗಳನ್ನ ಕಳಿಸ್ತಿದ್ದ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ