ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ವಿಮೋಚನಕಾಂಡ 2
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ವಿಮೋಚನಕಾಂಡ ಮುಖ್ಯಾಂಶಗಳು

      • ಮೋಶೆಯ ಜನನ (1-4)

      • ಮೋಶೆಯನ್ನ ದತ್ತು ತಗೊಂಡ ಫರೋಹನ ಮಗಳು (5-10)

      • ಮೋಶೆ ಮಿದ್ಯಾನಿಗೆ ಓಡಿದ, ಚಿಪ್ಪೋರಳನ್ನ ಮದುವೆಯಾದ (11-22)

      • ದೇವರು ಇಸ್ರಾಯೇಲ್ಯರ ಗೋಳಾಟ ಕೇಳಿದನು (23-25)

ವಿಮೋಚನಕಾಂಡ 2:1

ಮಾರ್ಜಿನಲ್ ರೆಫರೆನ್ಸ್

  • +ವಿಮೋ 6:20; ಅರ 26:59

ವಿಮೋಚನಕಾಂಡ 2:2

ಮಾರ್ಜಿನಲ್ ರೆಫರೆನ್ಸ್

  • +ಅಕಾ 7:20; ಇಬ್ರಿ 11:23

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/1/1997, ಪು. 30

ವಿಮೋಚನಕಾಂಡ 2:3

ಪಾದಟಿಪ್ಪಣಿ

  • *

    ಅಥವಾ “ಪೆಟ್ಟಿಗೆ.”

ಮಾರ್ಜಿನಲ್ ರೆಫರೆನ್ಸ್

  • +ಅಕಾ 7:18, 19

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    6/15/2002, ಪು. 9

    5/1/1997, ಪು. 30

ವಿಮೋಚನಕಾಂಡ 2:4

ಮಾರ್ಜಿನಲ್ ರೆಫರೆನ್ಸ್

  • +ವಿಮೋ 15:20; 1ಪೂರ್ವ 6:3; ಮೀಕ 6:4

ವಿಮೋಚನಕಾಂಡ 2:5

ಮಾರ್ಜಿನಲ್ ರೆಫರೆನ್ಸ್

  • +ಅಕಾ 7:21

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/1/1997, ಪು. 30

ವಿಮೋಚನಕಾಂಡ 2:6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    6/15/2002, ಪು. 9

    5/1/1997, ಪು. 30

ವಿಮೋಚನಕಾಂಡ 2:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    6/15/2002, ಪು. 10-11

ವಿಮೋಚನಕಾಂಡ 2:8

ಮಾರ್ಜಿನಲ್ ರೆಫರೆನ್ಸ್

  • +ವಿಮೋ 6:20

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    6/15/2002, ಪು. 10

ವಿಮೋಚನಕಾಂಡ 2:9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    6/15/2002, ಪು. 10-11

    5/1/1997, ಪು. 30-31

ವಿಮೋಚನಕಾಂಡ 2:10

ಪಾದಟಿಪ್ಪಣಿ

  • *

    ಅರ್ಥ “ತಗೊಂಡಿದ್ದು,” ಅಂದ್ರೆ ನೀರಿಂದ ಕಾಪಾಡಿದ್ದು.

ಮಾರ್ಜಿನಲ್ ರೆಫರೆನ್ಸ್

  • +ಇಬ್ರಿ 11:24, 25
  • +ಅಕಾ 7:21

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    6/15/2002, ಪು. 10

    5/1/1997, ಪು. 31

ವಿಮೋಚನಕಾಂಡ 2:11

ಮಾರ್ಜಿನಲ್ ರೆಫರೆನ್ಸ್

  • +ವಿಮೋ 1:11; 3:7; ಅಕಾ 7:23

ವಿಮೋಚನಕಾಂಡ 2:12

ಮಾರ್ಜಿನಲ್ ರೆಫರೆನ್ಸ್

  • +ಅಕಾ 7:24

ವಿಮೋಚನಕಾಂಡ 2:13

ಮಾರ್ಜಿನಲ್ ರೆಫರೆನ್ಸ್

  • +ಅಕಾ 7:26

ವಿಮೋಚನಕಾಂಡ 2:14

ಮಾರ್ಜಿನಲ್ ರೆಫರೆನ್ಸ್

  • +ಅಕಾ 7:27, 28

ವಿಮೋಚನಕಾಂಡ 2:15

ಮಾರ್ಜಿನಲ್ ರೆಫರೆನ್ಸ್

  • +ಆದಿ 25:1, 2; ವಿಮೋ 3:1; 4:19

ವಿಮೋಚನಕಾಂಡ 2:16

ಮಾರ್ಜಿನಲ್ ರೆಫರೆನ್ಸ್

  • +ವಿಮೋ 18:12

ವಿಮೋಚನಕಾಂಡ 2:18

ಪಾದಟಿಪ್ಪಣಿ

  • *

    ಅಂದ್ರೆ, “ಇತ್ರೋ.”

ಮಾರ್ಜಿನಲ್ ರೆಫರೆನ್ಸ್

  • +ವಿಮೋ 4:18; 18:1; ಅರ 10:29

ವಿಮೋಚನಕಾಂಡ 2:19

ಮಾರ್ಜಿನಲ್ ರೆಫರೆನ್ಸ್

  • +ಅಕಾ 7:22

ವಿಮೋಚನಕಾಂಡ 2:21

ಮಾರ್ಜಿನಲ್ ರೆಫರೆನ್ಸ್

  • +ವಿಮೋ 18:2-4; ಅರ 12:1

ವಿಮೋಚನಕಾಂಡ 2:22

ಪಾದಟಿಪ್ಪಣಿ

  • *

    ಅರ್ಥ “ಅಲ್ಲಿ ವಿದೇಶಿಯಾಗಿ ಇದ್ದವನು.”

ಮಾರ್ಜಿನಲ್ ರೆಫರೆನ್ಸ್

  • +ಅಕಾ 7:29
  • +1ಪೂರ್ವ 23:15

ವಿಮೋಚನಕಾಂಡ 2:23

ಮಾರ್ಜಿನಲ್ ರೆಫರೆನ್ಸ್

  • +ವಿಮೋ 7:7; ಅಕಾ 7:30
  • +ವಿಮೋ 3:7; 1ಅರ 8:51

ವಿಮೋಚನಕಾಂಡ 2:24

ಪಾದಟಿಪ್ಪಣಿ

  • *

    ಅಥವಾ “ಒಡಂಬಡಿಕೆಯನ್ನ.”

  • *

    ಅಥವಾ “ಒಪ್ಪಂದದ ಪ್ರಕಾರ ಮಾಡೋಕೆ ತೀರ್ಮಾನಿಸಿದನು.”

ಮಾರ್ಜಿನಲ್ ರೆಫರೆನ್ಸ್

  • +ಅಕಾ 7:34
  • +ಆದಿ 15:13, 14; ವಿಮೋ 6:5; ಅರ 20:15, 16

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ವಿಮೋ. 2:1ವಿಮೋ 6:20; ಅರ 26:59
ವಿಮೋ. 2:2ಅಕಾ 7:20; ಇಬ್ರಿ 11:23
ವಿಮೋ. 2:3ಅಕಾ 7:18, 19
ವಿಮೋ. 2:4ವಿಮೋ 15:20; 1ಪೂರ್ವ 6:3; ಮೀಕ 6:4
ವಿಮೋ. 2:5ಅಕಾ 7:21
ವಿಮೋ. 2:8ವಿಮೋ 6:20
ವಿಮೋ. 2:10ಇಬ್ರಿ 11:24, 25
ವಿಮೋ. 2:10ಅಕಾ 7:21
ವಿಮೋ. 2:11ವಿಮೋ 1:11; 3:7; ಅಕಾ 7:23
ವಿಮೋ. 2:12ಅಕಾ 7:24
ವಿಮೋ. 2:13ಅಕಾ 7:26
ವಿಮೋ. 2:14ಅಕಾ 7:27, 28
ವಿಮೋ. 2:15ಆದಿ 25:1, 2; ವಿಮೋ 3:1; 4:19
ವಿಮೋ. 2:16ವಿಮೋ 18:12
ವಿಮೋ. 2:18ವಿಮೋ 4:18; 18:1; ಅರ 10:29
ವಿಮೋ. 2:19ಅಕಾ 7:22
ವಿಮೋ. 2:21ವಿಮೋ 18:2-4; ಅರ 12:1
ವಿಮೋ. 2:22ಅಕಾ 7:29
ವಿಮೋ. 2:221ಪೂರ್ವ 23:15
ವಿಮೋ. 2:23ವಿಮೋ 7:7; ಅಕಾ 7:30
ವಿಮೋ. 2:23ವಿಮೋ 3:7; 1ಅರ 8:51
ವಿಮೋ. 2:24ಅಕಾ 7:34
ವಿಮೋ. 2:24ಆದಿ 15:13, 14; ವಿಮೋ 6:5; ಅರ 20:15, 16
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ವಿಮೋಚನಕಾಂಡ 2:1-25

ವಿಮೋಚನಕಾಂಡ

2 ಲೇವಿ ಕುಲದ ಒಬ್ಬ ಪುರುಷ ಅದೇ ಕುಲದ ಒಬ್ಬ ಸ್ತ್ರೀಯನ್ನ ಮದುವೆ ಆದ.+ 2 ಅವಳಿಗೆ ಒಂದು ಗಂಡುಮಗು ಆಯ್ತು. ಅದು ತುಂಬ ಮುದ್ದಾಗಿದೆ ಅಂತ ಅದನ್ನ ಮೂರು ತಿಂಗಳು ಬಚ್ಚಿಟ್ಟಳು.+ 3 ಆಮೇಲೆ ಮಗುನ ಬಚ್ಚಿಡೋಕೆ ಆಗಿಲ್ಲ.+ ಆಗ ಅವಳು ಪಪೈರಸ್‌ ಗಿಡದಿಂದ ಮಾಡಿದ ಬುಟ್ಟಿ* ತಗೊಂಡು ಅದಕ್ಕೆ ಟಾರಿನಂಥ ಅಂಟು ಹಚ್ಚಿದಳು. ಮಗುನ ಆ ಬುಟ್ಟಿಯಲ್ಲಿಟ್ಟು ಅದನ್ನ ನೈಲ್‌ ನದಿತೀರದಲ್ಲಿ ಬೆಳೆದ ಆಪುಹುಲ್ಲಿನ ಮಧ್ಯ ಇಟ್ಟಳು. 4 ಮಗುವಿನ ಅಕ್ಕ+ ಮಗುಗೆ ಏನಾಗುತ್ತೆ ಅಂತ ನೋಡೋಕೆ ಸ್ವಲ್ಪ ದೂರದಲ್ಲಿ ನಿಂತಳು.

5 ಆಗ ಫರೋಹನ ಮಗಳು ನೈಲ್‌ ನದಿಯಲ್ಲಿ ಸ್ನಾನ ಮಾಡೋಕೆ ಬಂದಳು. ಅವಳ ಸೇವಕಿಯರು ನದಿತೀರದಲ್ಲಿ ನಡಿತಿದ್ದಾಗ ಫರೋಹನ ಮಗಳು ಆ ಬುಟ್ಟಿಯನ್ನ ನೋಡಿದಳು. ತಕ್ಷಣ ತನ್ನ ದಾಸಿನ ಕಳಿಸಿ ಆ ಬುಟ್ಟಿ ತರಿಸಿದಳು.+ 6 ಬುಟ್ಟಿ ತೆರೆದಾಗ ಅದ್ರಲ್ಲಿ ಒಂದು ಗಂಡುಮಗು ಇತ್ತು! ಅದು ಅಳ್ತಿತ್ತು. ಅವಳು “ಇದು ಇಬ್ರಿಯರ ಮಗು” ಅಂದಳು. ಆ ಮಗುನ ನೋಡಿ ಅವಳಿಗೆ ಪಾಪ ಅನಿಸ್ತು. 7 ಆಗ ಆ ಮಗುವಿನ ಅಕ್ಕ ಬಂದು “ಈ ಮಗುನ ಸಾಕೋಕೆ ಒಬ್ಬ ಇಬ್ರಿಯ ಸ್ತ್ರೀಯನ್ನ ಕರ್ಕೊಂಡು ಬರ್ಲಾ?” ಅಂತ ಫರೋಹನ ಮಗಳನ್ನ ಕೇಳಿದಳು. 8 ಅದಕ್ಕೆ ಅವಳು “ಸರಿ, ಕರ್ಕೊಂಡು ಬಾ!” ಅಂದಳು. ತಕ್ಷಣ ಆ ಹುಡುಗಿ ಹೋಗಿ ಮಗುವಿನ ಅಮ್ಮನನ್ನೇ ಕರ್ಕೊಂಡು ಬಂದಳು.+ 9 ಫರೋಹನ ಮಗಳು ಆ ಸ್ತ್ರೀಗೆ “ಈ ಮಗುನ ತಗೊಂಡು ಹೋಗಿ ಹಾಲು ಕೊಟ್ಟು ಸಾಕು. ನಾನು ನಿನಗೆ ಸಂಬಳ ಕೊಡ್ತೀನಿ” ಅಂದಳು. ಆ ಸ್ತ್ರೀ ಮಗುನ ತಗೊಂಡು ಹೋಗಿ ಸಾಕಿದಳು. 10 ಮಗು ಬೆಳೆದು ದೊಡ್ಡವನಾದಾಗ ಆ ಸ್ತ್ರೀ ಅವನನ್ನ ಫರೋಹನ ಮಗಳ ಹತ್ರ ಕರ್ಕೊಂಡು ಬಂದಳು. ಅವಳು ಅವನನ್ನ ತನ್ನ ಮಗನಾಗಿ ಸ್ವೀಕರಿಸಿದಳು.+ “ಇವನನ್ನ ನಾನು ನೀರಿಂದ ಎತ್ಕೊಂಡೆ” ಅಂತ ಹೇಳಿ ಅವನಿಗೆ ಮೋಶೆ* ಅಂತ ಹೆಸರಿಟ್ಟಳು.+

11 ಮೋಶೆ ಯುವಕನಾದಾಗ ತನ್ನ ಇಬ್ರಿಯ ಸಹೋದರರು ಬಿಟ್ಟಿಕೆಲಸ ಮಾಡ್ತಾ ಎಷ್ಟು ಕಷ್ಟಪಡ್ತಿದ್ದಾರೆ ಅಂತ ನೋಡೋಕೆ ಹೋದ.+ ಆಗ ಒಬ್ಬ ಈಜಿಪ್ಟಿನವನು ಒಬ್ಬ ಇಬ್ರಿಯ ಸಹೋದರನಿಗೆ ಹೊಡಿಯೋದನ್ನ ನೋಡಿದ. 12 ಆಗ ಅವನು ಆಕಡೆ ಈಕಡೆ ನೋಡಿ ಯಾರೂ ಇಲ್ಲದೆ ಇದ್ದಿದ್ರಿಂದ ಈಜಿಪ್ಟಿನ ಆ ವ್ಯಕ್ತಿಯನ್ನ ಕೊಂದು ಮರಳಲ್ಲಿ ಹೂತುಹಾಕಿದ.+

13 ಮಾರನೇ ದಿನ ಮೋಶೆ ಹೊರಗೆ ಹೋದಾಗ ಇಬ್ಬರು ಇಬ್ರಿಯ ಗಂಡಸರು ಜಗಳ ಮಾಡೋದನ್ನ ನೋಡಿದ. ಆಗ ಮೋಶೆ ತಪ್ಪು ಮಾಡಿದವನಿಗೆ “ನೀನ್ಯಾಕೆ ಅವನನ್ನ ಹೊಡಿತಾ ಇದ್ದಿಯಾ? ಅವನು ನಿನ್ನ ಸಹೋದರನಲ್ವಾ?”+ ಅಂತ ಕೇಳಿದ. 14 ಅದಕ್ಕವನು “ನಮ್ಮನ್ನ ಕೇಳೋಕೆ ನೀನ್ಯಾರು? ನಮ್ಮ ಅಧಿಕಾರಿನಾ, ನ್ಯಾಯಾಧೀಶನಾ? ಆ ಈಜಿಪ್ಟಿನ ವ್ಯಕ್ತಿಯನ್ನ ಕೊಂದ ಹಾಗೆ ನನ್ನನ್ನೂ ಕೊಲ್ಲಬೇಕಂತ ಇದ್ದೀಯಾ?”+ ಅಂದ. ತಾನು ಮಾಡಿದ್ದು ಎಲ್ರಿಗೂ ಗೊತ್ತಾಗಿಬಿಟ್ಟಿದೆ ಅಂತ ಮೋಶೆಗೆ ಭಯ ಆಯ್ತು.

15 ಈ ವಿಷ್ಯ ಫರೋಹನ ಕಿವಿಗೆ ಬಿದ್ದಾಗ ಅವನು ಮೋಶೆಯನ್ನ ಕೊಲ್ಲೋಕೆ ಪ್ರಯತ್ನಿಸಿದ. ಆದ್ರೆ ಮೋಶೆ ಫರೋಹನಿಂದ ದೂರ ಮಿದ್ಯಾನ್‌+ ದೇಶಕ್ಕೆ ಓಡಿಹೋದ. ಅಲ್ಲಿ ಹೋಗಿ ಒಂದು ಬಾವಿ ಹತ್ರ ಕೂತ. 16 ಮಿದ್ಯಾನಿನ ಪುರೋಹಿತನಿಗೆ+ ಏಳು ಹೆಣ್ಣುಮಕ್ಕಳು ಇದ್ರು. ಅವರು ತಮ್ಮ ತಂದೆಯ ಆಡು-ಕುರಿಗಳಿಗೆ ನೀರು ಕುಡಿಸೋಕೆ ಆ ಬಾವಿ ಹತ್ರ ಬಂದ್ರು. ಅವರು ನೀರು ಸೇದಿ ತೊಟ್ಟಿಗಳನ್ನ ತುಂಬಿಸಬೇಕಂತ ಇದ್ರು. 17 ಆದ್ರೆ ಕುರುಬರು ಅಲ್ಲಿಗೆ ಬಂದು ಅವರನ್ನ ಓಡಿಸಿಬಿಟ್ರು. ಆ ಕುರುಬರು ಯಾವಾಗ್ಲೂ ಹೀಗೇ ಮಾಡ್ತಿದ್ರು. ಆಗ ಮೋಶೆ ಆ ಹೆಣ್ಣುಮಕ್ಕಳನ್ನ ಕಾಪಾಡಿ ಅವರ ಆಡು-ಕುರಿಗಳಿಗೆ ನೀರು ಕೊಟ್ಟ. 18 ಅವರು ಮನೆಗೆ ಬಂದಾಗ ಅವರ ತಂದೆ ರೆಗೂವೇಲ*+ ಆಶ್ಚರ್ಯದಿಂದ “ಇವತ್ತು ಹೇಗೆ ಇಷ್ಟು ಬೇಗ ಮನೆಗೆ ಬಂದ್ರಿ?” ಅಂತ ಕೇಳಿದ. 19 ಅದಕ್ಕೆ ಅವರು “ಈಜಿಪ್ಟಿನ ಒಬ್ಬ ವ್ಯಕ್ತಿ+ ಆ ಕುರುಬರಿಂದ ನಮ್ಮನ್ನ ಕಾಪಾಡಿದ. ಅಷ್ಟೇ ಅಲ್ಲ ನೀರು ಸೇದಿ ನಮ್ಮ ಆಡು-ಕುರಿಗಳಿಗೆ ಕುಡಿಯೋಕೆ ಕೊಟ್ಟ” ಅಂದ್ರು. 20 ಆಗ ತಂದೆ “ಅವನನ್ನ ಯಾಕೆ ಮನೆಗೆ ಕರ್ಕೊಂಡು ಬರಲಿಲ್ಲ? ಹೋಗಿ ಕರ್ಕೊಂಡು ಬನ್ನಿ, ಅವನು ನಮ್ಮ ಜೊತೆ ಊಟ ಮಾಡ್ಲಿ” ಅಂದ. 21 ಆಮೇಲೆ ಮೋಶೆ ಅವರ ಜೊತೆನೇ ಇರೋಕೆ ಒಪ್ಕೊಂಡ. ರೆಗೂವೇಲ ತನ್ನ ಮಗಳಾದ ಚಿಪ್ಪೋರಳನ್ನ+ ಮೋಶೆಗೆ ಕೊಟ್ಟು ಮದುವೆ ಮಾಡಿದ. 22 ಆಮೇಲೆ ಅವಳಿಗೆ ಒಂದು ಗಂಡುಮಗು ಆಯ್ತು. ಆಗ ಮೋಶೆ ಬೇರೆ ದೇಶಕ್ಕೆ ಬಂದು ವಿದೇಶಿಯಾಗಿ ವಾಸ ಮಾಡ್ತಾ ಇದ್ದದ್ರಿಂದ+ ತನ್ನ ಮಗುಗೆ ಗೇರ್ಷೋಮ್‌*+ ಅಂತ ಹೆಸರಿಟ್ಟ.

23 ತುಂಬ ವರ್ಷ ಆದ್ಮೇಲೆ ಈಜಿಪ್ಟಿನ ರಾಜ ತೀರಿಹೋದ.+ ಆದ್ರೆ ಇಸ್ರಾಯೇಲ್ಯರು ಗುಲಾಮರಾಗೇ ಇದ್ರು, ಕಷ್ಟದಿಂದ ನರಳ್ತಾ ದುಃಖದಿಂದ ಅಳ್ತಾ ಸಹಾಯ ಮಾಡು ಅಂತ ಸತ್ಯ ದೇವರನ್ನ ಕೇಳ್ತಾ ಇದ್ರು.+ 24 ಸಮಯ ಬಂದಾಗ ದೇವರು ಅವರ ನರಳಾಟದ ಕೂಗನ್ನ ಕೇಳಿದನು.+ ಅಬ್ರಹಾಮ, ಇಸಾಕ, ಯಾಕೋಬನ ಜೊತೆ ಮಾಡ್ಕೊಂಡಿದ್ದ ಒಪ್ಪಂದವನ್ನ* ನೆನಪಿಸ್ಕೊಂಡನು.*+ 25 ಹಾಗಾಗಿ ದೇವರು ಇಸ್ರಾಯೇಲ್ಯರ ಕಡೆ ಅವರ ಕಷ್ಟಗಳ ಕಡೆ ಗಮನ ಕೊಟ್ಟನು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ