ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಮತ್ತಾಯ 20
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಮತ್ತಾಯ ಮುಖ್ಯಾಂಶಗಳು

      • ದ್ರಾಕ್ಷಿತೋಟದಲ್ಲಿ ಕೆಲಸ ಮಾಡಿದವ್ರಿಗೆಲ್ಲ ಸಿಕ್ಕಿದ ಒಂದೇ ಕೂಲಿ (1-16)

      • ಯೇಸು ಸಾಯ್ತಾನೆ ಅಂತ ಇನ್ನೊಂದು ಸಲ ಭವಿಷ್ಯವಾಣಿ (17-19)

      • ಸ್ವರ್ಗ ಆಳ್ವಿಕೆಯಲ್ಲಿ ಸ್ಥಾನಕ್ಕಾಗಿ ಕೋರಿಕೆ (20-28)

        • ತುಂಬ ಜನ್ರಿಗಾಗಿ ಯೇಸು ಕೊಟ್ಟ ಬಿಡುಗಡೆ ಬೆಲೆ (28)

      • ಇಬ್ರು ಕುರುಡರನ್ನ ಯೇಸು ವಾಸಿಮಾಡಿದನು (29-34)

ಮತ್ತಾಯ 20:1

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 21:33

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಮಹಾನ್‌ ಪುರುಷ, ಅಧ್ಯಾ. 97

ಮತ್ತಾಯ 20:2

ಪಾದಟಿಪ್ಪಣಿ

  • *

    ಪರಿಶಿಷ್ಟ ಬಿ14 ನೋಡಿ.

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    12/15/2001, ಪು. 10

    ಮಹಾನ್‌ ಪುರುಷ, ಅಧ್ಯಾ. 97

ಮತ್ತಾಯ 20:3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಮಹಾನ್‌ ಪುರುಷ, ಅಧ್ಯಾ. 97

ಮತ್ತಾಯ 20:5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಮಹಾನ್‌ ಪುರುಷ, ಅಧ್ಯಾ. 97

ಮತ್ತಾಯ 20:6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಮಹಾನ್‌ ಪುರುಷ, ಅಧ್ಯಾ. 97

ಮತ್ತಾಯ 20:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಮಹಾನ್‌ ಪುರುಷ, ಅಧ್ಯಾ. 97

ಮತ್ತಾಯ 20:8

ಮಾರ್ಜಿನಲ್ ರೆಫರೆನ್ಸ್

  • +ಯಾಜ 19:13; ಧರ್ಮೋ 24:14, 15

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಮಹಾನ್‌ ಪುರುಷ, ಅಧ್ಯಾ. 97

ಮತ್ತಾಯ 20:9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಮಹಾನ್‌ ಪುರುಷ, ಅಧ್ಯಾ. 97

ಮತ್ತಾಯ 20:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಹೊಸ ಲೋಕ ಭಾಷಾಂತರ, ಪು. 2754

    ಮಹಾನ್‌ ಪುರುಷ, ಅಧ್ಯಾ. 97

ಮತ್ತಾಯ 20:11

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಮಹಾನ್‌ ಪುರುಷ, ಅಧ್ಯಾ. 97

ಮತ್ತಾಯ 20:12

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಮಹಾನ್‌ ಪುರುಷ, ಅಧ್ಯಾ. 97

ಮತ್ತಾಯ 20:13

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 20:2

ಮತ್ತಾಯ 20:15

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 6:23

ಮತ್ತಾಯ 20:16

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 19:30; ಮಾರ್ಕ 10:31; ಲೂಕ 13:30

ಮತ್ತಾಯ 20:17

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 10:32; ಲೂಕ 18:31

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಮಹಾನ್‌ ಪುರುಷ, ಅಧ್ಯಾ. 98

ಮತ್ತಾಯ 20:18

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 16:21; ಮಾರ್ಕ 10:33, 34; ಲೂಕ 9:22; 18:32, 33

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಮಹಾನ್‌ ಪುರುಷ, ಅಧ್ಯಾ. 98

ಮತ್ತಾಯ 20:19

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 27:31; ಯೋಹಾ 19:1
  • +ಮತ್ತಾ 17:22, 23; 28:6; ಅಕಾ 10:40; 1ಕೊರಿಂ 15:4

ಮತ್ತಾಯ 20:20

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 4:21; 27:55, 56
  • +ಮಾರ್ಕ 10:35-40

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    3/2023, ಪು. 28-30

    “ನನ್ನನ್ನು ಹಿಂಬಾಲಿಸಿರಿ”, ಪು. 31-32

    ಮಹಾನ್‌ ಪುರುಷ, ಅಧ್ಯಾ. 98

ಮತ್ತಾಯ 20:21

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 19:28

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    3/2023, ಪು. 28-30

    “ನನ್ನನ್ನು ಹಿಂಬಾಲಿಸಿರಿ”, ಪು. 31-32

    ಕಾವಲಿನಬುರುಜು,

    8/1/2004, ಪು. 15

    ಮಹಾನ್‌ ಪುರುಷ, ಅಧ್ಯಾ. 98

ಮತ್ತಾಯ 20:22

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 26:39; ಮಾರ್ಕ 10:38; 14:36; ಯೋಹಾ 18:11

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಮಹಾನ್‌ ಪುರುಷ, ಅಧ್ಯಾ. 98

ಮತ್ತಾಯ 20:23

ಮಾರ್ಜಿನಲ್ ರೆಫರೆನ್ಸ್

  • +ಅಕಾ 12:2; ರೋಮ 8:17; 2ಕೊರಿಂ 1:7; ಪ್ರಕ 1:9
  • +ಮಾರ್ಕ 10:39, 40

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    4/1/2010, ಪು. 14

ಮತ್ತಾಯ 20:24

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 10:41-45; ಲೂಕ 22:24

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಮಹಾನ್‌ ಪುರುಷ, ಅಧ್ಯಾ. 98

ಮತ್ತಾಯ 20:25

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 10:42

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/15/2013, ಪು. 28

    4/1/2006, ಪು. 19-20

    8/1/1993, ಪು. 13

    8/1/1991, ಪು. 18-19

ಮತ್ತಾಯ 20:26

ಮಾರ್ಜಿನಲ್ ರೆಫರೆನ್ಸ್

  • +2ಕೊರಿಂ 1:24; 1ಪೇತ್ರ 5:3
  • +ಮತ್ತಾ 18:4; 23:11; ಮಾರ್ಕ 10:43, 44; ಲೂಕ 22:26

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/15/2013, ಪು. 28

    4/1/2006, ಪು. 19-20

    8/1/2004, ಪು. 15-16

    8/1/1993, ಪು. 13

    8/1/1991, ಪು. 18-19

ಮತ್ತಾಯ 20:27

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 9:35

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಮಹಾ ಬೋಧಕ, ಪು. 111

    ಕಾವಲಿನಬುರುಜು,

    8/1/1991, ಪು. 18-19

ಮತ್ತಾಯ 20:28

ಮಾರ್ಜಿನಲ್ ರೆಫರೆನ್ಸ್

  • +ಲೂಕ 22:27; ಯೋಹಾ 13:14; ಫಿಲಿ 2:7
  • +ಯೆಶಾ 53:11; ಮಾರ್ಕ 10:45; 1ತಿಮೊ 2:5, 6; ತೀತ 2:13, 14; ಇಬ್ರಿ 9:28

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 104

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 27

    ಜೀವನ ಮತ್ತು ಸೇವೆ ಕೂಟದ ಕೈಪಿಡಿ,

    3/2018, ಪು. 2

    ಕಾವಲಿನಬುರುಜು,

    7/15/2014, ಪು. 30

    8/15/2002, ಪು. 13-14

    3/15/2000, ಪು. 3-4

    8/1/1990, ಪು. 19

    ಮಹಾನ್‌ ಪುರುಷ, ಅಧ್ಯಾ. 98

ಮತ್ತಾಯ 20:29

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ,

    ಮಹಾನ್‌ ಪುರುಷ, ಅಧ್ಯಾ. 99

ಮತ್ತಾಯ 20:30

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 9:27; ಮಾರ್ಕ 10:46-52; ಲೂಕ 18:35-43

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಮಹಾನ್‌ ಪುರುಷ, ಅಧ್ಯಾ. 99

ಮತ್ತಾಯ 20:32

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಮಹಾನ್‌ ಪುರುಷ, ಅಧ್ಯಾ. 99

ಮತ್ತಾಯ 20:34

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 9:29

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    4/2023, ಪು. 3

    “ನನ್ನನ್ನು ಹಿಂಬಾಲಿಸಿರಿ”, ಪು. 150-152

    ಕಾವಲಿನಬುರುಜು,

    11/1/1994, ಪು. 14

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಮತ್ತಾ. 20:1ಮತ್ತಾ 21:33
ಮತ್ತಾ. 20:8ಯಾಜ 19:13; ಧರ್ಮೋ 24:14, 15
ಮತ್ತಾ. 20:13ಮತ್ತಾ 20:2
ಮತ್ತಾ. 20:15ಮತ್ತಾ 6:23
ಮತ್ತಾ. 20:16ಮತ್ತಾ 19:30; ಮಾರ್ಕ 10:31; ಲೂಕ 13:30
ಮತ್ತಾ. 20:17ಮಾರ್ಕ 10:32; ಲೂಕ 18:31
ಮತ್ತಾ. 20:18ಮತ್ತಾ 16:21; ಮಾರ್ಕ 10:33, 34; ಲೂಕ 9:22; 18:32, 33
ಮತ್ತಾ. 20:19ಮತ್ತಾ 27:31; ಯೋಹಾ 19:1
ಮತ್ತಾ. 20:19ಮತ್ತಾ 17:22, 23; 28:6; ಅಕಾ 10:40; 1ಕೊರಿಂ 15:4
ಮತ್ತಾ. 20:20ಮತ್ತಾ 4:21; 27:55, 56
ಮತ್ತಾ. 20:20ಮಾರ್ಕ 10:35-40
ಮತ್ತಾ. 20:21ಮತ್ತಾ 19:28
ಮತ್ತಾ. 20:22ಮತ್ತಾ 26:39; ಮಾರ್ಕ 10:38; 14:36; ಯೋಹಾ 18:11
ಮತ್ತಾ. 20:23ಅಕಾ 12:2; ರೋಮ 8:17; 2ಕೊರಿಂ 1:7; ಪ್ರಕ 1:9
ಮತ್ತಾ. 20:23ಮಾರ್ಕ 10:39, 40
ಮತ್ತಾ. 20:24ಮಾರ್ಕ 10:41-45; ಲೂಕ 22:24
ಮತ್ತಾ. 20:25ಮಾರ್ಕ 10:42
ಮತ್ತಾ. 20:262ಕೊರಿಂ 1:24; 1ಪೇತ್ರ 5:3
ಮತ್ತಾ. 20:26ಮತ್ತಾ 18:4; 23:11; ಮಾರ್ಕ 10:43, 44; ಲೂಕ 22:26
ಮತ್ತಾ. 20:27ಮಾರ್ಕ 9:35
ಮತ್ತಾ. 20:28ಲೂಕ 22:27; ಯೋಹಾ 13:14; ಫಿಲಿ 2:7
ಮತ್ತಾ. 20:28ಯೆಶಾ 53:11; ಮಾರ್ಕ 10:45; 1ತಿಮೊ 2:5, 6; ತೀತ 2:13, 14; ಇಬ್ರಿ 9:28
ಮತ್ತಾ. 20:30ಮತ್ತಾ 9:27; ಮಾರ್ಕ 10:46-52; ಲೂಕ 18:35-43
ಮತ್ತಾ. 20:34ಮತ್ತಾ 9:29
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಓದಿ ನೂತನ ಲೋಕ ಭಾಷಾಂತರ (bi7)
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
  • 31
  • 32
  • 33
  • 34
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಮತ್ತಾಯ 20:1-34

ಮತ್ತಾಯ

20 ದೇವರ ಆಳ್ವಿಕೆಯನ್ನ ತೋಟದ ಯಜಮಾನನಿಗೆ ಹೋಲಿಸಬಹುದು. ಬೆಳಗಾದಾಗ ಅವನು ತನ್ನ ದ್ರಾಕ್ಷಿ ತೋಟದಲ್ಲಿ ಕೆಲಸಕ್ಕೆ ಜನ್ರನ್ನ ಹುಡುಕೋಕೆ ಹೋದ.+ 2 ‘ದಿನಕ್ಕೆ ಒಂದು ದಿನಾರು* ಕೂಲಿ ಕೊಡ್ತೀನಿ’ ಅಂತ ಹೇಳಿ ಕೆಲಸದವ್ರನ್ನ ದ್ರಾಕ್ಷಿ ತೋಟಕ್ಕೆ ಕಳಿಸಿದ. 3 ಬೆಳಿಗ್ಗೆ ಸುಮಾರು 9 ಗಂಟೆಗೆ ಮತ್ತೆ ಹೋಗಿ ಸಂತೆಯಲ್ಲಿ ಕೆಲಸ ಇಲ್ಲದೆ ನಿಂತಿದ್ದ ಕೆಲವ್ರಿಗೆ 4 ‘ನೀವು ಕೂಡ ದ್ರಾಕ್ಷಿ ತೋಟಕ್ಕೆ ಹೋಗಿ ಕೆಲಸಮಾಡಿ. ನಿಮಗೆ ಒಳ್ಳೇ ಕೂಲಿ ಕೊಡ್ತೀನಿ’ ಅಂದ. 5 ಅವರು ತೋಟಕ್ಕೆ ಹೋದ್ರು. ಆ ಯಜಮಾನ ಮತ್ತೆ ಸುಮಾರು 12 ಗಂಟೆಗೆ, ಆಮೇಲೆ ಮಧ್ಯಾಹ್ನ 3 ಗಂಟೆಗೆ ಕೆಲಸದವ್ರನ್ನ ಇದೇ ತರ ತನ್ನ ತೋಟಕ್ಕೆ ಕಳಿಸಿದ. 6 ಕೊನೆಗೆ ಸಾಯಂಕಾಲ ಸುಮಾರು 5 ಗಂಟೆಗೆ ಮತ್ತೆ ಹೋದ. ಕೆಲ್ಸ ಇಲ್ಲದೆ ಸುಮ್ಮನೆ ನಿಂತಿದ್ದ ಕೆಲವ್ರಿಗೆ ‘ಇಡೀ ದಿನ ಕೆಲಸ ಮಾಡದೆ ಯಾಕೆ ಸುಮ್ಮನೆ ನಿಂತಿದ್ದೀರ?’ ಅಂತ ಕೇಳಿದ. 7 ಅದಕ್ಕೆ ಅವರು ‘ಯಾರೂ ನಮ್ಮನ್ನ ಕೆಲಸಕ್ಕೆ ಕರೆದಿಲ್ಲ’ ಅಂದ್ರು. ಆಗ ಯಜಮಾನ ‘ನೀವೂ ನನ್ನ ದ್ರಾಕ್ಷಿ ತೋಟಕ್ಕೆ ಹೋಗಿ ಕೆಲಸ ಮಾಡಿ’ ಅಂದ.

8 ಸಂಜೆ ಆದಾಗ ದ್ರಾಕ್ಷಿ ತೋಟದ ಯಜಮಾನ ಕೆಲಸ ನೋಡ್ಕೊಳ್ಳೋನಿಗೆ ‘ಕೆಲಸದವ್ರನ್ನೆಲ್ಲ ಕರೆದು ಕೂಲಿ ಕೊಡು.+ ಕೊನೆಗೆ ಬಂದವ್ರಿಗೆ ಮೊದ್ಲು ಕೊಡು, ಮೊದ್ಲು ಬಂದವ್ರಿಗೆ ಕೊನೆಯಲ್ಲಿ ಕೊಡು’ ಅಂದ. 9 ಕೊನೆಗೆ ಬಂದವ್ರಿಗೆ ಒಂದು ದಿನಾರು ಸಿಕ್ತು. 10 ಆಗ ಮೊದ್ಲು ಬಂದವರು ತಮಗೆ ಹೆಚ್ಚು ಕೂಲಿ ಸಿಗುತ್ತೆ ಅಂತ ನೆನಸಿದ್ರು. ಆದ್ರೆ ಅವ್ರಿಗೂ ಒಂದೇ ದಿನಾರು ಸಿಕ್ತು. 11 ಆಗ ಅವರು ತೋಟದ ಯಜಮಾನನ ವಿರುದ್ಧ ಗೊಣಗಿದ್ರು. 12 ಅವರು ಯಜಮಾನನಿಗೆ ‘ಕೊನೆಗೆ ಬಂದವರು ಬರೀ ಒಂದೇ ತಾಸು ಕೆಲಸಮಾಡಿದ್ರು. ನಾವು ಇಡೀ ದಿನ ಕಷ್ಟಪಟ್ಟು ಬಿಸಿಲಲ್ಲಿ ಕೆಲಸಮಾಡಿದ್ವಿ. ಆದ್ರೆ ನಮಗೆ ಕೊಟ್ಟಷ್ಟೇ ಅವ್ರಿಗೂ ಕೊಟ್ರಿ. ಇದು ಅನ್ಯಾಯ ಅಲ್ವಾ?’ ಅಂದ್ರು. 13 ಅದಕ್ಕೆ ಯಜಮಾನ ಅವ್ರಲ್ಲಿ ಒಬ್ಬನಿಗೆ ‘ಗೆಳೆಯಾ, ನಾನು ನಿನಗೆ ಏನೂ ಅನ್ಯಾಯ ಮಾಡ್ತಾ ಇಲ್ಲ. ನೀನು ಒಂದು ದಿನಾರಿಗೆ ನನ್ನ ಹತ್ರ ಕೆಲಸಮಾಡೋಕೆ ಒಪ್ಕೊಂಡೆ ಅಲ್ವಾ?+ 14 ನಿನ್ನ ಕೂಲಿ ತಗೊಂಡು ಹೋಗು. ನಿನಗೆ ಕೊಟ್ಟ ಕೂಲಿನೇ ಒಂದು ತಾಸು ದುಡಿದವನಿಗೂ ಕೊಡಬೇಕಂತ ನನಗೆ ಅನಿಸ್ತು. 15 ನನ್ನ ದುಡ್ಡನ್ನ ನಂಗೆ ಇಷ್ಟಬಂದ ಹಾಗೆ ಖರ್ಚುಮಾಡೋ ಅಧಿಕಾರ ನನಗಿಲ್ವಾ? ನಾನು ಒಳ್ಳೇದನ್ನ ಮಾಡೋದನ್ನ ನೋಡಿ ನಿನಗೆ ಹೊಟ್ಟೆಕಿಚ್ಚಾಗ್ತಿದ್ಯಾ?’ ಅಂದ.+ 16 ಈ ತರ ಹಿಂದೆ ಇರೋ ಜನ ಮುಂದೆ ಬರ್ತಾರೆ. ಮುಂದೆ ಇರೋ ಜನ ಹಿಂದೆ ಹೋಗ್ತಾರೆ.”+

17 ಯೇಸು ಯೆರೂಸಲೇಮಿಗೆ ಹೋಗ್ತಿರುವಾಗ 12 ಶಿಷ್ಯರನ್ನ ಪಕ್ಕಕ್ಕೆ ಕರ್ಕೊಂಡು ಹೋಗಿ+ 18 “ನೋಡಿ, ನಾವು ಯೆರೂಸಲೇಮಿಗೆ ಹೋಗ್ತಿದ್ದೀವಿ. ಅಲ್ಲಿ ಮನುಷ್ಯಕುಮಾರನನ್ನ ಮುಖ್ಯ ಪುರೋಹಿತರ ಮತ್ತು ಪಂಡಿತರ ಕೈಗೆ ಹಿಡ್ಕೊಡ್ತಾರೆ. ಅವರು ಅವನಿಗೆ ಮರಣದಂಡನೆ ವಿಧಿಸ್ತಾರೆ.+ 19 ಅವನನ್ನ ಯೆಹೂದ್ಯರಲ್ಲದ ಜನ್ರ ಕೈಗೆ ಒಪ್ಪಿಸ್ತಾರೆ. ಆ ಜನ ಅವನನ್ನ ಅವಮಾನ ಮಾಡ್ತಾರೆ, ಚಾಟಿಯಿಂದ ಹೊಡಿತಾರೆ, ಕಂಬಕ್ಕೆ ನೇತುಹಾಕಿ ಸಾಯಿಸ್ತಾರೆ.+ ಆದ್ರೆ ಮೂರು ದಿನ ಆದಮೇಲೆ ಅವನು ಮತ್ತೆ ಬದುಕ್ತಾನೆ” ಅಂದನು.+

20 ಇದಾದ ಮೇಲೆ ಜೆಬೆದಾಯನ ಹೆಂಡತಿ ತನ್ನ ಇಬ್ರು ಮಕ್ಕಳ+ ಜೊತೆ ಯೇಸು ಹತ್ರ ಏನೋ ಕೇಳಬೇಕು ಅಂತ ಬಂದಳು. ಅವಳು ಯೇಸುಗೆ ನಮಸ್ಕಾರ ಮಾಡಿದಳು.+ 21 ಆಗ ಯೇಸು “ನಿನಗೆ ಏನು ಬೇಕು?” ಅಂತ ಕೇಳಿದ. ಅವಳು “ನೀನು ರಾಜ ಆಗುವಾಗ ನನ್ನ ಈ ಇಬ್ರು ಮಕ್ಕಳಲ್ಲಿ ಒಬ್ಬ ನಿನ್ನ ಬಲಗಡೆಲಿ ಇನ್ನೊಬ್ಬ ಎಡಗಡೆಲಿ ಕೂರಬೇಕು. ಅದೇ ನನ್ನ ಕೋರಿಕೆ” ಅಂದಳು.+ 22 ಅದಕ್ಕೆ ಯೇಸು “ನೀವು ಏನು ಕೇಳ್ತಾ ಇದ್ದೀರಾ ಅಂತ ನಿಮಗೆ ಗೊತ್ತಿಲ್ಲ. ನಾನು ಕುಡಿಯೋ ಪಾತ್ರೆಯಲ್ಲಿ ನಿಮ್ಮಿಬ್ರಿಗೂ ಕುಡಿಯೋಕಾಗುತ್ತಾ?”+ ಅಂದ. ಅವರು “ಹೌದು ಆಗುತ್ತೆ” ಅಂದ್ರು. 23 ಆಗ ಯೇಸು “ನಾನು ಕುಡಿಯೋ ಪಾತ್ರೆಯಲ್ಲಿ ನೀವು ಖಂಡಿತ ಕುಡಿತೀರ.+ ಆದ್ರೆ ನನ್ನ ಬಲಗಡೆ, ಎಡಗಡೆ ಯಾರು ಕೂತ್ಕೊಬೇಕು ಅಂತ ನಿರ್ಧಾರ ಮಾಡೋದು ನನ್ನ ಕೈಲಿಲ್ಲ. ನನ್ನ ಅಪ್ಪ ಯಾರಿಗಾಗಿ ಆ ಜಾಗ ಸಿದ್ಧ ಮಾಡ್ತಾನೋ ಅವ್ರೇ ಅದ್ರಲ್ಲಿ ಕೂರ್ತಾರೆ” ಅಂದನು.+

24 ಉಳಿದ ಹತ್ತು ಶಿಷ್ಯರಿಗೆ ಇದು ಗೊತ್ತಾದಾಗ ಅವ್ರಿಗೆ ಈ ಇಬ್ಬರ ಮೇಲೆ ತುಂಬ ಕೋಪ ಬಂತು.+ 25 ಆದ್ರೆ ಯೇಸು ಶಿಷ್ಯರನ್ನ ಹತ್ರ ಕರೆದು “ಲೋಕದ ಅಧಿಕಾರಿಗಳು ಜನ್ರ ಮೇಲೆ ಅಧಿಕಾರ ಚಲಾಯಿಸ್ತಾರೆ, ದೊಡ್ಡವರು ಅವ್ರ ಮೇಲೆ ದಬ್ಬಾಳಿಕೆ ಮಾಡ್ತಾರೆ ಅಂತ ನಿಮಗೆ ಗೊತ್ತು.+ 26 ಆದ್ರೆ ನಿಮ್ಮಲ್ಲಿ ಹಾಗೆ ಇರಬಾರದು.+ ನಿಮ್ಮಲ್ಲಿ ದೊಡ್ಡವನು ಆಗಬೇಕು ಅಂತ ಇರುವವನು ಬೇರೆಯವ್ರ ಸೇವೆ ಮಾಡಬೇಕು.+ 27 ಎಲ್ರಿಗಿಂತ ಮುಖ್ಯ ಸ್ಥಾನದಲ್ಲಿ ಇರೋಕೆ ಆಸೆಪಡುವವನು ಬೇರೆಯವ್ರ ದಾಸನಾಗಿರಬೇಕು.+ 28 ಮನುಷ್ಯಕುಮಾರ ಸಹ ಸೇವೆ ಮಾಡಿಸ್ಕೊಳ್ಳೋಕೆ ಬರಲಿಲ್ಲ. ಸೇವೆ ಮಾಡೋಕೆ ಬಂದ.+ ತುಂಬ ಜನ್ರಿಗಾಗಿ ತನ್ನ ಪ್ರಾಣವನ್ನ ಬಿಡುಗಡೆಯ ಬೆಲೆಯಾಗಿ ಕೊಡೋಕೆ ಬಂದ” ಅಂದನು.+

29 ಅವರು ಯೆರಿಕೋದಿಂದ ಹೋಗ್ತಿರುವಾಗ ತುಂಬ ಜನ ಆತನ ಹಿಂದೆ ಹೋದ್ರು. 30 ದಾರಿ ಬದಿಯಲ್ಲಿ ಕೂತಿದ್ದ ಇಬ್ರು ಕುರುಡರಿಗೆ ಯೇಸು ಇಲ್ಲಿಂದ ಹೋಗ್ತಿದ್ದಾನೆ ಅಂತ ಗೊತ್ತಾಯ್ತು. ಆಗ ಅವರು “ಸ್ವಾಮಿ, ದಾವೀದನ ಮಗನೇ, ನಮಗೆ ಕರುಣೆ ತೋರಿಸು” ಅಂತ ಕೂಗಿದ್ರು.+ 31 ಜನ ‘ಸುಮ್ಮನೆ ಇರಿ’ ಅಂತ ಬೈದ್ರೂ ಅವರು “ಸ್ವಾಮಿ, ದಾವೀದನ ಮಗನೇ, ಕರುಣೆ ತೋರಿಸು” ಅಂತ ಇನ್ನೂ ಜೋರಾಗಿ ಕೂಗಿದ್ರು. 32 ಆಗ ಯೇಸು ಅಲ್ಲೇ ನಿಂತು ಅವ್ರನ್ನ ಹತ್ರ ಕರೆದು “ನಾನು ನಿಮಗೆ ಏನು ಸಹಾಯ ಮಾಡಲಿ?” ಅಂತ ಕೇಳಿದನು. 33 ಅದಕ್ಕೆ ಅವರು “ಸ್ವಾಮಿ, ನಮಗೆ ಕಣ್ಣು ಬರೋ ತರ ಮಾಡು” ಅಂದ್ರು. 34 ಆಗ ಯೇಸುಗೆ ಅವ್ರ ಮೇಲೆ ತುಂಬ ಕನಿಕರ ಆಯ್ತು. ಅವ್ರ ಕಣ್ಣು ಮುಟ್ಟಿದಾಗ+ ಅವ್ರಿಗೆ ತಕ್ಷಣ ಕಣ್ಣು ಬಂತು. ಅವರು ಆತನ ಶಿಷ್ಯರಾದ್ರು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ