ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಆದಿಕಾಂಡ 24
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಆದಿಕಾಂಡ ಮುಖ್ಯಾಂಶಗಳು

      • ಇಸಾಕನಿಗೆ ಹೆಣ್ಣು ಹುಡುಕಿದ್ದು (1-58)

      • ಇಸಾಕ ಇದ್ದಲ್ಲಿಗೆ ರೆಬೆಕ್ಕಳ ಆಗಮನ (59-67)

ಆದಿಕಾಂಡ 24:1

ಮಾರ್ಜಿನಲ್ ರೆಫರೆನ್ಸ್

  • +ಆದಿ 13:2

ಆದಿಕಾಂಡ 24:2

ಮಾರ್ಜಿನಲ್ ರೆಫರೆನ್ಸ್

  • +ಆದಿ 15:2, 3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/1/1997, ಪು. 30

ಆದಿಕಾಂಡ 24:3

ಮಾರ್ಜಿನಲ್ ರೆಫರೆನ್ಸ್

  • +ಆದಿ 28:1; ಧರ್ಮೋ 7:1, 3; 2ಕೊರಿಂ 6:14

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು,

    3/2020, ಪು. 2

ಆದಿಕಾಂಡ 24:4

ಮಾರ್ಜಿನಲ್ ರೆಫರೆನ್ಸ್

  • +ಆದಿ 22:20-23

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/1/1999, ಪು. 7

    1/1/1997, ಪು. 30

ಆದಿಕಾಂಡ 24:5

ಮಾರ್ಜಿನಲ್ ರೆಫರೆನ್ಸ್

  • +ಆದಿ 11:27, 28; 15:7

ಆದಿಕಾಂಡ 24:6

ಮಾರ್ಜಿನಲ್ ರೆಫರೆನ್ಸ್

  • +ಇಬ್ರಿ 11:15

ಆದಿಕಾಂಡ 24:7

ಮಾರ್ಜಿನಲ್ ರೆಫರೆನ್ಸ್

  • +ಆದಿ 12:1; ಇಬ್ರಿ 11:8
  • +ಇಬ್ರಿ 11:18
  • +ಆದಿ 13:14, 15; 26:3, 4; ಧರ್ಮೋ 34:4; ಅಕಾ 7:4, 5
  • +ಮೀಕ 7:20; ಲೂಕ 1:72, 73; ಇಬ್ರಿ 6:13, 14
  • +ಇಬ್ರಿ 1:7, 14
  • +ಆದಿ 12:5

ಆದಿಕಾಂಡ 24:9

ಮಾರ್ಜಿನಲ್ ರೆಫರೆನ್ಸ್

  • +ಆದಿ 24:2, 3

ಆದಿಕಾಂಡ 24:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    6/15/2011, ಪು. 16-17

    “ಒಳ್ಳೆಯ ದೇಶ”, ಪು. 6-7

ಆದಿಕಾಂಡ 24:12

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/1/2000, ಪು. 3

ಆದಿಕಾಂಡ 24:14

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/1/1997, ಪು. 30

ಆದಿಕಾಂಡ 24:15

ಮಾರ್ಜಿನಲ್ ರೆಫರೆನ್ಸ್

  • +ಆದಿ 22:23
  • +ಆದಿ 11:26
  • +ಆದಿ 11:29

ಆದಿಕಾಂಡ 24:17

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು,

    3/2020, ಪು. 3

ಆದಿಕಾಂಡ 24:18

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು,

    3/2020, ಪು. 3

ಆದಿಕಾಂಡ 24:19

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/1/1997, ಪು. 30

ಆದಿಕಾಂಡ 24:20

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/1/1997, ಪು. 30

ಆದಿಕಾಂಡ 24:22

ಪಾದಟಿಪ್ಪಣಿ

  • *

    ಅಂದ್ರೆ, ಹತ್ತಿರತ್ತಿರ 6 ಗ್ರಾಂ. ಪರಿಶಿಷ್ಟ ಬಿ14 ನೋಡಿ.

  • *

    ಅಂದ್ರೆ, 114 ಗ್ರಾಂ. ಪರಿಶಿಷ್ಟ ಬಿ14 ನೋಡಿ.

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/1/1997, ಪು. 30-31

ಆದಿಕಾಂಡ 24:24

ಮಾರ್ಜಿನಲ್ ರೆಫರೆನ್ಸ್

  • +ಆದಿ 22:23
  • +ಆದಿ 11:29

ಆದಿಕಾಂಡ 24:29

ಮಾರ್ಜಿನಲ್ ರೆಫರೆನ್ಸ್

  • +ಆದಿ 25:20; 29:10

ಆದಿಕಾಂಡ 24:32

ಪಾದಟಿಪ್ಪಣಿ

  • *

    ಬಹುಶಃ ಇದು ಲಾಬಾನ ಇರಬೇಕು.

ಆದಿಕಾಂಡ 24:34

ಮಾರ್ಜಿನಲ್ ರೆಫರೆನ್ಸ್

  • +ಆದಿ 15:2, 3

ಆದಿಕಾಂಡ 24:35

ಮಾರ್ಜಿನಲ್ ರೆಫರೆನ್ಸ್

  • +ಆದಿ 12:15, 16; 13:2; 24:1

ಆದಿಕಾಂಡ 24:36

ಮಾರ್ಜಿನಲ್ ರೆಫರೆನ್ಸ್

  • +ಆದಿ 21:1, 2; ರೋಮ 4:19; ಇಬ್ರಿ 11:11
  • +ಆದಿ 25:5

ಆದಿಕಾಂಡ 24:37

ಮಾರ್ಜಿನಲ್ ರೆಫರೆನ್ಸ್

  • +ಆದಿ 24:2, 3; 28:1

ಆದಿಕಾಂಡ 24:38

ಮಾರ್ಜಿನಲ್ ರೆಫರೆನ್ಸ್

  • +ಆದಿ 22:20-23
  • +ಆದಿ 24:4

ಆದಿಕಾಂಡ 24:39

ಮಾರ್ಜಿನಲ್ ರೆಫರೆನ್ಸ್

  • +ಆದಿ 24:5

ಆದಿಕಾಂಡ 24:40

ಮಾರ್ಜಿನಲ್ ರೆಫರೆನ್ಸ್

  • +ಆದಿ 48:15
  • +ಇಬ್ರಿ 1:7, 14
  • +ಆದಿ 11:25

ಆದಿಕಾಂಡ 24:41

ಮಾರ್ಜಿನಲ್ ರೆಫರೆನ್ಸ್

  • +ಆದಿ 24:9

ಆದಿಕಾಂಡ 24:43

ಮಾರ್ಜಿನಲ್ ರೆಫರೆನ್ಸ್

  • +ಆದಿ 24:16

ಆದಿಕಾಂಡ 24:44

ಮಾರ್ಜಿನಲ್ ರೆಫರೆನ್ಸ್

  • +ಆದಿ 24:14

ಆದಿಕಾಂಡ 24:45

ಮಾರ್ಜಿನಲ್ ರೆಫರೆನ್ಸ್

  • +ಆದಿ 24:15, 17

ಆದಿಕಾಂಡ 24:46

ಮಾರ್ಜಿನಲ್ ರೆಫರೆನ್ಸ್

  • +ಆದಿ 24:18

ಆದಿಕಾಂಡ 24:47

ಮಾರ್ಜಿನಲ್ ರೆಫರೆನ್ಸ್

  • +ಆದಿ 24:22, 23

ಆದಿಕಾಂಡ 24:48

ಮಾರ್ಜಿನಲ್ ರೆಫರೆನ್ಸ್

  • +ಆದಿ 24:27

ಆದಿಕಾಂಡ 24:49

ಮಾರ್ಜಿನಲ್ ರೆಫರೆನ್ಸ್

  • +ಆದಿ 24:8

ಆದಿಕಾಂಡ 24:58

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು,

    3/2020, ಪು. 3

    ಕಾವಲಿನಬುರುಜು,

    10/15/2012, ಪು. 29

    4/15/2004, ಪು. 10

ಆದಿಕಾಂಡ 24:59

ಪಾದಟಿಪ್ಪಣಿ

  • *

    ಅವಳು ಈ ಮುಂಚೆ ರೆಬೆಕ್ಕಳ ದಾದಿ. ಈಗ ರೆಬೆಕ್ಕಳ ಸೇವಕಿ.

ಮಾರ್ಜಿನಲ್ ರೆಫರೆನ್ಸ್

  • +ಆದಿ 28:5
  • +ಆದಿ 35:8

ಆದಿಕಾಂಡ 24:60

ಮಾರ್ಜಿನಲ್ ರೆಫರೆನ್ಸ್

  • +ಆದಿ 22:15, 17

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರಕಟನೆ, ಪು. 151

ಆದಿಕಾಂಡ 24:62

ಮಾರ್ಜಿನಲ್ ರೆಫರೆನ್ಸ್

  • +ಆದಿ 12:9; 20:1; ಅರ 13:22; ನ್ಯಾಯ 1:9
  • +ಆದಿ 16:14; 25:11

ಇಂಡೆಕ್ಸಸ್

  • ಸಂಶೋಧನಾ ಸಾಧನ

    “ಒಳ್ಳೆಯ ದೇಶ”, ಪು. 6-7

ಆದಿಕಾಂಡ 24:63

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 77:12; 143:5

ಆದಿಕಾಂಡ 24:64

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು,

    3/2020, ಪು. 3

    “ಒಳ್ಳೆಯ ದೇಶ”, ಪು. 6-7

ಆದಿಕಾಂಡ 24:65

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 3/2020, ಪು. 8

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು,

    3/2020, ಪು. 3

ಆದಿಕಾಂಡ 24:67

ಮಾರ್ಜಿನಲ್ ರೆಫರೆನ್ಸ್

  • +ಇಬ್ರಿ 11:9
  • +ಆದಿ 26:8
  • +ಆದಿ 23:2, 19

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಆದಿ. 24:1ಆದಿ 13:2
ಆದಿ. 24:2ಆದಿ 15:2, 3
ಆದಿ. 24:3ಆದಿ 28:1; ಧರ್ಮೋ 7:1, 3; 2ಕೊರಿಂ 6:14
ಆದಿ. 24:4ಆದಿ 22:20-23
ಆದಿ. 24:5ಆದಿ 11:27, 28; 15:7
ಆದಿ. 24:6ಇಬ್ರಿ 11:15
ಆದಿ. 24:7ಆದಿ 12:1; ಇಬ್ರಿ 11:8
ಆದಿ. 24:7ಇಬ್ರಿ 11:18
ಆದಿ. 24:7ಆದಿ 13:14, 15; 26:3, 4; ಧರ್ಮೋ 34:4; ಅಕಾ 7:4, 5
ಆದಿ. 24:7ಮೀಕ 7:20; ಲೂಕ 1:72, 73; ಇಬ್ರಿ 6:13, 14
ಆದಿ. 24:7ಇಬ್ರಿ 1:7, 14
ಆದಿ. 24:7ಆದಿ 12:5
ಆದಿ. 24:9ಆದಿ 24:2, 3
ಆದಿ. 24:15ಆದಿ 22:23
ಆದಿ. 24:15ಆದಿ 11:26
ಆದಿ. 24:15ಆದಿ 11:29
ಆದಿ. 24:24ಆದಿ 22:23
ಆದಿ. 24:24ಆದಿ 11:29
ಆದಿ. 24:29ಆದಿ 25:20; 29:10
ಆದಿ. 24:34ಆದಿ 15:2, 3
ಆದಿ. 24:35ಆದಿ 12:15, 16; 13:2; 24:1
ಆದಿ. 24:36ಆದಿ 21:1, 2; ರೋಮ 4:19; ಇಬ್ರಿ 11:11
ಆದಿ. 24:36ಆದಿ 25:5
ಆದಿ. 24:37ಆದಿ 24:2, 3; 28:1
ಆದಿ. 24:38ಆದಿ 22:20-23
ಆದಿ. 24:38ಆದಿ 24:4
ಆದಿ. 24:39ಆದಿ 24:5
ಆದಿ. 24:40ಆದಿ 48:15
ಆದಿ. 24:40ಇಬ್ರಿ 1:7, 14
ಆದಿ. 24:40ಆದಿ 11:25
ಆದಿ. 24:41ಆದಿ 24:9
ಆದಿ. 24:43ಆದಿ 24:16
ಆದಿ. 24:44ಆದಿ 24:14
ಆದಿ. 24:45ಆದಿ 24:15, 17
ಆದಿ. 24:46ಆದಿ 24:18
ಆದಿ. 24:47ಆದಿ 24:22, 23
ಆದಿ. 24:48ಆದಿ 24:27
ಆದಿ. 24:49ಆದಿ 24:8
ಆದಿ. 24:59ಆದಿ 28:5
ಆದಿ. 24:59ಆದಿ 35:8
ಆದಿ. 24:60ಆದಿ 22:15, 17
ಆದಿ. 24:62ಆದಿ 12:9; 20:1; ಅರ 13:22; ನ್ಯಾಯ 1:9
ಆದಿ. 24:62ಆದಿ 16:14; 25:11
ಆದಿ. 24:63ಕೀರ್ತ 77:12; 143:5
ಆದಿ. 24:67ಇಬ್ರಿ 11:9
ಆದಿ. 24:67ಆದಿ 26:8
ಆದಿ. 24:67ಆದಿ 23:2, 19
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
  • 31
  • 32
  • 33
  • 34
  • 35
  • 36
  • 37
  • 38
  • 39
  • 40
  • 41
  • 42
  • 43
  • 44
  • 45
  • 46
  • 47
  • 48
  • 49
  • 50
  • 51
  • 52
  • 53
  • 54
  • 55
  • 56
  • 57
  • 58
  • 59
  • 60
  • 61
  • 62
  • 63
  • 64
  • 65
  • 66
  • 67
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಆದಿಕಾಂಡ 24:1-67

ಆದಿಕಾಂಡ

24 ಅಬ್ರಹಾಮನಿಗೆ ತುಂಬ ವಯಸ್ಸಾಗಿತ್ತು. ಯೆಹೋವ ಅವನನ್ನ ಎಲ್ಲದ್ರಲ್ಲೂ ಆಶೀರ್ವದಿಸಿದ್ದನು.+ 2 ಒಂದಿನ ಅಬ್ರಹಾಮ ತನ್ನ ಮನೆ ಕೆಲಸನೆಲ್ಲ ನೋಡ್ಕೊಳ್ತಿದ್ದ ಹಿರೀ ಸೇವಕನಿಗೆ+ ಹೀಗಂದ: “ದಯಮಾಡಿ ನನ್ನ ತೊಡೆ ಕೆಳಗೆ ಕೈಯಿಟ್ಟು 3 ಭೂಮಿಗೆ, ಸ್ವರ್ಗಕ್ಕೆ ದೇವರಾಗಿರೋ ಯೆಹೋವನ ಮುಂದೆ ನನಗೊಂದು ಮಾತು ಕೊಡು. ನಾನು ವಾಸವಾಗಿರೋ ಈ ಕಾನಾನ್‌ ದೇಶದ ಜನರಿಂದ ನೀನು ನನ್ನ ಮಗನಿಗೋಸ್ಕರ ಹೆಣ್ಣು ತರದೆ+ 4 ನನ್ನ ಸ್ವದೇಶದಲ್ಲಿರೋ ನನ್ನ ಸಂಬಂಧಿಕರ+ ಹತ್ರ ಹೋಗಿ ಅವರಿಂದ ಇಸಾಕನಿಗೆ ಹೆಣ್ಣು ತರಬೇಕು.”

5 ಅದಕ್ಕೆ ಆ ಸೇವಕ “ಒಂದುವೇಳೆ ನನ್ನ ಜೊತೆ ಈ ದೇಶಕ್ಕೆ ಬರೋಕೆ ಆ ಹುಡುಗಿಗೆ ಇಷ್ಟ ಇಲ್ಲದಿದ್ರೆ ನಾನೇನು ಮಾಡ್ಲಿ? ನೀನು ಬಿಟ್ಟುಬಂದ ಆ ದೇಶಕ್ಕೆ ನಾನು ನಿನ್ನ ಮಗನನ್ನ ಕರ್ಕೊಂಡು ಹೋಗಬೇಕಾ?”+ ಅಂತ ಕೇಳಿದ. 6 ಅದಕ್ಕೆ ಅಬ್ರಹಾಮ “ಬೇಡ, ನನ್ನ ಮಗನನ್ನ ಅಲ್ಲಿಗೆ ಕರ್ಕೊಂಡು ಹೋಗಬಾರದು.+ 7 ನನ್ನ ತಂದೆಯ ಮನೆಯಿಂದ, ನನ್ನ ಬಂಧುಗಳ ದೇಶದಿಂದ ನನ್ನನ್ನ ಕರ್ಕೊಂಡು ಬಂದ+ ಸ್ವರ್ಗದ ದೇವರಾದ ಯೆಹೋವ ಈ ದೇಶನ ನನ್ನ ಸಂತತಿಗೆ+ ಕೊಡ್ತೀನಿ+ ಅಂತ ಮಾತು ಕೊಟ್ಟಿದ್ದಾನೆ.+ ಆತನೇ ನಿನ್ನ ಮುಂದೆ ತನ್ನ ದೂತನನ್ನ ಕಳಿಸ್ತಾನೆ.+ ಹಾಗಾಗಿ ನೀನು ಖಂಡಿತ ಅಲ್ಲಿಂದ ನನ್ನ ಮಗನಿಗಾಗಿ ಹೆಣ್ಣು ತರ್ತಿಯ.+ 8 ಒಂದುವೇಳೆ ಆ ಹುಡುಗಿಗೆ ನಿನ್ನ ಜೊತೆ ಬರೋಕೆ ಇಷ್ಟ ಇಲ್ಲದಿದ್ರೆ ನೀನು ನನಗೆ ಕೊಟ್ಟ ಮಾತಿನ ಪ್ರಕಾರ ಮಾಡದಿದ್ರೂ ಪರವಾಗಿಲ್ಲ. ಆದ್ರೆ ನನ್ನ ಮಗನನ್ನ ನೀನು ಅಲ್ಲಿಗೆ ಕರ್ಕೊಂಡು ಹೋಗಬಾರದು” ಅಂದ. 9 ಆಗ ಆ ಸೇವಕ ತನ್ನ ಧಣಿ ಅಬ್ರಹಾಮನ ತೊಡೆ ಕೆಳಗೆ ಕೈಯಿಟ್ಟು ಅವನು ಹೇಳಿದ ಹಾಗೆ ಮಾಡ್ತೀನಿ ಅಂತ ಮಾತು ಕೊಟ್ಟ.+

10 ಆಮೇಲೆ ಆ ಸೇವಕ ತನ್ನ ಧಣಿಯ ಒಂಟೆಗಳಲ್ಲಿ ಹತ್ತು ಒಂಟೆಗಳನ್ನ, ತನ್ನ ಧಣಿಯಿಂದ ಒಳ್ಳೇ ಉಡುಗೊರೆಗಳನ್ನ ತಗೊಂಡು ಮೆಸಪಟೇಮ್ಯದ ನಾಹೋರ್‌ ಅನ್ನೋ ಪಟ್ಟಣಕ್ಕೆ ಪ್ರಯಾಣ ಮಾಡಿದ. 11 ಅವನು ಪ್ರಯಾಣ ಮಾಡ್ತಾ ನಾಹೋರ್‌ ಪಟ್ಟಣದ ಹತ್ರ ಬಂದಾಗ ಬಾವಿ ನೋಡಿ ಒಂಟೆಗಳನ್ನ ಅಲ್ಲೇ ಕೂರಿಸಿದ. ಇನ್ನೇನು ಸಂಜೆಯಾಗ್ತಾ ಇತ್ತು. ಸ್ತ್ರೀಯರು ನೀರು ಸೇದೋಕೆ ಬರೋ ಸಮಯ ಅದಾಗಿತ್ತು. 12 ಆಗ ಆ ಸೇವಕ ಹೀಗೆ ಪ್ರಾರ್ಥಿಸಿದ: “ನನ್ನ ಧಣಿ ಅಬ್ರಹಾಮನ ದೇವರಾದ ಯೆಹೋವನೇ, ನಾನು ಇವತ್ತು ಇಲ್ಲಿಗೆ ಬಂದಿರೋ ಕೆಲಸ ಯಶಸ್ವಿ ಆಗೋ ತರ ದಯವಿಟ್ಟು ಮಾಡು. ನನ್ನ ಧಣಿಗೆ ಶಾಶ್ವತ ಪ್ರೀತಿ ತೋರಿಸು. 13 ನಾನು ಬಾವಿ ಹತ್ರ ನಿಂತಿದ್ದೀನಿ. ಈ ಪಟ್ಟಣದ ಹೆಣ್ಣುಮಕ್ಕಳು ಇಲ್ಲಿ ನೀರಿಗೆ ಬರ್ತಿದ್ದಾರೆ. 14 ‘ದಯವಿಟ್ಟು ನಿನ್ನ ಕೊಡ ಇಳಿಸಿ ನನಗೆ ಕುಡಿಯೋಕೆ ನೀರು ಕೊಡಮ್ಮ’ ಅಂತ ನಾನು ಕೇಳಿದಾಗ ಯಾವ ಹುಡುಗಿ ‘ಕೊಡ್ತೀನಿ, ನಿನ್ನ ಒಂಟೆಗಳಿಗೂ ನೀರು ತಂದು ಕೊಡ್ತೀನಿ’ ಅಂತ ಹೇಳ್ತಾಳೋ ಅವಳೇ ನಿನ್ನ ಸೇವಕ ಇಸಾಕನಿಗೆ ನೀನು ಆರಿಸಿರೋ ಹುಡುಗಿ ಅಂತ ನಾನು ತಿಳ್ಕೊಳ್ತೀನಿ. ನನ್ನ ಧಣಿಗೆ ನೀನು ಶಾಶ್ವತ ಪ್ರೀತಿ ತೋರಿಸಿದ್ದೀಯ ಅಂತ ಇದ್ರಿಂದ ತೋರಿಸ್ಕೊಡು.”

15 ಹೀಗೆ ಅವನು ಹೇಳಿ ಮುಗಿಸೋ ಮುಂಚೆನೇ ರೆಬೆಕ್ಕ ಹೆಗಲ ಮೇಲೆ ಕೊಡ ಇಟ್ಕೊಂಡು ಪಟ್ಟಣದ ಹೊರಗೆ ಬಂದಳು. ಅವಳು ಬೆತೂವೇಲನ+ ಮಗಳು. ಬೆತೂವೇಲ ಅಬ್ರಹಾಮನ ಅಣ್ಣ ನಾಹೋರನ+ ಹೆಂಡತಿ ಮಿಲ್ಕಳಿಗೆ+ ಹುಟ್ಟಿದವನು. 16 ರೆಬೆಕ್ಕ ತುಂಬ ಸುಂದರಿಯಾಗಿದ್ದಳು. ಅವಳಿಗೆ ಇನ್ನೂ ಮದುವೆ ಆಗಿರಲಿಲ್ಲ, ಕನ್ಯೆಯಾಗಿದ್ದಳು. ಅವಳು ಬಾವಿಯಲ್ಲಿ ಇಳಿದು ಕೊಡದಲ್ಲಿ ನೀರು ತುಂಬಿಕೊಂಡು ಮೇಲೆ ಬಂದಳು. 17 ಕೂಡಲೇ ಆ ಸೇವಕ ಓಡಿಹೋಗಿ ಅವಳ ಮುಂದೆ ನಿಂತು “ದಯವಿಟ್ಟು ಕುಡಿಯೋಕೆ ಸ್ವಲ್ಪ ನೀರು ಕೊಡಮ್ಮ” ಅಂತ ಕೇಳಿದ. 18 ಅದಕ್ಕೆ ಅವಳು “ಕೊಡ್ತೀನಿ ಸ್ವಾಮಿ” ಅಂತ ಹೇಳಿ ತಕ್ಷಣ ಕೊಡನ ಹೆಗಲ ಮೇಲಿಂದ ಇಳಿಸಿ ನೀರು ಕುಡಿಯೋಕೆ ಕೊಟ್ಟಳು. 19 ಅವನು ಕುಡಿದ ಮೇಲೆ ಅವಳು “ಒಂಟೆಗಳಿಗೂ ಸಾಕಾಗುವಷ್ಟು ನೀರು ತಂದು ಕೊಡ್ತೀನಿ” ಅಂದಳು. 20 ತಕ್ಷಣ ಕೊಡದಲ್ಲಿ ಉಳಿದಿದ್ದ ನೀರನ್ನ ತೊಟ್ಟಿಗೆ ಹೊಯ್ದು ಒಂಟೆಗಳಿಗೆ ನೀರು ತರೋಕೆ ಬಾವಿ ಹತ್ರ ಓಡಿದಳು. ಎಲ್ಲ ಒಂಟೆಗಳು ನೀರು ಕುಡಿದು ಮುಗಿಸೋ ತನಕ ಅವಳು ಓಡೋಡಿ ಹೋಗಿ ನೀರು ಸೇದಿ ತಂದು ತೊಟ್ಟಿಗೆ ಹಾಕ್ತಾ ಇದ್ದಳು. 21 ಅಲ್ಲಿ ತನಕ ಆ ಸೇವಕ ಏನೂ ಮಾತಾಡದೆ ಅವಳನ್ನ ಆಶ್ಚರ್ಯದಿಂದ ನೋಡ್ತಾ, ತಾನು ಅಲ್ಲಿಗೆ ಬಂದಿರೋ ಕೆಲಸನ ಯೆಹೋವ ಯಶಸ್ವಿ ಮಾಡಿದ್ದಾನಾ ಇಲ್ವಾ ಅಂತ ಮನಸ್ಸಲ್ಲೇ ಯೋಚಿಸ್ತಾ ಇದ್ದ.

22 ಒಂಟೆಗಳು ನೀರು ಕುಡಿದ ಮೇಲೆ ಅವನು ಅವಳಿಗೆ ಅರ್ಧ ಶೆಕೆಲ್‌* ತೂಕದ ಚಿನ್ನದ ಮೂಗುತಿ ಮತ್ತು ಹತ್ತು ಶೆಕೆಲ್‌* ತೂಕದ ಎರಡು ಚಿನ್ನದ ಬಳೆಗಳನ್ನ ತೆಗೆದು ಕೊಟ್ಟ. 23 ಅವನು “ನೀನು ಯಾರ ಮಗಳು ಅಂತ ತಿಳ್ಕೊಬಹುದಾ? ಇವತ್ತು ರಾತ್ರಿ ನಮಗೆ ಇರೋಕೆ ನಿನ್ನ ತಂದೆ ಮನೇಲಿ ಜಾಗ ಇದ್ಯಾ?” ಅಂತ ಕೇಳಿದ. 24 ಅವಳು “ನಾನು ಬೆತೂವೇಲನ+ ಮಗಳು. ನನ್ನ ಅಜ್ಜಅಜ್ಜಿ ಹೆಸರು ನಾಹೋರ ಮತ್ತು ಮಿಲ್ಕ”+ ಅಂದಳು. 25 ಆಮೇಲೆ ಅವಳು “ನೀವು ರಾತ್ರಿ ಉಳ್ಕೊಳ್ಳೋಕ್ಕೆ ಜಾಗ ಇದೆ. ನಿಮ್ಮ ಒಂಟೆಗೆ ಬೇಕಾಗುವಷ್ಟು ಹುಲ್ಲು, ಮೇವು ಕೂಡ ಇದೆ” ಅಂದಳು. 26 ಆಗ ಆ ಸೇವಕ ಮಂಡಿಯೂರಿ ನೆಲಕ್ಕೆ ಬಗ್ಗಿ ಯೆಹೋವನಿಗೆ ನಮಸ್ಕಾರ ಮಾಡಿ 27 “ನನ್ನ ಧಣಿಯ ದೇವರಾಗಿರೋ ಯೆಹೋವನನ್ನ ಹೊಗಳಿ. ಯಾಕಂದ್ರೆ ಆತನು ನನ್ನ ಧಣಿಗೆ ಇನ್ನೂ ಶಾಶ್ವತ ಪ್ರೀತಿ ತೋರಿಸ್ತಾ ಇದ್ದಾನೆ. ಅಷ್ಟೇ ಅಲ್ಲ ಮಾತು ಕೊಟ್ಟ ಹಾಗೆ ನಡ್ಕೊಂಡಿದ್ದಾನೆ. ಯೆಹೋವ ನನಗೆ ದಾರಿ ತೋರಿಸ್ತಾ ನನ್ನ ಧಣಿಯ ಅಣ್ಣತಮ್ಮಂದಿರ ಮನೆಗೇ ಕರ್ಕೊಂಡು ಬಂದಿದ್ದಾನೆ” ಅಂದನು.

28 ಆಗ ರೆಬೆಕ್ಕ ಮನೆಗೆ ಓಡಿ ಹೋಗಿ ಈ ವಿಷ್ಯವನ್ನ ತಾಯಿಗೆ, ಬೇರೆಯವರಿಗೆ ಹೇಳಿದಳು. 29 ರೆಬೆಕ್ಕಗೆ ಒಬ್ಬ ಅಣ್ಣ ಇದ್ದ. ಅವನ ಹೆಸರು ಲಾಬಾನ.+ ಅವನು ಪಟ್ಟಣದ ಹೊರಗೆ ಬಾವಿ ಹತ್ರ ಆ ಮನುಷ್ಯನನ್ನ ನೋಡೋಕೆ ಓಡಿದ. 30 ಆ ಮನುಷ್ಯ ಇನ್ನೂ ಬಾವಿ ಹತ್ರಾನೇ ಒಂಟೆಗಳ ಜೊತೆ ನಿಂತಿದ್ದ. ಲಾಬಾನ ತನ್ನ ತಂಗಿ ಹಾಕೊಂಡಿದ್ದ ಮೂಗುತಿ, ಅವಳ ಕೈಲ್ಲಿದ್ದ ಬಳೆ ನೋಡಿ ಮತ್ತು ತನ್ನ ಜೊತೆ ಆ ಮನುಷ್ಯ ಹೇಗೆ ಮಾತಾಡಿದ ಅಂತ ಅವಳು ಹೇಳಿದ್ದನ್ನ ಕೇಳಿಸ್ಕೊಂಡು ಅವನನ್ನ ಭೇಟಿಯಾಗೋಕೆ ಹೋಗಿದ್ದ. 31 ಆ ಮನುಷ್ಯನನ್ನ ನೋಡಿದ ಕೂಡಲೇ ಲಾಬಾನ “ಯೆಹೋವನ ಆಶೀರ್ವಾದ ಸಿಕ್ಕವನೇ ಬಾ. ಇಲ್ಲೇ ಯಾಕೆ ನಿಂತಿದ್ದಿಯಾ? ನಾನು ನಿನಗಾಗಿ ಮನೆಯನ್ನ, ಒಂಟೆಗಳಿಗೆ ಸ್ಥಳವನ್ನ ಸಿದ್ಧಮಾಡಿದ್ದೀನಿ” ಅಂದ. 32 ಆ ಮನುಷ್ಯ ಮನೆಯೊಳಗೆ ಬಂದಾಗ ಅವನು* ಒಂಟೆ ಮೇಲಿದ್ದ ಹೊರೆ ಇಳಿಸಿ ಅವುಗಳಿಗೆ ಹುಲ್ಲು ಮೇವು ಕೊಟ್ಟ. ಅಲ್ಲದೆ ಆ ಮನುಷ್ಯನಿಗೆ ಮತ್ತು ಅವನ ಜೊತೆ ಇದ್ದವರಿಗೆ ಕಾಲು ತೊಳಿಯೋಕೆ ನೀರು ಕೊಟ್ಟ. 33 ಆಮೇಲೆ ಊಟ ಬಡಿಸಿದಾಗ ಆ ಮನುಷ್ಯ “ಮೊದ್ಲು ನಾನು ಯಾಕೆ ಬಂದೆ ಅಂತ ಹೇಳ್ತೀನಿ. ಆಮೇಲೆ ಊಟ ಮಾಡ್ತೀನಿ” ಅಂದ. ಅದಕ್ಕೆ ಲಾಬಾನ “ಸರಿ, ಹೇಳು” ಅಂದ.

34 ಆಗ ಅವನು ಹೀಗಂದ: “ನಾನು ಅಬ್ರಹಾಮನ ಸೇವಕ.+ 35 ಯೆಹೋವ ನನ್ನ ಧಣಿನ ತುಂಬ ಆಶೀರ್ವದಿಸಿದ್ದಾನೆ. ಕುರಿದನ, ಚಿನ್ನಬೆಳ್ಳಿ, ಆಳುಗಳು, ಒಂಟೆಗಳು, ಕತ್ತೆಗಳನ್ನ ಕೊಟ್ಟು ತುಂಬ ಶ್ರೀಮಂತನನ್ನಾಗಿ ಮಾಡಿದ್ದಾನೆ.+ 36 ಅಷ್ಟೇ ಅಲ್ಲ, ನನ್ನ ಧಣಿಯ ಹೆಂಡತಿ ಸಾರಾಗೆ ವಯಸ್ಸಾದಾಗ ಒಬ್ಬ ಮಗ ಹುಟ್ಟಿದ.+ ಆ ಮಗನಿಗೆ ನನ್ನ ಧಣಿ ತನ್ನ ಹತ್ರ ಇರೋದನ್ನೆಲ್ಲ ಕೊಡ್ತಾನೆ.+ 37 ಹಾಗಾಗಿ ನನ್ನ ಧಣಿ ನನ್ನತ್ರ ಮಾತು ತಗೊಂಡು ‘ನಾನು ವಾಸವಾಗಿರೋ ಕಾನಾನ್‌ ದೇಶದ ಜನರಿಂದ ನೀನು ನನ್ನ ಮಗನಿಗೆ ಹೆಣ್ಣು ತರಬಾರದು.+ 38 ನೀನು ನನ್ನ ತಂದೆ ಮನೆಗೆ, ನನ್ನ ಸಂಬಂಧಿಕರ+ ಹತ್ರ ಹೋಗಿ ಅವರಿಂದಾನೇ ನನ್ನ ಮಗನಿಗೆ ಹೆಣ್ಣು ತರಬೇಕು’ + ಅಂದ. 39 ಆದ್ರೆ ನಾನು ನನ್ನ ಧಣಿಗೆ ‘ಒಂದುವೇಳೆ ನನ್ನ ಜೊತೆ ಬರೋಕೆ ಆ ಹುಡುಗಿಗೆ ಇಷ್ಟ ಇಲ್ಲದಿದ್ರೆ ನಾನೇನು ಮಾಡ್ಲಿ?’+ ಅಂತ ಕೇಳಿದೆ. 40 ಅದಕ್ಕೆ ಅವನು ‘ನಾನು ಯೆಹೋವ ಹೇಳಿದ ಹಾಗೆ ಸರಿಯಾದ ದಾರಿಯಲ್ಲಿ ನಡಿದಿರೋ ಕಾರಣ+ ಆತನು ತನ್ನ ದೂತನನ್ನ ನಿನ್ನ ಜೊತೆ ಕಳಿಸ್ತಾನೆ.+ ನೀನು ಹೋಗೋ ಕೆಲಸನ ಖಂಡಿತ ಯಶಸ್ವಿ ಮಾಡ್ತಾನೆ. ನೀನು ನನ್ನ ಕುಟುಂಬದವರಿಂದ, ನನ್ನ ತಂದೆಯ ಮನೆಯಿಂದ ನನ್ನ ಮಗನಿಗೆ ಹೆಣ್ಣು ತರಬೇಕು.+ 41 ನೀನು ನನ್ನ ಕುಟುಂಬದವರ ಹತ್ರ ಹೋದಾಗ ಅವರು ಹೆಣ್ಣು ಕೊಡೋಕೆ ಒಪ್ಪದಿದ್ರೆ ನೀನು ನನಗೆ ಕೊಟ್ಟ ಮಾತಿನ ಪ್ರಕಾರ ಮಾಡದಿದ್ರೂ ಪರವಾಗಿಲ್ಲ’+ ಅಂದನು.

42 ನಾನು ಇವತ್ತು ಬಾವಿ ಹತ್ರ ಪ್ರಾರ್ಥಿಸ್ತಾ ‘ನನ್ನ ಧಣಿ ಅಬ್ರಹಾಮನ ದೇವರಾಗಿರೋ ಯೆಹೋವನೇ, ನಾನು ಬಂದ ಕೆಲಸನ ನೀನು ಯಶಸ್ವಿ ಮಾಡ್ತಿಯ ಅಂದ್ರೆ ನಾನು ಕೇಳೋದು ಆಗಲಿ. 43 ಈ ಬಾವಿ ಹತ್ರ ನಿಂತಿರೋ ನಾನು ಇಲ್ಲಿ ನೀರು ತುಂಬಿಸೋಕೆ ಬರೋ ಹುಡುಗಿಗೆ+ “ದಯವಿಟ್ಟು ಕುಡಿಯೋಕೆ ಸ್ವಲ್ಪ ನೀರು ಕೊಡಮ್ಮ” ಅಂತ ಕೇಳ್ತೀನಿ. 44 ಆಗ ಅವಳು “ಕೊಡ್ತೀನಿ, ನಿನ್ನ ಒಂಟೆಗಳಿಗೂ ನೀರು ತಂದು ಕೊಡ್ತೀನಿ” ಅಂತ ಹೇಳಿದ್ರೆ ಅವಳೇ ನನ್ನ ಧಣಿಯ ಮಗನಿಗೆ ಯೆಹೋವ ಆರಿಸಿರೋ ಹುಡುಗಿ ಅಂತ ತಿಳ್ಕೊಳ್ತೀನಿ’ + ಅಂದೆ.

45 ಮನಸ್ಸಲ್ಲಿ ಹಾಗೆ ಹೇಳಿ ಮುಗಿಸೋಕೆ ಮುಂಚೆನೇ, ರೆಬೆಕ್ಕ ಹೆಗಲ ಮೇಲೆ ಕೊಡ ಇಟ್ಕೊಂಡು ಪಟ್ಟಣದ ಹೊರಗೆ ಬಂದಳು. ಅವಳು ಬಾವಿಯಲ್ಲಿ ಇಳಿದು ಕೊಡದಲ್ಲಿ ನೀರು ತುಂಬಿಸಿದಳು. ಆಗ ನಾನು ಅವಳಿಗೆ ‘ನನಗೆ ಕುಡಿಯೋಕೆ ನೀರು ಕೊಡಮ್ಮ’+ ಅಂದೆ. 46 ತಕ್ಷಣ ಅವಳು ಹೆಗಲ ಮೇಲಿಂದ ಕೊಡ ಇಳಿಸಿ ‘ಕೊಡ್ತೀನಿ.+ ನಿನ್ನ ಒಂಟೆಗೂ ನೀರು ಕೊಡ್ತೀನಿ’ ಅಂದಳು. ನಾನು ನೀರು ಕುಡಿದ ಮೇಲೆ ಅವಳು ಒಂಟೆಗೂ ನೀರು ತಂದ್ಕೊಟ್ಟಳು. 47 ಆಮೇಲೆ ಅವಳಿಗೆ ‘ನೀನು ಯಾರ ಮಗಳು?’ ಅಂತ ಕೇಳಿದೆ. ಅದಕ್ಕೆ ಅವಳು ‘ನಾನು ಬೆತೂವೇಲನ ಮಗಳು. ನನ್ನ ತಂದೆಯ ಅಪ್ಪಅಮ್ಮನ ಹೆಸರು ನಾಹೋರ ಮತ್ತು ಮಿಲ್ಕ’ ಅಂದಳು. ಆಗ ನಾನು ಅವಳಿಗೆ ಮೂಗುತಿ ಮತ್ತು ಬಳೆ ತೊಡಿಸಿದೆ.+ 48 ಆಮೇಲೆ ನಾನು ಮಂಡಿಯೂರಿ ನೆಲಕ್ಕೆ ಬಗ್ಗಿ ನನ್ನ ಧಣಿಯ ದೇವರಾದ ಯೆಹೋವನಿಗೆ ನಮಸ್ಕಾರ ಮಾಡ್ದೆ.+ ನನ್ನ ಧಣಿಯ ಮಗನಿಗೆ ಧಣಿಯ ಅಣ್ಣನ ಮೊಮ್ಮಗಳನ್ನೇ ಹೆಂಡತಿಯಾಗಿ ಆರಿಸ್ಕೊಳ್ಳೋ ತರ ನನ್ನನ್ನ ಸರಿ ದಾರಿಯಲ್ಲಿ ಕರ್ಕೊಂಡು ಬಂದಿದ್ದಕ್ಕೆ ಯೆಹೋವನಿಗೆ ಕೃತಜ್ಞತೆ ಹೇಳ್ದೆ. 49 ನನ್ನ ಧಣಿಗೆ ಶಾಶ್ವತ ಪ್ರೀತಿ ತೋರಿಸೋಕೆ, ನಂಬಿಗಸ್ತರಾಗಿ ಇರೋಕೆ ನಿಮಗೆ ಇಷ್ಟ ಇದ್ಯಾ ಅಂತ ಹೇಳಿ. ಇಷ್ಟ ಇಲ್ಲದಿದ್ರೂ ಹೇಳಿ. ಆಗ ನಾನು ಮುಂದೆ ಏನು ಮಾಡಬಹುದು ಅಂತ ಯೋಚಿಸ್ತೀನಿ.”+

50 ಅದಕ್ಕೆ ಲಾಬಾನ ಮತ್ತು ಬೆತೂವೇಲ ಅವನಿಗೆ “ಎಲ್ಲವನ್ನೂ ಯೆಹೋವನೇ ಮಾರ್ಗದರ್ಶಿಸಿದ್ದಾನೆ. ಹಾಗಿರುವಾಗ ಹೌದು, ಇಲ್ಲ ಅನ್ನೋಕೆ ನಾವ್ಯಾರು? 51 ರೆಬೆಕ್ಕನ ನಿನ್ನ ಕೈಗೆ ಒಪ್ಪಿಸ್ತೀವಿ. ಅವಳನ್ನ ನೀನು ಕರ್ಕೊಂಡು ಹೋಗಬಹುದು. ಯೆಹೋವನು ಹೇಳಿದ ತರಾನೇ ಅವಳು ನಿನ್ನ ಧಣಿಯ ಮಗನಿಗೆ ಹೆಂಡತಿಯಾಗಲಿ” ಅಂದ್ರು. 52 ಈ ಮಾತು ಕೇಳಿದ ತಕ್ಷಣ ಅಬ್ರಹಾಮನ ಸೇವಕ ನೆಲಕ್ಕೆ ಬಗ್ಗಿ ಯೆಹೋವನಿಗೆ ನಮಸ್ಕಾರ ಮಾಡಿದ. 53 ಆಮೇಲೆ ಆ ಸೇವಕ ಚಿನ್ನಬೆಳ್ಳಿಯ ಒಡವೆ, ಬಟ್ಟೆಗಳನ್ನ ತೆಗೆದು ರೆಬೆಕ್ಕಗೆ ಕೊಟ್ಟ. ಅವಳ ಅಣ್ಣ ಮತ್ತು ತಾಯಿಗೂ ಬೆಲೆಬಾಳೋ ಉಡುಗೊರೆಗಳನ್ನ ಕೊಟ್ಟ. 54 ಆಮೇಲೆ ಅವನು ಮತ್ತು ಅವನ ಜೊತೆ ಬಂದ ಗಂಡಸರು ಊಟಮಾಡಿ ಆ ರಾತ್ರಿ ಅಲ್ಲೇ ಉಳ್ಕೊಂಡ್ರು.

ಬೆಳಿಗ್ಗೆ ಎದ್ದಾಗ ಆ ಸೇವಕ ಅವರಿಗೆ “ನನ್ನ ಧಣಿ ಹತ್ರ ಕಳಿಸ್ಕೊಡಿ” ಅಂದ. 55 ಆಗ ರೆಬೆಕ್ಕಳ ಅಣ್ಣ ಮತ್ತು ತಾಯಿ “ಅವಳು ನಮ್ಮ ಜೊತೆ ಇನ್ನು ಹತ್ತು ದಿನ ಆದ್ರೂ ಇರಲಿ. ಆಮೇಲೆ ಅವಳನ್ನ ಕಳಿಸ್ತೀವಿ” ಅಂದ್ರು. 56 ಆದ್ರೆ ಅವನು “ಯೆಹೋವ ನನ್ನ ಕೆಲಸ ಯಶಸ್ವಿ ಆಗೋ ತರ ಮಾಡಿದ್ರಿಂದ ದಯವಿಟ್ಟು ನನ್ನನ್ನ ತಡಿಬೇಡಿ. ನನ್ನ ಧಣಿ ಹತ್ರ ಹೋಗಕ್ಕೆ ಬಿಡಿ” ಅಂದ. 57 ಅದಕ್ಕೆ ಅವರು “ರೆಬೆಕ್ಕನ ಕರೆದು ಅವಳ ಅಭಿಪ್ರಾಯ ಕೇಳೋಣ” ಅಂತ ಹೇಳಿ 58 ರೆಬೆಕ್ಕನ ಕರೆದು “ಇವರ ಜೊತೆ ಹೋಗೋಕೆ ನಿಂಗೆ ಇಷ್ಟ ಇದ್ಯಾ?” ಅಂತ ಕೇಳಿದ್ರು. ಅವಳು “ಇಷ್ಟ ಇದೆ, ಹೋಗ್ತೀನಿ” ಅಂದಳು.

59 ಹಾಗಾಗಿ ಅವರು ರೆಬೆಕ್ಕ,+ ಅವಳ ದಾದಿ,*+ ಅಬ್ರಹಾಮನ ಸೇವಕ, ಅವನ ಜೊತೆ ಇದ್ದ ಗಂಡಸರನ್ನ ಕಳಿಸ್ಕೊಟ್ರು. 60 ಅವರು ಅವಳನ್ನ ಆಶೀರ್ವದಿಸಿ “ತಂಗಿ, ನಿನ್ನ ವಂಶದವರು ಲಕ್ಷ ಲಕ್ಷ ಆಗಲಿ. ನಿನ್ನ ಸಂತತಿಯವರು ಶತ್ರುಗಳ ಪಟ್ಟಣಗಳನ್ನ ವಶ ಮಾಡ್ಕೊಳ್ಳಲಿ”+ ಅಂದ್ರು. 61 ಆಮೇಲೆ ರೆಬೆಕ್ಕ, ಅವಳ ಸೇವಕಿಯರು ಒಂಟೆ ಹತ್ತಿ ಆ ಮನುಷ್ಯನ ಜೊತೆ ಹೋದ್ರು. ಹೀಗೆ ಆ ಸೇವಕ ರೆಬೆಕ್ಕನ ಕರ್ಕೊಂಡು ಹೋದ.

62 ಇಸಾಕ ನೆಗೆಬ್‌+ ದೇಶದಲ್ಲಿ ವಾಸವಾಗಿದ್ದ. ಅವನೀಗ ಲಹೈರೋಯಿ ಬಾವಿ+ ಕಡೆಯಿಂದ ಬರ್ತಾ ಇದ್ದ. 63 ಸಂಜೆ ಇಸಾಕ ಧ್ಯಾನ ಮಾಡ್ತಾ+ ಬಯಲಲ್ಲಿ ನಡಿತಾ ಇದ್ದಾಗ ತಲೆಯೆತ್ತಿ ನೋಡಿದ. ಒಂಟೆಗಳು ಬರೋದು ಅವನಿಗೆ ಕಾಣಿಸ್ತು. 64 ರೆಬೆಕ್ಕ ತಲೆಯೆತ್ತಿ ಇಸಾಕನನ್ನ ನೋಡಿದಳು. ಕೂಡಲೇ ಅವಳು ಒಂಟೆಯಿಂದ ಇಳಿದು 65 ಆ ಸೇವಕನಿಗೆ “ನಮ್ಮ ಹತ್ರ ಬರ್ತಿರೋ ಆ ವ್ಯಕ್ತಿ ಯಾರು?” ಅಂತ ಕೇಳಿದಳು. ಅದಕ್ಕೆ ಅವನು “ನನ್ನ ಧಣಿ ಇಸಾಕ” ಅಂದ. ಆಗ ಅವಳು ಮುಸುಕು ಹಾಕೊಂಡಳು. 66 ಆ ಸೇವಕ ಆಗಿದ್ದೆಲ್ಲ ಇಸಾಕಗೆ ಹೇಳಿದ. 67 ಇಸಾಕ ತನ್ನ ತಾಯಿ ಸಾರಳ ಡೇರೆಗೆ ರೆಬೆಕ್ಕನ ಕರ್ಕೊಂಡು ಹೋದ.+ ಹೀಗೆ ಅವನು ರೆಬೆಕ್ಕನ ಹೆಂಡತಿಯಾಗಿ ಮಾಡ್ಕೊಂಡ. ಅವನು ಅವಳನ್ನ ತುಂಬ ಪ್ರೀತಿಸಿದ.+ ತಾಯಿ ಕಳ್ಕೊಂಡು ದುಃಖದಲ್ಲಿದ್ದ ಇಸಾಕಗೆ ಹೀಗೆ ಸಮಾಧಾನ ಸಿಕ್ತು.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ