ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಧರ್ಮೋಪದೇಶಕಾಂಡ 26
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಧರ್ಮೋಪದೇಶಕಾಂಡ ಮುಖ್ಯಾಂಶಗಳು

      • ಮೊದಲ ಬೆಳೆಯ ಅರ್ಪಣೆ (1-11)

      • ಎರಡನೇ ಸಲ ಹತ್ತನೇ ಒಂದು ಭಾಗ (12-15)

      • ಇಸ್ರಾಯೇಲ್ಯರು ಯೆಹೋವನ ವಿಶೇಷ ಸೊತ್ತು (16-19)

ಧರ್ಮೋಪದೇಶಕಾಂಡ 26:2

ಮಾರ್ಜಿನಲ್ ರೆಫರೆನ್ಸ್

  • +ವಿಮೋ 23:19; ಯಾಜ 23:10; ಅರ 18:8, 12; 2ಪೂರ್ವ 6:6; 31:5; ಜ್ಞಾನೋ 3:9

ಧರ್ಮೋಪದೇಶಕಾಂಡ 26:3

ಮಾರ್ಜಿನಲ್ ರೆಫರೆನ್ಸ್

  • +ಆದಿ 17:1, 8; 26:3

ಧರ್ಮೋಪದೇಶಕಾಂಡ 26:5

ಪಾದಟಿಪ್ಪಣಿ

  • *

    ಬಹುಶಃ, “ಪ್ರಾಣಾಪಾಯದಲ್ಲಿದ್ದ.”

ಮಾರ್ಜಿನಲ್ ರೆಫರೆನ್ಸ್

  • +ಆದಿ 28:5; ಹೋಶೇ 12:12
  • +ಆದಿ 46:3; ಅಕಾ 7:15
  • +ಆದಿ 46:27
  • +ವಿಮೋ 1:7; ಧರ್ಮೋ 10:22; ಕೀರ್ತ 105:24

ಧರ್ಮೋಪದೇಶಕಾಂಡ 26:6

ಮಾರ್ಜಿನಲ್ ರೆಫರೆನ್ಸ್

  • +ವಿಮೋ 1:11

ಧರ್ಮೋಪದೇಶಕಾಂಡ 26:7

ಮಾರ್ಜಿನಲ್ ರೆಫರೆನ್ಸ್

  • +ವಿಮೋ 3:9; 4:31; ಅಕಾ 7:34

ಧರ್ಮೋಪದೇಶಕಾಂಡ 26:8

ಪಾದಟಿಪ್ಪಣಿ

  • *

    ಅಕ್ಷ. “ಬಲಿಷ್ಠ ಕೈಯಿಂದ, ಚಾಚಿದ ತೋಳಿಂದ.”

ಮಾರ್ಜಿನಲ್ ರೆಫರೆನ್ಸ್

  • +ವಿಮೋ 6:6
  • +ವಿಮೋ 7:3; ಧರ್ಮೋ 4:33, 34

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/15/2015, ಪು. 4-5

ಧರ್ಮೋಪದೇಶಕಾಂಡ 26:9

ಮಾರ್ಜಿನಲ್ ರೆಫರೆನ್ಸ್

  • +ವಿಮೋ 3:8; ಧರ್ಮೋ 8:7, 8; ಯೆಹೆ 20:6

ಧರ್ಮೋಪದೇಶಕಾಂಡ 26:10

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 26:2

ಧರ್ಮೋಪದೇಶಕಾಂಡ 26:11

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 12:7; 16:14

ಧರ್ಮೋಪದೇಶಕಾಂಡ 26:12

ಪಾದಟಿಪ್ಪಣಿ

  • *

    ಅಥವಾ “ತಂದೆ ಇಲ್ಲದ ಮಕ್ಕಳಿಗೆ.”

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 12:5, 6; 14:22
  • +ಧರ್ಮೋ 14:28, 29; ಜ್ಞಾನೋ 14:21; 1ಯೋಹಾ 3:17

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 7/2021, ಪು. 1-2

ಧರ್ಮೋಪದೇಶಕಾಂಡ 26:13

ಮಾರ್ಜಿನಲ್ ರೆಫರೆನ್ಸ್

  • +ಯಾಕೋ 1:27

ಧರ್ಮೋಪದೇಶಕಾಂಡ 26:15

ಮಾರ್ಜಿನಲ್ ರೆಫರೆನ್ಸ್

  • +ಆದಿ 15:18; 26:3
  • +ಧರ್ಮೋ 8:7, 8
  • +ವಿಮೋ 23:25

ಧರ್ಮೋಪದೇಶಕಾಂಡ 26:16

ಪಾದಟಿಪ್ಪಣಿ

  • *

    ಪದವಿವರಣೆ ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 6:6; 11:1; ಕೀರ್ತ 119:34; 1ಯೋಹಾ 5:3

ಧರ್ಮೋಪದೇಶಕಾಂಡ 26:17

ಮಾರ್ಜಿನಲ್ ರೆಫರೆನ್ಸ್

  • +ಯಾಜ 26:46
  • +ಪ್ರಸಂ 12:13
  • +ಯಾಜ 19:37

ಧರ್ಮೋಪದೇಶಕಾಂಡ 26:18

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 14:2; 29:10-13

ಧರ್ಮೋಪದೇಶಕಾಂಡ 26:19

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 7:6; 28:1, 9
  • +ಧರ್ಮೋ 4:8

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಧರ್ಮೋ. 26:2ವಿಮೋ 23:19; ಯಾಜ 23:10; ಅರ 18:8, 12; 2ಪೂರ್ವ 6:6; 31:5; ಜ್ಞಾನೋ 3:9
ಧರ್ಮೋ. 26:3ಆದಿ 17:1, 8; 26:3
ಧರ್ಮೋ. 26:5ಆದಿ 28:5; ಹೋಶೇ 12:12
ಧರ್ಮೋ. 26:5ಆದಿ 46:3; ಅಕಾ 7:15
ಧರ್ಮೋ. 26:5ಆದಿ 46:27
ಧರ್ಮೋ. 26:5ವಿಮೋ 1:7; ಧರ್ಮೋ 10:22; ಕೀರ್ತ 105:24
ಧರ್ಮೋ. 26:6ವಿಮೋ 1:11
ಧರ್ಮೋ. 26:7ವಿಮೋ 3:9; 4:31; ಅಕಾ 7:34
ಧರ್ಮೋ. 26:8ವಿಮೋ 6:6
ಧರ್ಮೋ. 26:8ವಿಮೋ 7:3; ಧರ್ಮೋ 4:33, 34
ಧರ್ಮೋ. 26:9ವಿಮೋ 3:8; ಧರ್ಮೋ 8:7, 8; ಯೆಹೆ 20:6
ಧರ್ಮೋ. 26:10ಧರ್ಮೋ 26:2
ಧರ್ಮೋ. 26:11ಧರ್ಮೋ 12:7; 16:14
ಧರ್ಮೋ. 26:12ಧರ್ಮೋ 12:5, 6; 14:22
ಧರ್ಮೋ. 26:12ಧರ್ಮೋ 14:28, 29; ಜ್ಞಾನೋ 14:21; 1ಯೋಹಾ 3:17
ಧರ್ಮೋ. 26:13ಯಾಕೋ 1:27
ಧರ್ಮೋ. 26:15ಆದಿ 15:18; 26:3
ಧರ್ಮೋ. 26:15ಧರ್ಮೋ 8:7, 8
ಧರ್ಮೋ. 26:15ವಿಮೋ 23:25
ಧರ್ಮೋ. 26:16ಧರ್ಮೋ 6:6; 11:1; ಕೀರ್ತ 119:34; 1ಯೋಹಾ 5:3
ಧರ್ಮೋ. 26:17ಯಾಜ 26:46
ಧರ್ಮೋ. 26:17ಪ್ರಸಂ 12:13
ಧರ್ಮೋ. 26:17ಯಾಜ 19:37
ಧರ್ಮೋ. 26:18ಧರ್ಮೋ 14:2; 29:10-13
ಧರ್ಮೋ. 26:19ಧರ್ಮೋ 7:6; 28:1, 9
ಧರ್ಮೋ. 26:19ಧರ್ಮೋ 4:8
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಧರ್ಮೋಪದೇಶಕಾಂಡ 26:1-19

ಧರ್ಮೋಪದೇಶಕಾಂಡ

26 ನಿಮ್ಮ ದೇವರಾದ ಯೆಹೋವ ಕೊಡೋ ದೇಶಕ್ಕೆ ಹೋಗಿ ಅದನ್ನ ವಶ ಮಾಡ್ಕೊಂಡು ಅದ್ರಲ್ಲಿ ವಾಸಿಸೋಕೆ ಶುರುಮಾಡಿದ ಮೇಲೆ 2 ನಿಮ್ಮ ದೇವರಾದ ಯೆಹೋವ ಕೊಟ್ಟ ಆ ದೇಶದ ಜಮೀನಲ್ಲಿ ಬೆಳೆ ಬೆಳೆಸಿದಾಗ ಹೀಗೆ ಮಾಡಬೇಕು: ನೀವು ಎಲ್ಲ ಬೆಳೆಗಳ ಮೊದಲ ಬೆಳೆಯಲ್ಲಿ ಸ್ವಲ್ಪನ ಬುಟ್ಟಿಯಲ್ಲಿ ಹಾಕೊಂಡು ಅದನ್ನ ನಿಮ್ಮ ದೇವರಾದ ಯೆಹೋವ ತನ್ನ ಹೆಸ್ರಿನ ಗೌರವಕ್ಕಾಗಿ ಆರಿಸ್ಕೊಳ್ಳೋ ಜಾಗಕ್ಕೆ ತಗೊಂಡು ಹೋಗಬೇಕು.+ 3 ಆಗ ಅಲ್ಲಿ ಯಾರು ಪುರೋಹಿತನಾಗಿ ಇರ್ತಾನೋ ಅವನ ಹತ್ರ ಹೋಗಿ ‘ನಮ್ಮ ದೇವರಾದ ಯೆಹೋವ ತಾನು ಕೊಟ್ಟ ಮಾತನ್ನ ನೆರವೇರಿಸಿದ್ದಾನೆ ಅಂತ ನಾನು ಇವತ್ತು ಒಪ್ಕೊಳ್ತೀನಿ. ಯೆಹೋವ ಕೊಡ್ತೀನಿ ಅಂತ ನಮ್ಮ ಪೂರ್ವಜರಿಗೆ ಮಾತು ಕೊಟ್ಟ ದೇಶದಲ್ಲಿ ನಾನು ಇವತ್ತು ಇದ್ದೀನಿ’ + ಅಂತ ಹೇಳಬೇಕು.

4 ಪುರೋಹಿತ ನಿಮ್ಮ ಕೈಯಿಂದ ಆ ಬುಟ್ಟಿ ತಗೊಂಡು ನಿಮ್ಮ ದೇವರಾದ ಯೆಹೋವನ ಯಜ್ಞವೇದಿ ಮುಂದೆ ಇಡಬೇಕು. 5 ಆಮೇಲೆ ನೀವು ನಿಮ್ಮ ದೇವರಾದ ಯೆಹೋವನ ಮುಂದೆ ‘ಅರಾಮ್ಯನಾದ+ ನನ್ನ ಪೂರ್ವಜ ಅಲೆಮಾರಿಯಾಗಿದ್ದ.* ಆಮೇಲೆ ಈಜಿಪ್ಟಿಗೆ+ ಹೋಗಿ ಅಲ್ಲಿ ವಿದೇಶಿಯಾಗಿ ವಾಸಿಸಿದ. ಆಗ ಅವನ ಕುಟುಂಬದಲ್ಲಿ ಸ್ವಲ್ಪಾನೇ ಜನ ಇದ್ರು.+ ಅಲ್ಲಿ ಅವನ ವಂಶದ ಸಂಖ್ಯೆ ತುಂಬ ಜಾಸ್ತಿ ಆಗಿ ಅವರು ಬಲಿಷ್ಠವಾದ ಒಂದು ದೊಡ್ಡ ಜನಾಂಗ ಆದ್ರು.+ 6 ಆಗ ಈಜಿಪ್ಟಿನವರು ನಮಗೆ ಕೊಟ್ಟ ಕಷ್ಟ ಅಷ್ಟಿಷ್ಟಲ್ಲ. ಅವರು ನಮ್ಮ ಮೇಲೆ ದಬ್ಬಾಳಿಕೆ ಮಾಡಿ, ನಮ್ಮನ್ನ ಗುಲಾಮರಾಗಿ ಮಾಡ್ಕೊಂಡು ಕಷ್ಟ ಕೊಟ್ಟು ದುಡಿಸ್ಕೊಂಡ್ರು.+ 7 ಹಾಗಾಗಿ ನಮ್ಮ ಪೂರ್ವಜರ ದೇವರಾಗಿರೋ ಯೆಹೋವನಾದ ನಿನಗೆ ನಾವು ಪ್ರಾರ್ಥಿಸೋಕೆ ಶುರು ಮಾಡಿದ್ವಿ. ಯೆಹೋವನಾದ ನೀನು ನಮ್ಮ ಕೂಗನ್ನ ಕೇಳಿದೆ. ಅಷ್ಟೇ ಅಲ್ಲ ನಾವೆಷ್ಟು ಕಷ್ಟದಲ್ಲಿದ್ವಿ, ಎಂಥ ನೋವು ಅನುಭವಿಸ್ತಿದ್ವಿ. ನಮ್ಮ ಮೇಲೆ ಈಜಿಪ್ಟಿನವರು ಯಾವ ತರ ದಬ್ಬಾಳಿಕೆ ಮಾಡ್ತಿದ್ರು ಅಂತ ನೋಡ್ದೆ.+ 8 ಕೊನೆಗೆ ಯೆಹೋವನಾದ ನೀನು ಈಜಿಪ್ಟಲ್ಲಿ ನಿನ್ನ ಮಹಾ ಶಕ್ತಿ ತೋರಿಸಿ,*+ ಅವರಿಗೆ ಭಯಹುಟ್ಟಿಸಿ, ಅದ್ಭುತಗಳನ್ನೂ ಮಾಡಿ ನಮ್ಮನ್ನ ಅಲ್ಲಿಂದ ಬಿಡಿಸ್ಕೊಂಡು ಬಂದೆ.+ 9 ಆಮೇಲೆ ನಮ್ಮನ್ನ ಇಲ್ಲಿಗೆ ಕರ್ಕೊಂಡು ಬಂದು ಹಾಲೂ ಜೇನೂ ಹರಿಯೋ ಈ ದೇಶನ ನಮಗೆ ಕೊಟ್ಟೆ.+ 10 ಯೆಹೋವನಾದ ನೀನು ನನಗೆ ಕೊಟ್ಟ ಜಮೀನಿನ ಮೊದಲ ಬೆಳೆನ ನಾನೀಗ ತಂದಿದ್ದೀನಿ’ + ಅಂತ ಹೇಳಬೇಕು.

ಆಮೇಲೆ ನೀವು ಆ ಬುಟ್ಟಿನ ನಿಮ್ಮ ದೇವರಾದ ಯೆಹೋವನ ಮುಂದೆ ಇಟ್ಟು ಯೆಹೋವನ ಮುಂದೆ ಅಡ್ಡಬೀಳಬೇಕು. 11 ನಿಮ್ಮ ದೇವರಾದ ಯೆಹೋವ ನಿಮಗೂ ನಿಮ್ಮ ಕುಟುಂಬದವರಿಗೂ ಇಷ್ಟೆಲ್ಲಾ ಒಳ್ಳೇ ವಿಷ್ಯಗಳನ್ನ ಮಾಡಿದ್ದಿಕ್ಕೆ ನೀವು ಸಂತೋಷ ಸಂಭ್ರಮದಿಂದ ಇರಬೇಕು. ನೀವು ನಿಮ್ಮ ಮಧ್ಯ ಇರೋ ಲೇವಿಯರ ಜೊತೆ, ವಿದೇಶಿಯರ ಜೊತೆ ಖುಷಿಪಡಬೇಕು.+

12 ನೀವು ಮೂರನೇ ವರ್ಷ ಅಂದ್ರೆ ಹತ್ತನೇ ಒಂದು ಭಾಗ+ ಕೊಡಬೇಕಾದ ವರ್ಷದಲ್ಲಿ ನಿಮ್ಮ ಎಲ್ಲ ಬೆಳೆಯ ಹತ್ತನೇ ಒಂದು ಭಾಗನ ತೆಗೆದು ಇಡಬೇಕು. ಆಮೇಲೆ ಅದನ್ನ ನಿಮ್ಮ ಪಟ್ಟಣದಲ್ಲಿರೋ ಲೇವಿಯರಿಗೆ, ವಿದೇಶಿಯರಿಗೆ, ಅನಾಥ ಮಕ್ಕಳಿಗೆ,* ವಿಧವೆಯರಿಗೆ ಕೊಡಬೇಕು. ಅವರು ಅದನ್ನ ತೃಪ್ತಿ ಆಗೋಷ್ಟು ತಿನ್ಲಿ.+ 13 ಆಮೇಲೆ ನೀವು ನಿಮ್ಮ ದೇವರಾದ ಯೆಹೋವನಿಗೆ ‘ದೇವರೇ, ನೀನು ನನಗೆ ಕೊಟ್ಟ ಆಜ್ಞೆ ಪ್ರಕಾರ ಪವಿತ್ರ ಭಾಗನ ಪೂರ್ತಿಯಾಗಿ ತಗೊಂಡು ಹೋಗಿ ಲೇವಿಯರಿಗೆ, ವಿದೇಶಿಯರಿಗೆ, ಅನಾಥ ಮಕ್ಕಳಿಗೆ, ವಿಧವೆಯರಿಗೆ+ ಕೊಟ್ಟಿದ್ದೀನಿ. ನಾನು ನಿನ್ನ ಆಜ್ಞೆಗಳನ್ನ ಮೀರಿ ನಡೀಲಿಲ್ಲ, ಬಿಟ್ಟುಬಿಡಲಿಲ್ಲ. 14 ನಾನು ಗೋಳಾಡುವಾಗ ಆ ಪವಿತ್ರ ಭಾಗದಿಂದ ತಿನ್ನಲಿಲ್ಲ. ಅಶುದ್ಧನಾಗಿದ್ದಾಗ ಮುಟ್ಟಲಿಲ್ಲ ಅಥವಾ ಸತ್ತವರಿಗಾಗಿ ಕೊಡಲಿಲ್ಲ. ನನ್ನ ದೇವರಾದ ಯೆಹೋವನೇ, ನಿನ್ನ ಮಾತನ್ನ ನಾನು ಕೇಳ್ದೆ, ನೀನು ಕೊಟ್ಟ ಎಲ್ಲಾ ಆಜ್ಞೆಗಳನ್ನ ಪಾಲಿಸ್ದೆ. 15 ಈಗ ನೀನಿರೋ ಪವಿತ್ರ ಸ್ವರ್ಗದಿಂದ ಕೆಳಗೆ ನೋಡಿ ನಿನ್ನ ಜನ್ರಾದ ಇಸ್ರಾಯೇಲ್ಯರಿಗೆ ಆಶೀರ್ವಾದ ಮಾಡು. ನೀನು ನಮ್ಮ ಪೂರ್ವಜರಿಗೆ ಮಾತು ಕೊಟ್ಟ+ ಹಾಗೆ ನಮಗೆ ಕೊಟ್ಟಿರೋ ಈ ಹಾಲೂ ಜೇನೂ ಹರಿಯೋ ದೇಶಕ್ಕೂ+ ಆಶೀರ್ವಾದ ಮಾಡು’ + ಅಂತ ಹೇಳಬೇಕು.

16 ಈ ಎಲ್ಲ ನಿಯಮಗಳನ್ನ ತೀರ್ಪುಗಳನ್ನ ನೀವು ಪಾಲಿಸಬೇಕು ಅಂತ ನಿಮ್ಮ ದೇವರಾದ ಯೆಹೋವ ಇವತ್ತು ನಿಮಗೆ ಆಜ್ಞೆ ಕೊಟ್ಟಿದ್ದಾನೆ. ನೀವು ನಿಮ್ಮ ಪೂರ್ಣ ಹೃದಯದಿಂದ+ ಪೂರ್ಣ ಪ್ರಾಣದಿಂದ* ಅದನ್ನೆಲ್ಲ ಮನಸ್ಸಲ್ಲಿಟ್ಟು ಅದ್ರ ಪ್ರಕಾರ ನಡೀಬೇಕು. 17 ಇವತ್ತು ಯೆಹೋವ ನಿಮಗೆ, ಆತನು ನಿಮ್ಮ ದೇವರಾಗಿದ್ದಾನೆ ಅಂತ ಭರವಸೆ ಕೊಟ್ಟಿದ್ದಾನೆ. ನೀವು ಎಲ್ಲ ವಿಷ್ಯಗಳಲ್ಲಿ ಆತನು ಹೇಳೋ ದಾರಿಲಿ ನಡೆದು, ಆತನ ಮಾತನ್ನ ಕೇಳಬೇಕು, ಆತನ ನಿಯಮಗಳನ್ನ+ ಆಜ್ಞೆಗಳನ್ನ+ ತೀರ್ಪುಗಳನ್ನ+ ಕೇಳಿ ಅದ್ರ ಪ್ರಕಾರ ನಡೀಬೇಕು ಅಂತ ನಿಮಗೆ ಹೇಳಿದ್ದಾನೆ. 18 ಯೆಹೋವ ನಿಮಗೆ ಮಾತು ಕೊಟ್ಟ ಹಾಗೆ, ನೀವು ಆತನ ಜನರಾಗ್ತೀರ, ಆತನ ವಿಶೇಷ ಸೊತ್ತಾಗ್ತೀರ,+ ಆತನ ಎಲ್ಲ ಆಜ್ಞೆಗಳನ್ನ ಪಾಲಿಸ್ತೀರ ಅಂತ ಇವತ್ತು ಆತನಿಗೆ ಹೇಳಿದ್ದೀರ. 19 ನಿಮ್ಮ ದೇವರಾದ ಯೆಹೋವನಿಗೆ ಪವಿತ್ರ ಜನರಾಗಿ ಇರಬೇಕು.+ ಆಗ ಆತನು ಮಾತುಕೊಟ್ಟ ಹಾಗೇ ನಿಮ್ಮನ್ನ ತಾನು ಮಾಡಿದ ಬೇರೆ ಎಲ್ಲ ಜನ್ರಿಗಿಂತ ಶ್ರೇಷ್ಠವಾಗಿಟ್ಟು ನಿಮಗೆ ಹೊಗಳಿಕೆ, ಕೀರ್ತಿ, ಗೌರವ ಸಿಗೋ ತರ ಮಾಡ್ತಾನೆ.”+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ