ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 2 ಪೂರ್ವಕಾಲವೃತ್ತಾಂತ 31
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

2 ಪೂರ್ವಕಾಲವೃತ್ತಾಂತ ಮುಖ್ಯಾಂಶಗಳು

      • ಹಿಜ್ಕೀಯ ಧರ್ಮಭ್ರಷ್ಟತೆ ತೆಗೆದುಹಾಕಿದ (1)

      • ಪುರೋಹಿತರ, ಲೇವಿಯರ ಬೆಂಬಲ (2-21)

2 ಪೂರ್ವಕಾಲವೃತ್ತಾಂತ 31:1

ಪಾದಟಿಪ್ಪಣಿ

  • *

    ಪದವಿವರಣೆ ನೋಡಿ.

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 30:1, 18
  • +ವಿಮೋ 23:24
  • +ಧರ್ಮೋ 7:5; 2ಅರ 18:1, 4; 2ಪೂರ್ವ 14:2, 3; 34:1, 3
  • +ಧರ್ಮೋ 12:2
  • +2ಪೂರ್ವ 23:16, 17

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 5/2023, ಪು. 7

2 ಪೂರ್ವಕಾಲವೃತ್ತಾಂತ 31:2

ಪಾದಟಿಪ್ಪಣಿ

  • *

    ಅಕ್ಷ. “ಪಾಳೆಯಗಳು.”

ಮಾರ್ಜಿನಲ್ ರೆಫರೆನ್ಸ್

  • +1ಪೂರ್ವ 23:6; 24:1
  • +2ಪೂರ್ವ 8:14
  • +1ಪೂರ್ವ 23:13, 27-30

2 ಪೂರ್ವಕಾಲವೃತ್ತಾಂತ 31:3

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 30:24
  • +ವಿಮೋ 29:39
  • +ಅರ 28:9
  • +ಅರ 10:10
  • +ಧರ್ಮೋ 16:16

2 ಪೂರ್ವಕಾಲವೃತ್ತಾಂತ 31:4

ಪಾದಟಿಪ್ಪಣಿ

  • *

    ಅಥವಾ “ನಿಯಮ ಪುಸ್ತಕಕ್ಕೆ ತಮ್ಮನ್ನ ಸಂಪೂರ್ಣವಾಗಿ ಒಪ್ಪಿಸಿಕೊಳ್ಳೋಕೆ.”

ಮಾರ್ಜಿನಲ್ ರೆಫರೆನ್ಸ್

  • +ಅರ 18:21; ನೆಹೆ 10:38, 39

2 ಪೂರ್ವಕಾಲವೃತ್ತಾಂತ 31:5

ಮಾರ್ಜಿನಲ್ ರೆಫರೆನ್ಸ್

  • +ಅರ 18:12
  • +ವಿಮೋ 22:29; 23:19; ನೆಹೆ 10:37
  • +ಜ್ಞಾನೋ 3:9

2 ಪೂರ್ವಕಾಲವೃತ್ತಾಂತ 31:6

ಮಾರ್ಜಿನಲ್ ರೆಫರೆನ್ಸ್

  • +ಯಾಜ 27:30; ಧರ್ಮೋ 14:28

2 ಪೂರ್ವಕಾಲವೃತ್ತಾಂತ 31:7

ಮಾರ್ಜಿನಲ್ ರೆಫರೆನ್ಸ್

  • +ಯಾಜ 23:16
  • +ಯಾಜ 23:24

2 ಪೂರ್ವಕಾಲವೃತ್ತಾಂತ 31:10

ಮಾರ್ಜಿನಲ್ ರೆಫರೆನ್ಸ್

  • +ಅರ 18:8
  • +ಮಲಾ 3:10

2 ಪೂರ್ವಕಾಲವೃತ್ತಾಂತ 31:11

ಪಾದಟಿಪ್ಪಣಿ

  • *

    ಅಥವಾ “ಊಟದ ಕೋಣೆಗಳನ್ನ.”

ಮಾರ್ಜಿನಲ್ ರೆಫರೆನ್ಸ್

  • +ನೆಹೆ 10:38, 39; 12:44

2 ಪೂರ್ವಕಾಲವೃತ್ತಾಂತ 31:12

ಪಾದಟಿಪ್ಪಣಿ

  • *

    ಅಥವಾ “ದಶಮಾಂಶವನ್ನ.”

ಮಾರ್ಜಿನಲ್ ರೆಫರೆನ್ಸ್

  • +ಯಾಜ 27:30; ಧರ್ಮೋ 14:28

2 ಪೂರ್ವಕಾಲವೃತ್ತಾಂತ 31:14

ಮಾರ್ಜಿನಲ್ ರೆಫರೆನ್ಸ್

  • +1ಪೂರ್ವ 26:17, 19
  • +ಧರ್ಮೋ 12:5, 6; 16:10
  • +ಅರ 18:8
  • +ಯಾಜ 2:10; 7:1

2 ಪೂರ್ವಕಾಲವೃತ್ತಾಂತ 31:15

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 21:19
  • +1ಪೂರ್ವ 24:1

2 ಪೂರ್ವಕಾಲವೃತ್ತಾಂತ 31:17

ಮಾರ್ಜಿನಲ್ ರೆಫರೆನ್ಸ್

  • +1ಪೂರ್ವ 24:4
  • +ಅರ 4:2, 3; 8:24; 1ಪೂರ್ವ 23:24
  • +1ಪೂರ್ವ 23:6

2 ಪೂರ್ವಕಾಲವೃತ್ತಾಂತ 31:19

ಮಾರ್ಜಿನಲ್ ರೆಫರೆನ್ಸ್

  • +ಯಾಜ 25:33, 34; ಅರ 35:2; ಯೆಹೋ 21:13

2 ಪೂರ್ವಕಾಲವೃತ್ತಾಂತ 31:21

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 29:35

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

2 ಪೂರ್ವ. 31:12ಪೂರ್ವ 30:1, 18
2 ಪೂರ್ವ. 31:1ವಿಮೋ 23:24
2 ಪೂರ್ವ. 31:1ಧರ್ಮೋ 7:5; 2ಅರ 18:1, 4; 2ಪೂರ್ವ 14:2, 3; 34:1, 3
2 ಪೂರ್ವ. 31:1ಧರ್ಮೋ 12:2
2 ಪೂರ್ವ. 31:12ಪೂರ್ವ 23:16, 17
2 ಪೂರ್ವ. 31:21ಪೂರ್ವ 23:6; 24:1
2 ಪೂರ್ವ. 31:22ಪೂರ್ವ 8:14
2 ಪೂರ್ವ. 31:21ಪೂರ್ವ 23:13, 27-30
2 ಪೂರ್ವ. 31:32ಪೂರ್ವ 30:24
2 ಪೂರ್ವ. 31:3ವಿಮೋ 29:39
2 ಪೂರ್ವ. 31:3ಅರ 28:9
2 ಪೂರ್ವ. 31:3ಅರ 10:10
2 ಪೂರ್ವ. 31:3ಧರ್ಮೋ 16:16
2 ಪೂರ್ವ. 31:4ಅರ 18:21; ನೆಹೆ 10:38, 39
2 ಪೂರ್ವ. 31:5ಅರ 18:12
2 ಪೂರ್ವ. 31:5ವಿಮೋ 22:29; 23:19; ನೆಹೆ 10:37
2 ಪೂರ್ವ. 31:5ಜ್ಞಾನೋ 3:9
2 ಪೂರ್ವ. 31:6ಯಾಜ 27:30; ಧರ್ಮೋ 14:28
2 ಪೂರ್ವ. 31:7ಯಾಜ 23:16
2 ಪೂರ್ವ. 31:7ಯಾಜ 23:24
2 ಪೂರ್ವ. 31:10ಅರ 18:8
2 ಪೂರ್ವ. 31:10ಮಲಾ 3:10
2 ಪೂರ್ವ. 31:11ನೆಹೆ 10:38, 39; 12:44
2 ಪೂರ್ವ. 31:12ಯಾಜ 27:30; ಧರ್ಮೋ 14:28
2 ಪೂರ್ವ. 31:141ಪೂರ್ವ 26:17, 19
2 ಪೂರ್ವ. 31:14ಧರ್ಮೋ 12:5, 6; 16:10
2 ಪೂರ್ವ. 31:14ಅರ 18:8
2 ಪೂರ್ವ. 31:14ಯಾಜ 2:10; 7:1
2 ಪೂರ್ವ. 31:15ಯೆಹೋ 21:19
2 ಪೂರ್ವ. 31:151ಪೂರ್ವ 24:1
2 ಪೂರ್ವ. 31:171ಪೂರ್ವ 24:4
2 ಪೂರ್ವ. 31:17ಅರ 4:2, 3; 8:24; 1ಪೂರ್ವ 23:24
2 ಪೂರ್ವ. 31:171ಪೂರ್ವ 23:6
2 ಪೂರ್ವ. 31:19ಯಾಜ 25:33, 34; ಅರ 35:2; ಯೆಹೋ 21:13
2 ಪೂರ್ವ. 31:212ಪೂರ್ವ 29:35
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
2 ಪೂರ್ವಕಾಲವೃತ್ತಾಂತ 31:1-21

ಎರಡನೇ ಪೂರ್ವಕಾಲವೃತ್ತಾಂತ

31 ಅವರು ಇದನ್ನೆಲ್ಲ ಮಾಡಿ ಮುಗಿಸಿದ ತಕ್ಷಣ ಅಲ್ಲಿದ್ದ ಇಸ್ರಾಯೇಲ್ಯರೆಲ್ಲ ಯೆಹೂದದ ಪಟ್ಟಣಗಳಿಗೆ ಹೋದ್ರು. ಅವರು ಯೆಹೂದ, ಬೆನ್ಯಾಮೀನ್‌, ಎಫ್ರಾಯೀಮ್‌ ಮತ್ತು ಮನಸ್ಸೆ ಪ್ರಾಂತ್ಯದಲ್ಲೆಲ್ಲ+ ಇದ್ದ ವಿಗ್ರಹಸ್ತಂಭಗಳನ್ನ+ ಚೂರುಚೂರು ಮಾಡಿದ್ರು. ಪೂಜಾಕಂಬಗಳನ್ನ*+ ಕಡಿದುಹಾಕಿದ್ರು. ದೇವಸ್ಥಾನಗಳನ್ನ+ ಮತ್ತು ಯಜ್ಞವೇದಿಗಳನ್ನ+ ಕೆಡವಿಹಾಕಿದ್ರು. ಅವರು ಅವೆಲ್ಲವನ್ನ ಸಂಪೂರ್ಣವಾಗಿ ನಾಶಮಾಡೋ ತನಕ ಹೀಗೆ ಮಾಡ್ತಾ ಹೋದ್ರು. ಆಮೇಲೆ ಇಸ್ರಾಯೇಲ್ಯರೆಲ್ಲ ಅವರವರ ಆಸ್ತಿಯಿದ್ದ ಪಟ್ಟಣಗಳಿಗೆ ವಾಪಸ್‌ ಹೋದ್ರು.

2 ಹಿಜ್ಕೀಯ ಪುರೋಹಿತರನ್ನ ಮತ್ತು ಲೇವಿಯರನ್ನ ಅವ್ರವ್ರ ದಳಗಳ+ ಪ್ರಕಾರ ಸೇವೆಗಾಗಿ ನೇಮಿಸಿದ. ಪ್ರತಿಯೊಬ್ಬ ಪುರೋಹಿತನಿಗೂ ಲೇವಿಗೂ ನೇಮಿಸಲಾಗಿದ್ದ ಕೆಲಸವನ್ನ ಅವ್ರಿಗೆ ಒಪ್ಪಿಸಲಾಯ್ತು.+ ಅವ್ರ ಕೆಲಸ ಏನಾಗಿತ್ತಂದ್ರೆ, ಸರ್ವಾಂಗಹೋಮ ಬಲಿಗಳನ್ನ, ಸಮಾಧಾನ ಬಲಿಗಳನ್ನ ಅರ್ಪಿಸೋದು, ಆಲಯದಲ್ಲಿ ಸೇವೆಮಾಡೋದು ಮತ್ತು ಯೆಹೋವನ ಆಲಯದ ಅಂಗಳಗಳ* ಬಾಗಿಲುಗಳ ಹತ್ರ ದೇವರಿಗೆ ಕೃತಜ್ಞತೆಗಳನ್ನ ಹೇಳೋದು ಮತ್ತು ಆತನಿಗೆ ಸ್ತುತಿ ಸಲ್ಲಿಸೋದು.+ 3 ರಾಜ ತನ್ನ ಆಸ್ತಿಯಲ್ಲಿ ಒಂದು ಭಾಗವನ್ನ ಯೆಹೋವನ ನಿಯಮ ಪುಸ್ತಕದಲ್ಲಿ ಬರೆದಿದ್ದ ಪ್ರಕಾರ ಸರ್ವಾಂಗಹೋಮ ಬಲಿಗಳನ್ನ ಅರ್ಪಿಸೋಕೆ ಕೊಟ್ಟ.+ ಅದ್ರಲ್ಲಿ ಬೆಳಿಗ್ಗೆ ಮತ್ತು ಸಾಯಂಕಾಲ ಅರ್ಪಿಸ್ತಿದ್ದ ಬಲಿಗಳು,+ ಸಬ್ಬತ್‌ಗಳಲ್ಲಿ,+ ಅಮಾವಾಸ್ಯೆ ದಿನಗಳಲ್ಲಿ+ ಮತ್ತು ಹಬ್ಬಗಳಲ್ಲಿ+ ಅರ್ಪಿಸ್ತಿದ್ದ ಸರ್ವಾಂಗಹೋಮ ಬಲಿಗಳು ಸೇರಿದ್ವು.

4 ಅಷ್ಟೇ ಅಲ್ಲ ಪುರೋಹಿತರು ಮತ್ತು ಲೇವಿಯರು ಯೆಹೋವನ ನಿಯಮ ಪುಸ್ತಕವನ್ನ ಚಾಚೂತಪ್ಪದೆ ಪಾಲಿಸೋಕೆ* ಆಗೋ ತರ ಯೆರೂಸಲೇಮಲ್ಲಿ ವಾಸವಿದ್ದ ಜನ ಅವ್ರಿಗೆ ಕೊಡಬೇಕಾಗಿದ್ದ ಪಾಲನ್ನ ಕೊಡಬೇಕಂತ+ ರಾಜ ಆಜ್ಞಾಪಿಸಿದ. 5 ಈ ಆಜ್ಞೆ ಜಾರಿಗೆ ಬಂದ ತಕ್ಷಣ ಇಸ್ರಾಯೇಲ್ಯರು ತಮ್ಮಲ್ಲಿ ಇದ್ದ ಎಲ್ಲದರ ಪ್ರಥಮಫಲವನ್ನ ಭಾರಿ ಮೊತ್ತದಲ್ಲಿ ತಂದುಕೊಟ್ರು. ಅದ್ರಲ್ಲಿ ಧಾನ್ಯ, ಹೊಸ ದ್ರಾಕ್ಷಾಮದ್ಯ, ಎಣ್ಣೆ,+ ಜೇನುತುಪ್ಪ ಮತ್ತು ಹೊಲದಲ್ಲಿ ಬೆಳೆದ ಎಲ್ಲಾ+ ಸೇರಿದ್ವು. ಎಲ್ಲದರ ಹತ್ತನೇ ಒಂದು ಭಾಗವನ್ನ ಧಾರಾಳವಾಗಿ ಕೊಟ್ರು.+ 6 ಯೆಹೂದದ ಪಟ್ಟಣಗಳಲ್ಲಿ ವಾಸಿಸ್ತಿದ್ದ ಇಸ್ರಾಯೇಲ್ಯರು ಮತ್ತು ಯೆಹೂದದವರು ಸಹ ಎತ್ತುದನಗಳಲ್ಲಿ, ಕುರಿಗಳಲ್ಲಿ ಹತ್ತನೇ ಒಂದು ಭಾಗವನ್ನ ಮತ್ತು ಪವಿತ್ರ ವಸ್ತುಗಳಲ್ಲಿ ಹತ್ತನೇ ಒಂದು ಭಾಗವನ್ನ+ ತಮ್ಮ ದೇವರಾದ ಯೆಹೋವನಿಗೆ ಮೀಸಲಾಗಿಟ್ರು. ಹೀಗೆ ಅವರು ತುಂಬ ಉಡುಗೊರೆಗಳನ್ನ ತಂದು ಕೊಟ್ರು. 7 ಜನ ಉಡುಗೊರೆಗಳನ್ನ ರಾಶಿರಾಶಿಯಾಗಿ ತಂದು ಹಾಕೋಕೆ ಮೂರನೇ ತಿಂಗಳಲ್ಲಿ+ ಶುರು ಮಾಡಿ ಏಳನೇ ತಿಂಗಳಲ್ಲಿ+ ಮುಗಿಸಿದ್ರು. 8 ಹಿಜ್ಕೀಯ ಮತ್ತು ಅಧಿಕಾರಿಗಳು ಬಂದು ಜನ ಭಾರಿ ಮೊತ್ತದಲ್ಲಿ ಕೊಟ್ಟ ಆ ಉಡುಗೊರೆಗಳನ್ನ ನೋಡಿ ಯೆಹೋವನನ್ನ ಹೊಗಳಿದ್ರು ಮತ್ತು ಆತನ ಪ್ರಜೆಗಳಾದ ಇಸ್ರಾಯೇಲ್ಯರನ್ನ ಆಶೀರ್ವದಿಸಿದ್ರು.

9 ಜನ ತಂದ ಉಡುಗೊರೆಗಳ ಬಗ್ಗೆ ಹಿಜ್ಕೀಯ ಪುರೋಹಿತರ ಮತ್ತು ಲೇವಿಯರ ಹತ್ರ ಕೇಳಿದಾಗ 10 ಚಾದೋಕನ ಮನೆತನಕ್ಕೆ ಸೇರಿದ ಮುಖ್ಯ ಪುರೋಹಿತನಾದ ಅಜರ್ಯ ರಾಜನಿಗೆ “ಯೆಹೋವನ ಆಲಯಕ್ಕೆ ಜನ ಕಾಣಿಕೆಗಳನ್ನ ತರೋಕೆ ಶುರು ಮಾಡಿದ+ ದಿನದಿಂದ ಜನ್ರಿಗೆ ತಿಂದು ತೃಪ್ತಿ ಆಗುವಷ್ಟು ಆಹಾರ ಇದೆ. ಅವರು ಊಟಮಾಡಿದ ಮೇಲೂ ತುಂಬ ಆಹಾರ ಉಳಿಯುತ್ತೆ. ಯೆಹೋವ ತನ್ನ ಜನ್ರನ್ನ ಆಶೀರ್ವಾದ ಮಾಡಿದ್ದಕ್ಕೇ ಅಷ್ಟೊಂದು ಆಹಾರ ಉಳಿತಿದೆ”+ ಅಂದ.

11 ಅದಕ್ಕೆ ಹಿಜ್ಕೀಯ ಅವ್ರಿಗೆ ಯೆಹೋವನ ಆಲಯದಲ್ಲಿ ಕಣಜಗಳನ್ನ*+ ಸಿದ್ಧಮಾಡೋಕೆ ಹೇಳಿದ. ಹಾಗಾಗಿ ಅವರು ಅವುಗಳನ್ನ ಸಿದ್ಧಮಾಡಿದ್ರು. 12 ಜನ ಕಾಣಿಕೆಗಳನ್ನ, ಹತ್ತನೇ ಒಂದು ಭಾಗವನ್ನ*+ ಮತ್ತು ಪವಿತ್ರ ವಸ್ತುಗಳನ್ನ ನಂಬಿಗಸ್ತಿಕೆಯಿಂದ ತರ್ತಾ ಇದ್ರು. ಲೇವಿಯನಾದ ಕೋನನ್ಯ ಈ ಎಲ್ಲದರ ಮೇಲೆ ಮೇಲ್ವಿಚಾರಕನಾದ. ಅವನ ನಂತ್ರದ ಸ್ಥಾನಕ್ಕೆ ಅವನ ಸಹೋದರ ಶಿಮ್ಮಿಯನ್ನ ನೇಮಿಸಲಾಯ್ತು. 13 ರಾಜ ಹಿಜ್ಕೀಯನ ಆಜ್ಞೆ ಮೇರೆಗೆ ಯೆಹೀಯೇಲ್‌, ಅಜಜ್ಯ, ನಹತ್‌, ಅಸಾಹೇಲ್‌, ಯೆರೀಮೋತ್‌, ಯೋಜಾಬಾದ, ಎಲೀಯೇಲ್‌, ಇಸ್ಮಕ್ಯ, ಮಹತ್‌, ಬೆನಾಯ ಅನ್ನೋರನ್ನ ಕೋನನ್ಯನ ಮತ್ತು ಅವನ ಸಹೋದರ ಶಿಮ್ಮಿಯ ಸಹಾಯಕ ಅಧಿಕಾರಿಗಳಾಗಿ ನೇಮಿಸಲಾಯ್ತು. ಅಜರ್ಯನಿಗೆ ಸತ್ಯ ದೇವರ ಆಲಯದ ಮೇಲ್ವಿಚಾರಣೆನ ಒಪ್ಪಿಸಲಾಯ್ತು. 14 ಪೂರ್ವದ ಬಾಗಿಲು ಕಾಯುವವನೂ+ ಲೇವಿಯನಾದ ಇಮ್ನಾನ ಮಗನೂ ಆದ ಕೋರೆ ಸತ್ಯ ದೇವರಿಗೆ ತರುತ್ತಿದ್ದ ಸ್ವಯಂಪ್ರೇರಿತ ಕಾಣಿಕೆಗಳ+ ಮೇಲ್ವಿಚಾರಕನಾಗಿದ್ದ. ಯೆಹೋವನಿಗೆ ತರುತ್ತಿದ್ದ ಕಾಣಿಕೆಗಳನ್ನ+ ಮತ್ತು ಅತಿ ಪವಿತ್ರ ವಸ್ತುಗಳನ್ನ+ ಹಂಚಿಕೊಡೋ ಜವಾಬ್ದಾರಿ ಅವನಿಗಿತ್ತು. 15 ಇವನ ನಿರ್ದೇಶನದ ಅಡಿಯಲ್ಲಿ ಏದೆನ್‌, ಮಿನ್ಯಾಮೀನ್‌, ಯೆಷೂವ, ಶೆಮಾಯ, ಅಮರ್ಯ ಮತ್ತು ಶೆಕನ್ಯ ಅನ್ನೋ ಲೇವಿಯರಿದ್ರು. ಇವರು ಪುರೋಹಿತರ ಪಟ್ಟಣಗಳಲ್ಲಿ+ ಕೆಲಸಮಾಡ್ತಿದ್ರು. ಇವರು ಬೇರೆಬೇರೆ ದಳಗಳಲ್ಲಿ+ ಕೆಲಸಮಾಡ್ತಿದ್ದ ತಮ್ಮ ಸಹೋದರರಿಗೆ ವಸ್ತುಗಳನ್ನ ಸಮಾನವಾಗಿ ದೊಡ್ಡವರು ಚಿಕ್ಕವರು ಅನ್ನೋ ಭೇದಭಾವ ಮಾಡದೆ ಹಂಚಿಕೊಡ್ತಿದ್ರು. ಇವ್ರ ಮೇಲೆ ನಂಬಿಕೆಯಿಟ್ಟು ಈ ಕೆಲಸ ಒಪ್ಪಿಸಿದ್ರು. 16 ಇವ್ರಿಗೆ ಮಾತ್ರವಲ್ಲ ವಂಶಾವಳಿ ಪಟ್ಟಿಯಲ್ಲಿ ದಾಖಲಿಸಲಾಗಿದ್ದ ಮೂರು ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಎಲ್ಲ ವಯಸ್ಸಿನ ಪುರುಷರಿಗೂ ಅದನ್ನ ಹಂಚಿಕೊಡ್ತಿದ್ರು. ಅವರು ತಮ್ಮತಮ್ಮ ದಳಗಳ ಪ್ರಕಾರ ಯೆಹೋವನ ಆಲಯದಲ್ಲಿ ಪ್ರತಿದಿನ ಸೇವೆಮಾಡ್ತಿದ್ರು.

17 ಪುರೋಹಿತರ ಹೆಸ್ರುಗಳನ್ನ ಅವರವರ ತಂದೆಯ ಮನೆತನದ ಪ್ರಕಾರ+ ವಂಶಾವಳಿ ಪಟ್ಟಿಯಲ್ಲಿ ದಾಖಲಿಸಲಾಗಿತ್ತು. 20 ಮತ್ತು ಅದಕ್ಕಿಂತ ಜಾಸ್ತಿ ವಯಸ್ಸಿನ ಲೇವಿಯರ ಹೆಸ್ರುಗಳನ್ನೂ+ ಅವರವರ ತಂದೆಯ ಮನೆತನದ ಪ್ರಕಾರ ಮತ್ತು ಅವರು ಸೇವೆಮಾಡ್ತಿದ್ದ ದಳಗಳ ಪ್ರಕಾರ+ ವಂಶಾವಳಿ ಪಟ್ಟಿಯಲ್ಲಿ ದಾಖಲಿಸಲಾಗಿತ್ತು. 18 ಈ ವಂಶಾವಳಿ ಪಟ್ಟಿಯಲ್ಲಿ ಲೇವಿಯರ ಮಕ್ಕಳ, ಅವ್ರ ಹೆಂಡತಿಯರ ಹೀಗೆ ಅವ್ರ ಎಲ್ಲ ಮನೆತನಗಳ ಹೆಸ್ರುಗಳನ್ನೂ ದಾಖಲಿಸಲಾಯ್ತು. ಯಾಕಂದ್ರೆ ಲೇವಿಯರು ನಂಬಿಗಸ್ತರಾಗಿದ್ದು ಪವಿತ್ರ ಸೇವೆಗೇ ಮೊದಲ ಸ್ಥಾನ ಕೊಡ್ತಿದ್ರು. 19 ವಂಶಾವಳಿ ಪಟ್ಟಿಯಲ್ಲಿ ಆರೋನನ ವಂಶದ ಪುರೋಹಿತರ ಹೆಸ್ರುಗಳನ್ನೂ ದಾಖಲಿಸಲಾಯ್ತು. ಇವರು ತಮ್ಮ ಪಟ್ಟಣಗಳ ಸುತ್ತಲೂ ಇದ್ದ ಹೊಲಗಳಲ್ಲಿ ವಾಸಿಸ್ತಿದ್ರು.+ ಆ ಹೊಲಗಳಲ್ಲಿ ಹುಲ್ಲುಗಾವಲೂ ಇತ್ತು. ಪುರೋಹಿತರ ಮನೆತನಗಳ ಪ್ರತಿ ಪುರುಷನಿಗೂ, ಜೊತೆಗೆ ಲೇವಿಯರ ವಂಶಾವಳಿಯ ಪಟ್ಟಿಯಲ್ಲಿ ದಾಖಲಾಗಿದ್ದ ಎಲ್ಲ ಜನ್ರಿಗೂ ಕಾಣಿಕೆಯಾಗಿ ಬಂದಿದ್ದ ವಸ್ತುಗಳನ್ನ ಹಂಚೋಕೆ ಎಲ್ಲ ಪಟ್ಟಣಗಳಿಂದ ಕೆಲವು ಪುರುಷರ ಹೆಸ್ರುಗಳನ್ನ ಆರಿಸಿಕೊಳ್ಳಲಾಗಿತ್ತು.

20 ಇದೇ ವ್ಯವಸ್ಥೆಯನ್ನ ಹಿಜ್ಕೀಯ ಯೆಹೂದದಲ್ಲೆಲ್ಲ ಮಾಡಿದ. ಅವನು ತನ್ನ ದೇವರಾದ ಯೆಹೋವನಿಗೆ ಇಷ್ಟ ಆಗೋದನ್ನೇ ಮತ್ತು ಸರಿಯಾಗಿದ್ದನ್ನೇ ಮಾಡಿದ. ಅವನು ದೇವರಿಗೆ ನಂಬಿಗಸ್ತನಾಗಿದ್ದ. 21 ದೇವರನ್ನ ಆರಾಧಿಸಲಿಕ್ಕಾಗಿ ಹಿಜ್ಕೀಯ ಮಾಡಿದ ಎಲ್ಲ ಕೆಲಸಗಳನ್ನ ಅಂದ್ರೆ ಸತ್ಯ ದೇವರ ಆಲಯದ ಸೇವೆಗೆ ಸಂಬಂಧಿಸಿದ ಕೆಲಸಗಳನ್ನಾಗಲಿ+ ಅಥವಾ ದೇವರ ನಿಯಮ ಪುಸ್ತಕದ ವಿಷ್ಯಕ್ಕೆ, ಆಜ್ಞೆಯ ವಿಷ್ಯಕ್ಕೆ ಸಂಬಂಧಿಸಿದ ಕೆಲಸಗಳನ್ನಾಗಲಿ ಎಲ್ಲವನ್ನ ತನ್ನ ಪೂರ್ಣ ಹೃದಯದಿಂದ ಮಾಡಿದ ಮತ್ತು ಯಶಸ್ವಿಯಾದ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ