ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ದಾನಿಯೇಲ 1
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ದಾನಿಯೇಲ ಮುಖ್ಯಾಂಶಗಳು

      • ಬಾಬೆಲಿನ ಜನ್ರು ಯೆರೂಸಲೇಮನ್ನ ವಶ ಮಾಡ್ಕೊಂಡ್ರು (1, 2)

      • ಕೈದಿಗಳಾಗಿ ಕರ್ಕೊಂಡು ಬಂದಿದ್ದ ರಾಜವಂಶದ ಯುವಕರಿಗೆ ವಿಶೇಷ ತರಬೇತಿ (3-5)

      • ನಾಲ್ಕು ಇಬ್ರಿಯರ ನಂಬಿಕೆ ಪರೀಕ್ಷೆ (6-21)

ದಾನಿಯೇಲ 1:1

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 36:4; ಯೆರೆ 22:18, 19; 36:30
  • +ಧರ್ಮೋ 28:49, 50; 2ಅರ 24:1; 2ಪೂರ್ವ 36:5, 6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ದಾನಿಯೇಲನ ಪ್ರವಾದನೆ, ಪು. 18-19, 31-32

ದಾನಿಯೇಲ 1:2

ಪಾದಟಿಪ್ಪಣಿ

  • *

    ಅದು, ಬ್ಯಾಬಿಲೋನಿಯ.

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 42:24
  • +ಆದಿ 10:9, 10
  • +2ಪೂರ್ವ 36:7; ಎಜ್ರ 1:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ದಾನಿಯೇಲನ ಪ್ರವಾದನೆ, ಪು. 32-33

ದಾನಿಯೇಲ 1:3

ಮಾರ್ಜಿನಲ್ ರೆಫರೆನ್ಸ್

  • +2ಅರ 20:16, 18

ಇಂಡೆಕ್ಸಸ್

  • ಸಂಶೋಧನಾ ಸಾಧನ

    ದಾನಿಯೇಲನ ಪ್ರವಾದನೆ, ಪು. 33

ದಾನಿಯೇಲ 1:4

ಮಾರ್ಜಿನಲ್ ರೆಫರೆನ್ಸ್

  • +ದಾನಿ 1:17, 20; 5:11, 12

ಇಂಡೆಕ್ಸಸ್

  • ಸಂಶೋಧನಾ ಸಾಧನ

    ದಾನಿಯೇಲನ ಪ್ರವಾದನೆ, ಪು. 7, 33-34

    ಕಾವಲಿನಬುರುಜು,

    7/15/1997, ಪು. 15

    2/1/1993, ಪು. 13-14

ದಾನಿಯೇಲ 1:5

ಪಾದಟಿಪ್ಪಣಿ

  • *

    ಬಹುಶಃ, “ಪೋಷಣೆ.”

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/15/2005, ಪು. 27

    2/1/1993, ಪು. 13-14

    ದಾನಿಯೇಲನ ಪ್ರವಾದನೆ, ಪು. 34-35

ದಾನಿಯೇಲ 1:6

ಪಾದಟಿಪ್ಪಣಿ

  • *

    ಅರ್ಥ “ದೇವರೇ ನನ್ನ ನ್ಯಾಯಾಧೀಶ.”

  • *

    ಅರ್ಥ “ಯೆಹೋವ ಕೃಪೆ ತೋರಿಸಿದ್ದಾನೆ.”

  • *

    ಬಹುಶಃ ಇದ್ರರ್ಥ “ದೇವರ ತರ ಯಾರಿದ್ದಾರೆ?”

  • *

    ಅರ್ಥ “ಯೆಹೋವ ಸಹಾಯ ಮಾಡಿದ್ದಾನೆ.”

ಮಾರ್ಜಿನಲ್ ರೆಫರೆನ್ಸ್

  • +ದಾನಿ 2:48; 5:13, 29
  • +ದಾನಿ 2:17, 18

ಇಂಡೆಕ್ಸಸ್

  • ಸಂಶೋಧನಾ ಸಾಧನ

    ದಾನಿಯೇಲನ ಪ್ರವಾದನೆ, ಪು. 33-34

ದಾನಿಯೇಲ 1:7

ಮಾರ್ಜಿನಲ್ ರೆಫರೆನ್ಸ್

  • +ದಾನಿ 4:8; 5:12
  • +ದಾನಿ 2:49; 3:12, 28

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    10/2016, ಪು. 14

    ದಾನಿಯೇಲನ ಪ್ರವಾದನೆ, ಪು. 34-36

ದಾನಿಯೇಲ 1:8

ಪಾದಟಿಪ್ಪಣಿ

  • *

    ಅಕ್ಷ. “ಹೃದಯ.”

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    8/2023, ಪು. 3-4

    ದಾನಿಯೇಲನ ಪ್ರವಾದನೆ, ಪು. 36-38

ದಾನಿಯೇಲ 1:9

ಮಾರ್ಜಿನಲ್ ರೆಫರೆನ್ಸ್

  • +1ಅರ 8:49, 50; ಕೀರ್ತ 106:44, 46

ಇಂಡೆಕ್ಸಸ್

  • ಸಂಶೋಧನಾ ಸಾಧನ

    ದಾನಿಯೇಲನ ಪ್ರವಾದನೆ, ಪು. 38-39

ದಾನಿಯೇಲ 1:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    9/1/2007, ಪು. 20

    ದಾನಿಯೇಲನ ಪ್ರವಾದನೆ, ಪು. 39

ದಾನಿಯೇಲ 1:11

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    9/1/2007, ಪು. 20

    ದಾನಿಯೇಲನ ಪ್ರವಾದನೆ, ಪು. 39

ದಾನಿಯೇಲ 1:12

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    9/1/2007, ಪು. 18-19

    7/15/2005, ಪು. 27-28

    ದಾನಿಯೇಲನ ಪ್ರವಾದನೆ, ಪು. 39-40

ದಾನಿಯೇಲ 1:14

ಪಾದಟಿಪ್ಪಣಿ

  • *

    ಅಥವಾ “ಅವ್ರನ್ನ ಪರೀಕ್ಷಿಸಿದ.”

ದಾನಿಯೇಲ 1:15

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    9/1/2007, ಪು. 18-19

    ದಾನಿಯೇಲನ ಪ್ರವಾದನೆ, ಪು. 40-41

ದಾನಿಯೇಲ 1:16

ಇಂಡೆಕ್ಸಸ್

  • ಸಂಶೋಧನಾ ಸಾಧನ

    ದಾನಿಯೇಲನ ಪ್ರವಾದನೆ, ಪು. 41

ದಾನಿಯೇಲ 1:17

ಪಾದಟಿಪ್ಪಣಿ

  • *

    ಅಕ್ಷ. “ಒಳನೋಟ.”

  • *

    ಪದವಿವರಣೆ ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ದಾನಿ 1:20; 4:9; 5:11, 12

ಇಂಡೆಕ್ಸಸ್

  • ಸಂಶೋಧನಾ ಸಾಧನ

    ದಾನಿಯೇಲನ ಪ್ರವಾದನೆ, ಪು. 41-42

ದಾನಿಯೇಲ 1:18

ಮಾರ್ಜಿನಲ್ ರೆಫರೆನ್ಸ್

  • +ದಾನಿ 1:5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ದಾನಿಯೇಲನ ಪ್ರವಾದನೆ, ಪು. 42

ದಾನಿಯೇಲ 1:19

ಮಾರ್ಜಿನಲ್ ರೆಫರೆನ್ಸ್

  • +ದಾನಿ 1:3, 6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ದಾನಿಯೇಲನ ಪ್ರವಾದನೆ, ಪು. 42-43

ದಾನಿಯೇಲ 1:20

ಮಾರ್ಜಿನಲ್ ರೆಫರೆನ್ಸ್

  • +ದಾನಿ 2:2; 4:7; 5:8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ದಾನಿಯೇಲನ ಪ್ರವಾದನೆ, ಪು. 43-44

ದಾನಿಯೇಲ 1:21

ಮಾರ್ಜಿನಲ್ ರೆಫರೆನ್ಸ್

  • +ದಾನಿ 6:28; 10:1

ಇಂಡೆಕ್ಸಸ್

  • ಸಂಶೋಧನಾ ಸಾಧನ

    ದಾನಿಯೇಲನ ಪ್ರವಾದನೆ, ಪು. 44-45

    ಕಾವಲಿನಬುರುಜು,

    7/15/1997, ಪು. 15

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ದಾನಿ. 1:12ಪೂರ್ವ 36:4; ಯೆರೆ 22:18, 19; 36:30
ದಾನಿ. 1:1ಧರ್ಮೋ 28:49, 50; 2ಅರ 24:1; 2ಪೂರ್ವ 36:5, 6
ದಾನಿ. 1:2ಯೆಶಾ 42:24
ದಾನಿ. 1:2ಆದಿ 10:9, 10
ದಾನಿ. 1:22ಪೂರ್ವ 36:7; ಎಜ್ರ 1:7
ದಾನಿ. 1:32ಅರ 20:16, 18
ದಾನಿ. 1:4ದಾನಿ 1:17, 20; 5:11, 12
ದಾನಿ. 1:6ದಾನಿ 2:48; 5:13, 29
ದಾನಿ. 1:6ದಾನಿ 2:17, 18
ದಾನಿ. 1:7ದಾನಿ 2:49; 3:12, 28
ದಾನಿ. 1:7ದಾನಿ 4:8; 5:12
ದಾನಿ. 1:91ಅರ 8:49, 50; ಕೀರ್ತ 106:44, 46
ದಾನಿ. 1:17ದಾನಿ 1:20; 4:9; 5:11, 12
ದಾನಿ. 1:18ದಾನಿ 1:5
ದಾನಿ. 1:19ದಾನಿ 1:3, 6
ದಾನಿ. 1:20ದಾನಿ 2:2; 4:7; 5:8
ದಾನಿ. 1:21ದಾನಿ 6:28; 10:1
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ದಾನಿಯೇಲ 1:1-21

ದಾನಿಯೇಲ

1 ಯೆಹೂದದ ರಾಜ ಯೆಹೋಯಾಕೀಮನ+ ಆಳ್ವಿಕೆಯ ಮೂರನೇ ವರ್ಷದಲ್ಲಿ ಬಾಬೆಲಿನ ರಾಜ ನೆಬೂಕದ್ನೆಚ್ಚರ ಯೆರೂಸಲೇಮಿಗೆ ಬಂದು ಅದನ್ನ ವಶ ಮಾಡ್ಕೊಂಡ.+ 2 ಸ್ವಲ್ಪ ಸಮಯ ಆದ್ಮೇಲೆ ಯೆಹೋವ ಯೆಹೂದದ ರಾಜ ಯೆಹೋಯಾಕೀಮನನ್ನ, ಸತ್ಯ ದೇವರ ಆಲಯದ ಕೆಲವು ಪಾತ್ರೆಗಳನ್ನ ನೆಬೂಕದ್ನೆಚ್ಚರನಿಗೆ ಒಪ್ಪಿಸಿದ.+ ನೆಬೂಕದ್ನೆಚ್ಚರ ಆ ಪಾತ್ರೆಗಳನ್ನ ಶಿನಾರ್‌*+ ದೇಶಕ್ಕೆ ತಗೊಂಡು ಹೋಗಿ ತನ್ನ ದೇವರ ಮಂದಿರದ ಖಜಾನೆಯಲ್ಲಿ ಇಟ್ಟ.+

3 ಆಮೇಲೆ ರಾಜ ನೆಬೂಕದ್ನೆಚ್ಚರ ತನ್ನ ಆಸ್ಥಾನದ ಮುಖ್ಯ ಅಧಿಕಾರಿ ಅಶ್ಪೆನಜಗೆ ಇಸ್ರಾಯೇಲ್ಯರ ಕೆಲವು ಯುವಕರನ್ನ ಕರ್ಕೊಂಡು ಬರೋಕೆ ಹೇಳಿದ. ಮುಖ್ಯವಾಗಿ ರಾಜವಂಶಕ್ಕೆ, ಶ್ರೀಮಂತ ಮನೆತನಕ್ಕೆ ಸೇರಿದವ್ರನ್ನ ಕರ್ಕೊಂಡು ಬರೋಕೆ ಹೇಳಿದ.+ 4 ಅವ್ರಲ್ಲಿ ಕುಂದುಕೊರತೆ ಇರಬಾರದಿತ್ತು. ಸೌಂದರ್ಯ, ವಿವೇಕ, ಜ್ಞಾನ, ತಿಳುವಳಿಕೆ ಇರಬೇಕಿತ್ತು.+ ರಾಜನ ಅರಮನೆಯಲ್ಲಿ ಸೇವೆಮಾಡೋ ಸಾಮರ್ಥ್ಯ ಇರಬೇಕಿತ್ತು. ಕಸ್ದೀಯರ ಸಾಹಿತ್ಯ, ಭಾಷೆ ಬಗ್ಗೆ ಆಸ್ಥಾನದ ಮುಖ್ಯ ಅಧಿಕಾರಿಯಾಗಿದ್ದ ಅಶ್ಪೆನಜ ಆ ಯುವಕರಿಗೆ ಕಲಿಸಬೇಕಿತ್ತು. 5 ಅಷ್ಟೇ ಅಲ್ಲ ತಾನು ತಿನ್ನೋ ರುಚಿರುಚಿಯಾದ ಆಹಾರದಲ್ಲಿ, ತಾನು ಕುಡಿಯೋ ದ್ರಾಕ್ಷಾಮದ್ಯದಲ್ಲಿ ಪ್ರತಿದಿನ ಅವ್ರಿಗೆ ಒಂದು ಭಾಗ ಕೊಡಬೇಕಂತ ರಾಜ ಹೇಳಿದ. ಮೂರು ವರ್ಷ ತರಬೇತಿ* ಪಡ್ಕೊಂಡ ಮೇಲೆ ಅವರು ರಾಜಸೇವೆ ಶುರು ಮಾಡಬೇಕಿತ್ತು.

6 ಅವ್ರಲ್ಲಿ ಯೆಹೂದ ಕುಲಕ್ಕೆ ಸೇರಿದ ಕೆಲವು ಯುವಕರು ಇದ್ರು. ಅವ್ರ ಹೆಸ್ರು: ದಾನಿಯೇಲ,*+ ಹನನ್ಯ,* ಮೀಷಾಯೇಲ,* ಅಜರ್ಯ.*+ 7 ಆಸ್ಥಾನದ ಅಧಿಕಾರಿಗಳ ಮುಖ್ಯಸ್ಥ ಅವ್ರಿಗೆ ಹೊಸ ಹೆಸ್ರು ಇಟ್ಟ. ದಾನಿಯೇಲನಿಗೆ ಬೇಲ್ತೆಶಚ್ಚರ,+ ಹನನ್ಯನಿಗೆ ಶದ್ರಕ್‌, ಮೀಷಾಯೇಲನಿಗೆ ಮೇಶಕ್‌, ಅಜರ್ಯನಿಗೆ ಅಬೇದ್‌ನೆಗೋ ಅಂತ ಹೆಸ್ರಿಟ್ಟ.+

8 ರಾಜ ತಿನ್ನೋ ರುಚಿರುಚಿಯಾದ ಊಟ ತಿಂದು ಅವನು ಕುಡಿಯೋ ದ್ರಾಕ್ಷಾಮದ್ಯ ಕುಡಿದು ಅಪವಿತ್ರ ಆಗಬಾರದು ಅಂತ ದಾನಿಯೇಲ ಮನಸ್ಸಲ್ಲಿ* ದೃಢನಿರ್ಧಾರ ಮಾಡಿದ್ದ. ಹಾಗಾಗಿ ಈ ರೀತಿ ತನ್ನನ್ನ ಅಪವಿತ್ರ ಮಾಡ್ಕೊಳ್ಳದೇ ಇರೋಕೆ ದಾನಿಯೇಲ ಆಸ್ಥಾನದ ಅಧಿಕಾರಿಗಳ ಮುಖ್ಯಸ್ಥನ ಹತ್ರ ಅನುಮತಿ ಕೇಳಿದ. 9 ಆ ಮುಖ್ಯಸ್ಥ ದಾನಿಯೇಲನಿಗೆ ದಯೆ, ಕರುಣೆ ತೋರಿಸೋ ತರ ಸತ್ಯ ದೇವರು ಮಾಡಿದನು.+ 10 ಆದ್ರೆ ಆ ಮುಖ್ಯಸ್ಥ ದಾನಿಯೇಲನಿಗೆ “ನನ್ನ ಒಡೆಯನಾದ ರಾಜನನ್ನ ನೆನಸ್ಕೊಂಡ್ರೆ ನನಗೆ ಭಯ ಆಗುತ್ತೆ. ಯಾಕಂದ್ರೆ ನಿಮಗೆ ಇಂಥ ಊಟ ಕೊಡಬೇಕಂತ ನಮಗೆ ಹೇಳಿರೋದು ರಾಜ. ನಿಮ್ಮ ವಯಸ್ಸಿನ ಬೇರೆ ಹುಡುಗರನ್ನ ನೋಡಿದಾಗ ನೀವು ಸೊರಗಿ ಹೋಗಿರೋದನ್ನ ರಾಜ ನೋಡಿದ್ರೆ ಏನು ಮಾಡೋದು? ನಿಮ್ಮಿಂದಾಗಿ ರಾಜ ನನ್ನ ತಲೆ ತೆಗಿತಾನೆ” ಅಂದ. 11 ಆಗ ದಾನಿಯೇಲ, ತನ್ನನ್ನ, ಹನನ್ಯ, ಮೀಷಾಯೇಲ್‌, ಅಜರ್ಯನನ್ನ ನೋಡ್ಕೊಳ್ಳೋಕೆ ಆಸ್ಥಾನದ ಅಧಿಕಾರಿಗಳ ಮುಖ್ಯಸ್ಥ ನೇಮಿಸಿದ್ದ ಪಾಲಕನ ಹತ್ರ ಹೋಗಿ 12 “ಈ ನಿನ್ನ ಸೇವಕರನ್ನ 10 ದಿನ ಪರೀಕ್ಷೆ ಮಾಡು. ದಯವಿಟ್ಟು, ನಮಗೆ ತಿನ್ನೋಕೆ ಸ್ವಲ್ಪ ತರಕಾರಿಗಳನ್ನ, ಕುಡಿಯೋಕೆ ನೀರು ಕೊಡು. 13 ಆಮೇಲೆ ರಾಜನ ರುಚಿರುಚಿಯಾದ ಊಟ ತಿನ್ನೋ ಬೇರೆ ಯುವಕರ ಜೊತೆ ನಮ್ಮನ್ನ ಹೋಲಿಸಿ ನೋಡು. ಆಮೇಲೆ ಏನು ಮಾಡಬೇಕಂತ ನೀನೇ ತೀರ್ಮಾನ ಮಾಡು” ಅಂದ.

14 ಅವನು ಅದಕ್ಕೆ ಒಪ್ಪಿ 10 ದಿನ ತನಕ ನೋಡಿದ.* 15 ಹತ್ತು ದಿನ ಆದ್ಮೇಲೆ ರಾಜನ ರುಚಿರುಚಿಯಾದ ಊಟ ತಿನ್ನೋ ಬೇರೆ ಯುವಕರಿಗಿಂತ ಈ ಯುವಕರು ನೋಡೋಕೆ ಸುಂದರವಾಗಿ ಆರೋಗ್ಯವಂತರಾಗಿದ್ರು. 16 ಹಾಗಾಗಿ ಆ ಪಾಲಕ ಅವ್ರಿಗೆ ರಾಜನ ರುಚಿಯಾದ ಆಹಾರವನ್ನ, ದ್ರಾಕ್ಷಾಮದ್ಯವನ್ನ ಕೊಡದೆ ತರಕಾರಿಗಳನ್ನ ಕೊಡ್ತಾ ಹೋದ. 17 ಸತ್ಯ ದೇವರು ಈ ನಾಲ್ಕು ಯುವಕರಿಗೆ ಎಲ್ಲ ರೀತಿಯ ಸಾಹಿತ್ಯಗಳ ಬಗ್ಗೆ ವಿವೇಕ, ಜ್ಞಾನ, ತಿಳುವಳಿಕೆ* ಕೊಟ್ಟನು. ದಾನಿಯೇಲನಿಗೆ ಎಲ್ಲ ರೀತಿಯ ದರ್ಶನಗಳನ್ನ,* ಕನಸುಗಳನ್ನ ಅರ್ಥ ಮಾಡ್ಕೊಳ್ಳೋ ಸಾಮರ್ಥ್ಯ ಕೊಟ್ಟನು.+

18 ರಾಜ ಹೇಳಿದ ಸಮಯ ಮುಗಿದ ಮೇಲೆ ಆಸ್ಥಾನದ ಅಧಿಕಾರಿಗಳ ಮುಖ್ಯಸ್ಥ ಯುವಕರನ್ನ ರಾಜ ನೆಬೂಕದ್ನೆಚ್ಚರನ ಮುಂದೆ ಕರ್ಕೊಂಡು ಬಂದ.+ 19 ರಾಜ ಅವ್ರ ಜೊತೆ ಮಾತಾಡಿದಾಗ ಆ ಇಡೀ ಗುಂಪಲ್ಲಿ ದಾನಿಯೇಲ, ಹನನ್ಯ, ಮೀಷಾಯೇಲ, ಅಜರ್ಯರ+ ತರ ಯಾರೂ ಇರಲಿಲ್ಲ. ಹಾಗಾಗಿ ಅವ್ರಿಗೆ ರಾಜನ ಅರಮನೆಯಲ್ಲಿ ಕೆಲಸ ಕೊಟ್ರು. 20 ವಿವೇಕ, ತಿಳುವಳಿಕೆಯಿಂದ ಮಾಡಬೇಕಿದ್ದ ವಿಷ್ಯಗಳ ಬಗ್ಗೆ ರಾಜ ಅವ್ರ ಹತ್ರ ಕೇಳ್ತಿದ್ದ. ಆ ಎಲ್ಲ ವಿಷ್ಯಗಳಲ್ಲಿ ಅವರು ಇಡೀ ಸಾಮ್ರಾಜ್ಯದಲ್ಲಿದ್ದ ಬೇರೆಲ್ಲ ಮಂತ್ರವಾದಿಗಳಿಗಿಂತ ಮಾಟಗಾರರಿಗಿಂತ+ ಹತ್ತು ಪಟ್ಟು ಜಾಣರು ಅಂತ ರಾಜನಿಗೆ ಗೊತ್ತಾಯ್ತು. 21 ರಾಜ ಕೋರೆಷ ಆಳ್ತಿದ್ದ ಮೊದಲ್ನೇ ವರ್ಷದ ತನಕ ದಾನಿಯೇಲ ಅಲ್ಲೇ ಇದ್ದ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ