ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 1 ಸಮುವೇಲ 14
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

1 ಸಮುವೇಲ ಮುಖ್ಯಾಂಶಗಳು

      • ಮಿಕ್ಮಾಷಿನಲ್ಲಿ ಯೋನಾತಾನನ ಜಯ (1-14)

      • ಇಸ್ರಾಯೇಲ್ಯರ ಶತ್ರುಗಳಿಗೆ ದೇವರ ಕೈಯಿಂದ ಸೋಲು (15-23)

      • ಸೌಲ ಅವಸರದಲ್ಲಿ ಮಾಡಿದ ಆಣೆ (24-46)

        • ಜನ ರಕ್ತದ ಜೊತೆ ಮಾಂಸ ತಿಂದ್ರು (32-34)

      • ಸೌಲನ ಯುದ್ಧಗಳು ಮತ್ತು ಅವನ ಕುಟುಂಬ (47-52)

1 ಸಮುವೇಲ 14:1

ಮಾರ್ಜಿನಲ್ ರೆಫರೆನ್ಸ್

  • +1ಸಮು 14:49; 18:1; 2ಸಮು 1:4

1 ಸಮುವೇಲ 14:2

ಮಾರ್ಜಿನಲ್ ರೆಫರೆನ್ಸ್

  • +1ಸಮು 10:26
  • +1ಸಮು 13:15

1 ಸಮುವೇಲ 14:3

ಮಾರ್ಜಿನಲ್ ರೆಫರೆನ್ಸ್

  • +ವಿಮೋ 29:5; ಅರ 27:21
  • +ಯೆಹೋ 18:1; 1ಸಮು 1:3
  • +1ಸಮು 4:21
  • +1ಸಮು 22:9
  • +1ಸಮು 2:12; 4:17
  • +1ಸಮು 1:9

1 ಸಮುವೇಲ 14:5

ಮಾರ್ಜಿನಲ್ ರೆಫರೆನ್ಸ್

  • +1ಸಮು 13:2, 3

1 ಸಮುವೇಲ 14:6

ಮಾರ್ಜಿನಲ್ ರೆಫರೆನ್ಸ್

  • +ಆದಿ 17:9, 10; ನ್ಯಾಯ 14:3; 15:18; 1ಸಮು 17:36; 1ಪೂರ್ವ 10:4
  • +ನ್ಯಾಯ 7:2; 2ಅರ 6:15, 16; 2ಪೂರ್ವ 14:11

1 ಸಮುವೇಲ 14:10

ಮಾರ್ಜಿನಲ್ ರೆಫರೆನ್ಸ್

  • +ಆದಿ 24:14; ನ್ಯಾಯ 7:11; 1ಸಮು 10:7

1 ಸಮುವೇಲ 14:11

ಮಾರ್ಜಿನಲ್ ರೆಫರೆನ್ಸ್

  • +1ಸಮು 13:6; 14:22

1 ಸಮುವೇಲ 14:12

ಮಾರ್ಜಿನಲ್ ರೆಫರೆನ್ಸ್

  • +1ಸಮು 14:10
  • +1ಸಮು 14:6; 2ಸಮು 5:23, 24; 2ಅರ 6:15, 16

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಅವರ ನಂಬಿಕೆಯನ್ನು ಅನುಕರಿಸಿ,

1 ಸಮುವೇಲ 14:13

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಅವರ ನಂಬಿಕೆಯನ್ನು ಅನುಕರಿಸಿ,

1 ಸಮುವೇಲ 14:14

ಪಾದಟಿಪ್ಪಣಿ

  • *

    ಅಕ್ಷ. “ಒಂದು ಜೋಡಿ ಎತ್ತು ಒಂದು ದಿನಕ್ಕೆ ಉಳುವಷ್ಟು ಜಮೀನು.”

1 ಸಮುವೇಲ 14:15

ಮಾರ್ಜಿನಲ್ ರೆಫರೆನ್ಸ್

  • +1ಸಮು 13:17

1 ಸಮುವೇಲ 14:16

ಮಾರ್ಜಿನಲ್ ರೆಫರೆನ್ಸ್

  • +1ಸಮು 14:20
  • +1ಸಮು 10:26; 14:2

1 ಸಮುವೇಲ 14:18

ಪಾದಟಿಪ್ಪಣಿ

  • *

    ಅಕ್ಷ. “ಆ ದಿನ.”

ಮಾರ್ಜಿನಲ್ ರೆಫರೆನ್ಸ್

  • +1ಸಮು 14:3

1 ಸಮುವೇಲ 14:19

ಪಾದಟಿಪ್ಪಣಿ

  • *

    ಅಕ್ಷ. “ನಿನ್ನ ಕೈಯನ್ನ ವಾಪಸ್‌ ತಗೊ.”

1 ಸಮುವೇಲ 14:22

ಮಾರ್ಜಿನಲ್ ರೆಫರೆನ್ಸ್

  • +1ಸಮು 13:6

1 ಸಮುವೇಲ 14:23

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 33:29; ನ್ಯಾಯ 2:18
  • +1ಸಮು 13:5

1 ಸಮುವೇಲ 14:24

ಮಾರ್ಜಿನಲ್ ರೆಫರೆನ್ಸ್

  • +ಯಾಜ 5:4; ಅರ 30:2; ಧರ್ಮೋ 23:21

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಅವರ ನಂಬಿಕೆಯನ್ನು ಅನುಕರಿಸಿ,

1 ಸಮುವೇಲ 14:27

ಮಾರ್ಜಿನಲ್ ರೆಫರೆನ್ಸ್

  • +1ಸಮು 14:17

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/15/2005, ಪು. 22

1 ಸಮುವೇಲ 14:28

ಮಾರ್ಜಿನಲ್ ರೆಫರೆನ್ಸ್

  • +1ಸಮು 14:24

1 ಸಮುವೇಲ 14:30

ಮಾರ್ಜಿನಲ್ ರೆಫರೆನ್ಸ್

  • +1ಸಮು 14:26

1 ಸಮುವೇಲ 14:31

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 10:12

1 ಸಮುವೇಲ 14:32

ಮಾರ್ಜಿನಲ್ ರೆಫರೆನ್ಸ್

  • +ಆದಿ 9:4; ಯಾಜ 3:17; 17:10; ಧರ್ಮೋ 12:16; ಅಕಾ 15:29

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    4/15/1994, ಪು. 31

1 ಸಮುವೇಲ 14:33

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 12:23

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    4/15/1994, ಪು. 31

1 ಸಮುವೇಲ 14:34

ಮಾರ್ಜಿನಲ್ ರೆಫರೆನ್ಸ್

  • +1ಸಮು 14:32

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    4/15/1994, ಪು. 31

1 ಸಮುವೇಲ 14:35

ಮಾರ್ಜಿನಲ್ ರೆಫರೆನ್ಸ್

  • +1ಸಮು 7:15, 17

1 ಸಮುವೇಲ 14:36

ಮಾರ್ಜಿನಲ್ ರೆಫರೆನ್ಸ್

  • +ಅರ 27:21; 1ಸಮು 30:7, 8

1 ಸಮುವೇಲ 14:37

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 1:1; 1ಸಮು 30:8; 2ಸಮು 5:19

1 ಸಮುವೇಲ 14:41

ಮಾರ್ಜಿನಲ್ ರೆಫರೆನ್ಸ್

  • +ವಿಮೋ 28:30; ಧರ್ಮೋ 33:8; ಎಜ್ರ 2:62, 63

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 9/2020, ಪು. 4-5

1 ಸಮುವೇಲ 14:42

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 16:33

1 ಸಮುವೇಲ 14:43

ಮಾರ್ಜಿನಲ್ ರೆಫರೆನ್ಸ್

  • +1ಸಮು 14:27

1 ಸಮುವೇಲ 14:44

ಮಾರ್ಜಿನಲ್ ರೆಫರೆನ್ಸ್

  • +1ಸಮು 14:24

1 ಸಮುವೇಲ 14:45

ಪಾದಟಿಪ್ಪಣಿ

  • *

    ಅಥವಾ “ಬಿಡುಗಡೆಯನ್ನ.”

ಮಾರ್ಜಿನಲ್ ರೆಫರೆನ್ಸ್

  • +1ಸಮು 14:14
  • +1ಸಮು 14:6

1 ಸಮುವೇಲ 14:47

ಮಾರ್ಜಿನಲ್ ರೆಫರೆನ್ಸ್

  • +1ಸಮು 12:9
  • +1ಸಮು 11:11
  • +ಆದಿ 36:8
  • +2ಸಮು 10:6
  • +1ಸಮು 9:16, 17

1 ಸಮುವೇಲ 14:48

ಮಾರ್ಜಿನಲ್ ರೆಫರೆನ್ಸ್

  • +ವಿಮೋ 17:14; ಧರ್ಮೋ 25:19; 1ಸಮು 15:3

1 ಸಮುವೇಲ 14:49

ಮಾರ್ಜಿನಲ್ ರೆಫರೆನ್ಸ್

  • +1ಸಮು 31:2; 1ಪೂರ್ವ 8:33; 9:39
  • +1ಸಮು 18:17
  • +1ಸಮು 18:27; 25:44; 2ಸಮು 3:13; 6:20

1 ಸಮುವೇಲ 14:50

ಮಾರ್ಜಿನಲ್ ರೆಫರೆನ್ಸ್

  • +1ಸಮು 17:55; 2ಸಮು 2:8; 3:27

1 ಸಮುವೇಲ 14:51

ಮಾರ್ಜಿನಲ್ ರೆಫರೆನ್ಸ್

  • +1ಸಮು 9:1
  • +1ಅರ 2:5

1 ಸಮುವೇಲ 14:52

ಮಾರ್ಜಿನಲ್ ರೆಫರೆನ್ಸ್

  • +ಆದಿ 49:27; 1ಸಮು 9:16, 17
  • +1ಸಮು 8:11; 10:26

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

1 ಸಮು. 14:11ಸಮು 14:49; 18:1; 2ಸಮು 1:4
1 ಸಮು. 14:21ಸಮು 10:26
1 ಸಮು. 14:21ಸಮು 13:15
1 ಸಮು. 14:3ವಿಮೋ 29:5; ಅರ 27:21
1 ಸಮು. 14:3ಯೆಹೋ 18:1; 1ಸಮು 1:3
1 ಸಮು. 14:31ಸಮು 4:21
1 ಸಮು. 14:31ಸಮು 22:9
1 ಸಮು. 14:31ಸಮು 2:12; 4:17
1 ಸಮು. 14:31ಸಮು 1:9
1 ಸಮು. 14:51ಸಮು 13:2, 3
1 ಸಮು. 14:6ಆದಿ 17:9, 10; ನ್ಯಾಯ 14:3; 15:18; 1ಸಮು 17:36; 1ಪೂರ್ವ 10:4
1 ಸಮು. 14:6ನ್ಯಾಯ 7:2; 2ಅರ 6:15, 16; 2ಪೂರ್ವ 14:11
1 ಸಮು. 14:10ಆದಿ 24:14; ನ್ಯಾಯ 7:11; 1ಸಮು 10:7
1 ಸಮು. 14:111ಸಮು 13:6; 14:22
1 ಸಮು. 14:121ಸಮು 14:10
1 ಸಮು. 14:121ಸಮು 14:6; 2ಸಮು 5:23, 24; 2ಅರ 6:15, 16
1 ಸಮು. 14:151ಸಮು 13:17
1 ಸಮು. 14:161ಸಮು 14:20
1 ಸಮು. 14:161ಸಮು 10:26; 14:2
1 ಸಮು. 14:181ಸಮು 14:3
1 ಸಮು. 14:221ಸಮು 13:6
1 ಸಮು. 14:23ಧರ್ಮೋ 33:29; ನ್ಯಾಯ 2:18
1 ಸಮು. 14:231ಸಮು 13:5
1 ಸಮು. 14:24ಯಾಜ 5:4; ಅರ 30:2; ಧರ್ಮೋ 23:21
1 ಸಮು. 14:271ಸಮು 14:17
1 ಸಮು. 14:281ಸಮು 14:24
1 ಸಮು. 14:301ಸಮು 14:26
1 ಸಮು. 14:31ಯೆಹೋ 10:12
1 ಸಮು. 14:32ಆದಿ 9:4; ಯಾಜ 3:17; 17:10; ಧರ್ಮೋ 12:16; ಅಕಾ 15:29
1 ಸಮು. 14:33ಧರ್ಮೋ 12:23
1 ಸಮು. 14:341ಸಮು 14:32
1 ಸಮು. 14:351ಸಮು 7:15, 17
1 ಸಮು. 14:36ಅರ 27:21; 1ಸಮು 30:7, 8
1 ಸಮು. 14:37ನ್ಯಾಯ 1:1; 1ಸಮು 30:8; 2ಸಮು 5:19
1 ಸಮು. 14:41ವಿಮೋ 28:30; ಧರ್ಮೋ 33:8; ಎಜ್ರ 2:62, 63
1 ಸಮು. 14:42ಜ್ಞಾನೋ 16:33
1 ಸಮು. 14:431ಸಮು 14:27
1 ಸಮು. 14:441ಸಮು 14:24
1 ಸಮು. 14:451ಸಮು 14:14
1 ಸಮು. 14:451ಸಮು 14:6
1 ಸಮು. 14:471ಸಮು 12:9
1 ಸಮು. 14:471ಸಮು 11:11
1 ಸಮು. 14:47ಆದಿ 36:8
1 ಸಮು. 14:472ಸಮು 10:6
1 ಸಮು. 14:471ಸಮು 9:16, 17
1 ಸಮು. 14:48ವಿಮೋ 17:14; ಧರ್ಮೋ 25:19; 1ಸಮು 15:3
1 ಸಮು. 14:491ಸಮು 31:2; 1ಪೂರ್ವ 8:33; 9:39
1 ಸಮು. 14:491ಸಮು 18:17
1 ಸಮು. 14:491ಸಮು 18:27; 25:44; 2ಸಮು 3:13; 6:20
1 ಸಮು. 14:501ಸಮು 17:55; 2ಸಮು 2:8; 3:27
1 ಸಮು. 14:511ಸಮು 9:1
1 ಸಮು. 14:511ಅರ 2:5
1 ಸಮು. 14:52ಆದಿ 49:27; 1ಸಮು 9:16, 17
1 ಸಮು. 14:521ಸಮು 8:11; 10:26
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
  • 31
  • 32
  • 33
  • 34
  • 35
  • 36
  • 37
  • 38
  • 39
  • 40
  • 41
  • 42
  • 43
  • 44
  • 45
  • 46
  • 47
  • 48
  • 49
  • 50
  • 51
  • 52
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
1 ಸಮುವೇಲ 14:1-52

ಒಂದನೇ ಸಮುವೇಲ

14 ಒಂದಿನ ಸೌಲನ ಮಗ ಯೋನಾತಾನ+ ತನ್ನ ಆಯುಧ ಹೊರೋ ಸೇವಕನಿಗೆ “ಬಾ, ಆ ಕಡೆ ದಾಟಿ ಫಿಲಿಷ್ಟಿಯರ ಕಾವಲು ಪಡೆ ಹತ್ರ ಹೋಗೋಣ” ಅಂದ. ಆದ್ರೆ ಯೋನಾತಾನ ಈ ವಿಷ್ಯದ ಬಗ್ಗೆ ತನ್ನ ತಂದೆಗೆ ಹೇಳಲಿಲ್ಲ. 2 ಆ ಸಮಯದಲ್ಲಿ ಸೌಲ ಗಿಬೆಯಾದ+ ಹೊರವಲಯದಲ್ಲಿದ್ದ ಮಿಗ್ರೋನಿನ ದಾಳಿಂಬೆ ಮರದ ಕೆಳಗೆ ವಾಸವಾಗಿದ್ದ. ಅವನ ಜೊತೆ ಸುಮಾರು 600 ಗಂಡಸ್ರು ಇದ್ರು.+ 3 (ಏಫೋದನ್ನ+ ಹಾಕಿದ್ದ ಅಹೀಯ ಶೀಲೋನಲ್ಲಿ+ ಯೆಹೋವನ ಪುರೋಹಿತನಾಗಿ ಸೇವೆ ಮಾಡ್ತಿದ್ದ. ಇವನು ಈಕಾಬೋದನ+ ಅಣ್ಣ ಅಹೀಟೂಬನ+ ಮಗನೂ ಫೀನೆಹಾಸನ+ ಮೊಮ್ಮಗನೂ ಏಲಿಯ+ ಮರಿಮಗನೂ ಆಗಿದ್ದ.) ಯೋನಾತಾನ ಹೋಗಿದ್ದಾನೆ ಅಂತ ಜನ್ರಿಗೆ ಗೊತ್ತಿರಲಿಲ್ಲ. 4 ಯೋನಾತಾನ ಫಿಲಿಷ್ಟಿಯರ ಕಾವಲು ಪಡೆಯ ಹತ್ರ ಹೋಗೋಕೆ ದಾಟ್ತಿದ್ದ ಕಣಿವೆಯ ಎರಡೂ ಬದಿಗಳಲ್ಲಿ ಚೂಪಾದ ಹಲ್ಲಿನ ತರ ಇದ್ದ ಎರಡು ಕಡಿದಾದ ಬಂಡೆಗಳು ಇದ್ವು. ಒಂದ್ರ ಹೆಸ್ರು ಬೋಚೇಚ್‌. ಇನ್ನೊಂದ್ರ ಹೆಸ್ರು ಸೆನೆ. 5 ಒಂದು ಬಂಡೆ ಕಂಬದ ತರ ಉತ್ತರಕ್ಕೆ ಮಿಕ್ಮಾಷಿನ ಕಡೆ ಮುಖ ಮಾಡ್ಕೊಂಡಿತ್ತು. ಇನ್ನೊಂದು ದಕ್ಷಿಣಕ್ಕೆ ಗೆಬದ+ ಕಡೆ ಮುಖ ಮಾಡ್ಕೊಂಡಿತ್ತು.

6 ಯೋನಾತಾನ ತನ್ನ ಆಯುಧಗಳನ್ನ ಹೊರುವವನಿಗೆ “ಬಾ, ನಾವು ದಾಟಿ ಸುನ್ನತಿಯಾಗದ+ ಈ ಗಂಡಸ್ರ ಕಾವಲು ಪಡೆ ಹತ್ರ ಹೋಗೋಣ. ನಮ್ಮಲ್ಲಿ ತುಂಬ ಜನ್ರೇ ಇರ್ಲಿ ಕೆಲವ್ರೇ ಇರ್ಲಿ ಯೆಹೋವ ನಮ್ಮನ್ನ ಖಂಡಿತ ಕಾಪಾಡ್ತಾನೆ. ಆತನನ್ನ ಯಾವುದು ಕೂಡ ತಡಿಯೋಕೆ ಆಗಲ್ಲ. ಹಾಗಾಗಿ ಯೆಹೋವ ನಮ್ಮ ಪರವಾಗಿ ಹೋರಾಡಿದ್ರೂ ಹೋರಾಡಬಹುದು”+ ಅಂದ. 7 ಅದಕ್ಕೆ ಆಯುಧ ಹೊರುವವನು “ನಿನ್ನ ಹೃದಯ ಏನ್‌ ಹೇಳುತ್ತೋ ಹಾಗೆ ಮಾಡು. ನಿನಗೆ ಎಲ್ಲಿಗೆ ಹೋಗಬೇಕಂತ ಅನಿಸುತ್ತೋ ಅಲ್ಲಿ ಹೋಗು. ನಿನ್ನ ಹೃದಯ ನಿನ್ನನ್ನ ನಡೆಸೋ ಕಡೆ ನಾನು ನಿನ್ನ ಹಿಂದೆನೇ ಬರ್ತಿನಿ” ಅಂದ. 8 ಯೋನಾತಾನ ಹೀಗಂದ: “ನಾವು ದಾಟಿ ಹೋಗಿ ಆ ಗಂಡಸ್ರಿಗೆ ಕಾಣೋ ತರ ನಿಂತ್ಕೊಳ್ಳೋಣ. 9 ಅವರು ನಮಗೆ ‘ನಾವು ನಿಮ್ಮ ಹತ್ರ ಬರೋ ತನಕ ನಿಂತಲ್ಲೇ ನಿಲ್ಲಿ!’ ಅಂದ್ರೆ ನಾವು ಅವ್ರ ವಿರುದ್ಧ ಹೋಗದೆ ನಿಂತಲ್ಲೇ ನಿಲ್ಲೋಣ. 10 ಆದ್ರೆ ಅವರು ‘ನಮ್ಮ ವಿರುದ್ಧ ಬನ್ನಿ!’ ಅಂದ್ರೆ ನಾವು ಅವ್ರ ವಿರುದ್ಧ ಹೋಗೋಣ. ಯೆಹೋವ ಅವ್ರನ್ನ ನಮ್ಮ ಕೈಗೆ ಒಪ್ಪಿಸ್ತಾನೆ ಅನ್ನೋದಕ್ಕೆ ಇದೇ ನಮಗೆ ಗುರುತು.”+

11 ಆಮೇಲೆ ಅವರಿಬ್ರು ಫಿಲಿಷ್ಟಿಯರ ಕಾವಲು ಪಡೆಗೆ ಕಾಣೋ ತರ ನಿಂತ್ಕೊಂಡ್ರು. ಆಗ ಫಿಲಿಷ್ಟಿಯರು “ಇಗೋ! ಇಬ್ರಿಯರು ತಾವು ಬಚ್ಚಿಟ್ಕೊಂಡಿದ್ದ+ ಗುಹೆಗಳಿಂದ ಹೊರಗೆ ಬರ್ತಿದ್ದಾರೆ” ಅಂತ ಮಾತಾಡ್ಕೊಂಡ್ರು. 12 ಆಮೇಲೆ ಕಾವಲು ಪಡೆಯಲ್ಲಿದ್ದ ಗಂಡಸ್ರು ಯೋನಾತಾನನಿಗೆ, ಅವನ ಆಯುಧ ಹೊರುವವನಿಗೆ “ನಮ್ಮ ಹತ್ರ ಬನ್ನಿ, ನಿಮಗೊಂದು ಪಾಠ ಕಲಿಸ್ತೀವಿ!”+ ಅಂದ್ರು. ಆಗ ಯೋನಾತಾನ ತನ್ನ ಆಯುಧ ಹೊರುವವನಿಗೆ “ನನ್ನ ಹಿಂದೆನೇ ಬಾ. ಯಾಕಂದ್ರೆ ಯೆಹೋವ ಅವ್ರನ್ನ ಇಸ್ರಾಯೇಲ್ಯರ ಕೈಗೆ ಒಪ್ಪಿಸ್ತಾನೆ”+ ಅಂದ. 13 ಯೋನಾತಾನ ತನ್ನ ಕೈಕಾಲುಗಳನ್ನ ಬಳಸಿ ಕಡಿದಾದ ಬಂಡೆಗಳನ್ನ ಹತ್ತಿದ. ಅವನ ಹಿಂದೆನೇ ಆಯುಧಗಳನ್ನ ಹೊರುವವನು ಕೂಡ ಬಂದ. ಯೋನಾತಾನ ಫಿಲಿಷ್ಟಿಯರ ಮೇಲೆ ದಾಳಿ ಮಾಡ್ತಾ ಹೋದ. ಆಯುಧಗಳನ್ನ ಹೊರುವವನು ಅವನ ಹಿಂದೆನೇ ಬರ್ತಾ ಅವ್ರನ್ನ ಕೊಲ್ತಾ ಹೋದ. 14 ಅವರಿಬ್ರು ಮಾಡಿದ ಈ ಮೊದ್ಲ ದಾಳಿಯಲ್ಲೇ ಸುಮಾರು 20 ಗಂಡಸ್ರನ್ನ ಒಂದು ಎಕರೆ ಜಮೀನಿನ* ಅರ್ಧದಷ್ಟು ದೂರದಲ್ಲೇ ಸಾಯಿಸಿದ್ರು.

15 ಆಗ ಫಿಲಿಷ್ಟಿಯರ ಪಾಳೆಯದಲ್ಲಿ, ಕಾವಲುಪಡೆಯಲ್ಲಿ ಭಯ ಹಬ್ಬಿತು. ಸುಲಿಗೆ ಮಾಡೋಕೆ ಹೋದವರು+ ಭಯದಿಂದ ನಡುಗಿದ್ರು. ಭೂಮಿ ಕಂಪಿಸೋಕೆ ಶುರುವಾಯ್ತು. ಇದೆಲ್ಲದ್ರ ಹಿಂದೆ ದೇವರಿದ್ದನು. 16 ಇವ್ರ ಗಲಭೆ ಎಲ್ಲ ದಿಕ್ಕುಗಳಿಗೆ ಹರಡ್ತಿರೋದನ್ನ+ ಬೆನ್ಯಾಮೀನಿನ ಗಿಬೆಯಾದಲ್ಲಿದ್ದ+ ಸೌಲನ ಬಾಗಿಲು ಕಾಯೋರು ನೋಡಿದ್ರು.

17 ಸೌಲ ತನ್ನ ಜೊತೆ ಇದ್ದ ಜನ್ರಿಗೆ “ದಯವಿಟ್ಟು, ಎಲ್ರನ್ನೂ ಲೆಕ್ಕ ಮಾಡಿ. ಯಾರು ನಮ್ಮನ್ನ ಬಿಟ್ಟುಹೋಗಿದ್ದಾರೆ ಅಂತ ಗೊತ್ತಾಗುತ್ತೆ” ಅಂದ. ಅವರು ಲೆಕ್ಕ ಮಾಡಿದಾಗ ಯೋನಾತಾನ, ಅವನ ಆಯುಧಗಳನ್ನ ಹೊರುವವನು ಇರ್ಲಿಲ್ಲ ಅಂತ ಗೊತ್ತಾಯ್ತು. 18 ಆಗ ಸೌಲ ಅಹೀಯನಿಗೆ+ “ಸತ್ಯ ದೇವರ ಮಂಜೂಷವನ್ನ ಹತ್ರಕ್ಕೆ ತಗೊಂಡು ಬಾ!” ಅಂದ. (ಆ ಸಮಯದಲ್ಲಿ* ಸತ್ಯ ದೇವರ ಮಂಜೂಷ ಇಸ್ರಾಯೇಲ್ಯರ ಹತ್ರ ಇತ್ತು.) 19 ಸೌಲ ಪುರೋಹಿತನ ಹತ್ರ ಮಾತಾಡ್ತಿರುವಾಗ ಫಿಲಿಷ್ಟಿಯರ ಪಾಳೆಯದ ಆಕ್ರಂದನ ಹೆಚ್ಚಾಗ್ತಾ ಹೋಯ್ತು. ಆಗ ಸೌಲ ಪುರೋಹಿತನಿಗೆ “ನೀನು ಮಾಡ್ತಿರೋದನ್ನ ನಿಲ್ಲಿಸು”* ಅಂದ. 20 ಸೌಲ, ಅವನ ಜೊತೆ ಸೇರಿಬಂದಿದ್ದ ಜನ್ರೆಲ್ಲ ಯುದ್ಧಕ್ಕೆ ಹೋದ್ರು. ಅವರು ಅಲ್ಲಿಗೆ ಹೋಗಿ ನೋಡಿದಾಗ ಫಿಲಿಷ್ಟಿಯರು ತಾವೇ ಒಬ್ರ ಮೇಲೊಬ್ರು ಕತ್ತಿಗಳನ್ನ ಬೀಸ್ತಿದ್ರು. ಅವ್ರಿಗೆ ತುಂಬ ಗಲಿಬಿಲಿ ಆಗಿತ್ತು. 21 ಅಷ್ಟೇ ಅಲ್ಲ ಈ ಮುಂಚೆ ಫಿಲಿಷ್ಟಿಯರ ಪಕ್ಷ ವಹಿಸಿ ಅವ್ರ ಪಾಳೆಯಕ್ಕೆ ಹೊರಟು ಹೋಗಿದ್ದ ಇಬ್ರಿಯರು ಈಗ ಸೌಲ ಮತ್ತು ಯೋನಾತಾನರ ಜೊತೆಯಲ್ಲಿದ್ದ ಇಸ್ರಾಯೇಲ್ಯರನ್ನ ಸೇರ್ಕೊಂಡ್ರು. 22 ಫಿಲಿಷ್ಟಿಯರು ಓಡಿಹೋಗಿದ್ದ ವಿಷ್ಯ ಎಫ್ರಾಯೀಮ್‌ ಬೆಟ್ಟ ಪ್ರದೇಶದಲ್ಲಿ ಅಡಗಿಕೊಂಡಿದ್ದ+ ಎಲ್ಲ ಇಸ್ರಾಯೇಲ್‌ ಗಂಡಸ್ರು ಕೇಳಿಸ್ಕೊಂಡ್ರು. ಆಗ ಅವರು ಕೂಡ ಫಿಲಿಷ್ಟಿಯರನ್ನ ಹಿಂದಟ್ಟಿ ಯುದ್ಧ ಮಾಡೋಕೆ ಹೋದ್ರು. 23 ಹೀಗೆ ಯೆಹೋವ ಇಸ್ರಾಯೇಲ್ಯರನ್ನ ಆ ದಿನ ಕಾಪಾಡಿದನು.+ ಬೇತಾವೆನಿನ+ ತನಕ ಯುದ್ಧ ನಡೀತಾ ಇತ್ತು.

24 ಆದ್ರೆ ಇಸ್ರಾಯೇಲಿನ ಗಂಡಸ್ರು ಅವತ್ತು ತುಂಬ ಸುಸ್ತಾಗಿದ್ರು. ಯಾಕಂದ್ರೆ ಸೌಲ ಅವ್ರಿಗೆ “ಯಾವನಾದ್ರೂ ಸಾಯಂಕಾಲಕ್ಕಿಂತ ಮುಂಚೆ ಮತ್ತು ನಾನು ನನ್ನ ಶತ್ರುಗಳಿಗೆ ಸೇಡು ತೀರಿಸೋದಕ್ಕಿಂತ ಮುಂಚೆ ಊಟ ಮಾಡಿದ್ರೆ ಅವನಿಗೆ ಶಾಪ ತಟ್ಲಿ!” ಅಂತ ಆಣೆ ಮಾಡಿಸಿದ್ದ. ಹಾಗಾಗಿ ಯಾರೂ ಏನನ್ನೂ ತಿಂದಿರಲಿಲ್ಲ.+

25 ಆಮೇಲೆ ಎಲ್ಲ ಜನ್ರು ಕಾಡಿಗೆ ಬಂದ್ರು. ಆಗ ನೆಲದ ಮೇಲೆ ತುಂಬ ಜೇನು ಬಿದ್ದಿತ್ತು. 26 ಜನ್ರು ಕಾಡಿಗೆ ಬಂದಾಗ ಜೇನು ತೊಟ್ಟಿಕ್ತಾ ಇರೋದನ್ನ ನೋಡಿದ್ರೂ ಅದನ್ನ ಕೈಯಿಂದ ತಗೊಂಡು ಬಾಯಿಗೆ ಹಾಕೊಳ್ಳಲಿಲ್ಲ. ಯಾಕಂದ್ರೆ ಅವರು ಆಣೆ ಮಾಡಿದ್ರಿಂದ ಹೆದರಿದ್ರು. 27 ಆದ್ರೆ ಯೋನಾತಾನನಿಗೆ ಅವನ ತಂದೆ ಜನ್ರಿಂದ ಮಾಡಿಸಿದ ಆ ಆಣೆ ಬಗ್ಗೆ ಗೊತ್ತಿರಲಿಲ್ಲ.+ ಹಾಗಾಗಿ ಅವನು ತನ್ನ ಕೈಯಲ್ಲಿದ್ದ ಕೋಲು ಚಾಚಿ ಅದ್ರ ತುದಿಯನ್ನ ಜೇನುಗೂಡಲ್ಲಿ ಅದ್ದಿ ಅದನ್ನ ಬಾಯಿಗೆ ಇಟ್ಕೊಂಡ. ಆಗ ಅವನ ಕಣ್ಣುಗಳು ಹೊಳೀತು. 28 ಆಗ ಜನ್ರಲ್ಲಿ ಒಬ್ಬ “ನಿನ್ನ ತಂದೆ ಎಲ್ಲ ಜನ್ರಿಂದ ‘ಯಾವನಾದ್ರೂ ಇವತ್ತು ಊಟ ಮಾಡಿದ್ರೆ ಅವನಿಗೆ ಶಾಪ ತಟ್ಲಿ!’+ ಅನ್ನೋ ಕಟ್ಟುನಿಟ್ಟಾದ ಆಣೆ ಮಾಡಿಸಿದ್ದಾನೆ. ಹಾಗಾಗಿ ಜನ್ರೆಲ್ಲ ಇಷ್ಟು ದಣಿದಿದ್ದಾರೆ” ಅಂದ. 29 ಅದಕ್ಕೆ ಯೋನಾತಾನ “ನನ್ನ ತಂದೆ ದೇಶವನ್ನ ದೊಡ್ಡ ಕಷ್ಟಕ್ಕೆ ಸಿಕ್ಕಿಸಿದ್ದಾನೆ. ಸ್ವಲ್ಪ ಜೇನನ್ನ ಸವಿದಿದ್ರಿಂದ ನನ್ನ ಕಣ್ಣುಗಳು ಹೇಗೆ ಹೊಳಿತಿವೆ ಅಂತ ನೋಡಿ! 30 ಇವತ್ತು ತಮ್ಮ ಶತ್ರುಗಳಿಂದ ಕೊಳ್ಳೆ ಹೊಡೆದದ್ದರಲ್ಲಿ ಸಿಕ್ಕಿದ್ದನ್ನ ಜನ ಯಥೇಚ್ಛವಾಗಿ ತಿಂದಿದ್ರೆ ಎಷ್ಟು ಚೆನ್ನಾಗಿರ್ತಿತ್ತು!+ ಆಗ ಫಿಲಿಷ್ಟಿಯರನ್ನ ಇನ್ನೂ ಜಾಸ್ತಿ ಸಾಯಿಸಬಹುದಿತ್ತು” ಅಂದ.

31 ಆ ದಿನ ಜನ ಮಿಕ್ಮಾಷಿನಿಂದ ಅಯ್ಯಾಲೋನಿನ+ ತನಕ ಫಿಲಿಷ್ಟಿಯರನ್ನ ಸಾಯಿಸ್ತಾ ಬಂದ್ರು. ಇದ್ರಿಂದ ಜನ ತುಂಬ ದಣಿದಿದ್ರು. 32 ಹಾಗಾಗಿ ಜನ ತುಂಬ ಹಸಿವಿನಿಂದ ಕೊಳ್ಳೆ ಹೊಡೆಯೋಕೆ ನುಗ್ಗಿ ಕುರಿ, ದನ ಮತ್ತು ಕರುಗಳನ್ನ ಹಿಡಿದು ನೆಲದ ಮೇಲೆ ಅವುಗಳನ್ನ ಕಡಿದು ರಕ್ತದ ಜೊತೆ ಮಾಂಸ ತಿಂದ್ರು.+ 33 “ಜನ ರಕ್ತದ ಜೊತೆ ಮಾಂಸ ತಿಂದು ಯೆಹೋವನ ವಿರುದ್ಧ ಪಾಪ ಮಾಡ್ತಿದ್ದಾರೆ”+ ಅಂತ ಸೌಲನಿಗೆ ಸುದ್ದಿ ಸಿಕ್ತು. ಅದಕ್ಕೆ ಸೌಲ “ನೀವು ನಂಬಿಕೆ ಇಲ್ಲದವ್ರ ತರ ನಡ್ಕೊಂಡಿದ್ದೀರ. ತಕ್ಷಣ ನನ್ನ ಹತ್ರ ಒಂದು ದೊಡ್ಡ ಕಲ್ಲನ್ನ ಉರುಳಿಸ್ಕೊಂಡು ಬನ್ನಿ” ಅಂದ. 34 ಸೌಲ ಹೀಗಂದ: “ಜನ್ರ ಹತ್ರ ಹೋಗಿ ಹೀಗೆ ಹೇಳಿ ‘ನಿಮ್ಮಲ್ಲಿ ಪ್ರತಿಯೊಬ್ರು ನಿಮ್ಮನಿಮ್ಮ ಹೋರಿ, ಕುರಿ ತಗೊಂಡು ಬಂದು ಇಲ್ಲಿ ಕಡಿದು ಅದನ್ನ ತಿನ್ನಬೇಕು. ರಕ್ತದ ಜೊತೆ ಮಾಂಸ ತಿಂದು ಯೆಹೋವನ ವಿರುದ್ಧ ಪಾಪ ಮಾಡಬೇಡಿ.’”+ ಹಾಗಾಗಿ ಅವತ್ತು ರಾತ್ರಿ ಪ್ರತಿಯೊಬ್ರು ತಮ್ಮ ಜೊತೆ ತಮ್ಮ ಹೋರಿಗಳನ್ನ ತಗೊಂಡು ಬಂದು ಅಲ್ಲಿ ಕಡಿದ್ರು. 35 ಸೌಲ ಯೆಹೋವನಿಗೆ ಒಂದು ಯಜ್ಞವೇದಿ ಕಟ್ಟಿದ.+ ಇದು ಯೆಹೋವನಿಗಾಗಿ ಅವನು ಕಟ್ಟಿದ ಮೊದಲ್ನೇ ಯಜ್ಞವೇದಿ ಆಗಿತ್ತು.

36 ಆಮೇಲೆ ಸೌಲ “ಈ ರಾತ್ರಿ ಫಿಲಿಷ್ಟಿಯರನ್ನ ಬೆನ್ನಟ್ತಾ ಬೆಳಗಾಗೋ ತನಕ ಅವ್ರನ್ನ ಕೊಳ್ಳೆ ಹೊಡೆಯೋಣ ಬನ್ನಿ. ಅವ್ರಲ್ಲಿ ಒಬ್ಬನನ್ನೂ ಉಳಿಸೋದು ಬೇಡ” ಅಂದ. ಅದಕ್ಕೆ ಜನ “ನಿನಗೆ ಸರಿ ಅನಿಸಿದ್ದನ್ನ ಮಾಡು” ಅಂದ್ರು. ಆಗ ಪುರೋಹಿತ “ಸತ್ಯ ದೇವರನ್ನ ಇಲ್ಲಿ ವಿಚಾರಿಸಿ ನೋಡೋಣ”+ ಅಂದ. 37 ಸೌಲ ದೇವ್ರಿಗೆ “ನಾನು ಫಿಲಿಷ್ಟಿಯರನ್ನ ಅಟ್ಟಿಸ್ಕೊಂಡು ಹೋಗಬಹುದಾ?+ ನೀನು ಅವ್ರನ್ನ ಇಸ್ರಾಯೇಲಿನ ಕೈಗೆ ಒಪ್ಪಿಸ್ತೀಯಾ?” ಅಂತ ಕೇಳಿದ. ಆದ್ರೆ ದೇವರು ಅವತ್ತು ಅವನಿಗೆ ಉತ್ತರ ಕೊಡಲಿಲ್ಲ. 38 ಹಾಗಾಗಿ ಸೌಲ “ಜನ್ರ ಎಲ್ಲ ಮುಖ್ಯಸ್ಥರೇ, ಇಲ್ಲಿ ಬನ್ನಿ. ಇವತ್ತು ಯಾವ ಪಾಪ ನಡೀತು ಅಂತ ಕಂಡುಹಿಡಿರಿ. 39 ಇಸ್ರಾಯೇಲನ್ನ ವಿಮೋಚಿಸಿದ ಜೀವ ಇರೋ ದೇವರಾದ ಯೆಹೋವನಾಣೆ, ಪಾಪ ಮಾಡಿದವನು ನನ್ನ ಮಗ ಯೋನಾತಾನನೇ ಆಗಿದ್ರೂ ಸರಿ, ಅವನು ಸಾಯ್ಲೇಬೇಕು” ಅಂದ. ಆದ್ರೆ ಜನ್ರಲ್ಲಿ ಯಾರೂ ಅವನಿಗೆ ಉತ್ತರ ಕೊಡಲಿಲ್ಲ. 40 ಅವನು ಎಲ್ಲ ಇಸ್ರಾಯೇಲ್ಯರಿಗೆ “ನೀವು ಒಂದುಕಡೆ ನಿಂತ್ಕೊಳ್ಳಿ. ನಾನು, ನನ್ನ ಮಗ ಯೋನಾತಾನ ಇನ್ನೊಂದು ಕಡೆ ನಿಂತ್ಕೊಳ್ತೀವಿ” ಅಂದ. ಅದಕ್ಕೆ ಜನ ಸೌಲನಿಗೆ “ನಿನಗೆ ಸರಿ ಅನಿಸಿದ್ದನ್ನ ಮಾಡು” ಅಂದ್ರು.

41 ಸೌಲ ಯೆಹೋವನಿಗೆ “ಇಸ್ರಾಯೇಲಿನ ದೇವರೇ, ತುಮ್ಮೀಮಿನ+ ಮೂಲಕ ಉತ್ತರಿಸು!” ಅಂದ. ಆಗ ತುಮ್ಮೀಮ್‌ ಯೋನಾತಾನನನ್ನ, ಸೌಲನನ್ನ ಆರಿಸಿತು, ಜನ್ರು ಪಾರಾದ್ರು. 42 ಆಗ ಸೌಲ “ನಾನು, ನನ್ನ ಮಗ ಯೋನಾತಾನನಲ್ಲಿ ಯಾರು ಪಾಪ ಮಾಡಿದ್ದೀವಿ ಅಂತ ತಿಳಿಯೋಕೆ ಚೀಟುಹಾಕಿ”+ ಅಂದ. ಆಗ ಯೋನಾತಾನನಿಗೆ ಚೀಟುಬಿತ್ತು. 43 ಅದಕ್ಕೆ ಸೌಲ ಯೋನಾತಾನನಿಗೆ “ಹೇಳು, ನೀನೇನು ಮಾಡ್ದೆ?” ಅಂತ ಕೇಳಿದ. ಯೋನಾತಾನ “ನಾನು ನನ್ನ ಕೈಯಲ್ಲಿದ್ದ ಕೋಲಿನ ತುದಿಯಿಂದ ಸ್ವಲ್ಪ ಜೇನು ತಗೊಂಡು ರುಚಿ ನೋಡ್ದೆ ಅಷ್ಟೇ.+ ನಾನು ಸಾಯೋದಕ್ಕೆ ಸಿದ್ಧ” ಅಂದ.

44 ಅದಕ್ಕೆ ಸೌಲ “ಯೋನಾತಾನ, ನೀನು ಸಾಯದಿದ್ರೆ ದೇವರು ನನಗೆ ಶಿಕ್ಷೆ ಕೊಡ್ಲಿ”+ ಅಂದ. 45 ಆದ್ರೆ ಜನ ಸೌಲನಿಗೆ “ಇಸ್ರಾಯೇಲ್ಯರಿಗೆ ಮಹಾಜಯ* ತಂದ್ಕೊಟ್ಟ ಯೋನಾತಾನ+ ಸಾಯಬೇಕಾ? ಅದನ್ನ ಯೋಚಿಸೋಕೂ ಆಗಲ್ಲ! ಜೀವ ಇರೋ ದೇವರಾದ ಯೆಹೋವನಾಣೆ, ಯೋನಾತಾನನ ತಲೆಯಿಂದ ಒಂದೇ ಒಂದು ಕೂದ್ಲು ಸಹ ನೆಲಕ್ಕೆ ಬೀಳೋಕೆ ಆತನು ಬಿಡಲ್ಲ. ಯಾಕಂದ್ರೆ ಅವನು ಈ ದಿನ ದೇವರ ಜೊತೆ ಸೇರಿ ಈ ಎಲ್ಲ ಕೆಲಸಗಳನ್ನ ಮಾಡಿದ್ದಾನೆ”+ ಅಂತ ಹೇಳಿ ಯೋನಾತಾನನ ಪ್ರಾಣವನ್ನ ಕಾಪಾಡಿದ್ರು. ಹಾಗಾಗಿ ಅವನಿಗೆ ಮರಣಶಿಕ್ಷೆ ಆಗಲಿಲ್ಲ.

46 ಆಮೇಲೆ ಸೌಲ ಫಿಲಿಷ್ಟಿಯರನ್ನ ಅಟ್ಟಿಸ್ಕೊಂಡು ಹೋಗೋದನ್ನ ನಿಲ್ಲಿಸಿದ. ಫಿಲಿಷ್ಟಿಯರು ತಮ್ಮ ಪ್ರಾಂತ್ಯಕ್ಕೆ ಹೋದ್ರು.

47 ಸೌಲ ಇಸ್ರಾಯೇಲಿನ ಮೇಲೆ ತನ್ನ ಆಡಳಿತವನ್ನ ಸ್ಥಿರಪಡಿಸ್ಕೊಂಡ ಮೇಲೆ ಸುತ್ತ ಇರೋ ಎಲ್ಲ ಶತ್ರುಗಳ ಅಂದ್ರೆ ಮೋವಾಬ್ಯರ,+ ಅಮ್ಮೋನಿಯರ,+ ಎದೋಮ್ಯರ,+ ಚೋಬದ+ ರಾಜರ ಮತ್ತು ಫಿಲಿಷ್ಟಿಯರ+ ವಿರುದ್ಧ ಯುದ್ಧ ಮಾಡಿದ. ಅವನು ಹೋದಲ್ಲೆಲ್ಲ ಶತ್ರುಗಳನ್ನ ಸೋಲಿಸಿದ. 48 ಅವನು ಅಮಾಲೇಕ್ಯರ+ ವಿರುದ್ಧ ಧೈರ್ಯದಿಂದ ಹೋರಾಡಿ ಅವ್ರನ್ನ ವಶ ಮಾಡ್ಕೊಂಡ. ಇಸ್ರಾಯೇಲ್ಯರನ್ನ ಅವ್ರ ಶತ್ರುಗಳ ಕೈಯಿಂದ ಬಿಡಿಸಿದ.

49 ಯೋನಾತಾನ, ಇಷ್ವೀ ಮತ್ತು ಮಲ್ಕೀಷೂವ+ ಸೌಲನ ಗಂಡು ಮಕ್ಕಳಾಗಿದ್ರು. ಅವನಿಗೆ ಇಬ್ರು ಹೆಣ್ಣು ಮಕ್ಕಳಿದ್ರು. ದೊಡ್ಡ ಮಗಳ ಹೆಸ್ರು ಮೇರಬ.+ ಎರಡನೇ ಮಗಳ ಹೆಸ್ರು ಮೀಕಲ.+ 50 ಸೌಲನ ಹೆಂಡತಿ ಹೆಸ್ರು ಅಹೀನೋವಮ. ಅವಳು ಅಹೀಮಾಚನ ಮಗಳು. ಸೌಲನ ಸೇನಾಪತಿ ಹೆಸ್ರು ಅಬ್ನೇರ.+ ಅಬ್ನೇರ ಸೌಲನ ತಂದೆಯ ಸಹೋದರನೂ ನೇರನ ಮಗನೂ ಆಗಿದ್ದ. 51 ಸೌಲನ ತಂದೆ ಕೀಷ.+ ಅಬ್ನೇರನ ತಂದೆ ನೇರ.+ ನೇರ ಅಬೀಯೇಲನ ಮಗ.

52 ಸೌಲ ಆಳ್ತಿದ್ದ ಸಮಯದಲ್ಲೆಲ್ಲ ಫಿಲಿಷ್ಟಿಯರ, ಸೌಲನ ಮಧ್ಯ ಯಾವಾಗ್ಲೂ ದೊಡ್ಡ ಯುದ್ಧ ನಡಿತಿತ್ತು.+ ಸೌಲ ಎಲ್ಲಾದ್ರೂ ಬಲಿಷ್ಠ ಅಥವಾ ಧೈರ್ಯಶಾಲಿ ಗಂಡಸನ್ನ ನೋಡಿದ್ರೆ ತಕ್ಷಣ ಅವನನ್ನ ತನ್ನ ಸೈನ್ಯಕ್ಕೆ ಸೇರಿಸ್ಕೊಳ್ತಿದ್ದ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ